ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ (ರಿ) ಬೆಂಗಳೂರು
ನೋಂದಣಿ ಸಂಖ್ಯೆ :- ಡಿ. ಆರ್. ಬಿ – 1/ಎಸ್. ಒ. ಆರ್/216 2017/18 ಬೆಂಗಳೂರು ದಿನಾಂಕ :- 21/07/2017.
ಸರ್ಕಾರದ ಮಾನ್ಯತೆ ಆದೇಶ ಸಂಖ್ಯೆ :- ಮಮಇ 50 ಪಿಹೆಚ್ ಪಿ 2019, ಬೆಂಗಳೂರು 06/12/2021
#41/ಬಿ, ಬಿ ಬ್ಲಾಕ್, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-560097
Email :- ksgeab.kar@gmail.com
website :- www.ksgeab.org
ದೂರವಾಣಿ ಸಂಖ್ಯೆ:- 9141154262/ 9141154263
ದಿನಾಂಕ: 20-04-2025
ಸ್ವಾಭಿಮಾನ ಸಮಾನತೆ ಸ್ವಗೌರವ ಎಂಬ ಉನ್ನತ ದೇಯ್ಯ ವಾಕ್ಯಗಳೊಂದಿಗೆ ಸ್ಥಾಪಿತಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆಯನ್ನು ಪಡೆದಿರುವ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ (ರಿ) ಬೆಂಗಳೂರು ಸಭಾ ಸೂಚಿ ಪತ್ರ 07
ವಿಷಯ: ಸಂಘದ 7ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಆಯೋಜಿಸುವ ಕುರಿತು
ಉಲ್ಲೇಖ: 1. ಕರ್ನಾಟಕ ಸೇವಾ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 11ರ ಉಪಪ್ರಕರಣ 01
2. ನಮ್ಮ ಸಂಘದ ಬೈಲಾದ ಪ್ರಕರಣ 10ರಿಂದ 12
3. ದಿನಾಂಕ: 14-07-2024ರಂದು ಬೆಂಗಳೂರಿನಲ್ಲಿ ನಡೆದ ಸಂಘದ 6ನೇ ವರ್ಷದ ವಾರ್ಷಿಕ ಮಹಾಸಭೆ
4. ದಿನಾಂಕ: 23-02-2025ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಪರಿಷತ್ ಸಭೆ
ಸಂಘದ ಸರ್ವ ಸದಸ್ಯ ಬಂಧುಗಳೇ, ನಮ್ಮ ಸಂಘವು ಕರ್ನಾಟಕ ರಾಜ್ಯ ಸೇವಾ ಸಂಘಗಳ ನೋಂದಣಿ ಕಾಯ್ದೆ 1960ರಂತೆ ನೋಂದಾಯಿಸಲ್ಪಟ್ಟಿದ್ದು ಆ ಅಧಿನಿಯಮದ ಪ್ರಕರಣ 11 ಉಪ ಪ್ರಕರಣ 1ರಂತೆ ಪ್ರತಿ ವರ್ಷವೂ ಸಂಘವು ತನ್ನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ನಡೆಸಬೇಕಾಗಿರುತ್ತದೆ.
ಉಲ್ಲೇಖ 2ರಂತೆ ನಮ್ಮ ಸಂಘದ ಬೈಲಾದ ಪ್ರಕರಣ 10(ಎ) ನಿಯಮದಂತೆ ಪ್ರತಿವರ್ಷವೂ ಸಂಘದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಿ ಕರ್ನಾಟಕ ಸೇವಾ ಸಂಘಗಳ ನೋಂದಣಿ ಅಧಿನಿಯಮದ ಪ್ರಕಾರ ಸಂಘದ ವಾರ್ಷಿಕ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಉಲ್ಲೇಖ 3ರಂತೆ 2024-25 ನೇ ಸಾಲಿನ ವಾರ್ಷಿಕ ಸಭೆಯು ದಿನಾಂಕ: 14-07-2024ರಂದು ಬೆಂಗಳೂರಿನಲ್ಲಿ ನೆರವೇರಿದ್ದು ಈಗ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಆಯೋಜಿಸಬೇಕಾಗಿದೆ.
ಉಲ್ಲೇಖ 4ರಂತೆ ದಿನಾಂಕ: 23-02-2025ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಸಂಘದ 7ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಬೆಳಗಾವಿಯಲ್ಲಿ ದಿನಾಂಕ: 11-05-2025ರಂದು ನಡೆಸಲು ನಿರ್ಧರಿಸಲಾಗಿದೆ.
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಶ್ರೀಯುತ ಶರಣಪ್ಪ ಬಿ. ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ನೌಕರರ ಭವನದಲ್ಲಿ ದಿನಾಂಕ: 11-05-2025ನೇ ಭಾನುವಾರದಂದು ಸಂಘದ 7ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿದೆ.
ಆದುದರಿಂದ ಸಂಘದ ಸರ್ವ ಸದಸ್ಯರು ಸಂಘಟನೆಯ ಭವಿಷ್ಯದ ದೃಷ್ಟಿಯಿಂದ ಈ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕಾರಿಗೆ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯಕಾರಿಯು ತಮ್ಮಲ್ಲಿ ವಿನಂತಿಸಿಕೊಳ್ಳುತ್ತದೆ.
ಅಗತ್ಯ ಸೂಚನೆಗಳು:
1. ಸಭೆಯು ಆ ದಿನ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಪ್ರಾರಂಭಗೊಳ್ಳಲಿದೆ.
2. ಸಂಘದ ತಿದ್ದುಪಡಿ ನಿಯಮ 12(ಬಿ)ಯಂತೆ ವಾರ್ಷಿಕ ಮಹಾಸಭೆಯು ಯಶಸ್ವಿಗೊಳ್ಳಲು ಸಂಘದ ಒಟ್ಟು ಸದಸ್ಯರಲ್ಲಿ ಕನಿಷ್ಠ ನಾಲ್ಕನೇ ಒಂದರಷ್ಟು (one fourth) ಸದಸ್ಯರ ಪಾಲ್ಗೊಳ್ಳುವಿಕೆಯು ಅಗತ್ಯವಾಗಿರುತ್ತದೆ.
3. ಈ ಕೆಳಗೆ ನೀಡಿರುವ ಯಾವುದಾದರೂ ಒಂದು ದೂರವಾಣಿ ಸಂಖ್ಯೆಗೆ ಕರೆ ಮಾಡುವುದರ ಮೂಲಕ ದಿನಾಂಕ:
06-05-2025ರ ಒಳಗೆ ತಮ್ಮ ಬರುವಿಕೆಯನ್ನು ಖಾತರಿಪಡಿಸಬೇಕೆಂದು ಕಾರ್ಯಕಾರಿಯು ಈ ಮೂಲಕ ತಮಗೆ ತಿಳಿಯಪಡಿಸುತ್ತದೆ.
ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಾಗ ತಾವು ಸಹಾಯಕರನ್ನು ಕರೆತರುವುದಾದರೆ ಅವರ ಹೆಸರನ್ನೂ ಸಹ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗಿರುತ್ತದೆ. ಪ್ರತಿ ಸದಸ್ಯರಿಗೂ ಒಬ್ಬ ಸಹಾಯಕರನ್ನು ಕರೆತರಲು ಅವಕಾಶವಿರುತ್ತದೆ. ಒಬ್ಬರಿಗಿಂತ ಹೆಚ್ಚು ಸಹಾಯಕರನ್ನು ಕರೆ ತಂದ ಪಕ್ಷದಲ್ಲಿ ಅವರಿಗೆ ಅಗತ್ಯ ವ್ಯವಸ್ಥೆಗಳನ್ನು ಸದರಿ ಸದಸ್ಯರೇ ನೋಡಿಕೊಳ್ಳಬೇಕಾಗುತ್ತದೆ.
ದೂರವಾಣಿ ಸಂಖ್ಯೆಗಳು:
ಶ್ರೀ ನವೀನ ಆರ್.: ಸಂಘಟನೆಯ ರಾಜ್ಯಸಂಘಟನಾಕಾರ್ಯದರ್ಶಿಗಳು, ಮೊಬೈಲ್ ಸಂಖ್ಯೆ:
9141154261
ಶ್ರೀ ಶಿವು: ಮೈಸೂರು ವಿಭಾಗೀಯ ನಿರ್ದೇಶಕರು, ಮೊಬೈಲ್ ಸಂಖ್ಯೆ:
9972837498
ಶ್ರೀ ಹರ್ಶ ಟಿಜಿ.: ತುಮಕೂರು ಜಿಲ್ಲಾ ಸಂಘಟನಾಕಾರ್ಯದರ್ಶಿಗಳು: ಮೊಬೈಲ್ ಸಂಖ್ಯೆ:
9343709884
ಶ್ರೀಮತಿ ಮೇಘ: ಚಿಕ್ಕಬಳ್ಳಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಹಾಗೂ ಮಹಿಳಾ ಸಮಿತಿಯ ಸದಸ್ಯರು, ಮೊಬೈಲ್ ಸಂಖ್ಯೆ:
7022731146
4. ದಿನಾಂಕ:10-05-2025ರ ಸಂಜೆ ಬರುವ ಸದಸ್ಯರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲವೆಂಬ ವಿಚಾರವನ್ನು ತಿಳಿಸಲು ಕಾರ್ಯಕಾರಿ ಸಮಿತಿಯು ವಿಶಾದಿಸುತ್ತದೆ.
ಆದರೇ 11/05/2025ರ ಮುಂಜಾನೆ ಬರುವ ಸದಸ್ಯರಿಗೆ Fresh up ಆಗಲು ಅವಕಾಶವಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ.
ಎಲ್ಲ ಸದಸ್ಯರು ಸಹಕರಿಸಬೇಕೆಂದು ಕಾರ್ಯಕಾರಿ ಸಮಿತಿಯು ವಿನಂತಿಸಿಕೊಳ್ಳುತ್ತದೆ.
5. ಕೇಂದ್ರೀಯ ಕಾರ್ಯಕಾರಿಯ ಪದಾಧಿಕಾರಿಗಳನ್ನು ಹೊರತುಪಡಿಸಿ ಸಂಘದ ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಯಾವುದಾದರೂ ಪ್ರಶ್ನೆಯನ್ನು ಕೇಳಬೇಕಾದಲ್ಲಿ ನಮ್ಮ ಸಂಘದ ಬೈಲಾ ನಿಯಮ 12(ಸಿ)ಯ ಪ್ರಕಾರ ಮಹಾಸಭೆ ನಡೆಯುವ 7 ದಿನಗಳ ಮುಂಚೆ ಅಂದರೆ ದಿನಾಂಕ: 04-05-2025ರ ಒಳಗೆ ಸಂಘದ ಪ್ರಧಾನ ಕಾರ್ಯದರ್ಶಿಗಳಿಗೆ ಸಂಘದ ಅಧಿಕೃತ ಇ-ಮೇಲ್ ಮೂಲಕ ಸಲ್ಲಿಸಬೇಕಾಗುತ್ತದೆ.
ಸದರಿ ದಿನಾಂಕದ ನಂತರ ಬಂದ ಯಾವುದೇ ಪ್ರಶ್ನೆಯನ್ನು ಪರಿಗಣಿಸಲಾಗುವುದಿಲ್ಲ.
ರಾಜ್ಯ ಪರಿಷತ್ ಸದಸ್ಯರಿಗೂ ಕೂಡ ಇದೇ ನಿಯಮ ಅನ್ವಯಿಸುತ್ತದೆ.
6. ಅಧ್ಯಕ್ಷರ ಅನುಮತಿಯ ಮೇರೆಗೆ ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳು ಅಧ್ಯಕ್ಷರ ವಿವೇಚನೆಯ ಮೇಲೆ ನಿರ್ಧರಿಸಲ್ಪಡುತ್ತವೆ. ಒಂದು ವೇಳೆ ಯಾವುದೇ ಸದಸ್ಯರು ಎತ್ತುವ ವಿಷಯವು ಆ ಸಮಯಕ್ಕೆ ಸೂಕ್ತವಲ್ಲವೆಂದು ಅಧ್ಯಕ್ಷರು ಪರಿಭಾವಿಸಿದಲ್ಲಿ ಆ ಚರ್ಚೆಯನ್ನು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಯಾವುದೇ ಸದಸ್ಯರು ಕಾರ್ಯಕಾರಿಯ ಮೇಲೆ ಒತ್ತಡ ಏರಿದ ಪಕ್ಷದಲ್ಲಿ ಅದನ್ನು ಸಭೆಯ ಅಶಿಸ್ತು ಎಂದು ಪರಿಗಣಿಸಿ ನಿಯಮಾನುಸಾರ ಕ್ರಮ ಜರುಗಿಸಲು ಕಾರ್ಯಕಾರಿಯು ಸ್ವತಂತ್ರವಾಗಿರುತ್ತದೆ.
7. ಕಾರ್ಯಕಾರಿ ಸಮಿತಿಯಿಂದ ವರ್ಡಿಸಿರುವ ಅಧಿಸೂಚನೆಯನ್ನು ಸಭೆಯಲ್ಲಿ ಭಾಗವಹಿಸುವ ಸರ್ವ ಸದಸ್ಯರು ಯಥಾವತ್ತಾಗಿ ಓದಿ ಅರ್ಥೈಸಿಕೊಂಡು ಘನತೆ ಮತ್ತು ಗೌರವಯುತವಾಗಿ ವರ್ತಿಸುವಿರೆಂಬ ಅಪೇಕ್ಷೆಯನ್ನು ಕಾರ್ಯಕಾರಿಯು ಹೊಂದಿದೆ ಮತ್ತು ವ್ಯಕ್ತಿಗತವಾದ ಚರ್ಚೆಗಳಿಗೆ ಹಾಗೂ ಪುನರಾವರ್ತನೆಯಾಗುವ ಪ್ರಶ್ನೆಗಳಿಗೆ ಸಮಯ ಅವಕಾಶವನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲವೆಂಬ ವಿಷಯವನ್ನು ಸ್ಪಷ್ಟೀಕರಿಸುತ್ತದೆ
8. ಸದಸ್ಯರು ಸಭೆಗೆ ಬರುವಾಗ ಸಂಘದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕಾಗುತ್ತದೆ.
ಸಭಾ ಪಟ್ಟಿ:
ದೈವಾದೀನರಾದ ಸಂಘಟನೆಯ ಗೌರವಾನ್ವಿತ ಸದಸ್ಯರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವುದು.
1. ನಾಡಗೀತೆ ಹಾಗೂ ಆಶೆಯ ಗೀತೆಗಳನ್ನು ಎಲ್ಲ ಸದಸ್ಯರು ಹಾಡುವುದು.
2.
2. ಸ್ವಾಗತ
3. ಸಭೆಯ ಪ್ರಾಸ್ತಾವಿಕ ನುಡಿ
4. 7ನೇ ವರ್ಷದ ವಾರ್ಷಿಕ ಮಹಾಸಭೆಯ ವಿದ್ಯುಕ್ತ ಉದ್ಘಾಟನೆ
ಸಭೆಯಲ್ಲಿ ಮಂಡಿಸುವ ವಿಷಯಗಳು:
1. ಸಭಾ ಸೂಚಿ ಪತ್ರವನ್ನು ಓದುವುದು
2. ಸಂಘದ ಆರನೇ ವಾರ್ಷಿಕ ಮಹಾಸಭೆಯ ನಡಾವಳಿಯನ್ನು ಓದುವುದು ಹಾಗೂ ಆ ಸಂಬಂಧ ಆಗಿರುವ ಪ್ರಗತಿಯ ವರದಿ ನೀಡುವುದು.
ಸಭೆಯಲ್ಲಿ ಮಂಡಿಸಿ, ಸಭೆಯ ಮತಕ್ಕೆ ಹಾಕುವ ವಿಷಯಗಳು:
1. 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಯ ಮಂಡನೆ ಸಂಘದ ಪ್ರಧಾನ ಕಾರ್ಯದರ್ಶಿಗಳಿಂದ, ನಂತರ ವರದಿಯನ್ನು ಮತಕ್ಕೆ ಹಾಕಿ ಅನುಮೋದನೆ ಪಡೆಯುವುದು
2. 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಮಂಡನೆ ಸಂಘದ ಖಜಾಂಚಿಗಳಿಂದ, ನಂತರ ಮತಕ್ಕೆ ಹಾಕಿ ಅನುಮೋದನೆ ಪಡೆಯುವುದು.
3. 2025-26ನೇ ಸಾಲಿನ ಅಂದಾಜು ವಾರ್ಷಿಕ ಆಯವ್ಯಯದ ಮಂಡನೆ ಸಂಘದ ಖಜಾಂಚಿಗಳಿಂದ, ನಂತರ ವರದಿಯ ಮೇಲೆ ಚರ್ಚೆ ಮತ್ತು ವರದಿಯನ್ನು ಮತಕ್ಕೆ ಹಾಕುವುದು.
4. ಸದಸ್ಯರು ಇ-ಮೇಲ್ ಮೂಲಕ ಸಲ್ಲಿಸಿದ ಪ್ರಶ್ನೆಗಳಿಗೆ ಕಾರ್ಯಕಾರಿಯಿಂದ ಉತ್ತರ.
5. ಅಧ್ಯಕ್ಷರ ಅನುಮತಿಯ ಮೇರೆಗೆ ಚರ್ಚಿಸಬಹುದಾದ ಇತರೆ ವಿಷಯಗಳು
6. ವಂದನಾರ್ಪಣೆಯೊಂದಿಗೆ ಸಭೆಯ ಮುಕ್ತಾಯ
ಸರ್ವ ಸದಸ್ಯರ ಪಾಲ್ಗೊಳ್ಳುವಿಕೆಯ ನಿರೀಕ್ಷೆಯಲ್ಲಿ
ಶ್ರೀಯುತ ಸತೀಶ್ ಕುಮಾರ ಜಾಲೀನಗರ್
ಪ್ರಧಾನ ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ (ರಿ) ಬೆಂಗಳೂರು