ಸಮಾನತೆಯ ಸಂವಹನಕ್ಕೆ ತಾಂತ್ರಿಕ ನೆರವು ಮೊಬೈಲ್ ರೂಪದಲ್ಲಿ

ಪ್ರಸ್ತುತ ಜಗತ್ತಿನಲ್ಲಿ ಮೊಬೈಲ್ ಫೋನ್ನ ಬಳಕೆಯು ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಈ ವಿಷಯದಲ್ಲಿ ದೃಷ್ಟಿ ವಿಶೇಷ ಚೇತನರು ಹೊರತಾಗಿಲ್ಲ. ಮೊಬೈಲ್ ಸಾದನವನ್ನು ಸುಲಲಿತವಾಗಿ ಬಳಸುವುದು ಅಂಧರಾದ ನಮಗೆ ಕರಗತವಾಗಿದೆ.

ದೈನಂದಿನ ಕಾರ್ಯಗಳಲ್ಲಿ ಮೊಬೈಲ್ ಸಾದನ

ಕೇವಲ ಕರೆ ಮಾಡುವುದು ಮತ್ತು ಸ್ವೀಕರಿಸುವುದಷ್ಟೇ ಅಲ್ಲದೆ; ದಿನಪತ್ರಿಕೆಗಳನ್ನು ಓದಲು, ಬಣ್ಣ ಮತ್ತು ನೋಟುಗಳನ್ನು ಗುರುತಿಸಲು, ಸಂದೇಶ ಹಾಗೂ ಮಿಂಚಂಚೆಗಳ ನಿರ್ವಹನೆಯೊಂದಿಗೆ ಇನ್ನೂ ಅನೇಕ ಚಟುವಟಿಕೆಗಳಿಗೆ ಮೊಬೈಲ್ ಸಾದನವು ಅಂಧರಿಗೆ ನೆರವಾಗುತ್ತಿದೆ.

ಮೊಬೈಲ್ ಸಾದನಗಳಲ್ಲಿ ದ್ವನಿ ಸಹಾಯಕ

ದೃಷ್ಟಿ ವಿಕಲ ಚೇತನರು ಮೇಲೆ ತಿಳಿಸಿರುವ ಕಾರ್ಯಗಳನ್ನು ಮೊಬೈಲ್ ಫೋನ್ನ ಸಹಾಯದಿಂದ ಹೇಗೆ ನಿರ್ವಹಿಸಬಲ್ಲರು ಎಂಬ ಕೌತುಕ ಇದೆಯೇ?
ಜಗತ್ತು ಆಧುನಿಕರಣಗೊಂಡಹಾಗೆ ತಂತ್ರಜ್ಞಾನವು ಎಲ್ಲರಿಗು ತಲುಪಿದಾಗ ಅದಕ್ಕೊಂದು ತಕ್ಕದಾದ ಬೆಲೆ. ಇದನ್ನು ಖಚಿತಪಡಿಸಲು ಅಂಧ ವ್ಯಕ್ತಿಗಳು ಮೊಬೈಲ್ ಸಾದನಗಳನ್ನು ಯಾವುದೇ ಅಡೆತಡೆ ಇಲ್ಲದೆ ಬಳಸಲು ಅವುಗಳಲ್ಲಿ ದ್ವನಿ ಸಹಾಯಕವನ್ನು ಅಳವಡಿಸಲಾಗಿರುತ್ತದೆ. ಈಗ ಪ್ರಸಿದ್ಧಿಯಲ್ಲಿರುವ ಆಂಡ್ರೈಡ್, ಐಫೋನ್ ಮತ್ತು ವಿಂಡೋಸ್ ಸ್ಮಾರ್ಟ್ಫೋನ್ಗಳಲ್ಲಿ ಈ ದ್ವನಿ ಸಹಾಯಕವು ಲಭ್ಯವಿದೆ.

ಆಂಡ್ರೈಡ್ ಸಾದನ ಮತ್ತು ದ್ವನಿ ಸಹಾಯಕ

ಅತಿಹೆಚ್ಚು ಬಳಕೆಯಲ್ಲಿರುವ ಹಾಗೂ ಕಡಿಮೆ ಬೆಲೆಗೆ ಸಿಗುವ ಆಂಡ್ರೈಡ್ ಸಾದನಗಳಲ್ಲಿ ಟಾಕ್ಬ್ಯಾಕ್ ಎಂಬ ದ್ವನಿ ಸಹಾಯಕವು ಇದೆ. ಟಾಕ್ಬ್ಯಾಕ್ನ ಪ್ರಯೋಜನವನ್ನು ಪಡೆಯಲು ನೂತನ ಆಂಡ್ರೈಡ್ ಆವೃತ್ತಿಯನ್ನು ಹೊಂದಿರುವ ಸಾದನಗಳನ್ನು ಬಳಸುವುದು ಸೂಕ್ತ.

ಟಾಕ್ಬ್ಯಾಕ್ ಚಾಲನೆ ಮತ್ತು ಕಾರ್ಯ

ಆಂಡ್ರೈಡ್ ಫೋನ್ನಲ್ಲಿ ಟಾಕ್ಬ್ಯಾಕ್ ಚಾಲನೆಗೊಳಿಸಲು:—

  • 1. ಸಾದನದಲ್ಲಿ ಸೆಟ್ಟಿಂಗ್ಸನ್ನು ತೆರೆಯಿರಿ.
  • 2. ಅಲ್ಲಿ ಸಿಗುವ accessibility ಆಯ್ಕೆಯನ್ನು ತೆರೆಯಿರಿ. (ಕೆಲವು ಸಾದನಗಳಲ್ಲಿ accessibility ಆಯ್ಕೆಯು ಮೋರ್, ಅಡ್ವಾನ್ಸ್ ಸೆಟ್ಟಿಂಗ್ಸ್ನಲ್ಲಿ ಅಥವಾ ಅಡಿಷನಲ್ ಸೆಟ್ಟಿಂಗ್ಸ್ನಲ್ಲಿ ದೊರೆಯುತ್ತದೆ.)
  • 3. accessibility ಸೆಟ್ಟಿಂಗ್ನಲ್ಲಿ ಸಿಗುವ talkback ಚಾಲನೆಗೊಳಿಸಿ.
    talkback ಚಾಲನೆಗೊಂಡಾಗ ಫೋನಿನ ಬಳಕೆಯು ಕೊಂಚ ಭಿನ್ನವಾಗಿರುತ್ತದೆ. ಸಾದನದ ಪರದೆಯ ಮೇಲೆ ಕಾಣುವ ಐಕಾನ್ ಅಥವಾ ಆಯ್ಕೆಯನ್ನು ಒಂದು ಬಾರಿ ಮುಟ್ಟಿದಾಗ ಅದನ್ನು ಉಚ್ಚರಿಸುತ್ತದೆ. ಅದೇ ಐಕಾನ್ ತೆರೆಯಲು ಪರದೆಯ ಮೇಲೆ ಎಲ್ಲಿಯಾದರು ಎರಡುಬಾರಿ ತ್ವರಿತವಾಗಿ ತಟ್ಟಬೇಕು. ಉದಾ: ಫೋನಿನ ಮುಖ ಪರದೆಯ ಮೇಲೆ ಲಭ್ಯವಿರುವ ಕಾಂಟ್ಯಾಕ್ಟ್ ಅನ್ನು ಮುಟ್ಟಿದಾಗ ಅದನ್ನು ಉಚ್ಚರಿಸುತ್ತದೆ ಮತ್ತು ಅದನ್ನೇ ತೆರೆಯಲು ಪರದೆಯ ಮೇಲೆ ಎಲ್ಲಿಯಾದರು ಎರಡುಬಾರಿ ತಟ್ಟಬೇಕು.
    ಪುಟಗಳನ್ನು ಬದಲಾಯಿಸಲು ಪರದೆಯ ಅಂಚಿನಲ್ಲಿ ಎರಡು ಬೆರಳುಗಳನ್ನಿಟ್ಟು ಬಲದಿಂದ ಎಡಕ್ಕೆ ಎಳೆದಾಗ ಬಲದ ಪುಟಗಳು ಮತ್ತು ಎಡದಿಂದ ಬಲಕ್ಕೆ ಎಳೆದಾಗ ಎಡದ ಪುಟಗಳು ತೆರೆಯುತ್ತವೆ. ಜೊತೆಗೆ ಟಾಕ್ಬ್ಯಾಕ್ ದ್ವನಿ ಸಹಾಯಕವು ಬದಲಾಗಿ ಪ್ರಕಟವಾಗುವ ಪುಟದ ಸಂಖ್ಯೆಯನ್ನು ಉಚ್ಚರಿಸುತ್ತದೆ.
    ಆಯಪ್ಗಳನ್ನು ಮೇಲೆ ಅಥವಾ ಕೆಳಗೆ ತರಲು ಎರಡು ಬೆರಳುಗಳಿಂದ ಮೇಲೆ ಅಥವಾ ಕೆಳಗೆ ಎಳೆಯಬೇಕು.

ಇಲ್ಲಿ ಹೇಳಿರುವುದು ಕೆಲವು ವಿಧಾನಗಳನ್ನು ಮಾತ್ರ. ಅಂಧ ವ್ಯಕ್ತಿಗಳು ಎಲ್ಲ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ಯಾರಿಗೂ ಕಡಿಮೆ ಇಲ್ಲದಂತೆ ಮೊಬೈಲ್ ಸಾದನಗಳನ್ನು ಬಳಸುತ್ತಿದ್ದಾರೆ.
ಹೀಗೆ ಸ್ಮಾರ್ಟ್ಫೋನ್ಗಳು ದೃಷ್ಟಿ ವಿಶೇಷ ಚೇತನರ ಬದುಕಿನಲ್ಲಿ ಹಾಸುಹೊಕ್ಕಾಗಿವೆ.

ದೃಷ್ಟಿ ಸವಾಲಿಗರಿಂದ ಬಳಸಲ್ಪಡುತ್ತಿರುವ ಕೆಲವು ಅಪ್ಲಿಕೇಷನ್ಗಳನ್ನು ಇಲ್ಲಿ ಉದಾಹರಿಸಲಾಗಿದೆ