ಸಂಘವು ತ್ವರಿತವಾಗಿ ಅಂಧ ಮಹಿಳಾ ನೌಕರರ ಸಮಸ್ಯೆಗಳನ್ನು ಅರಿಯಲು ಹಾಗೂ ಪರಿಹಾರವನ್ನು ಸೂಚಿಸಲು ಸಮಯದ ಮಿತಿಯೊಳಗೆ ಈ ವ್ಯವಸ್ಥೆಯು ಅನುಕೂಲಕರವಾಗಿರಲಿದೆ. ಕೆಲವೊಮ್ಮೆ ಮಹಿಳಾ ನೌಕರರು ಸಮಸ್ಯೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡಾಗ್ಯೂ, ಪರಿಹಾರ ಕಾಣದೆ ಮಾನಸಿಕವಾಗಿ ತೊಳಲಾಡುತ್ತಿರುತ್ತಾರೆ. ಕೆಲವರು ಸಹಾಯವನ್ನು ಸಕಾಲದಲ್ಲೇ ನೀಡುತ್ತಾರೆ. ಇನ್ನೂ ಕೆಲವರು ತಾತ್ಸಾರದಿಂದ ಕಾಣುತ್ತಾರೆ. ಈ ವ್ಯವಸ್ಥೆಯು ಇಂತಹ ತೊಡಕುಗಳ ನಿವಾರಣೆಗಾಗಿಯೇ ರೂಪುಗೊಂಡಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ಇಂದು 60ಕ್ಕೂ ಮೀರಿ ಮಹಿಳಾ ಸದಸ್ಯರನ್ನು ಹೊಂದಿರುವುದು ಸಂತಸ ತರುವ ವಿಚಾರವಾಗಿದೆ. ಈ ಸಂಘದಲ್ಲಿ ನಮ್ಮ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ವಿವಿಧ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಂಧ ನೌಕರರು ಕೂಡ ಇದ್ದಾರೆ.
ಪರಸ್ಪರ ಸಹಕಾರ ತತ್ವದ ಚೌಕಟ್ಟಿನಲ್ಲಿ ಆದರ್ಶದಾಯಕ ವೃತ್ತಿಪರ ಏಳಿಗೆಗಾಗಿ ಈಗಲೇ ಮಹಿಳಾ ಅಂಧ ನೌಕರರು ಈ ಆಡಳಿತಾತ್ಮಕ ವ್ಯವಸ್ಥೆಗೆ ಹೊಂದಿಕೊಂಡು ಹೊಣೆಗಾರಿಕೆಯನ್ನು ನಿಭಾಯಿಸುವುದಕ್ಕಾಗಿ ಸಜ್ಜಾಗಬೇಕಿದೆ. ಅದಕ್ಕಾಗಿಯೇ ಸದರಿ ಸಂಘವು ಈ ರೀತಿಯ ಪರಿಹಾರವನ್ನು ಕಂಡುಕೊಂಡಿದೆ.
ಈ ವ್ಯವಸ್ಥೆಯಿಂದ ಪ್ರತಿಯೊಬ್ಬ ರಾಜ್ಯ ಸರ್ಕಾರಿ ಅಂಧ ನೌಕರರು ಮತ್ತು ದೃಷ್ಟಿಯುಳ್ಳ ನೌಕರರು ಕೂಡ ಪ್ರಯೋಜನ ಪಡೆಯಬಹುದಾಗಿರುತ್ತದೆ.
ಸಮಸ್ತ ಅಂಧ ಮಹಿಳಾ ನೌಕರರ ವೇದನೆಗೆ-ಸಂವೇದನೆ, ಸಾಧನೆಗೆ-ಪ್ರೋತ್ಸಾಹ ಸದಾ ಸಂಘ ತಮ್ಮೊಡನೆ ಇದ್ದೇ ಇರುತ್ತದೆ ಎಂಬ ಭರವಸೆಯನ್ನು ಆತ್ಮವಿಶ್ವಾಸದಿಂದಲೇ ಈ ಮೂಲಕ ವ್ಯಕ್ತಪಡಿಸುತ್ತಿದ್ದೇನೆ.
ನಾಗಮಣಿ ಹೆಚ್.ಬಿ,
ಮಹಿಳಾ ಉಪಾಧ್ಯಕ್ಷರು,
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ.