ಕೃತಜ್ಞತೆಗಳು

ಸಂಘದ ಅರ್ಥಪೂರ್ಣ ನಿಲುವಿಗೆ ನೆರವಾದವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಹಂಬಲ

ದಿನಾಂಕ: 26/08/2018.

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ಮುಖ್ಯವಾಹಿನಿಯೊಂದಿಗೆ ಅಂಧರ ಕೌಶಲ್ಯವನ್ನು ಗುರುತಿಸುವುದಕ್ಕಾಗಿ ಮತ್ತು ಮುಖ್ಯವಾಹಿನಿಯೊಂದಿಗೆ ಸೇತುವೆಯಾಗಲಿಕ್ಕಾಗಿ ಜಾಲತಾಣವನ್ನು ಹೊಂದಬೇಕೆಂಬ ಸದುದ್ದೇಶದಿಂದ 29/04/2018ರ ಪ್ರಥಮ ಕಾರ್ಯಕಾರಿ ಸಭೆಯಲ್ಲಿ ಸಂಘದ ಸದಸ್ಯರಿಂದ, ಪದಾಧಿಕಾರಿಗಳಿಂದ ಮತ್ತು ಈ ಎರಡೂ ಮೂಲಗಳಿಂದ ಜಾಲತಾಣದ ನಿರ್ಮಾಣಕ್ಕೆ ಹಣವು ಸಾಕಾಗದಿದ್ದಲ್ಲಿ ಮಾತ್ರ ಸಂಘಕ್ಕೆ ಜಮೆಯಾಗಿರುವ ಹಣವನ್ನು ಬಳಸಬೇಕೆಂದು ನಿರ್ಧರಿಸಲಾಗಿತ್ತು. ಅದರಂತೆ ಸಂಘವು ತನ್ನ ” K S G E A B” ಮತ್ತು ಸಂಘದ ಹುಟ್ಟಿಗೆ ಕಾರಣವಾದ R S G E (responsible State Government Employees)” ಎಂಬ whatsapp ಗುಂಪುಗಳಲ್ಲಿ ಜಾಲತಾಣದ ನಿರ್ಮಾಣಕ್ಕಾಗಿ ದೇಣಿಗೆ ನೀಡುವಂತೆ ಸದಸ್ಯರಲ್ಲಿ ಸಂಘವು ವಿನಂತಿಸಿಕೊಂಡಿತು.

ಈ ಸಕಾರಣದ ಉದ್ದೇಶಕ್ಕಾಗಿ ಸಂಘದ 107 ಸದಸ್ಯರು ಮತ್ತು ಸಂಘದ ಸದಸ್ಯರಿಂದ ಪ್ರೇರೇಪಿತಗೊಂಡ ಇಬ್ಬರು ವ್ಯಕ್ತಿಗಳು ದೇಣಿಗೆಯನ್ನು ನೀಡಿರುತ್ತಾರೆ.
ಸದಸ್ಯರು: ವಿಶ್ವನಾಥ ಬಿ, ವಾಣಿ ಬಂಡೇಕರ‍್, ಶಿವಕುಮಾರ್ ಆರ‍್, ಸಿದ್ದೆಶ್ ಕೆ, ರಮೇಶ್ ಹೇಮರೆಡ್ಡಿ ಸಂಕರೆಡ್ಡಿ, ಮಂಜುನಾಥ್ B C, ಉಮೇಶ್ N, ನವೀನ್, ಮಂಜುನಾಥ N, ಶ್ರೀನಿವಾಸ, ಶ್ರೀನಿವಾಸಮೂರ್ತಿ B G, ಸಂಜೀವ ಶೆಟ್ಟಿ, ಸಂಗಣ್ಣ, ಶಿವಕುಮಾರ R C, ಅನಿತಾ ಲಕ್ಷ್ಮಿ, ರಾಘವೇಂದ್ರ ಜನಿವಾರ‍್, ಮಂಜುಳ, ಪ್ರಮೋದ್ ನಾಯಕ್, ಡಾ. ಬಸಯ್ಯ ಮಠಪತಿ, ಶಿವಾಜಿ ಮಾನೆ, ಕುಮಾರ, ಆದಪ್ಪ, ಶಿವಾನಂದ ಕಾಂಬ್ಳೆ, ಹಾಜಿಮಲಂಗ ಕರಡಿ, ವೆಂಕಣ್ಣ ಕಂಬಾರ‍್, ರಜಾಕ್ಸಾಬ್ ಟೇಲರ‍್, ಖಂಡ್ಯಪ್ಪ, ನಾಗಮಣಿ H B, ಚನ್ನಮ್ಮ, ಪ್ರಕಾಶ್ A, ಆಶಾ K G, ಮುನಿರಾಜು, ಪ್ರಕಾಶ್ ಕುಲಕರಣಿ, ಚನ್ನಪ್ಪ, ಶಶಿಕಾಂತ್ ಬಸವರಾಜ್ ಹಡಪದ್, ಹುಚ್ಚಮ್ಮ, ಲಕ್ಕಣ್ಣ, ನಟರಾಜು, ರಾಜು ಪನದಾರೆ, ರಂಗಪ್ಪ ಹಾವೇರಿ, ರುದ್ರಯ್ಯ ದಿಂಗಾಲಿಮಠ್, ರೇಣುಕ, ಸಂದೀಪ್, ಉಮಾಶ್ರೀ, ವಿರುಪಾಕ್ಷ ಹಟ್ಟಿಹೊಳಿ, ನೇತ್ರರಾಜ್, ಸುಧಾಕರ‍್, ಮಯ್ಯೂರ‍್, ಚಿಕ್ಕಮಗಳೂರು ಜಿಲ್ಲಾ ಸದಸ್ಯರು, K M ಗೋಪಾಲ ಕೃಷ್ಣ, ವಿಕ್ರಮ್, ರವಿ G, ಕಾರ್ತಿಕ್, ಸುರೇಶ್ ಪತಡ್, ಮೋಹನ್ ಮೆಹರವಾಡೆ, ಮಂಜುನಾಥ್ SD, ನೇತ್ರಾವತಿ, ಶಿವರಾಜ ಮಾಚನೂರು, ಅಡವೀಶಯ್ಯ, P V ನಾಗರಾಜ್, ಚಂಪಕಮಾಲಾ, ಕರಿಬಸವಪ್ಪ, ಪಕೀರಪ್ಪ, ರಮೇಶ್ಕುಮಾರ‍್ ಬಳ್ಳಾರಿ, ಬಸವರಾಜ್ S, ಮಹೇಶ್ ಕುಮಾರ‍್, ಶಿವಕುಮಾರ‍್ V, B T ಬಸವರಾಜ್, ಪ್ರೇಮಾ T, ವಿಜಯಕುಮಾರ‍್, ಚಂದ್ರ, ಸಿದ್ದಪ್ಪ ದನಕ್ಶಿರ, ಜಗದೀಶ್ C B, ನರಸಿಂಹ M L, ಮಲ್ಲಿಕಾರ್ಜುನ ಲಾಧಾಕರ‍್, ಶಿವರಾಜ್ ಗಂಜ್, ಗಿರೀಜ P, ಯೋಗೇಶ್, ಹೊನ್ನೇಗೌಡ, ನಾಗರಾಜ್ H O, ಪರಶುರಾಮ್ ಹೊಸಮನಿ, ಯೋಗೇಶ್ G S, ಗಣೇಶ್ G S, ಮಜರಾಲಿಖಾನ್, ಅರ್ಜುನ್, ಕುಪೇಂದ್ರ, ಶರಣಪ್ಪ B, ಪ್ರವೀಣ್ ಬಂಡಾರಿ, ಸತೀಶ್ ಜಾಲಿನಗರ‍್, ಶಾರದ, ರವಿಕಾಂತ್ ಚೌಹಾನ್, ಸಂತೋಶ್ ಕಣ್ಕಟ್ಟಾ, ಲೋಕೇಶ್ G V, ಪತ್ರಪ್ಪ, ಗೋಪಾಲ್ ಹಂಡರಗರ‍್, ಮಂಜು K, ವಸಂತ್ಕುಮಾರ‍್, ವಿದ್ಯಾ S ಜಕ್ಕಣಗೌಡರ, ನಾಗೇಶ್ V, ಡಾ. ನಾಗಶೆಟ್ಟಿ, ಜಯರಾಮಯ್ಯ, ಪಂಪನಗೌಡ, ನಂದಿಗುರು ಬಸವರಾಜ್, ಮಹಮದ್ ರಫೀಕ್, ಧನಂಜಯ, ನಿಂಗರಾಜು ಮತ್ತು ಸುರೇಶ್ KH ಇವರೆಲ್ಲರು ದೇಣಿಗೆ ನೀಡುವ ಮೂಲಕ ಸಂಘದ ಜಾಲತಾಣದ ನಿರ್ಮಾಣಕ್ಕೆ ಬುನಾದಿ ಹಾಕಿದರು.

ಸದಸ್ಯರಿಂದ ಪ್ರೇರೇಪಿತರಾದವರು: ಶ್ರೀಯುತ ಸಿದ್ದೇಶ್ K ರವರ ಧರ್ಮ ಪತ್ನಿ ಶ್ರೀಮತಿ ಶ್ರೀದೇವಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಶ್ರೀಯುತ ಅಲ್ವಿನ್ ಎಂಬುವವರು ಕೂಡ ಈ ಕಾರ್ಯಕ್ಕೆ ಕೈಜೋಡಿಸಿರುತ್ತಾರೆ.

ದೇಣಿಗೆಯನ್ನು ಪಡೆಯುವ ಜೊತೆಜೊತೆಗೇ ಜಾಲತಾಣದ ವಿನ್ಯಾಸದ ರೂಪುರೇಷೆಯ ಸಲಹೆಗಾಗಿ ತಂತ್ರಾಂಶ ಅಭಿವೃದ್ಧಿ ಕ್ಷೇತ್ರದಲ್ಲಿರುವ ಶ್ರೀ ಶೇಕ್ ಮಹಮದ್ ಅಲಿ, ಬೇಳೂರು ಸುದರ್ಶನ, ನಂಜುಂಡ, ಪ್ರಶಾಂತ್ ಎಂ. ಎನ್., ಭಾರ್ಗವ, ಶ್ರೀಧರ TS ಎಂಬುವವರ ನೆರವನ್ನು ಸಂಘವು ಪಡೆದುಕೊಂಡಿರುತ್ತದೆ. ಇವರು ನೀಡಿದ ಸಲಹೆಗಳನುಸಾರ ದರಪಟ್ಟಿಗಾಗಿ ಮಾರ್ಗಸೂಚಿಗಳನ್ನು ಸಂಘವು ರೂಪಿಸಿಕೊಂಡಿತು. ಈ ಮಾರ್ಗಸೂಚಿಗಳನುಸಾರ ಜಾಲತಾಣವನ್ನು ವಿನ್ಯಾಸಗೊಳಿಸುವುದಾಗಿ Punarvasu Web Solutions, ಟೆಕ್ಕ್ಯಾನೊಪಿ ಮತ್ತು ಹಂಟರ‍್ಟೆಕ್ ಎಂಬ ಕಂಪನಿಗಳಿಂದ ದರಪಟ್ಟಿಗಳು ಸಂಘಕ್ಕೆ ದೊರಕಿದ್ದವು. ಇದರಲ್ಲಿ ಸಂಘಕ್ಕೆ ಆರ್ಥಿಕ ಹೊರೆಯಾಗದಂತೆ ದರಪಟ್ಟಿಯಲ್ಲೂ ಒಪ್ಪಬಹುದಾದ ಮತ್ತು accessibility ವಿಚಾರದಲ್ಲಿಯೂ ಒಪ್ಪಬಹುದಾದ ಅಂಶಗಳು ಕಂಡುಬಂದುದ್ದರಿಂದ Punarvasu Web Solutions ಎಂಬ ಕಂಪನಿಗೆ ಜಾಲತಾಣವನ್ನು ನಿರ್ಮಿಸುವಂತೆ ಆದೇಶ ನೀಡಲಾಯಿತು. Punarvasu Web Solutions ಕಂಪನಿಯ ಮಾಲಿಕರಾದ ಶ್ರೀಮತಿ ಸುಮಿತ್ರ ಭಟ್ ರವರು ಸಂಘದ ಜಾಲತಾಣವನ್ನು ನಿರ್ಮಿಸುವಲ್ಲಿ ಕಾಳಜಿಪೂರ್ವಕವಾಗಿ ಶ್ರಮವಹಿಸುತ್ತಿದ್ದು, ಅಂಧರು ಬಳಸುವ screenreader ತಂತ್ರಾಂಶಗಳ ಕುರಿತು ಮತ್ತು accessibility ಅಂಶಗಳ ಕುರಿತು ಅಧ್ಯಯನಮಾಡುತ್ತಲೇ ಜಾಲತಾಣವನ್ನು ನಿರ್ಮಿಸುತ್ತಿರುವುದು ಸಂತಸವುಂಟಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಮೂಲಕ “ಎಲ್ಲರು ಎಲ್ಲರಿಗಾಗಿ” ಎಂಬ ತತ್ವದ ಆಧಾರದಲ್ಲಿ ಸಮಸ್ತ ಅಂಧ ನೌಕರರ ಅನುಕೂಲಕ್ಕಾಗಿ ಮತ್ತು ಕೆಲವು ಸೇವೆಗಳು ದೃಷ್ಟಿಯುಳ್ಳ ನೌಕರರಿಗೂ ಅನುಕೂಲವಾಗುವಂತೆಯೇ ಜಾಲತಾಣವು ರೂಪಿತವಾಗಿದ್ದು, ಸಮಸ್ತ ಕರ್ನಾಟಕ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಬಹುದಾಗಿದೆ ಮತ್ತು ಸಲಹೆಯನ್ನು ಕೂಡ ನೀಡಬಹುದಾಗಿದೆ.

ಈ ಕಾರ್ಯಕ್ಕೆ ನೆರವಾದ ಎಲ್ಲರಿಗೂ ಕಾರ್ಯಕಾರಿ ಸಮಿತಿಯ ಮತ್ತು ರಾಜ್ಯ ಪರಿಷತ್ ಸಮಿತಿಯ ಪದಾಧಿಕಾರಿಗಳಿಂದ ಕೃತಜ್ಞತೆಗಳು.