ನಾದ ಸಿರಿ

ಕರ್ನಾಟಕ ಸರ್ಕಾರ

ಸಾರ್ವಜನಿಕ ಶಿಕ್ಷಣ ಇಲಾಖೆ

ನಾದ ಸಿರಿ

 

NCF – 2005 ಪಠ್ಯವಸ್ತು ಆಧಾರಿತ

ಪ್ರೌಢಶಾಲಾ ಸಂಗೀತ ಶಿಕ್ಷಕರ ತರಬೇತಿ ಸಾಹಿತ್ಯ

2017 – 2018

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (RMSA)
ಮತ್ತು
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ

 ನಂ 4, 100 ಅಡಿ ವರ್ತುಲ ರಸ್ತೆ, ಬನಶಂಕರಿ 3ನೇ ಹಂತ, ಬೆಂಗಳೂರು – 85

 

ಮುನ್ನುಡಿ

ಶಿಶುರ್ವತ್ರಿಪಶುರ್ವತ್ತಿ ವೇತ್ತಿ ಗಾನ ರಸಂ ಫಣಿ:” ಎಂಬಂತೆ ಸಂಗೀತಕ್ಕೆ ತಲೆದೂಗದ ಜೀವಿಯೇ ಇಲ್ಲ ಎನ್ನಬಹುದು. ಸಂಗೀತವು ಹೃದಯದ ಭಾಷೆ, ಸಂಗೀತದ ಕಲಿಕೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ, ದೇಶಭಕ್ತಿ, ನಾಡು – ನುಡಿಯ ಕುರಿತು ಗೌರವ ಅಭಿಮಾನ, ಹಿರಿಯರ ಕುರಿತು ಗೌರವ ಭಾವನೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವಲ್ಲಿ ಸಂಗೀತವು ಮುಖ್ಯ ಪಾತ್ರವಹಿಸುತ್ತದೆ.

ಸಂಗೀತದ ಕಲಿಕೆಯು ವಿಜ್ಞಾನ (ಧ್ವನಿವಿಜ್ಞಾನ) ಗಣಿತ (ತಾಳದ ಲೆಕ್ಕಾಚಾರ), ಇತಿಹಾಸ (ಹಾಡುಗಳ ಸಾಹಿತ್ಯ), ಭಾಷಾ ಕಲಿಕೆಗೂ (ಉಚ್ಚಾರಣೆ) ಪೂರಕವಾಗಿದೆ ಮತ್ತು ಒತ್ತಡ ನಿರ್ವಹಣೆಯಲ್ಲಿಯೂ ಸಹಕಾರಿಯಾಗಿದೆ. ಹಾಗಾಗಿ ಶೈಕ್ಷಣಿಕ ಮುಖ್ಯವಾಹಿನಿಯಲ್ಲಿ ಸಂಗೀತ ವಿಷಯವೂ ಸೇರಲೇಬೇಕೆಂಬ ಎನ್ ಸಿ ಎಫ್ 2005ರ ಅಭಿಪ್ರಾಯದಂತೆ ಶಾಲಾ ಕಲಿಕೆಯಲ್ಲಿ ಸಂಗೀತವು ಸೇರಿದೆ. ಆದರೆ ಶೈಕ್ಷಣಿಕ ಚೌಕಟ್ಟಿನಲ್ಲಿ ವಿಷಯವಾಗಿ ಬೋಧಿಸುವಾಗ ಅದಕ್ಕೆ ಆಗತ್ಯವಾಗಿ ಬೇಕಾದ ಕಲಿಕಾ ಅಂಶಗಳು, ವಿಧಾನಗಳು ಬೇಕಾಗುತ್ತವೆ. ಈ ಪುಸ್ತಕದಲ್ಲಿರುವ ಅಂಶಗಳು ಸಂಗೀತ ಶಿಕ್ಷಕರ ಬೋಧನಾ ವಿಧಾನದ ದಕ್ಷತೆಯನ್ನು, ಸೃಜನಶೀಲತೆ, ಪ್ರಯೋಗಶೀಲತೆಯನ್ನು ಪ್ರೇರೇಪಿಸುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿಯೇ “ನಾದಸಿರಿ” ಯ ವಿನ್ಯಾಸವನ್ನು ರೂಪಿಸಲಾಗಿದೆ.

ಆಧುನಿಕ ತಂತ್ರಜ್ಞಾನಗಳಾದ ಎಲೆಕ್ಟ್ರಾನಿಕ್ ತಂಬೂರಿ, ಎಲೆಕ್ಟ್ರಾನಿಕ್ ತಬಲ, ಪ್ರೊಜೆಕ್ಟರ್‌ಗಳನ್ನು ಬಳಸಿ ಸಂಗೀತ ಬೋಧನೆ ಮಾಡುವುದು ಪ್ರಸ್ತುತವೂ, ಜ್ಞಾನವರ್ಧಕವೂ ಆಗಿದೆ. ವಿದ್ಯಾರ್ಥಿಗಳು ವಿಶ್ವಪ್ರಸಿದ್ಧ ಸಂಗೀತ ಕಲಾವಿದರ ಕಛೇರಿಗಳನ್ನು ಪ್ರೊಜೆಕ್ಟರ್‌ಗಳಲ್ಲಿ ವೀಕ್ಷಿಸಿ ಸ್ಫೂರ್ತಿ ಪಡೆಯುವಂತೆ ಮಾಡುವುದು ಸಂಗೀತ ಶಿಕ್ಷಕರ ಕರ್ತವ್ಯವಾಗಿದೆ.

ಸಂಗೀತವು ದೇಶ ಭಾಷೆಗಳ ಗಡಿಗಳನ್ನು ಮೀರಿ ವಿಶ್ವಮಾನ್ಯವಾಗಿದ್ದು, ಪ್ರಸ್ತುತ ಸಮಾಜದಲ್ಲಿ ಸಂಗೀತ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಶಾಲೆಗಳಲ್ಲಿ ಸಂಗೀತದ ಕಲಿಕೆಯು, ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದಲ್ಲಿ ಭವ್ಯ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಅಡಿಪಾಯ ಕೂಡಾ ಆಗಬಹುದಾಗಿದೆ.

ಸಂಗೀತ ಶಿಕ್ಷಕರು ಹೆಚ್ಚಿನ ಸ್ಪೂರ್ತಿಯಿಂದ, ನೂತನ ವಿಧಾನಗಳನ್ನು ಅಳವಡಿಸಿಕೊಂಡು, ಸೃಜನಾತ್ಮಕವಾಗಿ, ಸಂಗೀತ ಬೋಧನೆಯನ್ನು ಪರಿಣಾಮಕಾರಿಯಾಗಿ ತರಗತಿಯಲ್ಲಿ ಅನುಷ್ಟಾನಗೊಳಿಸಲು ಈ ನಾದಸಿರಿ ತರಬೇತಿ ಸಾಹಿತ್ಯವು ಪೂರಕವಾಗುವುದೆಂಬ ಆಶಯ ನಮ್ಮದಾಗಿದೆ .

ನಿರ್ದೇಶಕರು

ಡಿ. ಎಸ್. ಇ. ಆರ್. ಟಿ

                                                                                    ಬೆಂಗಳೂರು

ಪರಿವಿಡಿ

ಕ್ರ. ಸಂ. — ವಿಷಯ — ಪುಟ ಸಂಖ್ಯೆ

1 — ನಾಡಗೀತೆ, ರಾಷ್ಟ್ರಗೀತೆ — 2 – 7.

2 — ಜನಪದ ಸಂಗೀತ — 8 – 12.

3 — ಸಂಗೀತದ ಮಹತ್ವ ಮತ್ತು ಪ್ರಯೋಜನ — 13 – 16.

4 — ವಂದೇ ಮಾತರಂ ಗೀತೆ, ಧ್ವಜ ಗೀತೆ, ವೈಷ್ಣವ ಜನತೋ — 17 – 25.

5 — ಪಾರಿಭಾಷಿಕ ಶಬ್ದಗಳು — 26 – 41.

6 — ಕೋಲಾಟದ ಪದಗಳು, ಜೋಗುಳ ಪದ — 42 – 43.

7 — ದೇಶ ಭಕ್ತಿಗೀತೆ, ಸಮುದಾಯ ಗೀತೆ — 44 – 46.

8 — ಭಾರತೀಯ ಸಂಗೀತ ವಾದ್ಯಗಳು/ ವಾದ್ಯಗಳ ವರ್ಗಿಕರಣ — 47 – 48.

9 — ಸಂಗೀತ ಶಿಕ್ಷಕರ ಜವಾಬ್ದಾರಿ, ದಾಖಲೆಗಳ ನಿರ್ವಹಣೆ –- 49 – 51.

10 — ಕಂಸಾಳೆ ಪದಗಳು, ಚೌಡಿಕೆ ಪದ — 52 – 54.

11 — ರೈತ ಗೀತೆ, ಭಾವಗೀತೆ – 55 – 56.

12 — ಶ್ರೀ ಪುರಂದರದಾಸರು, ಬಸವಣ್ಣ, ಅಕ್ಕಮಹಾದೇವಿ, ಶರಣೆ ಮುಕ್ತಾಯಕ್ಕ — 57 – 62.

13 — ಕಂಠಪಾಠ (ಕನ್ನಡ) — 63 – 64.

14 — ಲಾವಣಿ, ತತ್ವಪದ — 65 – 69.

15 — ಪ್ರಾರ್ಥನಾ ಗೀತೆ, ಭಜನ್ — 70 – 72.

16 — ನೀಲನಕ್ಷೆ — 73 – 75.

17 — ಸಂಗೀತದಲ್ಲಿ ಮೌಲ್ಯಮಾಪನ — 76 – 77.

18 — ಕಂಠಪಾಠ ಆಂಗ್ಲ

19 — ಕನ್ನಡ ನಾಡಗೀತೆ — 78 – 79.

20 — ಶ್ಯಾಮಾ ಶಾಸ್ತ್ರಿಗಳು, ದೀಕ್ಷಿತರು, ತ್ಯಾಗರಾಜರು (ಕರ್ನಾಟಕ) / ಪ್ರಾರಂಭಿಕ ಸ್ವರಾಭ್ಯಾಸ, ಬಂದಿಶ್ (ಹಿಂದೂಸ್ಥಾನಿ) — 80 – 92.

21 — ಪಿಳ್ಳಾರಿ ಗೀತೆ (ಕರ್ನಾಟಕ) / ರಾಗದ ಅರ್ಥ ಮತ್ತು ಲಕ್ಷಣ, ಪಲುಸ್ಕರ್ ಜೀವನಚರಿತ್ರೆ (ಹಿಂದೂಸ್ಥಾನಿ) — 93 – 99.

22 — ಕಂಠಪಾಠ ಹಿಂದಿ.

23 — ಭಾವೈಕ್ಯತಾ ಗೀತೆ.

24 — ರಾಗ ವರ್ಗೀಕರಣ (ಕರ್ನಾಟಕ) / ಭಾಗೇಶ್ರೀ, ದುರ್ಗಾ (ಹಿಂದೂಸ್ತಾನಿ) — 100 – 101.

23 — ದೇವರ ನಾಮ, ವಚನ (ಕರ್ನಾಟಕ) / ತಂಬೂರಿ ಮತ್ತು ಬಿಸ್ಮಿಲ್ಲಾಖಾನ್ ಜೀವನ ಚರಿತ್ರೆ (ಹಿಂದೂಸ್ಥಾನಿ) — 102 – 109.

26 — ಹಿಂದಿ ಭಾಷಾ ದೇಶ ಭಕ್ತಿ ಗೀತೆಗಳು.

27 — ದೇವರ ನಾಮ/ ವಚನ ಗಾಯನ.

28 — ತಾಳ ಲಕ್ಷಣ (ಕರ್ನಾಟಕ) / ಬೃಂದಾವನ ಸಾರಂಗಿ (ಹಿಂದೂಸ್ಥಾನಿ) — 110 – 115.

29 — ತಾನವರ್ಣ (ಕರ್ನಾಟಕ) / ಥಾಟ್ ಪದ್ದತಿ, ಸ್ವರಲಿಪಿ, ತಾಲ ಲಿಪಿ (ಹಿಂದೂಸ್ಥಾನಿ) – 116 – 120.

30 — ಹಳೆಗನ್ನಡ ಕಾವ್ಯ ವಾಚನ.

31 – ಚಲನಚಿತ್ರ ಗೀತೆಗಳಲ್ಲಿ ಭಕ್ತಿ ಗೀತೆ, ವಚನ.

32 — ರಾಗ ಲಕ್ಷಣ ಮಾಯಾಮಾಳವಗೌಳ (ಕರ್ನಾಟಕ)/ ಹಿಂದೂಸ್ಥಾನಿ ರಾಗ ಭೈರವ್, ತಿಲಂಗ್ — 121-124.

33 — ಮಧ್ಯಮಕಾಲದ ಕೃತಿಗಳು (ಕರ್ನಾಟಕ) / ಬಾನ್ಸುರಿ, ತಬಲ (ಹಿಂದೂಸ್ಥಾನಿ) – 125.

34 — ನೃತ್ಯಗೀತೆ (ಕರ್ನಾಟಕ) / ಪುಟ್ಟರಾಜ ಗವಾಯಿ (ಹಿಂದೂಸ್ಥಾನಿ) — 126 – 127.

35 — ಕರ್ನಾಟಕ ಸಂಗೀತಕ್ಕೆ ದಾಸರ ಕೊಡುಗೆ / ರಾಗ ಮಾಲ್‌ಕೌಂಸ್ — 128 – 132.

36 — ಮೃದಂಗವಾದ್ಯದ ಪರಿಚಯ / ರಾಗ ಬಿಬಾಸ್, ಭೈರವ (ಹಿಂದೂಸ್ಥಾನಿ) — 133- 134.

37 — ಸುಷಿರ ವಾದ್ಯ (ಕರ್ನಾಟಕ) / ತಾಲಗಳ ಪರಿಚಯ (ಹಿಂದೂಸ್ಥಾನಿ) — 135 – 138.

38 – ಪ್ರಶೋತ್ತರಗಳು.

ಭಾರತೀಯ ಸಂಗೀತ:

ಸಂಗಿತವೆಂಬುದು ಸರ್ವರಿಗೂ ಮುದ ನೀಡುವ ಧ್ವನಿ ವಿಶೇಷಗಳಿಂದ ಕೂಡಿದ ವಿದ್ಯೆ. ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದ ಕಲೆ ಎಂದು ತಿಳಿಯಲ್ಪಟ್ಟಿದೆ. ಲಲಿತಕಲೆಗಳಲ್ಲೇ ಅತಿ ಶ್ರೇಷ್ಟವಾದ ಸ್ಥಾನ ಹೊಂದಿರುವ ಸಂಗೀತಕಲೆ, ಮಾನವನ ಹೃದಯಾಂತರಾಳವನ್ನು ತಲುಪಿ ಸುಖ, ಶಾಂತಿ, ಹಾಗೂ ಸೌಂದರ್ಯದ ಅನುಭವವನ್ನು ನೀಡುವುದು. ಸಾಮವೇದವು ಭಾರತೀಯ ಸಂಗೀತದ ಮೂಲವೆಂದು ಹೇಳಲಾಗುತ್ತದೆ. ಕ್ರಮೇಣ ವಿಕಾಸದ ವಿಶೇಷತೆ, ವಿವಿಧ ವಿಭಿನ್ನತೆಗಳನ್ನು ಕಾಣುತ್ತ ಮುಂದುವರೆದು ಮಧ್ಯಕಾಲ ಹಾಗೂ ಆಧುನಿಕ ಕಾಲ ಎಂದು ಮೂರು ಹಂತಗಳ ವಿಕಾಸಗಳನ್ನು ಕಾಣಬಹುದಾಗಿದೆ. ಪುರಾತನ ಕಾಲದಿಂದ ಇಂದಿನವರೆಗೂ ಮಾನವರನ್ನು ವಿಶೇಷವಾಗಿ ಆಕರ್ಷಿಸಿರುವುದಲ್ಲದೇ ವಿವಿಧ ಜನಾಂಗಗಳ ಸಂಸ್ಕೃತಿಯ ವಿಶೇಷ ಅಂಗವಾಗಿ ನಿಂತಿದೆ.

ಭಾರತೀಯ ಸಂಗೀತದಲ್ಲಿ ಎರಡು ಮುಖ್ಯ ಪ್ರಭೇದಗಳನ್ನು ಕಾಣುತ್ತೇವೆ. ಅವುಗಳೆಂದರೆ:

  1. ಕರ್ನಾಟಕಸಂಗೀತ (ದಕ್ಷಿಣಾದಿ) ಮತ್ತು 2. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ (ಉತ್ತರಾದಿ). ಇವುಗಳ ಸಂಕ್ಷಿಪ್ತ ಪರಿಚಯವನ್ನು ಈ ಕೆಳಗೆ ಕಾಣಬಹುದು.

 

ಕರ್ನಾಟಕ ಸಂಗೀತ (ದಕ್ಷಿಣಾದಿ):

ಸುಮಾರು 14 – 15ನೇ ಶತಮಾನದ ಕಾಲವನ್ನು ಸಂಧಿಯುಗವೆನ್ನಬಹುದು. ಈ ಯುಗದ ಸಂಕ್ರಾಂತಿ ಪುರುಷರು, ದಕ್ಷಿಣಭಾರತದಲ್ಲಿ ವಿದ್ಯಾರಣ್ಯರು. ಇವರು ಶೃಂಗೇರಿ ಮಠಾಧೀಶ್ವರರಾಗಿದ್ದು ವಿಜಯನಗರ ಸಂಸ್ಕಾನ ಸ್ಥಾಪನಾಚಾರ್ಯರೆಂದು ಪ್ರಸಿದ್ದರು. ಕರ್ನಾಟಕ ಸಂಗೀತ ಸಾಮ್ರಾಜ್ಯ ಸಂಸ್ಥಾಪಕರೂ ಸಹ, ಇವರು ಸಂಗೀತಸಾರ ಎಂಬ ಗ್ರಂಥವನ್ನು ರಚಿಸಿದರು. ಅವರು ಪ್ರಚುರಪಡಿಸಿದ ಸಂಗೀತ ಪದ್ಧತಿಗೆ ಕರ್ನಾಟಕ ಸಂಗೀತವೆಂಬ ಹೆಸರು ಬಂದಿತು. 15 ಮೇಳರಾಗಗಳನ್ನು ಅಳವಡಿಸಿ, ರಾಗಾಲಾಪನೆಯ ನಿಯಮಗಳನ್ನು ನಿರೂಪಿಸಿ, ಉತ್ತಮ ಸಂಪ್ರದಾಯವನ್ನು ಹಾಕಿಕೊಟ್ಟಿರುವುದು ಕಂಡು ಬರುತ್ತದೆ. ಮುಂದೆ ಗೋವಿಂದ ದೀಕ್ಷಿತರು, ಕಲ್ಲಪ್ಪದೇಶಿ, ರಾಮಮಾತ್ಯ, ವೆಂಕಟಮಖಿ, ಪುರಂದರದಾಸರು ಮುಂತಾದವರು ಈ ಪದ್ಧತಿಯನ್ನು ಉಳಿಸಿ ಬೆಳೆಸಿದರು.

ಹಿಂದೂಸ್ಥಾನಿ ಸಂಗೀತ (ಉತ್ತರಾದಿ):

ಹಿಂದೆ ಸುಮಾರು ಹದಿಮೂರನೇ ಶತಮಾನದ ಆದಿ ಭಾಗದವರೆಗೆ ನಮ್ಮ ಭಾರತೀಯ ಸಂಗೀತವು ಅಖಂಡವಾದ ಒಂದೇ ಪದ್ಧತಿಯಾಗಿತ್ತು ಎಂದು ಗ್ರಂಥಗಳಿಂದ ತಿಳಿದುಬರುವ ಸಂಗತಿಯಾಗಿದೆ. ಸುಮಾರು ಹನ್ನೊಂದನೇ ಶತಮಾನದಲ್ಲಿ ಭಾರತದ ಉತ್ತರ ಭಾಗವು ಯವನರ ದಾಳಿಗೆ ಸಿಲುಕಿ ಅವರ ಆಡಳಿತಾವಧಿಯ ಕಾಲದಲ್ಲಿ ಅರಬ್, ಪಾರ್ಸಿ ಸಂಗೀತದ ಪ್ರಭಾವವು ವಿಶೇಷತಃ ಉತ್ತರ ಭಾರತೀಯ ಸಂಗೀತಜ್ಞರ ಮೇಲೆ ಪರಿಣಾಮಬೀರಿ, ಅವರ ಸಂಗೀತ ಕ್ರಮದಲ್ಲಿಯೂ ಆ ಅಂಶಗಳು ಸೇರಿದ ಕಾರಣಗಳಿಂದ ಕ್ರಮೇಣ ಉತ್ತರದ ಸಂಗೀತವು ದಕ್ಷಿಣ ಭಾರತದ ಸಂಗೀತಕ್ಕಿಂತ ಭಿನ್ನತೆ ಪಡೆಯಿತೆಂದು, ಅನಂತರದಲ್ಲಿ ಉತ್ತರಾದಿ ಹಾಗೂ ದಕ್ಷಿಣಾದಿಗಳೆಂದು ಎರಡು ಭಾಗಗಳಾದವೆಂದು ಅಭಿಪ್ರಾಯ ಪಡುತ್ತಾರೆ. ಆಮೀರ ಖುಸ್ರೋ ಹಾಗೂ ಗೋಪಾಲನಾಯಕ ಈ ಪದ್ಧತಿಯ ಪ್ರವರ್ತಕರು ಎಂದು ಹೇಳಲಾಗುತ್ತದೆ. ಆಲಾಪದಲ್ಲಿ ಸ್ವರಗಳ ಅಖಂಡತೆ, ಗಂಭೀರವಾದ ಉಚ್ಚಾರ, ಶ್ವಾಸದ ಬಿಗಿಹಿಡಿತ ಮುಂತಾದ ವೈಶಿಷ್ಟ್ಯತೆಗಳನ್ನು ಕಾಣಬಹುದಾಗಿದೆ.

ನಾಡಗೀತೆ

ಅಧಿವೇಶನ – 1

ಅವಧಿ – 11 : 45 AM – 1 : 15 PM

ಪೀಠಿಕೆ: ಭಾರತೀಯ ಸಂಸ್ಕೃತಿಯು ಇಡೀ ವಿಶ್ವದಲ್ಲಿಯೇ ಅತ್ಯಂತ ಪವಿತ್ರ ಸ್ಥಾನ ಪಡೆದಿದೆ. ಅದರಲ್ಲೂ ನಮ್ಮ ಹೆಮ್ಮೆಯ ನಾಡಾದ ಕರ್ನಾಟಕದ ಸಂಸ್ಕೃತಿಯು ನಮ್ಮ ಹೆಮ್ಮೆಯ ಸಂಕೇತವಾಗಿದೆ. ವೇದ, ಉಪನಿಷತ್ತುಗಳ ನಾಡು. ಹಸಿರಿನಿಂದ ಕೂಡಿದ ಗಿರಿ ವನಗಳ ನಾಡು ನಮ್ಮದು. ಹೀಗೆ ನಮ್ಮ ನಾಡಿನ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ, ನಮ್ಮ ನಾಡಿನ ಹೆಮ್ಮೆಯ ವಿಷಯಗಳನ್ನು, ವಿಶೇಷತೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವ ನಮ್ಮ ನಾಡಗೀತೆಯು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ನಾಡಿನ ನಡೆ, ನುಡಿ, ಸಂಸ್ಕೃತಿ, ಚರಿತ್ರೆ, ಹಿರಿಮೆ ಗರಿಮೆ, ಸ್ಥಳ ಮಹಿಮೆ, ನದಿ, ವನ, ಕನ್ನಡ ಬೆಳೆಸಿದ ಕವಿಪುಂಗವರು, ನಾಡನ್ನಾಳಿದ ವೀರ ಅರಸರು ಮುಂತಾದ ಅನೇಕ ವಿಷಯಗಳನ್ನು ನಮ್ಮ ನಾಡಗೀತೆಯು ಬಿಂಬಿಸುತ್ತದೆ. ನಮ್ಮ ನಾಡಿನ ಪಾವಿತ್ರ್ಯತೆಯನ್ನು ಸಾರುವ ಸಾಧು ಸಂತರಾದ ಶಂಕರರು, ರಾಮಾನುಜರು, ವಿದ್ಯಾರಣ್ಯರು, ಬಸವೇಶ್ವರರು, ಮಧ್ವರು, ಮುಂತಾದ ಮಹಾಮಹಿಮರು ಶತಶತಮಾನಗಳಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಹಳೆಗನ್ನಡ ಕವಿಗಳಾದ ರನ್ನ, ಪಂಪ, ಹರಿಹರ, ಜನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ ಮುಂತಾದವರು, ಕನ್ನಡ ಸಂಸ್ಕೃತಿಯ ಮಹತ್ವದ ಸಂಕೇತವಾದ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು.

ಹೊಯ್ಸಳರು, ತೈಲಪ ಮುಂತಾದ ರಾಜವಂಶದ ಸಾಮ್ರಾಟರು ಆಳಿದ ನಾಡಿದು, ಶಿಲ್ಪಕಲೆಗಳ ತವರೂರು, ಕೃಷ್ಣ, ಶರಾವತಿ, ತುಂಗಾ, ನೇತ್ರಾವತಿ ಇವೇ ಮುಂತಾದ ಜೀವನದಿಗಳೂ ನಮ್ಮ ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿದೆ.

ನಮ್ಮ ನಾಡು ಜಾತ್ಯಾತೀತವಾದ, ಎಲ್ಲಾ ಒಂದೇ ಎನ್ನುವ ಮನಃಸ್ಥಿತಿಯುಳ್ಳ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸರ್ವಧರ್ಮಗಳ ಸಮನ್ವಯವನ್ನು ಕಾಣುವ ನಮ್ಮ ಹೆಮ್ಮೆಯ ಕನ್ನಡನಾಡು, ಕರುನಾಡು, ಸಿರಿನಾಡು ಹೀಗೆ ನಾಡು ನುಡಿ ಭಾಷೆ ಮುಂತಾದವುಗಳ ತವರೂರು ನಮ್ಮ ಈ ಕರುನಾಡು ಎನಿಸಿಕೊಂಡಿದೆ. ನಮ್ಮ ಹೆಮ್ಮೆಯ ರಾಷ್ಟ್ರ ಕವಿ ಕುವೆಂಪುರವರ ಈ ನಾಡಗೀತೆಯನ್ನು ಹಾಡುವ ಪ್ರತಿ ಕನ್ನಡಿಗನೂ ಎಂದೆಂದಿಗೂ ನಾಡಿಗೆ, ಭಾಷೆಗೆ ಚಿರಋಣಿ.

ಉದ್ದೇಶ:

Ø ನಾಡಭಕ್ತಿ ಮೂಡಿಸುವುದು.

Ø ನಾಡ ಹಿರಿಮೆ ಗರಿಮೆಯನ್ನು ಪರಿಚಯಿಸುವುದು.

Ø ಕವಿಗಳು, ಸಾಮಂತರು, ಕನ್ನಡ ನಾಡಿನ ಪ್ರಸಿದ್ದ ಸ್ಥಳಗಳ ಪರಿಚಯ, ಹಾಗೂ ನಾಡಿನ ಇನ್ನಿತರ ವಿಷಯಗಳ ಹಿರಿಮೆ ತಿಳಿಸುವುದು.

Ø ಹಾಡುವ ರಾಗದ ಬಗ್ಗೆ ತಿಳಿಸುವುದು.

Ø ತಾಳದ ಪರಿಚಯ ಮಾಡಿಸುವುದು.

Ø ಪದಗಳ ಅರ್ಥ ತಿಳಿಸುವುದು.

Ø ರಾಗವಾಗಿ ತಾಳಬದ್ದವಾಗಿ ಅರ್ಥ ಪೂರ್ಣವಾಗಿ ಹಾಡುವುದು.

Ø ಸರಿಯಾದ ಉಚ್ಚಾರಣೆಯೊಂದಿಗೆ ಹಾಡುವುದು.

Ø ಗಣಿತ, ವಿಜ್ಞಾನ, ಸಮಾಜ ಇತ್ಯಾದಿ ವಿಷಯಗಳಲ್ಲೂ ಕಂಠಪಾಠದ ಪ್ರಯೋಜನವನ್ನು ಮನವರಿಕೆ ಮಾಡುವುದು.

ಬೋಧನೋಪಕರಣಗಳು

Ø ಶೃತಿ (ತಂಬೂರಿ).

Ø ತಾಳೋಮೀಟರ್, ತಾಳವಾದ್ಯ.

Ø ಕುವೆಂಪು ರವರ ಭಾವಚಿತ್ರ / ವೀಡಿಯೋ.

ಕಲಿಕಾ ವಿಧಾನ

Ø ಸಾಹಿತ್ಯದ ಭಾವಾರ್ಥವನ್ನು ವಿವರಿಸುವುದು.

Ø ಘ ತಾಳದ ಪರಿಚಯ ಹೇಳುವುದು.

Ø ಒಂದೊಂದೇ ಸಾಲನ್ನು ಹೇಳಿಕೊಡುವುದು.

Ø ಒಬ್ಬೊಬ್ಬರನ್ನೇ ಹಾಡಿಸುವುದು.

Ø ಹಾಡುವುದನ್ನು ಗಮನಿಸುವುದು.

ಸ್ವಮೌಲ್ಯಮಾಪನ

  1. ವಿದ್ಯಾರ್ಥಿಗಳು ರಾಗ, ತಾಳಬದ್ಧವಾಗಿ ಹಾಡುತ್ತಿದ್ದಾರೆಯೇ?
  2. ವಿದ್ಯಾರ್ಥಿಗಳು ಸಾಹಿತ್ಯ ಶುದ್ಧವಾಗಿ ಹಾಡುತ್ತಿದ್ದಾರೆಯೇ?
  3. ರಚನಕಾರರ ಕುರಿತು ತಿಳಿದಿದ್ದಾರೆಯೇ?
  4. ನಮ್ಮ ನಾಡು, ನುಡಿ ಭಾಷೆ, ಸಂಸ್ಕೃತಿಯ ಹಿರಿಮೆಯನ್ನು, ಭಾಷಾಭಿಮಾನವನ್ನು ಅರಿತುಕೊಂಡಿದ್ದಾರೆಯೇ?

ಘಟಕಾಂತ್ಯದ ಪ್ರಶ್ನೆ

ಶಾಸ್ತ್ರ

Ø ನಾಡಗೀತೆಯನ್ನು ಬರೆದ ಕವಿ ಯಾರು?

Ø ನಮ್ಮ ಸಂಸ್ಕೃತಿಯ ಹಿರಿಮೆಯನ್ನು ವಿವರಿಸಿ.

Ø ನಾಡಗೀತೆಯ ಮಹತ್ವವನ್ನು ವಿವರಿಸಿ.

Ø ನಾಡಗೀತೆಯಲ್ಲಿ ಯಾವ ಯಾವ ವಿಷಯಗಳನ್ನು ವಿವರಿಸಲಾಗಿದೆ?

Ø ನಾಡಗೀತೆಯಲ್ಲಿ ನಮ್ಮ ನಾಡು ಮತ್ತು ನಮ್ಮ ದೇಶದ ಸಂಬಂಧವನ್ನು ಹೇಗೆ ಅರ್ಥೈಸಲಾಗಿದೆ?

Ø ನಾಡಗೀತೆಯನ್ನು ಏಕೆ ಹಾಡಬೇಕು?

ಪ್ರಯೋಗ:

Ø ನಾಡಗೀತೆಯನ್ನು ಯಾವರಾಗದಲ್ಲಿ ತಾಳದಲ್ಲಿ ಹಾಡುವಿರಿ?

Ø ನಾಡಗೀತೆಯನ್ನು ಹಾಡಿ (ವೈಯಕ್ತಿಕ / ಸಾಮೂಹಿಕ)

ಪಲ್ಲವಿ:

ಜಯ ಭಾರತ ಜನನಿಯ ತನುಜಾತೆ |

ಜಯಹೇ ಕರ್ನಾಟಕ ಮಾತೆ ||

ಜಯಸುಂದರ ನದಿ ವನಗಳ ನಾಡೇ

ಜಯಹೇ ರಸಋಷಿಗಳ ಬೀಡೆ

ಭೂದೇವಿಯ ಮಕುಟದ ನವಮಣಿಯೆ

ಗಂಧದ ಚಂದದ ಹೊನ್ನಿನ ಗಣಿಯೆ

ರಾಘವ ಮಧುಸೂಧನರವತರಿಸಿದ

ಭಾರತ ಜನನಿಯ ತನುಜಾತೆ |

ಭಾರತ ಜನನಿಯ ತನುಜಾತೆ ||

ಚರಣ – 1 ಜನನಿಯ ಜೋಗುಳ ವೇದದ ಘೋಷ

            ಜನನಿಗೆ ಜೀವವು ನಿನ್ನಾವೇಷ

    ಹಸುರಿನ್ ಗಿರಿಗಳ ಸಾಲೇ

    ನಿನ್ನಯ ಕೊರಳಿನ ಮಾಲೇ

    ಕಪಿಲ ಪತಂಜಲ ಗೌತಮ ಜಿನನುತ

ಭಾರತ ಜನನಿಯ ತನುಜಾತೆ |

ಭಾರತ ಜನನಿಯ ತನುಜಾತೆ ||

ಚರಣ – 2

ಶಂಕರ ರಾಮಾನುಜ ವಿದ್ಯಾರಣ್ಯ ಬಸ –

ವೇಶ್ವರ ಮಧ್ವರ ದಿವ್ಯಾರಣ್ಯ

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಮಿಪತಿ ಜನ್ನ

ಕುಮಾರವ್ಯಾಸರ ಮಂಗಳಧಾಮ

ಕವಿಕೋಗಿಲೆಗಳ ಪುಣ್ಯಾರಾಮ

ನಾನಕ ರಾಮಾನಂದ ಕಬೀರರ

ಭಾರತ ಜನನಿಯ ತನುಜಾತೆ |

ಜಯಹೇ ಕರ್ನಾಟಕ ಮಾತೆ ||

ಚರಣ: 3

ತೈಲಪ ಹೊಯ್ಸಳರಾಳಿದ ನಾಡೇ

ಡಂಕಣ ಜಕಣರ ನೆಚ್ಚಿನ ಬೀಡೆ

ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರರಂಗಾ

ಚೈತನ್ಯ ಪರಮಹಂಸ ವಿವೇಕರ

ಭಾರತ ಜನನಿಯ ತನುಜಾತೆ |

ಜಯಹೇ ಕರ್ನಾಟಕ ಮಾತೆ ||

ಚರಣ: 4

ಸರ್ವಜನಾಂಗದ ಶಾಂತಿಯ ತೋಟ

ರಸಿಕರ ಕಂಗಳ ಸೆಳೆಯುವ ನೋಟ

ಹಿಂದೂ ಕ್ರೈಸ್ತ ಮುಸಲ್ಮಾನ

ಪಾರಸಿಕ ಜೈನರುದ್ಯಾನ

ಜನಕನ ಹೋಲುವ ದೊರೆಗಳ ಧಾಮ

ಗಾಯಕ ವೈಣಿಕರಾರಾಮ

ಕನ್ನಡ ನುಡಿ ಕುಣಿದಾಡುವ ಗೇಹ

ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ |

ಜಯಹೇ ಕರ್ನಾಟಕ ಮಾತೆ ||

– ರಾಷ್ಟ್ರಕವಿ ಕುವೆಂಪು

ರಾಷ್ಟ್ರಗೀತೆ

ಅಧಿವೇಶನ: 1 (1).

ಅವಧಿ: 45 ನಿಮಿಷಗಳು

ಪೀಠಿಕೆ: ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ರಾಷ್ಟ್ರಗೀತೆಯನ್ನು ಹೊಂದಿರುತ್ತದೆ. ತಮ್ಮ ರಾಷ್ಟ್ರದ ಹೆಮ್ಮೆಯನ್ನು ಸಾರುವ ಗೀತೆ, ರಾಷ್ಟ್ರಪ್ರೇಮವನ್ನು ಜಾಗೃತಿಗೊಳಿಸುವ ಗೀತೆಯೇ ರಾಷ್ಟ್ರಗೀತೆ, ಒಂದು ರಾಷ್ಟ್ರದ ಏಕತೆ, ಐಕ್ಯತೆ, ಭೌಗೋಳಿಕ ಸಂಪತ್ತು, ಸಾಂಸ್ಕೃತಿಕ ಹಿರಿಮೆ ಮುಂತಾದವನ್ನು ರೋಚಕವಾಗಿ ವಿವರಿಸುತ್ತಾ ರಾಷ್ಟ್ರಭಕ್ತಿಯನ್ನು ಪ್ರೇರೆಪಿಸುವ ಕೆಲಸವನ್ನು ರಾಷ್ಟ್ರಗೀತೆ ಮಾಡುತ್ತದೆ ಎನ್ನಬಹುದು.

ನಮ್ಮ ಭಾರತದ ರಾಷ್ಟ್ರಗೀತೆಯನ್ನು ಗುರುದೇವ ರವೀಂದ್ರನಾಥ ಠಾಕೂರ್‌ರವರು (1911) ಸಂಸ್ಕೃತಮಿಶ್ರಿತ ಬೆಂಗಾಲಿ ಭಾಷೆಯಲ್ಲಿ ಬರೆದಿದ್ದಾರೆ. ಠಾಕೂರರು ಒಂದು ಕಡೆ “ನಾನು ಬರೆದ ಅಧಿನಾಯಕ ಎಂದರೆ “ಪರಮಾತ್ಮ”, ನಮ್ಮ ಕಣ್ಣಿಗೆ ಕಾಣದೆ ಗಾಳಿ, ಬೆಳಕು, ನೀರನ್ನು ಕೊಟ್ಟು ಸಲಹುವ ಆ ಭಗವಂತನೇ ನಮಗೆ ಅಧಿನಾಯಕ, ಸರ್ವೋಚ್ಛನಾಯಕ’ ಎಂದಿದ್ದಾರೆ.

ಉದ್ದೇಶ: ನಮ್ಮ ದೇಶದ ಎಲ್ಲ ನಾಗರೀಕರನ್ನು ಏಕ ಸೂತ್ರದಲ್ಲಿ ಬೆಸೆಯುವಂತೆ ಮಾಡುವ ಮಂತ್ರವೇ ರಾಷಗೀತೆ, ರಾಷ್ಟ್ರಗೀತೆಯನ್ನು ಒಟ್ಟಾಗಿ ಮಾಡುವುದರಿಂದ ನಾವೆಲ್ಲ ಒಂದು, ನಾವೆಲ್ಲ ಭಾರತ ಮಾತೆಯ ಮಕ್ಕಳು, ನಾವೆಲ್ಲ ಪ್ರೀತಿಯಿಂದ ಶಾಂತಿಯಿಂದ ಒಟ್ಟಾಗಿ ಬಾಳಬೇಕು ಎಂಬ ಭಾವನೆ ಮೂಡುತ್ತದೆ. ನಮ್ಮ ದೇಶದ ಇತಿಹಾಸ, ನಮ್ಮ ಭೌಗೋಳಿಕ ಸಂಪತ್ತುಗಳಾದ ಎತ್ತರದ ಹಿಮಾಲಯ, ದಕ್ಷಿಣದ ವಿಂಧ್ಯ ಪರ್ವತಗಳು, ನದಿಗಳು, ಸಮುದ್ರಗಳು ಮುಂತಾದವುಗಳ ಕುರಿತು ಧನ್ಯತಾ ಭಾವ ಮೂಡುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ರಾಷ್ಟ್ರಗೀತೆಯು ಸಹಾಯ ಮಾಡುತ್ತದೆ.

ಸಾಮಗ್ರಿ: ಶೃತಿ ಪೆಟ್ಟಿಗೆ, ಶಾಲೆಯ ಬ್ಯಾಂಡ್‌ಸೆಟ್‌ನೊಂದಿಗೆ ಅಥವಾ ಕರೋಕೆಯೊಂದಿಗೆ ಹಾಡಬಹುದು.

ಕಲಿಕಾ ಹಂತಗಳು:

Ø ರಾಷ್ಟ್ರಗೀತೆಯನ್ನು ಎಲ್ಲ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಪಠ್ಯ ಪುಸ್ತಕವನ್ನು ನೋಡಿಕೊಂಡು ತಪ್ಪಿಲ್ಲದೆ ಬರಯಲು (ಪಠ್ಯಪುಸ್ತಕ ಬಳಕೆಯಾಗುತ್ತದೆ) ತಿಳಿಸಬೇಕು.

Ø ಪ್ರತಿಯೊಂದು ಪದದ ಅರ್ಥವನ್ನು ತಿಳಿಸುತ್ತಾ, ಸರಿಯಾದ ಉಚ್ಚಾರಣಾ ಕ್ರಮವನ್ನು ತಿಳಿಸಬೇಕು. (ಅಲ್ಪಪ್ರಾಣ, ಮಹಾಪ್ರಾಣ),

Ø ರಾಷ್ಟ್ರಗೀತೆಯನ್ನು ಬರೆದ ಕವಿ ರವೀಂದ್ರನಾಥ ಠಾಕೂರ್‌ರವರ ಕುರಿತು ತಿಳಿಸುವುದು (ಫೋಟೋ, ವೀಡಿಯೋವನ್ನು ತೋರಿಸಬಹುದು)

Ø ಕನ್ನಡದಲ್ಲಿ ಭಾವಾರ್ಥವನ್ನು ಬರೆಸಬೇಕು.

Ø ಸಾಮಾನ್ಯವಾಗಿ ವಿದ್ಯಾರ್ಥಿಗಳು ಹಾಡುವಾಗ ಮಾಡುವ ತಪ್ಪುಗಳನ್ನು ವಿವರವಾಗಿ ತಿಳಿಸಿ, ಆ ತಪ್ಪುಗಳನ್ನು ಮಾಡದಂತೆ ಅಥವಾ ಸರಿಪಡಿಸಿಕೊಳ್ಳುವಂತೆ ತಿಳಿಸಬೇಕು. (ಉದಾ: ಅಧಿನಾಯಕ ಎನ್ನುವುದನ್ನು ಹದಿನಾಯಕ ಎನ್ನುವುದು).

Ø ಒಂದೊಂದೇ ಸಾಲನ್ನು ಹಾಡಿ ತೋರಿಸಿ ಎಲ್ಲರೂ ಒಟ್ಟಿಗೆ ಹಾಡುವಂತೆ ತಿಳಿಸಬೇಕು.

Ø ಹಲವಾರು ಬಾರಿ ಸರಿಯಾದ ರಾಗ, ಉಚ್ಚಾರಣೆಯನ್ನು ತೋರಿಸಿಕೊಟ್ಟ ನಂತರ ಗುಂಪುಗಳನ್ನಾಗಿ ಮಾಡಿ ಅಭ್ಯಾಸ ಮಾಡಿಸಬಹುದು. ಅಥವಾ ಇಬ್ಬಿಬ್ಬರ ಜೋಡಿ ಮಾಡಿ ಒಬ್ಬರ ತಪ್ಪನ್ನು ಇನ್ನೊಬ್ಬರು ಕಂಡುಹಿಡಿದು ಸರಿ ಪಡಿಸಲು ತಿಳಿಸಬೇಕು.

Ø ಕೊನೆಯಲ್ಲಿ “ಜಯ ಹೇ” ಯನ್ನು ಎತ್ತರಿಸಿ ಹಾಡುವುದನ್ನು ಹೇಳಿಕೊಡಬೇಕು.

Ø Internet ಸಹಾಯದಿಂದ ರಾಷ್ಟ್ರಗೀತೆಯನ್ನು ವಿವಿಧ ವಾದ್ಯಗಳಲ್ಲಿ ನುಡಿಸಿರುವುದನ್ನು, ವಿವಿಧ ಮಹಾನ್ ಕಲಾವಿದರು ಹಾಡಿರುವುದನ್ನು ವಿಡಿಯೋ ತೋರಿಸಬೇಕು.

ನಿಯಮಗಳು:

  1. ರಾಷ್ಟ್ರಗೀತೆ ಹಾಡುವಾಗ ನೇರವಾಗಿ ನಿಂತು ಹಾಡಬೇಕು
  2. 52 ಸೆಕೆಂಡ್‌ಗಳಲ್ಲಿ ಹಾಡಬೇಕು.

ಸ್ವ ಮೌಲ್ಯಮಾಪನ:

  1. ರಾಷ್ಟ್ರಗೀತೆಯನ್ನು ರಾಗಬದ್ಧವಾಗಿ, ತಾಳಬದ್ಧವಾಗಿ ಹಾಡುತ್ತಿದ್ದಾರೆಯೇ?
  2. ರಾಷ್ಟ್ರಗೀತೆಯನ್ನು 52 ಸೆಕೆಂಡ್‌ಗಳಲ್ಲಿ ಹಾಡುತ್ತಿದ್ದಾರೆಯೇ?
  3. ಅರ್ಥ ತಿಳಿದಿದ್ದಾರೆಯೇ?
  4. ರಚನಾಕಾರರ ಕುರಿತು ತಿಳಿದಿದ್ದಾರೆಯೇ?
  5. ಪದಗಳ ಉಚ್ಚಾರಣೆ ಸರಿಯಾಗಿದೆಯೇ?

ಘಟಕಾಂತ್ಯದ ಪ್ರಶ್ನೆಗಳು:

  1. ರಾಷ್ಟ್ರಗೀತೆಯನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ?
  2. ರಾಷ್ಟ್ರಗೀತೆಯನ್ನು ಎಷ್ಟು ಸೆಕೆಂಡ್‌ಗಳಲ್ಲಿ ಹಾಡಬೇಕು?
  3. ರಾಷ್ಟ್ರಗೀತೆಯನ್ನು ಬರೆದ ಕವಿ ಯಾರು?
  4. ರಾಷ್ಟ್ರಗೀತೆಯನ್ನು ತಪ್ಪಿಲ್ಲದೆ ಬರೆಯಿರಿ.
  5. ರಾಷ್ಟ್ರಗೀತೆಯ ಅರ್ಥ ಬರೆಯಿರಿ.
  6. ರಾಷ್ಟ್ರಗೀತೆಯನ್ನು ಹಾಡುವ ಉದ್ದೇಶವನ್ನು ತಿಳಿಸಿ.

ಚಟುವಟಿಕೆ: ರಾಷ್ಟ್ರಗೀತೆಯನ್ನು, ವಿದ್ಯಾರ್ಥಿಗಳ ಜೋಡಿ ಮಾಡಿ, ಒಬ್ಬರು ಹಾಡುವಾಗ ಇನ್ನೊಬ್ಬರು ಅವರ ತಪ್ಪನ್ನು ತಿದ್ದಲು ತಿಳಿಸುವುದು.

ನಿಮಗಿದು ಗೊತ್ತೇ?

ಎರಡು ರಾಷ್ಟ್ರಗಳ (ಭಾರತದ ಜನಗಣಮನ ಮತ್ತು ಬಾಂಗ್ಲಾದೇಶದ – ಅಮರ್ ಸೋನಾರ್ ಬಾಂಗ್ಲಾ) ರಾಷ್ಟ್ರಗೀತೆಯನ್ನು ಬರೆದ ವಿಶ್ವದ ಏಕೈಕ ಕವಿ ಗುರುದೇವ ರವೀಂದ್ರನಾಥ ಠಾಕೂರರು. ಇವರು ಬರೆದ ‘ಗೀತಾಂಜಲಿ’ ಕವನ ಸಂಕಲನಕ್ಕೆ 1913ರಲ್ಲಿ ನೋಬೆಲ್ ಪಾರಿತೋಷಕದ ಗೌರವ ದೊರಕಿದೆ.

ರಾಷ್ಟ್ರ ಗೀತೆಯ ಸ್ವರ ಪ್ರಸ್ತಾರ

ಸ ರಿ ಗ ಗ | ಗ  ಗ  ಗ ಗ | ಗ  s  ಗ  ಗ | ರಿ ಗ  ಮ  s

ಜ ನ ಗ ಣ | ಮ ನ ಆ ಧಿ | ನಾ s ಯ ಕ | ಜ ಯ ಹೇ s

ಗ  s  ಗ ಗ | ರಿ  s ರಿ  ರಿ | ನಿ  ರಿ ಸ  s | s s  ಸ  s

ಭಾ s ರ ತ | ಭಾ s ಗ್ಯ ವಿ | ಧಾ s ತಾ s | s s ಪಂ s

ಪ  s ಪ  ಪ  | s ಪ  ಪ  ಪ | ಪ  s ಪ  ಮ | ಪ ಮ ಪ s

ಜಾ s ಬ ಸಿಂ | s ಧು ಗು ಜ | ರಾ s ತ್ ಮ | ರಾ s  ಠ s

ಮ  s ಮ ಮ | ಮ s ಗ  ಗ | ರಿ ಮ ಗ  s | s s s s

ದ್ರಾ s  ವಿ ಡ  | ಉ s ತ್ಕ ಲ | ವಂ   ಗಾ s | s s s s

ಗ   s ಗ  ಗ | ಗ    s ಗ ಗ | ಪ  ಪ   ಪ  ಮ | ಮ s ಮ s

ವಿಂ s ಧ್ಯ ಹಿ | ಮಾ s ಚ ಲ | ಯ ಮು ನಾ  s | ಗಂ s ಗಾ s

ಗ  s ಗ ಗ | ರಿ ರಿ ರಿ ರಿ | ನಿ ರೊ ಸ  s | s s s s

ಉ s ಚ್ಛ ಲ | ಜ ಲ ಧಿ ತ | ರಂ s ಗಾ s | s s s s

ಗ ಗ ಗ  ಗ | ಗ   s ಗ ಮ | ರಿ  ಗ ಮ s | s s s s

ತ ವ ಶು ಭ | ನಾ s ಮೇ s | ಜಾ s ಗೇ s | s s s s

ಗ ಮ ಪ ಪ | ಪ s ಮ ಗ | ರಿ ಮ ಗ  s | s s s s

ತ ವ ಶು ಭ | ಆ s ಶಿ ಷ | ಮಾ s ಹೇ s | s s s s

ಗ  s  ಗ  s | ರಿ ರಿ ರಿ  ರಿ |  ನಿ ರಿ  ಸ  s | s s s s

ಗಾ s ಹೇ s | ತ ವ ಜ ಯ | ಗಾ s ಥಾ s | s s s s

ಪ ಪ ಪ ಪ | ಪ  s ಪ ಮ | ಪ   s ಪ ಪ | ಮ ದ  ಪ  s

ಜ ನ ಗ ಣ | ಮಂ s ಗ ಳ | ದಾ s ಯ ಕ | ಜ ಯ ಹೇ s

ಮ s ಮ ಮ | ಗ  s  ಗ ಮ | ರಿ  ಮ ಗ s | s s ನಿ ನಿ

ಭಾ s  ರ  ತ | ಭಾ s ಗ್ಯ ವಿ | ಧಾ s ತಾ s | s s ಜ ಯ

ಸ  s s s | s s ನಿ  ದ  | ನಿ  s s s | s s ಪ ಪ

ಹೇ s s s | s s ಜ ಯ | ಹೇ s s s | s s ಜ ಯ

ದ s s s | s s s s | ಸ  ಸ  ರಿ  ರಿ | ಗ  ಗ  ರಿ ಗ

ಹೆ s s s | s s s s | ಜ ಯ ಜ ಯ | ಜ ಯ ಜ ಯ

ಮ s s s

ಹೇ s s s

ಪರಿವಿಡಿ

ಜನಪದ ಸಂಗೀತ

ಅಧಿವೇಶನ – 2

ಅವಧಿ: 2 : 15 – 3 : 45

ಪೀಠಿಕೆ – ಜನಸಾಮಾನ್ಯರಲ್ಲಿ ಹೆಚ್ಚು ಬಳಕೆಯಲ್ಲಿರುವ, ಸುಲಭಶೈಲಿಯ ಸಂಗೀತವೇ ಜನಪದ ಗಾಯನ, ಇದರ ಪ್ರಚಾರವು ಹಳ್ಳಿಗಳಲ್ಲಿ ಹೆಚ್ಚು ಜಾನಪದ ಗೀತೆಗಳು ಪರಂಪರಾಗತವಾಗಿದ್ದು, ಜನಾಂಗಗಳ ಸಂಸ್ಕೃತಿಯನ್ನು ಅರಿಯಲು ಉಪಯುಕ್ತವಾಗಿದೆ. ಜನಪದ ಸಂಗೀತವು ಕೇಳ್ಮೆಯಿಂದ ಬಂದವು. ಜನರ ಸಂಸ್ಕೃತಿಯ ತಿರುಳು ಇದರಲ್ಲಿ ಅಡಕವಾಗಿವೆ. ಹಳ್ಳಿಗಾಡಿನ ಜನರ ನೋವು, ನಲಿವು, ಒಲವು, ನಂಬಿಕೆಗಳನ್ನು ತಿಳಿಯಲು ಸಹಕಾರಿಯಾಗಿದೆ. ಬೆಳಗಿನಿಂದ ಸಂಜೆಯವರೆಗೂ ದುಡಿದು ಮನೆಗೆ ಬಂದು ಸೇರುವ ರೈತನಿಗೂ, ಕೆಲಸಗಾರನಿಗೂ, ಈ ಹಾಡುಗಳು ಅಪಾರ ಆನಂದವನ್ನು ನೀಡುತ್ತದೆ.

ಜಾನಪದ ಗೀತೆ ಅಥವಾ ಹಾಡುಗಳ ಸಂಗೀತ ಮತ್ತು ತಾಳವು ಸರಳ, ಜಾನಪದ ಗೀತೆಗಳಿಗೆ ಹಳಿಯ ಹಾಡು, ಗ್ರಾಮ್ಮಗನ, ಲೋಕಗೀತ ಎಂಬ ಹೆಸರುಗಳುಂಟು. ಈ ಜನಪದ ಸಂಗೀತದ ಆಧಾರದ ಮೇಲೆ ಶಾಸ್ತ್ರೀಯ ಸಂಗೀತವು ಬೆಳೆಯಿತೆನ್ನಬಹುದು. ಜನಪದ ಸಂಗೀತದ ಮುಖ್ಯಗುರಿ ಮನೋರಂಜನೆ. ಸಂಗೀತವು ಬಹುಮುಖ ಹಾಗೂ ವೈವಿಧ್ಯಪೂರ್ಣವಾಗಿದೆ. ಪ್ರತಿಯೊಂದು ಜನಪದ ಗೀತೆಯು ತನ್ನದೇ ಆದ ದಾಟಿಯನ್ನು ಹೊಂದಿದೆ. ಬೀಸುವ ಹಾಡು, ಒನಕೆಯ ಹಾಡು, ಕೋಲಾಟದ ಹಾಡು, ಹೊಳಿಯ ಹಾಡು, ಸುಗ್ಗಿಯ ಹಾಡು, ದೋಣಿಯ ಹಾಡು, ಜಾತ್ರೆ – ಉತ್ಸವಾದಿಗಳ ಹಾಡು, ಲಾವಣಿ ಹಾಡು, ಮದುವೆ ಹಾಡು, ಲಗ್ನದ ಸೋಬಾನೆ ಹಾಡು, ನಾಮಕರಣದ ಹಾಡು, ಗೌರಿ, ಯುಗಾದಿ, ಶಿವರಾತ್ರಿ ಹಬ್ಬಗಳ ಹಾಡು, ರಾಮಾಯಣ, ಮಹಾಭಾರತ ಕಥೆಗಳ ಹಾಡು, ಇತ್ಯಾದಿ ಆನೇಕ ಬಗೆಯ ಹಾಡುಗಳು ರಾಶಿರಾಶಿಯಾಗಿ ಕಂಡುಬರುತ್ತದೆ.

ಅಧಿವೇಶನ 2 (1)

ಬೀಸುವ ಪದ:

ಇದು ಜನಪದ ಕಲಾಪ್ರಕಾರಗಳಲ್ಲಿ ಒಂದು ಹಳ್ಳಿಯ ಜನ ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳು ತಮ್ಮ ಮನೆಯ ಧಾನ್ಯಗಳನ್ನು ತೆಗೆದುಕೊಂಡು ಆ ಊರಿನ ಹಿರಿಯ / ಮುಖ್ಯಸ್ಥನ ಮನೆಯಲ್ಲಿ ಸೇರಿ ನಾಲ್ಕಾರು ಮಂದಿ ‘ ಬೀಸುವ ಕಲ್ಲಿಗೆ ಧಾನ್ಯವನ್ನು ಹಾಕಿ ಬೀಸುತ್ತಾ ಹೇಳುವ ಪದ.

ಉದ್ದೇಶ:  ಹಳ್ಳಿಯ ಜನ ತಮ್ಮ ಅನುಭವವನ್ನು ಹಾಡಿನ ರೂಪದಲ್ಲಿ ಯಾವ ರೀತಿ ತೋರಿಸುವರು ಎಂಬದನ್ನು ತಿಳಿಸುವುದು. ವಿದ್ಯಾರ್ಥಿಗಳಿಗೆ ಜಾನಪದ ಕಲಾ ಪ್ರಕಾರಗಳನ್ನು ತಿಳಿಸುವುದರ ಜೊತೆಗೆ ಅವುಗಳ ಮಹತ್ವವನ್ನು ಮೂಡಿಸುವುದಾಗಿದೆ.

ಕಲಿಕಾ ಸಾಮಾಗ್ರಿ: ಚಿತ್ರಪಟ, ಧ್ವನಿ ಮುದ್ರಿಕೆ,

ಕಲಿಕಾ ವಿಧಾನ:

ಹಂತ 1:- ಮೊದಲಿಗೆ ಕಪ್ಪು ಹಲಗೆಯ ಮೇಲೆ ತಪ್ಪಿಲ್ಲದಂತೆ ಸಾಹಿತ್ಯವನ್ನು ಬರೆಯಿಸುವುದು.

ಹಂತ 2:- ರಾಗಬದ್ಧವಾಗಿ ಹಾಡಿ ತೋರಿಸುವುದು.

ಹಂತ 3: – ಲಯಬದ್ಧವಾಗಿ ಉಚ್ಚಾರಣೆಯೊಂದಿಗೆ ಹಾಡುವುದು.

ಹಂತ 4: – ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಪುನರುಚ್ಚರಿಸಲು ತಿಳಿಸುವುದು.

 

ಉದಾಹರಣೆಗೆ:-

ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ

ಶರಣೆಂಬೆ ಶಿವನಾ ಮಡದೀಗೆ |

ಶರಣೆಂಬೆ ಶಿವನಾ ಮಡದಿ ಗೌರಮ್ಮಗೆ

ಶರಣೆಂಬೆ ಕಲ್ಲ ಹಿಡಿದೇವು ||

ಈಗಾನೇ ಕಲ್ಹಡಿದು ನೆನೆದೇವು ಕಲ್ಯಾಣ್ದಯ್ಯನ

ಬಿಲ್ಲು ಬಾಣದ ಬಿದಿರೇಯ – ರಂಗಯ್ಯನ

ಸೊಲ್ಲು ಸೊಲ್ಲಿಗೆ ನೆನೆದೇವು ||

ರಾಗಿ ಬೀಸೋಕಲ್ಲೇ ರನ್ನ ಮುತ್ತಿನ ಕಲ್ಲೆ

ಅಣ್ಣಾನಾ ಮನೆಯ ಸಿರಿಗಲ್ಲ-

ಸಾಮ್ರಾಜ್ಯ ಶೋಭನದ ಕಲ್ಲೇ ಕೊಡು ದನಿಯಾ |

ಸುಮ್ಮನೆ ಬೀಸಿದರೆ ಬೀಳಾದ ಈ ಕಲ್ಲು

ನಾಗಸೋರದಂತೆ ದನಿ ಎತ್ತಿ – ಹಾಡಿದರೆ

ಘಮ್ಮಾನೆ ಬೀಳ್ತಾದ ಈ ಕಲ್ಲು | |

ಕಲ್ಲಮ್ಮ ತಾಯಿ ಮಲ್ಲಮ್ಮ ರಾಗಿಯ

ಜಲ್ಲ ಜಲ್ಲನೆ ಉದುರಮ್ಮ – ನಾನಿನಗೆ

ಬೆಲ್ಲದಾರುತಿಯ ಬೆಳಗೇನು | |

ಕಲ್ಲು ಕೊಟ್ಟಮ್ಮಾಗೆ ಎಲ್ಲಾ ಭಾಗ್ಯವು ಬರಲೀ

ಪಲ್ಲಕ್ಕಿ ಮೇಲೆ ಮಗ ಬರಲೀ – ಆ ಮನೆಗೆ

ಮಲ್ಲಿಗೆ ಮುಡಿಯೋ ಸೊಸೆ ಬರಲೀ | |

ಈ ಕಲ್ಲು ತೂದು ತೋಳೆಲ್ಲ ನೊಂದಾವು

ಸುಸ್ತಾದ ಬೆರಳು ಸಮೆದಾವು – ಸರಸಾತಿ

ಹೋಗಿ ಬರುತೇನೆ ಮಲಗಮ್ಮ | |

ಕಲ್ಲು ಬಿಟ್ಟೇನೆಂದು ಸಿಟ್ಯಾಕೆ ಸರಸತಿಯೇ

ಕುಕ್ಕೇಲಿ ರಾಗಿ ಬೆಳೆಯಾಲಿ – ತಕ್ಕೊಂಡು

ಮತ್ತೆ ರಾತ್ರೀಗೆ ಬರುತೀನಿ | |

ರಾಗಿ ಕಲ್ಲಿನ ಮೇಲೆ ಚೆಲ್ಲಿದೆ ನಮ್ಮ ಹಾಡು

ಬಲ್ಲಂತ ಜಾಣರು ಬರಕೊಳ್ಳಿ – ನಮ್ಮ ಹಾಡು

ಬಳ್ಳ ತಕ್ಕೊಂಡು ಅಳಕೊಳ್ಳಿ | |

ಸ್ವಮೌಲ್ಯಮಾಪನ:

  1. ಸುಲಭ ಶೈಲಿಯ ಸಂಗೀತದ ಪರಿಚಯವಾಯಿತೆ?
  2. ಹಳ್ಳಿ ಜನರ ಸಂಸ್ಕೃತಿಯ ಅರಿವು ಆಯಿತೆ?
  3. ಜನಪದ ಗೀತೆಗಳಿಗೆ ಇರುವ ಬೇರೆ ಬೇರೆ ಹೆಸರಿನ ಪರಿಚಯವಿದೆಯ?
  4. ಈ ಸಂಗೀತದ ಮುಖ್ಯಗುರಿಯ ಬಗ್ಗೆ ತಿಳಿದಿರುವರೇ?
  5. ಜನಪದ ಗೀತೆಗಳನ್ನು ಕೇಳಿರುವರೇ?

ಘಟಕಾಂತ್ಯದ ಪ್ರಶ್ನೆಗಳು:

  1. ಜನಪದ ಸಂಗೀತ ಎಂದರೇನು?
  2. ಪರಂಪರಾಗತವಾಗಿ ಬಂದ ಸಂಗೀತ ಯಾವುದು?
  3. ಜನರ ಸಂಸ್ಕೃತಿಯನ್ನು ಅರಿಯಲು ಯಾವುದು ಉಪಯುಕ್ತವಾಗಿದೆ?
  4. ಶಾಸ್ತ್ರೀಯ ಸಂಗೀತವು ಯಾವ ಸಂಗೀತದ ಆಧಾರದ ಮೇಲೆ ಬೆಳೆದುಬಂದಿದೆ?
  5. ಜನಪದ ಸಂಗೀತದ ಮುಖ್ಯಗುರಿ ಏನು?
  6. ಬೀಸುವ ಪದ ಎಂದರೇನು?
  7. ಬೀಸಲು ಯಾವ ವಿಧವನ್ನು ಅನುಸರಿಸುತ್ತಾರೆ?

 

ನಿಮಗಿದು ಗೊತ್ತೆ?

ಡಾ|| ಹೆಚ್. ಎಲ್. ನಾಗೇಗೌಡರು ಐ ಎ ಎಸ್ ಅಧಿಕಾರಿಯಾಗಿ, ಸಾಹಿತಿಯಾಗಿ ಮೂಲ ಜನಪದದ ಹಾಡು – ಹಸೆ, ಜನಪದನೃತ್ಯಗಳನ್ನು ಉಳಿಸುವಲ್ಲಿ ಮಹತ್ತರ ಕಾರ್ಯವನ್ನು ಮಾಡಿದ ಮಹನೀಯರು. ಜನಪದರನ್ನು ಅನಕ್ಷರಸ್ಥ, ಅನಾಮಧೇಯ ಅಮರಕವಿಗಳು ಎಂದು ಬಣ್ಣಿಸಿ, ಜಾನಪದ ಕಲೆಯ ಹಿರಿಮೆಯನ್ನು ಎತ್ತಿ ಹಿಡಿದವರು. ಇವರು ಕರ್ನಾಟಕ ಜಾನಪದ ಪರಿಷತ್ತನ್ನು 1979ರಲ್ಲಿ ಸ್ಥಾಪಿಸಿದರು. ಚನ್ನಪಟ್ಟಣದ ಬಳಿ ‘ಜಾನಪದ ಲೋಕ’ ವನ್ನು ಸ್ಥಾಪಿಸಿ, ಜನಪದರು ಉಪಯೋಗಿಸುತ್ತಿದ್ದ ವಸ್ತುಗಳ ಬೃಹತ್ ಸಂಗ್ರಹಾಲಯ ಮಾಡಿದ್ದಾರೆ, ಹಾಗೆಯೇ ಮೂಲ ಜನಪದಗೀತೆಗಳ ಧ್ವನಿ ಮುದ್ರಗಳ ಮೂಲ ಜನಪದ ಕಲಾವಿದರ ನೃತ್ಯಗಳ ವೀಡಿಯೋ ಚಿತ್ರಣಗಳನ್ನು ಮಾಡಿ ಮುಂದಿನ ತಲೆಮಾರಿಗೆ ಅವುಗಳನ್ನು ಉಳಿಸುವ ಅದ್ಭುತ ದೂರದೃಷ್ಟಿಯ ಕಾರ್ಯವನ್ನು ಮಾಡಿದ್ದಾರೆ.

ಕುಟ್ಟುವ ಪದ

ಅಧಿವೇಶನ: 2 (2)

ಅವಧಿ: 45 ನಿಮಿಷಗಳು

ಪೀಠಿಕೆ: ಕುಟ್ಟುವ ಪದವು ಜನಪದ ಸಂಗೀತದ ಒಂದು ಪ್ರಕಾರವಾಗಿದೆ. ಕುಟ್ಟುವ ಪದಗಳು ನಿತ್ಯನೂತನ ನಿರಾಭರಣ ಕಲಾಸುಂದರಿ, ಅವುಗಳಿಗೆ ರಾಗ, ತಾಳಗಳ ಬಂಧನವಿಲ್ಲ. ಅದರ ಧಾಟಿ ಸುಲಭಗ್ರಾಹ್ಯ, ಜನಪದರು ತಮ್ಮ ನಿತ್ಯದ ಕೆಲಸಗಳಲ್ಲೊಂದಾದ ಧಾನ್ಯ ಕುಟ್ಟುವ ಕ್ರಿಯೆಯ

ಏಕತಾನತೆಯನ್ನು ಹೋಗಲಾಡಿಸಲು ರಚಿಸಿ ಹಾಡುತ್ತಿದ್ದ ಹಾಡುಗಳೇ ಕುಟ್ಟುವ ಪದಗಳು. ಇವುಗಳು ಸಾಮಾನ್ಯವಾಗಿ ದೇವರ ಭಕ್ತಿಗೀತೆಗಳು, ನೀತಿಬೋಧಕ ಗೀತೆಗಳು, ತತ್ವಬೋಧಕ ಗೀತೆಗಳು, ಕಥಾನಕಗಳ ರೂಪದಲ್ಲಿ ಇರುತ್ತವೆ. ಕುಟ್ಟುವ ಲಯದಲ್ಲಿಯೇ ಈ ಹಾಡುಗಳ ಸೃಷ್ಟಿಯಾಗಿರುತ್ತದೆ. ಕುಟ್ಟುವ ಪದಗಳು ಹಳ್ಳಿಯ ಅನಕ್ಷರಸ್ಥ ಹೆಣ್ಣು ಮಕ್ಕಳ ಪ್ರತಿಭೆಯನ್ನು ತೋರುವ ಕನ್ನಡಿಗಳೆಂದರೆ ತಪ್ಪಾಗಲಾರದು.

ಉದ್ದೇಶ:

Ø ನಮ್ಮ ಸಂಸ್ಕೃತಿಯ ಪರಿಚಯ ಮಾಡಿ ಕೊಡಲು ಪೂರಕ.

Ø ಜನಪದಸಂಗೀತದಿಂದ ನಮ್ಮ ಗ್ರಾಮೀಣ ಜನರಿಗಿದ್ದ ಪ್ರತಿಭೆಯ / ಸೃಜನಶೀಲತೆಯ ಪರಿಚಯವಾಗುತ್ತದೆ.

Ø ಕುಟ್ಟುವ ಪದಗಳ ಲಯದ ರೋಚಕತೆಯ ಅರಿವಾಗುತ್ತದೆ.

Ø ಬಡತನ, ಕಷ್ಟ ಕಾರ್ಪಣ್ಯಗಳನ್ನು ಮೀರಿ ಎಂತಹ ಪರಿಸ್ಥಿತಿಯಲ್ಲೂ ಸಂಗೀತದ ಹಾಡಿನ ಮೂಲಕ ತಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳುತ್ತಿದ್ದ ಗ್ರಾಮೀಣ ಜನರ ಕುರಿತು ಗೌರವ ಭಾವನೆ ಮೂಡುತ್ತದೆ.

Ø ಲಲಿತಕಲೆಗಳಲ್ಲಿ ಗಾಯನಕ್ಕೆ ಏಕೆ ಅಗ್ರಸ್ಥಾನವಿದೆ ಎಂಬುದರ ಅರಿವಾಗುತ್ತದೆ. ಏಕೆಂದರೆ ಯಾವುದೇ ಖರ್ಚಿಲ್ಲದೆ, ವಾದ್ಯಗಳಿಲ್ಲದೆ, ಯಾವುದೇ ನಿರ್ದಿಷ್ಟ ಸ್ಥಳದ ಆವಶ್ಯಕತೆ ಇಲ್ಲದೆ ಸುಲಭವಾಗಿ ಒದಗುವ ಕಲೆಯೆಂದರೆ ಗಾಯನ ಒಂದೇ ಎಂಬುದು ತಿಳಿಯುತ್ತದೆ.

Ø ಗ್ರಾಮೀಣ ಭಾಷೆಯ ಸೊಗಡನ್ನು ಅರಿಯುವರು.

ಕಲಿಕಾ ಸಾಮಗ್ರಿಗಳು: ಗೆಜ್ಜೆ, ಚಿಟಿಕೆ, ಗಿಲ್ಕಿ, ದಮ್ಡಿ

ಕಲಿಕಾ ಹಂತ:

  1. ಕುಟ್ಟುವ ಪದಗಳ ಸ್ವಾರಸ್ಯ ತಿಳಿಸುವುದು.
  2. ಹಾಡನ್ನು ಕಪ್ಪುಹಲಗೆಯ ಮೇಲೆ ಬರೆದು ಅರ್ಥ ತಿಳಿಸುವುದು.
  3. ಸುಶ್ರಾವ್ಯವಾಗಿ , ಮುಕ್ತ ಧ್ವನಿಯಲ್ಲಿ ಹಾಡುವುದನ್ನು ಹೇಳಿ ಕೊಡುವುದು.
  4. ಗ್ರಾಮೀಣ ಮೋಡಿ ಭಾಷೆಯ ಪದಗಳ ಉಚ್ಚಾರಣೆಯನ್ನು ಹೇಳಿ ಕೊಡುವುದು.

ಸ್ವ ಮೌಲ್ಯಮಾಪನ:

Ø ಕುಟ್ಟುವ ಪದಗಳನ್ನು ಯಾವ ಸಂದರ್ಭದಲ್ಲಿ ಹಾಡುತ್ತಾರೆಂದು ತಿಳಿದಿರುವರೆ?

Ø ಹಾಡಿನ ಅರ್ಥ ತಿಳಿದಿರುವರೆ?

Ø ಗ್ರಾಮ್ಮ ಭಾಷೆಯ ಉಚ್ಚಾರಣೆ / ಸೊಗಡನ್ನು ಅರಿತಿರುವರೆ?

Ø ವಿವಿಧ ಪ್ರಾಂತ್ಯಗಳ ಗ್ರಾಮೀಣ ಭಾಷೆಯ ವ್ಯತ್ಯಾಸಗಳನ್ನು ಗುರುತಿಸುವರೆ?

Ø ಜನಪದ ಸಾಹಿತ್ಯದ ಕುರಿತು ಗೌರವ ಭಾವನೆ ಹೊಂದಿರುವರೆ?

ಘಟಕಾಂತ್ಯದ ಪ್ರಶ್ನೆಗಳು:

  1. ಕುಟ್ಟುವ ಪದಗಳು ಎಂದರೇನು?
  2. ಕುಟ್ಟುವ ಪದಗಳ ಲಯವು (ಕುಟ್ಟುವ ಕ್ರಿಯೆಯನ್ನು) ಅವಲಂಬಿಸಿರುತ್ತದೆ.
  3. ಈ ಹಾಡಿನಲ್ಲಿರುವ ಗ್ರಾಮ್ಯ ಪದಗಳನ್ನು ಪಟ್ಟಿ ಮಾಡಿ

ಚಟುವಟಿಕೆ:

ತಮ್ಮ ಮನೆಯ ಅಕ್ಕಪಕ್ಕದ ಹಿರಿಯರಿಂದ ಕುಟ್ಟುವ ಪದಗಳ ಸಂಗ್ರಹ ಮಾಡಿ, ಹಾಡಲು ಕಲಿತು ತರಗತಿಯಲ್ಲಿ ಹಾಡಲು ತಿಳಿಸುವುದು.

ಭತ್ತ ಕುಟ್ಟುವ ಪದ

ಹಾಡ್‌ಬಾರ್‌ದಿದ್ ಹೆಣ್ಮಕ್ಳು |

ಬೀಳೋ ನನ್ಸ್ ಪಾದಕ್ಕೆ ಹಾಡುಂಟು ನನ್ನ | ಒಡ್ಲಲ್ಲು

ಹಾಡುಂಟು ನನ್ನ ಒಡ್ಲಲ್ಲು ಹೆಣ್ಮಕ್ಳೆ

ಹೂವುಂಟು ನನ್ನ ಮುಡಿಯಲ್ಲು | |

ನುರಿ ನುರಿ ಭತ್ತವೆ | ನನ್ನ ದಣ್ಣಿಸಬೇಡ

ನಿನ್ನ ಪೂಜಿಸುವೇ ಒರ‍್ಲಲ್ಲು

ನಿನ್ನ ಪೂಜಿಸುವೇ ಒರ‍್ಲಲ್ಲು ಈ ಮನೆಯ

ಕಣಜಾ ಎರಡೂ ಮುಡಿ ನೂರು.

ತಾರೂಕೀ ಬೆಳ್ಕೀಗೇ ನಾನಕ್ಕಿ ತೊಳ್ಸುವೆ

ಸೂರ್ಯ ಚಂದ್ರರಾ ಬೆಳ್ಕೀಗೂ

ಸೂರ್ಯ ಚಂದ್ರರಾ ಬೆಳ್ಕೀಗೂ ತಮ್ಮಯ್ಯ

ತೊಲ ಭಾರಕ್ ಅಕ್ಕಿ ತೊಳ್ಸುವೇ

ಅಣ್ಣಯ್ಯ ತಂದಾ ಎತ್ತಿನ್ಗಾಡಿತುಂಬಾ

ಕಳ್ಸುವೆ ಮುಡಿ ಮುಡಿ ಅಕ್ಕೀಯಾ

ಕಳ್ಸುವೆ ಮುಡಿ ಮುಡಿ ಅಕ್ಕಿಯ ಪ್ಯಾಟೀಗೆ

ತರ‍್ಸುವೆ ತ‌ರ್‌ ತರ್‌ದಾ ಒಡವೆಗಳಾ

ಊರಿಗಗ್ರಣಿಬೇಕು ನೀರೀಗೆ ಕೆರಿ ಬೇಕು

ಸಾರೀಗ್‍ಕುತ್ತುಂಬ್ರೀ ಹೊಡಿಬೇಕು

ಸಾರೀಗ್‍ಕುತ್ತುಂಬ್ರೀ ಹೊಡಿಬೇಕು ಈಯೂರ

ಕೇರಿ ಕೇರೀಗೇ ಕಣಜಾಬೇಕು

ಸಂಗೀತದ ಮಹತ್ವ ಮತ್ತು ಪ್ರಯೋಜನ

ಅಧಿವೇಶನ: 3

ಅವಧಿ: 45 ನಿಮಿಷಗಳು

ಪೀಠಿಕೆ: ಶಿಶುರ್ವೆತ್ತಿ ಪಶುರ್ವೆತ್ತಿ ವೇತ್ತಿ ಗಾನ ರಸಂ ಫಣಿಃ ಎಂಬ ನಾಣ್ಣುಡಿಯಂತೆ ಸಂಗೀತಕ್ಕೆ ತಲೆದೂಗದ ಜೀವಿಯೇ ಇಲ್ಲ ಎನ್ನಬಹುದು. ಮಾನವ ಕೋಟಿಗೆ ಪರಮಾತ್ಮನು ಕರುಣಿಸಿದ ವರಪ್ರಸಾದವೇ ಸಂಗೀತ, ಸಂಗೀತವು ಹೃದಯದ ಭಾಷೆ, ಪಂಡಿತರಿಂದ ಪಾಮರರವರೆಗೂ, ಪ್ರಾಣಿಗಳಿಗೂ, ಸಮಸ್ತ ಜೀವಿಗಳಿಗೂ ಸಂಗೀತವು ಪ್ರಿಯವಾದುದು. ಸಂಗೀತದಲ್ಲಿ ಹಾಡುವ ಉತ್ತಮ ಸಾಹಿತ್ಯದಿಂದಾಗಿ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ, ದೇಶಭಕ್ತಿ, ನಾಡು ನುಡಿಯ ಕುರಿತು ಗೌರವ, ಅಭಿಮಾನ, ಹಿರಿಯರ ಕುರಿತು ಗೌರವ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಮತ್ತು ಅವರ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಗೀತವು ಮುಖ್ಯ ಪಾತ್ರ ವಹಿಸುತ್ತದೆ. ಗೀತಂ, ವಾದ್ಯಂ ತಥಾ ನೃತ್ಯಂ ಶ್ರಯಂ ಸಂಗೀತ ಮುಚ್ಯತೆ – ಸಾರಂಗದೇವ (ಸಂಗೀತ ರತ್ನಾಕರ) ಎಂಬಂತೆ ಗಾಯನ, ವಾದನ, ನೃತ್ಯ ಈ ಮೂರು ಕಲೆಗಳು ಸೇರಿ ಸಂಗೀತವಾಗಿದೆ ಎನ್ನಬಹುದು.

ಉದ್ದೇಶ:

Ø ಸಂಗೀತದಲ್ಲಿನ ಭಾವೋನ್ಮಾದದಿಂದ ಉದಿಸುವ, ಕಲಾತ್ಮಕವಾದ ಆನಂದದಿಂದ ಉಳಿದ ವಿಷಯಗಳನ್ನು ಕಲಿಯುವಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ.

Ø ಸಂಗೀತದ ಮಾಧುರ್ಯವು ಮಾನವನಲ್ಲಿರುವ ಸಂಕುಚಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯತೆಯನ್ನು ಉಂಟುಮಾಡುತ್ತದೆ.

Ø ಮಗುವಿನ ಬೌದ್ಧಿಕ ಬೆಳವಣಿಗೆಯಲ್ಲಿ ಸಮತೋಲನವಿರುತ್ತದೆ.

Ø ಸಂಗೀತದಲ್ಲಿನ ಧ್ವನಿ ಮಾಧುರ್ಯ, ಲಯ ಗಾಂಭೀರ್ಯಗಳು ಮಗುವಿನಲ್ಲಿ ಶಿಸ್ತನ್ನು ಮೂಡಿಸುತ್ತದೆ. ಶುದ್ಧ ಉಚ್ಚಾರಣೆಗೆ ಸಂಗೀತದ ಕಲಿಕಯು ಸಹಾಯ ಮಾಡುತ್ತದೆ.

Ø ವಿದ್ಯಾರ್ಥಿಗಳ ನಡತೆಯನ್ನು ರೂಪಿಸುತ್ತದೆ.

Ø ವಿದ್ಯಾರ್ಥಿಗಳನ್ನು ಪ್ರತಿಭಾವಂತರು ಮತ್ತು ಸಂಸ್ಕಾರವಂತರನ್ನಾಗಿ ಮಾಡುತ್ತದೆ.

ಕಲಿಕಾ ಸಾಮಗ್ರಿ: ಶೃತಿಗಾಗಿ ‘ತಂಬೂರಿ ಅಥವಾ ಎಲೆಕ್ಟ್ರಾನಿಕ್ ತಂಬೂರ, ತಬಲ ಅಥವಾ ಎಲೆಕ್ಟ್ರಾನಿಕ್ ತಬಲ, ರೇಡಿಯೋ ಸಿ ಡಿ ಪ್ಲೇಯರ್, ಪಿ ಪಿ ಟಿ.

ಸಂಗೀತದಿಂದಾಗುವ ಪ್ರಯೋಜನಗಳು ಅಥವಾ ಸಂಗೀತದಿಂದ ದೊರಕುವ ಉದ್ಯೋಗಗಳು:

ಸಂಗೀತವು ಮನಸ್ಸಿಗೆ ಸಂತೋಷ, ನೆಮ್ಮದಿ, ಮನೋರಂಜನೆಯನ್ನು ಕೊಡುವುದಷ್ಟೇ ಅಲ್ಲದೆ ಜೀವನ ನಡೆಸುವ ದಾರಿಯೂ ಕೂಡಾ ಆಗಬಹುದು. ಅಲ್ಲದೆ ಸಂಗೀತದಲ್ಲಿ ಉತ್ತಮ ಸಾಧನೆ ತೋರಿದಲ್ಲಿ ಅಪಾರ ಕೀರ್ತಿ, ಐಶ್ವರ್ಯ ಎರಡನ್ನೂ ಗಳಿಸಬಹುದು.

  1. ಶಾಸ್ತ್ರೀಯಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿ ಅತ್ಯುತ್ತಮ ಸಾಧನೆ ತೋರಿದಲ್ಲಿ ಉನ್ನತ ಮಟ್ಟದ ಪ್ರಖ್ಯಾತಅಂತರಾಷ್ಟ್ರೀಯ ಖ್ಯಾತಿಯ ಸಂಗೀತಗಾರರಾಗಬಹುದು.

ಉದಾ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರು:

Ø ವಿದುಷಿ ದಿ|| ಎಂ. ಎಸ್. ಸುಬ್ಬಲಕ್ಷ್ಮಿ     –        ಗಾಯನ.

Ø ದಿ|| ವಿದ್ವಾನ್ ಪಿಟೀಲು ಚೌಡಯ್ಯ        –        ಪಿಟೀಲು.

Ø ವಿದ್ವಾನ್ ಬಾಲ ಮುರಳಿ ಕೃಷ್ಣ           –        ಗಾಯನ.

Ø ಎಲ್. ಸುಬ್ರಮಣ್ಯಂ                        –        (ವಾಯಲಿನ್).

Ø ವಿದ್ವಾನ್ ಕೆ. ಜೆ. ಯೇಸುದಾಸ್          –        ಗಾಯನ.

Ø ವಿದ್ವಾನ್ ಅರ್ಜುನ್ ಕುಮಾರ್           –        ಮೃದಂಗ.

Ø ಕದ್ರಿ ಗೋಪಾಲನಾಥ್                              –        ಸ್ಯಾಕ್ಸೋಫೋನ್.

Ø ವಿದ್ವಾನ್ ದಿ|| ಯು ಶ್ರೀನಿವಾಸ್                    –        ಮ್ಯಾಂಡೋಲಿನ್.

Ø ದಿ|| ವೀಣೆ ಶೇಷಣ್ಣ                          –        ವೀಣೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು:

Ø ದಿ|| ಪಂಡಿತ್ ಭೀಮ್ಸೇನ್ ಜೋಷಿ        –        ಗಾಯನ.

Ø ದಿ|| ಪಂಡಿತ್ ರವಿಶಂಕರ್                 –        ಸಿತಾರ್.

Ø ಉಸ್ತಾದ್ ಝಾಕಿರ್ ಹುಸೇನ್           –        ತಬಲ.

Ø ದಿ|| ವಿದುಷಿ ಗಂಗೂಬಾಯಿ ಹಾನಗಲ್  –        ಗಾಯನ.

Ø ಪಂಡಿತ್ ಜಸ್‌ರಾಜ್                       –        ಗಾಯನ.

Ø ಪಂಡಿತ್ ಹರಿಪ್ರಸಾದ್ ಚೌರಾಸಿಯಾ –        ಕೊಳಲು.

Ø ಪಂಡಿತ್‌ ಶಿವಕುಮಾರ್ ಶರ್ಮ                    –        ಸಂತೂರ್.

Ø ಪಂಡಿತ್ ವಿಶ್ವಮೋಹನ ಭಟ್            –        ಮೋಹನವೀಣಾ (ಗಿಟಾರ್).

Ø ದಿ|| ಉಸ್ತಾದ್ ಬಿಸ್ಮಿಲ್ಲಾ ಖಾನ್                    –        ಶಹನಾಯಿ.

  1. ಚಲನಚಿತ್ರಗಳಿಗೆ,ದೂರದರ್ಶನ ಕೇಂದ್ರ ಹಾಗೂ ರೇಡಿಯೋ ಕೇಂದ್ರಗಳಲ್ಲಿ ಸಂಗೀತ ನಿದೇಶಕರಾಗಬಹುದು. (Music Directors).

Ø ದಿ|| ಸಿ. ಅಶ್ವಥ್.

Ø ಹಂಸಲೇಖ.

Ø ವಿ. ಮನೋಹರ್.

Ø ಎ. ಆರ್. ರೆಹಮಾನ್ (ಆಸ್ಕರ್ ಪ್ರಶಸ್ತಿ ವಿಜೇತರು).

Ø ಪ್ರವೀಣ್ ಗೋಡ್ಖಿಂಡಿ.

Ø ಗುರುಕಿರಣ್ ಮುಂತಾದವರು.

  1. ಹಿನ್ನೆಲೆಗಾಯಕರಾಗಬಹುದುಸಿನೆಮಾಗಳಿಗೆಟಿ ವಿ ಕಾರ್ಯಕ್ರಮಗಳಿಗೆಧ್ವನಿ ಸುರುಳಿ (Album) ಗಳಿಗೆ ಹಿನ್ನೆಲೆ ಗಾಯಕರಾಗಬಹುದು.

ಉದಾ:

Ø ಲತಾ ಮಂಗೇಶ್ವರ್.

Ø ಎಸ್. ಜಾನಕಿ.

Ø ಎಸ್. ಪಿ. ಬಾಲಸುಬ್ರಮಣ್ಯಂ.

Ø ಪಿ. ಬಿ. ಶ್ರೀನಿವಾಸ್.

Ø ರಾಜೇಶ್ ಕೃಷ್ಣನ್.

Ø ಯೇಸುದಾಸ್.

Ø ನಂದಿತಾ.

Ø ಎಂ. ಡಿ. ಪಲ್ಲವಿ.

  1. ವಾದ್ಯಸಂಗೀತದಲ್ಲಿ ಪ್ರಾವಿಣ್ಯತೆಯನ್ನು ಪಡೆದು ಸಿನಿಮಾಗಳಲ್ಲಿ, ಟಿ ವಿ ಚಾನೆಲ್‌ಗಳಲ್ಲಿ, ಧ್ವನಿ ಸುರುಳಿಗಳಲ್ಲಿ, ರೇಡಿಯೋಗಳಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಸಹ ವಾದ್ಯ ಕಲಾವಿದರಾಗಬಹುದು.
  2. ಶಾಲೆಗಳಲ್ಲಿಸಂಗೀತ ಶಿಕ್ಷಕರಾಗಬಹುದು
  3. ಮನೆಗಳಲ್ಲಿಸಂಗೀತದ ತರಗತಿಗಳನ್ನು ನಡೆಸಿ, ಸಂಗೀತ ಶಾಲೆಗಳನ್ನು ಸ್ಥಾಪಿಸಿ ಅಪಾರ ಕೀರ್ತಿ ಹಣ ಎರಡನ್ನೂ ಗಳಿಸಬಹುದು.
  4. ಇತ್ತೀಚಿನದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿಯೂ ಸಹ ಉದ್ಯೋಗಿಗಳ ಒತ್ತಡ ನಿವಾರಣೆಗಾಗಿ ಸಹ ಸಂಗೀತಗಾರರನ್ನು ನೇಮಿಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ಕಲೆ, ಲಲಿತಕಲೆ ಸಂಗೀತದ ಅರ್ಥ, ಸಂಗೀತ ಪದ್ಧತಿಗಳು, ಸಂಗೀತದ ಮಹತ್ವ

ಅಧಿವೇಶನ: 3 (1)

ಅವಧಿ: 90 ನಿಮಿಷಗಳು

ಪೀಠಿಕೆ: ಕಲೆ ಎನ್ನುವುದು ಮಾನವ ನಿರ್ಮಿತವಾದ ಕೃತಿ ಎಂದು ಸ್ಕೂಲವಾಗಿ ಹೇಳಬಹುದು. ವ್ಯಕ್ತಿಯಲ್ಲಿ ಉಂಟಾಗುವ ವಿವಿಧ ಭಾವಗಳಿಗೆ ಅವನ ಪ್ರತಿಭೆ, ಕಲ್ಪನೆಗಳಿಂದ ಲಭಿಸುವ ಬಾಹ್ಯ ರೂಪವೇ ಕಲೆ ಎಂದೂ ಹೇಳಬಹುದು. ವ್ಯಕ್ತಿಯ ಪ್ರತಿಭೆಯಿಂದ ಮೂಡಿ ಕ್ರಿಯಾರೂಪದಲ್ಲಿ ಪ್ರಕಟವಾಗುವುದೇ ಕಲೆ ಎನ್ನುವ ಸೂತ್ರದನ್ವಯ ಶಿಲ್ಪ, ಕಾವ್ಯ, ಸಂಗೀತ ಮೊದಲಾದವುಗಳು ಕಲೆ ಎಂದು ಹೆಸರು ಪಡೆದಿವೆ.

ಇತ್ತೀಚಿನ ದಿನಗಳಲ್ಲಿ ಕಲೆಗಳನ್ನು ಲಲಿತಕಲೆ, ಕುಶಲಕಲೆ ಅಥವಾ ಉಪಯುಕ್ತಕಲೆ ಎಂದು ವಿಭಜಿಸುವುದು ಪದ್ಧತಿಯಾಗಿದೆ. ಈ ವಿಭಜನೆಯನ್ವಯ ಸಂಗೀತ, ನೃತ್ಯ, ಚಿತ್ರಕಲೆಗಳು ಲಲಿತಕಲೆಗಳೆಂದೂ ಶಿಲ್ಪವೇ ಮೊದಲಾದವು ಕುಶಲಕಲೆಗಳೆಂದೂ ಕರಯಲ್ಪಡುತ್ತವೆ. ಆನಂದವಷ್ಟೇ ಮುಖ್ಯ ಪ್ರಯೋಜನವಾದ ಸಂಗೀತ, ಕಾವ್ಯ, ಚಿತ್ರಕಲೆಗಳು ಲಲಿತಕಲೆಗಳೆಂದೂ, ಪ್ರತಿಭೆ, ಕಾರ‍್ಯಕೌಶಲವಾಗಿ ಪ್ರಕಟಗೊಂಡು ಜೀವನೋಪಭೋಗ ಸಾಧಕವಾಗಿ ವಿನಿಯೋಗವಾದಾಗ ಕುಶಲಕಲೆಯೆಂದೂ ಭಾವಿಸಬಹುದು. ಕಲೆಗಳು ಅರವತ್ನಾಲ್ಕು ಎಂಬುದಾಗಿ ಸಾಮಾನ್ಯವಾಗಿ ಹಲವು ಗ್ರಂಥಗಳಲ್ಲಿ ಹೇಳಲಾಗಿದೆ.

ಉದ್ದೇಶ:

Ø ಕಲೆ, ಲಲಿತ ಕಲೆಗಳ ಅರ್ಥವನ್ನು ತಿಳಿಸುವುದು.

Ø 64 ಕಲೆಗಳನ್ನು ಗುರುತಿಸುವಂತೆ ಮಾಡುವುದು.

Ø ಸಂಗೀತದ ಅರ್ಥವನ್ನು ಅರಿಯುವಂತೆ ಮಾಡುವುದು.

Ø ಸಂಗೀತ ಮಹತ್ವವನ್ನು ವಿವರಿಸುವುದು.

Ø ಭಾರತೀಯ ಸಂಗೀತ ಪದ್ಧತಿಗಳ ಕುರಿತು ತಿಳುವಳಿಕೆ ನೀಡುವುದು.

Ø ಭಾರತೀಯ ಸಂಗೀತ ಪ್ರಕಾರಗಳನ್ನು ಗುರುತಿಸುವಂತೆ ಮಾಡುವುದು.

 ಅಧ್ಯಯನದಲ್ಲಿ ಅಳವಡಿಸಿರುವ ಅಂಶಗಳು:

ಕಲೆ, ಲಲಿತಕಲೆ, ಸಂಗೀತದ ಅರ್ಥ, ಸಂಗೀತದ ಮಹತ್ವ, ಸಂಗೀತ ಪದ್ಧತಿಗಳು, ಸಂಗೀತ ಪ್ರಕಾರಗಳು.

ಕಲಿಕಾ ಸಾಮಾಗ್ರಿ:

ಚಾರ್ಟ್‌ಗಳು, ಆಡಿಯೋ / ವಿಡಿಯೋ, ಪಿ ಪಿ ಟಿ.

ಕಲಿಕಾ ವಿಧಾನ:

ಹಂತ 1

ಕಲೆಯ ಅರ್ಥ, 64 ಕಲೆಗಳ ಕುರಿತು ಸಂಕ್ಷಿಪ್ತ ನೋಟ, ಚಾರ್ಟ ಮೂಲಕ ಪರಿಚಯಿಸುವದು.

ಹಂತ 2

ಲಲಿತಕಲೆಗಳನ್ನು ಪರಿಚಯಿಸುವುದು. ಸಂಗೀತದ ಅರ್ಥವನ್ನು ವಿವರಿಸುವುದು.

ಹಂತ 3

ಸಂಗೀತದ ಮಹತ್ವ, ಪ್ರಯೋಜನಗಳ ಕರಿತು ವಿವರಣೆ.

ಹಂತ 4

ಭಾರತೀಯ ಸಂಗೀತ ಪದ್ಧತಿಗಳಾದ ಹಿಂದೂಸ್ಥಾನಿ ಹಾಗೂ ಕರ್ನಾಟಕಿ ಪದ್ಧತಿಗಳನ್ನು ಪರಿಚಯಿಸುವುದು.

ಹಂತ 5

ಹಿಂದುಸ್ಥಾನೀ ಮತ್ತು ಕರ್ನಾಟಕೀ ಸಂಗೀತ ಪದ್ಧತಿಗಳಲ್ಲಿನ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ತಿಳಿಸುವುದು.

ಹಂತ 6

ಸಂಗೀತದ ಪ್ರಮುಖ ಪ್ರಕಾರಗಳ ಪರಿಚಯ. ಧ್ರುಪದ್, ಧಮಾರ್, ಖ್ಯಾಲ್, ಠುಮರಿ, ದಾದರಾ, ಭಜನ್ ಇತ್ಯಾದಿ.

ಸ್ವಮೌಲ್ಯಮಾಪನ:

Ø ಕಲೆಯ ಅರ್ಥವನ್ನು ತಿಳಿದಿರುವರೇ?

Ø ಲಲಿತ ಕಲೆಗಳನ್ನು ಹೆಸರಿಸುವರೇ?

Ø ಸಂಗೀತಕ್ಕೆ ವ್ಯಾಖ್ಯೆ ನೀಡಬಲ್ಲರೇ?

Ø ಸಂಗೀತದ ಮಹತ್ವ ಪ್ರಯೋಜನಗಳ ಕುರಿತು ಅರಿತಿರುವರೇ?

Ø ಭಾರತೀಯ ಸಂಗೀತ ಪದ್ಧತಿಗಳನ್ನು ತಿಳಿದಿರುವರೇ?

Ø ಸಂಗೀತ ಪ್ರಕಾರಗಳನ್ನು ಗುರುತಿಸಬಲ್ಲರೇ?

ಘಟಕಾಂತ್ಯದ ಪ್ರಶ್ನೆಗಳು:

Ø ಕಲೆ ಎಂದರೇನು?

Ø ಲಲಿತ ಕಲೆಗಳಾವುವು?

Ø ಸಂಗೀತ ಎಂದರೇನು?

Ø ಸಂಗೀತದ ಮಹತ್ವದ ಕುರಿತು ಬರೆಯಿರಿ.

Ø ಭಾರತೀಯ ಸಂಗೀತ ಪದ್ಧತಿಗಳನ್ನು ಹೆಸರಿಸಿರಿ.

Ø ಹಿಂದುಸ್ತಾನೀ ಮತ್ತು ಕರ್ನಾಟಕ ಪದ್ಧತಿಗಳಲ್ಲಿನ ವ್ಯತ್ಯಾಸಗಳಾವುವು?

Ø ಭಾರತೀಯ ಸಂಗೀತ ಪ್ರಕಾರಗಳಾವುವು?

ಹೆಚ್ಚಿನ ಓದಿಗೆ ಪೂರಕ ಗ್ರಂಥಗಳು:

ü ಸಂಗೀತಶಾಸ್ತ್ರ ದರ್ಪಣ – ಡಾ|| ಎಂ. ಎಸ್. ಸುಂಕಾಪುರ.

ü 64 ಕಲೆಗಳು – ಮ. ಶ್ರೀಧರಮೂರ್ತಿ.

ü ಸಂಗೀತ ವಿಶಾಲದ – ವಸಂತ, ಸಂಪಾದಕ – ಡಾ|| ಲಕ್ಷ್ಮೀನಾರಾಯಣ.

ವಂದೇ ಮಾತರಂ ಗೀತೆ

ಅಧಿವೇಶನ : 04.

ಅವಧಿ : 30 ನಿಮಿಷ ಪೀಠಿಕೆ.

ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಚಳುವಳಿಗಾರರಿಗೆ ಸ್ಪೂರ್ತಿ ಕೊಡುತ್ತಿದ್ದ ಗೀತೆಗಳು ಇಂದಿಗೂ ನಮ್ಮ ಹೃದಯವನ್ನು ತಟ್ಟುತ್ತವೆ. ‘ವಂದೇಮಾತರಂ’, ‘ಜನಗಣಮನ’ ಮತ್ತು ‘ಸಾರೆ ಜಹಾಂಸೆ ಅಚ್ಚಾ’ ಇವುಗಳು ಎಲ್ಲಕ್ಕಿಂತ ಪ್ರಸಿದ್ಧವಾದ ಹಾಡುಗಳು.

ಸ್ವಾತಂತ್ರ್ಯ ಹೋರಾಟದ ವೇಳೆ ರಣ ಕಹಳೆಯನ್ನೇ ಮೊಳಗಿಸಿದ ಈ ಹಾಡು, ಪ್ರಚಂಡ ಜೀವವಾಹಿನಿಯಾಗಿ ಜನರ ಆತ್ಮಶಕ್ತಿಯನ್ನು ಬಡಿದೆಬ್ಬಿಸಿ, ಸಾಮೂಹಿಕ ಕಾರ‍್ಯಾಚರಣೆಗೆ ಪ್ರಚೋದನೆ ಕೊಟ್ಟ ಪವಾಡಗೀತೆ. ಬಂಕಿಮ್ ಚಂದ್ರ ಚಟರ್ಜಿಯವರು ಬರೆದ ಈ ಹಾಡನ್ನು ರಾಷ್ಟ್ರಮಂತ್ರದಂತೆ ಪಠಿಸುತ್ತ ಅದೆಷ್ಟೋ ದೇಶಭಕ್ತರು ಸೆರೆಮನೆಗೆ ತಳ್ಳಿಸಿಕೊಂಡರು. ಲಾಠಿ ಏಟಿನ ರುಚಿ ಕಂಡರು, ಗುಂಡೇಟು ತಿಂದರು, ನೇಣಿಗೆ ಕತ್ತೊಡ್ಡಿದರು.

ಊರೂರು, ಕೇಕೇರಿಗಳಲ್ಲಿ ಪ್ರತಿಧ್ವನಿಸಿ ಸಮಗ್ರ ರಾಷ್ಟ್ರವನ್ನು ವ್ಯಾಪಿಸಿದ್ದ ಈ ಹಾಡಿನ ತಿರುಳಿನಲ್ಲಿರುವ ಐಕ್ಯಭಾವ, ದೇಶಭಕ್ತಿ ಅನನ್ಯವಾದದ್ದು.

ಉದ್ದೇಶ:

Ø ಸ್ಪಷ್ಟವಾದ ಉಚ್ಚಾರಣೆಯೊಂದಿಗೆ ‘ ವಂದೇಮಾತರಮ್ ಗೀತೆಯನ್ನು ಹಾಡುವಂತೆ ಮಾಡುವುದು.

Ø ರಾಷ್ಟ್ರಾಭಿಮಾನವನ್ನು ಬೆಳೆಸುವುದು.

Ø ವಂದೇ ಮಾತರಂ ಗೀತೆಯ ಮಹತ್ವನ್ನು ಪರಿಚಯಿಸುವುದು.

Ø ವಂದೇ ಮಾತರಂ ಪ್ರತಿಯೊಬ್ಬರಲ್ಲೂ ಕಂಠಸ್ಥವಾಗುವಂತೆ ಮಾಡುವುದು.

Ø ವಂದೇ ಮಾತರಂ ಗೀತೆಯ ಇತಿಹಾಸವನ್ನು ತಿಳಿಯುವಂತೆ ಮಾಡುವುದು.

Ø ವಂದೇ ಮಾತರಂ ಗೀತೆಗೂ ಇತರ ದೇಶಭಕ್ತಿ ಗೀತೆಗಳಿಗೂ ಇರುವ ವ್ಯತ್ಯಾಸದ ಕುರಿತು ತಿಳಿಸುವುದು.

 ಅಧ್ಯಯನದಲ್ಲಿ ಅಳವಡಿಸಿದ ಹೊಸ ಅಂಶಗಳು:

ವಂದೇ ಮಾತರಂ ಗೀತೆಯ ಮಹತ್ವ , ನಡೆದು ಬಂದ ದಾರಿ.

ಕಲಿಕಾ ಸಾಮಗ್ರಿ:

ಭಾವಚಿತ್ರ, ಚಾರ್ಟ, ಪಿ ಪಿ ಟಿ ಗಳು, ಧ್ವನಿಮುದ್ರಿಕೆಗಳು, ಪೂರಕ ವಾದ್ಯಗಳು.

ಕಲಿಕಾ ವಿಧಾನ:

ವಂದೇ ಮಾತರಂ ಗೀತೆಯ ರಚನೆ, ಈ ತನಕ ಅದು ಪಡೆದಿರುವ ಮಹತ್ವದ ಸ್ಥಾನದ ಕುರಿತು ವಿವರಿಸುವುದು. ಪ್ರಾತ್ಯಕ್ಷಿಕೆ, ವಿಡಿಯೋಗಳ ಪ್ರದರ್ಶನ, ಗಾಯನ.

ಹಂತ 1

ವಂದೇ ಮಾತರಂ ಗೀತೆಯ ರಚನೆಯ ಕುರಿತು (ಶಾಸ್ತ್ರ)

ಸುಮಾರು 160 ವರ್ಷಗಳ ಹಿಂದೆ ಭಾರತದಲ್ಲಿ ಒಂದು ಏಕತೆಯ ಅಲೆ ಎದ್ದಿತ್ತು. ಬ್ರಿಟಿಷರ ವಿರುದ್ದ ಸಿಡಿದೆದ್ದ ಭಾರತೀಯರ ಮೊದಲ ಸಂಗ್ರಾಮದ ಕರೆ ದೇಶವಿಡಿ ಮಿಂಚು ಹರಿಸಿತ್ತು. 1857ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಹಲವು ಮಹಾವೀರರನ್ನು ಬಲಿ ಪಡೆಯಿತು. ಈ ಸಂಗ್ರಾಮದ ಸಮಯದಲ್ಲೇ ಮಹಾಕವಿ ಬಂಕಿಮಚಂದ್ರರು ಭಾರತದ ಒಗ್ಗಟ್ಟಿಗೊಂದು ದಿವ್ಯಮಂತ್ರಬೇಕೆಂದು ಕನಸು ಕಂಡರು. ನಮ್ಮಲ್ಲಿ ಒಗ್ಗಟ್ಟು ಇರಲಿಲ್ಲ. ನಮ್ಮವರನ್ನು ಒಂದುಗೂಡಿಸಲು ಒಂದು ಆದರ್ಶ ಇರಲಿಲ್ಲ. ಅದಕ್ಕೆ ಅವರು ಸೋತರು ಎಂದು ಬಂಕಿಮಚಂದ್ರರು ಹಗಲಿರುಳು ಚಿಂತಿಸುತ್ತಿದ್ದರು. ಭಾರತೀಯರೆಲ್ಲರನ್ನು ಒಂದಾಗಿಸುವ ಮಾಯಾವಿ ಮಂತ್ರಬೇಕೆಂದು ಕನಸು ಕಾಣುತ್ತಿದ್ದರು.

ಬಂಕಿಮಚಂದ್ರರು 1872 ರಲ್ಲಿ ‘ಬಂಗದರ್ಶನ’ ಎಂಬ ಪತ್ರಿಕೆ ಆರಂಭಿಸಿದರು. ಅವರ ಹೆಚ್ಚಿನ ಕಥೆಗಳು, ಕಾದಂಬರಿಗಳು, ಸಾಮಾಜಿಕ ಟೀಕೆ, ಧಾರ್ಮಿಕ ವಿವೇಚನ, ತಾತ್ವಿಕ ಚರ್ಚೆಗಳು ಬೆಳಕು ಕಂಡದ್ದು ಇದೇ ಪತ್ರಿಕೆಯಲ್ಲಿ, ಅಲ್ಲದೇ ಈ ಪತ್ರಿಕೆ ಬಂಗಾಳದ ಸಾಹಿತ್ಯದಲ್ಲಿ ಹೊಸ ಅಲೆಯನ್ನು ಹುಟ್ಟಿಸಿತ್ತು. ರವೀಂದ್ರನಾಥ ಟಾಗೋರರು ಬಂಗದರ್ಶನವನ್ನು ಪ್ರಕೃತಿಯ ಜಡತೆ ನಿವಾರಿಸಿ ಹೊಸ ಚೈತನ್ಯ ತುಂಬುವ ಆಷಾಡದ ಮೊದಲ ಮಳೆಗೆ ಹೋಲಿಸಿದ್ದಾರೆ.

1876 ರ ಒಂದು ರಾತ್ರಿ ಅವರ ಪತ್ರಿಕೆ ಅಚ್ಚಿಗೆ ಹೋಗಲು ತಡವಾಗಿತ್ತು. ಆದರೆ ಎರಡು ಪುಟಗಳನ್ನು ತುಂಬಿಸಲು ಇನ್ನೂ ಬಾಕಿ ಇದೆ ಎಂದು ಮ್ಯಾನೇಜರ್ ಕಮ್ ಪ್ರೂಫ್‍ರೀಡರ್ ಹೇಳಿದ ’ಪುಟ ಈಗ ಕೊಡುತ್ತೇನೆ ತೆಡಿ’ ಎಂದು ಹೇಳಿದ ಬಂಕಿಮಚಂದ್ರ ಮೇಜಿನ ಮುಂದೆ ಕುಳಿತು ಬರೆಯತೊಡಗಿದರು. ಕೇವಲ 20 ನಿಮಿಷಗಳ ಬಳಿಕ ಮ್ಯಾನೇಜರ್ ಮರಳಿ ಬಂದಾಗ ಒಂದು ಕವಿತೆ ತಯಾರಾಗಿತ್ತು. ಬಂಗಾಳಿ ಮತ್ತು ಸಂಸ್ಕೃತದ ಮಿಶ್ರ ಭಾಷೆಯ ಕವಿತೆಯನ್ನು ನೋಡಿ ಆತ ದಂಗಾದ, ಆಗಿನ್ನೂ ಬಂಗಾಳದ ಓದುಗರಿಗೆ ಪರಿಚಿತವಾಗಿರದ ಶೈಲಿ. ‘ಸ್ವಾಮಿ, ಇದನ್ನು ಸ್ವಲ್ಪ ತಿದ್ದಿ ಕೊಡಿ ‘ಎಂದ’. ಇದರ ಒಂದೂಶಬ್ದಬದಲಾಯಿಸುವ ಅಧಿಕಾರನನಗಿಲ್ಲ. 25 ವರ್ಷಗಳಲ್ಲಿ ಪೂರ್ತಿಬ೦ಗಳವೇ ಈ ಗೀತೆಯನ್ನು ಹಾಡಿ ಮೈಮರೆಯುತ್ತದೆ ಎಂದು ಬಂಕಿಮಚಂದ್ರ ಹೇಳಿದರು. ಕವಿತೆಹಾಗಿಯೇ ಅಚ್ಚಿಗೆ ಹೋಯಿತು. ಇದೇ ‘ವಂದೇಮಾತರಂ’ ಗೀತೆ.

ಹಂತ 2

ವಂದೇ ಮಾತರಂ ಗೀತೆ ನಡೆದು ಬಂದ ದಾರಿ (ಶಾಸ್ತ್ರ).

ಭಾರತ ಮಾತೆಯ ದಿವ್ಯ ಸೌಂದರ‍್ಯದ ವರ್ಣನೆ ವಂದೇ ಮಾತರಂ, ಭಾರತೀಯರಿಗೆಲ್ಲ ಸುಲಭವಾಗಿ ಅರ್ಥವಾಗುವಂತೆ ಸರಳ, ಸಂಸ್ಕೃತ, ಶಬ್ದಗಳ ಭಾಷೆ, ಇದರಲ್ಲಿದೆ. ಬಂಕಿಮಚಂದ್ರರು ‘ಆನಂದಮಠ’ ಕಾದಂಬರಿ ಬರೆದರು. ಈ ಕಾದಂಬರಿ ‘ಬಂಗದರ್ಶನ’ ಪತ್ರಿಕೆಯಲ್ಲಿ ಧಾರವಾಹಿಯಾಗಿ ಬಂತು. ವಿದೇಶೀ ದಾಸ್ಯದ ವಿರುದ್ದ ದೇಶಪ್ರೇಮಿಸನ್ಯಾಸಿಗಳು ನಡೆಸುವಹೋರಾಟದ ಕಥೆ ಇದು. ಕಾದಂಬರಿಯಲ್ಲಿ ಸನ್ಯಾಸಿಗಳು ಸ್ಫೂರ್ತಿಗಾಗಿ ವಂದೇಮಾತರಂ ಹಾಡುತ್ತಾರೆ. ಭಾರತಮಾತೆಯನ್ನು ರಾಕ್ಷಸಸಂಹಾರಿ ದುರ್ಗೆಯಾಗಿ ಪೂಜಿಸುತ್ತಾರೆ.

‘ಆನಂದಮಠ’ ಕಾದಂಬರಿ ಸಾಕಷ್ಟು ಜನಪ್ರಿಯವಾಯಿತು. ವಂದೇಮಾತರಂ ಬಂಗಾಳದ ದೇಶಪ್ರೇಮಿಗಳ ಮೆಚ್ಚಿನ ಮಂತ್ರವಾಯಿತು. ವಿದ್ಯಾರ್ಥಿಗಳು, ಯುವಕರು ಭೇಟಿಯಾದಾಗ ‘ವಂದೇಮಾತರಂ’ ಎಂದು ಪರಸ್ಪರ ವಂದಿಸುತ್ತಿದ್ದರು.

1894 ರಲ್ಲಿ ಬಂಕಿಮ್ ಚಂದ್ರರು ನಿಧನರಾದರು. 1896 ರ ಕೋಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ರಾಷ್ಟ್ರದ ಗಮನಕ್ಕೆ ಬಂತು. ಆಗಿನ್ನೂ ಬೆಳಕಿಗೆ ಬರುತ್ತಿದ್ದ ಯುವ ಕವಿ ರವೀಂದ್ರನಾಥ ಠಾಗೋರ ‘ವಂದೇಮಾತರ’ ಗೀತೆಗೆ ಮಧುರ ರಾಗ ಸಂಯೋಜನೆಮಾಡಿ ಹಾಡಿದರು. ತುಂಬಿದ ಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ರೋಮಾಂಚನದ ಅನುಭವವಾಗಿತ್ತು.

ಅಗಸ್ಟ್ 07, 1905ರಂದು ಕೋಲ್ಕತ್ತೆಯ ವಿವಿಧ ಧರ್ಮಗಳ ವಿದ್ಯಾರ್ಥಿಗಳು ಬ್ರಿಟಿಷ್ ಹುಕುಮಗಳನ್ನು ಧಿಕ್ಕರಿಸಿ ಟೌನ್ ಹಾಲ್‌ಗೆ ಮೆರವಣಿಗೆ ಹೊರಟಿದ್ದರು. ಅವರೆಲ್ಲರ ಬಾಯಲ್ಲಿ ಒಂದೇ ಮಂತ್ರ – ವಂದೇ ಮಾತರಂ. ಟೌನ್ ಹಾಲಿನ ಮುಂದೆ ನೆರೆದ ಸಭೆಯಲ್ಲಿ ಯಾರೋ ವಂದೇಮಾತರಂ ಹಾಡಿದರು. ಅದರ ಪ್ರತಿಧ್ವನಿ ಬಂಗಾಳದ ಗಡಿಗಳನ್ನು ದಾಟಿತು. ಪ್ರತಿಯೊಬ್ಬ ದೇಶಪ್ರೇಮಿಯ ಬಾಯಲ್ಲಿ ಒಂದೇ, ವಂದೇ ಮಾತರಂ ಬಂಕಿಮಚಂದ್ರರ ಭವಿಷ್ಯವಾಣಿ ಕೊನೆಗೂ ನಿಜವಾಗಿತ್ತು.

1905ರ ಬನಾರಸ ಕಾಂಗ್ರೆಸ್ ಅಧಿವೇಶನದಲ್ಲಿ ಟಾಗೋರರ ಸೋದರ ಸೊಸೆ ಸರಳಾದೇವಿ ಚೌಧುರಾಣಿ ಈ ಗೀತೆ ಹಾಡಿದರು. ಆ ದಿನದಿಂದ ವಂದೇ ಮಾತರಂ ಪ್ರತಿಯೊಬ್ಬ ಸ್ವಾತಂತ್ರ್ಯ ಪ್ರೇಮಿಯ ಮಂತ್ರವಾಯಿತು.

ಬಂಕಿಮಚಂದ್ರ ಚಟರ್ಜಿ

ಹಂತ 3

ವಂದೇ ಮಾತರಂ ಗೀತೆ                                     ಭಾವಾರ್ಥ

ವಂದೇ ಮಾತರಂ                                   ಅಮ್ಮಾ ನಿನಗೆ ಪ್ರಣಾಮ.

ಸುಜಲಾಂ ಸುಫಲಾಂ                               ಸಮೃದ್ದ, ನೀರು, ಫಲವತ್ತಾದ ನೆಲ

ಮಲಯಜ ಶೀತಲಾಂ                               ದಕ್ಷಿಣ ಪರ್ವತಗಳ ತಂಗಾಳಿ

ಸಸ್ಯಶ್ಯಾಮಲಾಂ ಮಾತರಮ್ | |                ವನ ಸಂಪತ್ತಿನಿಂದ ಹಸುರಾದ.

ನನ್ನಮ್ಮ ನಿನಗಿದೋ ವಂದನೆ.

ಶುಭ್ರಜ್ಯೋತ್ಸಾಂ

ಪುಲಕಿತ ಯಾಮಿನೀಂ                                       ಶುಭ್ರ ಬೆಳದಿಂಗಳಿನಿಂದ ಮಿಂದು ಮಿನುಗುವವಳೂ

ಪುಲ್ಲಕುಸುಮಿತ                                                ಹೂಚಿಗುರು ಅರಳಿದ ತರುಲತೆಗಳಿಂದ

ದ್ರುಮದಲ ಶೋಭಿನೀಂ                        ಅಲಂಕೃತಳೂ, ನಗುಮೊಗದ ಸವಿಮಾತಿನ

ಸುಹಾಸಿನೀಂ                                  ಸುಖದಾತೆ, ವರದಾತೆ ಆಗಿರುವ ತಾಯೇ

ಸುಮಧುರ ಭಾಷಿಣೀಂ                                       ನಿನಗಿದೋ ವಂದನೆ.

ಸುಖದಾಂ ವರದಾಂ ಮಾತರಮ್ | |

ಕೋಟಿ ಕೋಟಿ ಕಂಠ                               ಕೋಟಿ ಕೋಟಿ ಕಂಠಗಳಿಂದ ಮಂಜುಳವಾಗಿ

ಕಲಕಲ ನಿನಾದ ಕರಾಲೇ                          ಹಾಡುವವಳೂ, ಕೋಟಿ ಕೋಟಿ ಭುಜಗಳಿಂದ

ಕೋಟಿ ಕೋಟಿ ಭುಜೈರ್ಧೃತ                      ಶಸ್ತ್ರಚಾಲನೆ ಮಾಡುವವಳೂ ಆದ ಅಮ್ಮಾ!

ಖರಕರ ವಾಲೇ                                      ನಿನ್ನನ್ನು ಅಬಲೆ ಎನ್ನುವವರು ಯಾರು?

ಅಬಲಾ ಕೇನೂ ಮಾ ಎತೊ ಬಲೇ            ಬಹುವಿಧ ಶಕ್ತಿಶಾಲಿನಿ ಅಭಯದಾಯಿನಿ,

ಬಹುಬಲ ಧಾರಿಣೀಂ                                ವೈರಿಕುಲ ಧ್ವಂಸಿನಿ ಆಗಿರುವ

ನಮಾಮಿ ತಾರಿಣೀಂ                                ಹೇ ಮಾತೆಯೇ ನಿನಗಿದೋ ವಂದನೆ.

ರಿಪುದಲ ವಾರಿಣೀಂ ಮಾತರಮ್ | |

ತುಮಿ ವಿದ್ಯಾ ತುಮಿ ಧರ್ಮ

ತುಮಿ ಹೃದಿ ತುಮಿ ಮರ್ಮ                    ನೀನು ವಿದ್ಯೆ, ನೀನು ಧರ್ಮ, ನೀನು ಹೃದಯ

ತ್ವಂಹಿ ಪ್ರಾಣಾ ಶರೀರೇ                        ನೀನು ಆತ್ಮ, ನಮ್ಮ ಶರೀರದಲ್ಲಾಡುವ ಪ್ರಾಣವೂ

ಬಾಹುತೇ ತುಮಿ ಮಾ ಶಕ್ತಿ                    ನೀನೆ ನಮ್ಮ ಬಾಹುಗಳಲ್ಲಿ ಸ್ಪುರಿಸುವ ಶಕ್ತಿ

ಹೃದಯ ತುಮಿ ಮಾ ಭಕ್ತಿ                      ನಮ್ಮ ಹೃದಯಗಳಲ್ಲಿ ಸ್ಪಂದಿಸುವ ಭಕ್ತಿ

ತೋಮಾರ ಈ ಪ್ರತಿಮಾ ಗಡಿ                         ನಮ್ಮ ನಾಡಿನ ಗುಡಿಗುಡಿಗಳಲ್ಲೂ ಪೂಜಿಸಲ್ಪಡುವ

ಮಂದಿರೇ ಮಂದಿರೇ |                                 ಆರಾಧ್ಯಮೂರ್ತಿ ನೀನು,

ಶೃಂಹಿ ದುರ್ಗಾ ದಶಪ್ರಹರಣ ಧಾರಿಣಿ          ಹತ್ತು ಕೈಗಳಿಂದ ಶಸ್ತ್ರಚಾಲನೆ ಮಾಡುವ ದುರ್ಗೆ,

ಕಮಲಾ ಕಮಲದಲ ವಿಹಾರಿಣಿ                ಕಮಲದಲಗಳ ಮೇಲೆ ವಿಹರಿಸುವ ಲಕ್ಷ್ಮಿ,

ವಾಣಿ ವಿದ್ಯಾದಾಯಿನಿ                          ವಿದ್ಯಾರ್ಥಿ ದೇವತೆ, ಸರಸ್ವತಿ ನಿನಗೆ ನಮಾಮಿ ತ್ವಾಂ ನಮಾಮಿ ಕಮಲಾಂ                      ವಂದಿಸುವೆ ನಾನು

ಅಮಲಾಂ ಅತುಲಾಂ

ಸುಜಲಾಂ ಸುಫಲಾಂ ಮಾತರಮ್ | |

 ಶ್ಯಾಮಲಾಂ, ಸರಲಾಂ, ಸುಸ್ಥಿತಾಂ           ಕೃಷ್ಣವರ್ಣ, ಸರಳೆ, ಮಂದಹಾಸದ ಆಭರಣ

ಭೂಷಿತಾಂ ಧರಣೀಂ                           ಧರಿಸಿದವಳು, ಭೂಮಿತಾಯಿ ಸಕಲ ಸಮೃದ್ಧಿಗೂ

ಭರಣೀಂ ಮಾತರಮ್ |                        ಕಾರಣಗಳಾಗಿರುವ ಹೇಶಾಯೇ ನಿನಗಿದೋ ವಂದನೆ.

ಹಂತ – 4

ವಂದೇ ಮಾತರಮ್ ಗೀತೆಯನ್ನು ಗಾಯನ ಮಾಡಿ ತೋರಿಸುವುದು.

ಹಂತ – 5

ವಂದೇಮಾತರಮ್ ಗೀತೆಯನ್ನು ವಿದ್ಯಾರ್ಥಿಗಳಿಂದ ಹಾಡಿಸುವುದು.

ಹಂತ – 6

ವಂದೇಮಾತರಮ್ ಗೀತೆ ಕುರಿತ ಧ್ವನಿಮುದ್ರಿಕೆ / ವಿಡಿಯೋಗಳನ್ನು ಪ್ರದರ್ಶಿಸುವುದು.

ಸ್ವ ಮೌಲ್ಯಮಾಪನ:

Ø ವಂದೇ ಮಾತರಂ ಗೀತೆಯ ರಚನಾಕಾರರ ಬಗ್ಗೆ ತಿಳಿದಿರುವರೇ?

Ø ವಂದೇ ಮಾತರಂ ಗೀತೆಯನ್ನು ಹಾಡಲು ತಿಳಿದಿರುವರೇ? (ಸ್ವರಲಯ, ಭಾವಬದ್ಧವಾಗಿ)

Ø ವಂದೇ ಮಾತರಂ ಗೀತೆಯ ಮಹತ್ವವನ್ನು ಅರಿತಿರುವರೇ?

Ø ವಂದೇ ಮಾತರಂ ಗೀತೆಯ ರಚನೆಯ ಹಿನ್ನೆಲೆ ಅರಿತಿರುವರೇ?

Ø ವಂದೇ ಮಾತರಂ ಗೀತೆಯ ಭಾವಾರ್ಥ ತಿಳಿದಿರುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ವಂದೇ ಮಾತರಂ ಗೀತೆಯ ರಚನಾಕಾರರು ಯಾರು?

Ø ದೇಶಭಕ್ತಿಗೀತೆಗಳ ಮಹತ್ವವೇನು?

Ø ವಂದೇ ಮಾತರಂ ಗೀತೆ ಯಾವ ಕಾದಂಬರಿಯಲ್ಲಿ ಕಾಣಸಿಗುತ್ತದೆ?

Ø ವಂದೇ ಮಾತರಂ ಗೀತೆಯ ಸಂದೇಶವೇನು?

ಪೂರ್ಣಗೊಳಿಸಿ

ಶುಭ್ರಜ್ಯೋತ್ಸ್ನಾಂ. . . . . . . . . . . . . ಮಾತರಮ್ | |

ಚಟುವಟಿಕೆ

ವಂದೇ ಮಾತರಂ ಗೀತೆಯನ್ನು ಸ್ಪಷ್ಟವಾಗಿ ಭಾವಾರ್ಥದೊಂದಿಗೆ ಬರೆದು ಈ ಗೀತೆಯ ರಚನಾಕಾರರ ಪರಿಚಯ ಬರೆಯಿರಿ.

ಆಕರ ಗ್ರಂಥಗಳು:

ಆಗಸ್ಟ್ 16 , 2017 ರ ತರಂಗ ಮಾಸ ಪತ್ರಿಕೆಯಲ್ಲಿ ಬಂದ ಶ್ರೀ ಟಿ. ಜಿ. ಶೆಟ್ಟಿಯವರ ಲೇಖನ.

ಅಧಿವೇಶನ: 94 (1)                                                  ಅವಧಿ: 30 ನಿಮಿಷ

ಧ್ವಜಗೀತೆ:

ಝಂಡಾ ಊಂಚಾ ರಹೇ ಹಮಾರಾ

ವಿಜಯೀ ವಿಶ್ವ ತಿರಂಗಾ ಪ್ಯಾರಾ | |

ಸದಾ ಶಕ್ತಿ ಸರ್‌ಸಾನೇವಾಲಾ

ಪ್ರೇಮ್‌ಸುಧಾ ಬರ್‌ಸಾನೇವಾಲಾ

ವೀರೋಂಕೋ ಹರ್ಷಾನೇವಾಲಾ

ಮಾತೃಭೂಮಿ ಕಾ ತನ್‌ಮನ್ ಸಾರಾ | |

ಸ್ವಂತಂತ್ರತಾ ಕೇ ಭೀಷಣ್ ರಣ್ ಮೇ

ರಖ್ಕರ್ ಜೋಶ್ ಬಡೆ ಕ್ಷಣ್ – ಕ್ಷಣ್ ಮೇ

ಕಾಂಪೆ ಶತ್ರು ದೇಖಕರ್ ಮನ್ ಮೇ

ಮಿಟ್ ಜಾಯೇ ಭಯ್ ಸಂಕಟ್ ಸಾರಾ | |

ಇಸ್ ಝಂಡೇ ಕೇ ನೀಚೆ ನಿರ್ಭಯ್

ಹೋ ಸ್ವರಾಜ್ಯ ಜನತಾ ಕಾ ನಿಶ್ಚಯ

ಬೋಲೋ ಭಾರತ್ ಮಾತಾ ಕೀ ಜಯ್

ಸ್ವತಂತ್ರತಾ ಹೋ ಧ್ಯೇಯ್ ಹಮಾರಾ

ಆವೋ ಪ್ಯಾರೇ ವೀರೋ ಆವೋ

ದೇಶ್ – ಧರ್ಮ್ ಪರ್ ಬಲಿ ಬಲಿ ಜಾವೋ

ಏಕ್ ಸಾಥ್ ಸಬ್ ಮಿಲ್ಕರ್ ಗಾವೋ

ಪ್ಯಾರಾ ಭಾರತ್ ದೇಶ್ ಹಮಾರಾ | |

ಶಾನ್ ನ ಇಸ್ಕೀ ಜಾನೇ ಪಾಯೇ

ಚಾಹೇ ಜಾನ್ ಭಲೇ ಹೀ ಜಾಯೇ

ವಿಶ್ವ ವಿಜಯ್ ಕರ್‌ಕೇ ದಿಖಲಾಯೇ

ತಬ್ ಹೋವೇ ಪ್ರಣ್ ಪೂರ್ಣ್ ಹಮಾರಾ | |

ಧ್ವಜಗೀತೆಯ ಅರ್ಥ:

ನಮ್ಮ ಧ್ವಜವು ಸದಾ ಎತ್ತರದಲ್ಲಿ ಹಾರುತಿರಲಿ

ನಮ್ಮ ಪ್ರೀತಿಯ ತ್ರಿವರ್ಣ ಧ್ವಜವು ವಿಶ್ವವನ್ನೇ ಜಯಿಸಬಲ್ಲದು | |

ಸದಾ ಶಕ್ತಿಯನ್ನು ನೀಡುವಂತಹ

ಪ್ರೇಮ ಸುಧೆಯನ್ನೆ ಹರಿಸುವಂತಹ

ವೀರರಿಗೆ ಸಂತೋಷವನ್ನು ನೀಡುವಂತಹ ಈ ಧ್ವಜವು

ಮಾತೃಭೂಮಿಯ ತನುಮನ ಎಲ್ಲವೂ ಆಗಿದೆ |

ಸ್ವಾತಂತ್ರದ ಭೀಷಣ ಹೋರಾಟದಲ್ಲಿ

ಕ್ಷಣಕ್ಷಣವೂ ಉತ್ಸಾಹದಿಂದ ಮುನ್ನಡೆಯುವ,

ಶತ್ರುವು ನಮ್ಮನ್ನು ನೋಡಿ ಥರ ಥರ ನಡುಗಲಿ,

ನಮ್ಮ ಭಯ ಸಂಕಟಗಳೆಲ್ಲ ದೂರವಾಗಲಿ.

ಈ ಧ್ವಜದಡಿಯಲ್ಲಿ ನಿರ್ಭಯವಾಗಿರಲಿ

ನಮ್ಮ ಸ್ವರಾಜ್ಯ, ಇದು ಜನರ ನಿಶ್ವಯ,

ಭಾರತ ಮಾತೆಗೆ ಜಯವೆನ್ನಿ

ಸ್ವಾತಂತ್ರ್ಯವೇ ನಮ್ಮ ಧ್ಯೇಯವಾಗಲಿ ॥

ಬನ್ನಿ ಪ್ರೀತಿಯ ವೀರರೆ ಬನ್ನಿ

ದೇಶ – ಧರ್ಮಗಳಿಗಾಗಿ ನಮ್ಮನ್ನು ಅರ್ಪಿಸೋಣ

ಒಂದಾಗಿ ಎಲ್ಲರೂ ಒಟ್ಟಾಗಿ ಹಾಡಿ ಪ್ರೀ

ತಿಯ ಭಾರತ ದೇಶ ನಮ್ಮದು | |

ಇದರ ಗೌರವವು ಎಂದೂ ಕುಂದದಿರಲಿ

ನಮ್ಮ ಜೀವವೇ ಹೋದರೂ ಸರಿಯೇ

ವಿಶ್ವವನ್ನು ಜಯಿಸಿ ತೋರಿಸೋಣ

ಆಗ ನಮ್ಮ ಧ್ಯೇಯವು / ಪಣವು ಪೂರ್ಣವಾದಂತೆ.

ಗ  s  ಗ  s |   ರಿ  s  ಸ ನಿ | ಸ ಗ  s ರಿ |  ಪ  ಮ ಗ s

ಝಂ s ಡಾ s | ಊಂ s ಚಾ s | ರ ಹೇ s ಹ | ಮಾ s ರಾ s

ಗ ಗ  ಗ  s | ರಿ s ಸ ನಿ |  ಸ  s ಗ ರಿ | ಪ  ಮ ಗ  s

ವಿ ಜ ಯ s | ವಿ s ಶ್ವ ತಿ | ರಂ s ಗಾ s | ಪ್ಯಾ s ರಾ s

ಸ ಸ  s ಪ | s ಪ ಪ ಪ |  ಪ  s ಪ s | ಮ ದ  ಪ s

ಸ ದಾ s ಶ | s ಕ್ತಿ ಬ ರ್ | ಸಾ s ನೆ s | ವಾ s ಲಾ s

ಮ  s ಮ ಮ | ಮ s ಮ ಮ | ಪ ದ ಪ ಮ |  ಗ ರಿ ಗ  s

ಪ್ರೇ s ಮ್ ಸು | ಧಾ s ಭ ರ್ | ಸಾ s ನೆ  s  | ವಾ s ಲಾ s

ಗ  s   ಗ  s |   ಗ  s  ಗ ಸ | ಸ  ರಿ ರಿ ಗ | ರಿ  s ಸ ಸ

ವೀ s ರೋ s | ಕೋ s ಹ ರ್ | ಪಾ s ನೆ s | ವಾ s ಲಾ s

 ಗ   s ಗ   ಗ | s  ಗ  ಗ ಸ | ಸ ರಿ   ರಿ  ಗ |  ರಿ  s ಸ  ಸ

ಮಾ s ತೃ ಭೂ | s ಮಿ ಕಾ s | ತ ನ್ ಮ ನ್ | ಸಾ s ರಾ s

ಸ್ವ – ಮೌಲ್ಯಮಾಪನ:

Ø ಧ್ವಜಗೀತೆಯನ್ನು ರಾಗ ತಾಳ ಬದ್ಧವಾಗಿ ಹಾಡುತ್ತಿರುವರೆ?

Ø ಅರ್ಥವನ್ನು ತಿಳಿದಿದ್ದಾರೆಯೇ?

Ø ಸರಿಯಾದ ಭಂಗಿಯಲ್ಲಿ ನಿಂತು ಹಾಡುತ್ತಿದ್ದಾರೆಯೇ?

Ø ಉಚ್ಚಾರಣೆ ಸರಿಯಾಗಿದೆಯೇ?

Ø ರಚನಾಕಾರರ ಕುರಿತು ತಿಳಿದಿರುವರೇ?

Ø ದೇಶಭಕ್ತಿಯ ಭಾವನೆಯನ್ನು ಹೊಂದಿದ್ದಾರೆಯೇ?

ಘಟಕಾಂತ್ಯದ ಪ್ರಶ್ನೆಗಳು:

  1. ಧ್ವಜಗೀತೆಯರಚನಾಕಾರರು _______________.
  2. ಈ ಗೀತೆಯನ್ನು ಧ್ವಜಗೀತೆಯಾಗಿ ______________ ಇಸವಿಯಲ್ಲಿ ಅಂಗೀಕರಿಸಲಾಯಿತು.
  3. ಧ್ವಜಗೀತೆಯಅರ್ಥವನ್ನು ಬರೆಯಿರಿ?

(ಪಿಂಗಳಿ ವೆಂಕಯ್ಯ)

ನಿಮಗಿದು ಗೊತ್ತೇ?

ನಮ್ಮ ರಾಷ್ಟ್ರಧ್ವಜದ ವಿನ್ಯಾಸವನ್ನು ಮಾಡಿದವರು ಪಿಂಗಳೆವೆಂಕಯ್ಯನವರು (1876 – 1963), ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು ಆಂಧ್ರಪ್ರದೇಶದ ಮಚಲಿಪಟ್ಟಣದವರು. ಕೊಲಂಬೊದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ಭೂಗೋಳ ಮತ್ತು ಕೃಷಿ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಸಹ ಪಡೆದಿದ್ದರು.

ವೈಷ್ಣವಜನತೋ

ಅಧಿವೇಶನ: 4 (2)

ಅವಧಿ: 30 ನಿಮಿಷಗಳು

ಪೀಠಿಕೆ: 15ನೇ ಶತಮಾನದದಲಿ ನರಸಿಂಹ ಮೆಹ್ತಾ ರವರು ಈ ಭಜನ್‌ನ್ನು ರಚಿಸಿದರು. ಈ ಭಜನ್ ಗಾಂಧೀಜಿ ಅವರ ನಿತ್ಯದ ಪ್ರಾರ್ಥನೆಯಾಗಿತ್ತು.

‘ವೈಷ್ಣವ’ ಜನತೋ ಅತ್ಯಂತ ಪ್ರಸಿದ್ಧ ಭಜನ್‌ಗಳಲ್ಲಿ ಒಂದು. ವಿಶೇಷವೆಂದರೆ ಗಾಂಧೀಜಿಯವರ ಅತ್ಯಂತ ಪ್ರಿಯವಾದ ಭಜನ್ ಇದು. ತತ್ವವನ್ನೊಳಗೊಂಡ ಈ ಭಜನ್‌ನ್ನು ದೇಶದ ಅನೇಕ ಗಾಯಕ ಗಾಯಕಿಯರು ಹಾಡಿದ್ದಾರೆ. ಆಮೀರ್‌ಬಾಯಿ ಕರ್ನಾಟಕಿ ಮತ್ತು ಲತಾಮಂಗೇಶ್ಕರ್ ಹಾಡಿ ಈ ಭಜನ್ ಹೆಚ್ಚು ಜನಪ್ರಿಯಗೊಳಿಸಿದರು. ಗುಜರಾತಿ ಭಾಷೆಯಲ್ಲಿ ರಚಿತವಾಗಿರುವ ಈ ಭಜನ್‌ನಲ್ಲಿ ಮನುಷ್ಯನ ಜೀವನ ಮೌಲ್ಯಗಳ ಬಗ್ಗೆ ತಿಳಿಸುವ ಸಂದೇಶಗಳಿವೆ.

ಉದ್ದೇಶ:

Ø ತತ್ವ ತಿಳಿಸುವುದು.

Ø ಹಿಂದಿ ಪದಗಳ ಅರ್ಥ ತಿಳಿಯುವುದು.

Ø ಭಜನ್‌ಗಳ ಪ್ರಾಮುಖ್ಯತೆಯನ್ನು ತಿಳಿಸುವುದು.

Ø ರಾಗ, ತಾಳ, ಭಜನ್‌ಗೆ (ಸಂಬಂಧಿಸಿದಂತೆ) ಪರಿಚಯಿಸುವುದು.

ಬೋಧನೋಪರಕಣಗಳು

ಶೃತಿ (ತಂಬೂರಿ)

ಕಲಿಕಾವಿಧಾನ

Ø ಸಾಹಿತ್ಯವನ್ನು ಬರೆಯುವುದು (ಬರೆಸುವುದು)

Ø ಹಿಂದಿ ಪದಗಳ ಅರ್ಥವನ್ನು ತಿಳಿಸುವುದು,

Ø ಭಾವಾರ್ಥವನ್ನು ತಿಳಿಸುವುದು,

Ø ಒಮ್ಮೆ ಹಾಡುವುದು,

Ø ರಾಗ ತಾಳಗಳ ಪರಿಚಯ ಮಾಡುವುದು (ಭಜನ್‌ನ) ಹೇಳಿಕೊಡುವುದು (ಒಂದೊಂದೇ ಸಾಲು) ಅನುಸರಿಸಿ ಹಾಡುವುದನ್ನು ಗಮನಿಸುವುದು, ಹಾಡುವುದು.

ಸ್ವಮೌಲ್ಯಮಾಪನ:

Ø ವೈಯಕ್ತಿಕವಾಗಿ ಹಾಡಿಸುವುದು.

Ø ತಪ್ಪುಗಳನ್ನು ತಿದ್ದುವುದು.

Ø ಸಾಮೂಹಿಕವಾಗಿ ಹಾಡಿಸುವುದು.

ಘಟಕಾಂತ್ಯದ ಪ್ರಶ್ನೆ

ಶಾಸ್ತ್ರ

Ø ವೈಷ್ಣವ ಜನತೋ ಭಜನ್‌ನ ಭಾವಾರ್ಥ ಬರಯಿರಿ.

Ø ವೈಷ್ಣವ ಜನತೋ ಭಜನ್ ಹಾಡಿರುವ ಜನಪ್ರಿಯ ಗಾಯಕರು ಯಾರು?

Ø ವೈಷ್ಣವ ಜನತೋ ಹಾಡು ಯಾರಿಗೆ ಅತ್ಯಂತ ಪ್ರಿಯ?

Ø ವೈಷ್ಣವ ಜನತೋ ಭಜನ್‌ನ್ನು ಬರೆಯಿರಿ.

ಪ್ರಯೋಗ:

  • ವೈಷ್ಣವ ಜನತೋ ಭಜನನ್ನು ಹಾಡಿ (ವ್ಯಯಕ್ತಿಕ, ಸಾಮೂಹಿಕ)

ಉಪಸಂಹಾರ

ವೈಷ್ಣವ ಜನತೋ ಭಜನ್ ಅತ್ಯಂತ ಜನಪ್ರಿಯ ಭಜನ್. ಇದಕ್ಕೆ ಇಂತಹದ್ದೆ ರಾಗದಲ್ಲಿ ಹಾಡಬೇಕೆಂಬ ನಿಯಮವಿಲ್ಲ.

ಪಾರಿಭಾಷಿಕ ಶಬ್ದಗಳು

ಅಧಿವೇಶನ – 5

ಅವಧಿ: 11 : 45 – 1 : 15

ಪೀಠಿಕೆ: ಸಪ್ತಸ್ವರಗಳ ಕ್ರಮವಾದ ಮತ್ತು ಸರಳವಾದ ಜೋಡಣೆಗೆ ಸರಳ ಎನ್ನುವರು. ಆ ಸಪ್ತಸ್ವರಗಳು ಅಂದರೆ ಸ, ರಿ, ಗ, ಮ, ಪ, ದ, ನಿ ಎಂಬ 7 ಸ್ವರಗಳು. ಇವುಗಳ ಸಂಕೇತಾಕ್ಷರಗಳು ಷಡ್ಜ, ರಿಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ, ಮತ್ತು ನಿಷಾಧ. ಇದು ಪ್ರಾರಂಭಿಕ ಹಂತದ ಅಭ್ಯಾಸ ಸ್ವರಗಳು. ಇವುಗಳುನ್ನು ಒಟ್ಟಾಗಿ ಮೂರು ಕಾಲಗಳಲ್ಲಿ ಹಾಡಿಸಲಾಗುತ್ತದೆ.

ಮೊದಲನೆಯ ಕಾಲದಲ್ಲಿ ತಾಳದ ಒಂದು ಪೆಟ್ಟಿಗೆ ಒಂದು ಸ್ವರವನ್ನು ಎಣಿಸಲಾಗುತ್ತದೆ. ಉದಾ:- ಸ ರಿ ಗ ಮ, ಪ ದ ನಿ ಸ ಇದು ಆದಿತಾಳದಲ್ಲಿದ್ದು, ಆದಿತಾಳಕ್ಕೆ ಒಂದು ಲಘುವಿಗೆ ನಾಲ್ಕು ಅಕ್ಷರಗಳು ಹಾಗೂ 2 ದೃಶಗಳು ಬಂದು, ಒಂದು ಧೃತಕ್ಕೆ ಎರಡು ಅಕ್ಷರಗಳಂತೆ ಒಟ್ಟು 8 ಅಕ್ಷರಗಳು ಬರುತ್ತವೆ.

ಎರಡನೆಯ ಕಾಲ: ಒಂದು ಪೆಟ್ಟಿಗೆ / ಎಣಿಕೆಗೆ 2 ಅಕ್ಷರಗಳು ಬರುತ್ತವೆ.

ಉದಾ:- ಸರಿ ಗಮ | ಪದ ನಿಸ | ಇದನ್ನು ಒಂದು ಗೆರೆ ಎಳೆಯುವುದರೊಂದಿಗೆ ಎರಡನೆಯ ಕಾಲವನ್ನು ಸೂಚಿಸುತ್ತೇವೆ.

ಮೂರನೆಯ ಕಾಲ:– ಒಂದು ಪೆಟ್ಟಿಗೆ ನಾಲ್ಕು ಅಕ್ಷರಗಳು ಬರುತ್ತವೆ.

ಉದಾ:- ಸರಿಗಮ | ಪದನಿಸ |

ಇದನ್ನು ಸ್ವರದ ಕೆಳಗೆ ಎರೆಡುಗೆರೆಗಳನ್ನು ಎಳೆಯುವುದರೊಂದಿಗೆ ಸೂಚಿಸುತ್ತೇವೆ.

ಉದ್ದೇಶ:- ಶ್ರವಣ ಯೋಗ್ಯವಾಗಿ ಸಂಗೀತಕ್ಕೆ ಉಪಯೋಗಿಸಲ್ಪಡುವ ಧ್ವನಿಗಳನ್ನು ಪರಿಚಯಿಸುವುದು, ಅಭ್ಯಾಸಸ್ವರಗಳನ್ನು ಪರಿಚಯಿಸುವುದು.

ಕಲಿಕಾ ಸಾಮಾಗ್ರಿ:- ತಂಬೂರಿ ಅಥವಾ ಶ್ರುತಿಪೆಟ್ಟಿಗೆ ಮತ್ತು ಕಪ್ಪು ಹಲಗೆ.

ಕಲಿಕಾ ವಿಧಾನ:

  1. ಹಂತಹಂತವಾಗಿ ಸ್ವರಾಕ್ಷರಗಳನ್ನು ಹೇಳಿದಂತೆ, ವಿದ್ಯಾರ್ಥಿಗಳು ಅನುಸರಿಸುವುದು,
  2. ಪುನರಾವರ್ತಿಸುವುದು,
  3. ಹಾಡಲು ಹೇಳುವುದು.

ಸ್ವಮೌಲ್ಯಮಾಪನ:

  • ಸರಿಯಗಿ ಅವಲೋಕಿಸಿದ್ದಾರೆಯೇ?
  • ಸ್ವರಸ್ಥಾನಗಳನ್ನು ಗುರುತಿಸಿರುವರೇ?
  • ಹಾಡಲು ಪ್ರಯತ್ನಿಸಿರುವೇ?

ಘಟಕಾಂತ್ಯದ ಪ್ರಶ್ನೆ:

Ø ಸ್ವರಗಳು ಎಷ್ಟಿವೆ?

Ø ಸ್ವರಗಳ ಸಂಕೇತಾಕ್ಷರಗಳೇನು?

Ø ಸರಳೆವರಸೆ ಎಂದರೇನು?

Ø ಎಷ್ಟು ಕಾಲಗಳಲ್ಲಿ ಹಾಡಲಾಗುತ್ತದೆ?

Ø ಯಾವ ತಾಳದಲ್ಲಿ ನಿಬದ್ಧವಾಗಿದೆ?

Ø ಕಾಲಗಳನ್ನು ಹೇಗೆ ಗುರುತಿಸುತ್ತಾರೆ?

ಸಪ್ತ ಸ್ವರ:

ಅಧಿವೇಶನ – 5 (1)

ಅವಧಿ: 11 : 45 – 1 : 15

ಪೀಠಿಕೆಭಾಷೆಗೆ ವರ್ಣಮಾಲೆಯಂತೆ ಸಂಗೀತಕ್ಕೆ ಸ್ವರಗಳೇ ಆಧಾರ. “ಸ್ವತೋ ರಂಜಯತಿ ಶ್ರೋತೃಚಿತ್ತಂ ಸುಸ್ವರ ಮುಚ್ಯತೇ” ಎಂದು ಸಂಗೀತ ರತ್ನಾಕರದಲ್ಲಿ ಉಲ್ಲೇಖಿಸಿರುವಂತೆ ರಂಜನೆಯುಂಟು ಮಾಡುವ ಶಬ್ಧವೇ ಸ್ವರ. ಸಂಗೀತದಲ್ಲಿ ಸ್ವರಗಳು ಏಳು. ಇವೇ ಸಪ್ತಸ್ವರಗಳು, ಸಪ್ತಸ್ವರಗಳನ್ನು ಸಂಗೀತ ರತ್ನಾಕರದಲ್ಲಿ ಹೀಗೆ ಹೇಳಿದೆ.

ಶ್ರೋತಿಭ್ಯ ಸ್ಯುಃ ಸ್ವರ ಷಡ್ಜರ್ಷಭಗಾಂಧಾರ ಮಧ್ಯಮಾಃ |

ಪಂಚಮೋ ದೈವತಶ್ಚಾಥ ನಿಷಾದ ಇತಿ ಸಪ್ತತೇ | |

ತೇಷಾಂ ಸಂಜ್ಞಾ ಸರಿಗಮ ಪದನೀತ್ಯ ಪರಾಮತಾಃ |

 ಸಪ್ತಸ್ವರ ನಾಮಗಳು ಇಂತಿವೆ:

ಸ – ಷಡ್ಜ

ರಿ – ರಿಷಭ

ಗ – ಗಾಂಧಾರ

ಮ – ಮಧ್ಯಮ

ಪ – ಪಂಚಮ

ದ – ದೈವತ

ನಿ – ನಿಷಾದ

ಸಪ್ತಸ್ವರಗಳ ಹೆಸರನ್ನು ಮೊದಲು ನಾರದೋಪನಿಷತ್ತಿನಲ್ಲಿ ಉಲ್ಲೇಖಿಸಲಾಗಿದೆ.

Ø ಷಡ್ಜವು ಇತರ ಆರು ಸ್ವರಗಳಿಗೆ ಆಧಾರವೂ ಆಗಿದೆ . ನಾಭಿಯು ಷಡ್ಜದ ಉಗಮ ಸ್ಥಾನ. ನಾಸಿಕ, ಕಂಠ, ಉರಸ್ಸು, ಕಾಲು, ಜಿಹ್ನೆ, ದಂತ – ಈ ಆರು ಸ್ಥಾನಗಳಿಂದ ಉತ್ಪತ್ತಿಯಾಗುವ ಸ್ವರ ಇದಾಗಿರುವುದರಿಂದ ಈ ಸ್ವರವನ್ನು ಷಡ್ಜ (ಷಟ್ + ಜ) = ಷಡ್ಜ ಎಂದು ಕರೆಯಲಾಗಿದೆ. ನವಿಲಿನ ಕೂಗು – ಷಡ್ಜವನ್ನು ಪತಿಸಿದ್ದಿಸುತ್ತದೆ.

Ø ರಿಷಭಸಪ್ರಸ್ತರಗಳಲ್ಲಿ ಎರಡನೆಯ ಸ್ವರ ರಿಷಭ. ಕೇಳಿದಾಕ್ಷಣ ಹೃದಯವನ್ನು ಸ್ಪರ್ಶಿಸುವ ಸ್ವರವಿಶೇಷ ರಿಷಭ. ಋಷಭ ಒಂದು ಬಲಿಷ್ಠ ಗೋವು. ಈ ಗಾಂಭೀರ‍್ಯವನ್ನು ಸಪ್ತಸ್ವರಗಳಲ್ಲಿ ರಿಷಭಕ್ಕೆ ಹೋಲಿಸಲಾಗಿದೆ. ಎತ್ತಿನ ಕೂಗು ರಿಷಭ ಸ್ವರವನ್ನು ಸೂಚಿಸುತ್ತದೆ.

Ø ಗಾಂಧಾರ:- ಗಾಂಧಾರವು ಸಪ್ತಸ್ವರಗಳಲ್ಲಿ ಮೂರನೆಯ ಸ್ವರ. ಈ ಸ್ವರವು ಉಚ್ಛಾರಣೆಯಿಂದಲೇ ಸುಖಾನುಭವವನ್ನು ಉಂಟುಮಾಡುತ್ತದೆ ಎಂಬ ಮಾತಿದೆ. ಕುರಿ ಆಡು ಮುಂತಾದವುಗಳ ಕೂಗನ್ನು ಗಾಂಧಾರಕ್ಕೆ ಸೂಚಿಸಲಾಗಿದೆ. (ಹೋಲಿಸಲಾಗಿದೆ)

Ø ಮಧ್ಯಮ: ಸಪ್ತಸ್ವರಗಳಲ್ಲಿ ಮಧ್ಯದ ಸ್ವರ ಮಧ್ಯಮ

ಸ ರಿ ಗ ಮ ಪ ದ ನಿ

Ø ಪಂಚಮಸಪ್ತಸ್ವರಗಳಲ್ಲಿ ಐದನೆಯ ಅಂದರೆ ಪಂಚಮ ಸ್ಥಾನದ ಸ್ವರವನ್ನು ಪಂಚಮವೆನ್ನುವರು, ಪಂಚಮವು ಸ್ವರ ಪ್ರಭೇದವನ್ನು ಹೊಂದಿರುವುದಿಲ್ಲ. ವಸಂತಕಾಲದಲ್ಲಿ ಕೂಗುವ ಕೋಗಿಲೆಯ ಧ್ವನಿಯನ್ನು ಪಂಚಮಕ್ಕೆ ಸೂಚಿಸಲಾಗಿದೆ.

Ø ದೈವತಷಷ್ಟಸ್ಥಾನೇ ಧೃತೋ ಯಸ್ಮಾತ್ತೇನಾ ಸೌಧ್ಯೆವತೋಮತಃ | | ಈ ಸ್ವರವನ್ನು ವೀರಪ್ರಚೋದಕ ಸ್ವರವೆಂದೂ ಕರೆಯುವರು. ಕುದುರೆಯ ಕೆನೆತವು ದೈವತ ಸ್ವರವನ್ನು ಪ್ರತಿನಿಧಿಸುತ್ತದೆ. ದೈವತ ಸ್ವರವನ್ನು ಸೂಚಿಸುತ್ತದೆ.

Ø ನಿಷಾದಸಪ್ತಸ್ವರಗಳಲ್ಲಿ ಏಳನೆಯ ಹಾಗೂ ಕೊನೆ ಸ್ವರ ನಿಷಾದ. ನಿಶೀದಂಥಿ ಸ್ವರಾಸ್ಯರ್ವೇ ನಿಶದಸ್ತೇನ ಕಥ್ಯತೆ | | ಆನೆಯ ಕೂಗು ನಿಷಾದ ಸ್ವರವನ್ನು ಸೂಚಿಸುತ್ತದೆ.

ಕಲಿಕಾವಿಧಾನ :

Ø ವಿದ್ಯಾರ್ಥಿಗಳಿಗೆ ಶಬ್ದವನ್ನು ಕೇಳಿಸುವುದು.

Ø ಇಂಪಾದ ಶಬ್ದ / ಕರ್ಕಶ ಶಬ್ದವನ್ನು ಗುರುತಿಸಲು ತಿಳಿಸುವುದು.

Ø ಇಂಪಾದ ಶಬ್ದವೇ ಸಂಗೀತ.

Ø ಇಂಪಾದ ಶಬ್ದಕ್ಕೆ ಹಲವು ಉದಾಹರಣೆಗಳನ್ನು ತಿಳಿಸುವುದು.

Ø ಇಂಪಾದ ಶಬ್ದ – ಸ್ವರ.

Ø ರಂಜನೆಯುಂಟುಮಾಡುವ ಶಬ್ದ | ಧ್ವನಿಯೇ ಸ್ವರ.

Ø ವಿವಿಧ ಹಂತದ ( PITCH ) ಸ್ವರಗಳು.

Ø ಏಳು ಸ್ವರಗಳ ಪರಿಚಯ.

Ø ಸ್ವರಗಳನ್ನು ಸೂಚಿಸುವ (ಪ್ರಾಣಿಗಳ) ಧ್ವನಿಗಳು (ಕೂಗುಗಳು).

Ø ಸ್ವರನಾಮಗಳಿಗೆ ಕಾರಣಗಳು, ಷಡ್ಜ, ರಿಷಭ ಇತ್ಯಾದಿ.

Ø ಸ್ವರ, ಷಡ್ಜ ಹಾಡುವುದು – ಅನುಸರಿಸಲು ಹೇಳುವುದು.

Ø ರಿಷಭ . . . . ನಿಷಾದ ಸ್ವರಗಳನ್ನು ಹಾಡುವುದು – ಹಾಡುವಂತೆ ತಿಳಿಸುವುದು.

Ø ಶೃತಿಗೆ ಬದ್ಧವಾಗಿ ಹಾಡಲು ಮಾರ್ಗದರ್ಶನ ಮಾಡುವುದು.

ಸ್ವಮೌಲ್ಯಮಾಪನ:

Ø ಇಂಪಾದ ಶಬ್ದ ಕರ್ಕಶ ಶಬ್ದಗಳ ನಡುವಿನ ವ್ಯತ್ಯಾಸ ಗ್ರಹಿಸಲು ಸಾಧ್ಯವಾಯಿತೇ?

Ø ಸ್ವರಗಳನ್ನು ಗುರುತಿಸಲು ತಿಳಿಯಿತೆ?

Ø ಸಪ್ತಸ್ವರಗಳನ್ನು ಹೆಸರಿಸಲು ಸಾಧ್ಯವಾಯಿತೇ?

Ø ಸ್ವರನಾಮಗಳನ್ನು ಹೇಳಲು ಸಾಧ್ಯವಾಯಿತೇ?

Ø ಸ್ವರಗಳನ್ನು ಸೂಚಿಸುವ ಧ್ವನಿಯನ್ನು ಗುರುತಿಸುವರೇ?

ಉದ್ದೇಶಶಬ್ದಗಳಲ್ಲಿನ ವ್ಯತ್ಯಾಸ ಕಾಣುವುದು. ಕರ್ಕಶ / ಇಂಪಾದ ಶಬ್ದಗಳನ್ನು ಗುರುತಿಸುವುದು. ಇಂಪಾದ ಶಬ್ದಗಳನ್ನು ವಿವಿಧ ಸ್ಥರಗಳಲ್ಲಿ ವಿವಿಧ ಹಂತಗಳಲ್ಲಿ ಕೇಳುವುದು.

Ø ಸ್ವರಗಳನ್ನು ಗುರುತಿಸುವುದು.

Ø ಸ್ವರಸ್ಥಾನಗಳನ್ನು ಗುರುತಿಸುವುದು.

Ø ಸಪ್ತಸ್ವರಗಳನ್ನು ಗುರುತಿಸುವುದು.

Ø ಸ್ವರಗಳ ನಡುವಿನ ಅಂತರವನ್ನು ತಿಳಿಸುವುದು.

Ø ಸಂಗೀತಕ್ಕೆ ಸಪ್ತಸ್ವರಗಳೇ ಆಧಾರ ಎಂಬುದನ್ನು ತಿಳಿಸುವುದು.

Ø (ಪ್ರಾಣಿ ಪಕ್ಷಿಗಳ ಕೂಗು) ಸ್ವರನಾಮಗಳಿಗೆ ಕಾರಣಕೊಡುವುದು.

ಬೋಧನೋಪಕರಣಗಳು:

Ø ತಂಬೂರಿ / ಶೃತಿಪೆಟ್ಟಿಗೆ.

Ø ಸ್ವರಗಳನ್ನು ಬರೆದಿರುವ ಚಾರ್ಟ್,

Ø ಸ್ವರಗಳನ್ನು ಸೂಚಿಸುವ ಧ್ವನಿಗಳನ್ನು (ಕೂಗು) ಹೊರಡಿಸುವ ಪ್ರಾಣಿ ಪಕ್ಷಿಗಳ ಚಿತ್ರ, ನವಿಲು, ಆಡು, ಆನೆ ಇತ್ಯಾದಿ.

Ø ಕಪ್ಪು ಹಲಗೆ.

ಘಟಕಾಂತ್ಯದ ಪ್ರಶ್ನೆಗಳು:

ಶಾಸ್ತ್ರ:

Ø ಸ್ವರ ಎಂದರೇನು?

Ø ಸ್ವರಗಳು ಎಷ್ಟಿವೆ?

Ø ಸಪ್ತಸ್ವರಗಳು ಯಾವುವು?

Ø ಸಪ್ತಸ್ವರಗಳನ್ನು ಹೆಸರಿಸಿ.

Ø ಸಪ್ತಸ್ವರಗಳನ್ನು ಯಾವ ಯಾವ ಪ್ರಾಣಿ ಪಕ್ಷಿಗಳ ಕೂಗು ಪ್ರತಿನಿಧಿಸುತ್ತದೆ? ಸೂಚಿಸುತ್ತದೆ?

Ø ಸಪ್ತಸ್ವರಗಳ ಸ್ವರೂಪವೇನು?

ಪ್ರಯೋಗ:

ಸಪ್ತಸ್ವರಗಳನ್ನು ಹಾಡಿರಿ.

ಸ್ವರಗಳ ನಡುವಿನ ಶಬ್ದ ವ್ಯತ್ಯಾಸ ತಿಳಿಯಿರಿ.

ಉಪಸಂಹಾರಸಪ್ತಸ್ವರಗಳು ಸಂಗೀತದ ಲಿಪಿ, ಸಂಗೀತದ ವರ್ಣಮಾಲೆ. ಭಾರತೀಯ ಸಂಗೀತ ಪದ್ಧತಿಗಳಿಗೆ ಸಪ್ತಸ್ವರಗಳೇ ಆಧಾರ. ಆದರೆ ಹಾಡುವ ಶೈಲಿಯಲ್ಲಿ ವ್ಯತ್ಯಾಸವಾಗುವುದುಂಟು. ಸಪ್ತಸ್ವರಗಳ ಗಾಯನ ಶೈಲಿ ಪದ್ದತಿಯಿಂದ ಪದ್ಧತಿಗೆ ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ಬದಲಾವಣೆಯಾಗುವುದುಂಟು. ಆದರೆ ಸ್ವರಸ್ಥಾನಗಳಲ್ಲಿ ವ್ಯತ್ಯಾಸವಿಲ್ಲ.

ವಿದ್ಯಾರ್ಥಿಗಳಿಗೆ ಸಪ್ತಸ್ವರಗಳ ಅಭ್ಯಾಸ ಬಹು ಅವಶ್ಯಕ. ಶಬ್ದ ಸೂಕ್ಷ್ಮಗಳನ್ನು ಅರಿಯಲು ಸ್ವಸ್ಥಾನಗಳನ್ನು ಸೂಕ್ಷ್ಮವಾಗಿ ತಿಳಿಯಲು ವರ್ಣಗಳನ್ನು ಹಾಡಲು ಆಲಾಪನೆ ಶೃತಿ ಮನೋಧರ್ಮಗಳ ಗಾಯನದಲ್ಲಿ ಅವಶ್ಯಕವಾಗಿದೆ.

ಆರೋಹಣ ಅವರೋಹಣ

ಅಧಿವೇಶನ 5 (2)

ಪೀಠಿಕೆಸ್ವರಗಳ ಕ್ರಮವಾದ ಏರುವಿಕೆಯನ್ನು ಆರೋಹಣವೆನ್ನುವರು. ಒಂದು ರಾಗದ ಸೂತ್ರವೇ ಆರೋಹಣ ಆವರೋಹಣ. ಆರೋಹಣ ಅವರೋಹಣದಿಂದ ಒಂದು ರಾಗದ ಸ್ವರಗಳ ಛಾಯೆ, ಸ್ವರೂಪವನ್ನು ತಿಳಿಯಬಹುದು. ಸ್ವರಗಳ ಇಳಿಕೆ ಕ್ರಮವನ್ನು ಅವರೋಹಣವೆಂದು ಕರೆಯುವರು. ಉದಾ:      ಆರೋಹಣ – ಸ ರಿ ಗ ಮ ಪ ದ ನಿ ಸ

ಅವರೋಹಣ – ಸ ನಿ ದ ಪ ಮ ಗ ರಿ ಸ

ಉದ್ದೇಶ:

Ø ವಿದ್ಯಾರ್ಥಿಗಳಿಗೆ ಸ್ವರಗಳ ಏರಿಕೆ ಕ್ರಮವನ್ನು ತಿಳಿಸುವುದು.

Ø ಏರು ಶೃತಿಯಲ್ಲಿ ಕ್ರಮವಾಗಿ ಹಾಡುವ ಕ್ರಮವನ್ನು ಅರಿಯುವುದು.

Ø ಸ್ವರಗಳನ್ನು ಇಳಿಕೆ ಕ್ರಮದಲ್ಲಿ ಹಾಡುವುದನ್ನು ತಿಳಿಸುವುದು.

Ø ಆರೋಹಣ ಅವರೋಹಣ ಕ್ರಮದಲ್ಲಿ ಹಾಡುವುದು.

Ø ಗಣಿತ, ವಿಜ್ಞಾನ ವಿಷಯಗಳಲ್ಲಿ ಆರೋಹಣ – ಅವರೋಹಣ ದ ಅನ್ವಯ ತಿಳಿಸುವುದು.

Ø ಸಂಖ್ಯೆಗಳ ಏರಿಕೆ ಕ್ರಮ, ಇತ್ಯಾದಿ

ಬೋಧನೋಪಕರಣ:

ಏಳು ಮೆಟ್ಟಿಲುಗಳ ಮಾದರಿ (ಚಿತ್ರ)

ತಂಬೂರಿ / ಶೃತಿ ಪೆಟ್ಟಿಗೆ

ಕಲಿಕಾವಿಧಾನ:

ಮಧ್ಯಮಸ್ಥಾಯಿಯ ಷಡ್ಜವನ್ನು ಹಾಡಿ ನಂತರ ರಿಷಭವನ್ನು ಷಡ್ಜಕ್ಕಿಂತ ಸ್ವಲ್ಪ ಏರು ಶೃತಿಯಲ್ಲಿ ಹಾಡುವುದು, ಏರಿಕೆಯ ಈ ಕ್ರಮವನ್ನು ಆರೋಹಣ ಎಂದು ತಿಳಿಯುವುದು. ಸ ನಂತರ ರಿ ನಂತರ ಗ ಹೀಗೆ ಒಂದೊಂದೇ ಸ್ವರವನ್ನು ಏರಿಕೆ ಕ್ರಮದಲ್ಲಿ ಹಾಡಿದಾಗ ಆರೋಹಣ ಕ್ರಮ ತಿಳಿಯುವುದು. ಆರೋಹಣ: ಸ ರಿ ಗ ಮ ಪ ದ ನಿ ಸ

ತಾರಸ್ಥಾಯಿಯ ಷಡ್ಜ ದಿಂದ ಸ ನಂತರ ನಿ ನಂತರ ದ ಹೀಗೆ ಸ್ವರಗಳನ್ನು ಇಳಿಕೆ ಕ್ರಮದಲ್ಲಿ (ಇಳಿ ಶೃತಿಯಲ್ಲಿ) ಹಾಡುವುದು ಅವರೋಹಣ ಎಂದು ತಿಳಿಸುವುದು.

 

ಮೆಟ್ಟಿಲಿನ ಮಾದರಿಯಲ್ಲಿ ಮೊದಲ ಮೆಟ್ಟಿಲು ಸ ಎರಡನೆಯ ಮೆಟ್ಟಿಲಿನಲ್ಲಿ ರಿ ಹೀಗೆ ಸ್ವರಗಳನ್ನು ಬರೆದಿರುವ ಕಾಗದದ ಅಥವಾ ರಟ್ಟಿನ ಚೂರನ್ನು ಏರಿಕೆ ಕ್ರಮದಲ್ಲಿಡುವುದು. ಇದರಿಂದ ಆರೋಹಣದ ಅರ್ಥ ಮಾಡಿಸುವುದು.

ಆರೋಹಣ:

ಇದೇ ರೀತಿಯ ಪ್ರಯೋಗ ಅವರೋಹಣ ಕ್ರಮಕ್ಕೂ ಅನುಸರಿಸುವುದು.

ಸ್ವಮೌಲ್ಯಮಾಪನ:

Ø ಆರೋಹಣ ಕ್ರಮವನ್ನು ಅರಿತರೇ?

Ø ಅವರೋಹಣಕ್ರಮ ಅರ್ಥವಾಯಿತೇ?

Ø ಸ್ವರಗಳನ್ನು ಆರೋಹಣ ಕ್ರಮದಲ್ಲಿ ಹಾಡಲು ಸಾಧ್ಯವಾಯಿತೆ?

Ø ಅವರೋಹಣ ಕ್ರಮದಲ್ಲಿ ಸ್ವರಗಳನ್ನು ಹಾಡುವರೇ? ಬರೆಯುವರೇ?

Ø ಆರೋಹಣ ಅವರೋಹಣ ಕ್ರಮಗಳಲ್ಲಿನ ನಡುವಿನ ವ್ಯತ್ಯಾಸ ಕಾಣಲು ಸಾಧ್ಯವಾಯಿತೆ?

Ø ಇತರೆ ರಾಗದ ಸ್ವರಗಳನ್ನು ಆರೋಹಣ ಅವರೋಹಣ ಕ್ರಮದಲ್ಲಿ ಹಾಡಲು ತಿಳಿದಿದೆಯೇ?

Ø ಈ ಕ್ರಮಗಳನ್ನು ಇತರ ವಿಷಯಗಳಾದ ಗಣಿತ ವಿಜ್ಞಾನ ವಿಷಯಗಳಲ್ಲಿ ಆನ್ವಯ ಮಾಡಿಕೊಳ್ಳಲು ಸಾಧ್ಯವಾಯಿತೇ?

ಘಟಕಾಂತ್ಯದ ಪ್ರಶ್ನೆಗಳು:

Ø ಆರೋಹಣ ಎಂದರೇನು?

Ø ಆರೋಹಣ ಕ್ರಮಕ್ಕೆ ಒಂದು ಉದಾಹರಣೆ ಕೊಡಿ.

Ø ಆರೋಹಣ ಅವರೋಹಣ ಗಳನ್ನು ಇತರ ವಿಷಯಗಳಲ್ಲಿ ಹೇಗೆ ನಿರೂಪಿಸುವಿರಿ?

ಸ್ವರಗಳು

ಅಧಿವೇಶನ 5 (3)

ಪ್ರಕೃತಿ ವಿಕೃತಿ ಸ್ವರಗಳು

ಪ್ರಕೃತಿ ವಿಕೃತಿ ಸ್ವರಗಳು ಸಪ್ತಸ್ತರದ ಎರಡು ವಿಧಗಳು, ಪ್ರಕೃತಿ ಸ್ತರಗಳು ಬದಲಾವಣೆಗೊಳಪಡುವುದಿಲ್ಲ, ವಿಕೃತಿ ಸ್ವರಗಳು ಪ್ರಭೇದಗಳನ್ನು ಹೊಂದಿವೆ. (ಬದಲಾವಣೆಗೊಳ್ಳುತ್ತವೆ)

ಪ್ರಕೃತಿ ಸ್ವರ – ಸ, ಪ,

ವಿಕೃತಿ ಸ್ವರಗಳು – ರಿ , ಗ , ಮ , ದ , ನಿ.

 ಬೋಧನೋಪಕರಣ:

ಶೃತಿ ಪೆಟ್ಟಿಗೆ / ತಂಬೂರಿ.

ಹಾರ್ಮೋನಿಯಂ.

ವಿಕೃತಿ ಸ್ವರಗಳ ಚಾರ್ಟ್.

ಕಲಿಕಾವಿಧಾನ:

ಹಲವಾರು ರಾಗಗಳ ಆರೋಹಣ ಅವರೋಹಣಗಳನ್ನು ಹಾಡಿದಾಗ ಪ್ರಕೃತಿ ಸ್ವರಗಳು ಎಲ್ಲ ರಾಗಗಳಲ್ಲಿಯೂ ಸಾಮಾನ್ಯವಾಗಿರುವುದನ್ನು ಗಮನಿಸುವುದು ಬದಲಾವಣೆಗೊಳ್ಳದ ಸ್ವರಗಳು ಪ್ರಕೃತಿಸ್ವರಗಳು. ಎಲ್ಲ ರಾಗಗಳಿಗೂ ಸಾಮಾನ್ಯವಾಗಿರುತ್ತವೆ. ವಿಕೃತಿ ಸ್ವರಗಳು ಸ್ವರಪ್ರಭೇದಗಳನ್ನು ಹೊಂದಿರುತ್ತವೆ. ಉದಾಹರಣೆಗಳನ್ನು ಕೊಡುವುದು, ರಿ1 ರಿ2 ರಿ3 ರಿಷಭ.

ಹಾಗೆಯೇ ಗಾಂಧಾರದಲ್ಲಿ ಗ1 ಗ2 ಗ3 ಹೆಸರಿಸುವುದು.

ಮ ಮ1

1 ದ2 ದ3

ನಿ1 ನಿ2 ನಿ3 ಸ್ವರಪ್ರಭೇದಗಳನ್ನು ಹೆಸರಿಸುವುದು. ಎಲ್ಲ ರಾಗಗಳಲ್ಲಿ ಪ್ರಕೃತಿ ಸ್ವರಗಳು ಸಾಮಾನ್ಯವಾಗಿದ್ದರೂ ಪ್ರಕೃತಿ ಸ್ವರಗಳು ಅವಶ್ಯವಾಗಿ ಇರಲೇ ಬೇಕೆಂದು ನಿಯಮವಿಲ್ಲ. ಆದರೆ ಷಡ್ಜ ವಿಲ್ಲದೆ ರಾಗವಿಲ್ಲವೆಂಬುದು ಗಮನಿಸಬೇಕಾದ ಅಂಶವಾಗಿದೆ.

ಸ್ವಮೌಲ್ಯಮಾಪನ:

Ø ಸ್ವರಗಳನ್ನು ಗುರುತಿಸುವರೇ?

Ø ಸ್ವರಗಳ ಎರಡು ವಿಧಗಳನ್ನು ತಿಳಿದಿರುವರೇ?

Ø ಸ್ವರಗಳ ವಿಭಾಗಗಳಾದ ಪ್ರಕೃತಿ ವಿಕೃತಿ ಸ್ವರಗಳನ್ನು ಗುರುತಿಸುವರೇ?

Ø ಪ್ರಕೃತಿ / ವಿಕೃತಿ ಸ್ವರಗಳ ಅರ್ಥಗ್ರಹಿಸುವರೇ?

Ø ಪ್ರಕೃತಿ ಸ್ವರಗಳನ್ನು ಗುರುತಿಸುವರೇ?

Ø ವಿಕೃತಿ ಸ್ವರಗಳನ್ನು ಗುರುತಿಸುವರೇ?

Ø ವಿಕೃತಿ ಸ್ವರಪ್ರಭೇದಗಳನ್ನು ನಿರೂಪಿಸುವರೇ?

Ø ಪ್ರಕೃತಿ / ವಿಕೃತಿ ಸ್ವರಗಳ ಪ್ರಭೇದಗಳನ್ನು ಬರೆಯುವರೇ?

ಘಟಕಾಂತ್ಯದ ಪ್ರಶ್ನೆಗಳು:

  • ಸ್ವರಗಳಲ್ಲಿ ಎಷ್ಟು ವಿಧ? ಅವು ಯಾವುವು?
  • ಪ್ರಕೃತಿ, ಸ್ವರಗಳೆಂದರೇನು? ಅವು ಯಾವುವು? ಉದಾಹರಣೆ ಕೊಡಿ.
  • ವಿಕೃತಿ ಸ್ವರಗಳೆಂದರೇನು? ಅವು ಯಾವುವು?
  • ವಿಕೃತಿ ಸ್ವರ ಪ್ರಭೇದಗಳು ಯಾವುವು ?

ವರ್ಗ:

ಅಧಿವೇಶನ 5 (4)

ಪೀಠಿಕೆ: ರಾಗಗಳನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಜನಕರಾಗ ಮತ್ತು ಜನ್ಮರಾಗ. ಜನಕರಾಗಗಳು, (ಮೇಳಕರ್ತ ರಾಗಗಳು/ ಮೇಳರಾಗಗಳು/ ಕರ್ತರಾಗಗಳು) ಮೇಳಕರ್ತ ರಾಗಗಳು ಆರೋಹಣ ಅವರೋಹಣದಲ್ಲಿ ಏಳೂ ಸ್ವರಗಳನ್ನು ಹೊಂದಿರುತ್ತವೆ.

ಉದಾ: ಸ ರಿ ಗ ಮ ಪ ದ ನಿ ಸ

 ಸ ನಿ ದ ಪ ಮ ಗ ರಿ ಸ

ಇವನ್ನು ಸಂಪೂರ್ಣವರ್ಗದ ರಾಗಗಳು ಎಂದೂ ಕರೆಯುವರು. ಜನ್ಯರಾಗಗಳಲ್ಲಿ ಆರೋಹಣ ಆವರೋಹಣಗಳಲ್ಲಿ ಬಳಕೆಯಾಗುವ ಸ್ವರಗಳ ಸಂಖ್ಯೆಯನ್ನಾಧರಿಸಿ ವಿಂಗಡಿಸುವ ವಿಧಾನವೇ ವರ್ಗ, ಜನ್ಯರಾಗಗಳಲ್ಲಿ ಅನೇಕ ವರ್ಗಗಳಿವೆ. ಉದಾ: ಒಂದು ರಾಗದ ಆರೋಹಣ ಅವರೋಹಣ ಐದು ಸ್ವರಗಳಿದ್ದರೆ – ಔಡವ, ಆರು ಸ್ವರಗಳಿದ್ದರೆ – ಮಾಡವ ಎಂದು ಹೆಸರಿಸಲಾಗಿದೆ. ಆರೋಹಣ ಅವರೋಹಣಗಳಲ್ಲಿ ಒಂದೇ ಸಂಖ್ಯೆಯ ಸ್ವರಗಳು ಇರಬೇಕೆಂಬ ನಿಯಮವಿಲ್ಲ, ಆರೋಹಣ ಒಂದು ಸಂಖ್ಯೆಯ ಅವರೋಹಣದಲ್ಲಿ ಒಂದು ಸಂಖ್ಯೆಯ ಸ್ವರಗಳೂ ಇರುವ ಸಂದರ್ಭಗಳೂ ಉಂಟು.

ಹೀಗೆ ಜನ್ಯರಾಗಗಳನ್ನು ಔಡವ (5), ಷಾಡವ (6), ಸಂಪೂರ್ಣ (7) ಹಾಗೂ ವಕ್ರಸ್ವರಾಂತರ ಹೀಗೆ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಔಡವ:  ಆರೋಹಣ – ಅವರೋಹಣಗಳಲ್ಲಿ ಐದು (5) ಸ್ವರಗಳಿರುವ ರಾಗವನ್ನು ಔಡವ ರಾಗವೆನ್ನುವರು.

ಉದಾ: ಮೋಹನ –    ಸ ರಿ ಗ ಪ ದ ಸ

ಸ ದ ಪ ಗ ರಿ ಸ       ಮಲಯ ಮಾರುತ, ಅಭೋಗಿ

ಷಾಡವ: ಆರೋಹಣ ಅವರೋಹಣಗಳಲ್ಲಿ ಆರು (6) ಸ್ವರಗಳಿದ್ದರೆ ಆ ರಾಗಗಳು ಷಾಡವ ವರ್ಗವೆನಿಸಿಕೊಳ್ಳುತ್ತವೆ.

ಉದಾ: ಆರೋಹಣ  – ಸ ರಿ ಗ ಮ ದ ನಿ ಸ

 ಸ ನಿ ದ ಮ ಗ ರಿ ಸ

ಸಂಪೂರ್ಣ:ಆರೋಹಣ ಅವರೋರ್ಹಣಗಳಲ್ಲಿ ಏಳು ಸ್ವರಗಳನ್ನು ಹೊಂದಿರುವ ರಾಗಗಳು ಸಂಪೂರ್ಣ ವರ್ಗದ ರಾಗಗಳಾಗಿವೆ. ಈ ರಾಗಗಳು ಎಲ್ಲವೂ ಜನಕರಾಗಗಳೇ ಆಗಿವೆ.

ಉದಾ: ಆರೋಹಣ:   ಸ ರಿ ಗ ಮ ಪ ದ ನಿ ಸ

ಸ ನಿ ದ ಪ ಮ ಗ ರಿ ಸ

ವಕ್ರ: ಆರೋಹಣ ಮತ್ತು ಅವರೋಹಣಗಳ ಸ್ವರಗಳು ವಕ್ರವಾಗಿದ್ದರೆ ಅಥವಾ ಹಿಂದು ಮುಂದಾಗಿದ್ದರೆ ಅಥವಾ ಪುನರುಚ್ಚಾರಣೆಗೊಂಡರೆ ಅಂತಹ ರಾಗವನ್ನು ವಕ್ರ ರಾಗಗಳೆಂದು ಕರೆಯುವರು.

ಉದಾ: ಆನಂದ ಭೈರವಿ – ಸ ಗ ರಿ ಗ ಮ ಪ ದ ಪ ನಿ

     ಸಿ ನಿ ದ ಪ ಮ ಗ ರಿ ಸ

ಈ ಮೇಲಿನ ರಾಗ “ಶ್ರೀ” ಯಲ್ಲಿ ಆರೋಹಣ ಔಡವ ವರ್ಗದಲ್ಲಿದ್ದು ಅವರೋಹಣವು ವಕ್ರ – ವರ್ಗದಲ್ಲಿದೆ. ನಿಷಾದ ಪಂಚಮಗಳು ಪುನರುಚ್ಚಾರಣೆಗೊಳ್ಳುತ್ತವೆ. ಈ ರಾಗವನ್ನು ಔಡವ – ವಕ್ರ ವರ್ಗದ ರಾಗವೆನ್ನುವರು.

ಕಲಿಕಾವಿಧಾನ:

ಆರೋಹಣದಲ್ಲಿ ಸ್ವರಗಳನ್ನು ಹಾಡಿಸುವುದು ಸ್ವರವೊಂದನ್ನು ವರ್ಜ್ಯ (ಬಿಟ್ಟು) ಮಾಡಿ ಹಾಡಿಸುವುದು. ಒಟ್ಟು ಸ್ವರಗಳನ್ನು ಲೆಕ್ಕಹಾಕುವಂತೆ ಹೇಳುವುದು. ಇದನ್ನು ಷಾಡವ ಎಂದು ಕರೆಯುವರು.

ಆರು ಸ್ವರಗಳನ್ನು ಹೊಂದಿರುವ ಆರೋಹಣವು ಷಾಡವ ವೆನಿಸಿಕೊಳ್ಳುತ್ತದೆ. ಹೀಗೆ – ಐದು ಔಡವ ಇದು ಅವರೋಹಣಕ್ಕೂ ಅನ್ವಯಿಸುತ್ತದೆ.

ಆರೋಹಣದಲ್ಲಿ ಐದು ಅವರೋಹಣದಲ್ಲಿ ಆರು ಸ್ವರಗಳನ್ನು ಔಡವ ಷಾಡವ ಎನ್ನುವರು. ಹೀಗೆ ಎಲ್ಲ ವಿಧಗಳನ್ನು ಮನನ ಮಾಡಿಸುವುದು. ಪ್ರತಿಯೊಂದು ವರ್ಗಕ್ಕೂ ಒಂದೊಂದು ಉದಾ ಹೀಗೆ ಕೊಡುವುದು. ಔಡವ – ಔಡವ

ಉದಾ: ಮೋಹನ ಹೀಗೆ ಎಲ್ಲಾ ವರ್ಗಗಳ ಉದಾಹರಣೆಗಳನ್ನು ತಿಳಿಯ ಪಡಿಸುವುದು. ಸ್ವಮೌಲ್ಯಮಾಪನ:

  • ಆರೋಹಣದಲ್ಲಿ ಅವರೋಹಣಗಳಲಿ ಸ್ವರಗಳನ್ನು ಲೆಕ್ಕಹಾಕುವ ಜ್ಞಾನ ಉಂಟಾಯಿತೇ?
  • ಆರೋಹಣ – ಅವರೋಹಣಗಳಲ್ಲಿ ಸ್ವರಗಳನ್ನು ಎಣಿಸಿ ವರ್ಗವನ್ನು ತೀರ್ಮಾನಿಸುವರೇ?
  • ವರ್ಗಗಳಿಗೆ ಉದಾ ಕೊಡುವರೇ?
  • ವರ್ಗಗಳ ನಡುವಿನ ವ್ಯತ್ಯಾಸ ಕಾಣುವರೇ?

ಘಟಕಾಂತ್ಯದ ಪ್ರಶ್ನೆಗಳು:

  • ರಾಗಗಳಲ್ಲಿ ಎಷ್ಟು ವಿಧ, ಯಾವುವು?
  • ಜನ್ಯರಾಗಗಳನ್ನು ಹೇಗೆ ವರ್ಗೀಕರಿಸುವಿರಿ? ಯಾವುವು?
  • ಔಡವ ಎಂದರೇನು? ಉದಾಹರಣೆ ಕೊಡಿ.

 ಕೆಳಗಿನವುಗಳಿಗೆ ಉದಾಹರಣೆ ಕೊಡಿ.

ಔಡವ, ಷಾಡವ, ಸಂಪೂರ್ಣ

ನಾದ:

ಅಧಿವೇಶನ 5 (5)

ಪೀಠಿಕೆ: ನಿರ್ದಿಷ್ಟ, ವ್ಯವಸ್ಥಿತ, ಕಂಪನಾವರ್ತಗಳುಳ್ಳ, ಕಿವಿಗೆ ಇಂಪು ನೀಡುವ ಶಬ್ದ ಅಥವಾ ಧ್ವನಿಯನ್ನು ‘ನಾದ’ ಎನ್ನುವರು. ನಾದದಲ್ಲಿ ಆಹತ, ಅನಾಹತ ನಾದಗಳೆಂಬ ವಿಭಾಗಗಳುಂಟು. ಉದ್ದೇಶ:

  • ನಾದ – ನಿರ್ದಿಷ್ಟ ಕಂಪನಾವರ್ತವನ್ನು ಗುರುತಿಸುವುದು, ಇಂಪಾದ/ಕರ್ಕಶ ಶಬ್ಬಗಳ ನಡುವಿನ ವ್ಯತ್ಯಾಸ ಕಾಣುವುದು (ಗುರುತಿಸುವುದು)
  • ನಾದದ ಅರ್ಥ ವಿವರಿಸುವುದು.
  • ನಾದದ ಪ್ರಾಮುಖ್ಯತೆಯನ್ನು ಅರಿಯುವುದು.
  • ನಾದದ ವಿಧಗಳನ್ನು ಗುರುತಿಸುವುದು,

ಬೋಧನೋಪಕರಣ:

Ø ಶೃತಿ ಕವೆ – (tuning fork)

Ø ತಂಬೂರಿ; ಶೃತಿ ಪೆಟ್ಟಿಗೆ.

ಕಲಿಕಾವಿಧಾನ:

Ø ಕರ್ಕಶ ಶಬ್ದವನ್ನು ಕೇಳಿಸುವುದು.

Ø ಇಂಪಾದ ಶಬ್ದವನ್ನು ಕೇಳಿಸುವುದು.

Ø ವಿದ್ಯಾರ್ಥಿಗಳು ವ್ಯತ್ಯಾಸವನ್ನು ಕಾಣುವರು.

Ø ನಿರ್ದಿಷ್ಟ ಕಂಪನಾವರ್ತಗಳನ್ನು ಹೊಂದಿರುವ ಶಬ್ದವು ಇಂಪಾಗಿ ಕೇಳುತ್ತದೆ ಎಂಬುದನ್ನು ತಿಳಿಸುವುದು, ಇದನ್ನು ನಾದವೆನ್ನುವರು.

ಸ್ವಮೌಲ್ಯಮಾಪನ:

Ø ನಾದದ ಅರ್ಥಗ್ರಹಿಸುವರೇ, ಗುರುತು ಹಿಡಿದರೆ?

Ø ನಾದದ ವ್ಯಾಖ್ಯೆ ನಿರೂಪಿಸುವರೇ?

Ø ನಾದದ ಅರ್ಥ ವಿವರಣೆ ಕೊಡುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ಕರ್ಕಶ ಮತ್ತು ಇಂಪಾದ ಶಬ್ದಗಳ ನಡುವಿನ ವ್ಯತ್ಯಾಸ ಬರೆಯಿರಿ.

Ø ಇಂಪಾದ ಶಬ್ದಕ್ಕೆ ಕಾರಣ ಕೊಡಿ.

Ø ಇಂಪಾದ ಶಬ್ದದ ಕಂಪನಾರ್ವತವನ್ನು ವಿವರಿಸಿ.

Ø ನಾದ ಎಂದರೇನು?

Ø ನಾದದ ವಿಧಗಳಾವು?

ಆಧಾರಶೃತಿ:

ಅಧಿವೇಶನ 5 (6)

ಪೀಠಿಕೆ: ಗಾಯಕರು ತನ್ನ ಕಂಠಕ್ಕೆ ಅನುಗುಣವಾಗಿ ಆರಿಸಿಕೊಳ್ಳುವ ಸ್ಥಾಯಿಯನ್ನು, ಆಧಾರ ಸ್ವರವನ್ನು (ಆಧಾರ ಷಡ್ಜ) ಆಧಾರ ಶ್ರುತಿಯೆನ್ನುವರು.

ಗಾಯಕನು ಹಾಡುವಾಗ ಬಳಸುವ ಸ್ವಾಯಿ ಸ್ವರಗಳಲ್ಲಿ ಆಧಾರ ಸ್ವರವೇ ಆಧಾರಶ್ರುತಿ ಇದು ಸಾಮಾನ್ಯವಾಗಿ ಮಧ್ಯಸ್ಥಾಯಿಯಾಗಿರುತ್ತದೆ.

ಉದ್ದೇಶ:

Ø ಆಧಾರ ಶ್ರುತಿಯ ಅರ್ಥ ತಿಳಿಯುವುದು.

Ø ಆಧಾರ ಶೃತಿಯ ಬಳಕೆಯನ್ನು ಉಣುಮಿಸುವುದು.

Ø ಆಧಾರ ಕೃತಿಯನ್ನು ಗುರುತಿಸುವುದು.

ಬೋಧನೋಪಕರಣ:

Ø ತಂಬೂರಿ / ಶೃತಿ ಪೆಟ್ಟಿಗೆ.

Ø ಶೃತಿ ಕವೆ (Tuning fork).

Ø ಹಾರ್ಮೋನಿಯಂ

ಕಲಿಕಾವಿಧಾನ:

ಒಬ್ಬ ಗಾಯಕನು ಹಾಡುವಾಗ ಹೆಚ್ಚು ಸ್ವರಗಳನ್ನು ಸುಲಲಿತವಾಗಿ ಸರಾಗವಾಗಿ ಒಳಸುವ ಸ್ವರ ಸಮೂಹದ ಆಧಾರ ಷಡ್ಡವನ್ನು ಅರ್ಥ ಗ್ರಹಿಸಲು ಸಹಾಯ ಮಾಡುವುದು. ಆಧಾರ ಷಡ್ಜವನ್ನು ಕಂಡು ಹಿಡಿಯಲು ಅನೇಕ ಉದಾಹರಣೆಗಳನ್ನು ಕೊಡುವುದು. ಆಧಾರ ಷಡ್ಜವು ಗಾಯಕನು ತನ್ನ ಶಾರೀರಕ್ಕನುಗುಣವಾಗಿ ಆರಿಸಿಕೊಳ್ಳುವ ಸ್ವರ ಸಪ್ತಕದ ಆಧಾರ ಸ್ವರವೇ ಆಧಾರ ಷಡ್ಜ ಎಂದು ತಿಳಿಸುವುದು.

ಹಾರ್ಮೋನಿಯಂ / ತಂಬೂರದ ಸಹಾಯದಿಂದ ಗಾಯಕನು ತಾನು ಹಾಡುವಾಗ ಎಲ್ಲ ಸ್ವರಗಳನ್ನು ಸುಲಲಿತವಾಗಿ ಉಪಯೋಗಿಸಲು (ಹಾಡಲು) ಸಾಧ್ಯವಾಗುವ ಸ್ವರಸಪ್ತಕದ ಷಡ್ಡವನ್ನು ಕಂಡುಹಿಡಿಯುವ ಬಗೆಯನ್ನು ಶಿಕ್ಷಕರು ಹಲವಾರು ಉದಾಹರಣೆಯೊಂದಿಗೆ ತಿಳಿಸುವರು. ವಿದ್ಯಾರ್ಥಿಗಳು ಆಧಾರ ಷಡ್ಜದ ಅರ್ಥ ಗ್ರಹಿಸುವರು, ಆಧಾರ ಷಡ್ಜವನ್ನು ಗುರುತಿಸುವರು. ಸ್ವಮೌಲ್ಯಮಾಪನ:

Ø ಆಧಾರ ಷಡ್ಜದ ಪದದ ಅರ್ಥ ಗ್ರಹಿಸುವರೇ?

Ø ಆಧಾರ ಷಡ್ಜದ ಅವಶ್ಯಕತೆಯನ್ನು ಗ್ರಹಿಸುವರೇ?

Ø ಆಧಾರ ಷಡ್ಜದೊಂದಿಗೆ ಇತರ ಸ್ವರಗಳ ಹೋಲಿಕೆ ಮಾಡುವರೆ?

Ø ಆಧಾರ ಷಡ್ಜದ ತೀರ್ಮಾನಕ್ಕೆ ಕಾರಣ ಕೊಡುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ಆಧಾರ ಷಡ್ಜ ಎಂದರೇನು?

Ø ಆಧಾರ ಷಡ್ಜದ ಆವಶ್ಯಕತೆಯನ್ನು ಬರೆಯಿರಿ.

Ø ಆಧಾರ ಷಡ್ಜಕ್ಕೂ ಇತರ ಸ್ವರಗಳಿಗೂ ವ್ಯತ್ಯಾಸವೇನು?

ಸ್ಥಾಯಿ

ಅಧಿವೇಶನ 5 (7)

ಪೀಠಿಕೆಆರೋಹಣ ಮತ್ತು ಅವರೋಹಣಕ್ಕೆ ಸುಲಭವಾಗಿ ಹೊಂದಿ ಬರುವ ಸಪ್ತಸ್ವರಗಳ ಗುಂಪಿಗೆ ಸ್ಥಾಯಿ ಎನ್ನುವರು. (OCTAVE) ಸ್ಥಾಯಿಯಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ,

  1. ಮಧ್ಯಸ್ಥಾಯಿ
  2. ಮಂದ್ರಸ್ವಾಮಿ
  3. ತಾರಸ್ಥಾಯಿ

ಮಧ್ಯಸ್ಥಾಯಿ:

ಆಧಾರ ಷಡ್ಜದಿಂದ ಆರೋಹಣ ಕ್ರಮದಲ್ಲಿ ನಿಷಾದದವರೆಗೆ ಬರುವ ಸ್ವರಗಳ ಸಮೂಹಕ್ಕೆ ಮಧ್ಯಸ್ಥಾಯಿ ಎಂದೂ ಕರೆಯುತ್ತೇವೆ.

ಮಂದ್ರಸ್ಥಾಯಿ:

ಆಧಾರ ಷಡ್ಜದಿಂದ ಅವರೋಹಣ ಕ್ರಮದಲ್ಲಿ ಬರುವ ಅಂದರೆ ನಿಷಾದದಿಂದ ಮೊದಲುಗೊಂಡು ಕೆಳಗಿನ ಷದ ವರೆಗೆ ಬರುವ ಸ್ವರ ಸಮೂಹವನ್ನು ಮಂದ್ರಸ್ಥಾಯಿ ಎನ್ನುವರು.

– ಸ ರಿ ಗ ಮ ಪ ದ ನಿ | ಸ ರಿ ಗ ಮ ಪ ದ ನಿ

ಮಂದ್ರಸ್ಥಾಯಿ

ಮಂದ್ರಸ್ಥಾಯಿ ಸ್ವರವನ್ನು ಸ್ವರಗಳ ಕೆಳಗೆ ಚುಕ್ಕೆ ಇಡುವುದರಿಂದ ಗುರುತಿಸುತ್ತಾರೆ.

ತಾರಸ್ಥಾಯಿ:

ಮಧ್ಯಸ್ಥಾಯಿಯ ಮುಂದಿನ ಷಡ್ಜದಿಂದ ಅಥವ ಮಧ್ಯಸ್ಥಾಯಿಯ ನಿಷಾದದ ನಂತರ ಆರೋಹಣ ಕ್ರಮದಲ್ಲಿ ಬರುವ ಸ್ವರಸಪ್ತಕವನ್ನು ತಾರಸ್ಥಾಯಿ ಎನ್ನುವರು. ಈ ಸ್ವರಗಳನ್ನು ಅವುಗಳ ಮೇಲೆ ಚುಕ್ಕೆ ಇಡುವುದರಿಂದ ಸೂಚಿಸುತ್ತಾರೆ.

ಸ ರಿ ಗ ಮ ಪ ದ ನಿ | ಸ ರಿ ಗ ಮ ಪ ದ ನಿ ಸ

ತಾರಸ್ಥಾಯಿಯ ನಂತರದ ಸ್ವರಸಪ್ತಕವನ್ನು ಅತಿತಾರ ಸ್ಥಾಯಿ ಎಂದೂ ಮಂದ್ರಸ್ಥಾಯಿಯ ಕೆಳಗಿನ ಸ್ವರ ಸಮೂಹವನ್ನು ಅನುಮಂದ್ರಸ್ಥಾಯಿ ಎಂದೂ ಕರೆಯುವರು.

  ಸ ರಿ ಗ ಮ ಪ ದ ನಿ 1 ಸ ರಿ ಗ ಮ ಪ ದ ನಿ | ಸ ರಿ ಗ ಮ ಪ ದ ನಿ | ಸ ರಿ ಗ ಮ ಪ ದ ನಿ |

ಈ ಸ್ಥಾಯಿಗಳನ್ನು ಅತಿಸಾರ, ಅನುಮಂದ್ರ ಸ್ವರಗಳ ಮೇಲೆ ಮತ್ತೆ ಕೆಳಗೆ ಎರಡು ಚುಕ್ಕೆಗಳನ್ನು ಇಡುವುದರ ಮೂಲಕ ಸೂಚಿಸುತ್ತಾರೆ.

ಉದ್ದೇಶ:

Ø ಸ್ಥಾಯಿಯನ್ನು, ಸ್ವರಗಳನ್ನು ಗುರುತಿಸುವುದು.

Ø ಮಧ್ಯಸ್ಥಾಯಿಯನ್ನು, ಮಧ್ಯಸ್ಥಾಯಿಯ ಸ್ವರಗಳನ್ನು ಗುರುತಿಸುವರು.

Ø ಮಧ್ಯಸ್ಥಾಯಿ / ಮಂದ್ರಸ್ಥಾಯಿಯ ನಡುವಿನ ವ್ಯತ್ಯಾಸ ಕಾಣುವದು.

Ø ಮಂದ್ರಸ್ಥಾಯಿಯ ಸ್ವರಗಳನ್ನು ಚುಕ್ಕೆಗಳಿಂದ ಗುರುತಿಸುವುದು.

Ø ಚುಕ್ಕಿಗಳನ್ನು ಗುರುತಿಸುವುದು.

Ø ಚುಕ್ಕಿಗಳನ್ನು ಇಡುವುದು.

Ø ಸ್ಥಾಯಿಯ ಅರ್ಥ ವಿವರಿಸುವುದು.

ಬೋಧನೋಪಕರಣ: –

Ø ತಂಬೂರಿ / ಶ್ರುತಿಪೆಟ್ಟಿಗೆ.

Ø ಸ್ವರಗಳ ಚಾರ್ಟ್, ಕಪ್ಪು ಹಲಗೆ

ಕಲಿಕಾವಿಧಾನ:

Ø ಮಧ್ಯಸ್ಥಾಯಿ, ಮಂದ್ರಸ್ಥಾಯಿ, ಮತ್ತು ತಾರಸ್ಥಾಯಿ ಸ್ವರಗಳನ್ನು ಹಾಡಿ ತೋರಿಸುವುದು.

Ø ಮೂರೂ ಸಪ್ತಕಗಳನ್ನು ಕಪ್ಪು ಹಲಗೆಯ ಮೇಲೆ ಬರೆದು ತೋರಿಸುವುದು.

Ø ಮೂರ ಸಪ್ತಕಗಳ ಸ್ವರಗಳ ಚಿನ್ನೆಗಳನ್ನು ತೋರಿಸಿಕೊಡುವುದು.

ಸ್ವಮೌಲ್ಯಮಾಪನ:

Ø ಸ್ಥಾಯಿಯ ಅರ್ಥವನ್ನು ಗ್ರಹಿಸಿದರೇ?

Ø ಸ್ಥಾಯಿಯನ್ನು ಗುರುತಿಸುವರೇ?

Ø ಸ್ಥಾಯಿಯ ವಿಧಗಳನ್ನು ಗುರುತಿಸಿದರೆ?

Ø ಮೂರು ಸ್ಥಾಯಿಗಳನ್ನು ಗುರುತಿಸುವರೇ? ಮತ್ತು ಹೆಸರಿಸುವರೇ?

ಘಟಕಾಂತ್ಯದ ಪ್ರಶ್ನೆಗಳು

Ø ಸ್ಥಾಯಿ ಎಂದರೇನು?

Ø ಸ್ಥಾಯಿಗಳಲ್ಲಿ ಎಷ್ಟು ವಿಧ?

Ø ಅವು ಯಾವುವು?

Ø ಮಂದ್ರಸ್ಥಾಯಿ ಎಂದರೇನು? ಉದಾಹರಣೆ ಕೊಡಿ.

Ø ಮಧ್ಯಸ್ಥಾಯಿ ಎಂದರೇನು? ಉದಾಹರಣೆ ಕೊಡಿ.

Ø ತಾರಸ್ಥಾಯಿ ಎಂದರೇನು? ಉದಾಹರಣೆ ಕೊಡಿ.

Ø ಮಂದ್ರಸ್ಥಾಯಿ, ತಾರಸ್ಥಾಯಿ, ಮಧ್ಯಸ್ಥಾಯಿಗಳ ಸ್ವರಗಳನ್ನು ಹೇಗೆ ಗುರುತಿಸುವಿರಿ?

ತಾರಸ್ಥಾಯಿವರಸೆ

ಅಧಿವೇಶನ

ಅವಧಿ:

ಪೀಠಿಕೆ: ಒಂದು ರಾಗದ ಆರೋಹಣ ಮತ್ತು ಅವರೋಹಣಕ್ಕೆ ಸುಲಭವಾಗಿ ಹೊಂದಿ ಬರುವ ಸಪ್ತಸ್ವರ ಸಮೂಹಕ್ಕೆ ಸ್ವಾಯಿ ಎನ್ನುವರು. ಮಧ್ಯಸ್ಥಾಯಿಯ ನಿಷಾಧಾದ ನಂತರ ಬರುವ ಸ್ವರಗಳಿಗೆ ತಾರಸ್ಥಾಯಿ ಎನ್ನುವರು. ಇದನ್ನು ಗುರ್ತಿಸಲು ಸ್ವರಗಳ ಮೇಲೆ ಚುಕ್ಕೆಗಳನ್ನು ಇಡಲಾಗುತ್ತದೆ.

ಉದಾ: – ನಿ ಸ ರಿ ಗ ಮ ಪ.

ಉದ್ದೇಶ:ಶ್ರುತಿಗೆ ಅನುಗುಣವಾಗಿ ಗಾಯಕ ತ್ರಿಸ್ಥಾಯಿಗಳಲ್ಲೂ ಸುಲಭವಾಗಿ ಹಾಡಲು ಪ್ರಯತ್ನಿಸುವುದಾಗಿದೆ.

ಕಲಿಕಾ ಸಾಮಾಗ್ರಿ: –

ಶ್ರುತಿ ಪೆಟ್ಟಿಗೆ ಅಥವಾ ತಂಬೂರಿ ಮತ್ತು ಕಪ್ಪುಹಲಗೆ.

ಕಲಿಕಾ ವಿಧಾನ: –

ಹಂತ 1 – ಸ್ಟಾಯಿಯ ಬಗ್ಗೆ ತಿಳಿಸುವುದು.

ಹಂತ 2 – ಸ್ವರ ಸ್ಥಾನಗಳನ್ನು ತಿಳಿಸುವುದು.

ಹಂತ 3 – ಹಾಡಿ ತೋರಿಸುವುದು.

ಹಂತ 4 – ಹೇಳಿಕೊಡುವುದು.

ಸ್ವ ಮೌಲ್ಯಮಾಪನ: –

  1. ಸ್ಥಾಯಿಯ ಅರ್ಥ ತಿಳಿದರೇ?
  2. ಸ್ವರ ಸ್ಥಾನದ ಪರಿಚಯವಾಯಿತೆ?
  3. ಕೊಟ್ಟ ಉದಾಹರಣೆಯನ್ನು ಅರಿತರೇ?

ತಾತ್ವಿಕ ಪ್ರಶ್ನೆಗಳು: –  

  1. ಸ್ಥಾಯಿ ಎಂದರೇನು?
  2. ತಾರಸ್ವಾಯಿ ಎಂದರೇನು?
  3. ಇದನ್ನು ಗುರುತಿಸಲು ಎಲ್ಲಿ ಚುಕ್ಕೆಗಳನ್ನು ಇಡಲಾಗುತ್ತದೆ?

ಮಂದ್ರಸ್ಥಾಯಿವರಸೆ

ಅಧಿವೇಶನ 

ಅವಧಿ:

ಪೀಠಿಕೆ: – ಆಧಾರ ಷಡ್ಜದಿಂದ ಕೆಳಗೆ ಬರುವ ಸ್ವರಗಳನ್ನು ಮಂದ್ರಸ್ಥಾಯಿ ಎನ್ನುವರು. ಇದನ್ನು ಗುರ್ತಿಸಲು ಸ್ವರಗಳ ಕೆಳಗೆ ಚುಕ್ಕೆಗಳನ್ನು ಇಡಲಾಗುತ್ತದೆ.

ಉದಾ: – ನಿ ದ ಪ ಮ ಗ ರಿ

ಉದ್ದೇಶ:

ಉಸಿರಿನ ಹಿಡಿತದೊಂದಿಗೆ ಗಾಯಕ ಸ್ವರಗಳನ್ನು ನಿಯಂತ್ರಿಸುವುದಾಗಿದೆ.

ಕಲಿಕಾ ಸಾಮಾಗ್ರಿ: –

ಶ್ರುತಿ ಪೆಟ್ಟಿಗೆ ಅಥವಾ ತಂಬೂರಿ, ಕಪ್ಪುಹಲಗೆ

ಕಲಿಕಾ ವಿಧಾನ: –

ಹಂತ 1 – ಮೊದಲು ಕಪ್ಪು ಹಲಗೆಯ ಮೇಲೆ ಬರೆಯಿಸುವುದು.

ಹಂತ 2 – ಅದರ ಅರ್ಥವನ್ನು ವಿವರಿಸುವುದು.

ಹಂತ 3 – ಹಾಡಿ ತೋರಿಸುವುದು.

ಹಂತ 4 – ಹೇಳಿ ಕೊಡುವುದು,

ಸ್ವ ಮೌಲ್ಯಮಾಪನ

  1. ಮಂದ್ರ ಸ್ಥಾಯಿಯ ಪರಿಚಯ ವಾಯಿತೇ?
  2. ಚುಕ್ಕೆಗಳನ್ನು ಇಡುವುದರ ಗುರುತು ಆಯಿತೇ?
  3. ಹೇಳಿದ ಅಂಶವನ್ನು ಸರಿಯಾಗಿ ಅರ್ಥಮಾಡಿಕೊಂಡರೇ?

ತಾತ್ವಿಕ ಪ್ರಶ್ನೆಗಳು

  1. ಮಂದ್ರಸ್ಥಾಯಿ ಎಂದರೇನು?
  2. ಮಂದ್ರಸ್ಥಾಯಿಯನ್ನು ಗುರುತಿಸಲು ಚುಕ್ಕೆಗಳನ್ನು ಎಲ್ಲಿ ಇಡುತ್ತಾರೆ?

ದಾಟುವರಸೆ

ಅಧಿವೇಶನ

ಅವಧಿ:

ಪೀಠಿಕೆ – ಸ್ವರಗಳ ಜೋಡಣೆಯು ಕ್ರಮರಹಿತವಾಗಿದ್ದು, ಅಂದರೆ ಒಂದು, ಎರಡು ಅಥವಾ ಮೂರು ಸ್ವರಗಳನ್ನು ಬಿಟ್ಟು ಮುಂದಿನ ಸ್ವರವನ್ನು ಹೊಂದಿರುವುದಕ್ಕೆ ದಾಟುವರಸೆ ಎಂದು ಹೆಸರು. ಸ್ವರಗಳು ವಕ್ರಗತಿಯಲ್ಲಿ ಸಂಚರಿಸುತ್ತವೆ.

ಉದ್ದೇಶ: –

ವಿದ್ಯಾರ್ಥಿಗಳಿಗೆ ಸ್ವರಸ್ಥಾನಗಳನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ.

ಕಲಿಕಾಸಾಮಾಗ್ರಿ: –

ಶ್ರುತಿಪೆಟ್ಟಿಗೆ ಅಥವಾ ತಂಬೂರಿ, ಕಪ್ಪುಹಲಗೆ.

ಕಲಿಕಾ ವಿಧಾನ: –

ಹಂತ 1 – ಕಪ್ಪು ಹಲಗೆಯ ಮೇಲೆ ಬರೆಯಿಸುವುದು.

ಹಂತ 2 – ಹಾಡಿ ತೋರಿಸುವುದು.

ಹಂತ 3 – ಹೇಳಿ ಕೊಡುವುದು.

ಸ್ವ ಮೌಲ್ಯಮಾಪನ

Ø ದಾಟು ಪದದ ಅರ್ಥ ತಿಳಿದರೇ?

Ø ಸ್ವರಗಳ ಸಂಚಾರದ ಬಗ್ಗೆ ಅರಿತರೇ?

Ø ಹಾಡಿ ತೋರಿಸಲಾದ ಸಾಲನ್ನು ಗುರುತಿಸಿದರೇ?

ತಾತ್ವಿಕ ಪ್ರಶ್ನೆಗಳು

  1. ಕ್ರಮರಹಿತ ಪದದ ಅರ್ಥವೇನು?
  2. ದಾಟುವರಸೆ ಎಂದರೇನು?
  3. ಅವುಗಳ ಸ್ವರಸ್ಥಾನಗಳೇನು?

ಜಂಟಿವರಸೆ

ಅಧಿವೇಶನ

ಅವಧಿ:

ಪೀಠಿಕೆ: – ಸ್ವರಗಳ ಜೋಡಣೆಯಲ್ಲಿ ಪ್ರತಿಯೊಂದು ಸ್ವರವೂ ಪುನರಾವರ್ತನೆಯಾಗಿ, ಜಂಟಿಯಾಗಿ ಬರುವುದರಿಂದ ಜಂಟಿವರಸೆಯೆಂದು ಹೆಸರು. ಒಂದೊಂದು ಸ್ವರವೂ ಎರಡು ಬಾರಿ ಪುನರಾವರ್ತನೆಯಾಗಿತ್ತದೆ.

ಉದ್ದೇಶ: –  ಒಂದು ಸ್ವರವನ್ನು ಏಕರೀತಿಯಲ್ಲಿ ಜೋಡಿಯಾಗಿ ಅಥವಾ ಜಂಟಿಯಾಗಿ ಹಾಡಲು ಉಪಯೋಗವಾಗಿದೆ, ಮತ್ತು ಸ್ವರಸ್ಥಾನವನ್ನು ತಿಳಿಯಲು ಅನುಕೂಲವಾಗಿದೆ.

ಕಲಿಕಾ ಸಾಮಾಗ್ರಿ: –

ತಂಬೂರಿ ಅಥವಾ ಶ್ರುತಿ ಪೆಟ್ಟಿಗೆ ಮತ್ತು ಕಪ್ಪುಹಲಗೆ.

ಕಲಿಕಾ ವಿಧಾನ: –

ಹಂತ 1 – ಜೋಡಿ ಸ್ವರಗಳ ಪ್ರಯೋಗ ಮಾಡುವ ಕ್ರಮವನ್ನು ಹಾಡಿ ತೋರಿಸುವುದು.

ಹಂತ 2 – ಹೇಳಿಕೊಡುವುದು.

ಹಂತ 3 – ಹಾಡಲು ಪ್ರಯತ್ನಿಸುವ ವಿದ್ಯಾರ್ಥಿಗಳು ಸರಿಯಾಗಿ ಹಾಡುವರೇ ಎಂದು ಗಮನಿಸುವುದು.

 ಸ್ವ ಮೌಲ್ಯಮಾಪನ:

Ø ಜೋಡಿ ಸ್ವರಗಳ ಬಗ್ಗೆ ತಿಳಿದಿರುವರೇ?

Ø ಸ್ವರಗಳ ಪುನರಾವರ್ತನೆಯ ಬಗ್ಗೆ ತಿಳಿದರೇ?

Ø ಹಾಡುವ ರೀತಿಯನ್ನು ಅರಿತರೇ?

ತಾತ್ವಿಕ ಪ್ರಶ್ನೆಗಳು

  1. ಪುನರಾವರ್ತನೆಯ ಸ್ವರಗಳನ್ನು ಏನೆಂದು ಕರೆಯುವರು?
  2. ಜಂಟಿ ಪದದ ಅರ್ಥವೇನು?
  3. ಸ್ವರಸ್ಥಾನಗಳು ಹೇಗೆ ಬರುತ್ತವೆ?

ಕೋಲಾಟದ ಪದಗಳು

ಅಧಿವೇಶನ: 6

ಅವಧಿ: 45 ನಿಮಿಷಗಳು

ಜನಪದ ಗೀತೆಗಳಲ್ಲೇ ಜನಪ್ರಿಯವಾದ ಗಾಯನ ಪ್ರಕಾರ ಕೋಲಾಟ ಪದಗಳು, ಕೋಲಾಟವು ಗಾಯನ, ವಾದನ, ನೃತ್ಯ ಈ ಮೂರು ಕಲೆಗಳ ಸಂಗಮವಾಗಿದೆ. ಕೋಲಾಟದ ಹಾಡುಗಳು ಸರಳ ಧಾಟಿಯಲ್ಲಿದ್ದು ಮುಖ್ಯ ಸಾಲನ್ನು ಪದೇ ಪದೇ ಪುನರಾವರ್ತಿಸುತ್ತಾ ಹಾಡುತ್ತಾರೆ. ಈ ನೃತ್ಯವು ವಿಧ ವಿಧವಾದ ಮಾದರಿಯಲ್ಲಿ ಆಕರ್ಷಕವಾಗಿರುತ್ತದೆ. ಬಿದಿರಿನ ಕೋಲಿನ ಪೆಟ್ಟಿನ ನಾದವು ನೃತ್ಯಕ್ಕೆ ಲಯವನ್ನು ನೀಡುತ್ತದೆ. ಕೋಲಾಟ ಮಾಡುವ ನರ್ತಕರೇ ಹಾಡಿಕೊಂಡು ನೃತ್ಯ ಮಾಡುವುದು ಕೂಡ ಇದರ ವಿಶೇಷ. ದಕ್ಷಿಣ ಭಾರತದಲ್ಲಿ ಕೋಲಾಟವಿರುವಂತೆ ಗುಜರಾತಿನ ಡಾಂಡಿಯಾರಾಸ್ ಕೂಡ ಜನಪ್ರಿಯ ಜನಪದ ಪ್ರಕಾರವಾಗಿದೆ. ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ವಿವಿಧ ರೀತಿಯ ಕೋಲಾಟಗಳು ಪ್ರಸಿದ್ದಿಯಲ್ಲಿವೆ.

ಮೈಸೂರು, ಮಂಡ್ಯ, ಹಾಸನದ ಒಕ್ಕಲಿಗ ನಾಯಕರು ಮತ್ತು ಗೊಲ್ಲರು, ಉತ್ತರ ಕರ್ನಾಟಕದ ಹಾಲಕ್ಕಿ ಗೌಡರು ಮತ್ತು ಮಡಿಕೇರಿಯ ಕೊಡವರ ಕೋಲಾಟವು ಪ್ರಸಿದ್ಧವಾಗಿವೆ.

ನಿಮಗಿದು ತಿಳಿದಿರಲಿ

ಹುಕ್ಕೇರಿ ಬಾಳಪ್ಪ (1911 – 1992)

ಕರ್ನಾಟಕದ ಜಾನಪದ ಸಂಗೀತ ಕ್ಷೇತ್ರದಲ್ಲಿ ಉತ್ತುಂಗ ಶಿಖರಕ್ಕೇರಿ ಕೀರ್ತಿಶೇಷರಾದ ಮಹಾನ್ ಗಾಯಕ ಬಾಳಪ್ಪ ಹುಕ್ಕೇರಿಯವರು ಜಾನಪದ ಸಂಗೀತಕ್ಕೆ ಕಚೇರಿ ವೇದಿಕೆಯ ಗೌರವವನ್ನು ದೊರಕಿಸಿಕೊಟ್ಟವರು. ಹಳ್ಳಿಯಿಂದ

ದಿಲ್ಲಿಯವರೆಗೂ ಕನ್ನಡ ಜಾನಪದ ಸಂಗೀತವನ್ನು ಕೊಂಡೊಯ್ದ ಇವರು, ಅದಕ್ಕೆ ರಾಷ್ಟ್ರಮಟ್ಟದ ಘನತೆ ಕೊಡಿಸುವಲ್ಲಿ ಯಶಸ್ವಿಯಾದವರು. ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ, ತಮ್ಮ ಹಾಡುಗಳ ಮೂಲಕ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಜನರನ್ನು ಹುರಿದುಂಬಿಸುತ್ತಿದ್ದ ಅವರು, ಅದಕ್ಕಾಗಿ 6ತಿಂಗಳು ಸೆರೆಮನೆವಾಸವನ್ನು ಕೂಡಾ ಅನುಭವಿಸಿದರು. ಸರ್ಕಾರಿ ಸೇವೆಯಲ್ಲಿದ್ದ ಇವರು ಪಾಕಿಸ್ತಾನ ಮತ್ತು ಚೀನಾ ಯುದ್ಧದ ಸಮಯದಲ್ಲಿ ತಮಗೆ ಬಂದ ಬೆಳ್ಳಿ – ಬಂಗಾರದ ಪದಕಗಳನ್ನು ಸೈನಿಕರ ನಿಧಿಗೆ ದಾನ ಮಾಡಿದ ಮಹಾನ್ ದೇಶಭಕ್ತ ಗಾಯಕರಾಗಿದ್ದರು.

ಉದಾ:

ಕೋಲು ಕೋಲಣ್ಣ ಕೋಲು ಕೋಲೆ

ಕೋಲಣ್ಣ ಕೋಲೆ

ಕೋಲು ಕೋಲಣ್ಣ ಕೋಲು ಕೋಲೆ

ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ

ಮಲ್ಲಯ್ಯನ ಮಡದಿ ಮರುಗಮ್ಮ | ಕೋಲಣ್ಣ ಕೋಲ

ಮಲ್ಲಯ್ಯನಾ ಮಡದಿ ಮರುಗಮ್ಮನಿರುವುದು ಕಲ್ಲು ಮಳಿಗೆ ಕೈಲಾಸ | ಕೋಲಣ್ಣ ಕೋಲೆ |

ಜೋಗುಳ ಪದ

ಅಧಿವೇಶನ: 6 (1)

ಅವಧಿ: 45 ನಿಮಿಷಗಳು

ಇದೊಂದು ಪುರಾತನ ಜನಪದ ಗೀತ ಪ್ರಕಾರವಾಗಿದೆ. ಕಂದನನ್ನು ತೊಟ್ಟಿಲಿಗೆ ಹಾಕಿ ಮೆಲ್ಲನೆ ಮೃದುವಾಗಿ ತೂಗುತ್ತಾ, ಸಿಹಿಯಾಗಿ ಮೃದುವಾಗಿ ಹಾಡುತ್ತಾ ಮಲಗಿಸುವ ಗೀತೆ ಜೋಗುಳ. ಜೋಗುಳವನ್ನು ಹಾಡದ, ಇಷ್ಟಪಡದ ತಾಯಿಯೇ ಇಲ್ಲ ಎನ್ನಬಹುದು. ಜೋಗುಳವು ಮಾತೃತ್ವದ ಅನುಭವವನ್ನು ರೋಮಾಂಚನಗೊಳಿಸುವ ಗೀತ ಪ್ರಕಾರವೂ ಆಗಿದೆ. ತನ್ನ ಮಗುವಿನ ರೂಪವನ್ನು ಮೆಚ್ಚುತ್ತಾ, ಅದರ ತುಂಟಾಟಗಳನ್ನು ಹಾಸ್ಯಪೂರ್ವಕವಾಗಿ ವರ್ಣಿಸುತ್ತಾ, ಅದರ ಇರುವಿಕೆಯಿಂದಾಗಿ ಮನೆಯ ಆನಂದವು ಹೆಚ್ಚುವುದನ್ನು ಸಂತೋಷಿಸುತ್ತಾ, ಕಡೆಗೆ ತನ್ನ ಮಗುವಿನಲ್ಲಿ ದೇವರ ರೂಪವನ್ನೇ ಕಾಣುತ್ತಾ ಮಾತೃ ಹೃದಯ ಗುನುಗುನಿಸುವ ಗೀತೆಯೇ ಜೋಗುಳ.

ಹತ್ತಿಯ ಮರಕೆ ಹತ್ತಿತು ಗುಮ್ಮ

ಹತ್ತು ನೂರಣ್ಣ ಕೆಡವಿತು ಗುಮ್ಮ

ಗುಮ್ಮು ಬರುತಾದೆ ಸುಮ್ಮನೆ ಮಲಗು

ಜೋಗುಳ ಪಾಡಿದರು ಬಾಲೇರು ಜೋ . . . ಜೋ . . . .

ನಿಮ್ಮಪ್ಪ ನೋಡಿದರೆ ಕಿತ್ತಳೆ ಹಣ್ಣು

ನಿಮ್ಮವ್ವ ನೋಡಿದರೆ ಮಾವಿನಹಣ್ಣು

ನೀ ಎಲ್ಲಿ ಹುಟ್ಟಿದ್ದೆ ರ್ಗುಣಕಲ್ಲು ರಾಮ

ಜೊಗುಳವ ಪಾಡಿದರು ಬಾಲೇರು ಜೋ.. . ಜೋ . . . .

ಆಲದ ಮರಕೆ ಹಾರಿತು ಗುಮ್ಮ

ಆರು ನೂರಣ್ಣ ಕೆಡವಿತು ಗುಮ್ಮ

ಗುಮ್ಮ ಬರುತಾನೆ ಸುಮ್ಮನೆ ಮಲಗು

ಬಾಲೇರು ಮಾಡಿದರು ಜೋಗುಳ ಜೋ . ಜೋ . . .

ಚಿನ್ನದ ತೊಟ್ಟಿಗೆ ರನ್ನದ ಸರಪಣಿ

ಮುತ್ತೈದೆಯರೆ ಬನ್ನಿ ಮುಟ್ಟಿ ಶಾಸ್ತ್ರವ ಮಾಡಿ

ಮುತ್ತೈದೆಯರೆ ಬನ್ನಿ ಮುಟ್ಟಿ ಶಾಸ್ತ್ರವ ಮಾಡಿ

ಶಿವ ಕೊಟ್ಟ ಕಂದನ ತೊಟ್ಲಿಗೆ ಹಾಕಿ ಜೋ . ಜೋ . . .

ದೇಶ ಭಕ್ತಿಗೀತೆ

ಅಧಿವೇಶನ: 7

ಅವಧಿ: 45 ನಿಮಿಷ

ಹೆಸರೇ ಸೂಚಿಸುವಂತೆ ದೇಶಭಕ್ತಿ ಗೀತೆಗಳೆಂದರೆ ನಮ್ಮ ದೇಶದ ಕುರಿತು ಭಕ್ತಿ, ಗೌರವವನ್ನು ಹೊಂದುವಂತೆ ಮಾಡುವ ಗೀತೆಗಳು. ಈ ಗೀತೆಗಳನ್ನು ಉತ್ಸಾಹದಿಂದ ಹಾಡುವುದಂಡ ಸಹಜವಾಗಿ ನಮ್ಮ ನರನಾಡಿಗಳಲ್ಲಿ ಜಾಗತವಾಗಿ ದೇಶದ ಕುರಿತು ಹೆಮ, ಗೌರವ ಮೂಡುತ್ತದೆ. ಈ ಗೀತೆಗಳಿಂದ ನಮ್ಮ ದೇಶದ ಸಂಶಿಯ, ವಿಶೇಷತೆ, ಮಹತ್ವ ತಿಳಿಯಲು ಸಹಾಯಕ. ದೇಶದ ಪ್ರತಿಯೊಬ್ಬ ಪ್ರಜೆಯು ತಮ್ಮ ದೇಶದ ಬಗ್ಗೆ ಭಕ್ತಿ, ಶ್ರದ್ದೆ, ಗೌರವಗಳನ್ನು ಇಟ್ಟುಕೊಳ್ಳಲೇ ಬೇಕಾಗಿರುವುದರಿಂದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳನ್ನು ಪಾಠಮಾಡಿ ಅವರು ದೇಶಭಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯವಾಗಿದೆ.

ಉದ್ದೇಶ:

Ø ನಮ್ಮ ದೇಶದ ಕುರಿತು ಭಕ್ತಿಯನ್ನು ಜಾಗೃತಗೊಳಿಸುವುದು.

Ø ನಮ್ಮ ದೇಶದ ಸಂಸ್ಕೃತಿ, ವಿಶೇಷತೆಯನ್ನು ಅರಿಯುವಂತೆ ಮಾಡುವುದು.

Ø ನಮ್ಮ ದೇಶದ ಕುರಿತು ಗೌರವ ಮನೋಭಾವ ಬೆಳೆಸುವುದು.

Ø ದೇಶಭಕ್ತಿ ಗೀತೆಗಳನ್ನು ಸಂಗ್ರಹಿಸುವ, ಹಾಡುವ ಕೌಶಲ್ಯ – ಬೆಳೆಸುವುದು.

ಕಲಿಕಾ ಸಾಮಗ್ರಿ:

Ø ಚಾಟಿ೯ಗಳು, ವಿಡಿಯೋ ಆಡಿಯೋಗಳು, ವಾದ್ಯಗಳು.

Ø ಶಿಕ್ಷಕರ ಪಾತ್ರ: ಶಿಕ್ಷಕರು ಹಲವು ಭಾಷೆಗಳ ದೇಶಭಕ್ತಿಗೀತೆಗಳನ್ನು ಸಂಗ್ರಹಿಸಿ ರಾಗ ಸಂಯೋಜನೆ ಮಾಡಿ ಹಾಡುವ ಕೌಶಲ್ಯ ಹೊಂದಿರುವುದು.

ಕಲಿಕಾ ವಿಧಾನ: ಗಾಯನ, ಪ್ರಾತ್ಯಕ್ಷಿಕೆ.

ಹಂತ – 1:

Ø ದೇಶಭಕ್ತಿಗೀತೆಗಳ ಮಹತ್ವವನ್ನು ಮನಮುಟ್ಟುವಂತೆ ವಿವರಿಸುವುದು.

ಹಂತ – 2:

Ø (ಪಯೋಗ).

Ø ದೇಶಭಕ್ತಿಗೀತೆಯನ್ನು ಭಾವಾರ್ಥ ಸಹಿತ ಬರೆಸುವುದು.

ಹಂತ – 3:

Ø (ಪ್ರಯೋಗ).

Ø ದೇಶಭಕ್ತಿ ಗೀತೆಗಳನ್ನು ಸ್ವರ, ಲಯ, ಸಾಹಿತ್ಯ, ಭಾವಪೂರ್ಣವಾಗಿ ಹಾಡುವುದು.

Ø ವಾದ್ಯಗಳೊಂದಿಗೆ (ಹಾರ್ಮೋನಿಯಂ).

ಹಂತ – 4:

Ø (ಪಯೋಗ).

Ø ದೇಶಭಕ್ತಿಗೀತೆಗಳ ಆಡಿಯೋ / ವಿಡಿಯೋ ಪ್ರದರ್ಶನ.

ಹಂತ – 5:

Ø (ಪ್ರಯೋಗ),

Ø ಕಲಿಸಿದ ದೇಶಭಕ್ತಿಗೀತೆಯನ್ನು ವಿದ್ಯಾರ್ಥಿಗಳಿಂಧ ಸಮೂಹದಲ್ಲಿ ಹಾಡಿಸುವುದು.

ಸ್ವಮೌಲ್ಯಮಾಪನ:

Ø ದೇಶಭಕ್ತಿಗೀತೆಯ ಮಹತ್ವವನ್ನು ಹೇಳಬಲ್ಲರೇ?

Ø ನಮ್ಮ ದೇಶ, ಸಂಸ್ಕೃತಿಯ ಕುರಿತು ಗೌರವ, ಭಕ್ತಿ ಹೊಂದಿರುವರೆ?

Ø ದೇಶಭಕ್ತಿಗೀತೆಯನ್ನು ಆಸಕ್ತಿಯಿಂದ ಕೇಳುವರೆ / ಹಾಡುವರೆ?

Ø ದೇಶಭಕ್ತಿಗೀತೆಯನ್ನು ಹಾಡಿದಾಗ / ಕೇಳಿದಾಗ ನಮ್ಮಲ್ಲಿ ಯಾವ ಭಾವ ಜಾಗೃತವಾಗಬೇಕೆಂಬುದನ್ನು ಅರಿತಿರುವರೆ?

Ø ನಮ್ಮ ಪ್ರಖ್ಯಾತ ದೇಶಭಕ್ತಿಗೀತೆಗಳನ್ನು ಹಾಡಲು ತಿಳಿದಿರುವರೆ?

ಪ್ರಶ್ನೆಗಳು:

  1. ದೇಶಭಕ್ತಿಗೀತೆ ಎಂದರೇನು?
  2. ದೇಶಭಕ್ತಿ ಗೀತೆಗಳ ಮಹತ್ವವೇನು?
  3. ನಮ್ಮ ಪ್ರಮುಖ ದೇಶಭಕ್ತಿಗೀತೆಗಳು ಯಾವವು?
  4. ದೇಶಭಕ್ತಿಗೀತೆಗಳನ್ನು ಸಂಗ್ರಹಿಸಿ ಹಾಡಲು ಅಭ್ಯಾಸ ಮಾಡಿರಿ.
  5. ಆಕರ ಗ್ರಂಥಗಳು.
  6. ದೇಶಭಕ್ತಿಗೀತೆಗಳ ಸಂಗ್ರಹ ಪುಸ್ತಕಗಳು.

ದೇಶ ಭಕ್ತಿಗೀತ

 ರಚನೆ: ಡಾ|| ಜಿ. ಎಸ್. ಅವಧಾನಿ

ಜಯಭಾರತಿ ಜಯಭಾರತಿ

ಶರಣೆನ್ನುವ ತಾಯೆ |

ಎದೆಯುಬ್ಬಿಸಿ ಹುಡಿದೆಬ್ಬಿಸಿ

ಜಯವನ್ನುವ ತಾಯೆ||

ನಿನ್ನಡಿಗಿದೇ ಮುಡಿ

ಬಾ ಎತ್ತಿಕೋ ಎಮ್ಮ ಸ್ವಾ

ತಂತ್ರ್ಯದ ದೀಪಾರತಿ

ಬೆಳಗಿದೆ ಓ ಅಮ್ಮ |

ಆಪಮಾನದಿ ಕುದಿಕುದಿಥರು

ನಮಗೆಲ್ಲಿಯ ಲಜ್ಜೆ

ದಿನ ದಿನ ಉದಾಸ್ಯದನೊಗ

ಹೊತ್ತೆಳೆಯುವ ಹೆಜ್ಜೆ |

ಶತಕೋಟಿಯ ಮಹಾತಾಯೆ

ಮುನಿದೊಮ್ಮೆಗೆ ಹೊರಳು

ಜಡಭರತರ ಬಡಿದೆಬ್ಬಿಸು

ಮರುದನಿಸವಿಗೊರಳು,

ಸಾಕೇತಕೆ ಬಿಡು ಮೌನ

ಒಳಗೇನಿದೆ ಹೇಳು

ಕಣ್ಣೀರನು ತೊಡೆದೊಮ್ಮೆಗೆ

ಮಹಾಕಾಳಿಯೇ ಗುಡುಗು!

ಸಮುದಾಯಗೀತೆ

ಅಧಿವೇಶನ: 7 (1)

ಅವಧಿ45 ನಿಮಿಷಗಳು

ಹೆಸರೇ ತಿಳಿಸುವಂತೆ ಒಂದು ಭಾಷೆ, ಪ್ರಾಂತ್ಯ ಸಮುದಾಯದ ವಿಭಿನ್ನತೆಯನ್ನು ಬಿಂಬಿಸುವ ಗೀತೆಗಳೇ ಸಮುದಾಯ ಗೀತೆಗಳು. ಸಾಧಾರಣವಾಗಿ ಇದೊಂದು ಸಾಮೂಹಿಕ ಗೀತ ಪ್ರಕಾರವಾಗಿದೆ. ಸಮುದಾಯಗೀತೆಗಳಲ್ಲಿ ಸಾಮಾನ್ಯವಾಗಿ ತಮ್ಮ ನಾಡು – ನುಡಿಯ ಬಗ್ಗೆ ಹೆಮ್ಮೆ. ಅಭಿಮಾನ, ತಮ್ಮ ಸಂಸ್ಕೃತಿಯ ಕುರಿತು ವಿಶೇಷತೆಗಳು, ತಮ್ಮ ನಾಡಿನ ವೀರರ ಸಾಧು ಸಂತರ ಕುರಿತ ವಿವರಣೆಗಳು ಇವೇ ಮುಂತಾದವುಗಳನ್ನು ಒಳಗೊಂಡಿರುತ್ತವೆ. ಇವುಗಳು ಸಾಮಾನ್ಯವಾಗಿ ಸರಳವಾಗಿ, ಆಕರ್ಷಕ ರಾಗ ಸಂಯೋಜನೆಗಳಿಂದ ಎಲ್ಲರ ಮನಸೂರೆಗೊಳ್ಳುತ್ತವೆ. ಸಮುದಾಯಗೀತೆಯ ಕಲಿಕೆಯು ವಿದ್ಯಾರ್ಥಿಗಳಿಗೆ ಬೇರೆ ಬೇರೆ ಭಾಷೆಗಳ ಕುರಿತು, ಸಂಸ್ಕೃತಿಯ ಕುರಿತು ಆಸಕ್ತಿಯನ್ನು ಮೂಡಿಸುತ್ತದೆ. ಭಾರತದ ಧ್ಯೇಯ “ವಿವಿಧತೆಯಲ್ಲಿ ಏಕತೆ” ಯ ಮಹತ್ವವನ್ನು ಮನದಟ್ಟಾಗುವಂತೆ ಮಾಡುತ್ತದೆ.

ಮಲಯಾಳಂ ಹಾಡು

ಕುಟ್ಟ ನಾಡನ್ ಪುಂಜಯಿಲ್ಲೆ ತಿತ್ ತೈಯಿ ತಗ ತೈ ತೈ ತೋಂ

ಕೊಚ್ಚು ಪೆಣ್ಣೆ ಕುಯಿ ಲಾಳೆ ತಿತ್ ತಾ ತಿತ್ ತೈಯಿ ತೈಯಿ

ಕೊಟ್ಟು ವೆಣಮ್ ಕುರಲ್ ವೆಣಮ್ ಕುರುವ ವೇಣಮ್

ಈ ತಿತ್ ತಿತ್ ತಾರಾ ತಿತ್ ತಿತ್ ತೈಯಿ

ತಿತ್ ತೈಯಿ ತಗ ತೈ ತಒ ತೋಂ

ವರವೆಲ್‍ಕನ್ ಆಳೊ ವೇಣಮ್

ಕೋಡಿ ತೋರಣಂಗಲ್ ವೇಣಮ್

ವಿಜಯ ಶ್ರೀ ಲಾಳಿ ತರಾಯ್‍ವೆರುನ್ಯೂ ನ್ಯಂಗಲ್ ||ಓ||

ತೆಂಗೋಲಾಗಲ್ ಪುಣ್ಣೊಲಾಗಲ್

ಮಾಡಿ ಮಾಡಿ ವಿಳ್ಳಿಕ್ಯುನ್ನು

ತೆನ್ನಲ್‍ವನ್ನು ವೆಂಚಾಮರಮ್ ವಿಶಿ ತರನ್ನು ||ಓ||

ಪ್ಂಬಾಯಿಲ್ಲೆ ಕುನ್ಯೋಲಂಗಳ್ ತಿತ್ ತೈ ತಗ ತೈಯಿ ತೈಯಿ ತೊಂ

ವೊಡಿವನ್ನು ಪುನ್ನರುನ್ನು ತಿತ್ ತಿತ್ ತಾ ತಿತಿ ತೈಯಿ ತೈಯಿ

ತಂಗವೇಯಿಲ್ ನೆಟ್ಟಿ ಇನ್ಮೇಲ್ ಪೊಟ್ಟು ಕುಟ್ಟುನ್ನು ||ಓ||

ಕರುಮಾದಿ ಕುಟ್ಟನಿನ್ನು

ಪಣಿನೀರ್ ಕಿನ್ನುರಾತ್ರಿ ಗರುಡನ್ ತೂಕ್ಕಮ್ ||ಓ||

ಚೆಂಬಂಕುಳಮ್ ಪಳ್ಳಿಕ್ಯೊರು ತಿತ್ ತೈಯಿ ತೈ ತೈ ತೋಂ

ಪೆಳ್ಳಂಕಳಿ ಪ್ರ‍್ನಾಳ್ ತಿತ್ ತಾ ತಿತ್ ತೈ ತೈ

ಆಂಬಲ ಪುರಯುಳ್ಳೋರು ಚುಟ್ಟು ವಿಲಕ್ ||ಓ||

ಭಾರತೀಯ ಸಂಗೀತ ವಾದ್ಯಗಳು/ ವಾದ್ಯಗಳ ವರ್ಗೀಕರಣ

ಅಧಿವೇಶನ: 8

ಅವಧಿ: 90ನಿಮಿಷ

ಪೀಠಿಕೆ: ಸಂಗೀತವೆಂದರೆ ಗಾಯನ, ವಾದನೆ ಮತ್ತು ನರ್ತನ ಈ ಮೂರು ಕಲೆಗಳ ಸಂಗಮ. ನಾದವನ್ನು ಹೊರಹೊಮ್ಮಿಸಲು ಇರುವ ಎರಡು ಮುಖ್ಯ ಮಾಧ್ಯಮಗಳೆಂದರೆ ಒಂದನೇಯದು ಮನುಷ್ಯನ ಶಾರೀರ (ಧ್ವನಿ). ಎರಡನೇಯದು ವಾದ್ಯಗಳು ಸಂಗೀತದಲ್ಲಿ ಗಾಯನಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವವನ್ನು ವಾದ್ಯಗಳೂ ಪಡೆದಿದೆ. ಪ್ರಪಂಚದಲ್ಲಿ ನಾದವನ್ನು ಹೊರಡಿಸಬಬಲ್ಲ ಹಲವು ಸಾವಿರ ವಾದ್ಯಗಳಿವೆಯೆಂದು ಹೇಳಲಾಗಿದೆ. ಇವುಗಳಲ್ಲಿ ಭಾರತೀಯ ಸಂಗೀತ ವಾದ್ಯಗಳು ತಮ್ಮ ಮಧುರ ನಾದದಿಂದಾಗಿ ಜಗತ್ತಿನಲ್ಲೇ ಶ್ರೇಷ್ಠ ಎನ್ನಬಹುದು. ಅದರಲ್ಲೂ ವೀಣೆ, ಮೃದಂಗ, ತಂಬೂರಿ, ಕೊಳಲು ಮೊದಲಾದವು ಬಹು ಪುರಾತನ ವಾದ್ಯಗಳಾಗಿರುವುದನ್ನು ಗಮನಿಸಬಹುದಾಗಿದೆ. ಭಾರತೀಯ ಸಂಗೀತ ವಾದ್ಯಗಳಲ್ಲಿ ಸಾಧನೆ ಮಾಡಿದ ವಾದಕರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಖ್ಯಾತಿಯನ್ನು ಬೇಡಿಕೆಯನ್ನು ಪಡೆಯುತ್ತಿರುವುದನ್ನು ಅವಲೋಕಿಸಿದರೆ ವಾದ್ಯಗಳ ಮಹತ್ವ ತಿಳಿಯಬಹುದು. ಈ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ವಾದ್ಯಗಳ ಕುರಿತ ಪರಿಚಯ ಅತ್ಯವಶ್ಯಕವಾಗಿದೆ.

ಉದ್ದೇಶ

  • ಸಂಗೀತ ವಾದ್ಯಗಳನ್ನು ಗುರುತಿಸುವಂತೆ ಮಾಡುವುದು.
  • ಭಾರತೀಯ ಸಂಗೀತ ವಾದ್ಯಗಳ ಮಹತ್ವವನ್ನು ಅರಿಯುವಂತೆ ಮಾಡುವುದು.
  • ಸಂಗೀತ ವಾದ್ಯಗಳ ವಾದನವನ್ನು ಕೇಳುವ ಮನೋಭಾವ ಉಂಟು ಮಾಡುವುದು.
  • ವಾದ್ಯಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು.
  • ವಾದ್ಯಗಳ ವಾದನದಲ್ಲಿ ಆಸಕ್ತಿ ತಾಳುವಂತೆ ಮಾಡುವುದು.

ಈ ಅಧ್ಯಯನದಲ್ಲಿ ಅಳವಡಿಸಿರುವ ಹೊಸ ಅಂಶಗಳು: ಭಾರತೀಯ ಸಂಗೀತವಾದ್ಯಗಳ ವರ್ಗೀಕರಣ.

ಕಲಿಕಾ ವಿಧಾನ:

  • ವಿವರಣೆ
  • ಪ್ರಾತ್ಯಕ್ಷಿಕೆ
  • ವಿಡಿಯೋ ಪ್ರದರ್ಶನ, ಧ್ವನಿ ಮುದ್ರಿಕೆಗಳ ಶ್ರವಣ
  • ಚಾರ್ಟ್‌ಗಳ ಪ್ರದರ್ಶನ

ಕಲಿಕಾ ಸಾಮಗ್ರಿ:

ಚಾರ್ಟ್‌ಗಳು, ಚಿತ್ರಪಟ, ವಿಡಿಯೋ, ಆಡಿಯೋ, ಪಿ.ಪಿ.ಟಿ. ಪೂರಕ ವಾದ್ಯಗಳು.

ವಿಷಯ:

ಹಂತ 1

  • ಭಾರತೀಯ ಸಂಗೀತ ವಾದ್ಯಗಳ ವರ್ಗೀಕರಣ.
  • ಚಾರ್ಟಗಳ ಮೂಲಕ ತೋರಿಸುವುದು.
  • ವಾದ್ಯಗಳ ಚಿತ್ರಪಟ, ಪಿ. ಪಿ. ಟಿ.

ಹಂತ 2

  • ಪಠ್ಯಕ್ರಮದ ವಾದ್ಯಗಳ ಪರಿಚಯ
  • ತಂಬೂರಿ, ತಬಲಾ, ಡಗ್ಗಾ, ಕೊಳಲು ಮತ್ತು ಹಾರ್ಮೋನಿಯಂ. ಈ ವಾದ್ಯಗಳ ಪರಿಚಯ, ರಚನೆ ಹಾಗೂ ಕಲಾವಿದರನ್ನು ಹೆಸರಿಸುವುದು .

ಹಂತ 3:

  • ಪಠ್ಯಕ್ರಮಕ್ಕಿರುವ ವಾದ್ಯಗಳಲ್ಲಿ ಸಾಧನೆ ಮಾಡಿದ ಕಲಾವಿದರ ಕುರಿತು ಕಲಾವಿದರ ಚಿತ್ರಪಟ, ವಿಡಿಯೋಗಳ ಪ್ರದರ್ಶನ.

ಹಂತ 4:

  • ಪಠ್ಯಕ್ರಮಕ್ಕಿರುವ ವಾದ್ಯಗಳ ವಿಡಿಯೋ (ಆಡಿಯೋ ಪ್ರದರ್ಶನ)

ಸ್ವಮೌಲ್ಯಮಾಪನ:

Ø ಸಂಗೀತ ವಾದ್ಯಗಳನ್ನು ಗುರುತಿಸಬಲ್ಲರೇ?

Ø ಇತರ ವಾದ್ಯಗಳಿಗೂ ಭಾರತೀಯ ಸಂಗೀತ ವಾದ್ಯಗಳಲ್ಲಿನ ವ್ಯತ್ಯಾಸ ತಿಳಿದಿರುವರೇ?

Ø ವಾದ್ಯಗಳ ಭಾಗಗಳನ್ನು ಗುರುತಿಸುವರೇ?

Ø ವಾದ್ಯಗಳ ವಾದನವನ್ನು ಆಸಕ್ತಿಯಿಂದ ಕೇಳುವರೇ?

Ø ವಾದ್ಯಗಳಲ್ಲಿ ಪರಿಣತರಾದ ಕಲಾವಿದರನ್ನು ಗುರುತಿಸುವರೇ?

ಘಟಕಾಂತ್ಯದ ಪ್ರಶ್ನೆಗಳು:

  1. ಭಾರತೀಯ ಸಂಗೀತ ವಾದ್ಯಗಳನ್ನು ಯಾವ ರೀತಿ ವರ್ಗೀಕರಿಸಲಾಗಿದೆ?
  2. ಸಂಗೀತದ ವಾದ್ಯಗಳಿಗೆ ಉದಾಹರಣೆ ಕೊಡಿ?
  3. ತಬಲಾ / ಮೃದಂಗ ಇದು ಯಾವ ಪ್ರಕಾರದ ವಾದ್ಯ?
  4. ಕೊಳಲು / ಮೃದಂಗದ ಪ್ರಮುಖ ಕಲಾವಿದರನ್ನು ಹೆಸರಿಸಿರಿ.

ಹೊಂದಿಸಿ ಬರೆಯಿರಿ:

                ಎ                              ಬಿ

  1. ಹಾರ್ಮೋನಿಯಂ                  ಘನವಾದ್ಯ
  2. ತಬಲಾ                                    ತತವಾದ್ಯ
  3. ತಂಬೂರಿ                        ಅವನದ್ದ ವಾದ್ಯ
  4. ಕಂಚಿನ ತಾಳ                        ಸುಶಿರವಾದ್ಯ

ಚಟುವಟಿಕೆ:

  • ವಾದ್ಯಗಳ ಚಿತ್ರ ಸಂಗ್ರಹಣೆ.
  • ವಾದನ ಕಲಾವಿದರ ಭಾವಚಿತ್ರ ಸಂಗ್ರಹಣೆ.
  • ಆಕರ ಗ್ರಂಥಗಳು: ಭಾರತೀಯ ವಾದ್ಯಗಳು – ಪ್ರೊ. ಎ. ಎಂ. ಪುರಂದರೆ,

    ನಾದವಿಜ್ಞಾನ ಸಂಪದ – ಡಾ. ಕೆ. ವರದರಂಗ.

ಸಂಗೀತ ಶಿಕ್ಷಕರ ಜವಾಬ್ದಾರಿ

ಅಧಿವೇಶನ – 9

ಅವಧಿ: 11 : 45 – 1 : 15

Ø ಸಂಗೀತ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡುವಂತೆ ಪ್ರೇರೇಪಿಸುವುದು,

Ø ಸಂಗೀತದಿಂದಾಗುವ (ಕಲಿಯುವುದರಿಂದ) ಶೈಕ್ಷಣಿಕ ಪ್ರಗತಿಯಲ್ಲಿ ಆಗುವ ಬದಲಾವಣೆಯನ್ನು ಕುರಿತು ಅರಿವು ಮೂಡಿಸುವುದು.

Ø ಸಂಗೀತವನ್ನು ಕಲಿಸುವುದರ ಮೂಲಕ ವಿಧ್ಯಾರ್ಥಿಗಳಲ್ಲಿ ಏಕಾಗ್ರತೆ, ದೇಶಪ್ರೇಮ, ನಾಡು – ನುಡಿಯ ಕುರಿತು ಅಭಿಮಾನ, ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಯುವಂತೆ ಮಾಡುವುದು.

Ø ಇಲಾಖೆಯ ಮಾರ್ಗದರ್ಶನದ ಅನುಸಾರವಾಗಿ ಸಂಬಂಧಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ಆಯಾಕಾಲಕ್ಕೆ ತಕ್ಕಂತೆ ನಿರ್ವಹಿಸುವುದು.

Ø ಮಕ್ಕಳಲ್ಲಿ ಸ್ಪರ್ಧಾಮನೋಭಾವ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಬೆಳಸಬೇಕು.

Ø ಸಿ. ಸಿ. ಇ. ನಿಯಮಾನುಸಾರ ಪರೀಕ್ಷೆಯನ್ನು ಆಯಾ ಕಾಲಕ್ಕೆ ನಡೆಸಿ, ಮೌಲ್ಯಮಾಪನ ಕಾರ್ಯವನ್ನು ಮಾಡುವುದು.

ದಾಖಲೆಗಳ ನಿರ್ವಹಣೆ:

ಸಂಗೀತ ಶಿಕ್ಷಕರು ನಿರ್ವಹಿಸಬೇಕಾದ ದಾಖಲೆಗಳು ಹಾಗೂ ಪಠ್ಯವಿಷಯ ಬೋಧನೆಯೊಂದಿಗೆ ನಿರ್ವಹಿಸಬೇಕಾದ ಕಾರ್ಯನಿರ್ವಹಣೆ

  1. ವಾರ್ಷಿಕ ಪಾಠಯೋಜನೆ.
  2. ಪಾಠ ಟಿಪ್ಪಣಿ ಪುಸ್ತಕ.
  3. ದಿನಚರಿ ಪುಸ್ತಕ.
  4. ವೈಯಕ್ತಿಕ ಅಂಕಪಟ್ಟಿ ಗ್ರೇಡ್ ನಮೂದು ವಹಿ.
  5. ಸಂಗೀತ ಜ್ಞಾಪನಾ ಪುಸ್ತಕ.
  6. ಬೇಡಿಕೆ ಪುಸ್ತಕ.
  7. ಸ್ಥಿರ ವಸ್ತುಗಳ ಹಾಗೂ ಉಪಯೋಗಿ ವಸ್ತುಗಳ ದಾಸ್ತಾನುವಹಿ.
  8. ಸಲಕರಣೆ ವಿತರಣಾ ಧಾಖಲೆ ವಹಿ.
  9. ಸಂಗೀತ ಪರೀಕ್ಷಾ ವಿವರ ದಾಖಲೆ ವಹಿ (ಗ್ರೇಡ್).
  10.  ಸಂಗೀತ ಸ್ಪರ್ಧೆ, ಪ್ರದರ್ಶನ, ಬಹುಮಾನ ವಿತರಣಾ ದಾಖಲೆ ವಹಿ.
  11.  ಸಂದರ್ಶನ ಪುಸ್ತಕ.
  12.  ಮಕ್ಕಳ ಯೋಜನಾ ಕಾರ್ಯದ ಸಂಗ್ರಹ ಪುಸ್ತಕ.
  13.  ಸೇವೆಯಲ್ಲಿ ವಿಶೇಷ ಸಾಧನೆಯ ದಾಖಲೆ ವಹಿ.
  14.  ಹೊರಾಂಗಣ ಅಧ್ಯಯನದ ದಾಖಲೆ/ಮಾದರಿ.
  15. ವಾರ್ಷಿಕ ಪಾಠಯೋಜನೆ:- ವಾರ್ಷಿಕ ಪಾಠಯೋಜನೆಯನ್ನು ಮುಗಿಸುವ ಪ್ರಯತ್ನ ಮಾಡಿದರೂ ಕಾರಣಾಂತರಗಳಿಂದ ಹಲವು ಪಾಠಗಳು ಉಳಿದು ಬಿಡಬಹುದು. ಶ್ರಮವಹಿಸಿ ಸಂಗೀತದ ಎಲ್ಲಾ ವಿಷಯಗಳ ಕನಿಷ್ಟ ಜ್ಞಾನವನ್ನಾದರೂ ತಿಳುವಳಿಕೆ ನೀಡಿ ಕಲಿಸಲು ಪ್ರಯತ್ನಮಾಡುವುದು.

ನಮೂನೆ

ತರಗತಿ ವಾರ್ಷಿಕ ಕಾರ್ಯಯೋಜನೆ                                     ವರ್ಷ
ತಿಂಗಳ ಲಭ್ಯಅವಧಿಗಳು ಬೋಧನ ವಿಷಯ ದೊರಕಿದ ಅವಧಿಗಳು ವ್ತ್ಯಾಸವಿದ್ದಲ್ಲಿ ಕಾರಣ ಬೋಧನಾ ವಿಷಯದಿಂದ ಆರಿಸಿದ  ಅಭ್ಯಾಸ ವಿಷಯ ಭಾಗಗಳು ಚಟುವಟಿಕೆ ಗೃಹಪಾಠ ಸಂ. ಶಿ. ಸಹಿ

 

ಮು. ಶಿ. ಸಹಿ
  1. ಪಾಠ ಟಿಪ್ಪಣಿ ಪುಸ್ತಕ: ವಾರ್ಷಿಕ ಪಾಠಯೋಜನೆಗೆ ಅನುಗುಣವಾಗಿ ಪಾಠ ಟಿಪ್ಪಣಿಯನ್ನು ತರಗತಿಗೆ ಹೋಗುವ ಮುಂಚೆ ಸಿದ್ಧಪಡಿಸಿಕೊಂಡು ಪಾಠಮಾಡುವುದು.

ನಮೂನೆ:

ಘಟಕವಾರು:

ವಿಷಯ:

ತರಗತಿ:

ಕಲಿಕೆಯ ಉದ್ದೇಶ:

ಕಲಿವಿನ ಫಲ (ಸಾಮರ್ಥ್ಯ):

ದಿನಾಂಕ ಕಲಿಕಾಂಶ ಚಟುವಟಿಕೆ ಪಾಠೋಪಕರಣ ಮೌಲ್ಯಮಾಪನ ಸಾಧನ / ತಂತ್ರ ಶಿಕ್ಷಕರ ಸ್ವಾವಲೋಕನ
ಸಂಗೀತ ಶಿಕ್ಷಕರ ಸಹಿ ಮು. ಶಿ. ಸಹಿ
  1. ದಿನಚರಿ ಪುಸ್ತಕ: ದಿನಚರಿಯನ್ನು ಶಾಲಾ ಅವಧಿಯಲ್ಲಿ ಅಂದಿನ ಕೆಲಸಗಳನ್ನು ಸಂಕ್ಷಿಪ್ತವಾಗಿ ಒಂದು ಅಥವಾ ಎರಡು ಸಾಲಿನಲ್ಲಿ ಬರೆಯುವುದು.
  2. ವೈಯಕ್ತಿಕ ಅಂಕಪಟ್ಟಿ ಗ್ರೇಡ್ ನಮೂದು ವಹಿ: – ಘಟಕವಾರು ಕಿರುಪರೀಕ್ಷೆಗಳು ಯೋಜನೆಗಳಿಗೆ ಅಂಕಗಳನ್ನು ನೀಡಿ ಗ್ರೇಡ್ಗಳನ್ನು ನಮೂದಿಸುವುದು.

 

 

ನಮೂನೆ

ರೂ.ಮೌ.೧

20

ರೂ.ಮೌ.೨

20

ಸಂ.ಮೌ.೧

10

50 ರೂ.ಮೌ.೩

20

ರೂ.ಮೌ ೪

20

ಸಂ.ಮೌ.೨

10

50 100
ಕ್ರ ಸಂ. ವಿದ್ಯಾರ್ಥಿಗಳ ಹೆಸರು ಜೂನ್

ಜುಲೈ

ಒಟ್ಟು ಅಂಕ

ಶ್ರೇಣಿ

ಆಗಸ್ಟ್

ಸೆಪ್ಟೆಂಬರ್

ಒಟ್ಟು ಅಂಕ

ಶ್ರೇಣಿ

ಅಕ್ಟೋಬರ್

ಶ್ರೇಣಿ

ಒಟ್ಟು ಅಂಕ

ಒಟ್ಟು ಶ್ರೇಣಿ

ನವೆಂಬರ್

ಡಿಸೆಂಬರ್

ಒಟ್ಟು ಅಂಕ

ಒಟ್ಟು ಶ್ರೇಣಿ

ಜನವರಿ

ಫೆಬ್ರವರಿ

ಒಟ್ಟು ಅಂಕ

ಒಟ್ಟು ಶ್ರೇಣಿ

ಮಾರ್ಚ್

ಶ್ರೇಣಿ

ಒಟ್ಟು ಅಂಕ

ಒಟ್ಟು ಶ್ರೇಣಿ

ಒಟ್ಟು ಅಂಕ

 

ಒಟ್ಟು ಶ್ರೇಣಿ
  1. ಸಂಗೀತ ಜ್ಞಾಪನಾ ಪುಸ್ತಕ – ಸಂಗೀತ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾಪಕ ಹೊರಡಿಸುವ ಪುಸ್ತಕ (ಮೆಮೊ) ಸಂಗೀತ ಶಿಕ್ಷಕರು ಪ್ರತ್ಯೇಕವಾಗಿ ಪ್ರತೀ ಶೈಕ್ಷಣಿಕ ವರ್ಷದಲ್ಲಿ ನಡೆಸುವ ಸ್ಪರ್ಧೆ, ಪ್ರದರ್ಶನ, ಪರೀಕ್ಷೆ ಇತ್ಯಾದಿ ವಿಷಯಗಳನ್ನೊಳಗೊಂಡ ಮಾಹಿತಿಗಳನ್ನು ದಾಖಲಿಸಿಕೊಳ್ಳುವುದು.
  2. ಬೇಡಿಕೆ ಪುಸ್ತಕ – ಸಂಗೀತ ವಿಷಯಕ್ಕೆ ಅವಶ್ಯಕವಾದ ಉಪಕರಣಗಳ ಚಿತ್ರಪಟಗಳ ಬೇಡಿಕೆಯನ್ನು ಸಂಗೀತ ಶಿಕ್ಷಕರು ಮುಖ್ಯೋಪಾಧ್ಯಾಯರಿಗೆ ಸಲ್ಲಿಸಿದ ಬಗ್ಗೆ ದಾಖಲೆ ಇಡುವುದು.
  3. ಸ್ಥಿರವಸ್ತುಗಳ ಹಾಗೂ ಉಪಯೋಗಿ ವಸ್ತುಗಳ ದಾಸ್ತಾನು ವಹಿ ಸ್ಥಿರವಸ್ತುಗಳು ಹಾಗೂ ಉಪಕರಣಗಳು, ಪುಸ್ತಕಗಳನ್ನು ಖರೀದಿಸಿದ ನಂತರ ದಾಸ್ತಾನು ಪುಸ್ತಕಕ್ಕೆ ದಾಸ್ತಾನು ಪಡೆದು ದಾಸ್ತಾನು ಪಡೆದವರ ಹಾಗೂ ಮುಖ್ಯೋಪಾಧ್ಯಾಯರ ಸಹಿ ನಮೂದಿಸುವುದು, ದಾಖಲಿಸುವುದು.
  4. ಸಲಕರಣೆ ವಿತರಣಾ ದಾಖಲೆ ವಹಿ ಸಂಗ್ರಹಿಸಿರುವ ಅಥವಾ ದಾಸ್ತಾನಿನಲ್ಲಿ ಇರುವ ವಸ್ತುಗಳನ್ನು ವಿತರಿಸಿದ ನಂತರ ಇಡುವ ದಾಖಲೆ ವಹಿ.
  5. ಸಂಗೀತ ಸ್ಪರ್ಧೆಪ್ರದರ್ಶನಬಹುಮಾನ ವಿತರಣಾ ದಾಖಲೆ ವಹಿ: – ಪ್ರತಿ ವರ್ಷ ಶಾಲಾ ಹಂತದಲ್ಲಿ ಹಾಗೂ ಸರ್ಕಾರಿ / ಇಲಾಖಾ ಮಹತ್ವಾಕಾಂಕ್ಷೆ ಕಾರ್ಯಕ್ರಮದ ಪ್ರತಿಭಾ ಕಾರಂಜಿ, ಕಲೋತ್ಸವ, ಸ್ಥಳೀಯ ಸಂಸ್ಥೆಯವರು ನಡೆಸುವ ಸ್ಪರ್ಧೆಗಳು, ಮುಂತಾದವುಗಳಲ್ಲಿ ಭಾಗವಹಿಸಿದ ಬಗ್ಗೆ ವಿದ್ಯಾರ್ಥಿಗಳ ಹೆಸರು, ಸ್ಥಳ, ದಿನಾಂಕಗಳನ್ನು ನಮೂದಿಸುವುದು ಮತ್ತು ಬಹುಮಾನ ಪಡೆದ ವಿದ್ಯಾರ್ಥಿಗಳ ವಿವರ ನಮೂದಿಸುವುದು.
  6.  ಸಂದರ್ಶಕರ ಪುಸ್ತಕ:- ಶಾಲೆಗೆ ಭೇಟಿ ನೀಡಿದ ಇಲಾಖಾ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಸಂಗೀತ ವಿಷಯದ ಬಗ್ಗೆ ಅವರ ಅಭಿಪ್ರಾಯ – ಆನಿಸಿಕೆಗಳನ್ನು ತಿಳಿಸಲು ಪ್ರತ್ಯೇಕವಾಗಿ ಸಂದರ್ಶಕರ ಪುಸ್ತಕ ನಿರ್ವಹಿಸುವುದು.
  7.  ಮಕ್ಕಳ ಯೋಜನಾಕಾರ್ಯದ ಸಂಗ್ರಹ ಸುಸ್ತಕ: – ಯೋಜನಾ ಚಟುವಟಿಕೆ / ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಪ್ರಸಿದ್ಧ ಕವಿಗಳ, ಗಾಯಕ – ಗಾಯಕಿಯರ ಬಗ್ಗೆ ವಿಶೇಷವಾಗಿ ಬರೆದಂತವುಗಳನ್ನು ಸಂಗ್ರಹಿಸಿಡುವುದು.
  8.  ಸೇವೆಯಲ್ಲಿ ವಿಶೇಷ ಸಾಧನೆಯ ದಾಖಲೆ ವಹಿಸಿ: – ತಮ್ಮ ಸೇವಾವಧಿಯಲ್ಲಿ ತಮ್ಮ ಹಾಗೂ ವಿದ್ಯಾರ್ಥಿಗಳ ವಿಶೇಷ ಸಾಧನೆ ಮಾಡಿದ್ದನ್ನು ದಾಖಲಿಸಲು ದಾಖಲಾತಿ ವಹಿ ನಿರ್ವಹಿಸುವುದು.
  9.  ಹೊರಾಂಗಣ ಅಧ್ಯಯನ ದಾಖಲೆಮಾದರಿ:- ವಿಶೇಷ ಸಂಗೀತ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋದರೆ, ಆಕಾಶವಾಣಿ, ದೂರದರ್ಶನ, ಸ್ಟುಡಿಯೋ ಕಾರ್ಯಕ್ರಮಗಳಿಗೆ ಹೋದ ಸಂದರ್ಭಗಳಲ್ಲಿ ಅದನ್ನು ನಮೂದಿಸಿಡುವುದು.

ಕಂಸಾಳೆ ಪದಗಳು

ಅಧಿವೇಶನ: 10

ಅವಧಿ: 45 ನಿಮಿಷಗಳು

ಮೈಸೂರು ಪ್ರಾಂತ್ಯದ ಮಲೆ ಮಹದೇಶ್ವರನ ಭಕ್ತರಾದ ಹಾಲುಮತ ಕುರುಬಗೌಡ ಜನಾಂಗದ ಕಲಾವಿದರು ಕಂಸಾಳೆಯೆಂಬ (ಕಂಚಿನ ತಾಳದ ರೀತಿಯ ಒಂದು ವಾದ) ಜನಪದ ನೃತ್ಯವನ್ನು ಶಿವನ ಪೂಜೆಯ ಅಂಗವಾಗಿ ಮಾಡುತ್ತಾರೆ. ಕಂಸಾಳೆಯು ಒಂದು ಪುರಾತನ ಕಲೆಯಾಗಿದೆ. ಕಂಸಾಳೆಯ ಹಾಡುಗಳು ಕೇಳಲು ಬಹಳ ಸೊಗಸಾಗಿದ್ದು ಮಲೆಮಹದೇಶ್ವರನ ವರ್ಣನೆಯನ್ನು ಇದರಲ್ಲಿ ಕಾಣಬಹುದಾಗಿದೆ. ಮೈಸೂರಿನ ಕಂಸಾಳೆ ಮಹದೇವಯ್ಯ ನವರು ಈ ಕಲಾಪ್ರಕಾರದಲ್ಲಿ ಪ್ರಸಿದ್ದಿಯನ್ನು ಪಡೆದು ದೇಶ – ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕಂಸಾಳೆ ಪದಗಳನ್ನು ತಮಟೆ ವಾದ್ಯದೊಂದಿಗೂ ಸಹ ಹಾಡುತ್ತಾರೆ.

ಕಂಸಾಳೆ ಪದ

ಆನುಮಲೆ ಜೇನುಮಲೆ ಗುಂಜುಮಲೆ ಗುಲಗಂಜಿಮಲೆ

ಏಳುಮಲೆ ಎಪ್ಪತ್ತೇಳು ಮಲೆಯೊಳಗೆ

ತಪ್ಪದೇ ನಲಿದು ನಾಟ್ಯವಾಡತಕ್ಕಂತ

ನಮ್ಮಪ್ಪಾಜಿ ಮಲೆ ಮುದ್ದು ಮಾದೇಶ್ವರನ್ ಪಾದಕ್ಕೋಂಡ್ಕಲ

ಉಘಗ್ರಷ್ಟೋ ಉಫೆ | ಉಘ | ಉಘ . . . . . . .

ವಿಫಾನೊಸುರನೆ ಹರಹರ ಗೌರಿಯ ಮುದ್ದಿನ ಕುಮಾರನೇ

ವಿದ್ಯಾಬುದ್ಧಿಯ ಕಲಿಸಿದ ಗುರುವೇ ಕೊಡ್ ನಮಗೆ ಮತಿಯ

ಮುಂಗುಂಡಾದ ಮಾದೇಶ್ವರಗೆ ಮುಂದಲ ಪೂಜೆಗೆ ಬರುವಾಗ

ಹಣ್ಣು ಕಾಯಿ ಸಾಂಬ್ರಾಣಿಯ ಘಮಲು ಮಂಜುಗವಿದಾವೆ

ಬೆಟ್ಟದ ಮಾದಪ್ಪ ಬರುವಾಗ ಹುಟ್ಟುಗಲ್ಲು ಗುರುಗುಟ್ಟಿದವೋ

ಹುಲಿಯ ಮಾಲೆ ಮಾದೇವ ಬರುವ ಮಾಯಾ ನೋಡಯ್ಯಾ

ಮುಂಗುಡಾದ ಮಾದೇಶ್ವರಗೆ ಶರಣು ಶರಣಯ್ಯ

ಮಾಯಾಕಾರ ಮಾದೇಶ್ವರಗೆ ಶರಣು ಶರಣಯ್ಯ

ಓ……………………………… ಆ…………………..

ಕಾಣಿಕೆ ತಂದೀವ್ನಿ ಸ್ವಾಮಿ

ಕಾಣೆನಲ್ಲೋ ಮಾದೇಶ್ವರನ

ಕಾಣಿಕೆ ನೀಡಿ ಧೂಪವ ಹಾಕಿ

ಬೇಡುವೆನು ಮಾದೇಶ್ವರ . . . . . . . . .

ಗುಂಡುಲಿ ಮ್ಯಾಲಿನ ಗದ್ದುಗೆಯೋ ಸ್ವಾಮಿ

ಹಿಂಡುಲಿ ಮ್ಯಾಲಿನ ನಿದ್ದಾರೆಯೋ

ಎತ್ತಿದರು ದುಂಡು ಮಾದೇವನ

ಗುಂಡು ಹುಲಿಯ ಮ್ಯಾಲೆ ಅಲಲಲಲಲ್ಲೇ ||ಮುಂಗುಂಡಾದ|| ಓಓ

ಕಾಡು ಪಾರಿವಾಳ ನಕ್ಕಿ

ಕನ್ನನ ಹುಲಿಮಾರಿ ದುಂಬಿಗಳೊ

ಲಾವಣ ನಕ್ಕಿ ಪಿಕ್ಕಿ ದುಂಡಯ್ಯನ

ಕೂಗಿ ಕರೆದಾವೆ

ಕೋಗಿಲೆ ಎದ್ದು ಕೊರಬೆಯನೇರಿ

ಕೂಗುತಾವೆ ಮಾದೇಶ್ವರನ

ರಾವನೆತ್ತಿ ದುಂಡು ಮಾದೇವನ

ಕರೆಯುತ್ತಾವ ನೋಡಿ ಅಲಲಲಲ್ಲೇ ||ಮುಂಗುಂಡಾದ|| ಓಓಓ

ಎಲ್ಲಾ ರೂಪವು ತಾನಂತೆ ಶಿವ

ಎಲ್ಲೆಲ್ಲಿಯೂ ತಾನಿಹನಂತೆ

ಅಲ್ಲಲ್ಲರಸುತ ಗುಡಿಗಳ ತಿರುಗುವ

ಜನಗಳ ಕಣ್ಣಿಗೆ ಕಲ್ಲಂತೆ

ಗುರುಗಳಿಗೊಂದು ಶರಣಾರ್ಥಿ

ಗುರು ಭಕ್ತರಿಗೊಂದು ಶರಣಾರ್ಥಿ

ವಿದ್ಯಾ ಬುದ್ಧಿಯ ಕಲಿಸಿದ ಗುರುವೆ

ಪಾದಕ್ಕೊಂದು ಶರಣಾರ್ಥಿ

ಮಾದೇವೋ ಮಲೆ ಮಾದೇವೋ

ಮಾದೇವೋ ಮಲೆ ಮಾದೇವೋ

ಆನುಮಲೆಯ ಮಾದೇವೋ

ಜೈನುಮಲೆಯ ಮಾದೇವೋ

ಗುಂಜು ಮಲೆಯ ಮಾದೇವೋ

ಗುಲಗಂಜಿ ಮಲೆಯ ಮಾದೇವೋ

ಏಳು ಮಲೆಯ ಮಾದೇವೋ

ಎದ್ದು ಬಾರಯ್ಯ ಮಾದೇವೋ

ಮೂರು ಕಣ್ಣೀನ ಮಾದೇವೋ

ಮುಗಿಲು ಬಣ್ಣದ ಮಾದೇವೋ

ತಂದೆಯು ನೀನೆ ಮಾದೇವೋ

ತಾಯಿಯು ನೀನೆ ಮಾದೇವೋ

ಮಾದೇವೋ ಮಲೆ ಮಾದೇವೋ

ಮಾದೇವೋ ಮಲೆ ಮಾದೇವ

ಚೌಡಿಕೆ ಪದ

ಅಧಿವೇಶನ: 10 (1)

ಇದು ಜಾನಪದ ಗೀತೆಯ ಒಂದು ಕಲಾ ಪ್ರಕಾರ. ಚೌಡಿಕೆ ಯೆಂಬುದು ಉತ್ತರ ಕರ್ನಾಟಕದಲ್ಲಿ ಬಳಸುವ ವಾದ್ಯ. ಇದನ್ನು ಎಲ್ಲಮ್ಮ ದೇವರ ದೇವದಾಸಿ ಒಕ್ಕಲಿನವರು ಎಲ್ಲಮ್ಮನ ಕಥೆಗಳನ್ನು ಹಾಡಿನ ರೂಪದಲ್ಲಿ ಹೇಳುವ ಮೂಲ ಚೌಡಿಕೆ ವಾದ್ಯದೊಂದಿಗೆ ಹಾಡುವ ಹಾಡೇ ಚೌಡಿಕೆಪದ. ಈ ಚೌಡಿಕೆಯು ಎಲ್ಲಮ್ಮ ದೇವರ ಸಂಕೇತವಾಗಿದೆ. ದಕ್ಷ ಬ್ರಹ್ಮನ ಸಂಹಾರಕ್ಕಾಗಿ ಶಿವನ ಹಣೆಯ ಬೆವರಿನಿಂದ ಜನಿಸಿದವಳು ಚೌಡಮ್ಮ ಎಂಬ ಪ್ರತೀತಿಯಿದೆ.

ಇದು ಉದ್ದನೆಯ ಒಂದು ತಂತಿಯನ್ನುಳ್ಳ ವಾದ್ಯ ಪ್ರತಿಯೊಂದು ಚೌಡಿಕೆ ಪದ ಹಾಡುವಾಗಲೂ ಈ ವಾದ್ಯವನ್ನು ಬಳಸುತ್ತಾರೆ. ಈ ಗೀತೆಯನ್ನು ದೇವದಾಸಿಯರು ಹಿಂದೆ ಹೆಚ್ಚಾಗಿ ಹಾಡುತ್ತಿದ್ದರು. ಈಗ ಕರ್ನಾಟಕ ಸರ್ಕಾರವು ಈ ದೇವದಾಸಿ ಪದ್ಧತಿಯನ್ನು ನಿಲ್ಲಿಸಿದ್ದರೂ ಸಹ ಇಂದಿಗೂ ಸಹ ಹಳ್ಳಿಗಳಲ್ಲಿ ಕೆಲವುಕಡೆ ಇಂದಿಗೂ ಈ ಪದ್ಧತಿ ಜಾರಿಯಲ್ಲಿದೆ.

ಹೆಚ್ಚಾಗಿ ಚೌಡಿಕೆ ಪದಗಳನ್ನು ಹಾಡುವವರು ದೇವಿ ಎಲ್ಲಮ್ಮನನ್ನು ಮದುವೆಯಾಗಿ, ದೇವದಾಸಿಯರಂತೆ ಇದ್ದು, ಆ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವವರಾಗಿರುತ್ತಾರೆ.

ರೈತ ಗೀತೆ

ಅಧಿವೇಶನ: 11

ಪೀಠಿಕೆಭಾರತ ಹಳ್ಳಿಗಳ ದೇಶ. ರೈತ ದೇಶದ ಬೆನ್ನೆಲುಬು. ನಮ್ಮ ನಾಡಿನ ರಾಷ್ಟ್ರಕವಿ ಕುವೆಂಪುರವರು ರೈತಗೀತೆಯನ್ನು ಬರೆದು ನಮ್ಮ ದೇಶದ ರೈತನ ಹಿರಿಮೆಯನ್ನು ಸಾರಿದ್ದಾರೆ. ರೈತ ಗೀತೆಯು ಅತ್ಯಂತ ಪ್ರಮುಖ ಗೀತೆಯಾಗಿದ್ದು, ಪ್ರತಿಯೊಬ್ಬರು ಈ ಗೀತೆಯನ್ನು ತಿಳಿಯುವುದು ಮತ್ತು ಕಲಿಯುವುದು ಅತ್ಯಂತ ಅವಶ್ಯವಾಗಿದೆ. ನೇಗಿಲಯೋಗಿ ಎಂದು ಸಂಭೋದಿಸಿರುವ ಕವಿ ರಾಜ್ಯ ಸಾಮ್ರಾಜ್ಯಗಳು ಏನೇ ಆದರೂ ಈತ ಉಳುವುದು, ಬಿತ್ತುವುದು ಬೆಳೆಯುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಜಗತ್ತಿನ ಎಲ್ಲರೂ ರೈತನ ಮೇಲೆ ಅವಲಂಬಿತರಾಗಿರುವುದರಿಂದ ಜಗತ್ತಿನ ಧರ್ಮ ನೇಗಿಲ ಮೇಲೆ ನಿಂತಿದೆ. ಯಾವ ಆಗು ಹೋಗುಗಳನ್ನು ಅರಿಯದೆ, ತಲೆ ಕೆಡಿಸಿಕೊಳ್ಳದೆ ರೈತನು ತನ್ನ ಕಾಯಕವನ್ನು ನಮಗಾಗಿ ಬೆವರು ಸುರಿಸಿ ಮಾಡುತ್ತಾನೆ. ಇಂತಹ ನಿಸ್ವಾರ್ಥ ಸೇವೆಯನ್ನು ಮಾಡುವ ರೈತನು ನಿತ್ಯ ಸ್ತುತ್ಯ ಎಂದರೆ ತಪ್ಪಾಗಲಾರದು. ಕವಿಯು ಈ ಅನ್ನದಾತನನ್ನು ಈ ಕವಿತೆಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾನೆ.

ಉದ್ದೇಶ:

Ø ರೈತನ ಪ್ರಾಮುಖ್ಯತೆಯನ್ನು ತಿಳಿಸುವುದು.

Ø ನಾಡಿಗೆ ರೈತನ ಕೊಡುಗೆಯನ್ನು ತಿಳಿಸುವುದು.

Ø ಕೃಷಿಯ ಅವಶ್ಯಕತೆಯನ್ನು ತಿಳಿಸುವುದು.

Ø ರೈತ ಗೀತೆಯ ಪ್ರಾಮುಖ್ಯತೆಯನ್ನು ತಿಳಿಸುವುದು.

Ø ರೈತ ಗೀತೆಯನ್ನು ರಾಗ ತಾಳಬದ್ಧವಾಗಿ ಹಾಡುವುದು.

ಬೋಧನೋಪಕರಣ:

Ø ರೈತನ ಚಿತ್ರಪಟ.

Ø ಕುವೆಂಪುರವರ ಭಾವಚಿತ್ರ.

Ø ಶ್ರುತಿಪೆಟ್ಟಿಗೆ / ತಂಬೂರಿ.

ಕಲಿಕಾವಿಧಾನ:

Ø ರೈತಗೀತೆಯ ಸಾಹಿತ್ಯ ಬರೆಸುವುದು.

Ø ಕಠಿಣಪದಗಳ ಅರ್ಥ ತಿಳಿಸುವುದು.

Ø ಉಚ್ಚಾರಣೆಯನ್ನು ಹೇಳಿಕೊಡುವುದು.

Ø ರಾಗತಾಳ ಬದ್ದವಾಗಿ ಹಾಡುವುದು.

Ø ವಿದ್ಯಾರ್ಥಿಗಳಿಗೆ ಒಂದೊಂದೇ ಸಾಲುಗಳಲ್ಲಿ ಹಾಡಿ ಸುಲಭವಾಗಿ ಅನುಸರಿಸಲು ಸಾಧ್ಯವಾಗುವಂತೆ ಹಾಡುವುದು.

ಸ್ವಮೌಲ್ಯಮಾಪನ:

Ø ವಿದ್ಯಾರ್ಥಿಗಳಿಗೆ ರೈತಗೀತೆಯನ್ನು ಹಾಡಲು ತಿಳಿಸುವುದು.

Ø ರಾಗ ಮತ್ತು ತಾಳದಲ್ಲಿ ತಪ್ಪುಗಳನ್ನು ತಿದ್ದಿ ಹಾಡಿಸುವುದು (ಸಾಮೂಹಿಕ / ವೈಯಕ್ತಿಕ)

ಘಟಕಾಂತ್ಯದ ಪ್ರಶ್ನೆಗಳು:

Ø ರೈತಗೀತೆಯನ್ನು ಬರೆದವರು ಯಾರು?

Ø ಸಮಾಜದಲ್ಲಿ ರೈತನ ಸ್ಥಾನವನ್ನು ಚರ್ಚಿಸಿ.

Ø ರೈತಗೀತೆಯನ್ನು ಹಾಡುವ ಉದ್ದೇಶವೇನು?

Ø ಸಮಾಜಕ್ಕೆ ರೈತನ ಕೊಡುಗೆ ಏನು?

Ø ರೈತಗೀತೆಯ ಪ್ರಾಮುಖ್ಯತೆ ಏನು?

ಪ್ರಯೋಗ:

Ø ರೈತಗೀತೆಯನ್ನು ಹಾಡಿರಿ (ವೈಯಕ್ತಿಕ / ಸಾಮೂಹಿಕ).

ಸುಗಮ ಸಂಗೀತ

ಅಧಿವೇಶನ: 11 (1)

ಅವಧಿ: 90 ನಿಮಿಷಗಳು

ಸುಗಮ ಸಂಗೀತವು ಈ ಶತಮಾನದ ಕೂಸು. ಸಾಹಿತ್ಯವೇ ಈ ಕಲೆಯ ಆತ್ಮ, ಸಂಗೀತ ದೇಹ ಮಾತ್ರ, ಸಂಗೀತದ ಮೂಲಕ ಸಾಹಿತ್ಯದ ಎದೆ ಬಡಿತವನ್ನು ಹಿಡಿದು ತೋರಿಸುವುದು ಸುಗಮ ಸಂಗೀತದ ಉದ್ದೇಶವಾಗಿದೆ. ಸುಗಮ ಸಂಗೀತ ಎನ್ನುವುದು ಸಂಗೀತದ ಮೂಲಕ ಸಾಹಿತ್ಯದ ಅರ್ಥೈಕೆ. ಈ ಮಾಧ್ಯಮದಲ್ಲಿ ಸಾಹಿತ್ಯಕ್ಕಾಗಿ ಸಂಗೀತವಿದೆ. ಸ್ಥೂಲವಾಗಿ ಸುಗಮ ಸಂಗೀತ ಎನ್ನುವುದು, ಕನ್ನಡದ ಕವಿತೆಗಳನ್ನು ಸಂಗೀತದ ಮೂಲಕ ಅರ್ಥೈಸುವ ಈ ಶತಮಾನದ ಒಂದು ವಿಶಿಷ್ಟವಾದ ಗಾಯನ ಶೈಲಿ ಎನ್ನಬಹುದು.

ಕಾಳಿಂಗರಾಯರು, ಮೈಸೂರು ಅನಂತ ಸ್ವಾಮಿಯವರು ಮತ್ತು ಸಿ. ಅಶ್ವಥ್‌ರವರು ಈ ಕ್ಷೇತ್ರದ ತ್ರಿಮೂರ್ತಿಗಳಿದ್ದಂತೆ. ಕುವೆಂಪು, ದ. ರಾ. ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ, ಜಿ. ಎಸ. ಶಿವರುದ್ರಪ್ಪ ಮುಂತಾದ ಕನ್ನಡದ ಶ್ರೇಷ್ಠ ಕವಿಗಳ ಹೆಸರುಗಳು ಕರ್ನಾಟಕದ ಮನೆ ಮಾತಾಗಲು, ಇವರ ಕವಿತೆಗಳು ಪಂಡಿತರಿಂದ ಹಿಡಿದು ಜನ ಸಾಮಾನ್ಯರ ನಾಲಿಗೆಗಳಲ್ಲಿ ನಲಿದಾಡುವಲ್ಲಿ ಈ ತ್ರಿಮೂರ್ತಿಗಳ ಕೊಡುಗೆ ಅಪಾರ.

ಸುಗಮ ಸಂಗೀತದ ಪ್ರಕಾರಗಳು:

  1. ಭಾವಗೀತೆಗಳು.
  2. ಭಕ್ತಿಗೀತೆಗಳು.
  3. ವಚನಗಳು.
  4. ದಾಸರ ಪದಗಳು.
  5. ಶಿಶುನಾಳ ಷರೀಫರ ಗೀತೆಗಳು.
  6. ಆಧುನಿಕ ಶೈಲಿಯ ಜನಪದ ಗೀತೆಗಳು.

    ಆಧಾರಗ್ರಂಥ: ಸಿ. ಅಶ್ವಥ್‌ರವರ ಸ್ವರಮಾಧುರಿ

ಲೇಖನ: ಹೆಚ್. ಎಸ್‌. ವೆಂಕಟೇಶಮೂರ್ತಿ

ಶ್ರೀ ಪುರಂದರದಾಸರು, ಬಸವಣ್ಣ, ಅಕ್ಕಮಹಾದೇವಿ, ಶರಣೆ ಮುಕ್ತಾಯಕ್ಕ

ಶ್ರೀ ಪುರಂದರದಾಸರು

ಅಧಿವೇಶನ – 12

ಅವಧಿ 10: 00 – 11: 30

ಪೀಠಿಕೆ: ಇವರು ಪುರಂದರಗಢದಲ್ಲಿ ಜನಿಸಿದರು. ತಂದೆ ವರದಪ್ಪ ನಾಯಕ, ತಾಯಿ ಲಕ್ಷ್ಮಕ್ಕ ಇವರಿಗೆ ಶ್ರೀನಿವಾಸ ಎಂದು ನಾಮಕರಣವಾಯಿತು. ಕರ್ನಾಟಕ ಸಂಗೀತ ಪಿತಾಮಹರೆನಿಸಿ, ಇಂದಿಗೂ ಪೂಜ್ಯರಾಗಿರುವ ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ತಳಪಾಯವನ್ನು ಹಾಕಿದವರು. ಅಭ್ಯಾಸಗಾನವನ್ನು ಕ್ರಮಪಡಿಸಿದವರು ಇವರೇ. ಇಂದಿಗೂ ಪ್ರತಿಯೊಬ್ಬ ವಿಧ್ಯಾರ್ಥಿಯು ಸಂಗೀತದ ಬಾಲಪಾಠವನು ಆರಂಭಿಸುವುದು ದಾಸರು ರಚಿಸಿದ ಸ್ವರಾವಳಿಗಳು ಮತ್ತು ಗೀತೆಗಳಿಂದಲೇ.

ಉದ್ದೇಶ: ಕರ್ನಾಟಕ ಸಂಗೀತ ಪಿತಾಮಹರ ಪರಿಚಯ ಮಾಡಿಸುವುದು, ಹಾಗೂ ಅವರು ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆಗಳನ್ನು ಪರಿಚಯಿಸುವುದು.

ರಚನೆಯ ರೀತ: ದಾಸರು ರಚಿಸಿದ ಕೀರ್ತನೆ, ಉಗಾಭೋಗ, ಸಾಮಾನ್ಯ ಜನರ ನುಡಿಗಳಲ್ಲಿ ಕಾಣುತ್ತೇವೆ. ಇವರು ತಮ್ಮ ರಚನೆಗಳ ಮೂಲಕ ಜನರಿಗೆ ತತ್ವವನ್ನು ಉಪದೇಶಿಸಿ, ಅವರಲ್ಲಿ ಜಾಗೃತಿಯನ್ನು ಮೂಡಿಸಿದರು.

ವೈವಾಹಿಕ ಜೀವನ: ನವಕೋಟಿ ನಾರಾಯಣ ಎಂದೆನಿಸಿದ ಇವರು ಸುಸಂಸ್ಕೃತಳಾದ ಸರಸ್ವತಿ ಎಂಬ ಕನ್ನೆಯನ್ನು ವಿವಾಹವಾಗಿ, ಕಾರಣಾಂತರದಿಂದ ಮೂಗುತಿಯ ಪ್ರಸಂಗ ಬಂದು ತಾವು ಗಳಿಸಿದ ಅಪಾರ ಸಂಪತ್ತನ್ನು ದಾನಮಾಡಿ, ವ್ಯಾಸರಾಯರು ಶಿಷ್ಯರಾದರು. ಪುರಂದರವಿಠಲನ ಭಕ್ತರಾಗಿ, ಪುರಂದರದಾಸರೆನಿಸಿದರು.

ಇವರ ಕೊಡುಗೆ: ಇವರು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಗೀತ, ಸುಳಾದಿ, ಕೀರ್ತನೆ, ಉಗಾಭೋಗ, ಪದ, ವೃತ್ತನಾಮ, ಮುಂತಾದ ರಚನೆಗಳನ್ನು ಪುರಂದರವಿಠಲ ಎಂಬ ಅಂಕಿತದಿಂದ ರಚಿಸಿದ್ದಾರೆ,

ಕಲಿಕಾ ಸಾಮಾಗಿ:

ಚಿತ್ರಪಟ, ಪುಸ್ತಕ, ಆಡಿಯೋಗಳು, ವೀಡಿಯೋಗಳು.

ಕಲಿಕಾಹಂತ:

ಹಂತ 1 – ಅವರ ಕಿರು ಪರಿಚಯ ಮಾಡಿಸುವುದು.

ಹಂತ 2 – ಅವರ ಕೊಡುಗೆಗಳ ಬಗ್ಗೆ ತಿಳಿಸುವುದು.

ಹಂತ 3 – ಅವರ ರಚನೆಗಳನ್ನು ಹೇಳಿಕೊಡುವುದು.

ಹಂತ 4 – ಮೂಗುತಿ ಪ್ರಸಂಗದ ಬಗ್ಗೆ ತಿಳಿಸುವುದು.

ಸ್ವಮೌಲ್ಯಮಾಪನ:

  1. ಪುರಂದರ ದಾಸರನ್ನು ಗುರುತಿಸುವರೇ?
  2. ಅವರ ರಚನಾಶೈಲಿಯ ಬಗ್ಗೆ ಅರಿತರೇ?
  3. ಮೂಗುತಿ ಪ್ರಸಂಗದ ಕಥೆಯನ್ನು ಅರ್ಥಮಾಡಿಕೊಂಡರೇ?
  4. ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಅರ್ಥಮಾಡಿಕೊಂಡರೇ?

ತಾತ್ವಿಕ ಪ್ರಶ್ನೆಗಳು:

  1. ಪುರಂದರ ದಾಸರು – – – – – – – – – – ಎಂಬಲ್ಲಿ ಜನಿಸಿದರು.
  2. ದಾಸರ ತಂದೆಯ ಹೆಸರು – – – – – – – – –
  3. ಪುರಂದರದಾಸರ ತಾಯಿಯ ಹೆಸರು – – – – – – – – –
  4. ದಾಸರ ಹುಟ್ಟಿದ ಸ್ಥಳದ ಹೆಸರೇನು?
  5. ಯಾವ ಪಾಠವನ್ನು ಕ್ರಮಪಡಿಸಿದರು?
  6. ದಾಸರ ಅಂಕಿತವೇನು?
  7. ದಾಸರು ಯಾರೆ ಶಿಷ್ಯರು?
  8. ದಾಸರು ರಚಿಸಿದ ರಚನೆಗಳನ್ನು ತಿಳಿಸಿ.

ಪ್ರಾಯೋಗಿಕ ಚಟುವಟಿಕೆ:

  1. ದಾಸರ ಚಿತ್ರಪಟದೊಂದಿಗೆ ಅವರ ಜೀವನ ಚರಿತ್ರೆಯನ್ನು ಮಾಡಿಸುವುದು.
  2. ದಾಸರ ಕೃತಿಗಳನ್ನು ಸಂಗ್ರಹಿಸಲು ಹೇಳುವುದು.
  3. ಅವರ ಕೀರ್ತನೆಗಳನ್ನು ರಾಗಬದ್ಧವಾಗಿ ಹಾಡಿಸುವುದು.

ವಚನಕಾರ ಬಸವಣ್ಣನವರು (12ನೇ ಶತಮಾನ)

ಅಧಿವೇಶನ: 12 (1)

ಅವಧಿ: 30 ನಿಮಿಷಗಳು

ಪೀಠಿಕೆ: ತಮ್ಮ ಕ್ರಾಂತಿಕಾರಿ ವಚನಗಳ ಮೂಲಕ ನಮ್ಮ ಸಮಾಜಕ್ಕೆ ಅಂಟಿಕೊಂಡಿದ್ದ ಜಾತಿ – ಮತ, ಮೇಲು ಕೀಳು, ಬಡವ ಬಲ್ಲಿದ ಭಾವನೆಗಳನ್ನು ಮೆಟ್ಟಿ ನಿಂತವರು ಬಸವಣ್ಣನವರು. 12ನೇ ಶತಮಾನದಲ್ಲಿ ವೀರಶೈವ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಉನ್ನತ ವಿದ್ಯಾಭ್ಯಾಸವನ್ನು ಹೊಂದಿ, ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರೂ ಸಹ ಸಮಾಜದ ಕೆಳವರ್ಗದ ಜನರ ಕುರಿತು ಆಪಾರ ಕಾಳಜಿ ಹೊಂದಿದ್ದವರು. ವಚನದ ಮೂಲಕ ನಿಜವಾದ ದೇವರು, ದೈವತ್ವವನ್ನು ಸರಳವಾದ ಆಡುಭಾಷೆಯಲ್ಲಿ ಸಾಕ್ಷಾತ್ಕಾರಮಾಡಿ ತೋರಿದ ಮಹಾನ್ ಪುರುಷರು.

ಅವರ ಪ್ರತಿಮೆಯು ಲಂಡನ್ ನಗರದಲ್ಲಿ ಸ್ಥಾಪನೆ ಆಗಿರುವುದನ್ನು ನೋಡಿದಾಗ ಅವರ ವಿಚಾರಗಳ ಔನ್ನತ್ಯವು ವಿಶ್ವಮಾನ್ಯವಾಗಿರುವುದು ಗೋಚರಿಸುತ್ತದೆ.

ಅವರ ಕುರಿತು ತಿಳಿಯುವುದು, ಅವರ ವಚನಗಳನ್ನು ಹಾಡುವುದು, ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಂಪೂರ್ಣತೆಯನ್ನು ತಂದುಕೊಡುವಲ್ಲಿ ಸಂಶಯವೇ ಇಲ್ಲ.

ಉದ್ದೇಶ:

ಬಸವಣ್ಣನವರ ತತ್ವಗಳನ್ನು ತಿಳಿಸುವುದು.

ಅವರ ಸಾಧನೆಗಳನ್ನು ಗುರುತಿಸುವುದು.

ಬಸವಣ್ಣನವರಂತಹ ಮಹಾನ್ ಪುರುಷರನ್ನು ಪಡೆದ ಕನ್ನಡನಾಡು, ಕನ್ನಡಭಾಷೆಯ ಕುರಿತು ಹೆಮ್ಮೆ, ಆಭಿಮಾನ ಮೂಡಿಸುವುದು.

ಅವರ ವಚನಗಳನ್ನು ಸುಶ್ರಾವ್ಯವಾಗಿ ಹಾಡಲು ಕಲಿಸುವುದು.

 ಅಧ್ಯಾಯದಲ್ಲಿ ಅಳವಡಿಸಿರುವ ಹೊಸ ಅಂಶಗಳು:

ಬಸವಣ್ಣನವರ ವಚನಗಳನ್ನು ಹಾಡಲು ಕಲಿಯುವುದು.

ಕಲಿಕಾ ಸಾಮಾಗ್ರಿ:

ಭಾವಚಿತ್ರ ಜೀವನ ಚರಿತ್ರೆಯ ಪುಸ್ತಕಗಳು, ವಚನಗಳ ಪುಸ್ತಕಗಳು, ಚಲನಚಿತ್ರ ವೀಡಿಯೋಗಳು, ಸಾಕ್ಷಚಿತ್ರ, ವಚನಗಳ ಆಡಿಯೋ ಸೀಡಿಗಳು.

ಕಲಿಕಾ ಹಂತ:

  1. ಜೀವನ ಚರಿತ್ರೆಯನ್ನು ವಿವರಿಸುವುದು.
  2. ಭಾವಚಿತ್ರ ತೋರಿಸಿ, ಕ್ಯಾಸೆಟ್ / ಸೀಡಿಗಳ ಮೂಲಕ ವಚನಗಳನ್ನು ಕೇಳಿಸುವುದು.
  3. ಅವರ ಸಾಧನೆಗಳ ಕುರಿತು ಭಾವಪೂರ್ಣವಾಗಿ ಮನದಟ್ಟು ಮಾಡುವುದು.
  4. ಅವರ ಕ್ರಾಂತಿಕಾರಿ ನಡೆಗಳ ಕುರಿತು / ವಚನಗಳ ಕುರಿತು / ಸಮಾಜದ ಓರೆ – ಕೊರೆಗಳನ್ನು ತಿದ್ದಿರುವುದರ ಕುರಿತು ವಿವರಿಸುವುದು.

ಸ್ವಮೌಲ್ಯಮಾಪನ:

Ø ಬಸವಣ್ಣನವರ ತಂದೆ – ತಾಯಿ, ವಿದ್ಯಾಭ್ಯಾಸ, ಉದ್ಯೋಗದ ಕುರಿತು ತಿಳಿದಿರುವರೆ?

Ø ಬಸವಣ್ಣನವರ ಕ್ರಾಂತಿಕಾರಿ ನಡೆಗಳ ಕುರಿತು ಅರಿತಿದ್ದಾರೆಯೇ?

Ø ಬಸವಣ್ಣನವರ ವಚನಗಳ ಮಹತ್ವವನ್ನು ತಿಳಿದಿದ್ದಾರೆಯೆ?

Ø ಬಸವಣ್ಣನವರ ಆದರ್ಶಗಳನ್ನು ಅರಿತು ಮೈಗೂಡಿಸಿಕೊಳ್ಳುವರೆ?

ಘಟಕಾಂತ್ಯದ ಪ್ರಶ್ನೆಗಳು:

Ø ಬಸವಣ್ಣನವರ ಬಾಲ್ಯ ವಿದ್ಯಾಭ್ಯಾಸ ಉದ್ಯೋಗದ ಕುರಿತು ಬರೆಯಿರಿ.

Ø ಬಸವಣ್ಣನವರ ವಚನಗಳ ಮಹತ್ವವನ್ನು ಬರೆಯಿರಿ.

Ø ಬಸವಣ್ಣನವರಿಂದಾಗಿ ಸಮಾಜದಲ್ಲಿ ಉಂಟಾದ ಬದಲಾವಣೆಗಳನ್ನು ಕುರಿತು ತಿಳಿಸಿ.

Ø ಯಾವುದಾದರು ಒಂದು ವಚನ ಬರೆದು ಅದರ ಅರ್ಥ ಬರೆಯಿರಿ.

Ø ಬಸವಣ್ಣನವರ ಮೂರ್ತಿ ಸ್ಥಾಪನೆಯಾದ ಐರೋಪ್ಯ ನಗರ ___________.

ಚಟುವಟಿಕೆ –

  1. ಬಸವಣ್ಣನವರ ಜೀವನ ಚರಿತ್ರೆಯನ್ನು ಸಂಗ್ರಹಿಸಿ ಬರೆಯಿರಿ.
  2. ಬಸವಣ್ಣನವರ 5 ವಚನಗಳನ್ನು ಸಂಗ್ರಹಿಸಿ ಅರ್ಥ ಬರೆಯಿರಿ.

 

ಅಕ್ಕಮಹಾದೇವಿ

ಅಕ್ಕಮಹಾದೇವಿ: 12 (2)

ಅವಧಿ:

ಪೀಠಿಕೆ: 12ನೇ ಶತಮಾನದ ಸುಪ್ರಸಿದ್ದ ವಚನಗಾರ್ತಿ.

ಈಕೆ ಬಸವಣ್ಣನವರ ಸಮಕಾಲೀನರು. ಶಿವಮೊಗ್ಗ ಜಿಲ್ಲೆಯ ಬೆಳಗಾವಿಯ

ಸಮೀಪದ ಉಡುತಡಿ ಅಥವಾ ಉಡುಗಣಿ / ಉಡುಗಣಿ ಇವರ ಜನ್ಮಸ್ಥಳ.

ಅಕ್ಕ ಕನ್ನಡದ ಪ್ರಥಮ ಮಹಿಳಾ ಕವಿಯಿತ್ರಿಯಾಗಿದ್ದಾರೆ. ಅಕ್ಕಮಾಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ. ಸ್ವಾಭಿಮಾನದ ಪ್ರತೀಕವಾಗಿ ಸ್ತ್ರೀವಾದಿ ಅದಕಿಯಾಗಿ, ಅಕ್ಕರೆಯ

ಅಕ್ಕನಾಗಿ ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ.

ಬಾಲ್ಯಜೀವನ: ಅಕ್ಕನವರ ತಂದ ನಿರ್ಮಲಶೆಟ್ಟಿ ಮತ್ತು ತಾಯಿ ಸುಮತಿ. ಸದಾಚಾರ ಸಂಪನ್ನರೂ, ಶಿವಭಕ್ತರೂ ಆಗಿದ್ದ ಕುಟುಂಬದಲ್ಲಿ ಈಕೆ ಜನಿಸಿದರು. ದೇವರ ಪೂಜೆಯೇ ಆಕೆಯ ಬಾಲ್ಯದ ಆಟಗಳಾಗಿದ್ದವು. ಪರಶಿವನನ್ನೇ ತಾನು ಪತಿಯನ್ನಾಗಿ ಪಡೆಯುವನೆಂಬುದು ಅವರ ನಿರ್ಧಾರವಾಗಿತ್ತು.

ವಿವಾಹ ಜೀವನ: ಒಮ್ಮೆ ಆ ಪ್ರಾಂತ್ಯದ ರಾಜನಾಗಿದ್ದ ಕೌಶಿಕನು ಬೇಟೆಗಾಗಿ ಬಂದಾಗ, ಉಡುತಡಿಯಲ್ಲಿ ಮಹಾದೇವಿಯಕ್ಕನನ್ನು ಕಂಡು, ಅವರ ಸೌಂದರ್ಯಕ್ಕೆ ಮಾರುಹೋಗಿ, ಆಕೆಯನ್ನು ಮದುವೆಯಾಗಲು ಬಯಸಿದನು. ಆದರೆ ಮಗಳ ಬಯಕೆಗೆ ವ್ಯತಿರಿಕ್ತವಾಗಿ ಹೋಗದ ತಂದೆ – ತಾಯಿಗಳು ರಾಜನ ಆಜ್ಞೆಯನ್ನು ಮೀರಿ ಕಷ್ಟಕ್ಕೆ ಸಿಲುಕಿದರು. ಆ ಸಂದಿಗ್ಧತೆಯನ್ನು ಅರಿತ ಮಹಾದೇವಿಯು ರಾಜನನ್ನು ಮದುವೆಯಾಗಲು ಒಪ್ಪಿದರು.

ನಿಯಮಗಳು: ಮದುವೆಗೆ ಮೊದಲು ತನ್ನ ಕೆಲವೊಂದು ನಿಯಮಗಳಿಗೆ ಮಾನ್ಯತೆ ಕೊಡಬೇಕೆಂದು ಕೇಳಿದಳು. ಆ ನಿಯಮಗಳು:

  1. ಮನಬಂದಂತೆ ನಾನು ಶಿವಪೂಜೆಯನ್ನು ಮಾಡುತ್ತೇನೆ.
  2. ಮನಬಂದಂತೆ ನನ್ನ ಗುರುವಿನ ಸೇವೆಯನ್ನು ಮಾಡುತ್ತೇನೆ.
  3. ಮನಬಂದಂತೆ ನಿಮ್ಮ ದೊರೆಗಳಲ್ಲಿ ನಡೆದುಕೊಳ್ಳುವೆನು.

ಈ ನಿಯಮಗಳಲ್ಲಿ ಆತನು ತನ್ನ ಇಚ್ಛೆಗೆ ವಿರೋಧವಾಗಿ ನಡೆದುಕೊಂಡರೆ, ಆ ನಿಯಮಗಳು ಉಲ್ಲಂಘನೆಯಾದರೆ ರಾಜನನ್ನು ಅರಮನೆಯನ್ನು ಹಾಗೂ ಸಂಸಾರವನ್ನು ತೊರೆದು ಹೋಗುವುದಾಗಿ ತಿಳಿಸಿದಳು. ಕಾಲಕ್ರಮೇಣ ವಿವಾಹದ ಸ್ವಲ್ಪ ದಿವಸಗಳಲ್ಲಿ ಒಂದೊಂದಾಗಿ ನಿಯಮಗಳು ಮುರಿಯಲು ಮಹಾದೇವಿಯು ತನ್ನ ಆರಾಧನಾಲಿಂಗವನ್ನು ತೆಗೆದುಕೊಂಡು ಅರಮನೆಯನ್ನು ತ್ಯಜಿಸಿದಳು.

ಶ್ರೀಶೈಲದ ಅನುಭವ: ರಾಜನ ಅಂತಃಪುರವನ್ನು ತ್ಯಜಿಸಿದ ಅಕ್ಕನವರು ಅನುಭವಮಂಟಪದಲ್ಲಿ ಆತ್ಮಾನುಭವದ ಬೆಳಕನ್ನು ಬೀರುವರು. ಇವರ ಅಸಾಧಾರಣ ಬುದ್ದಿ ಪ್ರತಿಭೆಯಿಂದಲೂ, ವಿಷಯ ನಿರೂಪಣಾ ಶಕ್ತಿಯಿಂದಲೂ, ವೀರಶೈವ ಜಗತ್ತಿನಲ್ಲಿ ಅಕ್ಕನವರ ಕೀರ್ತಿಯು ಹರಡಿ ಅಲ್ಲಮಪ್ರಭು, ಬಸವಣ್ಣನವರಂತಹ ಮಹಾವಿಭೂತಿಗಳೊಡನೆ ಇವರಿಗೆ ಸಮಾನ ಸ್ಥಾನವು ದೊರಕುವಂತೆ ಮಾಡಿತು. ಶರಣರ ಆಶೀರ್ವಾದ ಪಡೆದು ಶ್ರೀಶೈಲಕ್ಕೆ ಬಂದು ಅಲ್ಲಿ ನೆಲೆಸಿದರು. ಶ್ರೀಶೈಲದ ಸುಂದರ ವನಗಳಲ್ಲಿ ಅಲೆದಾಡುತ್ತಾ ಹೇಳಿರುವ ವಚನಗಳಲ್ಲಿ ಆಧ್ಯಾತ್ಮಿಕ ಜ್ಞಾನವು ಅಪೂರ್ವರೀತಿಯಲ್ಲಿ ಸಮ್ಮಿಳಿತವಾಗಿವೆ. ನಂತರದಲ್ಲಿ ಶ್ರೀಶೈಲದ ಕದಳಿಬನದಲ್ಲಿ ಭವಹರನನ್ನು ಕಂಡ ಅಕ್ಕನವರು ಪಾರ್ಥಿವ ಶರೀರವನ್ನು ತ್ಯಜಿಸಿ ಮಲ್ಲಿಕಾರ್ಜುನನಲ್ಲಿ ಐಕ್ಯರಾದರು.

ಅಕ್ಕನ ವಚನದ ವಿಶೇಷತೆ: ಅಕ್ಕನವರು ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮತ್ತು ಅಕ್ಕಗಳ ಪೀಠಿಕೆ ಎಂಬ ಮೂರು ಗ್ರಂಥಗಳನ್ನು ರಚಿಸಿದ್ದಾರೆ. ಮಹಾದೇವಿಯವರ ವಚನಗಳು ವಿಶ್ವಸಾಹಿತ್ಯಕ್ಕೆ ಭೂಷಣವಾಗಿವೆ. ಸಾಹಿತಿಗಳು ಈ ವಚನಗಳನ್ನು ಕನ್ನಡ ಸಾಹಿತ್ಯದ ರತ್ನಗಳೆಂದು ಅಭಿಪ್ರಾಯಪಟ್ಟಿದ್ದಾರೆ.

ಉದ್ದೇಶ: ಅಕ್ಕನವರ ವಚನಗಳನ್ನು ಪರಿಚಯಿಸುವುದು ಈ ವಚನಗಳಲ್ಲಿರುವ ತತ್ವಗಳನ್ನು ವಿದ್ಯಾರ್ಥಿಗಳು ಕಂಠಪಾಠ ಮಾಡಿ ಹಾಡುವುದು.

ಕಲಿಕಾ ಸಾಮಗ್ರಿ: ಚಿತ್ರಪಟ, ಸಾಕ್ಷ್ಯಚಿತ್ರ, ಧ್ವನಿಮುದ್ರಿಕೆಗಳು.

ಕಲಿಕಾವಿಧಾನ:

ಹಂತ 1: ಅಕ್ಕಮಹಾದೇವಿಯ ಬಾಲ್ಯದ ಕುರಿತು ವಿವರಿಸುವುದು.

ಹಂತ 2: ವೈವಾಹಿಕ ಜೀವನದ ಬಗ್ಗೆ ವಿವರಿಸುವುದು.

ಹಂತ 3: ಮದುವೆಯಾಗುವ ಮುನ್ನ ಹಾಕಿದ ನಿಯಮಗಳ ಬಗ್ಗೆ ವಿವರಿಸುವುದು.

ಹಂತ 4: ಅನುಭವ ಮಂಟಪವನ್ನು ವಿವರಿಸುವುದು.

ಹಂತ 5: ಶ್ರೀಶೈಲದ ಹಾಗೂ ಕದಳಿ ಬನದಲ್ಲಿ ಪಡೆದ ಆಧ್ಯಾತ್ಮಿಕ ಜ್ಞಾನದ ಬಗ್ಗೆ ವಿವರಿಸುವುದು. ಹಂತ 6: ಅಕ್ಕನವರ ವಚನಗಳ ವಿಶೇಷತೆಯ ವಿವರಿಸುವುದು , ವಚನವನ್ನು ಹೇಳಿಕೊಡುವುದು . ಸ್ವಮೌಲ್ಯಮಾಪನ:

  1. ಅಕ್ಕನವರ ಭಾವಚಿತ್ರವನ್ನು ಗುರುತಿಸುವರೇ?
  2. ವಚನವನ್ನು ಗುರುತಿಸುವರೇ?
  3. ವಚನವನ್ನು ಹಾಡಲು ಪ್ರಯತ್ನಿಸುವರೇ?
  4. ಬಾಲ್ಯ ಜೀವನದ ಬಗ್ಗೆ ಅರಿವಾಗಿದೆಯೇ?
  5. ನಿಯಮಗಳ ಬಗ್ಗೆ ಅರ್ಥವಾಗಿದೆಯೇ?
  6. ವಚನಗಳ ವಿಶೇಷತೆ ಅರ್ಥವಾಗಿದೆಯೇ?

ಘಟಕಾಂತ್ಯದ ಪ್ರಶ್ನೆಗಳು: –

  1. ಆಕ್ಕನವರು ಯಾವ ಶತಮಾನದ ವಚನಗಾರ್ತಿ?
  2. ಆಕೃನವರು ಯಾರ ಸಮಕಾಲೀನರು?
  3. ಮಹಾದೇವಿಯವರ ಜನ್ಮಸ್ಥಳ ಯಾವುದು?
  4. ಅಕ್ಕನವರ ತಂದೆ – ತಾಯಿಯ ಹೆಸರೇನು?
  5. ಯಾವ ರಾಜನು ಅಕ್ಕನವರನ್ನು ಮದುವೆಯಾದರು?
  6. ರಾಜನನ್ನು ಮದುವೆಯಾಗಲು ಹಾಕಿದ ಷರತ್ತುಗಳೇನು?
  7. ಅಕ್ಕನವರು ಅರಮನೆಯನ್ನು ತ್ಯಜಿಸಲು ಕಾರಣವೇನು?
  8. ಅನುಭವ ಮಂಟಪದಲ್ಲಾದ ಅನುಭವವೇನು?
  9. ಅಕ್ಕನವರು ಪಾರ್ಥಿವ ಶರೀರವನ್ನು ಎಲ್ಲಿ ತ್ಯಜಿಸಿದರು?
  10.  ಅಕ್ಕನವರ ವಚನಗಳ ವಿಶೇಷತೆ ಏನು?

ಶರಣೆ ಮುಕ್ತಾಯಕ್ಕ

ಅಧಿವೇಶನ: 12 (3)

Ø ಪೀಠಿಕೆ:- ಶರಣೆಯರಲ್ಲಿ ಸಾಮಾನ್ಯವಾಗಿ ಮೊದಲನೆಯ ಸ್ಥಾನ ಅಕ್ಕಮಹಾದೇವಿಗೆ, ಎರಡನೆಯ ಸ್ಥಾನ ಮುಕ್ತಾಯಕ್ಕನಿಗೆ ಸಲ್ಲುತ್ತದೆ. ಅಕ್ಕಮಹಾದೇವಿ ಭಾವುಕ ಜೀವಿಯಾದರೆ ಮುಕ್ತಾಯಕ್ಕ ಬುದ್ಧಿಜೀವಿ ಭಕ್ತತೀವ್ರತೆಯಲ್ಲಿ ಅಕ್ಕಮಹಾದೇವಿ ಬಸವಣ್ಣನಿಗೆ ಸಮಾನ, ಬುದ್ಧಿಪ್ರಖರತೆಯಲ್ಲಿ ಮುಕ್ತಾಯಕ್ಕ ಅಲ್ಲಮನಿಗೆ ಸಮಾನ.

Ø ಉದ್ದೇಶ:— ವಚನಗಾರ್ತಿಯವರ ಪರಿಚಯ ಮಾಡಿಸುವುದು ವಚನಸಾಹಿತ್ಯದಲ್ಲಿ ಭಕ್ತಿಯ ಪ್ರದರ್ಶನದ ಪರಿಚಯ ಮಾಡಿಸುವುದು, ವಚನಗಳನ್ನು ರಾಗಬದ್ದವಾಗಿ ಹಾಡುವಂತೆ ಮಾಡುವುದು.

Ø ಜನ್ಮಸ್ಥಳ: ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಸಳಿ ಕಣ್ಣು ಮುಕ್ತಾಯಕ್ಕನ ಜನ್ಮಸ್ಥಳ,

Ø ಅಣ್ಣತಂಗಿಯರ ಬಾಂದವ್ಯ:- ಈಕೆ ಶ್ರೇಷ್ಟ ಶಿವಭಕ್ತ ಗುಪ್ತಭಕ್ತಿಯ ಅಜಗಣ್ಣನ ತಂಗಿ. ವಚನಸಾಹಿತ್ಯದಲ್ಲಿ ಈ ಅಣ್ಣ ತಂಗಿಯರ ಬಾಂದವ್ಯ ಆಸದೃಶ್ಯವಾದದ್ದು, ಆಧ್ಯಾತ್ಮಿಕ ಸ್ಪರ್ಶವುಳ್ಳದ್ದು.

Ø ಮುಕ್ತಾಯಕ್ಕನ ಕಾಲ: ಅಲ್ಲಮ್ಮನ ಸಮಕಾಲೀನಳಾದ ಮುಕ್ತಾಯಕ್ಕನ ಕಾಲ ಸುಮಾರು 1160.

Ø ವಚನಗಳ ಸಂಖ್ಯೆ: ಮುಕ್ತಾಯಕ್ಕಳ ವಚನಗಳ ಸಂಖ್ಯೆ 32.

Ø ವಚನಗಳ ಅಂಕಿತ: ಈಕೆಯ ವಚನೆಗಳಲ್ಲಿ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳಿಗಿಂತಲೂ ಭೌತಿಕಮಟ್ಟದ ಜ್ಞಾನದ ಹೊಳಪೇ ಹೆಚ್ಚು. ಈಕೆಯ ವಚನಗಳ ಅಂಕಿತ “ಅಜಗಣ್ಣ ತಂದೆ”.

Ø ಕಲಿಕಾ ಸಾಮಾಗ್ರಿ: – ಚಿತ್ರಪಟ, ಸಾಕ್ಷ್ಯಚಿತ್ರ.

Ø ಕಲಿಕಾ ವಿಧಾನ:

ಹಂತ 1 – ಕಪ್ಪು ಹಲಗೆಯ ಮೇಲೆ ವಚನಸಾಹಿತ್ಯ ಬರೆಯುವುದು.

ಹಂತ 2 – ಸಾಹಿತ್ಯದ ಅರ್ಥವನ್ನು ವಿವರಿಸುವುದು.

ಹಂತ 3 – ರಾಗಬದ್ದವಾಗಿ ಹಾಡಿ ತೋರಿಸುವುದು.

ಹಂತ 4 – ವಚನಗಾರ್ತಿಯ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡುವುದು.

ಹಂತ 5 – ವಿದ್ಯಾರ್ಥಿಗಳಿಂದ ಹಾಡಿಸಲು ಪ್ರಯತ್ನಿಸುವುದು.

ಸ್ವಮೌಲ್ಯಮಾಪನ:

Ø ವ್ಯಕ್ತಿಪರಿಚಯ ಸರಿಯಾಗಿ ಆಗಿದೆಯೇ?

Ø ಮಾಡಿರುವ ವಿವರಣೆ ಅರ್ಥಮಾಡಿಕೊಂಡಿರುವರೇ?

Ø ರಾಗವನ್ನು ಅನುಸರಿಸಿರುವರೇ?

Ø ಸ್ವಂತವಾಗಿ ಹಾಡಲು ಪ್ರಯತ್ನಿಸುವರೇ?

ಘಟಕಾಂತ್ಯದ ಪ್ರಶ್ನೆ:

  1. ಮುಕ್ತಾಯಕ್ಕನಿಗೆ ವಚನಸಾಹಿತ್ಯದಲ್ಲಿ ಎಷ್ಟನೇ ಸ್ಥಾನ?
  2. ಮುಕ್ತಾಯಕ್ಕನ ಜನ್ಮಸ್ಥಳ ಯಾವುದು?
  3. ಮುಕ್ತಾಯಕ್ಕನ ಅಣ್ಣನ ಹೆಸರೇನು?
  4. ಮುಕ್ತಾಯಕ್ಕನ ಕಾಲ ಯಾವುದು?
  5. ಮುಕ್ತಾಯಕ್ಕನ ವಚನಗಳ ಸಂಖ್ಯೆ ಎಷ್ಟು?
  6. ಈಕೆಯ ವಚನಗಳು ಯಾವ ಅಂಕಿತದಿಂದ ರಚಿತಗೊಂಡಿವೆ?

ಪ್ರಾಯೋಗಿಕ ಚಟುವಟಿಕೆ 

  1. ವ್ಯಕ್ತಿ ಪರಿಚಯಕ್ಕೆ ಸಂಭಂದಿಸಿದಂತೆ ಅವರ ವಚನಗಳ ಸಂಗ್ರಹ ಮಾಡಲು ಹೇಳುವುದು.
  2. ಚಿತ್ರಗಳನ್ನು ಸಂಗ್ರಹಿಸಲು ಹೇಳುವುದು.

ಕಂಠಪಾಠ ಕನ್ನಡ

ಅಧಿವೇಶನ 13 – 18 – 22 & 24

ಅವಧಿ: 11 : 45 – 1 : 15,

ಪೀಠಿಕೆ ಬಾಲ್ಯಾವಸ್ಥೆಯಲ್ಲಿ ಕಲಿಯುವ ಪಾಠ ಪದ್ಯಗಳು ಜೀವನ ಪರ‍್ಯಂತ ನೆನಪಿನಲ್ಲಿರುತ್ತವೆ ಎಂಬ ಮಾತು ಸತ್ಯ. ಚಿಕ್ಕಂದಿನಲ್ಲಿ ಕಲಿತ ಸಣ್ಣಸಣ್ಣ ಹಾಡುಗಳು, ಪದ್ಯಗಳು, ಪಾಠಗಳು, ಕಥೆಗಳು ಯಾವಾಗಲೂ ನೆನಪಿನಲ್ಲುಳಿಯುತ್ತವೆ.

ಈ ಮಾತಿಗೆ ಇಂಬು ಕೊಟ್ಟಂತೆ ಶಾಲೆಯಲ್ಲಿ ಮಕ್ಕಳಿಗೆ ಕಂಠಪಾಠ ಕಲಿಕೆಯ ಒಂದು ಭಾಗವಾಗಿದೆ. ಕಂಠಪಾಠವು ಮಕ್ಕಳಿಗೆ ಸುಲಭಸಾಧನವಾಗಿದೆ, ಅರ್ಥ ವಿವರಣೆ ಬಗ್ಗೆ ಅರಿವಿಲ್ಲದಿದ್ದರೂ ಸಾಹಿತ್ಯವನ್ನು ನಿರರ್ಗಳವಾಗಿ ಹೇಳುವ ಒಂದು ಕಲೆ, ವಿದ್ಯಾರ್ಥಿಗಳಿಗೆ ಒಂದು ಕೊಡುಗೆ ಎನ್ನಬಹುದು.

ಈ ಕಂಠಪಾಠಕ್ರಮವನ್ನು ಸಂಗೀತದಲ್ಲಿ ಅಳವಡಿಸಿ ಬೋಧಿಸಿದರೆ ಕಲಿಕೆ ಇನ್ನೂ ಅರ್ಥ ಪೂರ್ಣವಾಗುತ್ತದೆ ಎಂಬುದು ನಿಸ್ಸಂಶಯವಾದ ಸತ್ಯ.

ಭಾಷಾಕಲಿಕೆಯಲ್ಲಿ ಪದ್ಯಗಳು ಪ್ರಮುಖ ಭಾಗಗಳಲ್ಲಿ ಒಂದಾಗಿದ್ದು ಪದ್ಯಗಳನ್ನು ಕಂಠಪಾಠ ಮಾಡಬೇಕಾದ ಅವಶ್ಯಕತೆಯಿರುತ್ತದೆ. ಇಂಥ ಪದ್ಯಗಳನ್ನು ಕಂಠಪಾಠ ಮಾಡಲು ಸಂಗೀತ ಅನುಕೂಲಕರವಾಗಿದೆ. ರಾಗತಾಳಗಳ ಸಂಯೋಜನೆಯಲ್ಲಿ ಮಾಡಿದ ಕಂಠಪಾಠ ಶಾಶ್ವತವಾಗಿರುತ್ತದೆ. ಈ ನಿಟ್ಟಿನಲ್ಲಿ ಸಂಗೀತವು ಪ್ರಮುಖ ಪಾತ್ರವಹಿಸುತ್ತದೆ.

ಉದ್ದೇಶ:

Ø ಕಂಠಪಾಠ ಸಂಗೀತ ಮೂಲಕ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಗ್ರಹಿಸುವುದು.

Ø ರಾಗ – ತಾಳಗಳ ಬಗ್ಗೆ ಪರಿಚಯವಾಗುವುದು.

Ø ಸಾಹಿತ್ಯದ ಉಚ್ಚಾರಣಾ ಕಲೆ, ಕೌಶಲ್ಯ ಬರುವುದು.

Ø ತಾಳಜ್ಞಾನ ಗ್ರಹಿಕೆ ಉಂಟಾಗುವುದು.

Ø ರಾಗವಾಗಿ ಹಾಡುವ ಕಲೆ ಮೈಗೂಡುವುದು.

Ø ಕಂಠಪಾಠ ಮಾಡುವ ಪದ್ಯ / ಸಾಹಿತ್ಯದ ಅರ್ಥ, ಸ್ಮರಿಸುವುದು.

Ø ಭಾವಾರ್ಥವನ್ನು ನಿರೂಪಿಸುವುದು.

Ø ಇತರ ವಿಷಯಗಳಿಗೂ ಇದು ಅನ್ವಯಿಸುವುದು,

ಬೋಧನೋಪಕರಣಗಳು:

Ø ತಂಬೂರಿ / ಶ್ರುತಿ ಪೆಟ್ಟಿಗೆ.

Ø ಕಂಠಪಾಠ ಮಾಡುವ ಸಾಹಿತ್ಯ.

Ø ತಾಳ.

ಕಲಿಕಾ ವಿಧಾನ:

Ø ಕಂಠಪಾಠ ಮಾಡುವ ಸಾಹಿತ್ಯವನ್ನು ಬರೆಯುವುದು, ಬರೆಸುವುದು.

Ø ಸಾಹಿತ್ಯವನ್ನು ಓದಿಸುವುದು, ಉಚ್ಚಾರಣೆ ಬಗ್ಗೆ ಮಾರ್ಗದರ್ಶನ ನೀಡುವುದು.

Ø ಪಲ್ಲವಿ ಅನುಪಲ್ಲವಿಗಳನ್ನು ರಾಗೆ ಅಳವಡಿಸಿ ಹಾಡುವುದು ನಂತರ ಅನುಸರಿಸುವಂತೆ ತಿಳಿಸುವುದು, ಹೇಳಿಕೊಟ್ಟು ಹಾಡುವಂತೆ ತಿಳಿಸುವುದು.

Ø ಚರಣಗಳನ್ನು ಒಮ್ಮೆ ಹಾಡಿ ತೋರಿಸುವುದು ನಂತರ ಹಾಡನ್ನು ಅನುಸರಿಸುವಂತೆ ಹಾಡುವುದು. ಎಲ್ಲರೂ ಒಟ್ಟಾಗಿ ಹಾಡುವಂತೆ ಮಾರ್ಗದರ್ಶನ ನೀಡುವುದು.

Ø ಅರ್ಥ ವ್ಯತ್ಯಾಸವಾಗದಂತೆ, ಉಚ್ಚಾರಣೆಗೆ ಧಕ್ಕೆಯಾಗದಂತೆ ಹಾಡುವುದನ್ನು ಹೇಳಿಕೊಡುವುದು, ಹಾಡಿಸುವುದು (ವೈಯಕ್ತಿಕ / ಸಾಮೂಹಿಕ).

ಘಟಕಾಂತ್ಯದ ಪ್ರಶ್ನೆಗಳು:

Ø ಈ ಪದ್ಯದ ಪಲ್ಲವಿ, ಅನುಪಲ್ಲವಿಗಳನ್ನು ಬರೆಯಿರಿ.

Ø ಈ ಪದ್ಯದ ಪಲ್ಲವಿಚರಣಗಳನ್ನು ಹಾಡಿರಿ.

Ø ಚರಣಗಳನ್ನು ಬರೆಯಿರಿ, ಹಾಡಿರಿ.

Ø ರಾಗ – ತಾಳದ ಬಗ್ಗೆ ವಿವರಿಸಿ; ಉಚ್ಚಾರಣೆಯ ಬಗ್ಗೆ ತಿಳಿಸಿ ಒಟ್ಟಾಗಿ ಹಾಡಿ, ವೈಯಕ್ತಿಕವಾಗಿ ಹಾಡಿ.

ಸ್ವಮೌಲ್ಯಮಾಪನ:

Ø ವಿದ್ಯಾರ್ಥಿಗಳು ಪದ್ಯಗಳನ್ನು ಸರಿಯಾಗಿ ಬರೆಯುವರೇ?

Ø ರಾಗ, ತಾಳಗಳನ್ನು ಸರಿಯಾಗಿ ಅನುಸರಿಸುವರೇ?

Ø ಸಾಮೂಹಿಕವಾಗಿ ಹಾಡುವ ಸಾಮರ್ಥ್ಯಗಳಿಕೆಯಾಗಿದೆಯೇ?

Ø ಉಚ್ಚಾರಣೆಯನ್ನ ಸರಿಯಾಗಿ ಮಾಡುವ ಕೌಶಲ್ಯ ಗಳಿಕೆಯಾಗಿದೆಯೇ?

ಲಾವಣಿ

ಅಧಿವೇಶನ: 14

ಅವಧಿ: 45 ನಿಮಿಷಗಳು

ಲಾವಣಿಯು ಅತ್ಯಂತ ಸರಳವಾದ, ಚುರುಕು ಲಯದಲ್ಲಿ ರಚಿಸಲ್ಪಟ್ಟ ಸುಲಭವಾಗಿ ಅರ್ಥ ಆಗುವಂತಹ ಗೀತ ಪ್ರಕಾರವಾಗಿದೆ. ಇವು ಮೂಲದಲ್ಲಿ ಮಹಾರಾಷ್ಟ್ರದ ಜನಪ್ರಿಯ ಸಂಗೀತ ನೃತ್ಯ ಪ್ರಕಾರವಾಗಿದೆ. ಲಾವಣಿಗಳು ಜನರನ್ನು ಬಹು ಬೇಗ ಸೆಳೆಯುವ ಆಕರ್ಷಕ ಧಾಟಿಯಲ್ಲಿರುತ್ತವೆ. ಲಾವಣಿಯ ಪರಿಧಿಯು ಬಹಳ ವಿಶಾಲವಾಗಿದ್ದು ಸಾಮಾಜಿಕ, ಧಾರ್ಮಿಕ, ರಾಜಕೀಯ ಹೀಗೆ ಎಲ್ಲ ವಿಷಯಗಳ ಲಾವಣಿಗಳು ಇವೆ. ಲಘು, ಹಾಸ್ಯಭರಿತ, ವಿಡಂಬನಾತ್ಮಕವಾಗಿಯೂ ಇರುತ್ತದೆ. ನೃತ್ಯ ಮಾಡಲು ಪೂರಕ ವಾತಾವರಣವನ್ನು ಇವು ನಿರ್ಮಾಣ ಮಾಡುತ್ತವೆ.

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲಾವಣಿಗೀತೆಗಳು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದೇಶಬಾಂಧವರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇತ್ತೀಚೆಗೆ ಪರಿಸರಗೀತೆಗಳನ್ನು ಲಾವಣಿ ಶೈಲಿಯಲ್ಲಿ ಅಳವಡಿಸಿರುವುದು, ಲಾವಣಿಗೆ ಕೋಲಾಟವನ್ನು ಅಳವಡಿಸಿರುವುದು ವಿದ್ಯಾರ್ಥಿಗಳಲ್ಲಿ ಪರಿಸರದ ಜಾಗೃತಿ ಮೂಡಿಸುವಲ್ಲಿ ಸಫಲ ಪ್ರಯತ್ನವಾಗಿದೆ.

ಪರಿಸರ ಗೀತ (ಲಾವಣಿ ಶೈಲಿ)

ಕೇಳಿರಿ ಕೇಳಿರಿ ನಾಡಿನ ಜನರೆ

ಪರಿಸರದೀ ಪರಿ ಕಥೆಯನ್ನು

ಭೂ ಮಾತೆಗೆ ಒದಗಿದ ಸ್ಥಿತಿಯನ್ನು

ನಮ್ಮಿಂದಾಗಿಹ ಅಪಚಾರವನ್ನು

ನಾಡಿಗೆ ಬಂದಿಹ ದುರ್ಗತಿಯನ್ನು ||

ಕೆಟ್ಟಿತು ಗಾಳಿಯು ಕೆಟ್ಟಿತು ಜಲವು

ಪೋಷಕ ಆಹಾರ ಸಿಗದಾಯ್ತು

ಕಲಬೆರೆಕೆಯಿಂದದು ಕೆಟ್ಟೋಯ್ತು

ತಿಂದುದು ರೋಗದ ಪರಿಯಾಯ್ತು

ಸಾವು ನೋವಿನ ಮನೆಯಾಯ್ತು ||

ಹವ ಬದಲಾವಣೆ ಆಗಿದೆಯಲ್ಲ

ಬಿಸಿಲಿನ ತಾಪವು ಹೆಚ್ಚಿದೆಯಲ್ಲ

ಆಮ್ಲದ ಮಳೆಯು ಸುರಿದಿದೆಯಲ್ಲ

ಓಜೋನ್ ಪದರವು ಹರಿದಿದೆಯಲ್ಲ

ಜೀವಿಗೆ ವಿಪತ್ತು ಕಾದಿದೆಯಲ್ಲ ||

ಬಂದಿದೆ ಅನ್ನಕೆ ಬರಗಾಲ

ಕುಡಿಯುವ ನೀರಿಗು ಕಂಗಾಲ

ಉಸಿರಾಡುವ ಗಾಳಿಗು ಕಡೆಗಾಲ

ಹರಿದಿದೆ ರೋಗದ ಮಹಾಪೂರ

ನೋಡಿದರೆಲ್ಲೆಡೆ ಹಾಹಾಕಾರ ||

ಕೇಳಿರಿ ಕೇಳಿರಿ ನಾಡಿನ ಜನರೆ

ಪರಿಸರದೀ ಪರಿ ಗೋಳಿನ ಕಥೆಯ

ನಾಡಿಗೆ ಬಂದಿಹ ದುರ್ಗತಿಯ

ಗಳಿಸಿರಿ ಪರಿಸರ ಉಳಿಸುವ ಮತಿಯ

ಉಳಿಸಿರಿ ನಿರ್ಮಲ ಪರಿಸರ ಸ್ಥಿತಿಯ ||

ಶಿಶುನಾಳ ಷರೀಫರ ತತ್ವಪದ

ಅಧಿವೇಶನ: 14 (1)

ಅವಧಿ: 45 ನಿಮಿಷ

ಸಾಧು ಸತ್ತುರುಷರ, ಸಂತರ, ಯೋಗಿಗಳ ಒಂದು ಉಜ್ವಲ ಪರಂಪರೆಯನ್ನು ಉಳ್ಳಂತಹ ಸೌಭಾಗ್ಯ ನಮ್ಮದು. ತಮ್ಮ ಅಮೃತ ತುಲ್ಯವಾದ ವಾಣಿಯ ಮೂಲಕವಾಗಿ ಸಮಾಜಕ್ಕೆ ಬೆಲೆಕಟ್ಟಲಾಗದ ಕೊಡುಗೆ ನೀಡಿದ ಹಲವಾರು ಮಹನೀಯರು ನಮ್ಮ ನಾಡಿನಲ್ಲಿದ್ದಾರೆ. ತತ್ತ್ಪದವೆಂದರೆ ಪ್ರತಿಯೊಬ್ಬನಲ್ಲಿರುವ ಆತ್ಮವೇ ಆಗಿದೆ . ಹೀಗಾಗಿ

ತತ್ತ್ವಪದವೆಂದರೆ ದೇಹ ಅಂತಃಕರಣಗಳ ಒಳಗಿರುವ ಇದಕ್ಕೆ ಸಾಕ್ಷಿಯಾದ ನಿತ್ಯ ಶುದ್ದ, ಮುಕ್ತ, ನಿರ್ಮಲ, ಚೈತನ್ಯವು ಎಂಬುದಾಗಿ ಹಲವಾರು ರೀತಿಯಲ್ಲಿ ಕರೆಸಿಕೊಳ್ಳುವ ಆತ್ಮ ಕುರಿತದ್ದೇ ಆಗಿದೆ.

ಕನ್ನಡ ಭಾಷೆಯಲ್ಲಿ ತತ್ವಪದಗಳನ್ನು ರಚಿಸಿರುವವರು ಅನೇಕರಿದ್ದಾರೆ. ಮೈಸೂರು ವೇದಾಂತ ಶಿವರಾಮ ಶಾಸ್ತ್ರಿಗಳು, ಶಂಕರಾನಂದರು, ದತ್ತರಾಜಯೋಗೀಂದ್ರರು, ಬ್ರಹ್ಮಾನಂದರು, ನಿಜಗುಣ ಶಿವಯೋಗಿಗಳು ಹೀಗೆ ಅನೇಕರು. ಇವರೆಲ್ಲರ ನಡುವೆ ಬೆಳಗುವ ಒಂದು ಹೆಸರು ಶಿಶುನಾಳ ಷರೀಫರು. ಇವರ ರಚನೆಗಳು ಅವರ ಜೀವನದಲ್ಲಿ ಪ್ರಾಸಂಗಿಕವಾಗಿ ಬಂದ ಘಟನೆಗಳೊಡನೆ ಬೆಸೆದಿವೆ. ಭಾಷೆ ಉತ್ತರ ಕರ್ನಾಟಕದ ಭಾಷೆ, ಷರೀಫರು ಶಿಶುನಾಳ ಸಮೀಪದ ಕಳಸದ ಗೋವಿಂದ ಭಟ್ಟರ ಶಿಷ್ಯರಾಗಿ ಸಮಾಜದ ಎಲ್ಲ ವರ್ಗಗಳೊಂದಿಗೆ ಸೇರಿ ಅವರ ನಡುವೆಯು ಹಾಡಿದರು. ಇವರ ತತ್ವಪದಗಳು ಸರ್ವಕಾಲಕ್ಕೂ, ಸರ್ವರಿಗೂ ಆದರ್ಶವಾಗಿದೆ. ಇದನ್ನು ಅರ್ಥೈಸಿಕೊಂಡು ನಮ್ಮ ನಡೆಯನ್ನು ಉತ್ತಮಪಡಿಸಬಹುದಾಗಿದೆ. ಗ್ರಾಮೀಣ ಭಾಷೆಯಲ್ಲಿ ಮಹತ್ತಾದ ತತ್ತ್ಪವನ್ನು ಬೋಧಿಸಿದ ಇವರ ತತ್ತ್ವಪದದ ಅಭ್ಯಾಸ ಅತ್ಯವಶ್ಯವೂ ಉಪಯುಕ್ತವೂ ಆಗಿದೆ.

ಉದ್ದೇಶ

Ø ತತ್ತ್ವಪದದ ಅರ್ಥವನ್ನು ತಿಳಿಸುವುದು.

Ø ಸಂಗೀತ ಪ್ರಕಾರಗಳಲ್ಲಿ ತತ್ತ್ವಪದಕ್ಕಿರುವ ಸ್ಥಾನವನ್ನು ಅರಿಯುವಂತೆ ಮಾಡುವುದು.

Ø ಶಿಶುನಾಳ ಷರೀಫರ ಕೊಡುಗೆಗಳ ಕುರಿತು ತಿಳಿಯುವಂತೆ ಮಾಡುವುದು.

Ø ತತ್ತ್ವಪದಗಳನ್ನು ಅರ್ಥೈಸಿಕೊಂಡು ಹಾಡುವ ಕೌಶಲ್ಯವನ್ನು ಬೆಳೆಸುವುದು.

Ø ತತ್ತ್ವಪದಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸುವುದು.

 ಅಧ್ಯಯನದಲ್ಲಿ ಅಳವಡಿಸಿದ ಹೊಸ ಅಂಶಗಳು:

ಶಿಶುನಾಳ ಷರೀಫರ ಸಂಕ್ಷಿಪ್ತ ಪರಿಚಯ.

ಕಲಿಕಾ ಸಾಮಾಗ್ರಿ:

 ಭಾವಚಿತ್ರ, ಚಾರ್ಟ, ಧ್ವನಿಮುದ್ರಿಕೆ, ಪಿ. ಪಿ. ಟಿ, ವಿಡಿಯೋಗಳು, ಪೂರಕವಾದ್ಯಗಳು.

ಕಲಿಕಾ ವಿಧಾನ: ಗಾಯನ, ವಿವರಣೆ, ಧ್ವನಿಮುದ್ರಿಕೆಗಳನ್ನು ಕೇಳಿಸುವುದು, ವಿಡಿಯೋಗಳ ಪ್ರದರ್ಶನ

ಹಂತ 1 – ಶಿಶುನಾಳ ಶರೀಫರನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು, ಭಾವಚಿತ್ರ ಪ್ರದರ್ಶಿಸುವುದು. ಹಂತ 2 – ಶಿತ್ವದವನ್ನು ಭಾವಾರ್ಥದೊಂದಿಗೆ ಬರೆಯಿಸುವುದು.

ಹಂತ 3 – ತತ್ವಪದವನ್ನು ಗಾಯನ ಮಾಡಿ ತೋರಿಸುವುದು.

ಹಂತ 4 – ತತ್ವಪದವನ್ನು ವಿದ್ಯಾರ್ಥಿಗಳಿಗೆ ಹಾಡಲು ಹೇಳಿಕೊಡುವುದು.

ಹಂತ 5 – ತತ್ವಪದದ ಗಾಯನದ ಧ್ವನಿಮುದ್ರಿಕೆಗಳನ್ನು ಕೇಳಿಸುವುದು / ವಿಡಿಯೋಗಳನ್ನು ಪ್ರದರ್ಶಿಸುವುದು.

ಹಂತ 6 – ವಿದ್ಯಾರ್ಥಿಗಳಿಂದ ಕಲಿತ ತತ್ವಪದವನ್ನು ಹಾಡಿಸುವುದು.

ಸ್ವಮೌಲ್ಯಮಾಪನ:

Ø ತತ್ತ್ವಪದದ ಅರ್ಥ ತಿಳಿದಿರುವರೇ?

Ø ಸಂಗೀತ ಕ್ಷೇತ್ರದಲ್ಲಿ ತತ್ತ್ವಪದದ ಸ್ಥಾನದ ಬಗ್ಗೆ ತಿಳಿದಿರುವರೇ?

Ø ತತ್ತ್ವಪದದ ರಚನಾಕಾರರ ಹೆಸರನ್ನು ತಿಳಿದಿರುವರೆ?

Ø ತತ್ತ್ವಪದವನ್ನು ಹಾಡುವ ಕೌಶಲ್ಯವನ್ನು ಹೊಂದಿರುವರೆ?

ಘಟಕಾಂತ್ಯದ ಪ್ರಶ್ನೆಗಳು

Ø ತತ್ತ್ವಪದ ಎಂದರೇನು?

Ø ತತ್ತ್ವಪದಗಳ ರಚನಾಕಾರರ ಹೆಸರುಗಳನ್ನು ಪಟ್ಟಿ ಮಾಡಿ.

Ø ತತ್ವಪದ ಮತ್ತು ಜಾನಪದ ಗೀತೆಗಳಿಗಿರುವ ವ್ಯತ್ಯಾಸವೇನು?

Ø ಕಲಿಸಿರುವ ತತ್ತ್ವಪದಗಳನ್ನು ಸ್ವರ, ಲಯ, ಭಾವಪೂರ್ಣವಾಗಿ ಹಾಡಿರಿ.

ಚಟುವಟಿಕೆ:

ಶಿಶುನಾಳ ಷರೀಫರು ರಚಿಸಿದ ತತ್ತ್ವಪದಗಳನ್ನು ಸಂಗ್ರಹಿಸಿ ಬರೆಯಿರಿ.

ಆಕರಗ್ರಂಥಗಳು:

ಅ. ರಾ. ಸೇ. ಸಂಕಾದಿತ ಶಿಶುನಾಳಷರೀಫರ ನೂರಾರು ತತ್ವಪದಗಳು: ಕಾಮಧೇನು ಪುಸ್ತಕ ಭವನ.

ತತ್ವಪದ

ರಚನೆ: ಶಿಶುನಾಳ ಷರೀಫರುಸ

ಗುಡಿಯ ನೋಡಿರಣ್ಣ | ದೇಹದೆ.

ಗುಡಿಯ ನೋಡಿರಣ್ಣ ||ಪ||

ಗುಡಿಯ ನೋಡಿರಿದು ಪೊಡವಿಗೆ ಒಡೆಯನು

ಅಡಗಿಕೊಂಡು ಕಡು ಬೆಡಗಿನೊಳಿರುತಿದೆ ||ಅ. ಪ.||

ಮೂರು ಮೂಲೆ ಕಲ್ಲು ಅದರೊಳು

ಜಾರುತಿರುವಕಲ್ಲು

ಧೀರ ನಿರ್ಗುಣನು ಸಾರಸಗುಣದಲಿ

ತೋರಿ ಆಡಗಿ ತಾ ಬ್ಯಾರಾಗಿರುತಿಹ ||1||

ಆರು ಮೂರು ಕಟ್ಟಿ ಮ್ಯಾಲಕೆ

ಏರಿದವನು ಗಟ್ಟಿ

ಭೇರಿ ಕಾಳೆ ಶಂಖ ಭಾರಿ ಸುನಾದದಿ

ಮೀರಿದಾನಾದ ತೋರಿ ಹೊಳೆಯುತಿಹ ||2|||

ಸಾಗುತಿಹವು ದಿವಸ ಬಹುದಿನ

ಹೋಗಿ ಮಾಡಿ ಪಾಯ್ಸ

ಯೋಗಿರಾಜ ಶಿಶುನಾಳಧೀಶ ತಾ

ನಾಗಿ ಪರಾತ್ವರ ಬ್ರಹ್ಮರೂಪನಿಹ ||3||

ಭಾವಾರ್ಥ

ದೇಹವೆಂಬ ಈ ಗುಡಿಯನ್ನು ನೋಡಿರಿ, ವಿಶ್ವಕ್ಕೆ ಒಡೆಯನಾದ ಭಗವಂತನು ಇದರಲ್ಲಿ ಅಡಗಿಕೊಂಡು – ಬೆಡಗಿನಿಂದ ಕುಳಿತಿದ್ದಾನೆ. ಮೂರು ಮೂಲೆಯ ಕಲ್ಲಿನ (ತ್ರಿಗುಣಗಳು) ಒಲೆಯಲ್ಲಿ ಜಾರುವ ಕಲ್ಲು ಒಂದಿದೆ (ಕುಂಡಲಿನಿ). ಅದರ ಮೇಲಿರುವ ಈ ಸಗುಣ ದೇಹದಲ್ಲಿ ಧೀರನಾದ, ಯಾವುದರ ಲೇಪವೂ ಇಲ್ಲದ ನಿರ್ಗುಣ ಪರಬ್ರಹ್ಮನು, ಚೈತನ್ಯ ರೂಪದಿಂದ ಅಡಗಿಕೊಂಡಿದ್ದಾನೆ. ಈ ಗುಡಿಯನ್ನು ನೋಡಿರಿ, ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಮತ್ತು ಮನಸ್ಸೆಂಬ ಆರು ಇಂದ್ರಿಯಗಳನ್ನು ರೇಚಕ, ಪೂರಕ, ಕುಂಭಕಗಳೆಂಬ ಮೂರರಲ್ಲಿ ವಾಯುವನ್ನು ಕಟ್ಟಿ, ಕುಂಡಲಿನಿಯನ್ನು ಮೇಲಕ್ಕೇರಿಸಿದವನೇ ಗಟ್ಟಿ, ಕುಂಡಲಿನಿಯು ಮೇಲಕ್ಕೇರತ್ತಿರಲು ಭೇರಿ, ಕಹಳೆ, ಶಂಖ ಮೊದಲಾದ ನಾದಗಳು ಮೀರಿದ ಆನಂದವು ತೋರಿ ಹೊಳೆಯುತ್ತದೆ. ಅಂತಹ ಗುಡಿಯನ್ನು ನೋಡಿರಿ. ರುಚಿಕರವಾದ ಪಾಯಸ ಮೊದಲಾದ ಭಕ್ಷ್ಯಗಳನ್ನು ಮಾಡಿ ತಿನ್ನುತ್ತಾ ದಿನಗಳು ಹೋಗಿ ಬಿಡುತ್ತೇವೆ. ಆದ್ದರಿಂದ ಪರಾತ್ಪರ ಬ್ರಹ್ಮರೂಪನಾದ ಶಿಶುನಾಳಧೀಶನು ಇರುವ ಈ ದೇಹವೆಂಬ ಗುಡಿಯನ್ನು ನೋಡಿರಿ.

ಭಜನ್

ಅಧಿವೇಶನ: 15.

ಅವಧಿ: 45 ನಿಮಿಷ.

ಪೀಠಿಕೆಭಜನ್‍ಗೀತೆಗಳು ಭಕ್ತಿರಸ ಪ್ರಧಾನ ಗೀತೆಗಳು, ಈ ಹಾಡುಗಳಲ್ಲಿ ಭಕ್ತಿ, ಜ್ಞಾನ, ವೈರಾಗ್ಯಗಳಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ಈ ಗೀತೆಗಳಿಗೆ ರಾಗ ತಾಳದ ಯಾವ ನಿರ್ದಿಷ್ಟ ಬಂಧನವೂ ಇರುವುದಿಲ್ಲ. ಭಕ್ತಿ ಭಾವಾಭಿವ್ಯಕ್ತಿಯೇ ಈ ಗೀತ ರಚನೆಯ ಗುರಿಯಾಗಿದೆ. ಸಂಗೀತದ ಮುಖಾಂತರ ಮನುಷ್ಯನಿಗೆ ಶಾಂತಿಯನ್ನು ದೊರಕಿಸುವ ಉದ್ದೇಶದಿಂದ ಸಂತರೂ, ದಾಸರೂ ಬರೆದ ಸಾಹಿತ್ಯವೇ ಭಜನ್‌ಗಳಾಗಿವೆ. ಈ ಗೀತೆಗಳನ್ನು ಕಲಿಯಲೂ ಸುಲಭ ಸಾಧ್ಯವಾದ್ದರಿಂದ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾಗಿದೆ. ತುಲಸೀದಾಸರು, ಸೂರದಾಸರು, ಮೀರಾಬಾಯಿ, ಕಬೀರರು ಹೀಗೆ ಹಲವು ಮಹನೀಯರು ಭಜನ್‌ಗಳನ್ನು ರಚಿಸಿದ್ದಾರೆ.

ಉದ್ದೇಶಗಳು:

Ø ಸಂಗೀತ ಕ್ಷೇತ್ರದಲ್ಲಿ ಭಜನ್‌ಗಳಿಗಿರುವ ಮಹತ್ವವನ್ನು ತಿಳಿಸುವುದು.

Ø ಭಜನ್‌ಗಳ ರಚನಕಾರರ ಕುರಿತು ತಿಳಿಸುವುದು.

Ø ಭಜನ್ ಪ್ರಕಾರದ ಮೂಲಕ ಭಕ್ತಿರಸವು ಹೆಚ್ಚುವಂತೆ ಮಾಡುವುದು.

Ø ಭಜನಗಳನ್ನು ಭಕ್ತಿಪೂರ್ವಕವಾಗಿ ಹಾಡುವಂತೆ ಮಾಡುವುದು.

ಕಲಿಕಾ ಸಾಮಗ್ರಿ: ವಾದ್ಯಗಳು, ಆಡಿಯೋ / ವೀಡಿಯೋಗಳು, ಪೂರಕ ವಾದ್ಯಗಳು.

ಕಲಿಕಾ ವಿಧಾನ: (ಪ್ರಯೋಗ) ಗಾಯನ

ಹಂತ – 1

(ಶಾಸ್ತ್ರ)

ಭಜನ್‌ಗಳನ್ನು ಭಾವಾರ್ಥ ಸಹಿತ ಬರೆಸುವುದು.

ಭಜನ್‌ಗಳ ರಚನಾಕಾರರ ಕುರಿತು ತಿಳಿಸುವುದು

ಹಂತ – 2

ಭಜನ್‌ಗಳ ಗಾಯನ (ಪ್ರಯೋಗ)

ಹಂತ – 3

ಭಜನ್‌ಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು.

(ಪ್ರಯೋಗ).

ಹಂತ – 4

ಸಂಬಂಧಿಸಿದ ಭಜನ್‌ಗಳನ್ನು ಕೇಳಿಸುವುದು / ತೋರಿಸುವುದು.

(ಪ್ರಯೋಗ)

ಹಂತ – 5

ಕಲಿಸಿದ ಭಜನ್‌ನ್ನು ವಿದ್ಯಾರ್ಥಿಗಳಿಂದ ಹಾಡಿಸುವುದು.

ಸ್ವಮೌಲ್ಯಮಾಪನ:

Ø ಭಜನ್ ಎಂದರೇನೆಂಬುದನ್ನು ತಿಳಿದಿರುವರೆ?

Ø ಭಜನ್‌ಗಳ ರಚನಾಕಾರರನ್ನು ಹೆಸರಿಸುವರೆ?

Ø ಭಜನ್‌ಗಳ ಮೂಲ ಉದ್ದೇಶವನ್ನು ಅರಿತಿರುವರೆ?

Ø ಭಜನ್‌ಗಳನ್ನು ಹಾಡಲು ಆಸಕ್ತಿ ಹೊಂದಿರುವರೆ?

ಘಟಕಾಂತ್ಯದ ಪ್ರಶ್ನೆಗಳು

  1. ಭಜನ್ ಎಂದರೇನು?
  2. ಭಜನ್‌ಗಳ ರಚನಾಕಾರರನ್ನು ಹೆಸರಿಸಿ?
  3. ಸಂಗೀತ ಕ್ಷೇತ್ರದಲ್ಲಿ ಭಜನ್‌ಗಳ ಮಹತ್ವವೇನು?

ಚಟುವಟಿಕೆ:

ವಿವಿಧ ದಾಸರು , ಸಂತರು ರಚಿಸಿರುವ ಭಜನ್‌ಗಳನ್ನು ಸಂಗ್ರಹಿಸಿರಿ.

 ಅಕರ ಗ್ರಂಥಗಳು:

ತುಲಸೀದಾಸ, ಸೂರದಾಸ, ಬ್ರಹ್ಮಾನಂದ, ಮೀರಾಬಾಯಿ, ಕಬೀರದಾಸ ಮೊದಲಾದವರ ಭಜನ್‌ಗಳ ಸಂಗ್ರಹ ಪುಸ್ತಕಗಳು.

ಭಜನ್

ರಚನೆ – ಬ್ರಹ್ಮಾನಂದರು.

ಪ್ರಭುಕರ ಸಬದುಃಖ ದೂರ ಹಮಾರೇ

ಶರಣ ಪಡೇ ಹಮ ದಾಸ ತುಮ್ಹಾರೇ | |

ಸಕಲ ಜಗತ ತುಮನೇ ಉಪಜಾಯಾ

ತುಮಹೀ ಹೋ ಪ್ರತಿಪಾಲನ ಹಾರೇ | |

ಸಕಲವ್ಯಾಪಕ ಆಂತರ್ಯಾಮೀ

ಧ್ಯಾವತ ಸುರನರ ಮುನಿಗಣ ಸಾರೇ | |

ನಾಮ ತುಮ್ಹಾರೋ ಸಬ ಸುಖದಾಯಕ

ಸಕಲದೋಷ ಭಯತಾಪ ನಿವಾರೇ | |

ಸತಚಿತ ಆನಂದ ರೂಪ ತುಮ್ಹಾರೋ

ಬ್ರಹ್ಮಾನಂದ ಸದಾ ಮನ ಧಾರೇ | |

ಪ್ರಾರ್ಥನಾ ಗೀತೆ

ಅಧಿವೇಶನ: 15 (1)

ಅವಧಿ: 45 ನಿಮಿಷಗಳು

ಪಾರ್ಥನಾ ಗೀತೆಯು ಗೀತೆಗಳ ಸಮೂಹದಲ್ಲಿಯೇ ಅತೀ ಪ್ರಮುಖ ಪಾತ್ರವಹಿಸುತ್ತದೆ. ಹೆಸರೇ ಸೂಚಿಸುವಂತೆ ಭಗವಂತನನ್ನು ಉದ್ದೇಶಿಸಿ, ಅವನ ಅನುಗ್ರಹವನ್ನು ಬೇಡಿ, ತಮಗೆ ಒಳಿತನ್ನು ಮಾಡೆಂದು ಕೇಳಿಕೊಳ್ಳುವ ಸಾಹಿತ್ಯವನ್ನು ಹೊಂದಿರುವ ಹಾಡುಗಳನ್ನು ಪ್ರಾರ್ಥನಾ ಗೀತೆಗಳೆನ್ನುವರು. ಸಾಮಾನ್ಯವಾಗಿ ಪ್ರಾರ್ಥನಾ ಗೀತೆಗಳು ವಿಘ್ನಗಳನ್ನು ನಿವಾರಿಸುವ ದೇವತೆಯಾದ ಗಣಪತಿಯ, ವಿದ್ಯೆಯನ್ನು ಕರುಣಿಸುವ ಶಾರದೆಯ ಕುರಿತು ರಚಿತವಾಗಿದೆ. ಬೆಳಗ್ಗೆ ತಮ್ಮ ದಿನಚರಿ ಪ್ರಾರಂಭವಾಗುವ ಮೊದಲು ಎಲ್ಲಾ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುವಂತೆ ಕರುಣಿಸಲು ಭಗವಂತನನ್ನು ಕೇಳಿಕೊಳ್ಳುವುದು ಭಾರತೀಯ ಸಂಸ್ಕೃತಿಯಾಗಿದೆ. ವೈಜ್ಞಾನಿಕವಾಗಿಯೂ ಪ್ರಾರ್ಥನೆಯು ತದೇಕಚಿತ್ತತೆಯನ್ನು ಕೊಡುವುದರೊಂದಿಗೆ ಮನಸ್ಸನ್ನು ಲವಲವಿಕೆಯಿಂದ ಇರುವಂತೆ ಪ್ರೇರೇಪಿಸುತ್ತದೆ.

ಉದ್ದೇಶ:

Ø ಪ್ರಾರ್ಥನಾ ಗೀತೆಯ ಅರ್ಥವನ್ನು ತಿಳಿಸುವುದು.

Ø ಪ್ರಾರ್ಥನಾ ಗೀತೆಯ ಪ್ರಯೋಜನವನ್ನು ವಿವರಿಸುವುದು.

Ø ಪ್ರಾರ್ಥನಾ ಗೀತೆಯ ಸ್ವರೂಪಗಳನ್ನು ತಿಳಿಸುವುದು.

Ø ಪ್ರಾರ್ಥನಾ ಗೀತೆಯ ಉದಾಹರಣೆ ಕೊಡುವುದು.

ಕಲಿಕಾ ಸಾಮಗ್ರಿ:

ದೇವತೆಗಳ ಚಿತ್ರಗಳು, ಶೃತಿ ಅಥವಾ ತಂಬೂರಿ, ಕಪ್ಪುಹಲಗೆ.

ಕಲಿಕಾಹಂತ:

ಪ್ರಾರ್ಥನೆಯೊಂದನ್ನು ಮಾಡಿ ವಿದ್ಯಾರ್ಥಿಗಳ ಮೇಲೆ ಆದ ಪರಿಣಾಮವನ್ನು ಚರ್ಚಿಸುವುದು. ಪ್ರಾರ್ಥನೆಯಲ್ಲಿನ ಸಾಹಿತ್ಯವನ್ನು ಅರ್ಥದೊಂದಿಗೆ ವಿವರಿಸುವುದು. ಅದರ ಉದ್ದೇಶವನ್ನು ವಿವರಿಸುವುದು. ಭಾವಾರ್ಥವನ್ನು ವಿವರಿಸಿ ಮನಸ್ಸಿನ ಮೇಲಾಗುವ ಪರಿಣಾಮವನ್ನು ತಿಳಿಸುವುದು. ಸ್ವಮೌಲ್ಯಮಾಪನ:

Ø ಪ್ರಾರ್ಥನಾ ಗೀತೆಯ ಅರ್ಥವನ್ನು ಗ್ರಹಿಸಿದರೆ?

Ø ಪ್ರಾರ್ಥನಾ ಗೀತೆಯ ಉದ್ದೇಶವನ್ನು ತಿಳಿದರೇ?

Ø ಪ್ರಾರ್ಥನಾ ಗೀತೆಗಳನ್ನು ಗುರುತಿಸುವರೇ?

Ø ಪ್ರಾರ್ಥನಾ ಗೀತೆಗಳ ಪರಿಣಾಮವನ್ನು ತಿಳಿಯುವರೇ?

Ø ಪ್ರಾರ್ಥನಾ ಗೀತೆಗಳ ಉದಾಹರಣೆ ಕೊಡುವರೇ?

ನೀಲನಕ್ಷೆ

ಅಧಿವೇಶನ: 16.

ಅವಧಿ: 90 ನಿಮಿಷಗಳು.

8ನೇ ತರಗತಿಯ ಶಾಸ್ತ್ರಭಾಗದ ಪ್ರಶ್ನೆಪತ್ರಿಕೆ

ಬಿಟ್ಟ ಸ್ಥಳವನ್ನು ಭರ್ತಿಮಾಡಿರಿ                                 ಉದ್ದಿಷ್ಟ                ಅಂಕ

  1. ಕರ್ನಾಟಕ ಸಂಗೀತದ ಪಿತಾಮಹರು _________.    ಜ್ಞಾನ          1
  2. ತಂಬೂರಿಗೆ ಒಟ್ಟು _________ ತಂತಿಗಳು.             ಜ್ಞಾನ           1
  3. ಪುರಂದರದಾಸರ ಅಂಕಿತ _________.                       ಗ್ರಹಿಕೆ         1
  4. ತಂಬೂರಿಯು ಒಂದು __ ವಾದ್ಯದ ಗುಂಪಿಗೆ ಸೇರಿದೆ.  ಗ್ರಹಿಕೆ         1
  5. ಪುರಂದರದಾಸರು_____ ಎಂಬಲ್ಲಿ ಜನಿಸಿದರು.         ಗ್ರಹಿಕೆ          1

ಒಂದು ವಾಕ್ಯದಲ್ಲಿ ಉತ್ತರಿಸಿರಿ:

  1. ತಂಬೂರಿಯನ್ನು ಯಾವ ಮರದಿಂದ ತಯಾರಿಸುತ್ತಾರ?  ಗ್ರಹಿಕೆ          1
  2. ಪುರಂದರದಾಸರ ತಂದೆ – ತಾಯಿಯ ಹೆಸರೇನು?         ಜ್ಞಾನ           1

ಉತ್ತರಿಸಿರಿ:

  1. ತಂಬೂರಿಯ ಚಿತ್ರವನ್ನು ಬರೆದು ಭಾಗವನ್ನು ಹೆಸರಿಸಿ.    ಕೌಶಲ                  3

8ನೇ ತರಗತಿಯ ಪ್ರಾಯೋಗಿಕ ವಿಭಾಗದ ಪ್ರಶ್ನೆಪತ್ರಿಕೆ

ಒಂದು ಅಂಕದ ಪ್ರಶ್ನೆಗಳು

  1. ಶೃತಿ ಸ. ಪ. ಸ. ಶುದ್ಧವಾಗಿ ಹಾಡಲು ಹೇಳುವುದು                 ಕೌಶಲ                  1
  2. 2ನೇ ಅಥವಾ 3ನೇ ಸರಳೆಯನ್ನು ಒಂದನೇ ಕಾಲದಲ್ಲಿ

– ಹಾಡಲು ಕೇಳುವುದು:                                   ಕೌಶಲ                1

  1. ತಾರಸ್ವಾಯಿವರಸೆ 2ನೇ ಕಾಲದಲ್ಲಿ ಕೇಳುವುದು            ಕೌಶಲ        1
  2. ದಾಟುವರಸೆ 1ನೇ ಕಾಲದಲ್ಲಿ ಹಾಡುವುದು                          ಕೌಶಲ        1
  3. ಜಂಟಿವರಸೆಯನ್ನು 1ನೇ ಕಾಲದಲ್ಲಿ ಕೇಳುವುದು            ಕೌಶಲ         1

ಅಂಕದ ಪ್ರಶ್ನೆಗಳು:

  1. ನಾಡಗೀತೆಯ ಮೊದಲ 8 ಸಾಲುಗಳನ್ನು

ಹಾಡು ಕೇಳುವುದು.                                       ಅರಿವು                 2

  1. ಧ್ವಜಗೀತೆಯನ್ನು ಹಾಡಲು ತಿಳಿಸುವುದು                   ಅರಿವು         2

ಅಂಕದ ಪ್ರಶ್ನೆಗಳು:

  1. ಪಿಳ್ಳಾರಿಗೀತೆಯಲ್ಲಿ ಯಾವುದಾದರೂ ಒಂದು ನುಡಿ

ಮಾಡಲು ಹೇಳುವುದು.                                    ಜ್ಞಾನ          3

  1.  ಯಾವುದಾದರೂ ಜನಪದ ಗೀತೆಯನ್ನು ಹಾಡಲು

ತಿಳಿಸುವುದು.                                              ಅನ್ವಯ        3

ಶಾಸ್ತ್ರ ವಿಭಾಗದ ನೀಲಿನಕ್ಷೆ – 8ನೇ ತರಗತಿ

 

ವಿಷಯಾಂಶ

ಜ್ಞಾನ ಗ್ರಹಿಕೆ ಅಭಿವ್ಯಕ್ತಿ ಕೌಶಲ ಒಟ್ಟು

ನಿ

ಕಿ

ದೀ

ನಿ

ಕಿ

ದೀ

ನಿ

ಕಿ

ದೀ

ನಿ

ಕಿ

ದೀ

ಪ್ರಶ್ನೆ ಅಂಕ
ಪುರಂದರದಾಸರು 1(1)
ತಂಬೂರಿ 1(1)
ಪುರಂದರದಾಸರು 1(1)
ತಂಬೂರಿ 1(1)
ಪುರಂದರದಾಸರು 1(1)
ತಂಬೂರಿ 1(1)
ಪುರಂದರದಾಸರು 1(1)
ತಂಬೂರಿ 1(3)
ಅಂಕಗಳು ಪ್ರಶ್ನೆಗಳು 04

04

03

03

03

01

10

08

ಪ್ರಾಯೋಗಿಕ ವಿಭಾಗದ ನೀಲಿನಕ್ಷೆ – 8ನೇ ತರಗತಿ

 

ವಿಷಯಾಂಶ

ಜ್ಞಾನ ಗ್ರಹಿಕೆ ಅಭಿವ್ಯಕ್ತಿ ಕೌಶಲ ಒಟ್ಟು

ನಿ

ಕಿ

ದೀ

ನಿ

ಕಿ

ದೀ

ನಿ

ಕಿ

ದೀ

ನಿ

ಕಿ

ದೀ

ಪ್ರಶ್ನೆ ಅಂಕ
ಶೃತಿ 1(1)
ಸರಳೆಗಳು 1(1)
ತಾರಸ್ಥಾಯಿ 1(1)
ದಾಟುವರಸೆ 1(1)
ಜಂಟಿವರಸೆ 1(1)
ನಾಡಗೀತೆ 1(2)
ಧ್ವಜಗೀತೆ 1(2)
ಪಿಳ್ಳಾರಿಗೀತೆ 1(3)
ಜನಪದಗೀತೆ 1(3)
ಅಂಕಗಳು ಪ್ರಶ್ನೆಗಳು 3

1

4

2

3

1

5

5

15

09

ವ.ನಿ. — ವಸ್ತುನಿಷ್ಟ

ಕಿ.ಉ. — ಕಿರು ಉತ್ತರ

ದೀ. ಉ. — ದೀರ್ಘಉತ್ತರ

ಸಂಗೀತ

8ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ – 2

ಬಿಟ್ಟ ಸ್ಥಳವನ್ನು ಭರ್ತಿಮಾಡಿರಿ:

  1. ಕರ್ನಾಟಕ ಸಂಗೀತದ ಪಿತಾಮಹರು ____________ .
  2. ತಂಬೂರಿಗೆ ಒಟ್ಟು ____________ ತಂತಿಗಳು.
  3. ಪುರಂದರದಾಸರ ಅಂಕಿತ ____________.
  4. ತಂಬೂರಿಯು ಒಂದು ____________ ವಾದ್ಯದ ಗುಂಪಿಗೆ ಸೇರಿದೆ.
  5. ಪುರಂದರದಾಸರು ____________ ಎಂಬಲ್ಲಿ ಜನಿಸಿದರು.

ಒಂದು ವಾಕ್ಯದಲ್ಲಿ ಉತ್ತರಿಸಿರಿ :

  1. ತಂಬೂರಿಯನ್ನು ಯಾವ ಮರದಿಂದ ತಯಾರಿಸುತ್ತಾರೆ?
  2. ಪುರಂದರದಾಸರ ತಂದೆ – ತಾಯಿಯ ಹೆಸರೇನು?

ಉತ್ತರಿಸಿರಿ:

  1. ತಂಬೂರಿಯ ಚಿತ್ರವನ್ನು ಬರೆದು ಭಾಗವನ್ನು ಹೆಸರಿಸಿರಿ.

ಸಂಗೀತದಲ್ಲಿ ಮೌಲ್ಯಮಾಪನ

ಅಧಿವೇಶನ: 17

ಅವಧಿ: 90 ನಿಮಿಷಗಳು

ಸಂಗೀತವು ಮನುಷ್ಯನಲ್ಲಿ ಮಾನವೀಯ ಗುಣಗಳನ್ನು ಜಾಗೃತಗೊಳಿಸಿ. ಸಂಸ್ಕಾರವಂತರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ, ಮೌಲ್ಯಗಳನ್ನು ರೂಪಿಸುತ್ತದೆ. ಸುಸಂಸ್ಕೃತ ನಾಗರೀಕರನ್ನಾಗಿ ಮಾಡುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಹಾಗಾಗಿ, ಶೈಕ್ಷಣಿಕ ಮುಖ್ಯವಾಹಿನಿಯಲ್ಲಿ ಸಂಗೀತ ವಿಷಯವು ಸೇರಲೇಬೇಕೆಂಬ ಎನ್ ಸಿ ಎಫ್ – 2005ರ ಅಭಿಪ್ರಾಯದಂತೆ ಶಾಲಾ ಕಲಿಕೆಯಲ್ಲಿ ಸೇರಿದೆ.

ಆದರೆ ಶೈಕ್ಷಣಿಕ ಚೌಕಟ್ಟಿನಲ್ಲಿ ವಿಷಯವಾಗಿ ಬೋಧಿಸುವಾಗ ಅದಕ್ಕೆ ಅಗತ್ಯವಾಗಿ ಬೇಕಾದ ಕಲಿಕಾ ಅಂಶಗಳು ಬೇಕಾಗುತ್ತದೆ. ಹಾಗೆಯೇ ಮೌಲ್ಯಮಾಪನವೂ ಬೇಕಾಗುತ್ತದೆ. ಮೌಲ್ಯಮಾಪನವು ಶೈಕ್ಷಣಿಕ ಪ್ರಕ್ರಿಯೆಯ ಒಂದು ಅವಿಭಾಜ್ಯ ಅಂಗವಾಗಿದೆ.

ಯಾವುದೇ ವಿಷಯದ ಮೌಲ್ಯವನ್ನು ತಿಳಿಯದಿದ್ದರೆ ಅದಕ್ಕೆ ಬೆಲೆ ಇಲ್ಲದಂತಾಗುತ್ತದೆ, ಮಾಪನ ಮಾಡಲ್ಪಟ್ಟ ಮೌಲ್ಯದಿಂದಾಗಿ ಆ ವಿಷಯದ ಗುಣಮಟ್ಟ ವೃದ್ಧಿಸುತ್ತದೆ. ಮೌಲ್ಯಮಾಪನಕ್ಕೆ ಬೆಲೆ ಕಟ್ಟುವುದು ಅಥವಾ ಬೆಲೆಯನ್ನು ನಿರ್ಧರಿಸುವುದು ಎಂದು ಕೂಡಾ ಹೇಳಬಹುದು. ತರಗತಿಯಲ್ಲಿ ನಾವು ಕೊಟ್ಟ ಜ್ಞಾನವನ್ನು ಎಷ್ಟರ ಮಟ್ಟಿಗೆ ಗ್ರಹಿಸಿದ್ದಾರೆ ಮತ್ತು ಅಭಿವ್ಯಕ್ತಿಗೊಳಿಸಲು ಶಕ್ತರಾಗಿದ್ದಾರೆ ಎಂದು, ನೀಡಲ್ಪಟ್ಟ ಮಾನಕಗಳೊಂದಿಗೆ ಆನ್ವಯ ಮಾಡಿದಾಗ ನಿಜವಾದ ಮೌಲ್ಯಮಾಪನ ಆಗುತ್ತದೆ.

ಮೌಲ್ಯಮಾಪನ ಏಕೆ ಬೇಕು?

  • ಶಿಕ್ಷಕರ ಬೋಧನಾ ವಿಧಾನದ ದಕ್ಷತೆ, ಸಾಧಕ – ಬಾಧಕಗಳನ್ನು ತಿಳಿದುಕೊಳ್ಳಲು.
  • ವೈಯಕ್ತಿಕ ಪರೀಕ್ಷೆಯಿಂದಾಗಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಲು ಸಾಧ್ಯವಾಗುವುದು.
  • ಕಲಿಕಾ ಮಾನಕಗಳನ್ನು ಎಷ್ಟರ ಮಟ್ಟಿಗೆ ಸಾಧಿಸಿದ್ದಾರೆ ಎಂದು ತಿಳಿಯಲು.
  • ಹೊಸ / ಸೃಜನಾತ್ಮಕ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಮೌಲ್ಯಮಾಪನ ಪ್ರಕ್ರಿಯೆ ಹೇಗಿರಬೇಕು?
  • ಮೌಲ್ಯಮಾಪನವು ವಿದ್ಯಾರ್ಥಿಯ ಕಲಿಕಾ ಆಸಕ್ತಿಯನ್ನು ಕುಂಠಿತಗೊಳಿಸಬಾರದು.
  • ಮೌಲ್ಯಮಾಪನವು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿರಬೇಕು.
  • ಮೌಲ್ಯಮಾಪನವು ಆಸಕ್ತಿದಾಯಕವಾಗಿದ್ದು, ಸ್ಪರ್ಧಾತ್ಮಕ ಮನಸ್ಸನ್ನು ಬೆಳೆಸುವಂತಿರಬೇಕು.
  • ಮೌಲ್ಯಮಾಪನವು ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸುವಂತಿರಬೇಕು.
  • ಮೌಲ್ಯಮಾಪನವು ವಿದ್ಯಾರ್ಥಿಗಳಲ್ಲಿರಬಹುದಾದ ಭಯವನ್ನು ಹೋಗಲಾಡಿಸುವಂತಿರಬೇಕು.
  • ಸಂಗೀತವು ಪ್ರಾಯೋಗಿಕ ವಿಷಯವಾಗಿರುವುದರಿಂದ ಪ್ರಾಯೋಗಿಕ ಮೌಲ್ಯಮಾಪನಕ್ಕೆ ಹೆಚ್ಚಿನ ಮಹತ್ವ ನೀಡಬೇಕು.

ಚಟುವಟಿಕೆ:

  1. ಒಂದು ಮಗು ಹಾಡಿದಾಗ ಉಳಿದ ಮಕ್ಕಳು ಆ ಮಗುವಿನ ಶೃತಿ ತಾಳದಲ್ಲಾದ ತಪ್ಪುಗಳನ್ನು ಗುರುತಿಸುವುದು.
  2. ವೃತ್ತಪತ್ರಿಕೆಗಳಲ್ಲಿ ಸಂಗೀತ ಕಚೇರಿಗಳು, ಸಂಗೀತಗಾರರ ಕುರಿತು – ಬರುವ ಲೇಖನಗಳನ್ನು ಸಂಗ್ರಹಿಸಿ, ವಿವರಣೆ ಬರೆದು, ಎಲ್ಲರ ಎದುರು ಓದಲು ತಿಳಿಸುವುದು.
  3.  ಸಂಗೀತ ವಾದ್ಯಗಳ ಕುರಿತು ವಿಷಯ ಸಂಗ್ರಹ, ಚಿತ್ರಗಳ ಸಂಗ್ರಹ ಮಾಡಲು ತಿಳಿಸುವುದು.
  4. ಗುಂಪು ಗಾಯನ ಸ್ಪರ್ಧೆಗಳನ್ನು ಏರ್ಪಡಿಸುವುದು.
  5. ತಮ್ಮ ಮನೆಯ ಹಿರಿಯರು ಅಥವಾ ಗ್ರಾಮದ ಹಿರಿಯರಿಂದ ಮೂಲ ಜನಪದಗೀತೆಗಳನ್ನು ಸಂಗ್ರಹಿಸಿ ಹಾಡುವುದನ್ನು ಕಲಿತು, ಶಾಲೆಯಲ್ಲಿ ತರಗತಿಯಲ್ಲಿ ಎಲ್ಲರ ಎದುರು ಹಾಡಲು ತಿಳಿಸುವುದು.
  6. ಪಠ್ಯಕ್ರಮದಲ್ಲಿನ ಸಂಗೀತಗಾರರ ಜೀವನ ಚರಿತ್ರೆಗಳನ್ನು, ಭಾವಚಿತ್ರಗಳನ್ನು ಸಂಗ್ರಹಿಸಲು ತಿಳಿಸುವುದು.
  7. ಪಠ್ಯಕ್ರಮಕ್ಕಿರುವ ಸಂಗೀತವಾದ್ಯದ ಚಿತ್ರ ಬಿಡಿಸಿ, ಪರಿಚಯ ಬರೆಯುವುದು.
  8. ರಾಷ್ಟ್ರಗೀತೆ, ನಾಡಗೀತೆ, ವಂದೇ ಮಾತರಂ, ಧ್ವಜಗೀತೆ, ವೈಷ್ಣವಜನತೋ ಈ ಗೀತೆಗಳ ಭಾವಾರ್ಥ ಬರೆದು, ರಚನಾಕಾರರ ಕುರಿತು ಬರೆಯುವುದು.
  9. ಸುಪ್ರಸಿದ್ಧ ಕವಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ಒಂದು ಪದ್ಯ ಅಥವಾ ಗೀತೆಯನ್ನು ಬರೆಯಲು ತಿಳಿಸುವುದು.
  10.  ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ – ಗಾಯಕಿಯರ ಬಗ್ಗೆ ಚಿತ್ರ ಸಂಗ್ರಹ ಮತ್ತು ಮಾಹಿತಿ ಸಂಗ್ರಹ ಮಾಡಲು ತಿಳಿಸುವುದು.
  11.  ವಚನಕಾರರ ಬಗ್ಗೆ ಚಿತ್ರ ಮತ್ತು ಮಾಹಿತಿ ಸಂಗಹಿಸಲು ಹೇಳುವುದು.
  12.  ಹರಿದಾಸರುಗಳ ಬಗ್ಗೆ ಚಿತ್ರ ಮತ್ತು ಮಾಹಿತಿ ಸಂಗ್ರಹಿಸಲು ಹೇಳುವುದು.
  13.  7 ಬಣ್ಣದ ಚಕ್ರ ಮಾಡಿಸುವುದು (8ನೇ ತರಗತಿ ಮಕ್ಕಳಿಂದ) ಏಳು ಸ್ವರವು ಸೇರಿ ಸಂಗೀತವಾಯಿತು, ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು. ಈ ಹಾಡನ್ನು ಉದಾಹರಿಸುವುದು. ವಿಜ್ಞಾನಕ್ಕೂ ಇದು ಅನ್ವಯಿಸುತ್ತದೆ.

ನಾಡಗೀತೆಗಳು

ಅಧಿವೇಶನ: 19.

ಅವಧಿ: 90 ನಿಮಿಷ

ಪೀಠಿಕೆನಾಡಗೀತೆಗಳೆಂದರೆ ನಾಡು ನುಡಿಯನ್ನು ವರ್ಣಿಸುವ ಆ ಮೂಲಕ ನಾಡಿನ ಕುರಿತು ಭಕ್ತಿ ಹೆಮ್ಮೆಯನ್ನು ತಾಳುವಂತೆ ಮಾಡುವ ಗೀತೆಗಳಾಗಿವೆ. ಈ ಗೀತೆಗಳನ್ನು ಉತ್ಸಾಹದಿಂದ ಹಾಡಿದಾಗ ಸಹಜವಾಗಿ ನಮ್ಮ ನಾಡು ನುಡಿಯ ಕುರಿತು ಗೌರವ ಭಾವನೆ ಮೂಡಲು ಸಹಕಾರಿಯಾಗಿದೆ. ಈ ಗೀತೆಗಳಿಂದ ನಮಗೆ ನಮ್ಮ ನಾಡಿನ ಸಂಸ್ಕೃತಿ, ವಿಶೇಷತೆ, ಮಹತ್ವಗಳು ಸುಲಭವಾಗಿ ಸರಳವಾಗಿ ತಿಳಿಯಲು ಸಹಾಯಕಾರಿಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅತ್ಯವಶ್ಯವಾಗಿದೆ.

ಉದ್ದೇಶ:

  • ನಮ್ಮ ನಾಡು, ನುಡಿ, ಸಂಸ್ಕೃತಿ ಕುರಿತು ಗೌರವ ಮನೋಭಾವ ಬೆಳೆಸುವುದು.
  • ನಮ್ಮ ನಾಡು ನುಡಿ ಕುರಿತು ಭಕ್ತಿ ಶ್ರದ್ಧೆ ಮೂಡಿಸುವುದು.
  • ಆಸಕ್ತಿಯಿಂದ ನಾಡಗೀತೆಗಳನ್ನು ಹಾಡುವಂತೆ ಪ್ರೇರೇಪಿಸುವುದು.
  • ನಾಡಗೀತೆಗಳನ್ನು ಸಂಗ್ರಹಿಸುವ, ರಚಿಸುವ ನಾಗೂ ಹಾಡುವ ಕೌಶಲ್ಯ ಬೆಳೆಸುವುದು.

ಕಲಿಕಾ ಸಾಮಗ್ರಿ:

ಚಾರ್ಟಗಳು, ಆಡಿಯೋ / ವಿಡಿಯೋಗಳು, ಪಿ. ಪಿ. ಟಿ, ವಾದ್ಯಗಳು.

ಶಿಕ್ಷಕರ ಪಾತ್ರ:

ಶಿಕ್ಷಕರ ಹಲವಾರು ನಾಡಗೀತೆಗಳನ್ನು ಸಂಗ್ರಹಿಸಿ, ರಾಗ ಸಂಯೋಜನೆ ಮಾಡಿ

ಹಾಡುವ ಕೌಶಲ್ಯ ಹೊಂದಿರುವುದು.

 

 

ಕಲಿಕಾ ವಿಧಾನ: ಗಾಯನ, ಪ್ರಾತ್ಯಕ್ಷಿಕೆ.

ಹಂತ 1 — ನಾಡಗೀತೆಗಳ ಮಹತ್ವವನ್ನು ವಿವರಿಸುವುದು

ಹಂತ 2 — ನಾಡಗೀತೆಗಳನ್ನು ಭಾವಾರ್ಥದೊಂದಿಗೆ ಬರೆಯಿಸುವದು.

ಹಂತ 3 — ನಾಡಗೀತೆಗಳನ್ನು ಗಾಯನ ಮಾಡಿ ತೋರಿಸುವುದು.

ಹಂತ 4 — ನಾಡಗೀತೆಗಳನ್ನು ವಿದ್ಯಾರ್ಥಿಗಳಿಗೆ ಸ್ವರ, ಲಯ, ಭಾವಬದ್ಧವಾಗಿ ಹಾಡಲು ಹೇಳಿಕೊಡುವುದು.

ಹಂತ 5 — ಕಲಿಸಿದ ನಾಡಗೀತೆಯನ್ನು ವಿದ್ಯಾರ್ಥಿಗಳಿಂದ ಹಾಡಿಸುವುದು.

ಹಂತ 6 — ನಾಡಗೀತೆಗೆ ಸಂಬಂಧಿಸಿದ ಧ್ವನಿಮುದ್ರಿಕೆಗಳನ್ನು ಕೇಳಿಸುವುದು / ವಿಡಿಯೋಗಳನ್ನು ಪ್ರದರ್ಶಿಸುವುದು.

ಸ್ವಮೌಲ್ಯಮಾಪನ:

Ø ನಮ್ಮ ನಾಡು ನುಡಿಯ ಕುರಿತು ಭಕ್ತಿ, ಶ್ರದ್ಧೆ, ಗೌರವ ಹೊಂದಿರುವರೆ?

Ø ನಾಡಗೀತೆಗಳ ಮಹತ್ವವನ್ನು ತಿಳಿದಿರುವರೆ?

Ø ನಾಡಗೀತೆಯನ್ನು ಹಾಡಿದಾಗ ನಮ್ಮಲ್ಲಿ ಯಾವ ಭಾವ ಮೂಡಬೇಕು ಎಂಬುದನ್ನು ಗಮನಿಸಿರುವರೇ?

Ø ನಾಡಕಗೀತೆಯನ್ನು ಆಸಕ್ತಿಯಿಂದ ಕೇಳುವರೇ ಹಾಡಬಲ್ಲರೇ?

ಪ್ರಶ್ನೆಗಳು:

Ø ನಾಡಗೀತೆ ಎಂದರೇನು?

Ø ನಾಡಗೀತೆಯ ಮಹತ್ವವೇನು?

Ø ನಾಡಗೀತೆಯನ್ನು ಹಾಡಿದಾಗ / ಕೇಳಿದಾಗ ನಮ್ಮಲ್ಲಿ ಯಾವ ರೀತಿಯ ಭಾವ ಮೂಡಬೇಕು?

Ø ನಾಡಗೀತೆಯನ್ನು ಸ್ವರ, ಲಯ ಸಾಹಿತ್ಯ ಶುದ್ಧವಾಗಿ ಹಾಡಿರಿ.

Ø ವಿವಿಧ ನಾಡಗೀತೆಗಳನ್ನು ಸಂಗ್ರಹಿಸಿ ಹಾಡಲು ಪ್ರಯತ್ನಿಸಿ.

ಆಕರ ಗ್ರಂಥಗಳು:

ವಿವಿಧ ಕವಿಗಳ ನಾಡಗೀತೆಗಳ ಸಂಗ್ರಹ ಪುಸ್ತಕಗಳು.

ನಾಡಗೀತೆ

ಎನಿತು ಇನಿದು ಈ ಕನ್ನಡ ನುಡಿಯು

ಮನವನು ತಣಿಸುವ ಮೋಹನ ಸುಧೆಯು |

ಗಾನವ ಬೆರಯಿಸಿ

ವೀಣೆಯ ದನಿಯೊಳು

ವಾಣಿಯ ನೇವುರ

ನುಡಿಸುತೆ ಕುಣಿಯಲು

ಮಾಣದೆ ಮರೆಯುವ ಮಂಜುಲರವವೋ?

ಎನಿತು ಇನಿದು ಈ ಕನ್ನಡ ನುಡಿಯು |

ರಂಗನ ಮುರಲಿಯ

ಹಿಂಗದ ಸರದಲಿ

ಹೆಂಗಳೆಯರು ಬೆಳ

– ದಿಂಗಳಿನಿರುಳಲಿ

ಸಂಗೀತವನೊರದಂಗವಿದೇನೋ,

ಎನಿತು ಇನಿದು ಈ ಕನ್ನಡ ನುಡಿಯು |

ಗಿಳಿಗಳು ಉಲಿಯುವ

ಮೆಲುಮಾತುಗಳೋ?

ಕಳಕಂಠಗಳೂ

ಚೆಲುವಿನಕುಕಿಲೊ?

ಅಳಿಗಳ ಬಳಗದ ಬೆಳಗಿನ ಉಲಿಯೋ?

ಎನಿತು ಇನಿದು ಈ ಕನ್ನಡ ನುಡಿಯು

ಆನಂದ ಕಂದ (ಬೆಟಗೇರಿ ಕೃಷ್ಣ ಶರ್ಮ)

ಶ್ಯಾಮಾ ಶಾಸ್ತ್ರಿಗಳು

ಅಧಿವೇಶನ: 20 ಕರ್ನಾಟಕ

ಅವಧಿ: 30 ನಿಮಿಷಗಳು

ಪೀಠಿಕೆ: ಕರ್ನಾಟಕ ಸಂಗೀತ ತ್ರಿಮೂರ್ತಿಗಳೆನಿಸಿ, ಕರ್ನಾಟಕ ಸಂಗೀತಕ್ಕೆ ಸೇವೆ ಸಲ್ಲಿಸಿದ ಶ್ರೀ ತ್ಯಾಗರಾಜರು, ಶ್ರೀಮುತ್ತುಸ್ವಾಮಿ ದೀಕ್ಷಿತರು, ಶ್ರೀಶ್ಯಾಮಾಶಾಸ್ತ್ರಿಗಳಲ್ಲಿ ಶಾಸ್ತ್ರಿಗಳೇ ಹಿರಿಯರು/ ವಯೋಜ್ಯೇಷ್ಟರು. ಶ್ಯಾಮಾಶಾಸ್ತ್ರಿಗಳ ಪೂರ್ವಜರು ಕಾಂಚೀಪುರದವರು.

ಉದ್ದೇಶ:

ಸಂಗೀತದ ಸುವರ್ಣಯುಗದಲ್ಲಿ ಜನಿಸಿ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಗಳನ್ನು ಪರಿಚಯಿಸುವುದು.

ಅವರ ಸಾಧನೆಯ ಬಗ್ಗೆ ತಿಳಿಸುವುದು.

ಶ್ಯಾಮಾಶಾಸ್ತ್ರಿಗಳು ಸಂಗೀತಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ತಿಳಿಸುವುದು.

ಜನ್ಮಸ್ಥಳ ಮತ್ತು ವರ್ಷ: ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ಚಿತ್ರಭಾನು ಸಂವತ್ಸರದ ಮೇಷರಾಶಿ, ಕೃತ್ತಿಕಾ ನಕ್ಷತ್ರದಲ್ಲಿ ಅಂದರೆ 1762ನೇ ಏಪ್ರಿಲ್ 26ರಂದು ಶ್ಯಾಮಾಶಾಸ್ತ್ರಿಗಳು ಜನ್ಮತಾಳಿದರು. ಗೌತಮಗೊತ್ರ, ಬೋಧಾಯನ ಸೂತ್ರದವರು.

ಇವರ ಬಾಲ್ಯ: ತಂದೆ ವಿಶ್ವನಾಥ ಅಯ್ಯರ್‌, ಶಿಶುವಿಗೆ ವೆಂಕಟ ಸುಬ್ರಹ್ಮಣ್ಯ ಎಂದು ನಾಮಕರಣ ಮಾಡಿದರು. ಮುದ್ದಿಗಾಗಿ ಶ್ಯಾಮ ಎಂದು ಕರೆಯುತ್ತಿದ್ದರಿಂದ ಶ್ಯಾಮಾಶಾಸ್ತ್ರಿಗಳೆಂದೇ ಅವರು ಖ್ಯಾತರಾಗಿದ್ದಾರೆ.

ಸಂಗೀತಾಭ್ಯಾಸ:- ಶಾಸ್ತ್ರಿಗಳು ವೇದಾಧ್ಯಯನದ ಜೊತೆಗೆ ಸಂಸ್ಕೃತ ಮತ್ತು ತೆಲುಗು ಭಾಷೆಗಳನ್ನು ಕಲಿತರು. ಸೋದರ ಮಾವಂದಿರಲ್ಲಿ ಸ್ವಲ್ಪ ಸಂಗೀತಾಭ್ಯಾಸವನ್ನು ಮಾಡಿದರು. ನಂತರ 18ನೆಯ ವಯಸ್ಸಿಗೆ ತಂದೆ – ತಾಯಿಯೊಡನೆ ತಂಜಾವೂರಿಗೆ ಬಂದು ನೆಲೆಸಿದರು. ಆನಂತರದಲ್ಲಿ ‘ಸಂಗೀತ ಸ್ವಾಮಿ’ ಗಳೆಂಬ ಆಂಧ್ರಬ್ರಾಹ್ಮಣ ಸನ್ಯಾಸಿಗಳು ತೀರ್ಥಯಾತ್ರೆಯ ಸಲುವಾಗಿ ತಂಜಾವೂರಿಗೆ ಬಂದರು. ಇವರು ಸಂಗೀತ ಮತ್ತು ನಾಟ್ಯಕಲೆಗಳಲ್ಲಿ ನಿಪುಣರಾಗಿದ್ದರು. ಕಾಶೀ ವಿಶ್ವನಾಥನ ಎದುರಿನಲ್ಲಿ ಪ್ರತಿನಿತ್ಯವೂ ನರ್ತನ ಮಾಡುತ್ತಿದ್ದರು. ವಿಶ್ವನಾಥ ಅಯ್ಯರ್ ರವರು ಸ್ವಾಮಿಗಳನ್ನು ಒಮ್ಮೆ ಮನೆಗೆ ಕರೆದು ಶಾಮಾಶಾಸ್ತ್ರಿಗಳನ್ನು ಅವರಿಗೆ ಪರಿಚಯಿಸಿದರು. ಮುಖಚರ್ಯೆಯಿಂದಲೇ ಶಾಸ್ತ್ರಿಗಳ ಭವಿಷ್ಯವನ್ನು ಊಹಿಸಿದ ಸ್ವಾಮಿಗಳು ವಿಶ್ವನಾಥ ಅಯ್ಯರ್‌ರವರಿಗೆ ಅವನು ಸಂಗೀತ ಕಲಿತೇ ಪ್ರಖ್ಯಾತನಾಗುತ್ತಾನೆಂದು ತಿಳಿಸಿದರು. ಅಂದಿನಿಂದಲೇ ರಾಗ ಮತ್ತು ತಾಳ ಪ್ರಸಾರಕ್ರಮವನ್ನು ವಿಶದವಾಗಿ ತಿಳಿಸಲು ಪ್ರಾರಂಭ ಮಾಡಿದರು. ಮುಂದೆ ಪಾಂಡಿತ್ಯವನ್ನು ಪಡೆದ ನಂತರ ಗುರುಗಳ ಆಜ್ಞೆಗೆ ಅನುಸಾರವಾಗಿ ಆದಿ ಅಪ್ಪಯ್ಯನವರನ್ನು ಸಂದರ್ಶಿಸಿ, ಅವರ ಮಾರ್ಗದರ್ಶವನ್ನು ಪಡೆದರು. ಜೊತೆಗೆ ಬಂಗಾರು ಕಾಮಾಕ್ಷಿಯ ಸೇವೆಗೆ ನಿಂತರು.

ಅವರ ಪಾಂಡಿತ್ಯ- ಸಂಗೀತವಲ್ಲದೇ ಜ್ಯೋತಿಷ್ಯ ಶಾಸ್ತ್ರದಲ್ಲೂ ಶ್ಯಾಮಾಶಾಸ್ತ್ರಿಗಳಿಗೆ ಪಾಂಡಿತ್ಯವಿದ್ದಿತು. ದೇವಿಯ ಉಪಾಸಕರಾಗಿದ್ದ ಇವರು ಶಾಪಾನುಗ್ರಹ ಶಕ್ತಿಯನ್ನು ಪಡೆದಿದ್ದರು. ಅಂತ್ಯಕಾಲವನ್ನು ಪೂರ್ವಭಾವಿಯಾಗಿಯೇ ಅರಿತಿದ್ದ ಇವರು ತಮ್ಮ ಸಹಧರ್ಮಿಣಿ ಸ್ವರ್ಗಸ್ಥರಾದ ಆರನೇ ದಿನವೇ ಅಂದರೆ 1827 ನೇ ಫೆಬ್ರವರಿ 1 ರಂದು 65ನೇ ವಯಸ್ಸಿನಲ್ಲಿ ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರು.

ಕೃತಿರಚನೆಗಳು:- ಶ್ರೀ ಕಾಮಾಕ್ಷಿ ದೇವಿಯ ಅನನ್ಯ ಭಕ್ತರಾದ ಇವರು ದೇವಿಯ ಜೊತೆಯಲ್ಲಿ ಸಂಭಾಷಣೆ ನೆಡೆಸಿದ ಮಹಾಪುರುಷರು. ಇವರ ಕೃತಿಗಳು ಅಪಾರ ಪಾಂಡಿತ್ಯದಿಂದಲೂ, ಭಕ್ತಿಭಾವದಿಂದಲೂ ಕೂಡಿವೆ. ಇವರು ರಚನೆಗಳನ್ನು ಜನತೆಯಲ್ಲಿ ಪ್ರಚಾರಪಡಿಸಬೇಕೆಂಬ ಆತುರವಿಲ್ಲದಿದ್ದರಿಂದ ಸ್ವರಜತಿ, ವರ್ಣ, ಕೀರ್ತನೆಗಳು, 300ಕ್ಕೂ ಮೇಲ್ಪಟ್ಟಿದ್ದರೂ ಕೇವಲ ಮೂವತೈದು ರಚನೆಗಳು ಪ್ರಚಾರದಲ್ಲಿವೆ. ಇವರು ಮಧುರೈ ಮೀನಾಕ್ಷಿಯ ಮೇಲೆ ರಚಿಸಿರುವ ಒಂಭತ್ತು ಹಾಡುಗಳಿಂದ ಕೂಡಿರುವ ನವರತ್ನ ಮಾಲಿಕೆ ಯು ಸೇರಿದೆ. ಇವರು “ರಾಮಕೃಷ್ಣ” ಅಂಕಿತದಿಂದ ರಚನೆಗಳನ್ನು ಮಾಡಿದ್ದಾರೆ.

ಶಿಷ್ಯರುಗಳು: ಶಾಮಾಶಾಸ್ತ್ರಿಗಳು ಶಿಷ್ಯರಲ್ಲಿ ಪ್ರಮುಖರಾದವರು, ಅವರ ಮಗನಾದ ಸುಬ್ಬರಾಯಶಾಸ್ತ್ರಿ, ಪೆರಂಬೂರು ಕೃಷ್ಣಯ್ಯರ್‌, ಅಲಸೂರು ಕೃಷ್ಣಯ್ಯ‌, ದಾಸರಿ, ತರಂಗಂಬಾಡಿ ಪಂಚನದಯ್ಯರ್. ಅವರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸುವುದು. ಅವರ ಪಾಂಡಿತ್ಯದ ಬಗ್ಗೆ ತಿಳಿಸುವುದು. ಅವರ ಕೃತಿಗಳ ಗಾಯನ ಮಾಡಿಸುವುದು.

ಕಲಿಕಾ ಸಾಮಾಗ್ರಿ:- ಚಿತ್ರಪಟ, ಸಾಕ್ಷ್ಯಚಿತ್ರ, ಸಂಗೀತ ಕೇಳಿಸುವುದು.

ಕಲಿಕಾವಿಧಾನ:-

ಹಂತ 1:- ಅವರ ಜೀವನ ಚರಿತ್ರೆಯನ್ನು ಬರೆಯಿಸುವುದು.

ಹಂತ 2: – ಸವಿಸ್ತಾರವಾಗಿ ವಿವರಿಸುವುದು.

ಹಂತ 3:- ಅವರ ಕೃತಿಗಳನ್ನು ಹಾಡಿತೋರಿಸುವುದು.

ಹಂತ 4: – ಕೃತಿಗಳನ್ನು ಹೇಳಿಕೊಡುವುದು.

ಸ್ವ ಮೌಲ್ಯಮಾಪನ: –

  1. ತ್ರಿಮೂರ್ತಿಗಳ ಪರಿಚಯವಾಗಿದೆಯೇ?
  2. ಶಾಮಾಶಾಸ್ತಿಗಳನ್ನು ಗುರುತಿಸುವರೇ?
  3. ಇವರ ಪಾಂಡಿತ್ಯದ ಬಗ್ಗೆ ಅರಿವಾಯಿತೇ?
  4. ಇವರ ಕೃತಿಗಳ ಪರಿಚಯವಾಯಿತೇ?

ಘಟಕಾಂತ್ಯದ ಪ್ರಶ್ನೆಗಳು:

  1. ಶಾಸ್ತ್ರಿಗಳು ಎಲ್ಲಿ ಜನಿಸಿದರು?
  2. ಯಾವ ಗೋತ್ರದವರು?
  3. ಇವರ ತಂದೆಯ ಹೆಸರೇನು?
  4. ಇವರಿಗೆ ಏನೆಂದು ನಾಮಕರಣ ಮಾಡಿದ್ದರು?
  5. ಶಾಸ್ತ್ರಿಗಳು ಯಾವ ಯಾವ ಭಾಷೆಗಳನ್ನು ಕಲಿತಿದ್ದರು?
  6. ಇವರ ಮೊದಲ ಗುರುಗಳು ಯಾರು?
  7. ಗುರುಗಳ ಆಜ್ಞೆಗೆ ಅನುಸಾರವಾಗಿ ಯಾರನ್ನು ಸಂದರ್ಶಿಸಿದರು?
  8. ಶಾಸ್ತ್ರಿಗಳು ಯಾರ ಭಕ್ತರು?
  9. ಯಾವಾಗ ಭೌತಿಕ ಶರೀರವನ್ನು ತ್ಯಜಿಸಿದರು?
  10.  ಇವರ ಕೃತಿಗಳು ಎಷ್ಟು ಲಭ್ಯವಿವೆ?
  11.  ನವರತ್ನ ಮಾಲಿಕೆ ಯಾವ ದೇವ ಮೇಲೆ ರಚಿತವಾಗಿದೆ?
  12.  ಯಾವ ಅಂಕಿತದಿಂದ ಕೃತಿಗಳನ್ನು ರಚಿಸಿದ್ದಾರೆ?
  13.  ಶಾಸ್ತ್ರಿಗಳ ಪ್ರಮುಖ ಶಿಷ್ಯರುಗಳು ಯಾರು?

 

ಶ್ರೀ ಮುತ್ತು ಸ್ವಾಮಿ ದೀಕ್ಷಿತರು

ಅಧಿವೇಶನ– 20 (1) ಕರ್ನಾಟಕ

ಅವಧಿ: 30 ನಿಮಿಷಗಳು

ಪೀಠಿಕೆ:-

19ನೆಯ ಶತಮಾನವು ಸಂಗೀತದ ಸ್ವರ್ಣಯುಗ ಎನಿಸಿದೆ. ಈ ಕಾಲದಲ್ಲೇ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತು ಸ್ವಾಮಿ ದೀಕ್ಷಿತರ ಆಗಮನವಾಯಿತು. ಅವರ ಪಾಂಡಿತ್ಯವು ಅಪ್ರತಿಮವೆಂದೆನಿಸಿ, ಕರ್ನಾಟಕ ಸಂಗೀತದ ಪರಂಪರೆಯನ್ನೂ, ಅದರ ಲಕ್ಷಣವನ್ನೂ ಚಿರಸ್ಥಾಯಿಯಾಗಿರಿಸಲು ಅನುವಾಯಿತು.

ಉದ್ದೇಶ:-

ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತು ಸ್ವಾಮಿ ದೀಕ್ಷಿತರ ಕಿರುಪರಿಚಯ ಮೂಡಿಸುವುದು. ಅವರ ಚಿತ್ರಪಟದ ಜೊತೆಗೆ ಅವರ ಪಾಂಡಿತ್ಯದ ಪರಿಚಯ ಮೂಡಿಸುವುದು. ಅವರ ಸಂಗೀತ ಸಾಧನೆಯ ಬಗ್ಗೆ ವಿವರಿಸುವುದು ಅವರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆಯ ಬಗ್ಗೆ ತಿಳಿಸುವುದು.

ಜನನ ಕಾಲ ಮುತ್ತು ಸ್ವಾಮಿ ದೀಕ್ಷಿತರು ಕ್ರಿ. ಶ. 1775 ರಲ್ಲಿ ತಿರುವಾರೂರಿದಲ್ಲಿ ಜನಿಸಿದರು. ಮನ್ಮಥ ಸಂವತ್ಸರ, ಫಾಲ್ಗುಣಮಾಸ, ಕೃತಿಕಾ ನಕ್ಷತ್ರ, ತಂದೆ ರಾಮಸ್ವಾಮಿ ದೀಕ್ಷಿತರು, ತಾಯಿ ಸುಬ್ಬಲಕ್ಷ್ಮೀ ಅಮ್ಮಾಳ್, ಚಿನ್ನಸ್ವಾಮಿ, ಬಾಲುಸ್ವಾಮಿ ಸಹೋದರರು, ಬಾಲಾಂಬ ಸಹೋದರಿ.

ಸಂಗೀತ ಶಿಕ್ಷಣ

ತಂದೆ ಸ್ವತಃ ವಾಗ್ಗೇಯಕಾರರು, ಸಂಗೀತ ಶಾಸ್ತ್ರಜ್ಞರಾಗಿದ್ದು, ಹಂಸಧ್ವನಿ ರಾಗವನ್ನು ರೂಪಿಸಿದರು. ದೀಕ್ಷಿತರಿಗೆ ತಂದೆಯವರಿಂದಲೇ ಮೊದಲು ಸಂಗೀತ ಶಿಕ್ಷಣ.

ಶ್ರೀ ವಿದ್ಯಾ ಮಂತ್ರೋಪದೇಶ:-

ತಂದೆ ರಾಮಸ್ವಾಮಿ ದೀಕ್ಷೀತರು ಸಂಸಾರ ಸಮೇತರಾಗಿ ಮಣಲಿಯಲ್ಲಿ ನೆಲೆಸಿದ್ದಾಗ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ಕಾಶಿಯಿಂದ ಬಂದ ಚಿದಂಬರನಾಥಯೋಗಿಗಳು ಮುತ್ತುಸ್ವಾಮಿ ದೀಕ್ಷಿತರನ್ನು ಅನುಗ್ರಹಿಸಿ, ಕಾಶಿಗೆ ಕರೆದುಕೊಂಡು ಹೋಗಿ “ಶ್ರೀ ವಿದ್ಯಾ” ಮಂತ್ರೋಪದೇಶ ಮಾಡಿದರು. ನಂತರ ಐದು ವರ್ಷಗಳ ಕಾಲ ಜಪಮಾಡಿ, ಸಿದ್ದಿಯನ್ನು ಪಡೆದು ಇದರ ಗುರುತಾಗಿ ಗಂಗಾಸ್ನಾನಮಾಡುವಾಗ ಕೈಗಳಿಗೆ ವೀಣೆ ದೊರೆಯಿತಂತೆ.

ಕೃತಿರಚನೆಗೆ ಪ್ರೇರಣೆ:

ಕಾಶಿಯಿಂದ ಹಿಂದಿರುಗುವಾಗ ತಿರುತ್ತಣಿ ಕ್ಷೇತ್ರಕ್ಕೆ ಬಂದು ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಪಂಚಾಕ್ಷರಿ ಮಂತ್ರವನ್ನು ಜಪಿಸಿದರು. ಆಗ ಸುಬ್ರಹ್ಮಣ್ಯೇಶರನು ತೇಜಸ್ವಿಯೊಬ್ಬನ ರೂಪದಲ್ಲಿ ಪ್ರತ್ಯಕ್ಷ ನಾಗಿ ಬಂದು, ಬಾಯಿಗೆ ಕಲ್ಲು ಸಕ್ಕರೆ ಹಾಕಿ ಅದೃಶ್ಯನಾದನಂತೆ ತಕ್ಷಣವೇ “ಶ್ರೀನಾಥಾದಿ ಗುರುಗುಹೂ ಜಯತಿ” ಎಂಬ ಕೃತಿಯನ್ನು ರಚಿಸಿ ಹಾಡಿದರು.

ಮಳೆಸುರಿಸಿದ ಸಂದರ್ಭ:-

ಎಟ್ಟಿಯಾಪುರಕ್ಕೆ ಹೋಗುವ ದಾರಿಯಲ್ಲಿ ಕ್ಷಾಮಪೀಡಿತ ಪ್ರದೇಶದಲ್ಲಿ ಅಮೃತವರ್ಷಿಣಿ ರಾಗದ ಕೃತಿಯನ್ನು ಹಾಡಿ ಮಳೆಸುರಿಸಿದರಂತೆ.

ರಾಜಾಶ್ರಯದ ಪರಿಚಯ:-

ಇವರು ತಮ್ಮ ಹದಿನಂಟನೇ ವಯಸ್ಸಿನಲ್ಲಿ ಗೃಹಸ್ಥರಾದರೂ ಸನ್ಯಾಸಿಯಂತೆ ಬಾಳಿದರು. ರಾಜಾಶ್ರಯದಲ್ಲಿದ್ದರೂ ಮಾನವರ ಆಶ್ರಯವನ್ನು ತ್ಯಜಿಸಿದ್ದರು. ರಾಜನನ್ನು ದೈವಾಂಶ ಸಂಭೂತನೆಂದೇ ನಂಬಿದ್ದರು. ನಂತರ ಮೀನಾಕ್ಷಿಯನ್ನು ಕುರಿತು ಹಾಡುತ್ತಾ ಮನ್ಮಥನಾಮ ಸಂವತ್ಸರದ ನರಕಚತುರ್ದಶಿಯಂದು ಕ್ರಿ. ಶ. 1835ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ಎಟ್ಟಿಯಾಪುರದಲ್ಲಿ ಇಹಲೋಕವನ್ನು ತ್ಯಜಿಸಿದರು. ರಾಜನು ಸ್ವತಃ ನಿಂತು ಶಾಸ್ತ್ರೋಕ್ತವಾಗಿ ಉತ್ತರಕ್ರಿಯೆಗಳನ್ನು ನಡಸಿದನು.

ಕೃತಿ ರಚನೆಗಳು:-

ಚೌಕರ್ವಣ್ರ, ಕೃತಿ, ರಾಗಮಾಲಿಕೆ ಮುಂತಾದ ವಿವಿಧ ರೀತಿಯ ರಚನೆಗಳು ‘ಗುರುಗುಹ’ ಅಂಕಿತದಿಂದ ಮೂಡಿಬಂದಿದೆ. ಇವರ ರಚನೆಗಳಲ್ಲಿ ಸಂಸ್ಕೃತವೇ ಮುಖ್ಯವಾದರೂ ತೆಲುಗು, ತಮಿಳು ಭಾಷೆಗಳಲ್ಲೂ ಒಂದೆರಡು ರಚನೆಗಳಿವ. ಮೇಳಗಳನ್ನು ರಾಗವಾಗಿ ಪರಿವರ್ತಿಸಿ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಸಂಗೀತ ರಾಗಗಳನ್ನಾಗಿ ಪರಿವರ್ತಿಸಿ, ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗುಚ್ಚದಲ್ಲಿ ಮುಖ್ಯವಾದವು. ನವಗ್ರಹಕೃತಿಗಳು, ಕಮಲಾಂಬಾನವಾವರಣ, ಷೋಡಶ ಗಣಪತಿಕೃತಿಗಳು, ಗುರುಪರವಾದ ಕೃತಿಗಳು, ಪಂಚಲಿಂಗಸ್ಥಳ ಕೃತಿಗಳು, ವಿಭಕ್ತಿ ಕೃತಿಗಳು ಪಾಶ್ಚಾತ್ಯ ಮಟ್ಟುಗಳಿಗೆ ಸಾಹಿತ್ಯವನ್ನು ರಚಿಸಿದರು. ಮಣಿಪ್ರವಾಳ ಕೃತಿ ಇವರ ಕೊಡುಗೆ.

ಪ್ರಮುಖ ಶಿಷ್ಯರು:-

ಇವರ ಶಿಷ್ಯರಲ್ಲಿ ಪ್ರಸಿದ್ಧರಾದವರು ತಂಜಾವೂರು ಚಿನ್ನಯ್ಯ, ಪೊನ್ನಯ್ಯ, ಶಿವಾನಂದ, ವಡಿವೇಲು, ತಿರಿಕಡೆಯೂರು ಭಾರತಿ, ತಿರುವಾರೂರು ಶುದ್ಧ ಮೃದಂಗಂ, ತಂಬಿಯಪ್ಪನ್, ನಾಟ್ಯಗಾನವಿಶಾರದೆ ತಿರುವಾರೂರು ಕಮಲ, ಮುಂತಾದವರು. ಶಾಮಾಶಾಸ್ತ್ರಿಗಳ ರಚನೆಯನ್ನು “ಕದಳಪಾಕ ” ಹೋಲಿಸಿದರೆ, ದೀಕ್ಷಿತರ ರಚನೆಯನ್ನು “ನಾರಿಕೇಳಪಾಕ” ಕ್ಕೆ ಹೋಲಿಸಲಾಗಿದೆ. ಕಲಿಕಾ ಸಾಮಾಗ್ರಿ

ಚಿತ್ರಪಟ, ಸಾಕ್ಷ್ಯಚಿತ್ರ, ಕೃತಿ ಪರಿಚಯ.

ಕಲಿಕಾ ವಿಧಾನ:

ಹಂತ 1:- ಕೃತಿಯನ್ನು ಕಪ್ಪು ಹಲಗೆಯ ಮೇಲೆ ಬರೆಯಿಸುವುದು.

ಹಂತ 2:- ಆರೋಹಣ – ಅವರೂರ್ಹಣದೊಂದಿಗೆ ಕೃತಿಯನ್ನು ಹಾಡಿ ತೋರಿಸುವುದು. ಹಂತ 3: – ವಿದ್ಯಾರ್ಥಿಗಳಿಗೆ ಹೇಳಿಕೊಡುವುದು.

ಹಂತ 4:- ಸರಿಯಾಗಿ ಹಾಡುವರೇ ಎದ್ದು ವೀಕ್ಷಿಸುವುದು.

ಹಂತ 5:- ತಪ್ಪಿದ್ದಲ್ಲಿ ತಿದ್ದುವುದು.

ಸ್ವಮೌಲ್ಯಮಾಪನ:

  1. ತ್ರಿಮೂರ್ತಿಗಳ ಬಗ್ಗೆ ತಿಳಿದಿರುವರೇ?
  2. ದೀಕ್ಷಿತರ ಚಿತ್ರಪಟವನ್ನು ಗುರುತಿಸುವರೇ?
  3. ಅವರ ಪಾಂಡಿತ್ಯದ ಸಂಪೂರ್ಣ ಪರಿಚಯವಾಯಿತೇ?
  4. ದೀಕ್ಷಿತರ ಸಂಗೀತ ಕೊಡುಗೆಗಳ ಬಗ್ಗೆ ಮನವರಿಕೆ ಆಯಿತೇ?
  5. ದೀಕ್ಷಿತರ ಕೃತಿಗುಚ್ಛಗಳ ಬಗ್ಗೆ ಮಾಹಿತಿ ಅಥವಾ ಕೃತಿಗುಚ್ಛಗಳ ಬಗ್ಗೆ ಅರಿಯಲು ಪ್ರಯತ್ನಿಸಿದರೇ?

ತಾತ್ವಿಕ ಪ್ರಶ್ನೆಗಳು:

  1. ಯಾವ ಶತಮಾನವನ್ನು ಸ್ವರ್ಣಯುಗ ಎನ್ನುವರು?
  2. ದೀಕ್ಷಿತರು ಯಾವಾಗ ಎಲ್ಲಿ ಜನಿಸಿದರು?
  3. ದೀಕ್ಷಿತರ ತಂದೆ ತಾಯಿಯ ಹೆಸರೇನು?
  4. ದೀಕ್ಷಿತರ ಸಹೋದರ ಸಹೋದರಿಯರು ಯಾರು?
  5. ಹಂಸಧ್ವನಿಯನ್ನು ರೂಪಿಸಿದವರು ____________
  6. ದೀಕ್ಷಿತರು ____________ವಿದ್ಯೆಯಲ್ಲಿ ಪಾರಂಗತರಾಗಿದ್ದರು .
  7.  ಪಾಶ್ಚಾತ್ಯ ಸಂಗೀತದ ಪರಿಚಯ ____________ ಆಯಿತು.
  8. ____________ ಶ್ರೀವಿದ್ಯಾ ಮಂತ್ರದ ಉಪದೇಶ.
  9. ಸಿದ್ಧಿ ಗುರುತಾಗಿ ದೀಕ್ಷಿತರಿಗೆ ಏನು ದೊರೆಯಿತು?
  10.  ತಿರುತ್ತಣಿ ಕ್ಷೇತ್ರಕ್ಕೆ ಬಂದು ಏನು ಮಾಡಿದರು.
  11.  ಕ್ಷಾಮ ಪೀಡಿತ ಪ್ರದೇಶದಲ್ಲಿ ಏನು ಮಾಡಿದರು.
  12.  ಭಾಜನನ್ನು ಏನೆಂದು ನಂಬಿದ್ದರು?
  13.  ಇಹಲೋಕವನ್ನು ____________ತ್ಯಜಿಸಿದರು .
  14.   ____________ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
  15.   ____________ ಭಾಷೆಯಲ್ಲಿ ಹೆಚ್ಚಾಗಿ ಕೃತಿಯರಚನೆಯಾಗಿದೆ.
  16.  ದೀಕ್ಷಿತರ ಕೃತಿಗುಚ್ಚಗಳನ್ನು ಹೆಸರಿಸಿ?
  17.  ದೀಕ್ಷಿತರ ಪ್ರಮುಖ ಶಿಷ್ಯರು ಯಾರು?
  18.  ಇವರ ರಚನೆಯನ್ನು ಯಾವುದಕ್ಕೆ ಹೋಲಿಸಲಾಗಿದೆ?

ಶ್ರೀತ್ಯಾಗರಾಜರು

ಅಧಿವೇಶನ: 20 (2)

ಪೀಠಿಕೆ:

ಕರ್ನಾಟಕ ಸಂಗೀತದ ಸುವರ್ಣಯುಗವೆಂದರೆ 17ನೇ ಶತಮಾನ ಇದಕ್ಕೆ ಮುಖ್ಯಕಾರಣಕರ್ತರೇ ಶ್ರೀಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ಶ್ರೀತ್ಯಾಗರಾಜರು, ಶ್ರೀಮುತ್ತುಸ್ವಾಮಿ

ದೀಕ್ಷಿತರು ಹಾಗೂ ಶ್ರೀ ಶ್ಯಾಮಾಶಾಸ್ತ್ರಿಗಳು. ತ್ಯಾಗರಾಜರು ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲಿ ವಾಗ್ಗೇಯ ಸಾರ್ವಭೌಮರು. ತಿರುವಾರೂರು ಇವರ ಜನ್ಮಸ್ಥಳ ಇವರ ತಂದೆ ರಾಮಬ್ರಹ್ಮ ತಾಯಿ ಸೀತಮ್ಮ, ಸಂಗೀತ, ಸಾಹಿತ್ಯ, ಪುರಾಣ, ವೇದ, ಉಪನಿಷತ್ತು ಅಲಂಕಾರ ಶಾಸ್ತ್ರಗಳ ಅಧ್ಯಯನ ಬಾಲ್ಯದಲ್ಲಿಯೇ ನಡೆಯಿತು. ವಿಶೇಷವೆಂದರೆ ಶ್ರೀತ್ಯಾಗರಾಜರು ವಾಲ್ಮೀಕಿ ರಾಮಾಯಣದ 24,000 ಶ್ಲೋಕಗಳನ್ನು ಕಂಠಪಾಠ ಮಾಡಿ ತನ್ನ ಐದನೆಯ ವಯಸ್ಸಿನಲ್ಲಿಯೇ ಹಾಡಿದ್ದಾರೆ. ತಂದೆ ರಾಮಬ್ರಹ್ಮರು ಇದಕ್ಕೆ ವ್ಯಾಖ್ಯಾನ ಮಾಡುತ್ತಿದ್ದರು.

ತಮ್ಮ ಎಂಟನೇ ವಯಸ್ಸಿನಲ್ಲಿ ಸೊಂಠಿವೆಂಕಟರಮಣ ಭಾಗವತರಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ ಎರಡು ವರ್ಷದಲ್ಲಿ ಸಂಗೀತದಲ್ಲಿ ಪಾಂಡಿತ್ಯಪಡೆದರು. `ದೊರಕಿನಾ ಇಟುವಂಟಿ ಶಿಷ್ಯುಡು’ ಎಂದು ತನ್ನ ಗುರುಗಳಿಂದಲೇ ಹೊಗಳಿಸಿಕೊಂಡರು. ರಾಮಕೃಷ್ಣ ಯತೀಂದ್ರರಿಂದ ರಾಮನಾಮದ ಉಪದೇಶವಾಯಿತು. ತೊಂಭತ್ತಾರು ಕೋಟಿ ರಾಮನಾಮ ಮಂತ್ರವನ್ನು ಜಪಿಸಿ ಸರ‍್ವಸ್ವವೂ ಶ್ರೀರಾಮನೇ ಎಂದು ಸಾರಿದರು. ಶ್ರೀರಾಮನ ದರ್ಶನವನ್ನು ಅನೇಕಭಾರಿ ಪಡೆದ ಅನನ್ಯ ಭಕ್ತ ಶ್ರೀ ತ್ಯಾಗರಾಜರು.

ಮುಂದ ವೈವಾಹಿಕ ಜೀವನವನ್ನು ಶಾಂತಮ್ಮ ಎಂಬ ಕನ್ಯೆಯೊಡನೆ ಪ್ರಾರಂಭಿಸಿದರು. ಇವರಿಗೆ ಸೀತಾಲಕ್ಷ್ಮಿ ಎಂಬ ಪುತ್ರಿಯ ಜನನವಾಯಿತು. ತಮ್ಮ ಸಂಗೀತ ರಚನೆಗಳು ಉಳಿಯುವಂತೆ ಅವರ ಶಿಷ್ಯರು ತರಬೇತಿ ಪಡೆದರು.

ಇವರ ಕಾಲದಲ್ಲಿ ಕರ್ನಾಟಕ ಸಂಗೀತವು ಅಖಂಡವಾಗಿ ಬೆಳೆದು ಜಗತ್ತಿನಾದ್ಯಂತ ಹೆಸರಾಯಿತು. ತ್ಯಾಗರಾಜರು ಒಂದು ಪರಂಪರೆಯನ್ನೇ ಪ್ರಾರಂಭಿಸಿದರು. ಅನೇಕಾನೇಕ ಕೃತಿಗಳನ್ನು ರಚಿಸಿ ಭಕ್ತಿ, ತತ್ವ, ನೀತಿ ಮತ್ತು ಗುಣಗಳನ್ನು ವಿಶ್ವಾದ್ಯಂತ ಸಾರಿದರು. ಕೃತಿಗಳಲ್ಲಿ ಸಂಗತಿಗಳನ್ನು ಅಳವಡಿಸಿ ಹಾಡುವುದರ ಮೂಲಕ ಹೊಸತನವನ್ನು ತಂದರು.

ಲಾಲ್‍ಗುಡಿಪಂಚರತ್ನ ತಿರುವಟ್ಟಿಯಾರು ಪಂಚರತ್ನ, ಕೋವೂರು ಪಂಚರತ್ನ ಇವೇ ಮುಂತಾದ ಪಂಚರತ್ನ ಕೃತಿಗಳನ್ನು ತಾವು ಸಂದರ್ಶಿಸಿದ ಸ್ಥಳಗಳ ಅಧಿದೇವತೆಗಳನ್ನು ಕುರಿತು ರಚಿಸಿ ಪ್ರಸಿದ್ದಿಗೊಳಿಸಿದರು. ಅವುಗಳಲ್ಲಿ ಘನರಾಗ ಪಂಚರತ್ನ ಕೃತಿಗಳು ವಿಶ್ವಾದ್ಯಂತ ಇಂದಿಗೂ ಸುಪ್ರಸಿದ್ಧಿ ಪಡೆದಿವೆ.

ಪ್ರಹ್ಲಾದ – ಭಕ್ತವಿಜಯ, ಸೀತಾರಾಮ ವಿಜಯ ಮತ್ತು ನೌಕಾಚರಿತ್ರೆ ಎಂಬ ಮೂರು ಗೇಯ ನಾಟಕಗಳನ್ನು ರಚಿಸಿ ನಾಟಕ ರಚನೆಯಲ್ಲಿಯೂ ತನ್ನ ಪಾಂಡಿತ್ಯವನ್ನು ಸಾಬೀತುಪಡಿಸಿದರು.

ಶ್ರೀ ತ್ಯಾಗರಾಜರು ಕರ್ನಾಟಕ ಸಂಗೀತಕ್ಷೇತ್ರಕ್ಕೆ ತನ್ನ ಎಂಭತ್ತನೆಯ ವಯಸ್ಸಿನಲ್ಲಿ ಅಂದರೆ 1847ರಲ್ಲಿ ಪುಷ್ಯಬಹುಳ ಪಂಚಮಿಯಂದು ಶ್ರೀತ್ಯಾಗರಾಜರು ಶ್ರೀರಾಮನ ಪಾದಕಮಲಗಳಲ್ಲಿ ಐಕ್ಯರಾದರು. ಇದಿಗೂ ಈ ನಾದಯೋಗಿಯ ಆರಾಧನಾ ಮಹೋತ್ಸವವನ್ನು ವಿಶ್ವದಾದ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತಿದೆ.

ಉದ್ದೇಶ:

Ø ತ್ಯಾಗರಾಜರ ವ್ಯಕ್ತಿ ಚಿತ್ರ ಗ್ರಹಿಸುವುದು.

Ø ತ್ಯಾಗರಾಜರ ಬಾಲ್ಯ, ಪ್ರತಿಭೆಯ ಬಗ್ಗೆ ವಿವರಿಸುವುದು, ತಿಳಿಯುವುದು.

Ø ತ್ಯಾಗರಾಜರ ಸಂಗೀತಜೀವನದ ಅರಿವು ಮೂಡಿಸುವುದು.

Ø ತ್ಯಾಗರಾಜರ ವೈವಾಹಿಕ ಜೀವನದ ತಿಳುವಳಿಕೆ ಮೂಡಿಸುವುದು.

Ø ತ್ಯಾಗರಾಜರ ಆಧ್ಯಾತ್ಮ ಜೀವನದ ಬಗ್ಗೆ ತಿಳುವಳಿಕೆ ನೀಡುವುದು.

Ø ತ್ಯಾಗರಾಜರ ಕ್ಷೇತ್ರ ಸಂದರ್ಶನಗಳು ಮತ್ತು ಈ ಕ್ಷೇತ್ರದ ಆಧಿದೇವತೆಗಳ ಕುರಿತು ರಚಿಸಿದ ಪಂಚರತ್ನ ಕೃತಿಗಳ ಅಧ್ಯಯನ, ಅರಿವು ಮೂಡಿಸುವುದು.

Ø ತ್ಯಾಗರಾಜರ ಸಂಗೀತ ಸಾಧನೆಯ ಬಗ್ಗೆ ವಿವರಿಸುವುದು.

Ø ತ್ಯಾಗರಾಜರ ಕೃತಿ ರಚನೆ ಶೈಲಿ, ಸಂಗತಿಗಳ ಅಳವಡಿಕೆ ಮುಂತಾದ ಹೊಸತನಗಳ ಬಗ್ಗೆ ತಿಳಿಸುವುದು, ಸೃಜನಶೀಲತೆ.

ಬೋಧನೋಪಕರಣಗಳು:

ಶ್ರೀತ್ಯಾಗರಾಜರ ಭಾವಚಿತ್ರ, ಶ್ರೀ ರಾಮಚಂದ್ರರ ಚಿತ್ರಪಟ, ತಂಬೂರಿ, ಕೃತಿಗಳ ಸಾಹಿತ್ಯ. ಕಲಿಕಾವಿಧಾನ:

Ø ಶ್ರೀತ್ಯಾಗರಾಜರ ಭಾವಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅವರ ಪರಿಚಯವನ್ನು ಗ್ರಹಿಸುವಂತೆ ಪ್ರೇರೇಪಿಸುವುದು.

Ø ಶ್ರೀ ತ್ಯಾಗರಾಜರ ಬಾಲ್ಯ ಜೀವನದ ಬಗ್ಗೆ ವಿವರಿಸುವುದು ಅವರ ಬಾಲ್ಯ ಜೀವನದ ಅನನ್ಯ ಸಾಧನೆಯ ಬಗ್ಗೆ ವಿಶ್ಲೇಷಿಸುವುದು.

Ø ಶ್ರೀತ್ಯಾಗರಾಜರ ರಾಮಭಕ್ತಿಯ ವಿಶೇಷತೆಯ ಬಗ್ಗೆ ವಿವರಿಸುವುದು ಅವರಿಗೆ ರಾಮದರ್ಶನ ಬಗ್ಗೆ ತಿಳಿಸುವುದು.

Ø ಶೀತ್ಯಾಗರಾಜರ ವೈವಾಹಿಕ ಜೀವನದ ಬಗ್ಗೆ ವಿವರಿಸುವುದು.

Ø ಶ್ರೀ ತ್ಯಾಗರಾಜರ ಕೃತಿ ರಚನೆ, ಕೃತಿ ರಚನಾ ಶೈಲಿ, ಸೃಜನಶೀಲ ಸಾಧನೆಯ ಬಗ್ಗೆ ಚರ್ಚಿಸಿ ವಿವರಣೆ ನೀಡುವುದು.

Ø ಶ್ರೀತ್ಯಾಗರಾಜರ ಜೀವನ ಚರಿತ್ರೆಯ ಸಮಗ್ರ ಮಾಹಿತಿಯನ್ನು ನೀಡುವುದು.

Ø ಶೀತ್ಯಾಗರಾಜರು ಇಂದಿಗೂ ಅಮರರು, ಅವರ ಕೃತಿಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ತ್ಯಾಗರಾಜರ ಯಕ್ಷಗಾನ ಶೈಲಿಯ ಗೇಯ ನಾಟಕಗಳ ಬಗ್ಗೆ ತಿಳಿಸಿ ವಿವರಿಸುವುದು.

Ø ಶ್ರೀ ತ್ಯಾಗರಾಜರ ಜೀವಮಾನ ಸಾಧನೆಯ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳಲ್ಲಿ ಏನಾದರೂ ಸಾಧಿಸುವಂತೆ ಪ್ರೇರೇಪಣೆ ನೀಡುವುದು.

ಸ್ವಮೌಲ್ಯಮಾಪನ:

Ø ಶ್ರೀ ತ್ಯಾಗರಾಜರ ಜನನ, ತಂದೆತಾಯಿ, ಬಾಲ್ಯ ಜೀವನದ ಬಗ್ಗೆ ತಿಳಿದಿದೆಯೇ?

Ø ಶ್ರೀತ್ಯಾಗರಾಜರು ಬಾಲ್ಯದಲ್ಲಿಯೇ ಮಾಡಿದ ಸಾಧನೆಯ ಬಗ್ಗೆ ಅರಿವು ಮೂಡಿದೆಯೇ?

Ø ತ್ಯಾಗರಾಜರ ವೈವಾಹಿಕ ಜೀವನದ ಬಗ್ಗೆ ತಿಳಿಯಿತೇ?

Ø ಶ್ರೀ ತ್ಯಾಗರಾಜರ ಕೃತಿರಚನಾಶೈಲಿ, ರಚಿಸಿದ ಇತರ ರಚನೆಗಳ ಬಗ್ಗೆ ಗ್ರಹಿಸಿದರೇ?

Ø ಶ್ರೀತ್ಯಾಗರಾಜರ ಜೀವನಚರಿತ್ರೆ ಸಮಗ್ರವಾಗಿ ಅರಿವುಮೂಡಿತೆ?

Ø ಶ್ರೀ ತ್ಯಾಗರಾಜರನ್ನು ಚಿತ್ರದಲ್ಲಿ ಗುರುತಿಸುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ಶ್ರೀತ್ಯಾಗರಾಜರು ಯಾವಾಗ ಜನಿಸಿದರು?

Ø ಶ್ರೀತ್ಯಾಗರಾಜರ ತಂದೆ ತಾಯಿಯರ ಬಗ್ಗೆ ತಿಳಿಸಿ.

Ø ಶ್ರೀತ್ಯಾಗರಾಜರ ಬಾಲ್ಯಜೀವನದ ಬಗ್ಗೆ ವಿವರಿಸಿ.

Ø ಶ್ರೀತ್ಯಾಗರಾಜರ ವೈವಾಹಿಕ ಜೀವನದ ಬಗ್ಗೆ ತಿಳಿಸಿ.

Ø ಶ್ರೀತ್ಯಾಗರಾಜರು ಭೇಟಿಮಾಡಿದ ಕ್ಷೇತ್ರಗಳ ಬಗ್ಗೆ ವಿವರಿಸಿ.

Ø ಶ್ರೀತ್ಯಾಗರಾಜರ ಪಂಚರತ್ನ ಕೃತಿಗಳ ಬಗ್ಗೆ ತಿಳಿಸಿ.

Ø ಶ್ರೀತ್ಯಾಗರಾಜರ ಆಧ್ಯಾತ್ಮಿಕ ಜೀವನದ ಬಗ್ಗೆ ತಿಳಿಸಿ.

Ø ಶ್ರೀ ತ್ಯಾಗರಾಜರ ಜೀವನದ ಸಾಧನೆಯ ಬಗ್ಗೆ ವಿವರಿಸಿ.

ಪ್ರಾರಂಭಿಕ ಸ್ವರಾಭ್ಯಾಸ

ಅಧಿವೇಶನ: 20 (1)

ಅವಧಿ: 90 ನಿಮಿಷಗಳು

ಪೀಠಿಕೆ:

ಪ್ರಾರಂಭಿಕ ಸ್ವರಾಭ್ಯಾಸವು ಸಂಗೀತ ಲೋಕಕ್ಕೆ ಹೆಬ್ಬಾಗಿಲು ಎನ್ನುಲಾಗಿದೆ. ಇವುಗಳ ಅಭ್ಯಾಸವು ವಿದ್ಯಾರ್ಥಿಗಳ ಸಂಗೀತ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತವೆ. ಸರಳ, ಜಂಟಿಸರಳೆ ಮತ್ತು ಅಲಂಕಾರಗಳನ್ನು ಪ್ರಾರಂಭಿಕ ಸ್ವರಾಭ್ಯಾಸಗಳು ಅಥವಾ ಸಾಧನಾ ಸ್ವರಗಳು ಎನ್ನಬಹುದು. ಇವುಗಳನ್ನು 4 ಕಾಲದಲ್ಲಿ ಹಾಡಲಾಗುತ್ತದೆ. ಮತ್ತು 4 ಕಾಲದಲ್ಲಿ ಆಲಾಪ್ ಮಾಡಲಾಗುತ್ತದೆ. ಇವುಗಳನ್ನು ಮೊಟ್ಟ ಮೊದಲು ಆಚರಣೆಗೆ ತಂದವರು ಸಂಗೀತ ಪಿತಾಮಹ ಪುರಂದರದಾಸರು. ಇದನ್ನು ಹೇಳಿಕೊಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ.

ಇದು ನಿಮಗೆ ತಿಳಿದಿರಲಿ

ಕ್ರಿಕೆಟ್ ಆಟಗಾರರು ಕೇವಲ ಕ್ರಿಕೆಟನ್ನು ಮಾತ್ರ ಅಭ್ಯಾಸ ಮಾಡದೆ, ತಮ್ಮ ದೇಹವನ್ನು ಬಲಿಷ್ಠವಾಗಿಸಲು ಓಟ, ಈಜು, ಜಿಮ್‌ನಲ್ಲಿ ಕಸರತ್ತುಗಳನ್ನು ಮಾಡುತ್ತಾರೆ. ಹಾಗೆಯೇ ಗಾಯಕರು ನೇರವಾಗಿ ಹಾಡುಗಳನ್ನೇ ಅಭ್ಯಾಸ ಮಾಡದೆ ತಮ್ಮ ಧ್ವನಿಯನ್ನು ಪಳಗಿಸಲು ಪ್ರಾರಂಭಿಕ ಸ್ವರಾಭ್ಯಾಸಗಳನ್ನು ಮಾಡುತ್ತಾರೆ.

ಉದ್ದೇಶ:

Ø ವಿದ್ಯಾರ್ಥಿಗಳ ಧ್ವನಿಯನ್ನು ಸಂಸ್ಕಾರಗೊಳಿಸುವುದು.

Ø 7 ಸ್ವರಗಳ ಪರಿಚಯ ಮಾಡುವುದು.

Ø ಮುಕ್ತ ಕಂಠದಿಂದ (Open Voice) ನಲ್ಲಿ ಹಾಡುವುದನ್ನು ಕಲಿಸುವುದು.

Ø 4 ಕಾಲದಲ್ಲಿ ಹಾಡುವುದನ್ನು ಅಭ್ಯಾಸ ಮಾಡಿಸುವುದು.

Ø 4 ಕಾಲದಲ್ಲಿ ಆಲಾಪ್ ಮಾಡುವುದರ ಅಭ್ಯಾಸ ಮಾಡಿಸುವುದು.

Ø ಎಲ್ಲಾ ಶೈಲಿಯ ಹಾಡುಗಳನ್ನು ಹಾಡಲು ಮಕ್ಕಳ ಧ್ವನಿಗೆ ತರಬೇತಿಯನ್ನು ನೀಡುವುದು.

ಪ್ರಾರಂಭಿಕ ಸ್ವರಾಭ್ಯಾಸಗಳನ್ನು 4 ಕಾಲದಲ್ಲಿ ಹಾಡುವುದರಿಂದ ಮಕ್ಕಳಲ್ಲಿ ಗಣಿತದ ಲೆಕ್ಕಾಚಾರದ ಜ್ಞಾನವನ್ನು ಹೆಚ್ಚಿಸಿದಂತಾಗುವುದು. ತಾಳಗಳಿಗೂ ಮತ್ತು ಅಂಕಗಣಿತಕ್ಕೂ ಇರುವ ನೇರ ಸಂಬಂಧವನ್ನು ಮಕ್ಕಳು ತಿಳಿಯುವರು.

ಕಲಿಕಾ ಸಾಮಾಗ್ರಿ:

ಶೃತಿ ಪೆಟ್ಟಿಗೆ, ಎಲೆಕ್ಟ್ರಾನಿಕ್ ತಬಲಾ.

ಕಲಿಕಾ ಹಂತ:

ಹಂತ 1: ಪ್ರಾರಂಭಿಕ ಸ್ವರಾಭ್ಯಾಸಗಳ ಮಹತ್ವ, ಹಾಡುವುದರ ಉದ್ದೇಶದ ಸ್ಪಷ್ಟ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ಮನದಟ್ಟುಮಾಡಬೇಕು. ನಗುಮೊಗದೊಂದಿಗೆ ಬಹಳ ಆಕರ್ಷವಾಗಿ ಬಹಳ ತಾಳ್ಮೆಯಿಂದ ನಾನು ನಿಮಗೆ ಹೊಸದೊಂದು ಲೋಕವನ್ನು ತೋರಿಸುತ್ತಿದ್ದೇನೆ ಎನ್ನುವ ಉತ್ಸಾಹದಿಂದ ಶಿಕ್ಷಕರು ಪ್ರಾರಂಭಿಸಬೇಕು.

ಹಂತ 2: ಸರಳೆಗಳನ್ನು ಕಪ್ಪುಹಲಗೆಯ ಮೇಲೆ ಸ್ಪಷ್ಟವಾಗಿ ದುಂಡಗೆ ಬರೆದು ಸ್ವರವನ್ನು ಹಾಡಿಸುತ್ತಾ ಕೈಯಲ್ಲಿ ತಾಳ ಹಾಕಲು ಹೇಳಬೇಕು.

ಹಂತ 3: ಕಪ್ಪು ಹಲಗೆಯ ಮೇಲೆ ಈ ಕೆಳಗಿನ ರೀತಿಯಲ್ಲಿ ಸ್ವರಗಳನ್ನು ಚಿತ್ರಿಸಿ.

 

ಪ್ರತಿ ಬಾರಿ ಪ್ರಾರಂಭಿಕ ಸ್ವರಗಳನ್ನು ಹೇಳಿಕೊಡುವಾಗಲೂ ಬರೆದು (ಅಥವಾ ಚಾರ್ಟ್ ಮಾಡಿಟ್ಟುಕೊಳ್ಳಬಹುದು) ಒಂದು ಕೋಲಿನಿಂದ ನಾವು ಹೇಳಿಕೊಡುತ್ತಿರುವ ಸ್ವರಗಳನ್ನು ತೋರಿಸುವುದರಿಂದ ದೃಶ್ಯ ಪರಿಣಾಮ (Visual Impact) ಮೂಡುತ್ತದೆ. ಮಕ್ಕಳಿಗೆ ಸ್ವರಗಳ ಏರಿಳಿತಗಳ, ಸ್ವರಸ್ಥಾನಗಳ ಸ್ಪಷ್ಟ ಚಿತ್ರಣ ದೊರಕುತ್ತದೆ. ಕಪ್ಪು ಹಲಗೆಯನ್ನು ಉಪಯೋಗಿಸಿದಂತೆಯೂ ಆಗುತ್ತದೆ. ಮಕ್ಕಳನ್ನು ದೃಶ್ಯ ಪರಿಣಾಮದ ಮೂಲಕ ಪ್ರೇರೇಪಿಸಿದಂತಾಗುತ್ತದೆ.

ಹಂತ 4: ಸ್ವರಗಳ ಆಲಾಪ್ ಮಾಡಿಸುವುದು.

ಹಂತ 5: ಮಕ್ಕಳಿಗೆ ಹಿಂಜರಿಕೆ, ಮುಜುಗರ ಬಿಟ್ಟು ಮುಕ್ತಕಂಠದಿಂದ (Open Voice) ಹಾಡಲು ಪ್ರೇರೇಪಿಸುವುದು.

ಹಂತ 6: ವಿದ್ಯಾರ್ಥಿಗಳಿಗೆ ಈ ಸ್ವರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿಸುವುದರಿಂದ ಯಾವ ವಿಧವಾದ ಹಾಡುಗಳನ್ನು ಬೇಕಾದರೂ ಸುಲಲಿತವಾಗಿ ಹಾಡಬಹುದು ಎಂದು ಆಕರ್ಷಕವಾಗಿ ಉದಾಹರಣೆಗಳೊಂದಿಗೆ ತಿಳಿಸಬೇಕು. ಅತ್ಯಂತ ನಿಧಾನವಾಗಿ ಮತ್ತು ವೇಗವಾಗಿ ಹಾಡುವುದನ್ನು ಮಕ್ಕಳು ಒಂದು ಆಟದಂತೆ ಸಂತೋಷಪಡುವ ಹಾಗೆ ಮಾಡಬೇಕು.

ಸ್ವಮೌಲ್ಯಮಾಪನ:

  • ಪ್ರಾರಂಭಿಕ ಸ್ವರಾಭ್ಯಾಸಗಳ ಮಹತ್ವವನ್ನು ತಿಳಿದಿರುವರೇ?
  • ಆಸಕ್ತಿಯಿಂದ ಹಾಡುತ್ತಿದ್ದಾರೆಯೇ?
  • 4 ಕಾಲಗಳಲ್ಲಿ ಹಾಡುವುದನ್ನು ಅರಿತಿದ್ದಾರೆಯೇ?
  • ಆಲಾಪ್ ಮಾಡಲು ತಿಳಿದಿರುವರೇ?
  • ಕೃತಿಬದ್ಧವಾಗಿ, ತಾಳಬದ್ದವಾಗಿ ಹಾಡುತ್ತಿರುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ಸರಳ ಎಂದರೇನು? ಉದಾಹರಣೆ ನೀಡಿ.

Ø ಜಂಟಿ ಸರಳ ಎಂದರೇನು? ಉದಾಹರಣೆ ನೀಡಿ.

Ø ಅಲ೦ಕಾಲಗಳು ಎಂದರೇನು? ಯಾವುದಾದರೊಂದು ಅಲಂಕಾರ ಬರೆಯಿರಿ.

Ø ಪ್ರಾರಂಭಿಕ ಸ್ವರಾಭ್ಯಾಸದ ಮಹತ್ವವನ್ನು ತಿಳಿಸಿ.

Ø ಆಲಾಪ್ ಎಂದರೇನು?

( ರೀತಿ ಟೇಬಲ್ ಬರೆಸಬಹುದು)

ಕಾಲ ಪೆಟ್ಟು ಸ್ವರಗಳು
1 1 1
2 1 2
3 1 4
4 1 8

4 ಕಾಲದಲ್ಲಿ ಹಾಡುವುದು ಎಂದರೇನು ?

 ಕೆಳಗಿನ ಅಲಂಕಾರವನ್ನು ಪೂರ್ಣಗೊಳಿಸಿ:

ಸಂಗಮಗರಿ ಸರಿಗರಿ _________

___________________________

____________ ಮಗರಿಗ ಮಗರಿಸ.

ಪ್ರಾರಂಭಿಕ ಸ್ವರಾಭ್ಯಾಸಗಳಾದ ಸರಳೆ, ಜಂಟಿ ಸರಳೆ, ಅಲಂಕಾರ ಇವು ಕರ್ನಾಟಕ ಸಂಗೀತದಿಂದ ತೆಗೆದುಕೊಳ್ಳಲಾದ ಪದಗಳು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ (ಉತ್ತರ ಭಾರತದಲ್ಲಿ) ಇವುಗಳಿಗೆ ಪಲ್ಟಾ ಅಥವಾ ಅಲಂಕಾರ್ ಎನ್ನುತ್ತಾರೆ.

ಪ್ರಾಯೋಗಿಕ ಚಟುವಟಿಕೆ:

ಮಕ್ಕಳನ್ನು ಗುಂಪುಗಳಾಗಿ ಮಾಡಿ ಒಂದೊಂದು ಗುಂಪಿಗೆ ಒಂದೊಂದು ಸರಳೆ ಅಥವಾ ಜಂಟಿ ಸರಳೆ ಅಥವಾ ಅಲಂಕಾರವನ್ನು ಹಾಡುವ ಸ್ಪರ್ಧೆ ಏರ್ಪಡಿಸುವುದು.

ರಾಗಭಾಗೇಶ್ರೀ

ಆರೋಹಣ: ಸ ಮ ಪ ನಿ ಸ

ಅವರೋಹಣ: ಸ ನಿ ದ ಮ ಪ ದ ಮ ಗ ರಿ ಸ

ಪಕ್ಕಡ ಸ್ವರ / ಮುಖ್ಯಾಂಗ: ನಿದsss, ಮಪದs, ಮsಗರಿಸ ನಿದಸ.

ರಾಗ ಲಕ್ಷಣ:

ಥಾಟ್ : ಕಾಪಿ

ವಾದಿ: ಮ (ಮಧ್ಯಮ)

ಸಂವಾದಿ: ಸ (ಷಡ್ಜ)

ವರ್ಜ್ಯ ಸ್ವರ: ಆರೋಹಣದಲ್ಲಿ ರಿ ಮತ್ತು ಪ.

ಜಾತಿ: ಔಡವ – ಸಂಪೂರ್ಣ.

ವಿಕೃತ ಸ್ವರ: ಗ ಮತ್ತು ನಿ ಕೋಮಲ.

ಗಾನಸಮಯ: ರಾತ್ರಿ 2ನೇ ಪ್ರಹರ (9 ರಿಂದ 12).

ರಾಗದ ಸ್ವರೂಪ: ಶೃಂಗಾರ, ಕರುಣಾ ರಸ ಪ್ರಧಾನವಾದ ರಾಗ.

ಸ್ವರಗೀತೆ

ತಾಳ: ಏಕ ತಾಲ್

||ಸ್ಥಾಯಿ||

|x         |0             |2               |0            |3            | 4              |

|ಸ      ಗ| ಮ        ದ| ನಿ          ಸ| ನಿ       ದ| ಮ         ಗ| ರಿ            ಸ|

|೧     ೨| ೩         ೪| ೫          ೬| ೭       ೮| ೯        ೧೦| ೧೧       ೧೨|

|ಸ       ನಿ| ಧ         ನಿ| ದ          s| ಮ              ಪ| ಮ         ಗ| ರಿ            ಸ|

|| ಅಂತರ ||

|ಗ      ಮ| ದ         ನಿ| ಸ          s| ಗ       ರಿ| ನಿ        ದ| ಸ                s|

|ಸ     ಮ| ಗ         ರಿ| ಸ          s| ನಿ       ದ| ಮ       ಗ| ರಿ         ಸ|

ಲಕ್ಷಣಗೀತೆ

||ಸ್ಥಾಯಿ||

    1   2       3     4     5     6     7    8     9    10   11    12  13    14   15   16

    X                           2                       0                        3

                                                  ಸ    s     s   ನಿ  ದ     ಸ    ನಿ   ದ

                                                  ಭಾ  s     s   ಗೇ  s     ಶ್ವ    ರಿ    s

    ಮ  ಪ     ದ  ಮಗ  ಮಗ   ಸ   ರಿ   ಸ   ದ   ನಿ   ಗಸ  ಗ  ಮ     s    ಗ   ಮ

    ಮ  ಧು    ರ    ರಾ    s     ಗಿ    ನಿ       ಮೃ ದು    ಗ   ನಿ  ಮ    s    ಧ್ಯ  ಮ

    ಗ   ಮ            ದ    ನಿ   ಸನಿ   ರಿಸ   ನಿ  ದ

    ಅಂ   s    ಶ    ಸು   ತಾ     s    ತ   s

|| ಅಂತರ ||

                                                                     ಗ     ಮ   ದ   ನಿ  ಸ    s     s       ಸ

                                                   ಪ್ರ     ಥ   ಮ  ಸು  ರ    ಕ     ರ   ತ್

     ಸ    s     ಸ    ರಿ   ಸಸ  ರಿಸ   ನಿ   ದ   ದ   ನಿ    ಸ  ಮ  ಗ     ರಿ    s   ಸ

    ರು   ಚಿ    ರ    ಸಂ  ವಾ    s     ದಿ   s   ರ   ಸ    ವಾ  s   ಹಿ    ನಿ    ಶೃಂ  s

      ಸ    s     ಸ    ರಿ   ಸನಿ   ರಿಸ   ನಿ  ದ  ಗ     ಮ   ದ  ದ   ನಿ    ಸ     s   ಸ

    ಗಾ    s    ರ    ಸ    ಕ     ರು   ಣಾ  s   ಸ    ಮ  ಯ  ನಿ   ಸ   ಜಾ    s  ನೇ

     ದ     ಪ    ನಿ   ದ    ಮ    ಗ    ರಿ   ಸ

    ಗಾ    s     ತ   ಗು   ನಿ     ರಾ   s   ತ

ಸ್ಥಾಯಿ: ಭಾಗೇಶ್ವರಿ ಮಧುರ ರಾಗಿನಿ

 ಮೃದುಗನಿ ಮಧ್ಯಮ ಅಂಶ ಸುಹಾತ

ಅಂತರ: ಪ್ರಥಮ ಸುರಕರತ್ ರುಚಿರ ಸಂವಾದಿ

   ರಸವಾಹಿನಿ ಶೃಂಗಾರಸ ಕರುಣಾ –

   ಸಮಯ ನಿಸಜಾನೇ ಗಾತ ಗುನಿರಾತ

ಅರ್ಥ:

ಸ್ಥಾಯಿ: ಭಾಗೇಶ್ವರಿ ಮಧುರವಾದ ರಾಗವಾಗಿದೆ.

ಗ, ನಿ ಕೋಮಲ ಮತ್ತು ಮಧ್ಯಮ ವಾದಿಯಾಗಿದ್ದು ಮನಸೆಳೆಯುವ ರಾಗವಾಗಿದೆ.

ಅಂತರ: ಪ್ರಥಮ ಸ್ವರ ಷಡ್ಜವು ಸೊಗಸಾದ ಸಂವಾದಿ ಸ್ತರವಾಗಿದೆ.

  ಶೃಂಗಾರ ಮತ್ತು ಕರುಣಾರಸದ ರಸವಾಹಿನಿಯಾಗಿದೆ ಈ ರಾಗ.

  ಗುಣಿ (ನಿ) ಜನರು ಇದನ್ನು ರಾತ್ರಿ ಹಾಡುತ್ತಾರೆ.

ಬಂದಿಶ್

ರಾಗ: ಭಾಗೇಶ್ರೀ                                                      ತಾಳತೀನ್ ತಾಲ್

ಸ್ಥಾಯಿ:

ಝಮ್ – ಝಮ್ ಬಾಜೆ ಬಾಜೆ ಪಾಯಲಿಯಾ

ಕೈಸೆ ಸಖಿ ಜಾವೂ ಮೆ ಪಿಯಾ ಕೆ ಮಿಲನ್ವಾ

ಅಂತರ:

ಜಾಗೀರೇ ಅಬ್ ಸಾಸ್ ನನಂದಿಯಾ

ಜಿಯಾ ತಡ್ಪತ್ ಮೋರಾ ಪಿಯಾ ಕೆ ಮಿಲನವಾ

ಝೂಮ್ – ಝೂಮ್ ಎಂದು ನನ್ನ ಗೆಜ್ಜೆ ಸಪ್ಪಳ ಮಾಡುತ್ತಿದೆ.

ಹೇಗೆ ಸಖಿ ಹೋಗಲಿ ನನ್ನ ಪ್ರಿಯತಮನನ್ನು (ಕೃಷ್ಣ) ಕಾಣಲು ಹೋಗಲಿ.

ನನ್ನ ಅತ್ತೆ ಮತ್ತು ನಾದಿನಿಯರು ಎಚ್ಚರಗೊಂಡು ಬಿಡುತ್ತಾರೆ.

ಪ್ರಿಯತಮನಾದ ಕೃಷ್ಣನಿಗಾಗಿ ನನ್ನ ಮನಸ್ಸು ಹಾತೊರೆಯುತ್ತದೆ.

ಪಿಳ್ಳಾರಿ ಗೀತೆ

ಅಧಿವೇಶನ 21

ಅವಧಿ 30 ನಿಮಿಷಗಳು

ಪೀಠಿಕೆ: ಕರ್ನಾಟಕ ಸಂಗೀತ/ಬಾಲಪಾಠ ಕಲಿಕೆಯಲ್ಲಿ ಪಿಳ್ಳಾರಿ ಗೀತೆಯು ಬಹುಪ್ರಮುಖವಾದ ಹಂತ. ಈ ಹಂತದಲ್ಲಿ ಸ್ವರಲಿಸಿಯೊಂದಿಗೆ ಸಾಹಿತ್ಯವನ್ನು ಹೊಂದಾಣಿಸಿ ಹಾಡುವ ಕ್ರಮವನ್ನು ಕಲಿಸಲಾಗುತ್ತದೆ. ಇದನ್ನು ನಾವು ಧಾತುಮಾತುಗಳ ಪ್ರಾರಂಭ ಈ ಪಿಳ್ಳಾರಿ ಗೀತೆಗಳಿಂದ ಆಗುತ್ತದೆ. ಕರ್ನಾಟಕ ಸಂಗೀತ ಜ್ಯೂನಿಯರ್ ಹಂತದ ಪಠ್ಯದಲ್ಲಿ 4 ಪಿಳ್ಳಾರಿ ಗೀತೆಗಳಿದ್ದು ಎಲ್ಲವೂ ಮಲಹರಿ ರಾಗದಲ್ಲಿವೆ. ಮೊದಲೆರೆಡು ಪಿಳ್ಳಾರಿ ಗೀತೆಗಳು (ಲಂಬೋಧರ, ಕುಂದಗೌರ) ಚತುರಶ್ರಜಾತಿ ರೂಪಕತಾಳದಲ್ಲಿದ್ದು ಇನ್ನೆರಡು ಗೀತೆಗಳು (ಕೆರೆಯ ನೀರನು, ಪದುಮನಾಭ) ತ್ರಿಶ್ರಜಾತಿ ತ್ರಿಪುಟ ತಾಳದಲ್ಲಿದೆ.

ಉದ್ದೇಶ:

Ø ಮಲಹರಿ ರಾಗದ ಪರಿಚಯವನ್ನು ತಿಳಿಸುವುದು.

Ø ಚತುರಶ್ರಜಾತಿಯ ರೂಪಕತಾಳವನ್ನು ಪರಿಚಯಿಸುವುದು.

Ø ಸಾಹಿತ್ಯದ ಅರ್ಥ/ ಉಚ್ಚಾರಣೆಯನ್ನು ತಿಳಿಸುವುದು.

Ø ಸ್ವರಲಿಪಿಯನ್ನು ಅನುಸರಿಸಿ ಸಾಹಿತ್ಯವನ್ನು ಹಾಡುವ ಕ್ರಮವನ್ನು ತಿಳಿಸುವುದು.

Ø ತಾಳದೊಂದಿಗೆ ಸ್ವರ – ಸಾಹಿತ್ಯವನ್ನು ಹಾಡುವ ಬಗೆ ತಿಳಿಸುವುದು.

Ø ಸಾಹಿತ್ಯದ ಭಾವಾರ್ಥವನ್ನು ತಿಳಿಸುವುದು.

ಬೋಧನೋಕರಣಗಳು:

Ø ಶೃತಿ ಪೆಟ್ಟಿಗೆ/ ತಂಬೂರಿ

Ø ಪುರಂದರದಾಸರ ಚಿತ್ರಪಟ

ಕಲಿಕಾವಿಧಾನ:

Ø ಮಲಹರಿ ರಾಗದ ಲಕ್ಷಣವನ್ನು ತಿಳಿಸುವುದು.

Ø ಚತುರಶ್ರಜಾತಿ ರೂಪಕತಾಳವನ್ನು ತೋರಿಸುವುದು.

Ø ಪಿಳ್ಳಾರಿ ಗೀತೆಯ ಲಂಬೋಧರ ರಚನೆಯ ಸ್ವರಲಿಪಿಯನ್ನು ಬರೆಸುವುದು.

Ø ಸ್ವರಲಿಪಿಗೆ ಅನುಕ್ರಮವಾಗಿ ಸಾಹಿತ್ಯವನ್ನು ಬರೆಯುವ ಕ್ರಮವನ್ನು ತಿಳಿಸುವುದು.

Ø ಸ್ವರವನ್ನು ಹಾಡುವ ಕ್ರಮವನ್ನು ತಿಳಿಸುವುದು.

Ø ಸಾಹಿತ್ಯವನ್ನು ಹಾಡುವ ಕ್ರಮವನ್ನು ತಿಳಿಸುವುದು, ಬರೆಯುವುದು.

Ø ತಾಳವಿಲ್ಲದೆ ಸ್ವರವನ್ನು ಹಾಡಿ ಅನುಸರಿಸಲು ತಿಳಿಸುವುದು.

Ø ತಾಳದೊಂದಿಗೆ ಸಾಹಿತ್ಯವನ್ನು ಸ್ವರವನ್ನು ರಾಗಬದ್ಧವಾಗಿ ಹಾಗೂ ತಾಳಬದ್ಧವಾಗಿ ಹಾಡುವುದು, ಅನುಸರಿಸುವಂತೆ ತಿಳಿಸುವುದು.

ಸ್ವಮೌಲ್ಯಮಾಪನ:

Ø ಸ್ವರವನ್ನು ತಾಳದೊಂದಿಗೆ ಹಾಡಿಸುವುದು.

Ø (ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ) ತಪ್ಪುಗಳನ್ನು ತಿದ್ದುವುದು.

Ø ಶೃತಿ ಬದ್ಧವಾಗಿ ಹಾಡುವಂತೆ ಗಮನಿಸುವುದು.

Ø ಸಾಹಿತ್ಯವನ್ನು ಹಾಡಿಸುವುದು.

Ø ತಾಳದೊಂದಿಗೆ ಸಾಹಿತ್ಯವನ್ನು ಸ್ವರಲಿಪಿಯನ್ನನುಸರಿಸಿ ಶೃತಿಬದ್ಧವಾಗಿ ಹಾಡಲು ತಿಳಿಸುವುದು.

Ø ತಪ್ಪುಗಳನ್ನು ತಿದ್ದುವುದು.

ಘಟಕಾಂತ್ಯದ ಪ್ರಶ್ನೆಗಳು:

Ø ಪಿಳ್ಳಾರಿ ಗೀತೆಗಳೆಂದರೇನು?

Ø ಪಿಳ್ಳಾರಿ ಗೀತೆಗಳು ಯಾವ ರಾಗ / ತಾಳದಲ್ಲಿವೆ?

Ø ಪಿಳ್ಳಾರಿ ಗೀತೆಗಳ ವೈಶಿಷ್ಟ್ಯವೇನು?

Ø ಪಿಳ್ಳಾರಿ ಗೀತೆಗಳನ್ನು ರಚಿಸಿದವರು ಯಾರು?

Ø ಪಿಳ್ಳಾರಿ ಗೀತೆಗಳು ಯಾವ ಭಾಷೆಯಲ್ಲಿವೆ?

Ø ಪಿಳ್ಳಾರಿ ಗೀತೆಗಳು ಸಂಗೀತದ ಕಲಿಕೆ ಹಂತದ ‘ಪ್ರಮುಖ ಭಾಗವಾಗಿದೆ ಏಕೆ? ಹೇಗೆ?

Ø ಮಲಹರಿ ರಾಗ ಲಕ್ಷಣವನ್ನು ತಿಳಿಸಿ.

Ø ಚತುರಶ್ರಜಾತಿ ರೂಪಕತಾಳ, ತ್ರಿಶ್ರಜಾತಿ ತ್ರಿಪುಟತಾಳಗಳ ಲಕ್ಷಣವನ್ನು ತಿಳಿಸಿ.

ಪ್ರಯೋಗ:

Ø ಮಲಹರಿ ರಾಗದ ಲಕ್ಷಣವನ್ನು ತಿಳಿಸಿ.

Ø ಮಲಹರಿ ರಾಗದ ಆರೋಹಣ ಅವರೋಹಣವನ್ನು ಹಾಡಿ.

Ø ಸ್ವರಲಿಪಿಯನ್ನು (ಪಿಳ್ಳಾರಿ ಗೀತೆಗಳು) ಹಾಡಿ.

Ø ಸಾಹಿತ್ಯವನ್ನು (ಪಿಳ್ಳಾರಿ ಗೀತೆ) ಹಾಡಿ (ಸಾಮೂಹಿಕ / ವೈಯಕ್ತಿಕ)

ಉಪಸಂಹಾರ:

ಪಿಳ್ಳಾರಿ ಗೀತೆಗಳನ್ನು ಶ್ರೀಪುರಂದರ ದಾಸರು ರಚಿಸಿದರು. ಇವೆಲ್ಲವೂ ಮಲಹರಿ ರಾಗದಲ್ಲಿದ್ದು ರೂಪಕತಾಳ ಮತ್ತು ತ್ರಿಪುಟತಾಳಗಳಲ್ಲಿವೆ. ಇವುಗಳನ್ನು ಕ್ರಮಬದ್ಧವಾಗಿ ಹಾಡುವುದು ತುಂಬಾ ಮುಖ್ಯವಾಗಿದೆ. ಸ್ವರಸಂಚಾರವನ್ನು ಅನುಸರಿಸಿ ಸಾಹಿತ್ಯವನ್ನು ಹಾಡುವುದು ತುಂಬ ಪ್ರಮುಖ ಅಂಶವಾಗಿದೆ.

ಕೆಲವು ಸಂಪ್ರದಾಯಗಳಲ್ಲಿ ಲಂಬೋದರ ಶೀರ್ಷಿಕೆಯಿಂದ ಪ್ರಾರಂಭ ಮಾಡಿದರೆ ಕೆಲವು ಶಿಕ್ಷಕರು ಶ್ರೀಗಣನಾಥ ಭಾಗದಿಂದ ಪ್ರಾರಂಭಿಸುತ್ತಾರೆ.

ಪಲ್ಲವಿ ಅನುಪಲ್ಲವಿ ಚರಣಗಳು – ಲಂಬೋದರ ಗೀತೆಯಲ್ಲಿದ್ದು ಈ ಕ್ರಮ ಕುಂದಗೌರ ಗೀತೆಯಲ್ಲಿ ವಿಭಿನ್ನವಾಗಿದೆ. ಕೆರೆಯ ನೀರನು ಮತ್ತು ಪದುಮನಾಭ ಗೀತೆಗಳಲ್ಲೂ ವಿಭಿನ್ನತೆಯನ್ನು ಕಾಣಬಹುದು.

ಸಂಚಾರಿ ಗೀತೆ:

ಅಧಿವೇಶನ: 21 (1)

ಅವಧಿ: 30 ನಿಮಿಷಗಳು

ಪೀಠಿಕೆ

ಸಂಚಾರಿ ಗೀತೆಗಳು ಪಿಳ್ಳಾರಿಗೀತೆಗಳ ನಂತರದ ಹಂತವಾಗಿದ್ದು ಈ ಹಂತದಲ್ಲಿ ರಾಗಗಳಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ. ಮಾಯಾಮಾಳವಗೌಳ ಸ್ವರಸ್ಥಾನಗಳಿಂದ ಹೊರತಾದ ರಾಗಗಳ ವಿಭಿನ್ನತೆಯು ಸಂಚಾರಿ ಗೀತೆಗಳಿಂದ ಪ್ರಾರಂಭವಾಗುತ್ತದೆ. ಶುದ್ಧರಿಷಭದಿಂದ ಚತುಶ್ರುತಿ ರಿಷಭ ಶುದ್ಧದೈವತದಿಂದ ಚತುಶ್ರುತಿ ದೈವತ ಪ್ರಮುಖ ಬದಲಾವಣೆ.

ಸಂಚಾರಿ ಗೀತೆಗಳು ಪ್ರತಿಯೊಂದೂ ಒಂದಕ್ಕೊಂದು ವಿಭಿನ್ನರಾಗಗಳಲ್ಲಿದ್ದು ಸರಳತೆಯಿಂದ ಕ್ಲಿಷ್ಟತೆಯ ಹಂತದ ಗೀತೆಗಳು ಇದಾಗಿದೆ. ಈ ಹಂತದಲ್ಲೂ ಸ್ವರಲಿಪಿ ಮತ್ತು ಇದನ್ನು ಅನುಸರಿಸಿ ಸಾಹಿತ್ಯವನ್ನು ಹಾಡುವ ಕ್ರಮ ಸಾಮಾನ್ಯವಾಗಿದೆ.

ರಾಗಗಳಲ್ಲಿ ಗಮಕಗಳನ್ನು ಅನುಸರಿಸುವ ವಿವಿಧ ರಾಗಗಳನ್ನು ಗುರುತಿಸುವ ಜ್ಞಾನ ಈ ಸಂಶದಿಂದ ಬೆಳೆವಣಿಗೆಯಾಗುತ್ತಿದೆ.

ಸಂಚಾರಿ ಗೀತೆಗಳು ಕರ್ನಾಟಕ ಸಂಗೀತದ ಬಾಲಪಾಠದಲ್ಲಿ ಪಿಳ್ಳಾರಿ/ ಗೀತೆಗಳ ನಂತರದ ಪ್ರಮುಖ ಹಂತವಾಗಿದೆ.

ಉದ್ದೇಶ:

Ø ರೂಪಕತಾಳ, ಆದಿತಾಳ, ತ್ರಿಪುಟತಾಳ, ಏಕತಾಳಗಳ ತಾಳಲಕ್ಷಣವನ್ನು ತಿಳಿಸುವುದು, ತಾಳವನ್ನು ಹಾಕುವ ವಿಧಾನವನ್ನು ತೋರಿಸುವುದು (ಪ್ರಾತ್ಯಕ್ಷಿಕ).

Ø ಮೋಹನ, ಕಾಂಭೋಜಿ, ಕಲ್ಯಾಣಿ, ಆನಂದಭೈರವಿ ರಾಗಗಳ ರಾಗ ಲಕ್ಷಣಗಳನ್ನು ತಿಳಿಸುವುದು.

Ø ಜನಕ, ಜನ್ಯ ರಾಗಗಳ ವ್ಯತ್ಯಾಸ ಭಾಷಾಂಗ, ಉಪಾಂಗ, ಇತ್ಯಾದಿಗಳನ್ನು ತಿಳಿಸುವುದು.

Ø ರಾಗಗಳ ವರ್ಗಗಳಾದ ಔಡವ, ಷಾಡವ, ಸಂಪೂರ್ಣ, ವಕ್ರ ಇತ್ಯಾದಿಗಳ ಅರ್ಥ ಪರಿಚಯ ತಿಳಿಸುವುದು.

Ø ಮೋಹನ ರಾಗದ ಸಂಚಾರಿ ಗೀತೆಗಳನ್ನು ಸ್ವರಲಿಪಿಯೊಂದಿಗೆ ಬರೆಯುವುದು, ಹಾಡುವುದು.

Ø ಕಾಂಭೋಜಿ, ಕಲ್ಯಾಣಿ, ಆನಂದಭೈರವಿ.

Ø ಶೃತಿಬದ್ಧವಾಗಿ ಹಾಡುವುದು.

ಸ್ವಮೌಲ್ಯಮಾಪನ:

Ø ತಾಳಲಕ್ಷಣವನ್ನು ತಿಳಿಯುವ ಬಗ್ಗೆ ಪ್ರಶ್ನೋತ್ತರ.

Ø ರಾಗಲಕ್ಷಣ, ಜ್ಞಾನಪರೀಕ್ಷೆ.

Ø ಸಂಚಾರಿ ಗೀತೆಯನ್ನು ಶೃತಿಬದ್ಧವಾಗಿ ಸ್ವರ ಸಾಹಿತ್ಯದೊಂದಿಗೆ ಹಾಡಿಸುವುದು. (ವೈಯಕ್ತಿಕ / ಸಾಮೂಹಿಕ).

Ø ರಾಗಗಳ ವರ್ಗ – ತಿಳುವಳಿಕೆ ಪರೀಕ್ಷೆ.

Ø ತಪ್ಪುಗಳನ್ನು ತಿದ್ದುವುದು.

ಘಟಕಾಂತ್ಯದ ಪ್ರಶ್ನೆಗಳು:

Ø ಸಂಚಾರಿ ಗೀತೆಗಳೆಂದರೇನು?

Ø ಸಂಚಾರಿ ಗೀತೆಗಳು ಯಾವುವು?

Ø ಈ ರಾಗಗಳ ರಾಗಲಕ್ಷಣವನ್ನು ತಿಳಿಸಿ – ಮೋಹನ, ಕಾಂಭೋಜಿ, ಕಲ್ಯಾಣಿ, ಆನಂದಭೈರವಿ.

Ø ಈ ತಾಳಗಳ ತಾಳ ಲರ್ಕ್ಷಣ ತಿಳಿಸಿ – ಚ|| ರೂಪಕ, ತ್ರಿ|| ತ್ರಿಪುಟ, ಆದಿತಾಳ, ಚ|| ತ್ರಿಪುಟಿತಾಳ, ಏಕತಾಳ.

Ø ಔಡವ, ಷಾಡವ, ಸಂಪೂರ್ಣ, ವಕ್ರ, ವರ್ಗಗಳೆಂದರೇನು? ಉದಾಹರಣೆ ಕೊಡಿ.

Ø ರಾಗಾಂಗ, ಉಪಾಂಗ, ಭಾಷಾಂಗ ರಾಗಗಳೆಂದರೇನು? ಉದಾಹರಣೆ ಕೊಡಿ.

ಪ್ರಯೋಗ:

Ø ಮೋಹನ ರಾಗದ ಸಂಚಾರಿ ಗೀತೆಯನ್ನು ಹಾಡಿ (ಶೃತಿ / ತಾಳ / ಸ್ವರಬದ್ಧವಾಗಿ).

Ø ಕಲ್ಯಾಣಿ ರಾಗದ ಸಂಚಾರಿ ಗೀತೆಯನ್ನು ಹಾಡಿ (ಶೃತಿ / ತಾಳ / ಸ್ವರಬದ್ದವಾಗಿ).

Ø ಕಾಂಭೋಜಿ ರಾಗದ ಸಂಚಾರಿ ಗೀತೆಯನ್ನು ಹಾಡಿ (ಶೃತಿ / ತಾಳ / ಸ್ವರಬದ್ಧವಾಗಿ).

Ø ಆನಂದಭೈರವಿ ರಾಗದ ಸಂಚಾರಿ ಗೀತೆಯನ್ನು ಹಾಡಿ (ಶೃತಿ / ತಾಳ / ಸ್ವರಬದ್ಧವಾಗಿ).

ಉಪಸಂಹಾರ:

ಸಂಚಾರಿ ಗೀತೆಗಳು ಕರ್ನಾಟಕ ಸಂಗೀತದ ಪ್ರಮುಖ ಹಂತಗಳಲ್ಲಿ ಒಂದು. ಮೋಹನರಾಗದ ಗೀತೆಯ ನಂತರ ಕೆಲವು ಸಂಗೀತ ಸಂಪ್ರದಾಯದಲ್ಲಿ ಕಲ್ಯಾಣಿ, ಕಾಂಭೋಜಿ, ಆನಂದಭೈರವಿ ಗೀತೆಗಳು ಅದಲು ಬದಲಾಗಿರುವುದುಂಟು. ಆದರೆ ಇವು ಅತ್ಯವಶ್ಯಕವಾಗಿವೆ. ಇನ್ನು ಕೆಲವು ಸಂಪ್ರದಾಯದಲ್ಲಿ ಈ ನಾಲ್ಕು ಗೀತೆಗಳೊಂದಿಗೆ ಇನ್ನಕೆಲವು ಗೀತೆಗಳ ಸೇರ್ಪಡೆಯಾಗಿರುತ್ತವೆ. ಉದಾಹರಣೆ ಮಲಯಮಾರುತ, ಬೇಗಡೆ.

ಸಂಚಾರಿ ಗೀತೆ:

ಅವಧಿ:

Ø ಪೀಠಿಕೆ: ಗೀತೆ ಎಂಬುದು ಸಂಗೀತದ ಆರಂಭದ ಪಾಠ. ಗೀತವು ಸುಲಭನಡೆಯಲ್ಲಿದ್ದರೂ ಕೇಳಿದೊಡನೆ ಕಿವಿಗೆ ರಂಜನೆಯನ್ನು ಕೊಡುತ್ತದೆ. ಮತ್ತು ರಾಗದ ಛಾಯೆಯನ್ನು ಚೆನ್ನಾಗಿ ತಿಳಿಸುತ್ತದೆ. ರಾಗಗಳ ಸಂಚಾರವನ್ನೂ ಸಹ ತಿಳಿಸುತ್ತದೆ. ಗೀತದಲ್ಲಿರುವ ರಾಗ, ತಾಳ, ಸ್ವರ ಮತ್ತು ಪದ ಎಂಬ ನಾಲ್ಕು ಅಂಗಗಳಲ್ಲಿ ಮುಖ್ಯವಾದುದು ಪದ.

ಗೀತೆಗಳಲ್ಲಿ ಸಾಮಾನ್ಯ ಗೀತೆ, ಲಕ್ಷಣ ಗೀತೆ, ಘನರಾಗಗೀತೆ ಮತ್ತು ರಾಗಮಾಲಾಗೀತೆ ಎಂಬ ನಾಲ್ಕು ಬಗೆಗಳಿವೆ.

Ø ಉದ್ದೇಶ: ಇದರಿಂದ ಸಂಗೀತವನ್ನು ಕಲಿಯುವವರಿಗೆ ಸಾಹಿತ್ಯ ಅಥವಾ ಮಾತಿನ ಪರಿಚಯವಾಗುವುದು.

Ø ಕಲಿಕಾ ಸಾಮಾಗ್ರಿ: ತಂಬೂರಿ ಅಥವಾ ಶ್ರುತಿಪೆಟ್ಟಿಗೆ , ಮತ್ತು ಕಪ್ಪುಹಲಗೆ.

Ø ಕಲಿಕಾವಿಧಾನ:

ಹಂತ 1- ಆರೋಹಣ – ಅವರೋಹಣದೊಂದಿಗೆ ಸ್ವರ ಲಿಪಿ ಬರೆಯಿಸುವುದು.

ಹಂತ 2 – ಸಾಹಿತ್ಯವನ್ನು ಬರೆಯಿಸುವುದು.

ಹಂತ 3 – ರಾಗ – ತಾಳಗಳೊಂದಿಗೆ ಹಾಡಿ ತೋರಿಸುವುದು,

ಹಂತ 4 – ರಾಗಬದ್ಧವಾಗಿ ಹೇಳಿಕೊಡುವುದು.

ಹಂತ 5 – ತಪ್ಪುಗಳನ್ನು ತಿದ್ದುವುದು.

ಸ್ವಮೌಲ್ಯಮಾಪನ: 

ಗೀತೆಯ ಪರಿಚಯವಾಯಿತೇ?

ರಾಗ ಛಾಯೆಯ ಪರಿಚಯವಾಯಿತೇ?

ರಾಗ ಸಂಚಾರದ ಪರಿಚಯವಾಯಿತೆ?

ಗೀತೆಯ ಅಂಗಗಳ ಬಗ್ಗೆ ಅರಿತರೆ?

ನಾಲ್ಕು ಬಗೆಯ ಗೀತೆಗಳ ಪರಿಚಯವಾಯಿತೇ?

ತಾತ್ವಿಕ ಪ್ರಶ್ನೆಗಳು:

  1. ಗೀತೆ ಎಂದರೇನು?
  2. ಯಾವುದು ರಾಗ ಸಂಚಾರವನ್ನು ತಿಳಿಸುತ್ತದೆ?
  3. ಗೀತೆಯಲ್ಲಿ – – – – – ಅಂಗಗಳಿರುತ್ತವೆ.
  4. ಗೀತೆಗಳಲ್ಲಿ – – – – – – ವಿಧ.

ಸ್ವರಜತಿ:

ಅಧಿವೇಶನ – 21 (2)

ಅವಧಿ: 30 ನಿಮಿಷಗಳು

Ø ಪೀಠಿಕೆ: ಹೆಸರೇ ಸೂಚಿಸುವಂತೆ ಇದು ಸ್ವರೆಗಳ ಜತಿಗಳಿಂದ ಆದ ರಚನೆ, ಮಧ್ಯಲಯದಲ್ಲಿ ನಿಬದ್ಧವಾದ ರಚನೆ. ಇದರಲ್ಲಿ ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳೆಂಬ ಮೂರು ಖಂಡಗಳಿರುತ್ತವೆ. ಕೆಲವು ವೇಳೆ ಮಾತು ಇರುವುದಿಲ್ಲ. ಅನುಪಲ್ಲವಿಗೆ ಸಾಹಿತ್ಯವಿರುವುದಿಲ್ಲ. ಸ್ವರಜತಿಗಳು 18ನೇ ಶತಮಾನದ ಪ್ರಾರಂಭದ ಕಾಲದಲ್ಲಿ ರಚಿಸಲ್ಪಡಲು ಆರಂಭವಾಯಿತೆನ್ನಬಹುದು.

Ø ಉದ್ದೇಶ: ವರ್ಣಗಳನ್ನು ಕಲಿಯುವ ಮೊದಲು ಸಂಗೀತಾಭ್ಯಾಸಿಗಳು ಸ್ವರಗಳ ಹಿಡಿತವನ್ನು ಸಾಧಿಸಲು ಇದು ಬಹು ಉಪಯುಕ್ತವಾಗಿದೆ.

Ø ಕಲಿಕಾ ಸಾಮಾಗ್ರಿ: ತಂಬೂರಿ ಅಥವಾ ಶ್ರುತಿಪೆಟ್ಟಿಗೆ ಮತ್ತು ಕಪ್ಪು ಹಲಗೆ.

ಕಲಿಕಾವಿಧಾನ:

ಹಂತ 1- ಆರೋಹಣ, ಅವರೋಹಣದೊಂದಿಗೆ ಸ್ವರಗಳನ್ನು ತಿಳಿಸುವುದು.

ಹಂತ 2 – ಏರುಪೇರುಗಳನ್ನು ಮತ್ತು ಅದರ ನಡೆಗಳನ್ನು ಕಲಿಸುವುದು.

ಹಂತ 3 – ಸ್ವರ ಸಾಹಿತ್ಯದ ಬಗ್ಗೆ ತಿಳಿಸುವುದು.

ಹಂತ 4 – ಮಾತುವಿಗೂ, ಧಾತುವಿಗೂಯಿರುವವ್ಯತ್ಯಾಸವನ್ನು ತಿಳಿಸುವುದು.

ಸ್ವಮೌಲ್ಯಮಾಪನ:

ಸ್ವರಜತಿಗಳ ರಚನೆಯನ್ನು ತಿಳಿದರೇ?

ಮೂರು ಖಂಡಗಳ ಬಗ್ಗೆ ಅರಿತರೇ?

ರಚನೆ ಯವ ಕಾಲದಲ್ಲಿ ಆರಂಭವಾಯಿತೆಂಬುದನ್ನು ಅರಿತರೇ?

ತಾತ್ವಿಕ ಪ್ರಶ್ನೆಗಳು:

  1. ಸ್ವರ ಜತಿ ಎಂದರೇನು?
  2. ಇದರಲ್ಲಿ ಎಷ್ಟು ಖಂಡಗಳಿವೆ?
  3. ಯಾವ ಕಾಲದಲ್ಲಿ ರಚನೆಯು ಆರಂಭವಾಯಿತು?
  4. ಯಾವ ಕಾಲದಲ್ಲಿ ನಿಬದ್ದವಾಗಿದೆ?

ಪಂವಿಷ್ಣು ದಿಗಂಬರ ಪಲುಸ್ಕರರ ಜೀವನ ಚರಿತ್ರೆ

ಅಧಿವೇಶನ: 21 (3)

ಅವಧಿ: 90 ನಿಮಿಷ

ಪೀಠಿಕೆ:

ಇವರು ಜನಿಸಿದ್ದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರಂದವಾಡದಲ್ಲಿ 1872ರ ಆಗಸ್ಟ್ 18 ರಂದು ಪಲುಸ್ಕರರು ಹನ್ನರಡನೇ ವಯಸ್ಸಿನಲ್ಲಿರುವಾಗ ದೀಪಾವಳಿ ಹಬ್ಬದ ಪಟಾಕಿ ಹಚ್ಚುವ ಸಂದರ್ಭದಲ್ಲಿ ಸಿಡಿಮದ್ದಿನ ಆಕಸ್ಮಿಕ ಸ್ಫೋಟಕ್ಕೆ ಅವರ

ಕಣ್ಣುಗಳು ದೃಷ್ಟಿಹೀನವಾದವು. ಇದರಿಂದ ಶಾಲಾ ಶಿಕ್ಷಣದಿಂದ ವಂಚಿತರಾಗಿ ಸಂಗೀತಾಭ್ಯಾಸ ಮಾಡಿದರು. ಪಲುಸ್ಕರರು ಸುಮಧುರ ಕಂಠ, ಸಂಗೀತದ ಬಗೆಗಿನ ಒಲವನ್ನು ಗಮನಿಸಿ, ಅಂದಿನ ಮೀರಜ್ ಸಂಸ್ಥಾನದ ಮಹಾರಾಜರು ತಮ್ಮ ಆಸ್ಥಾನ ಸಂಗೀತಗಾರರಾಗಿದ್ದ ಪಂ. ಬಾಲಕೃಷ್ಣಬುವಾ ಈಚಲಕರಂಜೇಕರರ ಬಳಿ ಸಂಗೀತ ಕಲಿಯಲು ಏರ್ಪಾಡು ಮಾಡಿದರು. ಪಲುಸ್ಕರರು ಬಾಲಕೃಷ್ಣರ ಶಿಷ್ಯರಾಗಿ ಹನ್ನೆರಡು ವರ್ಷ ನಿರಂತರವಾಗಿ ಸಂಗೀತ ಸಾಧನೆಮಾಡಿ ಉತ್ತಮ ಕಲಾವಿದರೆಂದು ಖ್ಯಾತರಾದರು. ಅಂದಿನ ಕಾಲದಲ್ಲಿ ಅರಮನೆಯ ಸುಖಭೋಗದ ವಸ್ತುವಾಗಿದ್ದ ಸಂಗೀತಕಲೆಯನ್ನು ಜನಸಾಮಾನ್ಯರ ಸ್ವತ್ತಾಗಿಸಲು ಪಣತೊಟ್ಟು ಶ್ರಮಿಸಿದರು. ಸಂಗೀತದಲ್ಲಿ ಭಕ್ತಿಪರ ಗೀತ ರಚನ ಸಾಹಿತ್ಯವನ್ನು ರಚಿಸಿದರು. ದೇಶದ ಹಳ್ಳಿ ಹಳ್ಳಿಗಳಲ್ಲಿ ಸಂಗೀತಸಂಚಾರಿಗಳಾಗಿ ಸಂಗೀತ ಸೇವಾಕಾರ‍್ಯ ಕೈಗೊಂಡರು. 1901ರಲ್ಲಿ ಲಾಹೋರನಲ್ಲಿ, 1908ರಲ್ಲಿ ಮುಂಬೈನಲ್ಲಿ ಸಂಗೀತಾಸಕ್ತ ವಿದ್ಯಾರ್ಥಿಗಳ ಅನುಕೂಲಕ್ಕೆ ಗಂಧರ್ವ ಮಹಾವಿದ್ಯಾಲಯವೆಂಬ ಸಂಗೀತ ಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆಗಾಗಿ ಶುಭ ತುಲಸೀರಾಮಾಯಣವನ್ನು ಸಂಗೀತ ರೂಪಕದಲ್ಲಿ ಕೀರ್ತನೆ ಮಾಡಿ ಹಣ ಸಂಗ್ರಹಿಸಿದರು. ತಾವೇ ನಿರ್ಮಿಸಿದ ಸ್ವರಲಿಪಿ ಪದ್ಧತಿಯಲ್ಲಿ ಅನೇಕ ಶಾಸ್ತ್ರೀಯ ಭಕ್ತಿಪರ ರಚನೆಗಳನ್ನು ಲಿಪಿಬದ್ಧಗೊಳಿಸಿ ಗ್ರಂಥರೂಪದಲ್ಲಿ ಪ್ರಕಟಿಸಿದರು. ಸುಮಾರು ಐವತ್ತು ಸಂಗೀತ ಗ್ರಂಥಗಳನ್ನು ರಚಿಸಿದರು. ಇವರ ಹಲವಾರು ಶಿಷ್ಯರು ನಾಡಿನ ಪ್ರಖ್ಯಾತ ಸಂಗೀತಗಾರರಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಬಹಳ ನೋವನ್ನುಂಡರೂ ನಾಡಿನ ಸಂಗೀತ ಕ್ಷೇತ್ರಕ್ಕೆ ಅತಿಮಹತ್ವದ ಕೊಡುಗೆ ನೀಡಿದ ಈ ಮಹಾನ್ ಸಂಗೀತ ಯೋಗಿ ತಮ್ಮ 59ನೇ ವಯಸ್ಸಿನಲ್ಲಿ 1931ರ ಆಗಸ್ಟ್ 21 ರಂದು ನಿಧನರಾದರು.

ಉದ್ದೇಶ:

Ø ಸರಿಗೀತ ಸಾಧಕರ ಜೀವನ ಚರಿತ್ರೆಯ ಮೂಲಕ ಸಂಗೀತದ ಕುರಿತು ಆಸಕ್ತಿ ಬೆಳೆಸುವುದು.

Ø ಸಂಗೀತ ಕ್ಷೇತ್ರಕ್ಕೆ ಪಲುಸ್ಕರರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸುವುದು.

Ø ಪಲುಸ್ಕರರು ಸಂಗೀತದ ಪ್ರಚಾರಕ್ಕಾಗಿ ಕೈಗೊಂಡ ಕಾವ್ಯಗಳ ಕುರಿತು ತಿಳಿಸುವುದು.

Ø ಸಂಗೀತಗಾರರ ಜೀವನ ಸಾಧನೆ ಕುರಿತು ಆಸಕ್ತಿ ಮೂಡಿಸುವುದು.

ಕಲಿಕಾ ಸಾಮಗ್ರಿ: ಭಾವಚಿತ್ರ, ಸಾಕ್ಷ್ಯಚಿತ್ರ, ಆಡಿಯೋ / ವಿಡಿಯೋ

ಕಲಿಕಾ ವಿಧಾನ:

ಹಂತ – 1 — ಪಲುಸ್ಕರರ ಬಾಲ್ಯ ಜೀವನ ಕುರಿತು ವಿವರಿಸುವುದು.

       ಭಾವಚಿತ್ರ, ಪ್ರದರ್ಶನ

ಹಂತ – 2 — ಪಲುಸ್ಕರರ ಸಂಗೀತಾಭ್ಯಾಸದ ಬಗ್ಗೆ ತಿಳಿಸುವುದು.

ಹಂತ – 3 — ಪಲುಸ್ಕರರ ಸಂಗೀತ ಸಂಚಾರ, ಸಾಧನೆ ಬಗ್ಗೆ ವಿವರಿಸುವುದು.

ಹಂತ – 4 — ಪಲುಸ್ಕರರ ವೈಯಕ್ತಿಕ ಜೀವನದ ಕುರಿತು ತಿಳಿಸುವುದು.

ಹಂತ – 5 — ಸಂಗೀತ ಕ್ಷೇತ್ರಕ್ಕೆಪಲುಸ್ಕರರ ಕೊಡುಗೆಗಳನ್ನು ಗುರುತಿಸುವುದು.

ಹಂತ – 6 — ಪಲುಸ್ಕರರಿಗೆ ದೊರೆತ ಪುರಸ್ಕಾರಗಳನ್ನು ತಿಳಿಸುವುದು.

ಹಂತ – 7 — ಪಲುಸ್ಕರರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ, ಆಡಿಯೋ / ವಿಡಿಯೋ ಪ್ರದರ್ಶನ

ಸ್ವಮೌಲ್ಯಮಾಪನೆ:

Ø ಪಲುಸ್ಕರರನ್ನು ಗುರುತಿಸುವರೆ?

Ø ಪಲುಸ್ಕರರ ಸಂಗೀತಾಭ್ಯಾಸದ ಕುರಿತು ತಿಳಿದಿರುವರೆ?

Ø ಪಲುಸ್ಕರರ ಗಾಯನವನ್ನು ಆಸಕ್ತಿಯಿಂದ ಕೇಳುವರೆ?

Ø ಪಲುಸ್ಕರರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ತಿಳಿದಿರುವರೆ?

ಘಟಕಾಂತ್ಯದ ಪ್ರಶ್ನೆಗಳು:

Ø ಪಲುಸ್ಕರರ ಜನ್ಮಸ್ಥಳ ______________ .

Ø ಪಲುಸ್ಕರರ ತಂದೆ ತಾಯಿಗಳ ಹೆಸರೇನು?

Ø ಈ ಪಲುಸ್ಕರರ ಸಂಗೀತ ಗುರುಗಳು ಯಾರು?

Ø ಪಲುಸ್ಕರರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಪಟ್ಟಿಮಾಡಿ.

Ø ಪಲುಸ್ಕರರು ಶಿಷ್ಯರ ಹೆಸರುಗಳನ್ನು ಹೆಸರಿಸಿ.

Ø ಪಲುಸ್ಕರರು ರಚಿಸಿದ ಗ್ರಂಥಗಳನ್ನು ಪಟ್ಟಿಮಾಡಿ.

  1. ಚಟುವಟಿಕೆ

ಪಂ. ವಿಷ್ಣು ದಿಗಂಬರ ಪಲುಸ್ಕರರ ಜೀವನ ಚರಿತ್ರೆಯನ್ನು ಬರೆಯಿರಿ.

ಪಂ. ಪಲುಸ್ಕರರ ಭಾವಚಿತ್ರವನ್ನು ಸಂಗ್ರಹಮಾಡಿರಿ.

ಆಕರ ಗ್ರಂಥಗಳು:

  1. ಸಂಗೀತ ವಿಶಾರದ : ವಸಂತ.
  2.  ಹಿಂದುಸ್ತಾನಿ ಸಂಗೀತಗಾರರು : ಭಾಗ 1.

– ಪ್ರೊ: ಸಿದ್ದರಾಮಯ್ಯ ಮಠಪತಿ

ಅಧಿವೇಶನ 22 ಕಂಠಪಾಠ ಹಿಂದಿ

ಅಧಿವೇಶನ 23 ಭಾವೈಕತಾಗೀತೆ ಕಂಠಪಾಠ

ರಾಗಗಳು

ಅಧಿವೇಶನ: 24.

ಅವಧಿ: 90 ನಿಮಿಷಗಳು

ಪೀಠಿಕೆ: ರಾಗವು ಭಾರತೀಯ ಸಂಗೀತದ ಜೀವನಾಡಿಯಾಗಿದ್ದು, ಭಾರತೀಯ ಸಂಗೀತದ ಆತ್ಮವಾಗಿದೆ. ಜಗತ್ತಿನ ಸಂಗೀತ ಪ್ರಪಂಚಕ್ಕೆ ಭಾರತವು ಕೊಡಮಾಡಿದ ಅತ್ಯಮೋಘ ಕೊಡುಗೆಯಾಗಿದೆ. ಸಾಮಾನ್ಯವಾಗಿ ನಮಗೆ ಕೇಳಿ ಬರುವ ಎಲ್ಲಾ ಹಾಡುಗಳು ರಾಗದ ಪರಿಧಿಯಲ್ಲೇ ಇರುವುದನ್ನು ಗಮನಿಸಬಹುದು. ಈ ಹಿನ್ನಲೆಯಲ್ಲಿ ರಾಗದ ಅರ್ಥ, ಲಕ್ಷಣಗಳು ರಾಗಗಳ ಪರಿಚಯ ವಿದ್ಯಾರ್ಥಿಗಳಿಗೆ ಅತ್ಯವಶ್ಯವಾಗಿದೆ.

ಕೇಳುಗರ ಮನಸ್ಸಿಗೆ ಆನಂದವನ್ನುಂಟು ಮಾಡುವ ಸ್ವರವರ್ಣಗಳ ಸುಂದರ ರಚನೆಗೆ ರಾಗವೆನ್ನುವರು. “ರಂಜಯತಿ ಇತಿ ರಾಗ:” ಎನ್ನುವಂತೆ ರಾಗವು ಶ್ರೋತೃಗಳ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುತ್ತದೆ.

ಸಂಗೀತದ ಕಲಿಕೆಯ ಅತ್ಯಂತ ಪ್ರಮುಖ ಘಟ್ಟವೇ ರಾಗ. ಸಾಮಾನ್ಯವಾಗಿ ಸರಳೆ ಜಂಟಿಸರಳೆ. ಅಲಂಕಾರಗಳು ಮುಂತಾದ ಪ್ರಾರಂಭಿಕ ಸ್ವರಾಭ್ಯಾಸಗಳು ಮುಗಿದ ನಂತರ ರಾಗಗಳನ್ನು ಕಲಿಸಲು ಪ್ರಾರಂಭಿಸಲಾಗುತ್ತದೆ.

ಹಾಗಾದರೆ ರಾಗ ಎಂದರೆ ಏನು ಎಂದು ತಿಳಿಯೋಣ.

ಸಂಗೀತದಲ್ಲಿರುವ ಅಷ್ಟೂ ಸ್ವರಗಳಲ್ಲಿ ಕೆಲವು ಸ್ವರಗಳನ್ನು ಆಯ್ಕೆ ಮಾಡಿಕೊಂಡು, ಅವುಗಳ ಒಂದು ಗುಂಪು ಮಾಡಿ, ಅದಕ್ಕೆ ಒಂದು ಹೆಸರನ್ನು ಕೊಟ್ಟು, ಆ ಸ್ವರಗಳನ್ನು ವಿಸ್ತರಿಸಿ, ವಿಧ ವಿಧವಾಗಿ ಹಾಡುವುದಕ್ಕೆ ‘ರಾಗ’ ಎನ್ನಬಹುದು.

ರಾಗಗಳನ್ನು ಮಾಡುವುದಕ್ಕೂ ಕೆಲವು ನಿಯಮಗಳಿವೆ. ಉದಾ: ಕನಿಷ್ಠ 5 ಸ್ವರಗಳನ್ನು ಹೊಂದಿರಲೇಬೇಕು. ಷಡ್ಜ ಇರಲೇಬೇಕು, ಪಂಚಮ ಅಥವಾ ಮಧ್ಯಮವನ್ನು ಹೊಂದಿರಲೇಬೇಕು ಇತ್ಯಾದಿ.

ಹಾಲಿ ನೂರಾರು ರಾಗಗಳಿವೆ. ಉದಾಹರಣೆಗೆ ಪುರಾತನ ರಾಗಗಳು, (ಭೂಪಾಲಿ, ಯಮನ್, ಸಾರಂಗ್ ಇತ್ಯಾದಿ) ಜನಪದ ಮಟ್ಟುಗಳ ಆಧಾರಿತ ರಾಗಗಳು, (ದೇಸ್, ಪಹಾಡಿ ಇತ್ಯಾದಿ) ಈಗಲೂ ನುರಿತ ಸಂಗೀತಗಾರರು ಹೊಸ ಹೊಸ ರಾಗಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಉದ್ದೇಶ:

Ø ಈ ರಾಗದ ಅರ್ಥ, ಮಹತ್ವ ಅರಿಯುವಂತೆ ಮಾಡುವುದು.

Ø ರಾಗಗಳು ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವವನ್ನು ಗುರುತಿಸುವಂತೆ ಮಾಡುವುದು.

Ø ಸ್ವರ ಜ್ಞಾನ, ತಾಳಜ್ಞಾನವನ್ನು ಹೆಚ್ಚುಗೊಳಿಸುವುದು.

Ø ಕಲ್ಪನಾ ಶಕ್ತಿಯನ್ನು (Creativity) ಬೆಳೆಸುವುದು.

Ø ರಾಗಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು.

Ø ಸ್ವತಂತ್ರವಾಗಿ ರಾಗವನ್ನು ವಿಸ್ತರಿಸುವುದನ್ನು ಕಲಿಸುವುದು.

Ø ರಾಗ ಸಂಗೀತದಲ್ಲಿ ಆಸಕ್ತಿ ಬೆಳೆಸುವುದು.

 ಅಧ್ಯಯನಲ್ಲಿ ಅಳವಡಿಸಿರುವ ಹೊಸ ಅಂಶಗಳು:

ರಾಗದ ಆರ್ಥ, ಮಹತ್ವ, ರಾಗದ ಲಕ್ಷಣಗಳು, ರಾಗಕ್ಕೆ ಸಂಬಂಧಿಸಿದ ಪಾರಿಭಾಷಿಕ ಶಬ್ಬಗಳು.

ಕಲಿಕಾ ಸಾಮಗ್ರಿ: ತಂಬೂರಿ / ಹಾರ್ಮೋನಿಯಂ / ತಬಲ / ಧ್ವನಿ ಮುದ್ರಿಕೆಗಳು / ವೀಡಿಯೋಗಳು / ಪಿಪಿಟಿ / ಚಾರ್ಟಗಳು.

ಕಲಿಕಾ ಹಂತ: ವಿವರಣೆ, ಪ್ರಾತ್ಯಕ್ಷಿಕೆ, ಗಾಯನ, ವೀಡಿಯೋಗಳ ಪ್ರದರ್ಶನ.

ಹಂತ 1: ರಾಗದ ಅರ್ಥ ವ್ಯಾಖ್ಯೆಗಳು, ಲಕ್ಷಣಗಳು, ಮಹತ್ವವನ್ನು ವಿವರಿಸುವುದು.

ಹಂತ 2: ಕಪ್ಪು ಹಲಗೆಯ ಮೇಲೆ ಆರೋಹಣ / ಅವರೋಹಣ / ಪಕ್ಕಡ ಸ್ವರಗಳನ್ನು (ಮುಖ್ಯಾಂಗ ಸ್ವರಗಳನ್ನು) ಬರೆದು ಹಾಡಿಸಬೇಕು. ನಂತರ ವಿದ್ಯಾರ್ಥಿಗಳನ್ನು ನೇರವಾಗಿ, ಕಣ್ಣು ಮುಚ್ಚಿ ಕುಳಿತುಕೊಳ್ಳಲು ಹೇಳಿ ಆಲಾಪ್ ಮಾಡಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಮೂಡಿಸಿದಂತಾಗುತ್ತದೆ.

ಹಂತ 3: ರಾಗಕ್ಕೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳನ್ನು ಪರಿಚಯಿಸುವುದು. (ಥಾಟ್ ರಾಗ, ಆರೋಹಣ, ಅವರೋಹಣ, ವಾದಿ, ಸಂವಾದಿ, ವಿವಾದಿ, ಅನುವಾದಿ ಸ್ವರಗಳು, ಮುಖ್ಯಾಂಗ, ಜಾತಿ, ಗಾಯನ ಸಮಯ, ರಸ, ಸ್ವರ ಗೀತೆ, ಲಕ್ಷಣ ಗೀತೆ, ಛೋಟಾಖ್ಯಾಲ್ ಇತ್ಯಾದಿ).

ಹಂತ 4: ರಾಗದ ಸ್ವರಗಳನ್ನು ಮೆಟ್ಟಿಲಿನ ಆಕಾರದಲ್ಲಿ ಕಪ್ಪು ಹಲಗೆಯ ಮೇಲೆ ಬರೆದು, ಒಂದು ಕೋಲಿನಿಂದ ನಾವು ಮಾಡುತ್ತಿರುವ ಸ್ವರವನ್ನು ತೋರಿಸುತ್ತಾ ಹಾಡುವುದರಿಂದ ಮಕ್ಕಳು ಸ್ವರಗಳ ಏರಿಳಿತವನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಉದಾ: ಮಾಲ್‌ಕೌಂಸ್ ರಾಗ.

ಹಂತ 5: ಪ್ರಸ್ತುತ ರಾಗದಲ್ಲಿರುವ ಪ್ರಸಿದ್ಧ ಗೀತೆಗಳನ್ನು ಹಾಡಿ ತೋರಿಸುವುದು.

ಹಂತ 6: ರಾಗದ ಸ್ವರಗೀತೆ, ಲಕ್ಷಣಗೀತೆ, ಛೋಟಾಖ್ಯಾಲ್‌ಗಳನ್ನು ಹಲವಾರು ಬಾರಿ ಹಾಡಿ ವಿದ್ಯಾರ್ಥಿಗಳಿಗೆ ಕಲಿಸುವರು.

ಹಂತ 7: ರಾಗಗಳಿಗೆ ಸಂಬಂಧಿಸಿದ ಧ್ವನಿ ಮುದ್ರಿಕೆಗಳನ್ನು ಕೇಳಿಸುವುದು / ವಿಡಿಯೋಗಳನ್ನು ತೋರಿಸುವುದು.

ಹಂತ 8: ವಿದ್ಯಾರ್ಥಿಗಳಿಂದ ಕಲಿತ ರಾಗಗಳ ಆರೋಹ / ಅವರೋಹ, ಸ್ವರಗೀತೆ, ಲಕ್ಷಣಗೀತೆ, ಛೋಟಾಖ್ಯಾಲ್‌ಗಳನ್ನುನ ಹಾಡಿಸುವುದು.

ಸ್ವಮೌಲ್ಯ ಮಾಪನ:

Ø ರಾಗದ ಅರ್ಥವನ್ನು ತಿಳಿದಿರುವರೆ?

Ø ರಾಗದ ಲಕ್ಷಣಗಳನ್ನು ತಿಳಿದಿರುವರೆ?

Ø ರಾಗವನ್ನು ಗುರುತಿಸಲು ಬಲ್ಲರೆ?

Ø ರಾಗಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವರೆ?

Ø ರಾಗಗಳನ್ನು ಹಾಡುವಲ್ಲಿ ಆಸಕ್ತಿಯನ್ನು ಹೊಂದಿರುವರೆ?

Ø ರಾಗವೇ ಸಂಗೀತದ ಜೀವಾಳ (ಮೂಲ) ಎಂಬುದನ್ನು ಅರ್ಥೈಸಿಕೊಂಡಿದ್ದಾರೆಯೇ?

Ø ರಾಗಗಳನ್ನು ಚೆನ್ನಾಗಿ ಅಭ್ಯಾಸ ಮಾಡುವುದರಿಂದ ಹಾಡುಗಳಿಗೆ ತಾವೇ ಸ್ವತಃ ರಾಗ ಸಂಯೋಜನೆ ಮಾಡಬಹುದು ಎಂಬುದನ್ನು ತಿಳಿದಿದ್ದಾರೆಯೇ?

ಘಟಕಾಂತ್ಯದ ಪ್ರಶ್ನೆಗಳು:

Ø ರಾಗ ಎಂದರೇನು?

Ø ರಾಗದ ಲಕ್ಷಣಗಳಾವುವು?

Ø ರಾಗ ಭೀಮಪಲಾಸ ಮತ್ತು ಭೈರವ ರಾಗಕ್ಕಿರುವ ವ್ಯತ್ಯಾಸವೇನು?

Ø ರಾಗ ಮಾಲಕಂಸವನ್ನು ಯಾವ ಸಮಯದಲ್ಲಿ ಹಾಡಬೇಕು?

Ø ಭಾಗೇಶ್ರೀ ರಾಗದ ವಾದಿ ಸ್ವರ ______________

Ø ಭೈರವ ರಾಗದ ಗಾಯನ ಸಮಯ ______________

ಚಟುವಟಿಕೆ

______________  ರಾಗದ ಪರಿಚಯ ಬರೆದು ಸ್ವರ ಗೀತೆ, ಲಕ್ಷಣಗೀತೆ ಮತ್ತು ಛೋಟಾಖ್ಯಾಲ್ ನ್ನು ಬರೆಯಿರಿ.

ಆಕರ ಗ್ರಂಥಗಳು:

ಕ್ರಮಿಕ ಪುಸ್ತಕ ಮಾಲಿಕಾ: ಡಾ|| ವಿ. ಎನ್. ಭಾತಖಂಡೆ

ಸಂಗೀತ ವಿಶಾರದ: ವಸಂತ

ದೇವರನಾಮ

ಅಧಿವೇಶನ – 25

ಅವಧಿ: 45 ನಿಮಿಷಗಳು

ಪೀಠಿಕೆಭಗವಂತನನ್ನು ಹೊಗಳಿ ಹಾಡುವ ಗೀತೆಯನ್ನು ದೇವರನಾಮ ಎನ್ನಬಹುದು. ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳನ್ನು ಹೊಂದಿರುವ ಹರಿದಾಸರ ಹಾಡುಗಳಿಗೆ ದೇವರನಾಮವೆಂಬ ಹೆಸರಿದೆ. ಈ ಪದ್ಧತಿಯೇ ಮುಂದೆ ಕೃತಿಯ ಸ್ವರೂಪಕ್ಕೂ ಮಾದರಿಯಾಯಿತು. ದೇವರನಾಮದಲ್ಲಿ ಕೊನೆಯ ಚರಣದಲ್ಲಿ ವಾಗ್ಗೇಯಕಾರನ ಅಂಕಿತವಿರುತ್ತದೆ. ಕರ್ನಾಟಕ ಹಿಂದೂಸ್ಥಾನಿ ಪದ್ಧತಿಗಳಲ್ಲಿ ಗಾಯಕರು ತಮ್ಮ ಅಭಿರುಚಿಗೆ ಅನುಗುಣವಾಗಿ ರಾಗತಾಳಗಳನ್ನು ಅನ್ವಯಿಸಿಕೊಂಡು ಹಾಡುವುದು ಬಳಕೆಗೆ ಬಂದಿದೆ.

ಕನ್ನಡನಾಡಿನಲ್ಲಿ ವೈಷ್ಣವಪಂಥದ ಅನುಯಾಯಿಗಳಾದ ಮಾಧ್ವ ಸಂಪ್ರದಾಯದಲ್ಲಿ ಆದ್ಯರೆಂದು ಪ್ರಸಿದ್ದರಾಗಿದ್ದ 60 ಮಂದಿ ಪುರಾತನರು 13 – 14ನೇ ಶತಮಾನದಲ್ಲೇ ದೇವರನಾಮಗಳನ್ನು ಮಾಡಿದ್ದರೆಂಬ ನಂಬಿಕೆ ಇದೆ. 14ನೇ ಶತಮಾನದ ಕಾಲದಲ್ಲಿದ್ದ ನರಹರಿತೀರ್ಥರ ಕೆಲವು ದೇವರನಾಮಗಳು ದೊರೆತಿವೆ. ಅಲ್ಲಿಂದ ಇಲ್ಲಿಯವರೆಗೆ ಕನ್ನಡ ನಾಡಿನ ದಾಸಕೂಟ ಮತ್ತು ವ್ಯಾಸಕೂಟದವರು ಕನ್ನಡದಲ್ಲಿ ರಚಿಸಿರುವ ಸಾವಿರಾರು ದೇವರನಾಮಗಳಿವೆ.

ಕೇವಲ ಹರಿದಾಸರು ಮಾತ್ರವಲ್ಲದೆ ಸಂಗೀತ ಮಾರ್ಗದಲ್ಲಿ ಲಕ್ಷ್ಮೀಶ, ನಿಜಗುಣಶಿವಯೋಗಿ, ಸರ್ಪಭೂಷಣ ಶಿವಯೋಗಿಯೇ ಮುಂತಾದವರು ದೇವರನಾಮಗಳನ್ನು ರಚಿಸಿದ್ದಾರೆ.

ಶ್ರೀಪಾದರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು, ಬೇಲೂರು ವೈಕುಂಠದಾಸರು, ವಾದಿರಾಜಸ್ವಾಮಿಗಳು, ವಿಜಯದಾಸರು, ಜಗನ್ನಾಥದಾಸರು, ಪ್ರಸನ್ನ ವೆಂಕಟದಾಸರು, ಮಹಿಪತಿದಾಸರು, ಸುರಪುರದ ಆನಂದದಾಸರು, ಗೋಪಾಲದಾಸರು, ಮೋಹನದಾಸರು ಮುಂತಾದ ಹರಿದಾಸರನ್ನು ಹೆಸರಿಸಬಹುದು.

ಉದ್ದೇಶ:

Ø ಸಂಗೀತಕ್ಷೇತ್ರದಲ್ಲಿ ದೇವರನಾಮಗಳ ಅವಶ್ಯಕತೆಯನ್ನು ತಿಳಿಸುವುದು.

Ø ದೇವರನಾಮದ ಅರ್ಥ, ವಿವರಣೆ ತಿಳಿಸುವುದು.

Ø ಹರಿದಾಸರ ಉದ್ದೇಶಗಳನ್ನು ಅರಿಯುವಂತೆ ಮಾಡುವುದು.

Ø ಸಮಾಜಕ್ಕೆ ಹರಿದಾಸರ, ದೇವರನಾಮಗಳ ಕೊಡುಗೆಯ ಬಗ್ಗೆ ತಿಳಿಸುವುದು.

ಕಲಿಕಾಹಂತ:

Ø ಒಂದು ದೇವರ ಭಜನೆಯನ್ನು ಹಾಡಿ ವಿದ್ಯಾರ್ಥಿಗಳಿಗೆ ಕೇಳಿಸುವುದು.

Ø ರಾಗ ತಾಳಗಳ ಸರಳತೆಯ ಬಗ್ಗೆ ತಿಳಿಯಪಡಿಸುವುದು.

Ø ಭಗವಂತನ ನಾಮಾವಳಿಯನ್ನು ಭಜನೆಯ ರೂಪದಲ್ಲಿ ಹಾಡುವ ಗೀತೆಯನ್ನು ಸಂಕೀರ್ತನೆ ಎಂದೂ ಸಂಕೀರ್ತನೆ ಮಾಡುವ ಹಾಡನ್ನು ನಾಮಾವಳಿ ಎಂದು, ಇದು ಇನ್ನೊಂದು ಸ್ವರೂಪವನ್ನು ದೇವರನಾಮ ಎಂದು ತಿಳಿಸುವುದು.

Ø ಒಂದು ದೇವರನಾಮವನ್ನು ಉದಾಹರಣೆಯೊಂದಿಗೆ ಪ್ರಸ್ತುತ ಪಡಿಸುವುದು.

ಸ್ವಮೌಲ್ಯಮಾಪನ

Ø ದೇವರನಾಮದ ಮೂಲ, ಅರ್ಥ ತಿಳಿದುಕೊಂಡರೇ?

Ø ದೇವರನಾಮ ಪ್ರಾಮುಖ್ಯತೆ, ಅವಶ್ಯಕತೆಯನ್ನು ಅರಿತುಕೊಂಡರೆ?

Ø ಹರಿದಾಸರ, ದಾಸಸಂಪ್ರದಾಯದ ಬಗ್ಗೆ ಅರಿವು ಮೂಡಿತೇ?

Ø ಕನ್ನಡ ಭಾಷೆಗೆ, ಕನ್ನಡನಾಡಿಗೆ ಮತ್ತು ಸಮಾಜಕ್ಕೆ ಹರಿದಾಸರ ಕೊಡುಗೆಯನ್ನು ಅರಿತರೇ?

ವಚನಗಳು

ಅಧಿವೇಶನ: 25 (1)

ಅವಧಿ: 45 ನಿಮಿಷ

ಪೀಠಿಕೆ: ವಚನವೆಂದರೆ ಸಾಮಾನ್ಯವಾದ ಭಾಷೆಯಲ್ಲಿ ಮಾತು – ಎಂದರ್ಥ. ಆಳವಾದ ವಿಚಾರಗಳನ್ನು ಸರಳವಾಗಿ, ಸಹಜವಾಗಿ ಮನಮುಟ್ಟುವಂತೆ ತಿಳಿಸುವ ಸುಲಭವಾದ ಮಾತುಗಳೇ ವಚನಗಳು. ಇದು ಕನ್ನಡ ಭಾಷೆಯಲ್ಲಿವೆ. ಸುಮಾರು 12 ನೇ ಶತಮಾನದ ವೇಳೆಗೆ ಅಲ್ಲಮ ಪ್ರಭು, ಬಸವಣ್ಣನವರೇ ಆದಿಯಾಗಿ ಶಿವಶರಣರು ಕನ್ನಡ ಸಾಹಿತ್ಯದಲ್ಲಿ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದರು. ಇವರು ತಮ್ಮ ಧರ್ಮ ಬೋಧನೆಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ. ಈ ವಚನಗಳು ಸುಂದರವೂ ಮನಮೋಹಕವೂ ಆಗಿದೆ. ಇವು ಹಲವು ನಾಣ್ಣುಡಿಗಳನ್ನೊಳಗೊಂಡು ಹೃದಯಂಗಮವಾಗಿವೆ. ಈ ವಚನಗಳು ಸಾಮಾನ್ಯವಾಗಿ ಗದ್ಯರೂಪದಲ್ಲಿದ್ದರೂ ಹಾಡಲು ಸಾಧ್ಯವಾಗಿದೆ.

ಉದ್ದೇಶ:

Ø ವಚನಕಾರರನ್ನು ಪರಿಚಯಿಸುವುದು.

Ø ವಚನಗಳನ್ನು ಆಸಕ್ತಿಯಿಂದ ಹಾಡುವಂತೆ ಮಾಡುವುದು.

Ø ವಚನಕಾರರನ್ನು ಗುರುತಿಸುವ ಕೌಶಲ್ಯ ಬೆಳೆಸುವುದು.

Ø ವಚನಗಳಲ್ಲಿನ ತತ್ತ್ವಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.

 ಅಧ್ಯಯನದಲ್ಲಿ ಅಳವಡಿಸಿರುವ ಹೊಸ ಅಂಶಗಳು:

ವಚನಗಳ ಮಹತ್ವ, ವಚನಕಾರರ ಸಂಕ್ಷಿಪ್ತ ಪರಿಚಯ.

ಕಲಿಕಾ ಸಾಮಗ್ರಿ: ಚಾರ್ಟಗಳು, ಆಡಿಯೋ ವಿಡಿಯೋಗಳು, ಚಿತ್ರಪಟ, ವಾದ್ಯಗಳು.

ಶಿಕ್ಷಕರ ಪಾತ್ರ: ಶಿಕ್ಷಕರು ವಚನಾಕಾರರ ಕುರಿತು ವಿವರವಾಗಿ ತಿಳಿದಿರಬೇಕು.

ಕಲಿಕಾ ವಿಧಾನ: ಗಾಯನ, ವಿವರಣೆ,

 ಹಂತ 1 – ವಚನಗಳ ಅರ್ಥ, ಮಹತ್ವ ವಿವರಿಸಿ ವಚನಕಾರರನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು.

ಹಂತ 2 – ವಚನಗಳನ್ನು ಭಾವಾರ್ಥದೊಂದಿಗೆ ವಿವರಿಸಿ ಬರೆಯಿಸುವುದು.

ಹಂತ 3 – ವಚನಗಳನ್ನು ಸ್ವರ, ಲಯ, ಸಾಹಿತ್ಯ ಶುದ್ಧವಾಗಿ ಗಾಯನ ಮಾಡಿ ತೋರಿಸುವುದು. ಹಂತ 4 – ವಿದ್ಯಾರ್ಥಿಗಳಿಗೆ ವಚನಗಳನ್ನು ಹಾಡಲು ಹೇಳಿಕೊಡುವುದು.

ಹಂತ 5 – ವಿದ್ಯಾರ್ಥಿಗಳಿಂದ ಕಲಿಸಿದ ವಚನಗಳನ್ನು ಹಾಡಿಸುವುದು.

ಹಂತ 6 – ವಚನಗಳಿಗೆ ಸಂಬಂಧಿಸಿದ ಧ್ವನಿಮುದ್ರಿಕೆಗಳನ್ನು ಕೇಳಿಸುವುದು/ ವಿಡಿಯೋಗಳನ್ನು ಪ್ರದರ್ಶಿಸುವುದು.

ಸ್ವಮೌಲ್ಯಮಾಪನ:

Ø ವಚನದ ಅರ್ಥವನ್ನು ಹೇಳಬಲ್ಲರೇ?

Ø ವಚನಗಳ ಮಹತ್ವವನ್ನು ತಿಳಿದಿರುವರೆ?

Ø ವಚನಕಾರರುಗಳನ್ನು ಗುರುತಿಸಬಲ್ಲರೆ?

Ø ವಚನಗಳನ್ನು ಸ್ವರ, ಲಯ, ಭಾವ, ಸಂಗೀತ ಶುದ್ಧವಾಗಿ ಹಾಡಬಲ್ಲರೆ?

ಘಟಕಾಂತ್ಯದ ಪ್ರಶ್ನೆಗಳು:

Ø ವಚನಕಾರರನ್ನು ಹೆಸರಿಸಿರಿ.

Ø ವಚನಗಳ ಮಹತ್ವವೇನು?

Ø ವಚನಗಳನ್ನು ಸ್ವರ ಲಯಬದ್ಧವಾಗಿ ಹಾಡಿರಿ.

ಚಟುವಟಿಕೆ:

ಪ್ರಸಿದ್ದ ವಚನಕಾರರ ವಚನಗಳನ್ನು ಸಂಗ್ರಹಿಸಿ ಹಾಡಿರಿ.

ಆಕರ ಗ್ರಂಥಗಳು:

ವಿವಿಧ ವಚನಕಾರರ ವಚನ ಸಂಗ್ರಹ ಪುಸ್ತಕಗಳು.

ಬಸವಣ್ಣನವರ ವಚನ

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

ಮಾಡಿದೆನೆಂಬುದು ಮನದಲ್ಲಿ ಹೊಳೆದರೆ

ನೀಡಿದೆನೆಂಬುದು ನಿಜದಲಿ ತಿಳಿದರೆ

ಏಡಿಸಿ ಕಾಡಿತ್ತು ಶಿವನ ಡಂಗುರ

ಮಾಡಿದೆನೆನ್ನದಿರಾ ಲಿಂಗಕೆ ನೀಡಿದೆನೆನ್ನದಿರಾ ಜಂಗಮಕೆ

ಮಾಡುವ ನೀಡುವ ನಿಜಗುಣವುಳ್ಳವರ

ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಮದೇವ | |

ತಂಬೂರಿ ವಾದ್ಯದ ಪರಿಚಯ

ಅಧಿವೇಶನ – 25 (2)

ಅವಧಿ: 30 ನಿಮಿಷಗಳು

ಪೀಠಿಕೆ: – ಇದು ಒಂದು ಪುರಾತನವಾದ ಶ್ರುತಿವಾದ್ಯ. ನಮ್ಮ ಸಂಗೀತವು ಶ್ರುತಿಪ್ರಧಾನವಾದುದು. ಗಾಯಕನ ಅಥವಾ ವಾದಕನನ್ನು ಅಂಕೆಯಲ್ಲಿಡಲು ಈ ಶ್ರುತಿವಾದ್ಯದ ಅವಶ್ಯಕತೆಯನ್ನು ತಂಬೂರಿಯು ಪೂರೈಸಿದೆ.

ಉದ್ದೇಶ:

Ø ಶ್ರುತಿ ಪ್ರಧಾನವಾದ ವಾದ್ಯದ ಪರಿಚಯಯ.

Ø ಸಂಗೀತ ಕಚೇರಿಗಳಲ್ಲಿ ಅದರ ಅವಶ್ಯಕತೆ ಶ್ರುತಿಯೊಂದಿಗೆ ಹಾಡಿಸುವುದು.

ತಂಬೂರಿಯ ರಚನೆ: ತಂಬೂರಿಯನ್ನು ಹಲಸಿನಮರ ಮತ್ತು ಸೋರೇಕಾಯಿಯನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ತಂಬೂರಿಯ ತಲೆಗೆ ಬುರುಡೆ ಅಥವಾ ಕೊಡ ಎಂದು ಹೆಸರಿಸಲಾಗಿದೆ. ನೋಡಲು ಹೆಚ್ಚಾಗಿ ವೀಣೆಯನ್ನು ಹೋಲುತ್ತದೆ. ತಂಬೂರಿಗೆ ಒಟ್ಟು ನಾಲ್ಕು ತಂತಿಗಳಿವೆ. ಈ ನಾಲ್ಕು ತಂತಿಗಳಲ್ಲಿ ಮೊದಲನೆಯದು ಪಂಚಮ, ಎರಡನೆಯದು ಸಾರಣೆ, ಮೂರನೆಯದು ಅನುಸಾರಣೆ, ಮತ್ತು ನಾಲ್ಕನೆಯದು ಮಂದ್ರಸ್ಥಾಯಿ ಷಡ್ಜ.

ಮೊದಲಿನ ಮೂರುತಂತಿಗಳು ಉಕ್ಕಿನ ತಂತಿಗಳು ಮತ್ತು ನಾಲ್ಕನೆಯದು ಹಿತ್ತಾಳೆಯದು. ತಂತಿಗಳು ಮರದ ಬ್ರಿಡ್ಜಿನ ಮೇಲೆ ಕೂರುವ ಜಾಗದಲ್ಲಿ ರೇಷ್ಮೆ ಅಥವಾ ಉಣ್ಣೆಯ ಸಣ್ಣದಾರಗಳನ್ನು ಹಾಕಿರುತ್ತಾರೆ. ಇದರಿಂದ ಧ್ವನಿಯು ಚೆನ್ನಾಗಿಯೂ ಗಾಢವಾಗಿಯೂ ಇರುತ್ತದೆ. ಈ ದಾರಗಳಿಗೆ “ಜೀವಾಳ” ಎಂದು ಕರಯುವರು.

ನುಡಿಸುವ ಕ್ರಮ: ತಂಬೂರಿಯನ್ನು ತಲೆಕೆಳಗಾಗಿಸಿ ನೆಟ್ಟಿಗೆ ತೊಡೆಯ ಮೇಲಿಟ್ಟುಕೊಂಡು ನುಡಿಸುತ್ತಾರೆ. ಇದು ನೋಡಲು ಸುಲಭವಾದರೂ ಕಷ್ಟಸಾಧ್ಯವಾದ ಕಲೆ, ಮೊದಲನೆಯ ತಂತಿಯನ್ನು ಮಧ್ಯದ ಬೆರಳಿನಿಂದಲೂ, ಉಳಿದ ಮೂರು ತಂತಿಗಳನ್ನು ತೋರುಬೆರಳುಗಳಿಂದಲೂ ಮೀಟುತ್ತಾರೆ.

ತಂಬೂರಿಯ ವಿಧ: ತಂಬೂರಿಯಲ್ಲಿ 2 ವಿಧ – ದಕ್ಷಿಣದ್ದು ಮತ್ತು ಉತ್ತರದ್ದು. ಉತ್ತರದವರು ಬಳಸುವ ತಂಬೂರಿಯ ನಿರ್ಮಾಣಕ್ಕೆ ಮೀರಜ್ ಪ್ರಸಿದ್ಧವಾಗಿದೆ. ರಾಮಾಪುರ ಮತ್ತು ಲಕ್ನೋವಿನಲ್ಲಿ ತಯಾರಿಸಲ್ಪಡುತ್ತದೆ. ದಕ್ಷಿಣದೇಶದಲ್ಲಿ ಬಳಸುವ ತಂಬೂರಿಯಲ್ಲಿ ಸುಂದರ ಕೆತ್ತನೆಯ ಕೆಲಸ ಮತ್ತು ದಂತದ ಅಲಂಕಾರವಿರುತ್ತದೆ. ಮೈಸೂರು, ತಂಜಾವೂರು, ಬೆಂಗಳೂರು, ತಿರುವನಂತಪುರ, ಮತ್ತು ವಿಜಯನಗರಂಗಳಲ್ಲಿ ತಂಬೂರಿಯನ್ನು ತಯಾರಿಸುತ್ತಾರೆ.

ಕಲಿಕಾ ಸಾಮಗ್ರಿ: ಕಪ್ಪು ಹಲಗೆ, ವಾದ್ಯದ ಚಿತ್ರಪಟ, ವಾದ್ಯದ ಮಾದರಿ, ವಾದ್ಯ.

ಕಲಿಕಾ ವಿಧಾನ:

ಹಂತ 1 – ಕಪ್ಪು ಹಲಗೆಯ ಮೇಲೆ ಚಿತ್ರವನ್ನು ಬರೆಯುವುದು.

ಹಂತ 2 – ತಂಬೂರಿಯ ಭಾಗಗಳನ್ನು ಗುರುತಿಸುವುದು.

ಹಂತ 3 – ತಂಬೂರಿಯನ್ನು ನುಡಿಸುವ ರೀತಿಯನ್ನು ತೋರಿಸುವುದು.

ಹಂತ 4 – ತಂಬೂರಿಯ ತಂತಿಗಳಿಗಿರುವ ಹೆಸರುಗಳ ಬಗ್ಗೆ ತಿಳಿಸುವುದು.

ಹಂತ 5 – ತಂಬೂರಿಯ ನಿರ್ಮಾಣಕ್ಕೆ ಪ್ರಸಿದ್ದವಾದ ಸ್ಥಳದ ಬಗ್ಗೆ ತಿಳಿಸುವುದು.

ಸ್ಟ ಮೌಲ್ಯಮಾಪನ 

Ø ಶ್ರುತಿ ವಾದ್ಯದ ಪರಿಚಯವಿದೆಯೇ?

Ø ಅದರ ರಚನೆಯ ಬಗ್ಗೆ ಅರಿತರೇ?

Ø ವಾದ್ಯದ ಭಾಗಗಳ ಪರಿಚಯ ಆಯಿತೇ?

Ø ನುಡಿಸುವ ರೀತಿಯನ್ನು ತಿಳಿದರೇ?

ಘಟಕಾಂತ್ಯದ ಪ್ರಶ್ನೆಗಳು:

  1. ತಂಬೂರಿಯು ಎಂತಹ ವಾದ್ಯ?
  2. ತಂಬೂರಿಯನ್ನು ಯಾವ ಮರದಿಂದ ತಯಾರಿಸುತ್ತಾರೆ?
  3. ತಂಬೂರಿಯ ತಂತಿಗಳಿಗಿರುವ ಹೆಸರುಗಳೇನು?
  4. ತಂಬೂರಿಯ ತಲೆಗೆ ______________ಎನ್ನುವರು.
  5. ತಂಬೂರಿಗೆ ಒಟ್ಟು  ______________ ತಂತಿಗಳಿವೆ.
  6. ದಾರಗಳಿಗೆ ______________ಎನ್ನುತ್ತಾರೆ
  7. ತಂಬೂರಿಯನ್ನು ನುಡಿಸುವ ಕ್ರಮವನ್ನು ವಿವರಿಸಿ:
  8. ತಂಬೂರಿಯ ನಿರ್ಮಾಣಕ್ಕೆ ಪ್ರಸಿದ್ಧವಾದ ಸ್ಥಳ ಯಾವುದು?

ಜೀವನ ಚರಿತ್ರೆ

ದಿ ಉಸ್ತಾದ್ ಬಿಸ್ಮಿಲ್ಲಾಖಾನ್

(21 – 3 – 1916 ರಿಂದ 21 – 8 – 2006)  (90 ವರ್ಷ)

ಅಧಿವೇಶನ: 25 (3)

ಅವಧಿ: 45 ನಿಮಿಷಗಳು

ಪೀಠಿಕೆ: ಕೇವಲ ಮಂಗಳಕಾರ್ಯಗಳಲ್ಲಿ, ದೇವಸ್ಥಾನಗಳಲ್ಲಿ ನಿಮ್ಮ ಜನ ನುಡಿಸುತ್ತಿದ್ದ ವಾದ್ಯವನ್ನು ಕೈಗೆತ್ತಿಕೊಂಡು, ಅದರಲ್ಲಿ ಅಪಾರ ಸಾಧನೆಗೈದು, ಅದಕ್ಕೆ ವೇದಿಕೆ ವಾದ್ಯದ ಸ್ಥಾನ ನೀಡಿ, ಶಹನಾಯಿಗೆ ವಿಶ್ವಮಟ್ಟದ ಖ್ಯಾತಿ ತಂದವರು ಮಹಾನ್ ಸಂಗೀತಗಾರರಾದ ದಿವಂಗತ ಉಸ್ತಾದ್ ಬಿಸ್ಮಿಲ್ಲಾಖಾನ್‌ರವರು. ವಿಶ್ವದೆಲ್ಲೆಡೆ ಶಹನಾಯಿ ವಾದ್ಯಕ್ಕೆ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಮಾನ್ಯತೆಯನ್ನು ದೊರಕಿಸಿಕೊಟ್ಟವರು. ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಮತೀಯ ಭಾವನೆಗಳನ್ನು ಮೀರಿ ಕಾಶಿವಿಶ್ವನಾಥ ದೇವಸ್ಥಾನದಲ್ಲಿ ತಮ್ಮ ಜೀವನದುದ್ದಕ್ಕೂ ‘ಸಂಗೀತ ಸೇವೆ’ ಯನ್ನು ಸಲ್ಲಿಸಿದವರು. ಮಹಾನ್ ಸಾಧಕರು, ದೇಶಭಕ್ತರು ಮತ್ತು ಸರಳತೆಯ ಸಾಕಾರ ಮೂರ್ತಿಯಾಗಿದ್ದರು.

ಜೀವನ ಚರಿತ್ರೆ:

ಬಾಲ್ಯ: ಉಸ್ತಾದ್ ಬಿಸ್ಮಿಲ್ಲಾಖಾನ್‌ರವರದು ಪರಂಪರಾಗತ ಸಂಗೀತ ಮನೆತನ. ಅವರ ಪೂರ್ವಜರು ಭೋಜಪುರ ದರ್ಬಾರದಲ್ಲಿ ಶಹನಾಯಿ ವಾದಕರಾಗಿದ್ದರು. ಬಿಸ್ಮಿಲ್ಲಾಖಾನ್‌ರ ತಂದೆ ಉಸ್ತಾದ್ ಪೈಗಂಬರ ಭಕ್ತ ಶ್ರೇಷ್ಠ ಶಹನಾಯಿ ವಾದಕರಾಗಿದ್ದರು. ಭೋಜಪುರ ಅರಮನೆಯ ಆಸ್ಥಾನವಿದ್ವಾನರಾಗಿದ್ದರು. ತಾಯಿ ಮಿತ್ತಾನ್, ಇವರ ಜನನ 21 – 03 – 1916 ರಲ್ಲಿ ಬಿಹಾರ ರಾಜ್ಯದ ಡಾಮರೋನದಲ್ಲಿ ಆಯಿತು.

ಸಂಗೀತಾಭ್ಯಾಸ: ಬಿಸ್ಮಿಲ್ಲಾ ಖಾನ್‌ರವರಿಗೆ ಚಿಕ್ಕಂದಿನಲ್ಲಿಯೇ ಶಹನಾಯಿ ವಾದ್ಯದ ಕುರಿತು ಅಪಾರ ಒಲವು. ಹಾಗಾಗಿ ಆರನೇ ವಯಸ್ಸಿಗೆ ಬನಾರಸ್‌ನಲ್ಲಿದ್ದ ತಮ್ಮ ಚಿಕ್ಕಪ್ಪ ಹಾಗೂ ಗುರು ಉಸ್ತಾದ್ ಅಲಿಭಕ್ಷರವರಿಂದ ಶಹನಾಯಿ ಶಿಕ್ಷಣ ಪಡೆಯಲು ಆರಂಭಿಸಿದರು. ಅವರು ಖಾನ್‌ರಿಗೆ ಕಠಿಣತಮ ಸಾಧನೆಯ ಮೂಲಕ ಶಹನಾಯಿ ವಿದ್ಯೆ ಹೇಳಿಕೊಟ್ಟರು. ಶಿಯಾ ಮುಸ್ಲಿಂ ಆಗಿದ್ದ ಅವರು ಕಾಶಿವಿಶ್ವನಾಥ ದೇವಾಲಯದಲ್ಲಿ ಶಹನಾಯಿ ನುಡಿಸುವ ಸೇವೆ ಮಾಡುತ್ತಿದ್ದರು. ಅವರು ತಮ್ಮ ಜೊತೆಯಲ್ಲಿ ಬಿಸ್ಮಿಲ್ಲಾಖಾನ್‌ರನ್ನು ಕರೆದುಕೊಂಡು ಹೋಗಿ ನಾದಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದರು. ಅಂದು ಆರಂಭಗೊಂಡ ಸೇವೆ ಕೊನೆಯವರೆಗೂ ಸಹ ನಿಷ್ಠೆಯಿಂದ ಖಾನ್‌ರವರು ಮುಂದುವರೆಸಿದರು. ಅಲಿಭಕ್ಷರವರು ಕಚೇರಿ ನೀಡುವೆಡೆಯಲ್ಲೆಲ್ಲಾ ಬಿಸ್ಮಿಲ್ಲಾಖಾನ್‌ರನ್ನು ಸಾಥಿ ಮಾಡಿಸುತ್ತಿದ್ದರು. ಹಾಗಾಗಿ ಎಳೆಯ ವಯಸ್ಸಿನಲ್ಲೇ ದೇಶದ ನಾನಾ ಕಡೆಗಳಲ್ಲಿ ಆಸಂಖ್ಯಾತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಪಾರ ಶ್ರೋತೃಗಳ ಮನಗೆದ್ದ ಭಾಗ್ಯಶಾಲಿಯಾದರು. ಇದರೊಂದಿಗೆ ಉಸ್ತಾದ್ ಮಹಮ್ಮದ್ ಹುಸೇನರಿಂದ ಗಾಯನ ತರಬೇತಿಯು ಕೂಡಾ ಆದುದ್ದರಿಂದ ಬಿಸ್ಮಿಲ್ಲಾಖಾನ್‌ರ ಶಹನಾಯಿ ವಾದನದಲ್ಲಿ ಗಾಯಕಿ ಅಂಗವು ಮನಮೋಹಕವಾಗಿ ಮೂಡುತ್ತಿತ್ತು.

ಸಾಧನೆ: ಗುರುವಿನ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಸಾಧನೆ ಕೈಗೊಂಡು ಪ್ರಬುದ್ಧ ಶಹನಾಯಿ ವಾದಕರೆಂದು ಹೆಸರು ಪಡೆದರು. ತಮ್ಮ 14ನೇ ವಯಸ್ಸಿಗೆ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ತಮ್ಮ ಪ್ರಥಮ ಕಚೇರಿ ನೀಡಿ ವಿದ್ವಜ್ಜನರ ಅಪಾರ ಪ್ರಶಂಸೆಗೆ ಪಾತ್ರರಾದರು. ವಿಶ್ವದೆಲ್ಲೆಡೆ ನೀಡಿದ ಅದ್ಭುತ ಕಾರ್ಯಕ್ರಮಗಳು ಅವರಿಗೆ ‘ಶಹನಾಯಿ ನವಾಜ್‌’ ಎಂಬ ಬಿರುದನ್ನು ತಂದುಕೊಟ್ಟವು. ಸಾಮಾನ್ಯವಾಗಿ ಕಲಾವಿದರಿಗೆ ಶಹಾನಾಯಿ ನುಡಿಸುವುದರಿಂದ ಹೆಸರು ಬಂದಿದ್ದರೆ, ಬಿಸ್ತಿಲ್ಲಾಖಾನ್‌ರಿಂದಲೇ ಶಹಾನಾಯಿ ವಾದ್ಯಕ್ಕೆ ಹೆಸರು ಬಂದಿತು.

ವಿಶ್ವಮಾನವ ಕಲಾವಿದ: ಬಿಸ್ಮಿಲ್ಲಾಖಾನ್‌ರವರು ಧರ್ಮಾಂಧತೆಯನ್ನು ಮೀರಿ ಬೆಳೆದ ಅಪ್ಪಟ ಕಲಾವಿದರಾಗಿದ್ದರು. ಕಾಶಿ ವಿಶ್ವನಾಥನ ಸೇವೆಯನ್ನು ಅನೇಕ ಸಂಪ್ರದಾಯ ಮುಸ್ಲಿಂಮರು ವಿರೋಧಿಸಿದರು ಕೂಡಾ ಅದನ್ನು ಕಿವಿಗೆ ಹಾಕಿಕೊಳ್ಳದೆ ತಮ್ಮ ಸೇವೆಯನ್ನು ಮುಂದುವರೆಸಿದರು. ‘ಮಂದಿರವಿರಲಿ, ಮಸೀದಿ ಯಿರಲಿ ನನ್ನ ದೃಷ್ಟಿಯಲ್ಲಿ ಅವೆರಡೂ ಒಂದೇ, ಎಲ್ಲಿಯಾದರೂ ಶಹನಾಯಿ ನುಡಿಸುವುದು ನನ್ನ ಕರ್ತವ್ಯ, ದೇವನೊಬ್ಬನೆಂದು ನಂಬಿರುವಾಗ ಸಂಗೀತವೇ ನನ್ನ ಧರ್ಮವೆಂಬುದು ಬಿಸ್ಮಿಲ್ಲಾಖಾನ್‌ರ ಮಾನವೀಯ ತತ್ವವಾಗಿತ್ತು. ದೇಶ ಇಬ್ಭಾಗವಾದಾಗ ಅನೇಕರು ಇವರನ್ನು ಪಾಕಿಸ್ತಾನಕ್ಕೆ ತೆರಳಲು ಒತ್ತಾಯ ಮಾಡಿದರು ಆದರೆ ಬಿಸ್ಮಿಲ್ಲಾಖಾನ್‌ರು ಹಿಂದೂಸ್ತಾನವೆಂದರೆ ನನ್ನ ಪ್ರಾಣ. ಬನಾರಸ್ (ಕಾಶಿ) ಹಾಗೂ ಗಂಗೆ ನನ್ನ ಜೀವದುಸಿರು’ ಎಂದು ಹೇಳಿದ ಅಪ್ಪಟ ಹೃದಯವಂತ. ಬಿಲಿಯಾಧಿಪತಿಯೊಬ್ಬರು ಅವರನ್ನು ಅಮೇರಿಕದಲ್ಲಿ ನೆಲೆಸುವಂತೆ ಕೇಳಿದಾಗ “ನನ್ನ ಒಟ್ಟಿಗೆ ಗಂಗೆ, ಬನಾರಸ್‌ನ ಫ್ಲಾಟ್‌ಗಳು, ಸಾಧುಗಳು, ವಿಶ್ವನಾಥ ದೇವಾಲಯ ಎಲ್ಲವನ್ನೂ ಅಮೇರಿಕೆಗೆ ತಂದರೆ ಬರುವೆ” ಎಂದರಂತೆ! ಇದರಿಂದ ಕಾಶಿ ಹಾಗೂ ಗಂಗೆಯೊಂದಿಗೆ ಅವರಿಗೆ ಕರುಳುಬಳ್ಳಿಯ ಸಂಬಂಧವಿದ್ದುದು ಗೋಚರವಾಗುತ್ತದೆ.

ಪ್ರಶಸ್ತಿ: ತಮ್ಮ ಶಹನಾಯಿ ವಾದ್ಯದಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಿಸ್ಮಿಲ್ಲಾಖಾನ್‌ರಿಗೆ ದೊರಕದ ಪ್ರಶಸ್ತಿಗಳೇ ಇಲ್ಲ ಎನ್ನಬಹುದು. ಭಾರತ ಸರ್ಕಾರವು ತನ್ನ ಅತ್ಯುನ್ನತ ನಾಗರೀಕ ಪ್ರಶಸ್ತಿ ‘ಭಾರತ ರತ್ನ’ ವನ್ನು 2001 ರಲ್ಲಿ ನೀಡಿ ಗೌರವಿಸಿದೆ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ತಾನಸೇನ ಸಮ್ಮಾನ, ರಾಷ್ಟ್ರಪತಿ ಪದಕ, ಟಿ ಚೌಡಯ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಇನ್ನೂ ಮುಂತಾದ ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ತಮ್ಮ ಜೀವಿತಾವಧಿಯಲ್ಲಿ ದಂತಕಥೆಯಾಗಿದ್ದ ಬಿಸ್ಮಿಲ್ಲಾಖಾನ್ ರವರದ್ದು ತೀರಾ ಸರಳ ಬದುಕು. ಶಹನಾಯಿ ಸಂತರಾಗಿದ್ದ ಅವರ ಸೌಜನ್ಯ ಬೆರಗುಗೊಳಿಸುವಂತಹದ್ದಾಗಿತ್ತು. 21ನೇ ಆಗಸ್ಟ್ 2006 ರಂದು ವೈವಾಧೀನರಾದ ಬಿಸ್ಮಿಲ್ಲಾಖಾನ್ ರವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಕಲಾವಿದ ಎಂಬುದು ನಿರ್ವಿವಾದ.

ಉದ್ದೇಶ:

Ø ಉಸ್ತಾದ್ ಬಿಸ್ಮಿಲ್ಲಾಖಾನ್‌ರಂತಹ ಮಹಾನ್ ಸಂಗೀತಗಾರರ ಪರಿಚಯವಾಗುವುದು.

Ø ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಸಾಧನೆಯನ್ನು ಅರಿಯುವುದು.

Ø ಸಂಗೀತವು ಮತೀಯ ಭಾವನೆಗಳನ್ನು ಮೀರಿ ಬೆಳೆಯುವ ಹೃದಯ ವೈಶಾಲ್ಯತೆಯನ್ನು ಬೆಳೆಸುತ್ತದೆ ಎಂಬುದನ್ನು ತಿಳಿಸುವುದು.

Ø ವಿದೇಶಗಳಲ್ಲಿ ನಮ್ಮ ಸಂಗೀತಕ್ಕೆ ಇರುವ ಗೌರವವನ್ನು ಅರಿಯುವಂತೆ ಮಾಡುವುದು.

Ø ಸಂಗೀತವನ್ನು ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಸಂಗೀತಗಾರನು ಯಾವ ಮಟ್ಟದವರೆಗೂ ಬೆಳೆಯಬಲ್ಲನೆಂಬುದನ್ನು ತಿಳಿಸುವುದು.

ಕಲಿಕಾ ಸಾಮಗ್ರಿ

ಭಾವಚಿತ್ರ / ಆಡಿಯೋ ಸಿ. ಡಿಗಳು / ವಿಡಿಯೋಗಳು

ಕಲಿಕಾ ಹಂತಗಳು:

  1. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಬಾಲ್ಯ ತಂದೆ ತಾಯಿ ಕುಟುಂಬದ ಕುರಿತು ತಿಳಿಸುವುದು.
  2. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಶಿಷ್ಯ ವೃತ್ತಿ / ಗುರುಗಳ ಕುರಿತು ವಿವರಿಸುವುದು.
  3. ಸಾಧನೆಗಳನ್ನು ಬಣ್ಣಿಸುವುದು.
  4. ವಿದೇಶ ಕಾರ್ಯಕ್ರಮಗಳ ಕುರಿತು ಹೆಮ್ಮೆ ಮೂಡಿಸುವುದು.
  5. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಜೀವನದಲ್ಲಿ ಕಾಶಿ ವಿಶ್ವನಾಥ ಮಂದಿರ, ಗಂಗಾನದಿ ತಟ, ದೇವಸ್ಥಾನದಲ್ಲಿ ಸಲ್ಲಿಸುತ್ತಿದ್ದ ಸಂಗೀತ ಸೇವೆಯ ಕುರಿತು / ದೇಶಭಕ್ತಿ, ಪ್ರಾದೇಶಿಕ ಭಕ್ತಿಯ ಕುರಿತು ರಸವತ್ತಾಗಿ ವಿವರಿಸುವುದು.
  6. ಪಡೆದ ಪ್ರಶಸ್ತಿಗಳ ಕುರಿತು ತಿಳಿಸುವುದು.

ಸ್ವಮೌಲ್ಯಮಾಪನ:

  1. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಕುರಿತು ತಿಳಿದಿರುವರೆ?
  2. ಅವರ ಆದರ್ಶಗಳನ್ನು ಅರ್ಥಮಾಡಿಕೊಂಡಿದ್ದಾರೆಯೆ?
  3. ಸಂಗೀತವು ಒಬ್ಬ ಕಲಾವಿದನನ್ನು ಯಾವ ಮಟ್ಟಕ್ಕೆ ಒಯ್ಯಬಲ್ಲದು ಎಂಬುದರ ಕುರಿತು ಕಲ್ಪನೆ ಮೂಡಿದೆಯೇ?
  4. ಷಹನಾಯಿ ವಾದ್ಯದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆಯೆ?

ಘಟಕಾಂತ್ಯದ ಪ್ರಶ್ನೆಗಳು:

  1. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ತಂದೆ, ತಾಯಿ, ಗುರುಗಳ ಕುರಿತು ತಿಳಿಸಿ.
  2. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಸಂಗೀತ ಸಾಧನೆಯ ಕುರಿತು ತಿಳಿಸಿ.
  3. ಉಸ್ತಾದ್ ಬಿಸ್ಮಿಲ್ಲಾಖಾನ್‌ರವರಿಗೆ ದೊರೆತಿರುವ ಪ್ರಶಸ್ತಿಗಳು ಯಾವುವು?
  4. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅವರು ಸಲ್ಲಿಸುತ್ತಿದ್ದ ಸಂಗೀತ ಸೇವೆಯ ಕುರಿತು ತಿಳಿಸಿ.
  5. ಅವರ ದೇಶಪ್ರೇಮದ ಕುರಿತು ತಿಳಿಸಿ.

ಚಟುವಟಿಕೆ:

ಉಸ್ತಾದ್ ಬಿಸ್ಮಿಲ್ಲಾಖಾನ್‌ರವರ ಕುರಿತು ಚಿತ್ರಗಳು / ಮಾಹಿತಿ ಸಂಗ್ರಹಿಸಿ.

ಇದು ನಿಮಗೆ ಗೊತ್ತೇ?

ಕರ್ನಾಟಕದಲ್ಲಿ ಸಾಮಾನ್ಯವಾಗಿ ಕೊರವ ಜನಾಂಗದವರು ಸನಾದಿ (ಶಹನಾಯಿ) ವಾದ್ಯ ನುಡಿಸುತ್ತಾರೆ. ಸನಾದಿ ಅಪ್ಪಣ್ಣ ಅವರಲ್ಲಿ ಅಗ್ರಗಣ್ಯದ ಹೆಸರು. ಡಾ|| ರಾಜ್ ಕುಮಾರ್ ನಟಿಸಿದ ‘ಸನಾದಿ ಅಪ್ಪಣ್ಣ’ ಚಲನಚಿತ್ರಕ್ಕೆ ಹಿನ್ನಲೆಯಲ್ಲಿ ಬಿಸ್ಮಿಲ್ಲಾಖಾನ್‌ರವರೇ ಅದ್ಭುತವಾಗಿ ಶಹನಾಯಿ ನುಡಿಸಿದ್ದರು.

ಅಧಿವೇಶನ 26

ಹಿಂದಿ ಭಾಷಾ ದೇಶಭಕ್ತಿ ಗೀತೆ

ಅಧಿವೇಶನ 27

ದೇವರನಾಮ ವಚನ ಗಾಯನ

ತಾಳ ಲಕ್ಷಣ

ಅಧಿವೇಶ: 28

ಅವಧಿ: 90 ನಿಮಿಷಗಳು

ಪೀಠಿಕೆ: ಸಂಗೀತವು ರಾಗ ತಾಳಗಳ ಸಂಗಮ, ಸಮಾಗಮ ಹಾಗಾಗಿ ರಾಗ ಮತ್ತು ತಾಳಗಳನ್ನು ತಿಳಿಯುವುದು ಅವಶ್ಯಕವಾಗಿದೆ. ತಾಳಗಳ ಬಗ್ಗೆ ತಿಳಿಸುವ ಭಾಗವೇ ತಾಳಲಕ್ಷಣ. ತಾಳಗಳ ಲಕ್ಷಣಗಳನ್ನು ತಿಳಿಯುವುದು.

ಕರ್ನಾಟಕ ಸಂಗೀತದಲ್ಲಿ ಏಳುತಾಳಗಳಿದ್ದು ಅಕ್ಷರಕಾಲದಲ್ಲಿ ಒಂದಕ್ಕೊಂದು ವಿಶೇಷ ಹಾಗೂ ವಿಭಿನ್ನವಾಗಿದೆ. ಇವುಗಳು ಹೇಗೆ ವಿಭಿನ್ನ ಹಾಗೂ ವಿಶೇಷ ಎಂದು ತಿಳಿಯುವುದು ಅತ್ಯಂತ ಅವಶ್ಯವಾಗಿದೆ. ಆದಿ, ಏಕ, ರೂಪಕ, ತ್ರಿಪುಟ.

ಉದ್ದೇಶ:

Ø ತಾಳದ ಬಗ್ಗೆ ತಿಳಿಯುವುದು.

Ø ಆದಿ, ರೂಪಕ, ಏಕ, ತ್ರಿಪುಟ ರಾಗಗಳ ಲಘು ದೃತಗಳ ಸಂಖ್ಯೆಗಳಲ್ಲಿ ಆಗುವ ವ್ಯತ್ಯಾಸವನ್ನು ತಿಳಿಯುವುದು.

Ø ಜಾತಿ – ತ್ರಿಶ್ರ, ಚತುರಶ್ರಗಳ ಬಗ್ಗೆ ತಿಳಿಯುವುದು.

Ø ವ್ಯತ್ಯಾಸ (ಜಾತಿ / ತಾಳಾಂಗ / ಅಕ್ಷರಕಾಲ ಇತ್ಯಾದಿ).

Ø ಗಣಿತದಲ್ಲಿ ತಾಳದ ಅವಶ್ಯಕತೆ ಹಾಗೂ ಅನ್ವಯ.

Ø ತಾಳಜ್ಞಾನ ಹಾಗೂ ಗಣಿತ ಜ್ಞಾನ ಗಳ ಪರಸ್ಪರ ಅನ್ವಯ – ಪ್ರಯೋಜನ.

ಬೋಧನೋಪಕರಣ:

Ø ತಾಳೋಮೀಟರ್.

Ø ಖಂಜಿರ.

Ø ಶೃತಿ / ತಂಬೂರಿ.

ಕಲಿಕಾವಿಧಾನ:

Ø ತಾಳವನ್ನು ಕೈಯಿಂದ ತೊಡೆಯ ಮೇಲೆ ಹಾಕುವ ವಿಧಾನವನ್ನು ತಿಳಿಸುವುದು. ತಾಳದೊಂದಿಗೆ ಸ್ವರವನ್ನು ಹಾಡುವುದನ್ನು ಗಮನಿಸುವುದು, ನೋಡುವುದು.

Ø  ಸ್ವರಗಳನ್ನನುಸರಿಸಿ ಸಾಹಿತ್ಯವನ್ನು ಶೃತಿ ಬದ್ದವಾಗಿ ಹಾಡುವುದನ್ನು ಹೇಳಿಕೊಡುವುದು.

Ø ಉಚ್ಚಾರಣೆಯನ್ನು ತಿಳಿಸುವುದು.

ಸ್ವಮೌಲ್ಯಮಾಪನ:

Ø ಈ ಕೆಳಗಿನ ತಾಳಗಳನ್ನು ಹಾಕಿತೋರಿಸಿ – ಏಕ, ಆದಿ, ತ್ರಿಪುಟ, ರೂಪ, ಲಘು, ದೃತ, ಅನುದೃತಗಳ ಅರ್ಥ ತಿಳಿದುಕೊಂಡಿದ್ದಾರೆಯೇ?

Ø ಏಕತಾಳ – ತ್ರಿಪುಟತಾಳಗಳ ನಡುವಿನ ವ್ಯತ್ಯಾಸ ತಿಳಿದಿರುವರೇ?

Ø ತಪ್ಪುಗಳನ್ನು ತಿಳಿಸುವುದು.

ಘಟಕಾಂತ್ಯದ ಪ್ರಶ್ನೆಗಳು:

Ø ಈ ಕೆಳಗಿನ ರಾಗಲಕ್ಷಣವನ್ನು ತಿಳಿಸಿ – ಏಕ, ರೂಪಕ, ತ್ರಿಪುಟ.

Ø ಲಘು, ದೃತ, ಅನುದೃತಗಳ ಅಕ್ಷರಕಾಲ, ಅರ್ಥಗಳನ್ನು ಬರೆಯಿರಿ.

ಪ್ರಯೋಗ:

Ø ಈ ತಾಳಗಳನ್ನು ಹಾಕಿತೋರಿಸಿ – ಏಕ, ತ್ರಿಪುಟ, ರೂಪಕ, ಆದಿ.

Ø ಲಘು, ದೃತ, ಅನುದೃತ – ಈ ತಾಳಾಂಗಳ ಕ್ರಿಯೆಯನ್ನು ತೋರಿಸಿ.

ಉಪಸಂಹಾರ:

ಚತುರಶ್ರಜಾತಿ ತ್ರಿಪುಟತಾಳ ಮತ್ತು ಆದಿತಾಳಗಳು ಒಂದೇ ಆಗಿದ್ದು ಮೊದಲು ಪ್ರಾರಂಭಿಕ ಪಾಠಗಳ (ಸರಳಗಳ ) ಅಭ್ಯಾಸದಲ್ಲಿ ಬಳಸಿದ ತಾಳವಾದ್ದರಿಂದ ಆದಿತಾಳವೆಂದರು.

ಕರ್ನಾಟಕ ಸಂಗೀತದಲ್ಲಿ ಏಳು ತಾಳಗಳಿದ್ದು ಲಘುವಿನ ಜಾತಿಯೊಂದಿಗೆ 35, ತಾಳಗಳಾಗುತ್ತವೆ. 5 ನಡತೆಗಳೊಂದಿಗೆ 175 ತಾಳಗಳಾಗುವವು.

ಕರ್ನಾಟಕ ಸಂಗೀತವು ತಾಳಗಳ ವಿಷಯದಲ್ಲಿ ಬಹಳ ವಿಶೇಷ ಹಾಗೂ ಶ್ರೀಮಂತವಾಗಿದೆ. ಇಡೀ ವಿಶ್ವದಲ್ಲೇ ಕರ್ನಾಟಕ ಸಂಗೀತದ ತಾಳ ‘ಪ್ರಕರಣವು ಅತ್ಯಂತ ವಿಶೇಷವೆನ್ನ ಬಹುದು.

ತಾಳಗಳ ಘೋಡಶಾಂಶಗಳು, ಷಡಂಗಗಳಾಗಿವೆ. ಇನ್ನೂ ಮುಂದುವರಿದು ಈಗ ಲಘು, ದೃತ, ಅನುದೃತಗಳು ಮಾತ್ರ ಬಳಕೆಯಲ್ಲಿವೆ.

ಆದಿತಾಳ

ಅಧಿವೇಶನ

ಅವಧಿ:

ಪೀಠಿಕೆ: ಗಾಯನದ ಕಾಲಪ್ರಮಾಣವನ್ನು ಅಳೆಯುವ, ರಾಗ, ಭಾವಗಳ ಶೋಭೆ ಸಂಪೂರ್ಣತೆಯನ್ನು ಒದಗಿಸುವ ಸಾಧನವೇ ತಾಳ.

ಉದ್ದೇಶ: ಕಾಲ ಪ್ರಮಾಣಕ್ಕೆ ತಕ್ಕಂತೆ ಸಂಗೀತ ರಚನೆಗಳನ್ನು ಹಾಡುವ ರೀತಿಯನ್ನು ಪರಿಚಯಿಸುವುದು. ಅದರ ಜೊತೆಗೆ ಗಣಿತ ವಿಷಯಕ್ಕೂ ಪೂರಕವಾಗಿದೆ.

ಹಾಕುವ ಕ್ರಮ: ಲಘು ಮತ್ತು ಧ್ರುತಗಳಿಂದ ಹಾಕಲ್ಪಡುವುದು. ಲಘು ಎಂದರೆ, ಒಂದು ಪೆಟ್ಟನ್ನು ಅಥವಾ ಘಾತವನ್ನು ಹಾಕಿ ಜಾತಿಗನುಗುಣವಾಗಿ ಬೆರಳುಗಳನ್ನು ಎಣಿಸುವುದು.

ಧ್ರುತ ಎಂದರೆ, ಒಂದು ಪಟ್ಟು ಅಥವಾ ಘಾತವನ್ನು ಹಾಕಿ ಕೈಯನ್ನು ತಿರುಗಿಸುವುದು.

ಆದಿತಾಳಕ್ಕೆ ಒಂದು ಲಘುವಿಗೆ 4 ಅಕ್ಷರಗಳು ಹಾಗೂ 2 ಧ್ರುತಗಳಿಗೆ 2 ಅಕ್ಷರಗಳಂತೆ ಒಟ್ಟು 8 ಅಕ್ಷರಗಳು ಬರುತ್ತವೆ.

ಕಲಿಕಾ ಸಾಮಗ್ರಿ: ಕಪ್ಪು ಹಲಗೆ, ಕೈ ಯಲ್ಲಿ ಹಾಕಿ ತೋರಿಸುವುದು.

ಕಲಿಕಾ ವಿಧಾನ:

ಹಂತ 1 – ಕಾಲ ಪ್ರಮಾಣವನ್ನು ಅಳೆಯುವುದನ್ನು ತೋರಿಸುವುದು.

ಹಂತ 2 – ಕೈಯಿಂದ ಹಾಕಿ ತೋರಿಸಿದುದನ್ನು ಗಮನಿಸುವುದು.

ಹಂತ 3 – ಲಘು, ದ್ರುತಗಳನ್ನು ಪರಿಚಯಿಸುವುದು.

ಹಂತ 4 – ಅಕ್ಷರ ಪ್ರಮಾಣವನ್ನು ವಿದ್ಯಾರ್ಥಿಗಳು ಕಲಿಯುವುದು.

ಸ್ವಮೌಲ್ಯಮಾಪನ:

  1. ಕಾಲ ಪ್ರಮಾಣವನ್ನು ಅಳೆಯುವುದನ್ನು ತಿಳಿದರೇ?
  2. ಲಘು ದ್ರುತಗಳ ಬಗ್ಗೆ ಅರಿತರೇ?
  3. ಅಕ್ಷರ ಪ್ರಮಾಣಗಳನ್ನು ತಿಳಿದರೆ?

ತಾತ್ವಿಕ ಪ್ರಶ್ನೆಗಳು:

  1. ಕಾಲ ಪ್ರಮಾನವನ್ನು ಅಳೆಯುವ ಸಾಧನ ಯಾವುದು?
  2. ಲಘು ಎಂದರೇನು?
  3. ದ್ರುತ ಎಂದರೇನು?
  4. ಆದಿತಾಳಕ್ಕೆ ಒಟ್ಟು ಎಷ್ಟು ಅಕ್ಷರಗಳು ಬರುತ್ತವೆ?

ಏಕತಾಳದ ಅಲಂಕಾರ

ಅಧಿವೇಶನ

ಅವಧಿ:

ಪೀಠಿಕೆ:- ಸ್ವರಗಳ ವಿವಿಧ ರೀತಿಯ ಸಂಯೋಜನೆಗೆ ಅಲಂಕಾರವೆಂದು ಹೆಸರು. ಅಲಂಕಾರಗಳು ಸುಳಾದಿ ಸಪ್ತತಾಳಗಳಲ್ಲೂ ಮತ್ತು ಐದು ಜಾತಿಗಳಲ್ಲೂ ನಿಯೋಜಿತವಾಗಿದೆ. ಮುಖ್ಯವಾದ ಅಲಂಕಾರಗಳು ಏಳಿದ್ದರೂ, ಮೂವತ್ತೈದು ಅಲಂಕಾರಗಳು ಮಾಯಾಮಾಳವಗೌಳ ರಾಗದಲ್ಲಿ ರಚಿತವಾಗಿವೆ.

ಏಕತಾಳದ ಅಲಂಕಾರವು ಚತುರಶ್ರ ಜಾತಿಯಲ್ಲಿದ್ದು, ಈ ಜಾತಿಗೆ ಒಟ್ಟು 4 ಅಕ್ಷರಗಳು ಬರುತ್ತವೆ. ಇದು ಕೇವಲ ಲಘುವನ್ನು ಮಾತ್ರಹೊಂದಿರುವ ತಾಳ.

ಉದ್ದೇಶ ಅಲಂಕಾರಗಳಲ್ಲಿ ಬರುವ ಸ್ವರಗಳ ವಿವಿಧ ರೀತಿಯ ಜೋಡಣೆಗಳನ್ನು ಅರ್ಥ ಮಾಡಿಸುವುದಾಗಿದೆ.

ಕಲಿಕಾ ಸಾಮಗ್ರಿ: ತಂಬೂರಿ ಅಥವಾ ಶ್ರುತಿಪೆಟ್ಟಿಗೆ, ಮತ್ತು ಕಪ್ಪು ಹಲಗೆ.

ಕಲಿಕಾವಿಧಾನ:

ಹಂತ 1 – ಸ್ವರಗಳನ್ನು ಬರೆಯಿಸುವುದು.

ಹಂತ 2 – ತಾಳಹಾಕಿ ತೋರಿಸುವುದು.

ಹಂತ 3 – ರಾಗಬದ್ಧವಾಗಿ ಹೇಳಿಕೊಡುವುದು.

ಹಂತ 4 – ತಪ್ಪಿದಲ್ಲಿ ತಿದ್ದುವುದು.

ಸ್ವಮೌಲ್ಯಮಾಪನ:

  1. ಅಲಂಕಾರಗಳ ಬಗ್ಗೆ ಅರ್ಥಮಾಡಿಕೊಂಡರೇ?
  2. ಸ್ವರಗಳ ಜೋಡಣೆಯ ರೀತಿಯನ್ನು ತಿಳಿದರೇ?
  3. ತಾಳಗಳ ಬಗ್ಗೆ ಅರಿತರೇ?
  4. ಜಾತಿಯ ಬಗ್ಗೆ ತಿಳಿದರೇ?

ತಾತ್ವಿಕ ಪ್ರಶ್ನೆಗಳು

  1. ಅಲಂಕಾರ ಎಂದರೇನು?
  2. ಅಲಂಕಾರದಲ್ಲಿ ಎಷ್ಟು ಜಾತಿಗಳಿವ?
  3. ಅಲಂಕಾರದಲ್ಲಿರುವ ತಾಳಗಳೆಷ್ಟು?
  4. ಯಾವರಾಗದಲ್ಲಿದೆ?
  5. ಏಕತಾಳಕ್ಕೆ ಎಷ್ಟು ಅಕ್ಷರಗಳಿವೆ?

ರೂಪಕತಾಳದ ಅಲಂಕಾರ

ಅಧಿವೇಶನ                                                    ಅವಧಿ:

ಪೀಠಿಕೆ: – ರೂಪಕ ತಾಳದ ಅಲಂಕಾರವು ಸಪ್ತತಾಳದ ಅಲಂಕಾರಗಳಲ್ಲಿ ಒಂದು ತಾಳವಾಗಿದೆ. ಈ

ರೂಪಕತಾಳಕ್ಕೆ ಒಂದು ಧ್ರುತ, ಮತ್ತು ಒಂದು ಲಘುವು ಬಂದು ಚತುರಶ್ರಜಾತಿಯಲ್ಲಿ ಇರುತ್ತದೆ.

ಉದ್ದೇಶ: ವಿವಿಧ ರೀತಿಯ ಸ್ವರಗಳ ಜೋಡಣೆಯನ್ನು ಹೊಂದಿರುವ ಅಲಂಕಾರದ ಮಹತ್ವವನ್ನು

ಮತ್ತು ತಾಳಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಕಲಿಕಾ ಸಾಮಗ್ರಿ:- ತಂಬೂರಿ ಅಥವಾ ಶ್ರುತಿಪೆಟ್ಟಿಗೆ ಮತ್ತು ಕಪ್ಪು ಹಲಗೆ.

ಕಲಿಕಾ ವಿಧಾನ:

ಹಂತ 1 — ಕಪ್ಪು ಹಲಗೆಯ ಮೇಲೆ ಬರೆಯಿಸುವುದು.

ಹಂತ 2 — ತಾಳವನ್ನು ಹಾಕುವುದರ ಜೊತೆಗೆ ಹಾಡಿ ತೋರಿಸುವುದು.

ಹಂತ 3 – ಹೇಳಿಕೊಡುವುದು.

ಸ್ವ ಮೌಲ್ಯಮಾಪನ

Ø ಅಲಂಕಾರದ ಬಗ್ಗೆ ತಿಳಿದಿರುವರೇ?

Ø ತಾಳದ ಜಾತಿಯ ಬಗ್ಗೆ ಅರ್ಥಮಾಡಿಕಂಡರೇ?

Ø ಈ ತಾಳದಲ್ಲಿರುವ ಅಕ್ಷರ ಪ್ರಮಾಣದ ಬಗ್ಗೆ ಅರ್ಥ ಆಯಿತೇ?

ತಾತ್ವಿಕ ಪ್ರಶ್ನೆಗಳು:

  1. ರೂಪಕ ತಾಳ ಯಾವ ಜಾತಿಯಲ್ಲಿದೆ?
  2. ಅದಕ್ಕೆ ಬರುವ ಲಘು, ದ್ರುತಗಳೆಷ್ಟು?
  3. ರೂಪಕತಾಳಕ್ಕೆ______________ಅಕ್ಷರಗಳು ಬರುತ್ತವೆ.
  4. ______________ ತಾಳಗಳಲ್ಲಿ ರೂಪಕ ತಾಳವು ಒಂದು.

ತ್ರಿಪುಟ ತಾಳದ ಅಲಂಕಾರ:

ಅಧಿವೇಶನ                                                                    ಅವಧಿ:

ಪೀಠಿಕೆತ್ರಿಪುಟತಾಳದ ಅಲಂಕಾರವು ಸಪ್ತತಾಳದ ಅಲಂಕಾರಗಳಲ್ಲಿ ಒಂದು ತಾಳವಾಗಿದೆ. ಈ ತ್ರಿಪುಟತಾಳಕ್ಕೆ ಒಂದು ಲಘು ಮತ್ತು 2 ದ್ರುತಗಳು ಬರುವುದಲ್ಲದೇ ಈ ತಾಳವು ತಿಶ್ರಜಾತಿಯಲ್ಲಿದ್ದು, ತಿಶ್ರಜಾತಿಗೆ ಒಂದು ಲಘುವಿಗೆ 3 ಅಕ್ಷರಗಳು ಬರುತ್ತದೆ.

ಉದ್ದೇಶ:- ಐದು ಜಾತಿಗಳಿಗನುಗುಣವಾಗಿ ತಾಳಗಳಿಗೆ ಬರುವ ಒಟ್ಟು ಅಕ್ಷರಗಳನ್ನು , ಮತ್ತು ಸ್ವರಗಳ ಜೋಡಣೆಯನ್ನು ತಿಳಿಸುವುದಾಗಿದೆ .

ಕಲಿಕಾ ಸಾಮಗ್ರಿ:- ಕಪ್ಪು ಹಲಗೆಯ ಜೊತೆಗೆ ತಂಬೂರಿ ಅಥವಾ ಶ್ರುತಿಪೆಟ್ಟಿಗೆ.

ಕಲಿಕಾ ವಿಧಾನ:

ಹಂತ 1 – ಕಪ್ಪು ಹಲಗೆಯ ಮೇಲೆ ಬರೆಯಿಸುವುದು.

ಹಂತ 2 – ತಾಳವನ್ನು ಹಾಕುವುದು.

ಹಂತ 3 – ಜೊತೆಗೆ ಹಾಡಿತೋರಿಸುವುದು.

ಹಂತ 4 – ಹೇಳಿಕೊಡುವುದು.

ಸ್ವ ಮೌಲ್ಯಮಾಪನ

Ø ತ್ರಿಪುಟ ತಾಳಕ್ಕೆ ಬರುವ ಲಘು ಧ್ರುತಗಳೆಷ್ಟು?

Ø ಜಾತಿಯ ಬಗ್ಗೆ ತಿಳಿದರೇ?

Ø ಒಟ್ಟು ಆಕ್ಷೆರಗಳ ಸಂಖ್ಯೆ ಅರಿತರೇ?

ತಾತ್ವಿಕ ಪ್ರಶ್ನೆಗಳು

  1. ತ್ರಿಪುಟತಾಳಕ್ಕೆ ಬರುವ ಲಘು ______________.
  2. ಈ ತಾಳಕ್ಕೆ ಬರುವ ಧ್ರುತ______________ .
  3. ಈ ತಾಳವು ಯಾವ ಜಾತಿಯಲ್ಲಿದೆ?
  4. ತ್ರಿಪುಟತಾಳಕ್ಕೆ ಬರುವ ಒಟ್ಟು ಅಕ್ಷರಗಳೆಷ್ಟು?

ಅಧಿವೇಶನ 28 (1)

ರಾಗ ಬೃಂದಾವನ ಸಾರಂಗಿ

ತಾನವರ್ಣ

ಅಧಿವೇಶನ – 29

ಅವಧಿ: 90 ನಿಮಿಷಗಳು

ಪೀಠಿಕೆ:- ಇವುಗಳನ್ನು ಸಂಗೀತ ಕಚೇರಿಯ ಪ್ರಾರಂಭದಲ್ಲಿ ಹಾಡುವುದು ಅಥವಾ ನುಡಿಸುವುದು ಒಂದು ಸಂಪ್ರದಾಯ. ತಾನವರ್ಣವು ಮಧ್ಯಲಯದಲ್ಲಿದ್ದು ವಿಶಿಷ್ಟವಾದಲಯ, ನಿಬದ್ಧವಾದ ರಾಗಸಂಚಾರಗಳಿಂದ ಕೂಡಿವೆ. ಇವು ಸಾಮಾನ್ಯವಾಗಿ ಆದಿತಾಳದಲ್ಲಿಯೂ ಸಮಗ್ರಹದಲ್ಲಿಯೂ ಪ್ರಾರಂಭವಾಗುತ್ತದೆ. ಇವುಗಳಲ್ಲಿ ಮಾತು ಅಲ್ಪ, ಧಾತು ಪ್ರಧಾನ, ಪಲ್ಲವಿ, ಅನುಪಲ್ಲವಿ, ಚರಣಗಳ ಸಾಹಿತ್ಯದ ಪ್ರತಿ ಅಕ್ಷರಕ್ಕೂ ಅಕಾರ, ಇಕಾರಾದಿಗಳನ್ನು ಹೆಚ್ಚಾಗಿ ಅಳವಡಿಸಿ ರಚಿಸಿರುವರು. ತಾನದ ಶೈಲಿಯಲ್ಲಿರುವುದರಿಂದ, ತಾನಜತಿಗಳನ್ನೊಳಗೊಂಡಿರುವುದರಿಂದ ಇವುಗಳಿಗೆ ತಾನವರ್ಣ ಎಂದು ಹೆಸರು ಬಂದಿದೆ. ವರ್ಣವನ್ನು ಪೂರ್ವಾಂಗ ಮತ್ತು ಉತ್ತರಾಂಗ ಎಂದು ಭಾಗವಾಗಿ ವಿಂಗಡಿಸಬಹುದು. ಪೂರ್ವಾಂಗವು ಪಲ್ಲವಿ ಮತ್ತು ಅನುಪಲ್ಲವಿಯನ್ನೂ, ಉತ್ತರಾಂಗವು ಚರಣ ಮತ್ತು ಇತರ ಖಂಡಗಳನ್ನು ಒಳಗೊಂಡಿದೆ.

ಉದ್ದೇಶ:

ಹಾಡುವವರ ಕಂಠವನ್ನೂ, ವಾದ್ಯಗಾರರ ಕೈಬೆರಳುಗಳನ್ನೂ ವರ್ಣವು ಚೆನ್ನಾಗಿ ಪಳಗಿಸುವುದು. ಅಕಾರ ಉಕಾರದಿಂದ ಕಂಠದ ತರಬೇತಿ ಯೋಗ್ಯಕ್ರಮದಲ್ಲಿ ದೊರೆಯುವುದು.

ಕಲಿಕಾಸಾಮಗ್ರಿ:

ತಂಬೂರಿ ಅಥವಾ ಶ್ರುತಿಪೆಟ್ಟಿಗೆ ಮತ್ತು ಕಪ್ಪುಹಲಗೆ.:

ಕಲಿಕಾವಿಧಾನ:

ಹಂತ 1 – ಆರೋಹಣ, ಅವರೋಹಣ ದೊಂದಿಗೆ ಸ್ವರವನ್ನು ಬರೆಯಿಸುವುದು.

ಹಂತ 2 – ಸಾಹಿತ್ಯವನ್ನು ಹಾಡಿತೋರಿಸುವುದು.

ಹಂತ 3 – ಸಾಹಿತ್ಯದ ಅರ್ಥವನ್ನು ಹೇಳುವುದು.

ಹಂತ 4 – ಹೇಳಿಕೊಡುವುದು.

ಹಂತ 5 – ಅಕಾರ ಇಕಾರಾದಿಗಳನ್ನು ಹೇಳಿಕೊಡುವುದು.

ಹಂತ 6 – ತಾನ ಜತಿಗಳ ಬಗ್ಗೆ ಹೇಳುವುದು.

ಹಂತ 7 – ಪೂರ್ವಾಂಗ, ಉತ್ತರಾಂಗಗಳ ಬಗ್ಗೆ ವಿವರಿಸುವುದು.

ಸ್ವಮೌಲ್ಯಮಾಪನ:

  1. ತಾನವರ್ಣ ಪದ ಅರ್ಥವಾಗಿದೆಯೇ?
  2. ಸಾಹಿತ್ಯದ ಬಗ್ಗೆ ಅರಿತರೇ?
  3. ಅಕಾರಾದಿ ಇಕಾರಾದಿ , ಉಕಾರಾದಿಗಳ ಬಗ್ಗೆ ಅರ್ಥ ಮಾಡಿಕೊಂಡರೇ?
  4. ತಾನಗಳ ಬಗ್ಗೆ ಅರಿತರೇ?
  5. ಉತ್ತರಾಂಗಗಳ ಬಗ್ಗೆ ಅರಿತುಕೊಂಡರೇ?
  6. ಪೂರ್ವಾಂಗದ ಬಗ್ಗೆ ತಿಳಿದರೇ?

ತಾತ್ವಿಕ ಪ್ರಶ್ನೆಗಳು

  1. ಕಚೇರಿಗಳಲ್ಲಿ ಪ್ರಾರಂಭದಲ್ಲಿ ಹಾಡುವ ಗೀತೆ ಯಾವುದು?
  2. ತಾನವರ್ಣವನ್ನು ಯಾವ ಲಯದಲ್ಲಿ ಹಾಡಲಾಗುತ್ತದೆ?
  3. ತಾನವರ್ಣವು ____________ ಗ್ರಹದಲ್ಲಿ ಪ್ರಾರಂಭವಾಗುತ್ತವೆ.
  4. ಇದು ____________ ಪ್ರಧಾನ ಗೀತೆಯಾಗಿದೆ.
  5. ವರ್ಣವು ಯಾವ ಶೈಲಿಯಲ್ಲಿದೆ?
  6. ತಾನವರ್ಣ ಎಂಬ ಹೆಸರು ಹೇಗೆ ಬಂದಿತು?

ಹಿಂದುಸ್ತಾನೀ ಸಂಗೀತ ಪದ್ಧತಿಯ ಥಾಟಗಳ ಪರಿಚಯ

ಅಧಿವೇಶನ: 29 (1)

ಅವಧಿ: 90 ನಿಮಿಷಗಳು

ಪೀಠಿಕೆ: 15ನೇ ಶತಮಾನದ ಕೊನೆಯಲ್ಲಿ ರಾಗ ತರಂಗಿಣಿ ಗ್ರಂಥದ ಲೇಖಕನಾದ ಲೋಚನ ಕವಿಯು ಮೇಲ (ಥಾಟ) ದ ವಿಚಾರವನ್ನು ಪ್ರಸ್ತಾಪಿಸಿದ್ದಾನೆ. ಅಲ್ಲಿಂದ ಆರಂಭಗೊಂಡ ಥಾಟ ಪದ್ದತಿಯ ವಿಚಾರ ಪ್ರಣಾಲಿಯು ಬೇರೆ ಬೇರೆ ಅಭಿಪ್ರಾಯಗಳನ್ನು ಒಳಗೊಂಡು ಬಂದು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಅದು ಪಂ. ವಿಷ್ಣು ನಾರಾಯಣ ಭಾತಖಾಂಡೆಯವರಿಂದ ಒಂದು ವೈಜ್ಞಾನಿಕ ದೃಷ್ಟಿಯನ್ನು ಹೊಂದಿಕೊಂಡು ಬೆಳೆದು ಬಂದಿತು. ರಾಗಗಳ ಬಗ್ಗೆ ಅಭ್ಯಾಸ ಮಾಡುವ ಜೊತೆಗೆ ಥಾಟಗಳ ಪರಿಚಯ ವಿದ್ಯಾರ್ಥಿಗಳಿಗೆ ಅತ್ಯವಶ್ಯವಾಗಿದೆ.

ಥಾಟವು ಸಪ್ತಕದಿಂದ ಏರುವ ಏಣಿಯಂತಿದ್ದು ಸಪ್ತಕದಲ್ಲಿಯ ವರ್ಣರಂಜಿತವಾದ ಹನ್ನೆರಡು ಸ್ವರಗಳಿಂದಲೇ ಥಾಟಗಳ ಉತ್ಪತ್ತಿಯಾಗಿದೆ. ಈ ಥಾಟ ಪ್ರಯೋಗಕ್ಕೆ ಸಂಸ್ಕೃತ ಗ್ರಂಥಕಾರರು “ಮೇಲ” ಎಂದು ಕರೆದಿದ್ದು ಅವರು ಮೇಲದ ಪರಿಭಾಷೆಯನ್ನು ಹೀಗೆ ಮಾಡಿದ್ದಾರೆ.

“ಮೇಲ: ಸ್ವರ ಸಮೂಹ: ಸ್ಯಾದ್ರಾಗವ್ಯಜನ ಶಕ್ತಿಮಾನ್” -ಅಭಿನವ ರಾಗಮಂಜರಿ.

ಅಂದರೆ ಮೇಲ ಅಥವಾ ಥಾಟವು ವಿವಿಧ ರಾಗಗಳ ಉತ್ಪತ್ತಿಗೆ ಎಡೆಮಾಡಿಕೊಡುವ ಸಪ್ತಸ್ವರಗಳ ಸುಸಂಬದ್ಧವಾದ ಸಂಯೋಜನೆಯಾಗಿದೆ. ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಪಂಡಿತ ವೆಂಕಟಮುಖಿಯವರು ಎಪ್ಪತ್ತೆರಡು ಮೇಳಕರ್ತ ರಾಗಗಳನ್ನು ಹೆಸರಿಸಿದ್ದಾರೆ. ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಪಂಡಿತ ವಿಷ್ಣು ನಾರಾಯಣ ಭಾತಖಾಂಡೆಯವರು ಕೇವಲ ಹತ್ತು ಥಾಟಗಳನ್ನು ಮನ್ನಿಸಿದ್ದು ಅವು ಇಂದಿಗೂ ಹಿಂದೂಸ್ತಾನಿ ಪದ್ದತಿಯಲ್ಲಿ ಮಾನ್ಯತೆ ಪಡೆದಿದೆ.

ಉದ್ದೇಶ:

Ø ‘ಥಾಟ’ ದ ಅರ್ಥವನ್ನು ತಿಳಿಯುವಂತೆ ಮಾಡುವುದು.

Ø ಥಾಟ ಮತ್ತು ರಾಗ ಇವೆರಡಕ್ಕಿರುವ ವ್ಯತ್ಯಾಸ ಅರಿಯುವಂತೆ ಮಾಡುವುದು.

Ø ಪಂ. ಭಾತಖಾಂಡೆಯವರು ಮನ್ನಿಸಿದ ಥಾಟಗಳ ಪರಿಚಯ ಮಾಡಿಸುವುದು.

ಕಲಿಕಾ ಸಾಮಗ್ರಿ:

          ಚಾರ್ಟ, ಭಾವಚಿತ್ರ.

ಕಲಿಕಾ ವಿಧಾನ: ವಿವರಣೆ, ಗಾಯನ

ಹಂತ 1 — ಥಾಟದ ಅರ್ಥ, ಲಕ್ಷಣಗಳನ್ನು ತಿಳಿಸುವುದು.

ಹಂತ 2 — ಥಾಟಕ್ಕೂ ರಾಗಕ್ಕೂ ಇರುವ ವ್ಯತ್ಯಾಸವನ್ನು ವಿವರಿಸುವುದು.

ಹಂತ 3 – ಪಂ. ಭಾತಖಾಂಡೆಯವರು ಮನ್ನಿಸಿದ ಹತ್ತು ಥಾಟಗಳನ್ನು ಪರಿಚಯಿಸುವುದು.

     “ಯಮನ ಬಿಲಾವಲ ಔರ ಖಮಾಜಿ ಭೈರವ ಪೂರವ

              ಮಾರವ ಕಾಫಿ ಆಸಾ ಭೈರವಿ ತೋಡಿ ಬಖಾನೆ

                  ದಶಮುಥ ಥಾಟ ಚತುರ ಗುನಿ ಮಾನೆ”

ಹಂತ 4 — ಹತ್ತು ಥಾಟಗಳ ಲಕ್ಷಣಗಳನ್ನು ತಿಳಿಸುವುದು. ಚಾರ್ಟಗಳ ಮೂಲಕ ಪ್ರದರ್ಶಿಸುವುದು.

 

ಸ್ವಮೌಲ್ಯಮಾಪನ:

  1. ‘ಥಾಟ’ ದ ಅರ್ಥವನ್ನು ಅರಿತಿರುವರೆ?
  2. ಥಾಟಗಳ ಲಕ್ಷಣಗಳನ್ನು ತಿಳಿದಿರುವರೆ?
  3. ಹತ್ತು ಥಾಟಗಳನ್ನು ಹೆಸರಿಸುವರೆ?
  4. ಹತ್ತು ಥಾಟಗಳಲ್ಲಿನ ವ್ಯತ್ಯಾಸ ಗುರುತಿಸುವರೆ?

ಘಟಕಾಂತ್ಯದ ಪ್ರಶ್ನೆಗಳು:

Ø ಥಾಟ ಎಂದರೇನು?

Ø ಥಾಟಗಳ ಲಕ್ಷಣಗಳಾವವು?

Ø ಹಿಂದುಸ್ತಾನಿ ಸಂಗೀತದ ಹತ್ತು ಥಾಟಗಳನ್ನು ಹೆಸರಿಸಿರಿ.

Ø ಹೊಂದಿಸಿ ಬರೆಯಿರಿ.

                                                   ಬಿ

  1.              ಭೈರವ                               ಎ) ಕಾಫಿ
  2.  ಬಾಗೇಶ್ರೀ                           ಬಿ) ಭೈರವ
  3.  ಭೂಪಾಲಿ                            ಸಿ) ಖಮಾಜ
  4.  ಲಂಗ                                 ಡಿ) ಕಲ್ಯಾಣ

ಆಕರ ಗ್ರಂಥಗಳು

ಸಂಗೀತ ಶಾಸ್ತ್ರ ದರ್ಪಣ – ಡಾ|| ಎಂ. ಎಸ್. ಸುಂಕಾಪುರ.

 ಸಂಗೀತ ವಿಶಾರದ – ವಸಂತ.

ಸ್ವರ ಲಿಪಿ / ತಾಲಲಿಪಿ ಪದ್ಧತಿ

ಅಧಿವೇಶನ: 29 (2)                                                   ಅವಧಿ: 45 ನಿಮಿಷ

ಪೀಠಿಕೆ:

ಯಾವುದೇ ಭಾಷೆ ಮತ್ತು ಲಿಪಿ ಒಂದಕ್ಕೊಂದು ಪೂರಕ ಮತ್ತು ಪೋಷಕ ಅದೇ ರೀತಿಯಾಗಿ ಸಂಗೀತದಲ್ಲಿಯೂ ಕೂಡ ಲಿಪಿ ಬಹು ಅವಶ್ಯವಾದದ್ದು. ಗುರುಕುಲ ಪದ್ದತಿಯಲ್ಲಿ ಗುರುಮುಖೇನವಾಗಿ ಕಂಠಸ್ಥ ಮಾಡುತ್ತಾ ಬಂದಿರುವ ಸಂಗೀತ ವಿದ್ಯೆಯನ್ನು ಶಿಕ್ಷಣ ಮಾಧ್ಯಮದ ಮೂಲಕ ಮೊದಲ ಬಾರಿಗೆ ಸಂಗೀತ ಶಿಕ್ಷಣ ನೀಡಲು ಪ್ರಾರಂಭಿಸಿದ ಉಸ್ತಾದ್ ಮೌಲಾಭಕ್ಷರು ತನ್ನದೇ ಆದ ಸ್ವತಂತ್ರ ಸಂಗೀತ ಸ್ವರಲಿಪಿಯನ್ನು ಕಂಡು ಹಿಡಿದರು. ಈ ಲಿಪಿಯನ್ನು ಪಂ. ವಿಷ್ಣು ನಾರಾಯಣ ಭಾತಖಂಡಯವರು ಪರಿಶೀಲಿಸಿ ಅದಕ್ಕೆ ಶಾಸ್ತ್ರೀಯ ರೂಪ ನೀಡಿ ಪ್ರಚಾರಕ್ಕೆ ತಂದರು. ಅದರಲ್ಲಿ ಅನೇಕ ಹೊಸ ಮಾದರಿಗಳನ್ನು ನೀಡಿದ ಪಂ. ಬಾತಖಾಂಡೆ ಮತ್ತು ಪಂ. ಪಲುಸ್ಕರರು ಸ್ವರಲಿಪಿ ಮತ್ತು ತಾಲಲಿಪಿಗಳಿಗೆ ತಮ್ಮದೇ ಆದ ಚಿಟ್ಟೆಗಳನ್ನು ನೀಡಿ ಪ್ರಚಾರಕ್ಕೆ ತಂದರು. ಅಸಂಖ್ಯಾತ ಸಂಗೀತಾಭ್ಯಾಸಿಗಳು ಇಂದಿಗೂ ಈ ಸ್ವರಲಿಪಿ / ತಾಲಲಿಷಿ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಉದ್ದೇಶ:

Ø ಹಿಂದುಸ್ತಾನಿ ಸಂಗೀತದ ಲಿಪಿ ಪದ್ಧತಿಯನ್ನು ಅರಿಯುವಂತೆ ಮಾಡುವುದು.

Ø ಲಿಪಿ ಪದ್ದತಿಯ ಚಿಹ್ನೆಗಳನ್ನು ಗುರುತಿಸುವಂತೆ ಮಾಡುವುದು.

Ø ಪಂ. ಭಾತಖಾಂಡೆ ಮತ್ತು ಪಂ. ಪಲುಸ್ಕರರ ಲಿಪಿ ಪದ್ಧತಿಯಲ್ಲಿನ ವ್ಯತ್ಯಾಸಗಳನ್ನು ಗುರುತಿಸುವಂತೆ ಮಾಡುವುದು.

 ಅಧ್ಯಯನದಲ್ಲಿ ಅಳವಡಿಸಿರುವ ಹೊಸ ಅಂಶಗಳು:

Ø ಪಂ. ಪಲುಸ್ಕರರ ಲಿಸಿ ಪದ್ಧತಿಯ ಪರಿಚಯ.

ಕಲಿಕಾ ಸಾಮಗ್ರಿಗಳು:

ಭಾವಚಿತ್ರ , ಚಾರ್ಟಗಳು , ಸಂಗೀತ ಗ್ರಂಥಗಳು.

ಕಲಿಕಾ ವಿಧಾನ: ವಿವರಣೆ

ಹಂತ 1 – (ಶಾಸ್ತ್ರ)

   ಹಿಂದೂಸ್ತಾನಿ ಸಂಗೀತದಲ್ಲಿ ಲಿಪಿಪದ್ಧತಿಯ ಮಹತ್ವದ ಕುರಿತು ವಿವರಣೆ.

ಹಂತ 2 — (ಶಾಸ್ತ್ರ)

     ಪಂ. ವಿಷ್ಣು ನಾರಾಯಣ ಭಾತಪಾಂಡೆಯವರ ಸ್ವರ / ತಾಲ ಲಿಪಿ ಪದ್ಧತಿಯ ಪರಿಚಯ.

ಹಂತ 3 — (ಶಾಸ್ತ್ರ)

     ಪಂ. ವಿಷ್ಣು ದಿಗಂಬರ ಪಲುಸ್ಕರರ ಸ್ವರ / ತಾಲಲಿಪಿ ಪದ್ಧತಿಯ ಪರಿಚಯ.

ಹಂತ 4 — ಎರಡೂ ಪದ್ಧತಿಗಳ ತುಲನೆ.

ಸ್ವ ಮೌಲ್ಯಮಾಪನ :

Ø ಪಂ. ಭಾತಖಾಂಡೆ ಮತ್ತು ಪಂ. ಪಲುಸ್ಕರರ ಬಗ್ಗೆ ತಿಳಿದಿರುವರೆ?

Ø ಲಿಪಿಪದ್ಧತಿಗಳ ಚಿಹ್ನೆಗಳನ್ನು ಸರಿಯಾಗಿ ಗುರುತಿಸುವರೆ?

Ø ಎರಡೂ ಲಿಪಿಪದ್ಧತಿಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವರೆ?

Ø ಪಠ್ಯಕ್ರಮದ ರಾಗಗಳ ಗೀತ / ತಾಲಗಳನ್ನು ಲಿಪಿ ಪದ್ಧತಿಯಲ್ಲಿ ಬರೆಯುವಾಗ ಸರಿಯಾಗಿ ಚಿನ್ನೆಗಳನ್ನು ಹಾಕುವರೆ?

ಘಟಕಾಂತ್ಯದ ಪ್ರಶ್ನೆಗಳು:

Ø ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿನ ಲಿಪಿ ಪದ್ಧತಿಗಳಾವವು?

Ø ಪಂ. ಭಾತಖಾಂಡೆ ಸ್ವರಲಿಪಿ ಪದ್ಧತಿಯಲ್ಲಿ ಕೋಮಲ ಸ್ವರಗಳಿಗೆ ಯಾವ ಚಿಹ್ನೆಯನ್ನು ನೀಡುತ್ತಾರೆ?

Ø ಪಂ. ಪಲುಸ್ಕರ ಲಿಪಿ ಪದ್ಧತಿಯಲ್ಲಿ ‘ಸಮ್’ ಗೆ ಚಿಹ್ನೆ ಯಾವುದು?

Ø ಹೊಂದಿಸಿ ಬರೆಯಿರಿ. (ಪಂ. ಭಾತಖಾಂಡೆ ಪದ್ಧತಿ)

ಎ                                      ಬಿ

  1. ಸ್ವರಗಳಮೇಲೆ ಚುಕ್ಕೆ              ಎ) ಕೋಮಲ ಸ್ವರ
  2.  ಸ್ವರಗಳ ಮೇಲ್ಗಡೆ ಉದ್ಗೆರೆ          ಬಿ) ಮಂದ್ರದ ಸ್ವರ
  3. ಸ್ವರದಕೆಳಗೆ ಚುಕ್ಕೆ                        ಸಿ) ತೀವ್ರ ಸ್ವರ
  4. ಸ್ವರದಕೆಳಗೆ ಅಡ್ಡಗೆರೆ             ಡಿ) ತಾರ ಸಪ್ತಕದ ಸ್ವರ

ಆಕರ ಗ್ರಂಥಗಳು

Ø ಕ್ರಮಿಕ ಪುಸ್ತಕ ಮಾಲಿಕಾ – ಪಂ. ವಿ. ಎನ್. ಭಾತಖಾಂಡೆ.

Ø ಸಂಗೀತ ವಿಶಾರದ – ಬಸಂತ

ಅಧಿವೇಶನ – 30

ಹಳೆಗನ್ನಡ ಕಾವ್ಯ ವಾಚನ

ಅಧಿವೇಶನ 31

ಚಲನಚಿತ್ರಗೀತೆಗಳಲ್ಲಿ ಭಕ್ತಿಗೀತೆ ಮತ್ತು ವಚನ

ರಾಗಲಕ್ಷಣ:

ಮಾಯಾಮಾಳವಗೌಳ:

ಅಧಿವೇಶನ 32

ಅವಧಿ: 90 ನಿಮಿಷಗಳು

ಪೀಠಿಕೆ: ಮಾಯಾಮಾಳವಗೌಳ ರಾಗವು ಸಂಗೀತ ಬಾಲಪಾಠದ ಕಲಿಕೆಯ ರಾಗವಾಗಿದ್ದು ಸರಳವಾದ ಸುಲಲಿತವಾಗಿ ಮಾಡಬಹುದುದಾದ ರಾಗ. ಸರಳೆಗಳು ಇದೇ ರಾಗದಲ್ಲಿದ್ದು ವಿದ್ಯಾರ್ಥಿಗಳಿಗೆ ಅತಿ ಸುಲಭವಾಗಿ ಮನನ ಮಾಡಿ ಹಾಡಲು ಸಹಕಾರಿಯಾಗಿದೆ. ಈ ರಾಗವು ಜನಕ / ಮೇಳಕರ್ತ / ಸಂಪೂರ್ಣ ರಾಗ, ವರ್ಗ – ಸಂಪೂರ್ಣ ಆರೋಹಣ ಆವರೋಹಣದಲ್ಲಿ ಏಳೂ ಸ್ವರಗಳು ಇವೆ. ಈ ರಾಗದಲ್ಲಿ ಬರುವ ಸ್ವರಗಳು ಷಡ್ಜ, ಶುದ್ದ ಶಿಷಭ, ಅಂತರಗಾಂಧಾರ, ಶುದ್ಧಮಧ್ಯಮ, ಪಂಚಮ, ಶುದ್ಧದೈವತ, ಕಾಕಲಿ ನಿನಾದ ಹಾಗೆಯೇ ಅವರೋಹಣದಲ್ಲಿಯೂ ಇದೇ ಸ್ವರಗಳಿವೆ.

ಈ ರಾಗವು 15 ನೇ ಮೇಳಕರ್ತರಾಗೆ ಅಗ್ನಿ ಚಕ್ರದ ಮೂರನೆಯ ರಾಗ ಭಕ್ತಿ, ಕರುಣಾ, ಶಾಂತ ರಸಪ್ರಧಾನವಾದ ರಾಗ.

ಈ ರಾಗದ ಕೆಲವು ಕೃತಿಗಳೆಂದರೆ-ಮಾಯಾತೀತ, ಸ್ವರೂಪಿಣಿ – ರೂಪಕತಾಳ, ತಂಜಾವೂರು ಪೊನ್ನಮ್ಮದೇವದೇವ, ಕಲುಮರೇ.

ಉದ್ದೇಶ:

Ø ಮಾಯಾಮಾಳವಗೌಳ ರಾಗದ ಸ್ವರೂಪವನ್ನು ಗ್ರಹಿಸಿದರೆ.

Ø ಈ ರಾಗದ ಸ್ವರಗಳನ್ನು ಪಟ್ಟಿಮಾಡುವುದು.

Ø ರಾಗದ ರಸ, ಕೃತಿ, ಇತ್ಯಾದಿಗಳನ್ನು ಗ್ರಹಿಸಿ ಪಟ್ಟಿಮಾಡುವುದು.

Ø ರಾಗದ ವಿಕೃತಿ ಸ್ವರಸ್ಥಾನಗಳನ್ನು ಪಟ್ಟಿ ಮಾಡುವುದು.

Ø ಮಾಯಾಮಾಳವಗೌಳ ರಾಗದ ಇತರ ಹಾಡುಗಳನ್ನು ಗುರುತಿಸುವ ಸಾಮರ್ಥ್ಯ ಬರುವಂತೆ ಪ್ರೇರೇಪಿಸುವುದು.

ಬೋಧನೋಪಕರಣಗಳು:

ತಂಬೂರಿ / ಶೃತಿ ಪೆಟ್ಟಿಗೆ.

ರಾಗದ ಹೆಸರು, ಸ್ವರಗಳ ಫ್ಲಾಷ್ ಕಾರ್ಡ್.

ಕಲಿಕಾ ವಿಧಾನ:-

ರಾಗದ ಆರೋಹಣ ಅವರೋಹಣವನ್ನು ಹಾಡಿ ರಾಗದಲ್ಲಿ ಬರುವ ಪ್ರಕೃತಿ ಮತ್ತು ವಿಕೃತಿ ಸ್ವರಗಳನ್ನು ಕಂಡು ಹಿಡಿಯಲು ತಿಳಿಸುವುದು. ಸ್ವರಗಳನ್ನು ಪಟ್ಟಿ ಮಾಡುವರು. (ಶಿಕ್ಷಕರು ಮಾರ್ಗದರ್ಶನ ಮಾಡುವರು)

ಆರೋಹಣ    ಸ ರಿ ಗ3 ಮ1 ಪ ದ1 ನಿ3 ಸ

ಅವರೋಹಣ ಸ ನಿ3 ದ1 ಪ ಮ1 ಗ3 ರಿ1 ಸ

ವಿದ್ಯಾರ್ಥಿಗಳಿಗೆ ವಿಕೃತಿ ಸ್ವರಗಳನ್ನು ಪಟ್ಟಿ ಮಾಡಲು ಹೇಳುವುದು. ಈ ಸ್ವರಗಳನ್ನು ಉಪಯೋಗಿಸಿ ಸ್ವರ ಸಂಚಾರವನ್ನು ಹಾಡಲು ಪ್ರಯತ್ನಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸುವುದು. ಈ ರಾಗದ ಸ್ವರ ಸಂಚಾರವನ್ನು ಹಾಡುತ್ತಾ ಈ ರಾಗದ ಸ್ವರೂಪವನ್ನು ತಿಳಿಯುವುದು.

ಈ ರಾಗದ ಸ್ವರೂಪ ತಿಳಿಸು ಈ ರಾಗಕ್ಕೆ ಹೊಂದುವ ಹಾಡುಗಳನ್ನು ಯೋಚಿಸಿ ಪಟ್ಟಿ ಮಾಡುವಂತೆ ತಿಳಿಸುವುದು. ಈ ರಾಗದ ಹಾಡುಗಳನ್ನು ಕೇಳಿಸಿ ಈ ರಾಗದ ಪ್ರಯೋಗಗಳು ಗಮಕಗಳು ರಸಭಾವವನ್ನು ಗ್ರಹಿಸುವಂತೆ ಪ್ರೇರೇಪಿಸುವುದು. ಆ ರಾಗದ ಸಂಪೂರ್ಣ ಪರಿಚಯವಾಗುವಂತೆ ಚಟುವಟಿಕೆಗಳನ್ನು ಕೊಡುವುದು.

ಸ್ವಮೌಲ್ಯಮಾಪನ:

Ø ಮಾಯಾಮಾಳವಗೌಳ ರಾಗದ ಮೇಳಕರ್ತ ಸಂಖ್ಯೆ ಮತ್ತು ಚಕ್ರದ ಸಂಖ್ಯೆಯನ್ನು ಗುರುತಿಸುವರೇ?

Ø ಈ ರಾಗದ ವಿಕೃತಿಸ್ವರಸ್ಥಾನಗಳನ್ನು ಪಟ್ಟಿಮಾಡುವರೇ?

Ø ಈ ರಾಗದ ಸ್ವರಸಂಚಾರವನ್ನು ನಿರೂಪಿಸುವರೇ?

Ø ಈ ರಾಗದ ರಸ, ಭಾವವನ್ನು ಗ್ರಹಿಸುವರೇ?

Ø ಈ ರಾಗದ ಹಾಡುಗಳನ್ನು ಗುರುತಿಸುವರೇ?

Ø ಈ ರಾಗದ ಇತರ ಹಾಡುಗಳನ್ನು ಕ್ರೋಢೀಕರಿಸುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ಮಾಯಾಮಾಳವಗೌಳ ರಾಗದ ಮೇಳಕರ್ತ ಸಂಖ್ಯೆ ಮತ್ತು ಚಕ್ರದ ಸಂಖ್ಯೆಯನ್ನು ಬರೆಯಿರಿ.

Ø ಮಾಯಾಮಾಳವಗೌಳ ರಾಗದ ವಿಕೃತಿ ಸ್ವಭೇಧಗಳನ್ನು ಪಟ್ಟಿಮಾಡಿ.

Ø ಮಾಯಾಮಾಳವಗೌಳ ರಾಗದ ಸ್ವರ ಸಂಚಾರವನ್ನು ನಿರೂಪಿಸಿ.

Ø ಮಾಯಾಮಾಳವಗೌಳ ರಾಗದ ಕೃತಿಗಳನ್ನು ಪಟ್ಟಿ ಮಾಡಿ.

Ø ಮಾಯಾಮಾಳವಗೌಳ ರಾಗದ ಇತರ ಹಾಡುಗಳನ್ನು ಪಟ್ಟಿ ಮಾಡಿ.

Ø ಮಾಯಾವತಾಳವಗೌಳ ರಾಗದ ರಾಗವನ್ನು ಒಂದು ಹಾಡಿಗೆ ಅಳವಡಿಸಿ.

ಉಪಸಂಹಾರ:

ಮಾಯಾಮಾಳವಗೌಳ ರಾಗವು ಕರುಣಾರಸ ಪ್ರಥಾನವಾದ ಸರಳರಾಗ, ಸರಳೆಗಳನ್ನು ಇದೇ ರಾಗದಲ್ಲಿ ಕಲಿಸಲಾಗುತ್ತದೆ. ಕಾರಣ ಈ ರಾಗದ ವಿಕೃತಿ ಸ್ವರಗಳು ಪ್ರತ್ಯೇಕ ತನ್ನದೇ ಸ್ವರಸ್ಥಾನಗಳನ್ನು ಹೊಂದಿವೆ.

ರಾಗಲಕ್ಷಣ

ಅಧಿವೇಶನ: 32 (1)                                          ಅವಧಿ: 90 ನಿಮಿಷಗಳು

ಪೀಠಿಕೆ: ಒಂದು ರಾಜ್ಯದ ಸಂಪೂರ್ಣ ಪರಿಚಯವನ್ನು ತಿಳಿಯುವುದೇ ರಾಗಲಕ್ಷಣ, ರಾಗದ ಶಾಸ್ತ್ರಭಾಗವನ್ನು ಇಲ್ಲಿ ತಿಳಿಯುತ್ತೇವೆ. ಲಕ್ಷ್ಯ – ಲಕ್ಷಣ ಎಂಬ ಎರಡು ಭಾಗ ಪ್ರಯೋಗ ಮತ್ತು ಶಾಸ್ತ್ರವನ್ನು ಸೂಚಿಸುತ್ತದೆ. ಒಂದು ರಾಗಕ್ಕೆ ಇರುವ ಲಕ್ಷಣಗಳನ್ನು ಅಥವಾ ವಿವರ ಶಾಸ್ತ್ರಗಳನ್ನು ತಿಳಿಯುವುದು ಇದರ ಮುಖ್ಯ ಅಂಶವಾಗಿದೆ.

ಉದ್ದೇಶ:

Ø ರಾಗದ ಆರೋಹಣ ಅವರೋಹಣಗಳನ್ನು ಸ್ಮರಿಸುವುದು.

Ø ರಾಗದ ಸ್ವರಗಳನ್ನು ಲೆಕ್ಕಾಚಾರಮಾಡುವುದು.

Ø ರಾಗದ ವರ್ಗಗಳನ್ನು ತೀರ್ಮಾನಿಸುವುದು.

Ø ರಾಗದ ವಿಕೃತಿ ಸ್ವರಪ್ರಭೇದಗಳನ್ನು ಪಟ್ಟಿ ಮಾಡುವುದು.

Ø ರಾಗದ ಗ್ರಹ, ಅಂಶ, ನ್ಯಾಸ ಸ್ವರಗಳನ್ನು ಪಟ್ಟಿಮಾಡುವುದು.

Ø ರಾಗದ ಸಂರ್ಪೂತೆ / ಜನ್ಯ — ಈ ಅಂಶವನ್ನು ತಿಳಿಯುವುದು.

Ø (ಜನಕ – ಅಥವಾ ಜನ್ಯವೇ ಎಂಬುದನ್ನು ತೀರ್ಮಾನಿಸುವುದು).

Ø ರಾಗದ ಜೀವಸ್ವರಗಳನ್ನು ಪಟ್ಟಿಮಾಡುವುದು.

Ø ರಾಗದ ವಾದಿ ಸಂವಾದಿ ವಿವಾದಿಸ್ವರಗಳನ್ನು ಪಟ್ಟಿಮಾಡುವುದು.

Ø ರಾಗದ ಕೃತಿಗಳನ್ನು ಪಟ್ಟಿಮಾಡುವುದು.

Ø ರಾಗ – ಸಂಚಾರಗಳನ್ನು ಗ್ರಹಿಸುವುದು.

Ø ರಾಗದ ಮುಖ್ಯ ಭಾವ, ರಸ, ಸಮಯವನ್ನು ಗ್ರಹಿಸುವುದು.

Ø ರಾಗದ ಸಂಪೂರ್ಣ ವಿವರ ಗ್ರಹಿಸುವುದು.

ಬೋಧನೋಪಕರಣ:

Ø ತಂಬೂರಿ / ಶ್ರುತಿ ಪೆಟ್ಟಿಗೆ

ಕಲಿಕಾ ವಿಧಾನ:

Ø ಒಂದು ರಾಗದ ಆರೋಹಣ ಅವರೋಹಣವನ್ನು ಹಾಡುವುದು.

Ø ಆ ಸ್ವರಗಳ ಪ್ರಭೇದಗಳನ್ನು (ಸ್ವರ ಸ್ಥಾನಗಳನ್ನು) ಮತ್ತೊಮ್ಮೆ ಕಂಡು ಹಿಡಿಯುವಂತೆ ಪ್ರೇರೇಪಿಸುವುದು. ವಿಕೃತಿ ಸ್ವರಗಳನ್ನು ಪಟ್ಟಿಮಾಡುವುದು.

Ø ಒಂದು ರಾಗದ ಮೂಲ ತಿಳಿಯುವುದು. ಅದು ಯಾವ ವರ್ಗ, ಯಾವ ಚಕ್ರ ಎಂಬುವಂತಹ ಅಂಶಗಳನ್ನು ಕೇಳಿ ತಿಳಿಯುವುದು.

Ø ಆ ರಾಗದ ಆರೋಹಣ ಅವರೋಹಣ ಹಾಡಿಸುವುದು. (ಆರೋಹಣ ಅವರೋಹಣ ಒಂದು ರಾಗದ ಸಂಪೂರ್ಣ ಚಿತ್ರವನ್ನು ಈ ಆರೋಹಣ ಅವರೋಹಣದಿಂದ ತಿಳಿಯಬಹುದು.

ಬೋಧನೋಪಕರಣ:

ಶೃತಿ ಪಟ್ಟಿಗೆ, ಮೇಳಕರ್ತರಾಗಗಳ ಚಾರ್ಟ್: ಕೆಲವು ಬಳಕೆಯಲ್ಲಿರುವ ರಾಗಗಳ ಪಟ್ಟಿ.

 

 

ಕಲಿಕಾ ವಿಧಾನ:

Ø ಒಂದು ರಾಗದ ಆರೋಹಣದಲ್ಲಿರುವ ಸ್ವರಗಳನ್ನು ಹಾಡಿದಾಗ ವಿಕೃತಿ ಸ್ವರಗಳ ಪ್ರಭೇದಗಳನ್ನು ತಿಳಿಯುವುದು.

Ø ವಿಕೃತಿ ಸ್ವರಗಳ ಪರಿಚಯವಾಗುತ್ತದೆ.

Ø ಆರೋಹಣ ಮತ್ತು ಅವರೋಹಣವನ್ನು ಹಾಡಿಸಿ ಅವುಗಳ ವಿಕೃತಿ ಸ್ವರ ಸ್ಥಾನವನ್ನು ಗುರುತಿಸಬಹುದು.

ಬೋಧನೋಪಕರಣಗಳು:

ಶೃತಿಪೆಟ್ಟಿಗೆ / ತಂಬೂರ

ಕಲಿಕಾವಿಧಾನ:

Ø ಮೇಳಕರ್ತ ರಾಗಗಳ ಪಟ್ಟಿಯನ್ನು ಪರಿಚಯಿಸುವುದು,

Ø ಒಂದು ರಾಗದ ಆರೋಹಣ ಅವರೋಹಣವನ್ನು ಹಾಡಿ ಅದರಲ್ಲಿಯ ವಿಕೃತಿ ಸ್ವರ ಸ್ಥಾನಗಳನ್ನು – ಗುರುತಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸುವುದು.

Ø ವಿಕೃತಿ ಸ್ವರಗಳ ಸಂಖ್ಯೆ ಮುಂತಾದವುಗಳನ್ನು ಅರಿಯುವುದು.

Ø ಒಂದು ರಾಗದ ಆರೋಹಣ ಅವರೋಹಣ ಹಾಡುವುದು.

ಸ್ವಮೌಲ್ಯಮಾಪನ:

Ø ರಾಗದ ಆರೋಹಣ ಅವರೋಹಣ ಗುರುತಿಸಿದರೇ?

Ø ರಾಗದ ಆರೋಹಣ ಅವರೋಹಣ ಸ್ವರಗಳನ್ನು ಗ್ರಹಿಸಿದರೇ?

Ø ರಾಗದ ವರ್ಗವನ್ನು ತೀರ್ಮಾನಿಸಿದರೇ?

Ø ರಾಗದ ಗ್ರಹ, ಅಂಶ, ನ್ಯಾಸ ಸ್ವರಗಳನ್ನು ಗುರುತಿಸಿದರೆ?

Ø ರಾಗದ ವಿಕೃತಿ ಸ್ವರಗಳನ್ನು ಪಟ್ಟಿಮಾಡಿದರೇ?

Ø ರಾಗದ ವಾದಿ ವಿವಾದಿ ಸಂವಾದಿ ಸ್ವರಗಳನ್ನು ಪಟ್ಟಿಮಾಡಿದರೇ?

Ø ರಾಗದ ಸಂಚಾರಿ ಸ್ವರಗಳನ್ನು ಪ್ರಯೋಗ ಮಾಡುವರೇ?

Ø ರಾಗದ ಕೆಲವು ಕೃತಿ ಗಳನ್ನು ಪಟ್ಟಿ ಮಾಡಿದರೆ?

Ø ಒಂದು ರಾಗವನ್ನು ಹಾಡಿದಾಗ ಇದು ಇಂಥ ರಾಗವೇ ಎಂದು ತಿಳಿಯುವರೇ?

ಘಟಕಾಂತ್ಯದ ಪ್ರಶ್ನೆ:

Ø ರಾಗ ಲಕ್ಷಣ ಎಂದರೇನು?

Ø ರಾಗ ಲಕ್ಷಣಗಳಲ್ಲಿ ಗಮನಿಸಬೇಕಾದ ಅಂಶಗಳಾವುವು?

Ø ಒಂದು ರಾಗದ ಲಕ್ಷಣವನ್ನು ಯಾವ ಮಾನದಂಡದಿಂದ ತೀರ್ಮಾನಿಸುವಿರಿ?

Ø ರಾಗದ ವರ್ಗವನ್ನು ಕಂಡು ಹಿಡಿಯಿರಿ.

Ø ರಾಗದ ಸಂಚಾರವನ್ನು ಬರೆಯಿರಿ.

Ø ರಾಗದ ವಿಕೃತಿ ಸ್ವರಗಳನ್ನು ಪಟ್ಟಿ ಮಾಡಿ.

Ø ರಾಗದ ಕೃತಿಗಳನ್ನು ಪಟ್ಟಿಮಾಡಿ.

ಉಪಸಂಹಾರ:

  • ರಾಗ ಲಕ್ಷಣವು ರಾಗದ ಲಕ್ಷಣಭಾಗವನ್ನು ತಿಳಿಯುವ ಶಾಸ್ತ್ರಭಾಗದ ಅಂಶ. ಸಾಹಿತ್ಯವನ್ನು ಓದಿ ಅರ್ಥ ಮಾಡಿಸುವರೇ?
  • ರಾಗದ ಇತರ ಹಾಡುಗಳನ್ನು ಪಟ್ಟಿ ಮಾಡುತ್ತಾರೆಯೇ?
  • ಈ ಕೆಳಗಿನ ಎಲ್ಲಾ ರಾಗಗಳಿಗೂ ರಾಗ ಲಕ್ಷಣ ಬರೆಯಿರಿ – ಮಾಯಾಮಾಳವಗೌಳ, ಮಲಹರಿ, ಮೋಹನ, ಖರಹರಪ್ರಿಯ, ಹಂಸಧ್ವನಿ, ಮಧ್ಯಮಾವತಿ, ಬಿಲಹರಿ, ಕಾಂಭೋಜಿ, ಹಿಂದೋಳ, ಕಾಮವರ್ಧಿನಿ.

ಮಧ್ಯಮ ಕಾಲದ ಕೃತಿ

ಅಧಿವೇಶನ – 33                                              ಅವಧಿ:

ಪೀಠಿಕೆ:- ಕೃತಿಗಳಿಗೆ ಸಂಗೀತ ಪ್ರಪಂಚದಲ್ಲಿ ಮಹತ್ತರ ಸ್ಥಾನವಿದೆ. ಸಂಗೀತ ರಚನೆಗಳಲ್ಲಿ ಒಂದು ಅತ್ಯುತ್ತಮವಾದ ರಚನಾ ವಿಶೇಷ, ರಾಗ, ತಾಳ, ಗತಿ, ಶೈಲಿ, ವಿಷಯ, ಇವುಗಳಲ್ಲಿ ವಾಗ್ಗೇಯಕಾರನಿಗೆ ಸಂಪೂರ್ಣ ಸ್ವಾತಂತ್ರ್ಯವಿರುವುದರಿಂದ ರಾಗಭಾವದ ವಿವಿಧ ಮುಖಗಳನ್ನು ರೂಪಿಸಲು ಈ ಬಗೆಯ ಗೇಯಪ್ರಕಾರಗಳಲ್ಲಿ ಹೆಚ್ಚಾಗಿ ಭಕ್ತಿರಸದ ಅನುಭವವಾಗುತ್ತದೆ. ರಾಗ ಭಾವವನ್ನು ಚಿತ್ರಿಸುವುದು ಕೃತಿಯ ಮುಖ್ಯಗುರಿಯಾಗಿದ್ದು, ಸಾಹಿತ್ಯವು ಗೌಣವಾಗಿರುತ್ತದೆ.

ಕೃತಿಯ ಸಾಹಿತ್ಯದ ವಸ್ತುವು ದೇವತಾಸ್ತುತಿ, ನೀತಿ, ತರ್ಕ, ಅಥವಾ ಲೌಕಿಕ ವಿಷಯವಾಗಿರಬಹುದು. ಕೃತಿಯು ಹಾಡಲು ಹೆಚ್ಚು ಅನುಕೂಲಕರ. ಇದರ ಸಂಗೀತವು ಸೌಂದರ್ಯ ವಿಶೇಷಗಳಿಂದ ಕೂಡಿರುವುದಲ್ಲದೇ ಪಲ್ಲವಿ, ಅನುಪಲ್ಲವಿ, ಒಂದು ಅಥವಾ ಹೆಚ್ಚು ಚರಣಗಳಿಂದ ಕೂಡಿರುತ್ತದೆ. ಚರಣಗಳ ಧಾತು ಒಂದೇ ವಿಧವಾಗಿರಬಹುದು, ಅಥವಾ ಅದರಲ್ಲಿ ವೈವಿಧ್ಯತೆ ಇರಬಹುದು, ಅತೀತ, ಅನಾಗತ ಪ್ರಯೋಗಗಳು ಬಹುವಾಗಿ ಕೃತಿಗಳಲ್ಲಿವೆ. ಕೃತಿಗಳು ರಾಗದ ರತ್ನಗಳು. ಅನೇಕ ಅಪೂರ್ವರಾಗಗಳು ನಮಗೆ ಕೃತಿಗಳಿಂದ ತಿಳಿದುಬರುತ್ತವೆ.

ಉದ್ದೇಶ

ವೈವಿಧ್ಯಪೂರ್ಣವಾದ ಮತ್ತು ಪಾಂಡಿತ್ಯಪೂರ್ಣವಾದ ಸಂಗೀತ ಪ್ರದರ್ಶನವೇ ಹೊರತು

ಸಾಹಿತ್ಯಪ್ರಧಾನವಾದ ವಿಚಾರಬೋಧೆಯಲ್ಲ ಎಂಬುದನ್ನು ಗಮನಿಸುವುದು.

ಕಲಿಕಾ ಸಾಮಗ್ರಿ:-

ಶ್ರುತಿಪೆಟ್ಟಿಗೆ, ತಂಬೂರಿ, ಮತ್ತು ಕಪ್ಪು ಹಲಗೆ.

ಕಲಿಕಾವಿಧಾನ:

ಹಂತ 1 — ಆರೋಹಣ – ಅವರೋಹಣವನ್ನು ಬರೆಯಿಸುವುದು.

ಹಂತ 2 –- ಸ್ವರಸಾಹಿತ್ಯವನ್ನು ಬರೆಯಿಸುವುದು.

ಹಂತ 3 –- ರಾಗ ಬದ್ಧವಾಗಿ ಹಾಡಿತೋರಿಸುವುದು.

ಹಂತ 4 — ವಿದ್ಯಾರ್ಥಿಗಳಿಗೆ ಹೇಳಿ ಕೊಡುವುದು.

ಹಂತ 5 — ತಪ್ಪನ್ನು ತಿದ್ದುವುದು.

ಸ್ವ ಮೌಲ್ಯಮಾಪನ

Ø ಕೃತಿಗಳ ಪರಿಚಯವಾಯಿತೇ?

Ø ರಾಗಗಳ ಪರಿಚಯವಾಯಿತೇ?

Ø ಸಾಹಿತ್ಯದ ಪರಿಚಯವಾಯಿತೇ?

Ø ಸಾಹಿತ್ಯದ ವಸ್ತು ವಿಷಯದ ಅರಿವಾಯಿತೇ?

ತಾತ್ವಿಕ ಪ್ರಶ್ನೆಗಳು

  1. ಉತ್ತಮ ರಚನಾ ವಿಶೇಷವು ಯಾವುದು?
  2. ಕೃತಿಯ ಮುಖ್ಯ ಗುರಿ ಏನು?
  3. ಸಾಹಿತ್ಯದ ವಸ್ತು ವಿಷಯ ಯಾವುದು?
  4. ರಾಗದ ರತ್ನಗಳು ______________ .
  5. ಅಪೂರ್ವರಾಗಗಳು ______________ ಇಂದ ತಿಳಿದು ಬರುತ್ತವೆ.

ಗಾನಯೋಗಿ ಡಾ|| ಪಂಡಿತ್ ಪುಟ್ಟರಾಜ ಗವಾಯಿಗಳು

ಅಧಿವೇಶನ: 34

ಅವಧಿ: 90 ನಿಮಿಷಗಳು

ಪೀಠಿಕೆ: ಗಾನಯೋಗಿ ಜ್ಞಾನಯೋಗಿ ಉಭಯಗಾನ ವಿಶಾರದರ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗಾನ ಋಷಿಗಳೂ ಆಗಿದ್ದ ಪಂಡಿತ್ ಡಾ|| ಪುಟ್ಟರಾಜ ಗವಾಯಿಯವರು ಈ ನಾಡು ಕಂಡ ಅಪರೂಪದ ಮಹಾಪುರುಷರಾಗಿದ್ದರು. ಸಾವಿರಾರು ಅಂಧ, ಅನಾಥ, ಬಡಮಕ್ಕಳ

ಜೀವನಕ್ಕೆ ಸಂಗೀತದ ದಾರಿದೀಪವನ್ನು ಕೊಟ್ಟವರು. ಅವರು ಸ್ವತಃ ಅಂಧರಾಗಿದ್ದುಕೊಂಡು ತಮ್ಮ ಅಂತರಂಗದ ಕಣ್ಣಿನ ಸತ್ವದಿಂದ ವೀರೇಶ್ವರ ಪುಣ್ಯಾಶ್ರಮದಂತಹ ಬೃಹತ್ ಸಂಗೀತದ ಆಶ್ರಮವನ್ನು ದಕ್ಷವಾಗಿ ಮುನ್ನಡೆಸಿದವರು. ಯಾವುದೇ ಜಾತಿ, ಮತ, ವರ್ಣಗಳ ಭೇದವೆಣಿಸದೆ ಉಚಿತವಾಗಿ ಸಂಗೀತದ ಜ್ಞಾನವನ್ನು ಶಿಷ್ಯಕೋಟಿಗೆ ಧಾರೆಯೆರೆದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವು ಕರ್ನಾಟಕದಲ್ಲಿ ಪಸರಿಸಲು ಮುಖ್ಯ ಕಾರಣಕರ್ತರಾದವರು.

ಬಾಲ್ಯ: ಪುಟ್ಟರಾಜ ಗವಾಯಿಯವರು 03 – 03 – 1914 ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ದೇವರ ಹೊಸಪೇಟೆ ಗ್ರಾಮದ ಬಡಲಿಂಗಾಯಿತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರೇವಯ್ಯ ವೆಂಕಟಪುರಮಠ ಮತ್ತು ತಾಯಿ ಸಿದ್ದಮ್ಮ, ಇವರ ಬಾಲ್ಯದ ಹೆಸರು ಮುಟ್ಟಯ್ಯ. 10ತಿಂಗಳ ಹಸುಗೂಸಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. 6 ವರ್ಷದ ವಯಸ್ಸಿನಲ್ಲಿ ಅಚಾತುರ್ಯದಿಂದಾಗಿ ಕಣ್ಣುಗಳನ್ನು ಕಳೆದುಕೊಂಡರು. ಆದರೆ ಸೋದರಮಾವ ಚಂದ್ರಶೇಖರಯ್ಯನವರು ಪುಟ್ಟಯ್ಯನನ್ನು ಪ್ರೀತಿಯಿಂದ ಬೆಳೆಸಿದರು. ಇವರಲ್ಲಿದ್ದ ಕಲೆಯನ್ನು ಗುರುತಿಸಿ ಇವರನ್ನು ಪಂಚಾಕ್ಷರ ಗವಾಯಿಯವರು ನಡೆಸುತ್ತಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದರು.

ವಿದ್ಯಾಭ್ಯಾಸ: ಅಪಾರವಾದ ಜ್ಞಾನದ ಹಸಿವನ್ನು ಹೊಂದಿದ್ದ ಪುಟ್ಟಯ್ಯ ಪಂಚಾಕ್ಷರಿ ಗವಾಯಿಯವರಿಂದ ಘ್ವಾಲಿಯರ್ ಘರಾಣೆಯ ಹಿಂದೂಸ್ತಾನಿ ಸಂಗೀತವನ್ನು ಮತ್ತು ಕರ್ನಾಟಕ ಸಂಗೀತವನ್ನು ಮುಂಡರಗಿ ರಾಘವೇಂದ್ರಾಚಾರ್‌ ರವರಿಂದ ಕಲಿತು ಸಂಗೀತ ವಿದ್ವಾಂಸರಾದರು. ಇದರೊಂದಿಗೆ ಕನ್ನಡ, ಸಂಸ್ಕೃತ, ಹಿಂದಿ ಭಾಷೆಯಲ್ಲಿಯೂ ಕೂಡಾ, ಪಾಂಡಿತ್ಯವನ್ನು ಗಳಿಸಿದರು. ವೀಣೆ, ತಬಲ, ಮೃದಂಗ, ಪಿಟೀಲು, ಹಾರ್ಮೋನಿಯಂ, ಸಾರಂಗಿ ಮುಂತಾದ 10 ವಾದ್ಯಗಳನ್ನು ನುಡಿಸುವುದರಲ್ಲಿ ಪ್ರವೀಣರಾದರು. ಬ್ರೈಲ್ ಲಿಪಿಯನ್ನು ಕರಗತ ಮಾಡಿಕೊಂಡು ಸಕಲವಿದ್ಯಾಪಾರಂಗರತಾದರು. ಗುರು ಪಂಚಾಕ್ಷರಿ ಗವಾಯಿಯವರಿಗೆ ತಕ್ಕ ಶಿಷ್ಯರಾದರು.

ಸಾಧನೆಗಳು:

1994ರಲ್ಲಿ ಪಂಚಾಕ್ಷರಿ ಗವಾಯಿಯವರು ಶಿವೈಕ್ಯರಾದ ನಂತರ ವೀರೇಶ್ವರ ಪುಣ್ಯಾಶ್ರಮದ ಸಂಪೂರ್ಣ ಜವಾಬ್ದಾರಿ ಪುಟ್ಟರಾಜರ ಹೆಗಲ ಮೇಲೆ ಬಿದ್ದಿತು. ಶ್ರೀ ಗುರು ಕುಮಾರೇಶ್ವರ ಕೃಪಾ ಪೋಷಿತ ನಾಟಕ ಕಂಪೆನಿಯನ್ನು ಸ್ಥಾಪಿಸಿ, ಊರೂರುಗಳಲ್ಲಿ ಪುರಾಣ ಪ್ರವಚನಗಳನ್ನು ಮಾಡಿ, ಉತ್ತಮ ಧಾರ್ಮಿಕ ನಾಟಕಗಳನ್ನು ಮಾಡಿಸಿ ಆಶ್ರಮದ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ಇವರು ಒಟ್ಟು 80 ಪುಸ್ತಕಗಳನ್ನು ಕನ್ನಡ, ಹಿಂದಿ ಹಾಗೂ ಸಂಸ್ಕೃತದಲ್ಲಿ ರಚಿಸಿದರು. ಬ್ರೈಲ್ ಲಿಪಿಯಲ್ಲಿ ಭಗವದ್ಗೀತ ಹಾಗೂ ಉಪನಿಷತ್‌ಗಳನ್ನು ಬರೆದು ಅಂಧರು ಕೂಡಾ ಇವುಗಳ  ಸಾರವನ್ನು ತಿಳಿಯುವಂತೆ ಮಾಡಿದರು. ಈ ಎಲ್ಲ ಸಾಧನೆಯಿಂದಾಗಿ ಪುಟ್ಟರಾಜರನ್ನು ಕವಿಶಿರೋಮಣಿ, ತ್ರಿಭಾಷಾ ಕವಿರತ್ನ ಎಂದು ಕೂಡಾ ಕರೆಯುತ್ತಾರೆ. ಸರ್ಕಾರದ ನೆರವಿಲ್ಲದೆ ಸಾವಿರಾರು ಅಂಧ, ಅನಾಥ, ಬಡಮಕ್ಕಳಿಗೆ ಉಚಿತವಾಗಿ ಊಟ, ವಸತಿ, ವಿದ್ಯಾಭ್ಯಾಸ, ಕಲಾಶಿಕ್ಷಣವನ್ನು ನೀಡಿ ಅವರ ಪಾಲಿನ ನಡೆದಾಡುವ ದೇವರಾದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಕಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ನೀಡಿದರು. ಪಂಡಿತ್ ಚಂದ್ರಶೇಖರ್ ಪುರಾಣಿಕಮಠ, ಪಂ ವಂಕಟೇಶ್ ಕುಮಾರ್, ಡಾ॥ ಪಂಚಾಕ್ಷರಿ ಹಿರೇಮಠ, ಪಂ॥ ಅರ್ಜುನ್‍ಸಾ ನಾಕೋಡ್ ಮುಂತಾದ ಸಾವಿರಾರು ಪ್ರತಿಭಾವಂತ ಶಿಷ್ಯರನ್ನು ಸಮಾಜಕ್ಕೆ ನೀಡಿದರು.

ಪ್ರಶಸ್ತಿಗಳು:

ಪುಟ್ಟರಾಜರ ಅಗಾಧ ಪ್ರತಿಭೆಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದವು. ಅವುಗಳಲ್ಲಿ ಕೆಲವೆಂದರೆ ಪದ್ಮಭೂಷಣ ಪ್ರಶಸ್ತಿ, ಕನಕ ಪುರಂದರ ಪ್ರಶಸ್ತಿ, ಕಾಳಿದಾಸ್ ಸಮ್ಮಾನ್ ಪ್ರಶಸ್ತಿ, ರಾಷ್ಟ್ರಪತಿ ಪುರಸ್ಕಾರ, ರಾಜ್ಯ ಸಂಗೀತ ವಿದ್ವಾನ್, ಬಸವಶ್ರೀ, ನಾಡೋಜ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟನ್ನು ನೀಡಿ ಗೌರವಿಸಿದೆ.

96 ವರ್ಷಗಳ ಸಾರ್ಥಕ ಬದುಕನ್ನು ಬದುಕಿದ ಪುಟ್ಟರಾಜ ಗವಾಯಿಗಳು 17 ಸೆಪ್ಟೆಂಬರ್ 2010ರಲ್ಲಿ ಶಿವೈಕ್ಯರಾದರು, ಶರಣರ ಬದುಕನ್ನು ಮರಣರದಲ್ಲಿ ಕಾಣು ಎನ್ನುವಂತೆ ಅಂದು ನೆರೆದಿದ್ದ ಕ್ಷಾಂತರ ಜನ ಈ ನಾಡಿನ ಅದ್ಭುತ ಚೇತನಕ್ಕಾಗಿ ಕಂಬನಿ ಮಿಡಿಯುತ್ತಿತ್ತು. ಅವರು ನಿಜವಾಗಿಯೂ ನೆಲದ ಮೇಲಿನ ನಕ್ಷತ್ರವಾಗಿದ್ದರು.

ಉದ್ದೇಶ:

Ø ಮಹಾನ ಸಂಗೀತಗಾರರ ಜೀವನವನ್ನು ಕುರಿತು ಆಸಕ್ತಿ ಮೂಡಿಸುವುದು.

Ø ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಯವರ ಕೊಡುಗೆಗಳನ್ನು ಸ್ಮರಿಸುವುದು.

Ø ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುವುದು.

Ø ಯಾವುದೇ ಅಂಗವಿಕಲತೆಯು ನಿಜವಾದ ಸಾಧಕನಿಗೆ ಅಡ್ಡಿಯಾಗುವುದಿಲ್ಲ ಎಂದು ಅರಿಯುವಂತೆ ಮಾಡುವುದು.

Ø ಅವರು ಒಬ್ಬ ವ್ಯಕ್ತಿಯಲ್ಲ ಶಕ್ತಿ ಎಂಬುದನ್ನು ಅವರ ಜೀವನದಿಂದ ಸ್ಫೂರ್ತಿಯನ್ನು ಪಡೆಯುವಂತೆ ಮಾಡುವುದು.

ಕಲಿಕಾ ಹಂತಗಳು:

ಹಂತ 1: ಪುಟ್ಟರಾಜ ಗವಾಯಿಯವರ ಜೀವನ ಚರಿತ್ರೆಯನ್ನು ರೋಚಕವಾಗಿ ವಿವರಿಸುವುದು.

ಹಂತ 2: ಅವರು ಬರೆದ ವಚನಗಳನ್ನು ಹಾಡುವುದು.

ಹಂತ 3: ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ವಿವರಿಸುವುದು.

ಹಂತ 4: ಶಿಷ್ಯ ಪರಂಪರೆ ಕುರಿತು ಮಾಹಿತಿ ನೀಡುವುದು.

ಹಂತ 5: ಪುಟ್ಟರಾಜ ಗವಾಯಿಯವರ ಕುರಿತು ವೀಡಿಯೋ ಚಲನಚಿತ್ರ ಸಾಕ್ಷ್ಯಚಿತ್ರ ಪ್ರದರ್ಶಿಸುವುದು.

ಸ್ವಮೌಲ್ಯಮಾಪನ:

Ø ಪುಟ್ಟರಾಜ ಗವಾಯಿಯವರ ಕುರಿತು ತಿಳಿದಿರುವರೆ?

Ø ಅವರ ಸಾಧನೆಯ ಕುರಿತು ಹೆಮ್ಮೆ ಮೂಡಿದೆಯೇ?

Ø ಅವರಂತೆಯೇ ತಮ್ಮಲ್ಲಿರುವ ದೌರ್ಬಲ್ಯವನ್ನು ಮೀರಿ ಬೆಳೆಯಬೇಕೆಂದು ಆಲೋಚಿಸುತ್ತಾರೆಯೇ .

Ø ಮನಸ್ಸಿದಲ್ಲಿ ಮಾರ್ಗ ಎಂಬುದು ಮನನವಾಗಿದೆಯೇ?

ಘಟಕಾಂಗ ಪ್ರಶ್ನೆಗಳು:

Ø ಪುಟ್ಟರಾಜ ಗವಾಯಿಯವರ ಸಂಗೀತ ಕಲಿಕೆಯ ಕುರಿತು ಬರೆಯಿರಿ.

Ø ಪುಟ್ಟರಾಜ ಗವಾಯಿಯವರನ್ನು ಉಭುಗಾನವಿಶಾರದ ಎಂದು ಏಕೆ ಕರೆಯುತ್ತಾರೆ?

Ø ಪುಟ್ಟರಾಜ ಗವಾಯಿಯವರ ಕೊಡುಗೆಗಳ ಕುರಿತು ಬರೆಯಿರಿ.

Ø ಪುಟ್ಟರಾಜ ಗವಾಯಿಯವರಿಗೆ ಸಂದ ಪ್ರಶಸ್ತಿಗಳಾವುವು.

Ø ಪುಟ್ಟರಾಜ ಗವಾಯಿಯವರ ಪ್ರಮುಖ ಶಿಷ್ಯರ ಹೆಸರನ್ನು ತಿಳಿಸಿ.

Ø ‘ಮನಸ್ಸಿದ್ದಲ್ಲಿ ಮಾರ್ಗ’ ಎನ್ನುವುದಕ್ಕೆ ಪುಟ್ಟರಾಜ ಗವಾಯಿಯವರ ಜೀವನವೇ ಸಾಕ್ಷಿ ಎಂಬುದನ್ನು ನಿರೂಪಿಸಿ.

Ø ಪುಟ್ಟರಾಜ ಗವಾಯಿಯವರ ಜೀವನ ಚರಿತ್ರೆಯನ್ನು ಬರೆಯಿರಿ.

ಅಧಿವೇಶನ: 34 (1) ನೃತ್ಯಗೀತೆ

ಕರ್ನಾಟಕ ಸಂಗೀತಕ್ಕೆ ಹರಿದಾಸರ ಕೊಡುಗೆ.

ಅಧಿವೇಶನ – 35

ಅವಧಿ 60 ನಿಮಿಷಗಳು

ಇಂದಿನ ಗೇಯ ಪ್ರಭಂದರಾಶಿಯ ಮಾತೃಕೆಯನ್ನು ನಿರ್ಮಿಸಿದವರು ವಿರಕ್ತರಾದ ಯತಿಗಳು, ಭಗವದ್ಭಕ್ತರು, ಸಂತರು, ಲೋಕಹಿತವ್ರತರಾದ ಸಮಾಜ ಸುಧಾರಕರು. ಕರ್ನಾಟಕ ಸಂಗೀತದಲ್ಲಿ ಶಕ್ತಿಸಂಚಾರ ಮೂಡಿಸಿದ ಹಲವು ಮಹನೀಯರಲ್ಲಿ ಮುಖ್ಯರು ಹರಿದಾಸರು. ಇವರ ಸಾಧನೆಯು ಹದಿನಾರನೆಯ ಶತಮಾನದಲ್ಲಿ ಸಂಗೀತಾಕಾಶದ ನೆತ್ತಿಯನ್ನು ಮಟ್ಟಿತು.

ವ್ಯಾಸರಾಯ ಸ್ವಾಮಿಗಳು ಕರ್ನಾಟಕ ಸಂಗೀತದ ಸಂಪ್ರದಾಯ ಪ್ರವರ್ತಕರಾಗಿದ್ದರು. ಭಗವಂತನ ಮಹಿಮೆಯನ್ನು ತಿಳಿಗನ್ನಡದಲ್ಲಿ ಸಾರುವ ಸುಂದರ ರಸಘಟ್ಟಿಗಳನ್ನು ರಚಿಸಿದರು. ಇವರ ಶಿಷ್ಯರೂ ಅಷ್ಟೇ ಅಸಾಧಾರಣರು. ಒಬ್ಬರು, ಗುರು ಪುರಂದರದಾಸರು, ನವಕೋಟಿನಾರಾಯಣರಾಗಿದ್ದು, ಬೇಸತ್ತು ಗೃಹಸ್ಥರಾಗಿ ಉಳಿದು ವಿರಕ್ತರಾಗಿ ಹರಿದಾಸರಾದರು. ಇನ್ನೊಬ್ಬರು ವಾಧೀಭಸಿಂಹರೆನಿಸಿಕೊಂಡ ವಾದಿರಾಜ ಸ್ವಾಮಿಗಳು, ಯತಿವರ‍್ಯರು, ಮತ್ತೊಬ್ಬರು ಕುರುಬ ಜನಾಂಗದಲ್ಲಿ ಹುಟ್ಟಿ ಕುಲದ ಸಮನಾದ ಸಾಧನೆಯನ್ನು ಮಾಡಿದವರು, ಕನಕನಾಯಕರಾಗಿದ್ದವರು ಹರಿಸೇವಕರಾಗಿ ಕನಕದಾಸರಾದರು.

ಇಂದು ಕೃತಿ, ಕೀರ್ತನೆ ಎಂದು ಪ್ರಸಿದ್ದಿ ಪಡೆದಿರುವ ಹಾಡಿನ ರೀತಿಗೆ ಮಾತೃಪ್ರಾಯವಾದ ದೇವರನಾಮ ಆಥವಾ ದಾಸರ ಪದವು ಹುಟ್ಟಿದ್ದು, 14ರಿಂದ 16ನೇ ಶತಮಾನಗಳ ಕಾಲದ ವಿಜಯನಗರದಲ್ಲಿ ನರಹರಿ ತೀರ್ಥದಿಂದ ಪಾರಂಭವಾದ ಈ ಪ್ರಕಾರವನ್ನು ಮುಂದಿನ ಎಲ್ಲಾ ಹರಿದಾಸರೂ ಬೆಳೆಸಿ, ಅನೇಶ ಸಾವಿರ ರಚನೆಗಳನ್ನು ನಿರ್ಮಿಸಿದರು. ಕರ್ನಾಟಕ ಸಂಗೀತ ಶಿಕ್ಷಣದ ಅನುಕ್ರಮದಲ್ಲಿ ಪ್ರಥಮ ಸೋಪಾನವನ್ನು ನಿರ್ಮಿಸಿಕೊಟ್ಟವರು ಶ್ರೀ ಪುರಂದರದಾಸರು ಎಂಬುದನ್ನು ಮೊದಲು ಕಂಡುಹಿಡಿದು ಹೇಳಿದವರು, ತಮಿಳುನಾಡಿನವರು ಎಂಬುದು ಗಮನಾರ್ಹ,

ಶ್ರೀಪಾದರಾಜ ಸ್ವಾಮಿಗಳು, ಶ್ರೀ ವ್ಯಾಸರಾಯ ಸ್ವಾಮಿಗಳು, ಶ್ರೀ ಪುರಂದರದಾಸರು, ಶ್ರೀ ಕನಕದಾಸರು ಮುಂತಾದವರ ದೇವರನಾಮಗಳಲ್ಲಿ ಪಲ್ಲವಿ, ಅನುಪಲ್ಲವಿ, ಮತ್ತು ಚರಣಗಳ ವಿಂಗಡನೆಯು ಸ್ಪಷ್ಟವಾಗಿ ಕಾಣುತ್ತದೆ. ಕೃತಿಯ ಆವಿಷ್ಕಾರವು ಕನ್ನಡದಲ್ಲಿ ಆರಂಭವಾಗಲು ಹರಿದಾಸರೇ ಬಹುಮಟ್ಟಿಗೆ ಕಾರಣ, ಭಾರತೀಯ ಸಂಗೀತದ ಪ್ರಪ್ರಥದು ಗೇಯನಾಟಕವನ್ನು ರಚಿಸಿದವರು ವಾದಿರಾಜರು. ಸಂಸ್ಕೃತದಲ್ಲಿ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.

ಕನ್ನಡದಲ್ಲಿ ಲಕ್ಷ್ಮೀಶೋಭಾನೆ, ಭ್ರಮರಗೀತೆ, ಸ್ವಪ್ನಗದ್ಯ, ವೈಕುಂಠ ವರ್ಣನೆ, ಗುಂಡಕ್ರಿಯ ಎಂಬ ಖಂಡಕಾವ್ಯಗಳನ್ನು, ಹಲವಾರು ಉಗಾಭೋಗಗಳನ್ನು, ಸುಳಾದಿ, ದೇವರನಾಮಗಳನ್ನು “ಹಯವದನ” ಎಂಬ ಅಂಕಿತದಲ್ಲಿ ರಚಿಸಿದ್ದಾರೆ. ಮಂಡಿಗೆಯೆಂಬ ಹೊಸ ಸಾಹಿತ್ಯ ಪ್ರಕಾರವನ್ನು ನಮ್ಮ ಸಂಗೀತದಲ್ಲಿ ಪ್ರವೇಶಗೊಳಿಸಿದವರು ಕನಕದಾಸರು. ಇದಲ್ಲದೇ ನಳಚರಿತ್ರೆ, ಹರಿಭಕ್ತಿಸಾರ, ಮೋಹನ ತರಂಗಿಣಿ, ಮುಂತಾದವುಗಳಲ್ಲಿ ಸಂಗೀತವು ಹಾಸುಹೊಕ್ಕಾಗಿದೆ.

ಹರಿದಾಸರು ಮತ್ತೊಂದು ಅಮೂಲ್ಯವಾದ ಕೊಡುಗೆಯೆಂದರೆ, ದೇಶಿ ತಾಳಗಳನ್ನು, ಮಾರ್ಗತಾಳಗಳನ್ನು ರೂಢಿಯಿಂದ ಕಿತ್ತೊಗೆದರು. ಅವುಗಳ ಬದಲು, ಈಗಲೂ ಪ್ರಸಿದ್ದವಾಗಿ, ಏಕೈಕವಾಗಿ ರೂಢಿಯಲ್ಲಿರುವ ಸುಳಾದಿತಾಳಗಳನ್ನು ಲಕ್ಷ್ಯದಲ್ಲಿ ಮತ್ತು ಶಾಸ್ತ್ರದಲ್ಲಿ ಹರಿದಾಸರು ನೆಟ್ಟು ಬೆಳೆಸಿದರು ಎಂಬುದು ಗಮನಾರ್ಹ. ತಾಳಗಳ ವಿಚಾರದಲ್ಲಿ ಅವರು ಸಾಧಿಸಿದ್ದು, ಅದ್ಭುತ, ಅತ್ಯುನ್ನತ. ಹೀಗೆ ಕರ್ನಟಕ ಸಂಗೀತದ ಬೆಳವಣಿಗೆಯಲ್ಲಿ ಹರಿದಾಸರ ಕೊಡುಗೆ, ಮಹತ್ತರವಾದುದು, ಭವ್ಯವಾದುದು.

ಶ್ರೀಗೋಪಾಲದಾಸರು

ಅಧಿವೇಶನ                                                              ಅವಧಿ: 30 ನಿಮಿಷಗಳು

ಪೀಠಿಕ:-

ಹರಿದಾಸ ಸಾಹಿತ್ಯ ಶ್ರೀಪಾದರಾಜರಿಂದ ಮೊದಲಾಗಿ ವ್ಯಾಸರಾಯರು, ವಾದಿರಾಜರುಗಳಿಂದ ಉಳಿದು ಬೆಳೆದು ಪುರಂದರ ಹಾಗೂ ಕನಕದಾಸರುಗಳಿಂದ ಉನ್ನತಿಯನ್ನು ಕಂಡು ನಂತರ ಕೆಲವು ಕಾಲ ಅಜ್ಞಾತವಾಸವನ್ನು ಅನುಭವಿಸಿತು. ಮುಂದೆ

ಶ್ರೀರಾಘವೇಂದ್ರಸ್ವಾಮಿಗಳ ನೇತೃತ್ವದಲ್ಲಿ ಪುನಃದಾಸಕೂಟವು ಪ್ರಾರಂಭವಾಯಿತು. ಅವರ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀಗೋಪಾಲದಾಸರು, ಶ್ರೀಜಗನ್ನಾಥದಾಸರು ಮುಂತಾದವರು ಬೆಳಕಿಗೆ ಬಂದರು. ಹೀಗೆ ದಾಸಸಾಹಿತ್ಯದ ಮರುಹುಟ್ಟು ಆಯಿತು.

ಉದ್ದೇಶ

ಗೋಪಾಲದಾಸರ ಪದಗಳನ್ನು ಪರಿಚಯಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಅವರ ಕೀರ್ತನೆಗಳಲ್ಲಿರುವ ಸಾರಾಂಶ ಮತ್ತು ಒಳಾರ್ಥಗಳನ್ನು ತಿಳಿಸುವುದರ ಜೊತೆಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು, ಅಥವಾ ತಿಳಿಯಲು ಪ್ರೇರೆಪಿಸುವುದು.

ದಾಸರ ಜನನ:-  1721ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರುಕಲ್ಲಿನಲ್ಲಿ ಜನಿಸಿದರು. ಇವರ ತಂದ ಮುರಾರಿ, ತಾಯಿ ವೆಂಕಟಮ್ಮ, ತಾತ ಮುದ್ಗಲ್ಲಪ್ಪ, ದಾಸರ ಮೊದಲ ಹೆಸರು ಅಥವಾ ಹುಟ್ಟಿದ ಹೆಸರು ಬಾಗಣ್ಣ. ಇವರ ಗುರುಗಳು ಶ್ರೀವಿಜಯದಾಸರು.

ವಿದ್ಯಾಭ್ಯಾಸ:-  ದಾಸರ ತಾಯಿ ಉತ್ತನೂರಿಗೆ ಬಂದು ಪಾಳುಗುಡಿಯಲ್ಲಿ ಮಕ್ಕಳೊಂದಿಗೆ ವಾಸಮಾಡುತ್ತಾ ಆ ಗ್ರಾಮದ ಉಪನ್ಯಾಸಕರ ಬಳಿ ನಾಲ್ವರು ಮಕ್ಕಳಿಗೂ ವಿದ್ಯಾಭ್ಯಾಸಮಾಡಿದರು.

ಉಪನಯನ ಕಾರ್ಯ:-  ಸಂಕಾಪುರದ ಶಾನುಭೋಗ ಗುಂಡಪ್ಪನವರು ತಮ್ಮ ಮಗನ ಜೊತೆಯಲ್ಲಿ ಬಾಗಣ್ಣನಿಗೂ ಧರ್ಮೋಪನಯನ ಮಾಡಿ ಅಗ್ನಿಕಾರ್ಯಚರಣೆ ಮತ್ತು ಇತರೆ ಮಂತ್ರಗಳನ್ನೆಲ್ಲಾ ಕಲಿಸಿದರು. ಭಕ್ತಿಯಿಂದ ಗಾಯತ್ರಿಮಂತ್ರದ ಸಾಧನೆಯಲ್ಲಿ ತೊಡಗಿ ಎರಡು ವರ್ಷಗಳ ನಂತರ ಅವರ ಸಾಧನೆ ಕೊನೆಗೊಂಡು ಜನರಿಗೆ ಭವಿಷ್ಯ ಹೇಳಬಲ್ಲನೆಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿತು.

ಗದ್ವಾಲಿನ ದೊರೆಯ ಗೌರವ

ಬಾಗಣ್ಣನ ಸತ್ಕಾರ್ಯವನ್ನು ಕೇಳಿ ಅಂದಿನ ಗದ್ವಾಲಿನ ದೊರೆ ರಾಮಭೂಪಾಲ ಭಾಗಣ್ಣನ ದರ್ಶನಾರ್ಥವಾಗಿ ಉತ್ತನೂರಿಗೆ ಬಂದು ಭವಿಷ್ಯ ಕೇಳಿ ಭೂಮಿಕಾಣಿಗಳನ್ನು ಹಾಗೂ ಕುದುರೆಗಳನ್ನು ಕೊಟ್ಟು ಗೌರವಿಸಿದನು.

Ø ದಾಸರ ಅಂಕಿತ – ಮೊದಲು ‘ವಂಕಟ ಕೃಷ್ಣ ‘ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು. ಅನಂತರದಲ್ಲಿ ಪುರಂದರದಾಸರ ಶಿಷ್ಯರಾಗಿದ್ದ ವಿಜಯದಾಸರು ಬಾಗಣ್ಣನನ್ನು ಭೇಟಿಯಾಗಿ “ಗೋಪಾಲವಿಠಲ” ಎಂಬ ಅಂಕಿತವನ್ನು ಪಡೆದು ಗೋಪಾಲದಾಸರಾದರು.

ಕಲಿಕಾ ಸಾಮಗ್ರಿ:-

ಚಿತ್ರಪಟ, ಸಾಕ್ಷಚಿತ್ರ, ಧ್ವನಿಮುದ್ರಿಕೆಗಳು.

ಕಲಿಕಾವಿಧಾನ:

ಹಂತ 1 – ಕೀರ್ತನೆಗಳನ್ನು ಕಪ್ಪುಹಲಗೆಯ ಮೇಲೆ ತಪ್ಪಿಲ್ಲದಂತೆ ಬರೆಯಿಸುವುದು.

ಹಂತ 2 – ಹಾಡಿ ತೋರಿಸುವುದು.

ಹಂತ 3 – ಹೇಳಿಕೊಡುವುದು.

ಹಂತ 4 – ಕಂಠಪಾಠ ಮಾಡಲು ಹೇಳುವುದು.

ಸ್ವಮೌಲ್ಯಮಾಪನ:

  1. ಚಿತ್ರಪಟವನ್ನು ಗುರುತಿಸಿರುವರೇ?
  2. ಬಾಲ್ಯ ಜೀವನದ ಬಗ್ಗೆ ತಿಳಿಯಿತೇ?
  3. ಗಾಯಿತ್ರಿ ಮಂತ್ರದ ಸಾಧನೆಯ ಬಗ್ಗೆ ತಿಳಿದರೇ?
  4. ಅವರ ರಚನೆಗಳ ಬಗ್ಗೆ ಮನವರಿಕೆಯಾದರೇ?

ಘಟಕಾಂತ್ಯದ ಪ್ರಶ್ನೆಗಳು:

  1. ಗೋಪಾಲದಾಸರ ಗುರುಗಳು ಯಾರು?
  2. ದಾಸರ ಹುಟ್ಟಿದ ಹೆಸರೇನು?
  3. ಇವರ ಜನ್ಮಸ್ಥಳ ಯಾವುದು?
  4. ಮೊದಲು ಯಾವ ಅಂಕಿತದಿಂದ ಪದಗಳನ್ನು ರಚಿಸಿದರು?
  5. ವಿಜಯದಾಸರು ನೀಡಿದ ಅಂಕಿತವೇನು?

ಕನಕದಾಸರು

ಅಧಿವೇಶನ                                                                    ಅವಧಿ

ಪೀಠಿಕೆ: ಕನ್ನಡನಾಡು ಶ್ರೀಮಂತವಾಗಿ ಬೆಳೆಯಲು ಸಾಹಿತ್ಯದ ಸಾಹಿತಿಗಳ ಕೊಡುಗೆ ಅಪಾರ. ಅದರಲ್ಲಿ ವಚನ, ದಾಸಸಾಹಿತ್ಯದ ಕೊಡುಗೆ ಅಪಾರ. ಈ ದಾಸಶ್ರೇಷ್ಟರಲ್ಲಿ ಪುರಂದರದಾಸರ ನಂತರದ ಸ್ಥಾನ ಕನಕದಾಸರದು.

ಕನಕ ದಾಸರು ಕ್ರಿ.ಶ. 1486ರಲ್ಲಿ ‘ಬಾಡ’ ಎಂಬ ಗ್ರಾಮದಲ್ಲಿ ಜನಿಸಿದರು. ಕುರುಬರ ಪಂಗಡಕ್ಕೆ ಸೇರಿದ ಇವರು ತಿರುಪತಿ ತಿಮ್ಮಪ್ಪನ ಒಕ್ಕಲಿನವರು ಹಾಗಾಗಿ ‘ತಿಮ್ಮಪ್ಪ’ ಎಂದೇ ಇವರ ಹೆಸರು. ವಂಶ ಪಾರಂಪರ್ಯದಂತೆ ತಂದೆಯ ನಂತರ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಬಂಗಾರದ ನಾಣ್ಯಗಳು ದೊರೆತವು. ಆ ಹಣವನ್ನು ಆ

ಗ್ರಾಮದ ಕೇಶವ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ವಿನಿಯೋಗ ಮಾಡಿದರು. ಆದ್ದರಿಂದ ಅಂದಿನಿಂದ ಅವರು ‘ಕನಕ’ ಎಂದೇ ಹೆಸರುವಾಸಿಯಾದರು. ಕನಕ ನಾಯಕನಾಗಿ ಆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರು. ನಂತರ ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದು ಕನಕದಾಸರಾದರು.

ಜೀವನದಲ್ಲಿ ಇಂಥ ತಿರುವನ್ನು ಪಡೆದವರಲ್ಲಿ ಪುರಂದರದಾಸರನ್ನೇ ಹೋಲುವ ಕನಕರು ಕನಕದಾಸರಾಗಿ ಸರ್ವಸಂಪತ್ತನ್ನೂ ಬಿಟ್ಟು ಕೇಶವನ ನಾಮಸ್ಮರಣೆಯನ್ನೆ ಉಸಿರಾಗಿಸಿಕೊಂಡರು. ಸಾಹಿತ್ಯ ರಚನೆಯಲ್ಲಿ ತನ್ನನ್ನೆ ತೊಡಗಿಸಿಕೊಂಡು ಅನೇಕ ಕೀರ್ತನೆಗಳು, ಮುಂಡಿಗೆಗಳು ಮುಂತಾದ ಪ್ರಕಾರಗಳಲ್ಲಿ ಕನ್ನಡದಲ್ಲಿ ಸಾಹಿತ್ಯ ರಚಿಸಿದ್ದಾರೆ. ಕನ್ನಡನಾಡಿನ ಹೆಮ್ಮೆಯ ದಾಸ ಶ್ರೇಷ್ಠರಲ್ಲಿ ಕನಕದಾಸರೂ ಒಬ್ಬರು. ಹರಿಭಕ್ತಿಸಾರ, ಮೋಹನತರಂಗಿಣಿ, ರಾಮಧಾನ್ಯ ಚರಿತೆ, ನಳಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಟದಿಗಳಲ್ಲಿ ರಚಿಸಿದ್ದಾರೆ.

ಪುರಂದರದಾಸರ ಸಮಕಾಲೀನರಾದ ಕನಕದಾಸರು ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಸಾಮಾನ್ಯರಿಗೂ ಅರ್ಥ ವಾಗುವ ರೀತಿಯಲ್ಲಿ ಮನೆಮಾತಾಗಿದ್ದಾರೆ. ಕೇವಲ ಕುರುಬ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಜಾತಿ, ಧರ್ಮವನ್ನೂ ಮೀರಿ ವಿಶ್ವಮಾನವ, ದೇವಮಾನವರಾದ ಕನಕದಾಸರು ಸಾಮಾನ್ಯನೂ ಧ್ಯಾನಿಸಿದರೆ ದೇವರನ್ನು ಒಲಿಸಿಕೊಳ್ಳಬಹುದೆಂಬ ಸರಳ ತತ್ವವನ್ನು ನಿರೂಪಿಸಿದರು. ಸಮಾಜದ ಮೇಲು, ಕೀಳು, ಜಾತಿ – ಮತ, ಭೇದಗಳನ್ನು ತೊಡೆದು ಹಾಕಲು ಅನೇಕ ರೀತಿಯಲ್ಲಿ ಮಾರ್ಗದರ್ಶಕರಾದರು.

ಉದ್ದೇಶ:

ಸಮಾಜ ಸುಧಾರಣೆಗೆ ಶ್ರಮವಹಿಸಿದ ದಾಸಶ್ರೇಷ್ಠರಲ್ಲಿ ಕನಕದಾಸರೂ ಒಬ್ಬರು. ಅವರ ಜೀವನ ಶೈಲಿಯನ್ನು ಗ್ರಹಿಸುವುದು ಕನಕನಾಯಕರಾದವರು – ಕನಕದಾಸವಾದಾಗ ಅವರ ಮನೋಸ್ಥೈರ್ಯವನ್ನು ವಿದ್ಯಾರ್ಥಿಗಳು ಗ್ರಹಿಸುವರು. ಅನುಸರಿಸುವುದು.

ವೈರಾಗ್ಯವನ್ನು ಮನಗಾಣುವರು ಅನುಸರಿಸುವರು. ಭಕ್ತಿ, ಆಧ್ಯಾತ್ಮ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವರ. ಜಾತಿ ಪದ್ಧತಿ, ಸಮಾಜದ ಮೇಲು ಕೀಳು ಮುಂತಾದ ಅಸಮಾನತೆಗಳನ್ನು ಪಿಡುಗುಗಳನ್ನು ನಿವಾರಿಸುವಲ್ಲಿ ದಾಸರ ಕೊಡುಗೆಯನ್ನು ಸ್ಮರಿಸುವುದು.

ಆಧ್ಯಾತ್ಮಿಕತೆಯನ್ನು ಮೂಡಿಸುವಲ್ಲಿ ದಾಸರ ಕೊಡುಗೆಯನ್ನು ಸ್ಮರಿಸವುದು.

ಸಾಹಿತ್ಯ ವಿಶೇಷತೆಗಳು, ಮುಂಡಿಗೆಗಳ ವಿಶೇಷತೆಗಳು, ಷಟ್ಪದಿಗಳ ವಿಶೇಷತೆಗಳನ್ನು ಗ್ರಹಿಸುವರು, ಸ್ಮರಿಸುವುದು.

ಬೋಧನೋಪಕರಣಗಳು

Ø ತಂಬೂರಿ / ಶೃತಿ ಪೆಟ್ಟಿಗೆ

Ø ಕನಕದಾಸರ ಭಾವಚಿತ್ರ

Ø ಕನಕದಾಸರು ಬರೆದಿರುವ ಸಾಹಿತ್ಯ ಪುಸ್ತಕಗಳು

Ø ಕೆಲವು ಸಾಂದರ್ಭಿಕ ಚಿತ್ರಗಳು.

ಕಲಿಕಾವಿಧಾನ

ಕನ್ನಡ ಸಾಹಿತ್ಯ ಲೋಕದಲ್ಲಿ ಭಕ್ತಿ, ಆಧ್ಯಾತ್ಮ ಸಾಹಿತ್ಯವು ಶಾಂತಿ ನೆಮ್ಮದಿಯನ್ನು ಕೊಡುವ ಸಮಾಜವನ್ನು ಉನ್ನತ ಮಟ್ಟಕ್ಕೆ ತರಲು ಸಹಕಾರಿಯಾಗಿದೆ. ಇಂಥಹ ಭಕ್ತಿ ಸಾಹಿತ್ಯ ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು, ಅನೇಕ ದಾಸವರೇಣ್ಯರು ಸಾಹಿತ್ಯ ರಚಿಸಿ ಸಾಮಾನ್ಯ ಜನರಿಗೆ ಆಧ್ಯಾತ್ಮ ಕ್ಷೇತ್ರದಲ್ಲಿ, ಭಕ್ತಿ ಸಾಮ್ರಾಜ್ಯದಲ್ಲಿ ಮೀಯುವಂತೆ ಮಾಡಿದ್ದಾರೆ. ಸಮಾಜದ ಓರೆಕೋರೆಗಳನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ದಾಸಶ್ರೇಷ್ಠರಲ್ಲಿ ಕನಕದಾಸರು ಒಬ್ಬರು. ಅವರ ಜೀವನಚರಿತ್ರೆಯನ್ನು ತಿಳಿಯುವುದರಿಂದ ಆಡಂಬರದ ಜೀವನ ಶಾಶ್ವತವಲ್ಲವೆಂದು ತಿಳಿಸಿ ಅದನ್ನು ತೊರೆದು, ಸರಳ, ವೈರಾಗ್ಯ ಜೀವನವನ್ನು ಆರಿಸಿ ಕೊಳ್ಳುವುದರ ಮೂಲಕ ಶ್ರೇಷ್ಠತೆಯನ್ನು ಮೆರೆಯುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂಬ ನೀತಿಯನ್ನು ಮನನ ಮಾಡಿಸುವುದು.

ಬಾಡ ಗ್ರಾಮದಲ್ಲಿ ಜನಿಸಿ ಬೀರೆಗೌಡ ಬಚ್ಚಮ್ಮ ದಂಪತಿಗಳ ಸುಪುತ್ರನಾಗಿ ಮತ್ತು ಕನಕನಾಯಕನಾಗಿ ನಂತರ ವಿರಾಗಿಯಾಗಿ ಸಮಾಜಕ್ಕೆ ಶ್ರೇಷ್ಠಕೊಡುಗೆಯನ್ನು ಕೊಡುವುದರ ಹಿಂದಿನ ಸಾತ್ವಿಕತೆಯನ್ನು ತಿಳಿಸುವುದು.

ಕನಕದಾಸರ ಚಿತ್ರಪಟವನ್ನು ತೋರಿಸಿ ಅವರ ಸರಳತೆಯನ್ನು ಗ್ರಹಿಸುವಂತೆ ಮಾಡುವುದು. ಕನಕದಾಸರ ಸಾಹಿತ್ಯದ ವಿವಿಧ ಪ್ರಕಾರಗಳನ್ನು ತಿಳಿಸುವುದು, ಅವರ ಭಕ್ತಿ ಪರವಶತೆಯನ್ನು ಉಡುಪಿಯ ಕನಕನ ಕಿಂಡಿಯ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುವುದು.

ಘಟಕಾಂಥ್ಯದ ಪ್ರಶ್ನೆಗಳು

Ø ಆಧ್ಯಾತ್ಮ ಸಾಹಿತ್ಯದ ಪ್ರಾಮುಖ್ಯತೆಯೇನು? ತಿಳಿಯುವರೆ?

Ø ಸಾಹಿತ್ಯದ ವಿವಿಧ ಪ್ರಕಾರಗಳನ್ನು ಅರಿತರೇ?

Ø ಕನಕದಾಸರ ಜನನ ಮತ್ತು ಬಾಲ್ಯ ಜೀವನದ ಬಗ್ಗೆ ಗ್ರಹಿಸಿದರೇ?

Ø ಕನಕರ ವೈಭೋಗ ಜೀವನದಲ್ಲೂ ದಾನಶೀಲತೆ ಮತ್ತು ಸರಳತೆಯನ್ನು ಮೆರೆದ ದೃಢ ಮನಸ್ಥಿತಿಯನ್ನು ಸ್ಮರಿಸುವುದು.

Ø ದೀಕ್ಷೆ ಪಡೆದ ನಂತರ ಕನಕದಾಸರ ವೈರಾಗಿ ಜೀವನ ಚರಿತ್ರೆಯ ಬಗ್ಗೆ ತಿಳಿಯಲಾಯಿತೇ?

Ø ಕನಕದಾಸರ ಕೊಡುಗೆ ಸಮಾಜಕ್ಕೆ ಯಾವ ರೀತಿಯಲ್ಲಿ ಮಹತ್ವಪೂರ್ಣವಾಗಿದೆ ಎಂಬುದನ್ನು ಗ್ರಹಿಸಿದರೇ?

Ø ಕನಕದಾಸರ ಜೀವನ ಚರಿತ್ರೆಯಿಂದ ನಮಗೆ ತಿಳಿಸಬಹುದಾದ ನಾವು ಅರಿಯ ಬಹುದಾದ ನೀತಿ ಏನು? ಎಂಬುದನ್ನು ತಿಳಿದರೆ?

ಘಟಿಕಾಂಥ್ಯದ ಪ್ರಶ್ನೆಗಳು

Ø ಕನಕದಾಸರ ಜೀವನ ಚರಿತ್ರೆಯನ್ನು ಬರೆಯಿರಿ.

Ø ಕನಕದಾಸರ ಬಾಲ್ಯ ಜೀವನದ ಬಗ್ಗೆ ತಿಳಿಸಿ.

Ø ಕನಕದಾಸರ ವೈರಾಗ್ಯ ಜೀವನದ ಬಗ್ಗೆ ತಿಳಿಸಿ.

Ø ಕನಕದಾಸರು ರಚಿಸಿದ ಸಾಹಿತ್ಯ ಪ್ರಕಾರಗಳಾವುವು?

Ø ಕನಕದಾಸರ ರಚನೆಗಳ ವಿಶೇಷತೆಗಳೇನು?

Ø ಕನಕದಾಸರು ಒಬ್ಬ ದಾಸಶ್ರೇಷ್ಠರು ಚರ್ಚಿಸಿ.

Ø ಕನಕದಾಸರು ಸಮಾಜಕ್ಕೆ ಕೊಟ್ಟ ಕೊಡುಗೆ ಏನು.

Ø ಕನಕದಾಸರು ಇಂದಿಗೂ ಪ್ರಸ್ತುತರು ಎಂಬುದನ್ನು ನಿರೂಪಿಸಿ.

Ø ಸಮಾಜದ ಓರೆಕೋರೆಗಳನ್ನು ತಿದ್ದುವುದರಲ್ಲಿ ಕನಕದಾಸರ ಪಾತ್ರವೇನು?

Ø ಕನಕದಾಸರ ಜೀವನ ಚರಿತ್ರೆಯಿಂದ ನಾವು ತಿಳಿಯಬಹುದಾದ, ಅನುಸರಿಸಬಹುದಾದ ಅಂಶಗಳಾವವು?

ಉಪಸಂಹಾರ

ಕನಕದಾಸರು ದಾಸಶ್ರೇಷ್ಟರು, ಉಡುಪಿಯ ಕೃಷ್ಣನನ್ನು ತನ್ನ ಭಕ್ತಿ ಪರವಶತೆಯಿಂದ ತನ್ನ ಕಡೆಗೆ ತಿರುಗಿಸಿದರು.

‘ಕನಕನಕಿಂಡಿ’ ಉಡುಪಿಯಲ್ಲಿ ಈಗಲೂ ನಾವು ಕಾಣುತ್ತೇವೆ.

ಅವನದ್ಧವಾದ್ಯ ಮೃದಂಗ

ಅಧಿವೇಶನ: – 36                                                     ಅವಧಿ:- 90 ನಿಮಿಷಗಳು

ಪೀಠಿಕೆ:-

ಎಳೆದು ಕಟ್ಟಿರುವ ಚರ್ಮವನ್ನು ತಟ್ಟುವುದರ ಮೂಲಕ ನಾದವುಂಟಾಗುವ ವಾದ್ಯಗಳನ್ನು ಅವನದ್ದ ವಾದ್ಯ ಎನ್ನುತ್ತಾರೆ. ಅವನದ್ದ ವಾದ್ಯಗಳನ್ನು ತಾಳವಾದ್ಯಗಳೆಂದೂ ಸಹ ಕರೆಯುತ್ತಾರೆ. ಈ ಅವನದ್ದ ವಾದ್ಯಗಳ ಗುಂಪಿಗೆ ಸೇರುವ ವಾದ್ಯಗಳು ಮೃದಂಗ, ಡೋಲು, ತಬಲ,

ಡೋಲಕ್, ಖಂಜಿರ ಇವುಗಳನ್ನು ಪಕ್ಕವಾದ್ಯಗಳೆಂದು ಕರೆಯುವರು.

ಉದ್ದೇಶ:

ಚರ್ಮವಾದ್ಯಗಳ ಪರಿಚಯ ಮಾಡುವುದು. ವಾದ್ಯದ ರಚನೆಯ ಬಗ್ಗೆ ಅರಿಯುವುದು. ಪಕ್ಕವಾದ್ಯಗಳಾಗಿ ಉಪಯೋಗಿಸುವ ರೀತಿಯನ್ನು ಅರಿಯುವುದು.

ಮೃದಂಗವಾದ್ಯ:- ಮೃದಂಗವು ಅತ್ಯಂತ ಪುರಾತನವಾದ ವೀಣಾ, ವೇಣು ಮತ್ತು ಮೃದಂಗವನ್ನು ಉಲ್ಲೇಖಿಸದ ಭಾರತೀಯ ಗ್ರಂಥವೇ ಇಲ್ಲ. ಮೃದಂಗದ ಆವಿಷ್ಕಾರವು ವೇದಗಳ ಕಾಲದಲ್ಲೇ ಆಯಿತು. ಮತ್ + ಅಂಗ = ಮೃದಂಗ ಅಂದಮೇಲೆ, ಹಿಂದೆ ಮಣ್ಣಿನಿಂದ ಮಾಡಿದ ಹೊಳವಿಗೆ ಎರಡು ಮುಖಗಳಿಗೂ ಚರ್ಮವನ್ನು ಬಿಗಿದು ಈ ವಾದ್ಯವನ್ನು ತಯಾರಿಸುತ್ತಿದ್ದರು. ಕಾಲಕ್ರಮೇಣ ಮರದಿಂದ ಮಾಡಿದ ಹೊಳವನ್ನು ಈ ವಾದ್ಯವು ಹೊಂದಿತು. ಮೃದಂಗವಾದಕರು ಉತ್ತಮ ಗಣಿತ ತಜ್ಞರಾಗಿ ಮನೋಧರ್ಮದಿಂದ ಕೆಲಸಗಳನ್ನು ಮೃದಂಗವಾದನಲ್ಲಿ ತೋರಿಸುವ ಸಾಮರ್ಥ್ಯ ಪಡೆದಿದ್ದಾರೆ.

ಮೃದಂಗ ರಚನೆ:- ಮೃದಂಗಕ್ಕೆ ಪುಷ್ಕರ ಎಂಬ ಹೆಸರಿದ್ದಿತು. ಈ ವಾದ್ಯವು ಅಳಲೆಕಾಯಿ, ಗೋಧಿಕಾಳು ಮತ್ತು ಗೋಪುಚ್ಚಗಳನ್ನು ಹೋಲುವ ಮುರು ಆಕಾರಗಳಲ್ಲಿರುತ್ತದೆ. ಇದರ ಉದ್ದ 1 / ½-2 ಅಡಿಗಳವರೆಗೂ ಇರುತ್ತದೆ. ಹೊಳಪಿನ ಮಧ್ಯಭಾಗವು ಉಬ್ಬಾಗಿರುತ್ತದೆ. ಎರಡು ಮುಖಗಳಿಗೂ ಚರ್ಮದ ಪಟ್ಟಿಗಳಿಂದ ತಯಾರಿಸಿದ ಹಣತೆಯ ಗೋಳಾಕೃತಿಯ ಬಳೆಗಳಿಗೆ ಕುರಿಯ ಚರ್ಮವನ್ನು ಬಿಗಿಯಾಗಿ ಪಸರಿಸಿ, ಬಳೆಗಳ ರಂಧ್ರಗಳಲ್ಲಿ ಚರ್ಮದ ಪಟ್ಟಿಗಳು ತೂರಿ ಬಂದು ಬಿಗಿಯಾಗಿ ಕಟ್ಟಲ್ಪಟ್ಟಿವೆ. ಶ್ರುತಿಯ ಏರುಪೇರುಗಳನ್ನು ಸರಿಪಡಿಸಲು ಅನುಕೂಲವಾಗುವಂತೆ ಈ ಚರ್ಮದ ಪಟ್ಟಿಗಳ ಕೆಳಗೆ ಗಟ್ಟಗಳನ್ನು ಅಳವಡಿಸಲಾಗಿದೆ. ಮೃದಂಗದ ಬಲ ಮುಖದಲ್ಲಿ ಮೂರುಪದರ ಚರ್ಮವಿರುತ್ತದೆ. ಮೂರನೆಯ ಪದರವು ಸುಮಾರು ಒಂದು ಕಾಲು ಅಂಗುಲವಿದ್ದು, ಗೋಳದ ಮುಖದ ಅಂಚಿನಲ್ಲಿರುತ್ತದೆ. ಇದಕ್ಕೆ ರೆಪ್ಪೆ ಎಂದು ಹೆಸರು. ಸಣ್ಣ ಧೂಳಿನಂತಿರುವ ಕಬ್ಬಿಣದ ಅನ್ನವನ್ನು ಕಲಸಿ, ಮರವಜ್ರವನ್ನು ಹಾಕಿ ಹದವಾಗಿ ಕಲೆಸಿ, ಬೇಕಾದ ಶ್ರುತಿಗೆ ತಕ್ಕಂತೆ ಅದನ್ನು ಚರ್ಮದ ಮಧ್ಯದಲ್ಲಿ ತಟ್ಟಿ ಅಂಟಿಸುತ್ತಾರೆ. ಎಡಗೈ ಮುಖದ ರೆಪ್ಪೆಯ ಚರ್ಮವು ಎಮ್ಮೆಯ ಚರ್ಮ, ವಾದ್ಯವನ್ನು ನುಡಿಸುವ ಮುನ್ನ ರವೆ ಅಥವಾ ಗೋಧಿಹಿಟ್ಟನ್ನು ಹದವಾಗಿ ಕಲಿಸಿ ಎಡಭಾಗದ ಮುಖದ ಮಧ್ಯೆ ಒತ್ತುತ್ತಾರೆ. ಬೇಕಾದ ಶ್ರುತಿಯ ಆಧಾರ ಷಡ್ಜಕ್ಕೆ ಬಲಮುಖವನ್ನು ಶ್ರುತಿಮಾಡುತ್ತಾರೆ. ಬಲಭಾಗದ ಕರಣೆಯು ಒಣಗಿದ ಮೇಲೆ ಅದನ್ನು ನುಣುಪಾದ ಕಲ್ಲಿನಿಂದ ಉಜ್ಜಿ ನುಣುಪುಮಾಡುತ್ತಾರೆ. ಕರಣೆಯು ಸರಿಯಾಗಿದ್ದರೆ ಮಾತ್ರ ವಾದ್ಯವು ಸರಿಯಾದ ಹಾಗೂ ಶುದ್ಧವಾದ ಮತ್ತು ಇಂಪಾದ ನಾದವನ್ನು ಕೊಡುತ್ತದೆ.

ಬಲಮುಖದ ರೆಪ್ಪೆಯ ಮೇಲೆ ಬಲಗೈ ಬೆರಳುಗಳಿಂದ ನುಡಿಸುವ ಕ್ರಿಯೆಗೆ ಮೀಟು ಎಂದೂ, ಕರಣೆ ಹಾಕಿದ ಚರ್ಮದ ಮೇಲೆ ಬಲಹಸ್ತವನ್ನು ತಟ್ಟುವ ಕ್ರಿಯೆಗೆ ಛಾಪು ಎಂದೂ ಹೆಸರು. ಮೃದಂಗದ ಎಡಮುಖವು ಬಲಮುಖಕ್ಕಿಂತ ದೊಡ್ಡದು. ಬಲಮುಖದ ಗೋಳದ ನಡುರೇಖೆಯು ಸುಮಾರು ಏಳು ಅಂಗುಲಗಳಿರುತ್ತವೆ. ಎಡಮುಖದ ನಡುರೇಖೆಯು ಏಳುವರೆ ಅಂಗುಲಗಳಿರುತ್ತವೆ. ತಗ್ಗಿನ ಆಧಾರ ಶ್ರುತಿಯಿರುವ ಮೃದಂಗಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡವು. ಹೆಚ್ಚಿನ ಆಧಾರ ಶ್ರುತಿಯ ವಾದ್ಯಗಳು ಸ್ವಲ್ಪ ಚಿಕ್ಕದಾಗಿರುತ್ತದೆ.

  • ಮೃದಂಗ ನುಡಿಸುವ ರೀತಿ:- ಮೃದಂಗವು ಎರಡು ಕೈಗಳಿಂದ ನುಡಿಸುವ ವಾದ ಮೃದಂಗವಾದ್ಯವನ್ನು ನುಡಿಸುವ ಅಭ್ಯಾಸ ಕ್ರಮವನ್ನು ಅನುಸರಿಸದೆ ಯಾರೂ ಉತ್ತಮ ಮೃದಂಗವಾದಕನಾಗಲು ಸಾಧ್ಯವಿಲ್ಲ.
  • ಮೃದಂಗ ವಿದ್ವಾಂಸರು:- ತಂಜಾವೂರು ವೈದ್ಯನಾಥ ಅಯ್ಯರ್‌, ದಕ್ಷಿಣಮೂರ್ತಿಪಿಳ್ಳೆ, ಪಾಲ್ ಘಾಟ್ ಮಣಿಅಯ್ಯರ್, ಪನಿ ಸುಬ್ರಮಣ್ಯ ಪಿಳ್ಳೆ, ಟಿ ಎಂ, ಪುಟ್ಟಸ್ವಾಮಯ್ಯ, ಎಂ. ಎಲ್. ವೀರಭದ್ರಯ್ಯ, ಎಂ. ಎಸ್. ರಾಮಯ್ಯ, ಪಾಲ್ ಘಾಟ್ ರಘು, ಎ. ವಿ. ಆನಂದ್, ಹೆಚ್. ಪಿ. ರಾಮಾಚಾರ್, ಪಿ. ಜಿ. ಲಕ್ಷ್ಮಿನಾರಾಯಣ್, ಟಿ. ಎ. ಎಸ್. ಮಣಿ ಮುಂತಾದವರು.
  • ಕಲಿಕಾ ಸಾಮಗ್ರಿ – ಚಿತ್ರಪಟ, ಕಪ್ಪು ಹಲಗೆಯ ಬಳಕೆ, ಸಾಕ್ಷಾಚಿತ್ರ.
  • ಕಲಿಕಾಹಂತ

ಹಂತ 1 – ಚರ್ಮವಾದ್ಯಗಳ ಬಗ್ಗೆ ವಿವರಿಸುವುದು.

ಹಂತ 2 – ಆ ಗುಂಪಿಗೆ ಸೇರುವ ವಾದ್ಯಗಳ ಪರಿಚಯ ಮಾಡಿಸುವುದು.

ಹಂತ 3 – ಮೃದಂಗದ ಆವಿಷ್ಕಾರದ ಬಗ್ಗೆ ತಿಳಿಸುವುದು.

ಹಂತ 4 – ಮೃದಂಗದ ಆಕಾರದ ಬಗ್ಗೆ ತಿಳಿಸುವುದು.

ಹಂತ 5 – ಇದರ ರಚನೆಯ ಬಗ್ಗೆ ತಿಳಿಸುವುದು.

ಹಂತ 6 – ಬೆರಳುಗಳಿಂದ ನುಡಿಸುವ ರೀತಿಯನ್ನು ತಿಳಿಸುವುದು.

ಹಂತ 7 – ಉದ್ದಗಲದ ಬಗ್ಗೆ ಮಾಹಿತಿ ನೀಡುವುದು.

ಹಂತ 8 – ಪ್ರಸಿದ್ದ ವಿದ್ವಾಂಸರುಗಳ ಬಗ್ಗೆ ತಿಳಿಸುವುದು.

ಸ್ವ ಮೌಲ್ಯಮಾಪನ

  • ಅವನದ್ದ ವಾದ್ಯದ ಬಗ್ಗೆ ಅರಿತರೇ?
  • ಆವಿಷ್ಕಾರದ ಬಗ್ಗೆ ಅರ್ಥವಾಯಿತೇ?
  • ಇದರ ಗುಂಪಿಗೆ ಸೇರುವ ವಾದ್ಯಗಳ ಪರಿಚಯವಾಯಿತೇ?
  • ನುಡಿಸುವ ರೀತಿಯನ್ನು ತಿಳಿದರೇ?
  • ಉದ್ದಗಲದ ಬಗ್ಗೆ ಅರ್ಥವಾಯಿತೇ?
  • ಮೃದಂಗದ ರಚನೆಯ ಬಗ್ಗೆ ಅರಿತರೇ?
  • ಸುಪ್ರಸಿದ್ದ ವಿದ್ವಾಂಸರುಗಳ ಬಗ್ಗೆ ತಿಳಿದುಕೊಂಡರೇ?
  • ಆಕಾರದ ಬಗ್ಗೆ ತಿಳಿದರೆ?

ತಾತ್ವಿಕ ಪ್ರಶ್ನೆಗಳು

  1. ಅವನದ್ಧ ವಾದ್ಯ ಎಂದರೇನು?
  2. ಅವನದ್ದ ವಾದ್ಯಗಳ ಗುಂಪಿಗೆ ಸೇರಿದ ವಾದ್ಯಗಳು ಯಾವುವು?
  3. ಮೃದಂಗ ಎಂದರೆ ______________
  4. ಮೃದಂಗಕ್ಕೆ ______________ ಎಂಬ ಹೆಸರು ಇತ್ತು.
  5. ಮೃದಂಗದ ಉದ್ದ ______________
  6. ಮೃದಂಗವನ್ನು ಶ್ರುತಿ ಮಾಡುವ ರೀತಿಯನ್ನು ತಿಳಿಸಿ.
  7. ಮೃದಂಗವನ್ನು ನುಡಿಸುವ ಕ್ರಿಯೆಗೆ, ತಟ್ಟುವ ಕ್ರಿಯೆಗೆ ಏನೆನ್ನುವರು?
  8. ಇದನ್ನು ನುಡಿಸುವ ರೀತಿಯನ್ನು ತಿಳಿಸಿ;
  9. ಸುಪ್ರಸಿದ್ದ ವಿದ್ವಾಂಸರುಗಳ ಹೆಸರನ್ನು ತಿಳಿಸಿ.

ಪ್ರಾಯೋಗಿಕ ಚಟುವಟಿಕೆ:

  • ಅವನದ್ದ ವಾದ್ಯಗಳ ಚಿತ್ರಗಳನ್ನು ಸಂಗ್ರಹಿಸಲು ಹೇಳುವುದು.
  • ಸುಪ್ರಸಿದ್ದ ವಿದ್ವಾಂಸರುಗಳ ಚಿತ್ರಗಳನ್ನು ಸಂಗ್ರಹಿಸಲು ಹೇಳುವುದು.
  • ಚಿತ್ರಪಟಗಳನ್ನು ಸಿದ್ದಪಡಿಸಲು ಹೇಳುವುದು.

ಅಧಿವೇಶನ 36 (1): ಹಿಂದೂಸ್ಥಾನಿ ರಾಗಗಳ ಪರಿಚಯ

ಸುಷಿರವಾದ್ಯ

ಅಧಿವೇಶನ – 37

ಅವಧಿ: 90 ನಿಮಿಷಗಳು

ಪೀಠಿಕೆ:- ಭರತನ ನಾಟ್ಯಶಾಸ್ತ್ರದ ಪ್ರಕಾರ ಸಂಗೀತವಾದ್ಯಗಳನ್ನು ತತ, ಸುಷಿರ, ಅವನದ್ಧ ಮತ್ತು ಘನ ವಾಧ್ಯ ಎಂದು ವಿಂಗಡಿಸಲಾಗಿದೆ.

ಗಾಳಿಯ ಮೂಲಕ ನಾದೋತ್ಪತಿಯಾಗುವ ವಾದ್ಯಗಳಿಗೆ ಸುಷಿರವಾದ್ಯ ಎನ್ನುವರು. ಇದರಲ್ಲಿ ಒತ್ತಿನುಡಿಸುವ ಮೂಲಕ ನಾದವು, ಊದುವುದರ ಮೂಲಕ ನಾದವುಂಟಾಗುವ ವಾದ್ಯಗಳೆಂದು 2 ವಿಧ.

ಉದ್ದೇಶ:

ವಾದ್ಯಗಳ ಮುಖ್ಯ ಪ್ರಯೋಜನವನ್ನು ಅರಿಯುವುದು. ಸುಷಿರವಾದ್ಯಗಳು ಶ್ರುತಿ, ಸ್ವರಗಳ ಪ್ರಾಧಾನ್ಯದಿಂದ ಹೇಗೆ ಗೀತೋತ್ಪಾದನೆಗೆ ಕಾರಣವಾಗಿವೆ ಎಂಬುದನ್ನು ಅರಿಯುವುದು.

ಒತ್ತಿನುಡಿಸುವ ವಾದ್ಯಗಳು:-

ಹಾರ್ಮೋನಿಯಂ, ಆಕಾರ್ಡಿಯನ್, ಪಿಯಾನೋ ಒತ್ತು ಶ್ರುತಿಪೆಟ್ಟಿಗೆ.

ಊದುವ ವಾದ್ಯಗಳಲ್ಲಿ ಹಲವು ವಿಧ:

Ø ರಂಧ್ರಗಳಿರುವ ವಾದ್ಯಗಳು: ನಾದಸ್ವರ, ಕೊಳಲು, ಷಹನಾಯ್ ವಾದ್ಯಗಳಿಗೆ ರಂಧ್ರಗಳಿರುತ್ತವೆ.

Ø ರಂಧ್ರಗಳಿಲ್ಲದಿರುವ ವಾದ್ಯಗಳು:- ಶಂಖ, ಕೊಂಬು, ಕಹಳೆ.

Ø ಪೀಪಿ ಮತ್ತು ರಂಧ್ರಗಳಿದ್ದು ನುಡಿಯುವ ವಾದ್ಯ:- ಸ್ಯಾಕ್ಸೋಫೋನ್, ಕ್ಲಾರಿಯೋನಟ್.

ಕಲಿಕಾ ಸಾಮಗ್ರಿ –

ಚಿತ್ರಪಟಗಳನ್ನು ತೋರಿಸುವುದು ಅಥವಾ ಮಾದರಿ ವಾದ್ಯಗಳನ್ನು ತೋರಿಸುವುದು.

ಕಲಿಕಾ ವಿಧಾನ:

ಹಂತ 1– ಮೊದಲಿಗೆ ವಾದ್ಯಗಳನ್ನು ಪರಿಚಯಿಸುವುದು.

ಹಂತ 2 — ವಾದ್ಯಗಳ ಹೆಸರುಗಳನ್ನು ಗುರುತಿಸುವುದು.

ಹಂತ 3 — ಆ ವಾದ್ಯಗಳು ಹೇಗೆ ನುಡಿಯುತ್ತವೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುವುದು.

ಸ್ವಮೌಲ್ಯಮಾಪನ :

  1. ವಾದ್ಯಗಳ ಬಗ್ಗೆ ಪರಿಚಯವಿದೆಯೇ?
  2. ವಾದ್ಯಗಳನ್ನು ಗುರುತಿಸಿರುವರೆ?
  3. ವಾದ್ಯಗಳ ವಿಧಗಳನ್ನು ತಿಳಿದಿರುವರೇ?
  4. ವಾದ್ಯಗಳನ್ನು ನುಡಿಸುವ ರೀತಿಯನ್ನು ನೋಡಿರುವರೇ?

ಘಟಕಾಂತ್ಯದ ಪ್ರಶ್ನೆಗಳು:

  1. ಯಾವ ಶಾಸ್ತ್ರದ ಪ್ರಕಾರ ವಾದ್ಯಗಳನ್ನು ವರ್ಗೀಕರಿಸಲಾಗಿದೆ?
  2. ಸುಷಿರವಾದ್ಯ ಎಂದರೇನು?
  3. ಒತ್ತಿ ನುಡಿಸುವ ವಾದ್ಯಗಳು ಯಾವುವು?
  4. ರಂಧ್ರಗಳಿರುವ ವಾದ್ಯಗಳು ಯಾವುವು?
  5. ರಂಧ್ರಗಳಿಲ್ಲದಿರುವ ವಾದ್ಯಗಳು ಯಾವುವು?
  6. ಪೀಪೀ ಮತ್ತು ರಂಧ್ರಗಳಿಂದ ನುಡಿಯುವ ವಾದ್ಯಗಳು ಯಾವುವು?

ತಾಲಗಳ ಪರಿಚಯ

ಅಧಿವೇಶನ: 37 (1)

ಅವಧಿ: 90 ನಿಮಿಷ

ಪೀಠಿಕೆ ಸಂಗೀತದಲ್ಲಿ ಸ್ವರ ಮತ್ತು ಲಯಗಳು ಬಹು ಮಹತ್ವದ ಅಂಶಗಳಾಗಿವೆ. ‘ಶೃತಿರ್ಮಾತಾಲಯ: ಪಿತಾ’ ಎಂಬಂತೆ ಶೃತಿ ಮತ್ತು ಲಯಗಳು ಸಂಗೀತವೆಂಬ ಮನೆತನಕ್ಕೆ ತಾಯಿ ತಂದೆಗಳಿದ್ದಂತೆ. ಸಂಗೀತದಲ್ಲಿನ ರಂಜಕತೆಯು ಈ ಎರಡು ಅಂಶಗಳನ್ನೇ ಅವಲಂಬಿಸಿದ್ದು, ‘ತಾಲ ಮತ್ತು ಶ್ರುತಿಗಳ ಪರಿಪೂರ್ಣ ಜ್ಞಾನವು ಮೋಕ್ಷ ಮಾರ್ಗಕ್ಕೆ ಹೆದ್ದಾರಿಯಾಗಿದೆ ‘ ಎಂಬ ಮಾತು ಶ್ರುತಿ ಮತ್ತು ಲಯ ತಾಲಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ಸಂಗೀತವೆಂಬ ಸಮುದ್ರದಲ್ಲಿ ರಾಗವೆಂಬ ಹಡಗಿಗೆ ತಾಲವೇ ಚುಕ್ಕಾಣಿಯಾಗಿದೆ ಎನ್ನಬಹುದು.

ಉದ್ದೇಶ:

Ø ಸಂಗೀತದಲ್ಲಿ ತಾಲಗಳ ಮಹತ್ವವನ್ನು ಅರಿಯುವಂತೆ ಮಾಡುವುದು.

Ø ಜಾಲಗಳನ್ನು ಕೈಯಲ್ಲಿ ಹಾಕುತ್ತಾ ಹಾಡುವ ಅಭ್ಯಾಸ ಮಾಡಿಸುವುದು.

Ø ತಾಲ ಮತ್ತು ಗಣಿತ ಶಾಸ್ತ್ರಕ್ಕಿರುವ ಸಂಬಂಧ ಕುರಿತು ತಿಳಿಸುವುದು.

Ø ವಿವಿಧ ತಾಲಗಳ ವ್ಯತ್ಯಾಸ ಗುರುತಿಸುವಂತೆ ಮಾಡುವುದು.

Ø ಸಂಗೀತದಲ್ಲಿನ ವಿವಿಧ ತಾಲಗಳನ್ನು ಪರಿಚಯಿಸುವುದು.

 ಅಧ್ಯಯನದಲ್ಲಿ ಅಳವಡಿಸಿರುವ ಹೊಸ ಅಂಶಗಳು:

ತಾಳದ ಅರ್ಥ, ಮಹತ್ವ, ತಾಲಕ್ಕೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳು.

ಕಲಿಕಾ ಸಾಮಗ್ರಿ:

ಚಾರ್ಟಗಳು, ಪಿ. ಪಿ. ಟಿ, ತಬಲ ಎಲೆಕ್ಟ್ರಾನಿಕ್ ತಬಲಾ.

ಕಲಿಕಾ ವಿಧಾನ:

Ø ತಾಲವನ್ನು ಕೈಯಲ್ಲಿ ಹಾಕಿ ತೋರಿಸುವುದು.

Ø ಪ್ರಾತ್ಯಕ್ಷಿಕೆ ತಬಲಾ ವಾದ್ಯದಲ್ಲಿ ನುಡಿಸಿ ತೋರಿಸುವುದು.

Ø ವಿಡಿಯೋ ಪ್ರದರ್ಶಿಸುವುದು, ಇತ್ಯಾದಿ.

ಹಂತ – 1:

ಸಂಗೀತದಲ್ಲಿ ತಾಲಗಳ ಮಹತ್ವವನ್ನು ವಿವರಿಸುವುದು.

ಹಂತ – 2

ಪಠ್ಯಕ್ರಮದ ತಾಲಗಳನ್ನು ಪರಿಚಯಿಸುವುದು, (ತೀನತಾಲ, ಏಕತಾಲ, ದಾದರಾ, ಕೆಹರವಾ, ಝುಪತಾಲ, ಚೌತಾಲ ಇತ್ಯಾದಿ) ತಬಲಾ ವಾದ್ಯ ಲಭ್ಯವಿದ್ದರೆ ನುಡಿಸಿ ತೋರಿಸುವುದು. ಇಲೆಕ್ಟ್ರಾನಿಕ ತಬಲಾದಲ್ಲಿ ಕೇಳಿಸುವುದು.

ಹಂತ – 3

ಪಠ್ಯಕ್ರಮದ ತಾಲಗಳನ್ನು ಕೈಯಲ್ಲಿ ಹಾಕಲು ಹೇಳಿಕೊಡುವುದು.

ಹಂತ – 4

ವಿದ್ಯಾರ್ಥಿಗಳಿಂದ ತಾಲಗಳನ್ನು ಕೈಯಲ್ಲಿ ಹಾಕುತ್ತಾ ತಾಲದ ಬೋಲ್‌ನ್ನು ಹೇಳಿಸುವುದು.

ಹಂತ – 5

ತಾಳವಾದ್ಯಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸುವುದು (ತಬಲ – ಡಗ್ಗ, ಮೃದಂಗಮ್, ಪಖಾವಜ್, ಇತ್ಯಾದಿ)

ಸ್ವಮೌಲ್ಯಮಾಪನ:

Ø ತಾಲದ ಅರ್ಥ ತಿಳಿದಿರುವರೇ?

Ø ತಾಲದ ಮಹತ್ವವನ್ನು ಅರ್ಥೈಸಿಕೊಂಡಿರುವರೇ?

Ø ತಾಲ ವಾದ್ಯಗಳನ್ನು ಹೆಸರಿಸುವರೇ?

Ø ವಿವಿಧ ತಾಲಗಳ ವ್ಯತ್ಯಾಸ ತಿಳಿದಿರುವರೇ?

Ø ತಾಲಗಳನ್ನು ಕೈಯಲ್ಲಿ ಹಾಕಿ ತೋರಿಸುವ ಕೌಶಲ್ಯ ಹೊಂದಿರುವರೇ?

ಘಟಕಾಂತ್ಯದ ಪ್ರಶ್ನೆಗಳು:

Ø ತೀನತಾಲದಲ್ಲಿರುವ ಮಾತ್ರಾಗಳು ______________.

Ø ಏಕತಾಲದಲ್ಲಿರುವ ಖಂಡಗಳು ______________.

Ø 10 ಮಾತ್ರಾಗಳಿರುವ ತಾಲದ ಹೆಸರೇನು?

Ø ಚೌತಾಲವನ್ನು ಯಾವ ವಾದ್ಯದಲ್ಲಿ ನುಡಿಸುವರು?

Ø ಹೊಂದಿಸಿ ಬರೆಯಿರಿ .

   ಅ           ಅ      ಬ

  1. ಬಾದರಾ       ಅ      16
  2. ಕೆಹೆರವಾ       ಬ     12
  3. ಏಕತ್ತಾಲ       ಕ     8
  4. ತೀನತಾಲ     ಡ     6

Ø ಚಟುವಟಿಕೆ :

ಈ ಕೆಳಕಂಡ ತಾಳಗಳ ಪರಿಚಯ ಬರೆದು ತಾಲಲಿಪಿ ಪದ್ಧತಿಯಲ್ಲಿ ಬರೆಯಿರಿ .

ತೀನ ತಾಲ, ಏಕ ತಾಲ.

Ø ಆಕರ ಗ್ರಂಥಗಳು:

ಸಂಗೀತ ಶಾಸ್ತ್ರ ದರ್ಪಣ – ಭಾಗ 1

– – ಡಾ|| ಎಮ್. ಎಸ್. ಸಂಕಾಪುರ

ಕ್ರಮಿಕ ಪುಸ್ತಕ ಮಾಲಿಕಾ — ಡಾ|| ವಿ. ಎನ್. ಭಾತಖಾಂಡೆ

ತಾಳವಾದ್ಯಕ್ಕೆ ಸಂಬಂಧಿಸಿದಂತೆ ಪಾರಿಭಾಷಿಕ ಶಬ್ದಗಳು

  1. ಲಯ: ಸದುಯದ ಒಂದೇ ವೇಗದ ಗತಿಗೆ ಲಯವೆನ್ನುವರು. ಲಯದಲ್ಲಿ ಮೂರು ಪ್ರಕಾರಗಳು:

Ø ವಿಲಂಬಿತ ಲಯ: ವಿಲಂಬಗತಿಯ ಲಯ (ಬಡಾಖ್ಯಾಲ್).

Ø ಮಧ್ಯಲಯ: ಮಧ್ಯವೇಗದ ಗತಿ.

Ø ಧ್ರುತ ಲಯ: ವೇಗದ ಗತಿ (ಛೋಟಾಖ್ಯಾಲ್)

  1. ತಾಲ: ನಿರ್ದಿಷ್ಟ ಮಾತ್ರಾಗಳ ಗುಂಪಿಗೆ ತಾಲ ಎನ್ನುವರು. ಉದಾ: ತೀನ ತಾಲ, ಏಕ ತಾಲ, ಝುಪ್ತಾಲ, ಇತ್ಯಾದಿ. (ಅಖಂಡ ಲಯವನ್ನು ಕಾಲ ಮಾತ್ರ ಪೆಟ್ಟು, ಹುಸಿ, ಸಮ, ಭಾಗ ಇವುಗಳಲ್ಲಿ ಕ್ರಮಬದ್ಧ ಗೊಳಿಸುವುದಕ್ಕೆ ಶಾಲ ಎನ್ನುವರು).
  2. ಠೇಕಾ: ಪ್ರತಿಯೊಂದು ತಾಲಕ್ಕೆ ಒಂದು ನಿರ್ಧಿಷ್ಟವಾದ ಮಾತ್ರಾ ಸಂಖ್ಯೆಯಿದ್ದು, ಪ್ರತಿಯೊಂದು ಮಾತ್ರೆಗೆ ಒಂದು ಬೋಲ್ ಇಲ್ಲವೆ ಅಕ್ಷರವಿರುತ್ತದೆ. ಹೀಗೆ ಯಾವುದೇ ತಾಲವು ನಿರ್ದಿಷ್ಟ ಮಾತ್ರೆಗಳನ್ನೊಳಗೊಂಡಿದ್ದು ಆ ತಾಲದ ಬೋಲ್ ರಚನೆಗೆ ಠೇಕಾ ಎನ್ನುವರು.
  3. ಬೋಲ್: ಯಾವುದೇ ತಾಲದಲ್ಲಿ ಪ್ರತಿಯೊಂದು ಮಾತ್ರಾಕ್ಕಿರುವ ಅಕ್ಷರಗಳಿಗೆ ಬೋಲ್ ಎನ್ನುವರು. (ಉದಾ: ಧಾ,ಧಿನ್, ತಾ, ತಿರಕಿಟ ಇತ್ಯಾದಿ) (ತಬಲಾ/ ಮೃದಂಗದ ಮೇಲೆ ನುಡಿಸುವುದರಿಂದ ಉಂಟಾಗುವ ಶಬ್ದಗಳಿಗೆ)
  4. ಮಾತ್ರಾ: ಲಯವನ್ನು ಎಣಿಸುವ ಮೂಲ ಪರಿಮಾಣಕ್ಕೆ ಮಾತ್ರ ಎನ್ನುವರು. ಅಥವಾ ನಿರ್ಧಿಷ್ಟ ಅಂತರದಿಂದ ಉತ್ಪತ್ತಿಯಾಗುವ ಆಘಾತಗಳಲ್ಲಿಯ ಯಾವುದೇ ಎರಡು ಆಘಾತಗಳ ನಡುವಿನ ಸಮಯಾವಧಿಗೆ ಮಾತ್ರಾ ಎನ್ನುವರು.
  5. ಖಂಡ: ತಾಲಗಳಲ್ಲಿ ಮಾಡಲಾಗಿರುವ ವಿಭಾಗ.
  6. ಸಮ್: ಯಾವುದೇ ತಾಲದ ಮೊದಲನೇಯ ಮಾತ್ರೆಗೆ ಸಮ್ ಎನ್ನುವರು, ತಬಲಾ ವಾದನವು ಇದೇ ಮಾತ್ರದಿಂದ ಪ್ರಾರಂಭಗೊಳ್ಳುತ್ತದೆ. ಮಾತ್ರದಲ್ಲಿ ಈ ಮಾತ್ರೆಗೆ ಅಗ್ರಸ್ಥಾನವಿದ್ದು ಎರಡನೇ ಸ್ಥಾನವು ಹುಸಿ ಅಥವಾ ಖಾಲಿಗೆ ಇರುವುದು.
  7. ಪೆಟ್ಟು ಭರಿ ಮತ್ತು ಖಾಲಿ / ಹುಸಿ : ಪ್ರತಿಯೊಂದು ತಾಲವನ್ನು ಖಂಡ ಮಾತ್ರೆಗಳಿಂದ

ವಿಭಾಗಿಸಿದ್ದು, ಈ ಭಾಗದಲ್ಲಿ ಚಪ್ಪಾಳೆ ತಟ್ಟುವ ಮಾತ್ರಾ ಸ್ಥಾನಗಳಿಗೆ ಪೆಟ್ಟು / ಭರಿ ಎಂದೂ, ಚಪ್ಪಾಳೆ ತಟ್ಟುವ ಹುಸಿ ತೋರಿಸುವ ಮಾತ್ರಾ ಸ್ಥಾನಗಳಿಗೆ “ಖಾಲಿ / ಹುಸಿ ಎಂದೂ ಹೆಸರು. ಖಾಲಿ, ಭರಿಗಳಿಂದ ತಬಲದ ಬೊಲಗಳ ಸೌಂದರ‍್ಯವು ವೃದ್ಧಿಯಾಗಿ ತಾಲದಲ್ಲಿ ವೈವಿಧ್ಯತೆ ಮೂಡುತ್ತದೆ.

 

ತಾಲದ ಮಾಹಿತಿ (ಉದಾಹರಣೆಗಾಗಿ)

ತಾಲ: ತ್ರಿತಾಲ

ಪರಿಚಯ 

ಮಾತ್ರಾ: 16.

ಖಂಡ: 4.

ವಿಭಾಜನ: 4 + 4 + 4 + 4.

ಸಮ್1ನೇ ಮಾತ್ರಾದ ಮೇಲೆ.

ಪೆಟ್ಟು1, 5 ಮತ್ತು 13ನೇ ಮಾತ್ರಾಗಳ ಮೇಲೆ.

ಹುಸಿ9ನೇ ಮಾತ್ರಾದ ಮೇಲೆ.

ತಾಲಲಿಪಿ:

1        2        3     4     5   6     7             8    9    10            11   12   13   14    15    16

x                                2                      0                         3

ಧಾ    ಧಿನ್    ಥಿನ್  ಧಾ  ಧಾ ಧಿನ್ ಧಿನ್ ಧಾ ಧಾ ತಿನ್  ತಿನ್ ತಾ  ತಾ  ಧಿನ್  ಧಿನ್  ಧಾ

*ಈ ತಾಲವನ್ನು ತಬಲಾ ವಾದ್ಯದಲ್ಲಿ ನುಡಿಸಲಾಗುತ್ತದೆ.

ವಿಶೇಷವಾಗಿ ಖ್ಯಾಲ್, ತರಾನಾ, ಠುಮರಿ ಗಾಯನ ಪ್ರಕಾರಗಳಲ್ಲಿ ಈ ತಾಳವನ್ನು ಬಳಸುವರು.

ಅಧಿವೇಶನ: 38 ಪ್ರಶ್ನೋತ್ತರದ ಅವಧಿ

ಪರಿವಿಡಿ