ಇಲಾಖಾ ಪರೀಕ್ಷೆಗಳು – ಕೈಪಿಡಿ

ತಮ್ಮ ಗಮನಕ್ಕೆ:
KPSC ಮೂಲಕ ನಡೆಸಲಾಗುವ ಕರ್ನಾಟಕ ರಾಜ್ಯ ಸರ್ಕಾರದ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಅಧ್ಯಯನ ಸಾಮಗ್ರಿಗಳು ದೊರೆಯುವ ಜಾಲತಾಣಗಳ ಕೊಂಡಿಗಳನ್ನು, ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದಿಂದ ಸಿದ್ಧಪಡಿಸಲಾದ ಅಧ್ಯಯನ ಸಾಮಗ್ರಿಗಳನ್ನು ಇಲ್ಲಿ ಪ್ರಸ್ಥುತಪಡಿಸಲಾಗುವುದು.

ಇಲ್ಲಿ ತಮಗೆ ಕಂಡುಬರುವ ಕೊರತೆಗಳನ್ನು ಸದರಿ ಸಂಘಕ್ಕೆ ತಿಳಿಸಿದರೆ ಅಥವಾ ತಮ್ಮಲ್ಲಿ ಇಲಾಖಾ ಪರೀಕ್ಷೆಗಳ ಪೂರಕ ಅಧ್ಯಯನ ಸಾಮಗ್ರಿಗಳು ಲಭ್ಯವಿದ್ದು, ಎಲ್ಲರಿಗೂ ತಲುಪಿಸುವ ಇಚ್ಛೆ ಇದ್ದಲ್ಲಿಯೂ ಕೂಡ ಸದರಿ ಸಂಘವು ತಮ್ಮ ಜೊತೆಯಾಗುವುದು ಎಂದು ಈ ಮೂಲಕ ಭರವಸೆ ನೀಡುತ್ತದೆ.
ಇಲಾಖ ಪರೀಕ್ಷೆಗೆ ಸಂಬಂಧಿಸಿದಂತೆ ಒಟ್ಟು ಆರು ಆಯಾಮಗಳಲ್ಲಿ ಸದರಿ ಸಂಘವು ಈ ಜಾಲತಾಣದ ಮೂಲಕ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿದೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ತಮ್ಮೆಲ್ಲರ ಸಹಭಾಗಿತ್ವದಿಂದಾಗಿ ವಿನೂತನ ಆಲೋಚನೆಗಳು ಲಭ್ಯವಾದಲ್ಲಿ, ಅಂತಹ ಆಲೋಚನೆಗಳನ್ನು ಸದರಿ ಸಂಘದಿಂದ ಜಾರಿಗೊಳಿಸಲಾಗುವುದು.

1. ವಸ್ತುನಿಷ್ಠ ಬಹುಆಯ್ಕೆ ಮಾದರಿಯ (OBJECTIVE TYPE MULTIPLE CHOICE) ಇಲಾಖಾ ಪರೀಕ್ಷೆಗಳು

2. ವಿವರಣಾತ್ಮಕ ಮಾದರಿಯ (Descriptive Type) ಪರೀಕ್ಷೆಗಳು

3. ಪುಸ್ತಕಗಳಿಲ್ಲದೆ ಬರೆಯಬೇಕಾದ ಇಲಾಖಾ ಪರೀಕ್ಷೆಗಳು

4. ಪುಸ್ತಕಗಳ ಸಹಾಯದೊಂದಿಗೆ ಬರೆಯಬೇಕಾದ ಇಲಾಖಾ ಪರೀಕ್ಷೆಗಳು

5ಇಲಾಖಾ ಪರೀಕ್ಷೆಗಳ ಅಧ್ಯಯನಕ್ಕೆ ಸಾಮಗ್ರಿಗಳು

6. ಇಲಾಖಾ ಪರೀಕ್ಷೆಗಳಿಗೆ ಉಪಯುಕ್ತ ಕೊಂಡಿಗಳು ಹಾಗೂ ಕಡತಗಳು