ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಷ್ಕರ ಪ್ರತಿಬಂಧ) ಅಧಿನಿಯಮ, 1966

ಸದರಿ ಅಧಿನಿಯಮದ ಅಧಿಕೃತ ಕಡತದ ಕೊಂಡಿ.
(ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ3, 2004 ಭಾಗ-4ಎ ಪುಟ 285 ರಿಂದ 287ರ ವರೆಗೆ ಪ್ರಕಟಿಸಲಾಗಿದೆ)

ಪ್ರಕರಣಗಳ ಅನುಕ್ರಮಣಿಕೆ

 1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
 2. ಪರಿಭಾಷೆಗಳು

 3. ಮುಷ್ಕರದ ನಿಷೇಧ
 4. ಮುಷ್ಕರಗಳಿಗೆ ದಂಡ
 5. ಪ್ರಚೋದನೆ, ಇತ್ಯಾದಿಗಳಿಗೆ ದಂಡ
 6. ಹಣಕಾಸು ನೆರವು ನೀಡುವುದಕ್ಕಾಗಿ ದಂಡ
 7. ಅಪರಾಧ ಮಾಡುವ ಪ್ರಯತ್ನಗಳು, ಇತ್ಯಾದಿ
 8. ಸಂಘಗಳಿಂದ ಅಪರಾಧಗಳು
 9. ವಾರಂಟಿಲ್ಲದೆ ದಸ್ತಗಿರಿ ಮಾಡಲು ಅಧಿಕಾರ
 10. 9ಎ. ಜಾಮೀನಿಗೆ ಸಂಬಂಧಿಸಿದಂತೆ ವಿಶೇಷ ಉಪಬಂಧ
 11. >9ಬಿ. ವಿಚಾರಣೆಗಳಿಗೆ ಆದ್ಯತೆ.

 12. 1966ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 1ರ ನಿರಸನ.

* * *

ಉದ್ದೇಶ ಮತ್ತು ಕಾರಣಗಳ ಹೇಳಿಕೆ

I

1966ರ ಅಧಿನಿಯಮ 30.- ಸರ್ಕಾರಿ ನೌಕರರಕೆಲವೊಂದು ಸಂಘಟಿತ ನಿಕಾಯಗಳು ಮುಷ್ಕರಗಳಲ್ಲಿ ತೊಡಗಿ, ಕೆಲಸ ಕಾರ್ಯ ಅಸ್ತವ್ಯಸ್ತವಾಗಲುಕಾರಣವಾಗುವವೆಂದುಶಂಕಿಸಲಾಗಿರುವುದರಿಂದ ರಾಜ್ಯದ ರಾಜ್ಯ ಸರ್ಕಾರಿ ನೌಕರರ ಮುಷ್ಕರಗಳನ್ನು ಪ್ರತಿಬಂಧಿಸಲು ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಯಿತು. ವಿಧಾನ ಮಂಡಲದ ಎರಡೂ ಸದನಗಳು ಅಧಿವೇಶನದಲ್ಲಿಲ್ಲದಿದ್ದುದರಿಂದ ಈ ಉದ್ದೇಶಕ್ಕಾಗಿ ಒಂದು ಅಧ್ಯಾದೇಶವನ್ನು ಹೊರಡಿಸಲಾಯಿತು.

(ದಿನಾಂಕ 9.11.1966ರ ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ II 2ಎ ಸಂಖ್ಯೆ 187ರಲ್ಲಿ ಪ್ರಕಟಿಸಲಾಗಿದೆ.)

II

1967ರ ತಿದ್ದುಪಡಿ ಅಧಿನಿಯಮ 6.- ಮೈಸೂರು ರಾಜ್ಯ ಸಿವಿಲ್ ಸೇವಾ (ಮುಷ್ಕರಗಳ ಪ್ರತಿಬಂಧ) ಅಧಿನಿಯಮ, 1966ರ ಉಪಬಂಧಗಳನ್ನುಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕಾಗಿ, ಮುಷ್ಕರಕ್ಕೆ ಪ್ರಚೋದನೆ ನೀಡಿದ ಅಪರಾಧಕ್ಕೆ ದಂಡ ಮತ್ತು ಕಾರಾವಾಸಗಳೆರಡರಿಂದಲೂಶಿಕ್ಷಿಸುವುದಕ್ಕೆಉಪಬಂಧಕಲ್ಪಿಸುವುದು ಮತ್ತು ಮುಷ್ಕರಗಳಿಗೆ ಪ್ರಚೋದನೆ ನೀಡಿದ ಆಪಾದಿತರಾದ ಅಥವಾ ಸಿದ್ಧದೋಷಿಗಳಾದವ್ಯಕ್ತಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸುವ ಒಂದು ಅವಕಾಶವನ್ನು ಪ್ರಾಸಿಕ್ಯೂಷನ್‍ಗೆ ನೀಡುವುದಕ್ಕೆ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಕಂಡುಬಂದಿತು.

ಈ ಬಗೆಯ ಅಪರಾಧಗಳ ಶೀಘ್ರ ವಿಚಾರಣೆಯನ್ನು ಖಚಿತ ಪಡಿಸಿಕೊಳ್ಳುವುದಕ್ಕೂ ಸಹ ಉಪಬಂಧ ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಯಿತು. ತದನುಸಾರವಾಗಿ ಒಂದು ಅಧ್ಯಾದೇಶವನ್ನು1967ರ ಜನವರಿ 25ನೇ ದಿನಾಂಕದಂದು ಪ್ರಖ್ಯಾಪಿಸಲಾಯಿತು. ಅಧ್ಯಾದೇಶದ ಬದಲಿಗೆ ಈ ವಿಧೇಯಕವನ್ನು ಮಂಡಿಸಲಾಗಿದೆ.

(ದಿನಾಂಕ 27.3.1967ರ ಕರ್ನಾಟಕ ರಾಜ್ಯ ಪತ್ರ (ವಿಶೇಷ ಸಂಚಿಕೆ) ಭಾಗ II 2ಎ ಸಂಖ್ಯೆ 80ರಲ್ಲಿಪ್ರಕಟಿಸಲಾಗಿದೆ.)

* * * *

1966ರ ಕರ್ನಾಟಕ ಅಧಿನಿಯಮ ಸಂಖ್ಯೆ 30

(1966ರ ಡಿಸೆಂಬರ್ ಏಳನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಷ್ಕರಗಳ ಪ್ರತಿಬಂಧ) ಅಧಿನಿಯಮ, 1966

(1966ರ ಡಿಸೆಂಬರ್ ಏಳನೇ ದಿನಾಂಕದಂದು ರಾಜ್ಯಪಾಲರ ಅನುಮತಿಯನ್ನುಪಡೆಯಲಾಗಿದೆ)

(1967ರ ಅಧಿನಿಯಮ 6ರ ಮೂಲಕ ತಿದ್ದುಪಡಿ ಮಾಡಲಾಗಿದೆ)

ಕರ್ನಾಟಕ ರಾಜ್ಯ ಸಿವಿಲ್ ನೌಕರರಮುಷ್ಕರಗಳಪ್ರತಿಬಂಧಕ್ಕಾಗಿಉಪಬಂಧಕಲ್ಪಿಸಲು ಒಂದು ಅಧಿನಿಯಮ.

ಕರ್ನಾಟಕ ರಾಜ್ಯ ದ ಸಿವಿಲ್ ನೌಕರರ ಮುಷ್ಕರಗಳ ಪ್ರತಿಬಂಧಕ್ಕಾಗಿ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಹದಿನೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಿದೆ, ಎಂದರೆ:

 1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

1. ಚಿಕ್ಕ ಹೆಸರು, ಪ್ರಾರಂಭ ಮತ್ತು ವ್ಯಾಪ್ತಿ.-

(1) ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಷ್ಕರಗಳ ಪ್ರತಿಬಂಧ) ಅಧಿನಿಯಮ, 1966 ಎಂದು ಕರೆಯತಕ್ಕದ್ದು.

 1. ಇದು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು.
 2. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
 3. ಇದು ಕೂಡಲೇ ಜಾರಿಗೆ ಬರತಕ್ಕದ್ದು.

ಅನುಕ್ರಮಣಿಕೆ

 

2. ಪರಿಭಾಷೆಗಳು.-

ಈ ಅಧಿನಿಯಮದಲ್ಲಿ,

(1) “ರಾಜ್ಯ ಸಿವಿಲ್ ನೌಕರ” ಎಂದರೆ ಕರ್ನಾಟಕ ರಾಜ್ಯದ ಸಿವಿಲ್ ಸೇವೆಯ ಸದಸ್ಯನಾಗಿರುವ ಅಥವಾ ಕರ್ನಾಟಕ ರಾಜ್ಯದ ಅಡಿಯಲ್ಲಿ ಯಾವುದೇ ಸಿವಿಲ್ ಹುದ್ದೆಯನ್ನು ಧಾರಣ ಮಾಡಿರುವ ಒಬ್ಬ ವ್ಯಕ್ತಿ;

 1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) “ಮುಷ್ಕರ” ಎಂದರೆ ಒಟ್ಟಿಗೆಯಾಗಿ ಕಾರ್ಯ ನಿರ್ವಹಿಸುವ ರಾಜ್ಯ ಸಿವಿಲ್ ನೌಕರರ ನಿಕಾಯವು ಮಾಡಿದ (ಕರ್ತವ್ಯದಿಂದ ಯಾವುದೇ ಅನಧಿಕೃತ ಗೈರು ಹಾಜರಿಯೂಒಳಗೊಂಡು) ಕೆಲಸದ ಸ್ಥಗಿತ ಅಥವಾ ಯಾವುದೇ ಸಂಖ್ಯೆಯ ರಾಜ್ಯ ಸಿವಿಲ್ನೌಕರರು ಕಾರ್ಯ ನಿರ್ವಹಿಸಲುಏಕೋದ್ದೇಶದಿಂದನಿರಾಕರಿಸುವುದು ಅಥವಾ ಸಾಮಾನ್ಯ ತಿಳಿವಳಿಕೆಯ ಮೇರೆಗೆ ನಿರಾಕರಿಸುವುದು.

ಅನುಕ್ರಮಣಿಕೆ

 

3. ಮುಷ್ಕರದ ನಿಷೆಧ.-

ಯಾರೇ ರಾಜ್ಯ ಸಿವಿಲ್ ನೌಕರನು ಮುಷ್ಕರದಲ್ಲಿ ತೊಡಗತಕ್ಕದ್ದಲ್ಲ.

ಅನುಕ್ರಮಣಿಕೆ

 

4. ಮುಷ್ಕರಗಳಿಗೆ ದಂಡ.-

ಮುಷ್ಕರವನ್ನು ಆರಂಭಿಸುವ, ಮುಂದುವರಿಸುವ ಅಥವಾ ಅದರ ಮುಂದುವರಿಕೆಯಲ್ಲಿ ಅನ್ಯಥಾ ಕಾರ್ಯನಿರ್ವಹಿಸುವಯಾರೇ ರಾಜ್ಯ ಸಿವಿಲ್ ನೌಕರನು ಆರು ತಿಂಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು.

ಅನುಕ್ರಮಣಿಕೆ

 

5. ಪ್ರಚೋದನೆ, ಇತ್ಯಾದಿಗಳಿಗೆ ದಂಡ.-

ಮುಷ್ಕರದಲ್ಲಿಪಾಲ್ಗೊಳ್ಳಲು ಅಥವಾ ಅದರ ಮುಂದುವರಿಕೆಯಲ್ಲಿ ಅನ್ಯಥಾ ಕಾರ್ಯನಿರ್ವಹಿಸಲು ಪ್ರಚೋದಿಸುವ ಅಥವಾ ಚಿತಾವಣೆ ಮಾಡುವಯಾರೇ ವ್ಯಕ್ತಿಯನ್ನು, ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದಮತ್ತು ಒಂದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.

 1. 1967ರ ಅಧಿನಿಯಮ ಸಂಖ್ಯೆ 6ರ ಮೂಲಕ 4.1967ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

 

ಅನುಕ್ರಮಣಿಕೆ

6. ಹಣಕಾಸು ನೆರವು ನೀಡುವುದಕ್ಕಾಗಿ ದಂಡ.-

ಮುಷ್ಕರವನ್ನು ಮುಂದುವರಿಸಲು ಅಥವಾ ಬೆಂಬಲಿಸಲು ತಿಳಿದೂ ತಿಳಿದೂ ಯಾವುದೇ ಹಣವನ್ನು ವೆಚ್ಚ ಮಾಡುವ ಅಥವಾ ವಿನಿಯೋಗಿಸುವಯಾರೇ ವ್ಯಕ್ತಿಯು, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಒಂದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡದಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು.

ಅನುಕ್ರಮಣಿಕೆ

 

7. ಅಪರಾಧ ಮಾಡುವ ಪ್ರಯತ್ನಗಳು, ಇತ್ಯಾದಿ.-

ಈ ಅಧಿನಿಯಮದ ಮೇರೆಗೆ ಯಾವುದೇ ಅಪರಾಧವನ್ನು ಮಾಡಲು ಯತ್ನಿಸುವ ಅಥವಾ ಅಪರಾಧ ಮಾಡಲು ಪೂರ್ವಭಾವಿಯಾಗಿ ಯಾವುದೇ ಕೃತ್ಯವೆಸಗುವಯಾರೇ ವ್ಯಕ್ತಿಯು ಅಂಥ ಅಪರಾಧವನ್ನು ಮಾಡಿರುವನೆಂದು ಭಾವಿಸತಕ್ಕದ್ದು.

ಅನುಕ್ರಮಣಿಕೆ

 

8. ಸಂಘಗಳಿಂದ ಅಪರಾಧಗಳು.-

(1) ಒಂದು ಸಂಘವು, ಈ ಅಧಿನಿಯಮದ ಅಡಿಯಲ್ಲಿ ಒಂದು ಅಪರಾಧವನ್ನು ಮಾಡಿದ್ದಲ್ಲಿ, ಅಪರಾಧವುಘಟಿಸಿದ ಸಮಯದಲ್ಲಿ ಸಂಘದ ವ್ಯವಹಾರದ ನಿರ್ವಹಣೆಯ ಪ್ರಭಾರದಲ್ಲಿದ್ದ ಮತ್ತು ಆ ಬಗ್ಗೆ ಸಂಘಕ್ಕೆ ಹೊಣೆಗಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಸಂಘವನ್ನುಅಪರಾಧದತಪ್ಪಿತಸ್ಥನೆಂದುಭಾವಿಸತಕ್ಕದ್ದು ಮತ್ತು ತದನುಸಾರವಾಗಿ ಅವನು ಮತ್ತು ಅದು ತನ್ನ ವಿರುದ್ಧದ ವ್ಯವಹರಣೆಗೆ ಮತ್ತು ದಂಡನೆಗೆ ಗುರಿಯಾಗತಕ್ಕದ್ದು:

ಪರಂತು, ಈ ಉಪಪ್ರಕರಣದಲ್ಲಿ ಒಳಗೊಂಡಿರುವುದು ಯಾವುದೂ, ಅಂಥ ಯಾರೇ ವ್ಯಕ್ತಿಯು, ಆ ಅಪರಾಧವು ತನ್ನ ತಿಳುವಳಿಕೆಗೆಬಾರದೇನಡೆಯಿತೆಂದು ಅಥವಾ ಅಂಥ ಅಪರಾಧವು ನಡೆಯುವುದನ್ನು ತಡೆಯಲು ತಾನು ಎಲ್ಲ ಯುಕ್ತ ಜಾಗರೂಕತೆ ವಹಿಸಿದ್ದೆನೆಂದು ರುಜುವಾತುಪಡಿಸಿದರೆ, ಅವನನ್ನು ಯಾವುದೇ ದಂಡನೆಗೆ ಗುರಿಪಡಿಸತಕ್ಕದ್ದಲ್ಲ.

(2) (1)ನೇ ಉಪ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಸಂಘವು ಅಂಥ ಯಾವುದೇ ಅಪರಾಧವನ್ನುಎಸಗಿರುವಲ್ಲಿ ಮತ್ತು ಅಂಥ ಅಪರಾಧವು ಸಂಘದ ಕಾರ್ಯಕಾರಿ ಅಥವಾ ಆಡಳಿತ ಸಮಿತಿಯು ಯಾರೇ ಸದಸ್ಯ ಅಥವಾ ಯಾರೇ ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯ ಸಮ್ಮತಿಯಿಂದ ಅಥವಾ ಪರೋಕ್ಷ ಸಮ್ಮತಿಯಿಂದ ಅಥವಾ ಅವನ ಯಾವುದೇ ನಿರ್ಲಕ್ಷ್ಯದಿಂದ ನಡೆಯಿತೆಂದು ಹೇಳಬಹುದೆಂದು ರುಜುವಾತಾದರೆ, ಅಂಥ ಸದಸ್ಯ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯನ್ನು ಅಪರಾಧದ ತಪ್ಪಿತಸ್ಥನೆಂದು ಭಾವಿಸತಕ್ಕದ್ದು ಮತ್ತು ಅವನು ತದನುಸಾರವಾಗಿ ತನ್ನ ವಿರುದ್ಧದವ್ಯವಹರಣೆಗೆ ಮತ್ತು ದಂಡನೆಗೆ ಗುರಿಯಾಗತಕ್ಕದ್ದು.

ವಿವರಣೆ.- ಈ ಪ್ರಕರಣದ ಉದ್ದೇಶಕ್ಕಾಗಿ“ಸಂಘ” ಎಂದರೆ ಅದು ನಿಗಮಿತವಾಗಿರಲಿ ಅಥವಾ ನಿಗಮಿತವಾಗಿಲ್ಲದಿರಲಿ ವ್ಯಕ್ತಿಗಳ ಯಾವುದೇ ನಿಕಾಯ.

ಅನುಕ್ರಮಣಿಕೆ

 

9. ವಾರಂಟಿಲ್ಲದೆ ದಸ್ತಗಿರಿ ಮಾಡಲು ಅಧಿಕಾರ.-

ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾದ ಯಾವುದೇ ಅಪರಾಧ ಎಸಗಿದ್ದಾನೆಂದುಯುಕ್ತವಾಗಿಸಂದೇಹಪಡಬಹುದಾದಯಾರೇ ವ್ಯಕ್ತಿಯನ್ನು ಯಾರೇ ಪೋಲೀಸ್ ಅಧಿಕಾರಿಯು ವಾರಂಟಿಲ್ಲದೆ ದಸ್ತಗಿರಿ ಮಾಡಬಹುದು.

ಅನುಕ್ರಮಣಿಕೆ

9ಎ. ಜಾಮೀನಿಗೆ ಸಂಬಂಧಿಸಿದಂತೆ ವಿಶೇಷ ಉಪಬಂಧ.-

ಈ ಅಧಿನಿಯಮದ5ನೇ ಪ್ರಕರಣದ ಅಡಿಯಲ್ಲಿ ಆಪಾದಿತನಾದ ಅಥವಾ ಅಪರಾಧ ನಿರ್ಣೀತನಾದಯಾರೇ ವ್ಯಕ್ತಿಯು ಅಭಿರಕ್ಷೆಯಲ್ಲಿದ್ದರೆ, ಅಂಥ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯನ್ನು ವಿರೋಧಿಸಲುಪ್ರಾಸಿಕ್ಯೂಷನ್‍ಗೆ ಒಂದು ಅವಕಾಶವನ್ನು ನೀಡಿದ್ದ ಹೊರತು ಮತ್ತು ಪ್ರಾಸಿಕ್ಯೂಷನ್ ಆ ಅರ್ಜಿಯನ್ನು ವಿರೋಧಿಸಿದ್ದು, ಅವನು ಅಂಥ ಅಪರಾಧದತಪ್ಪಿತಸ್ಥನಲ್ಲವೆಂದುನ್ಯಾಯಾಲಯಕ್ಕೆ ಕಂಡು ಬಂದ ಹೊರತು, ಜಾಮೀನಿನ ಮೇಲೆ ಅಥವಾ ಅವನು ಸ್ವತಃ ಬರೆದುಕೊಟ್ಟಮುಚ್ಚಳಿಕೆಯ ಮೇಲೆ ಅವನನ್ನು ಬಿಡುಗಡೆ ಮಾಡತಕ್ಕದ್ದಲ್ಲ.

ಅನುಕ್ರಮಣಿಕೆ

 

9ಬಿ. ವಿಚಾರಣೆಗಳಿಗೆ ಆದ್ಯತೆ.-

ಈ ಅಧಿನಿಯಮದಅಡಿಯಲ್ಲಿನ ಯಾವುದೇ ಅಪರಾಧದ ವಿಚಾರಣೆಯು, ಅಂಥ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಬಾಕಿಯಿರುವ ಇತರ ಯಾವುದೇ ಅಪರಾಧದ ವಿಚಾರಣೆಗಿಂತ ಆದ್ಯತೆಯನ್ನು ಹೊಂದಿರತಕ್ಕದ್ದು.

 1. 1967ರ ಅಧಿನಿಯಮ ಸಂಖ್ಯೆ 6ರ ಮೂಲಕ 4.1967ರಿಂದ ಜಾರಿಗೆ ಬರುವಂತೆ 9ಎ ಮತ್ತು 9ಬಿಸೇರಿಸಲಾಗಿದೆ.
 2. ಅನುಕ್ರಮಣಿಕೆ

 

10. 1966ರ ಕರ್ನಾಟಕಅಧ್ಯಾದೇಶ ಸಂಖ್ಯೆ 1ರ ನಿರಸನ.-

ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಷ್ಕರಗಳ ಪ್ರತಿಬಂಧ) ಅಧ್ಯಾದೇಶ, 1966ನ್ನು ಈ ಮೂಲಕ ನಿರಸನ ಗೊಳಿಸಲಾಗಿದೆ.

 1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ

* * * * *

 

The Above Translation Of Karnataka civilServies (Peveiosies), Act-1966 (30 Of 1966) shall be authortativetext in the kannada languageUnder section 5A Of The Kannada Official Language Act, 1963 (Karnataka Act-26 of1963)

Government Of karnataka

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಮ. ರಾ. ಹೆಗಡೆ)

ಸರ್ಕಾರದ ಕಾರ್ಯದರ್ಶಿ

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ

ಅನುಕ್ರಮಣಿಕೆ