ಸಂಯೋಜಿತ ಸಂಘಗಳು ಮತ್ತು ವಿವಿಧ ಕೇಂದ್ರಗಳು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದೊಡನೆ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ ಸಮ್ಯೋಜನೆಗೊಂಡಿರುವ ಕುರಿತು

ಸಂಯೋಜಿತ ಪ್ರಮಾಣಪತ್ರ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಕಬ್ಬನ್ ಉದ್ಯಾನವನ, ಬೆಂಗಳೂರು-01.
ಕ್ರ.ಸಂ:ಜಿಇಎ/ವೃ.ಸಂಘ/161/2018-19 ದಿನಾಂಕ:01/09/2018
ಸಂಯೋಜನ ಪ್ರಮಾಣ ಪತ್ರ
ಕರ್ನಾಟಕ ರಾಜ್ಯ ಅಂಧ ಸರ್ಕಾರಿ ನೌಕರರ ಸಂಘ . (ರಿ) .
ವಿದ್ಯಾರಣ್ಯಪುರ ಅಂಚೆ. ಬೆಂಗಳೂರು ಉತ್ತರ – 560097.
ಈ ಸಂಘವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ By-law ನಿಯಮ 11(4) ರ ಈ ಸಂಘವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದೊಂದಿಗೆ 2018-19 ನೇ ಸಾಲಿಗೆ ಸಂಯೋಜಿಸಲಾಗಿದೆ ಹಾಗೂ ಅದರ ಕುರುಹಾಗಿ ಸಂಯೋಜನಾ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಮಿತ್ರ ಜ್ಯೋತಿ ಸಂಸ್ಥೆಯೊಂದಿಗೆ

ಮಿತ್ರಜ್ಯೋತಿಯಿಂದ ಪ್ರಕಟವಾಗುವ ಕೇಳು ನಿಯತಕಾಲಿಕೆ “ಸಂಚಯ” ಹಾಗೂ ಬ್ರೈಲ್‌ ನಿಯತಕಾಲಿಕೆ “ಜ್ಞಾನ ಸಂಹಿತ” ಈ ಎರಡೂ ನಿಯತಕಾಲಿಕೆಗಳ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ರಾಜ್ಯ ಸರ್ಕಾರಿ ಅಂಧ ನೌಕರರಿಗಾಗಿ ಸಂಘದ ಚಟುವಟಿಕೆಗಳನ್ನು ಮತ್ತು ಸರ್ಕಾರದ ಮಟ್ಟದಲ್ಲಿ ಕೈಗೊಂಡ ನಿರ್ಣಯಗಳನ್ನು
ತಲುಪಿಸುತ್ತಿದೆ.
ಸದಸ್ಯರು ಮಿತ್ರಜ್ಯೋತಿ ಸಂಸ್ಥೆಯನ್ನು ಸಂಪರ್ಕಿಸಿ ನಿಯತಕಾಲಿಕೆಗೆ ಚಂದಾದಾರಿಕೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ: ನಮೂನೆ ಮತ್ತು ನಿಯತಕಾಲಿಕೆಗಳ ವಿವರಗಳು ನೋಡಿರಿ.
ಹಾಗೆಯೇ, mitrajyothi magazine form ನಮೂನೆಯನ್ನು ಭರ್ತಿಗೊಳಿಸಿ, ಉಲ್ಲೇಖಿಸಿರುವ ದಾಖಲಾತಿಗಳನ್ನು ಮತ್ತು ನಿಯತಕಾಲಿಕೆಗೆಂದು ಉಲ್ಲೇಖಿಸಿರುವ ಚಂದಾದಾರಿಕೆ ಶುಲ್ಕವನ್ನು ಸಂಸ್ಥೆಗೆ ಕಳುಹಿಸಲು ವಿನಂತಿ.
ಸಂಸ್ಥೆಯ ವಿಳಾಸ: Mitra Jyothi, CA Site # P22, 31st Main, 18th Cross, Sector 1, HSR Layout, Behind National Institute of Fashion Technology (NIFT College) Bangalore – 560102
Ph: 080-22587623/25
ಮಿತ್ರ ಜ್ಯೋತಿ ಸಂಸ್ಥೆಯ ಜಾಲತಾಣದ ಕೊಂಡಿ

ಶೇಖರ್‌ ಎಂಟರ್ಪ್ರೈಸರ್ಸ್‌

ಸಂಘಕ್ಕೆ ಮುದ್ರಣ-ಲೇಖನ ಸಾಮಗ್ರಿಗಳನ್ನು ಪೂರೈಸುವ ಮತ್ತು ಸಂಘದಿಂದ ಏರ್ಪಡಿಸುವ ಆಂದೋಲನ, ಕಾರ್ಯಗಾರ ಹಾಗೂ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ಮತ್ತು ಬ್ಯಾನರ್‌ಗಳನ್ನು ಸಿದ್ಧಪಡಿಸಲು ಸಂಘವು “ಶೇಖರ್‌ ಪ್ರಿಂಟರ್ಸ್‌” ಮಾಲೀಕರಾಗಿರುವ ಚಂದ್ರಶೇಖರ್ರವರ ನೆರವನ್ನು ಪಡೆದುಕೊಂಡಿರುತ್ತದೆ.
ಇವರ ಮೊಬೈಲ್‌ ಸಂಖ್ಯೆ: 9448033605.