ಸದರಿ ಸಂಘವು ಈ ಕೆಲವು ವ್ಯಕ್ತಿಗಳನ್ನು ಅಭಿನಂದಿಸಿ ಸಮಾಜದ ಹೆಮ್ಮೆಯ ವ್ಯಕ್ತಿಗಳೆಂದು ಪರಿಗಣಿಸಿದೆ.
- 1. ಡಾ ನಾಗಶೆಟ್ಟಿ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಕುವೆಂಪು ಕಾವ್ಯಗಳಲ್ಲಿ ಅಂತರ್ ದೃಷ್ಟಿ” ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.
- 2. ಡಾ ಬಸಯ್ಯ ಮಠಪತಿ. ಶ್ರೀಯುತ ಡಾ. ಬಸಯ್ಯಾ ಈರಯ್ಯಾ ಮಠಪತಿ ರವರಿಗೆ ಅಭಿನಂದನೆಗಳು
“ಕಲ್ಯಾಣದ ಚಾಲುಕ್ಯರ ಕಾಲದ ವ್ಯಾಪಾರ ಮತ್ತು ವಾಣಿಜ್ಯ ವ್ಯವಸ್ಥೆ (ಶಾಸನಗಳ ಆಧಾರದಿಂದ)” ಎಂಬ ವಿಷಯದ ಮೇಲೆ P.H.D ಪ್ರಬಂಧವನ್ನು ಮಂಡಿಸಿರುತ್ತಾರೆ. ಯುಜಿಸಿ ನಿಯಮಗಳು ೨೦೦೯ರ ಪ್ರಕಾರ ಸಿಂಡಿಕೇಟ್ ಸಭೆಯ ಪರವಾಗಿ ಮಾನ್ಯ ಕುಲಪತಿಗಳು ಸದರಿಯವರು ಮಂಡಿಸಿದ ಪ್ರಬಂಧಕ್ಕೆ ದಿನಾಂಕ- /೦5/೨೮/೨೦೧೮ ರಂದು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಘೋಷಿಸಿರುತ್ತಾರೆ. ಇವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. - 3. ಶ್ರೀ ಅರುಣಕುಮಾರ ನಿವೃತ್ತ ಪ್ರಾಧ್ಯಾಪಕರು, ಮಂಡ್ಯ ಜಿಲ್ಲೆ. ಸರ್ಕಾರಿ ಸೇವೆ ಸಲ್ಲಿಸಿ ಅಪಾರ ವಿದ್ಯಾರ್ಥಿ ಪಡೆಯನ್ನು ಹೊಂದಿರುತ್ತಾರೆ.
- 4. ಶ್ರೀ ಸುರೇಶ ಎಂ ಜೊರಾಪುರಿ, ನಿವೃತ್ತ ಶಿಕ್ಷಕರು ಹುಬ್ಬಳ್ಳಿ.
- 5. ನಿತ್ಯಾನಂದ K.M. ಇವರು ಮಿತ್ರಜ್ಯೋತಿ ಸಂಸ್ಥೆಯ ಮೂಲಕ ವಿವಿಧ ಶೈಕ್ಷಣಿಕ ಪಠ್ಯಗಳನ್ನು ಹಾಗೂ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಓದುವ ಮೂಲಕ ಅಂಧರಿಗೆ ಜ್ಞಾನದ ಕಣ್ಣಾಗಿದ್ದಾರೆ.
- 6. ಕುಮಾರಿ ಭಾಗ್ಯಶ್ರೀ “ಅತ್ಯುತ್ತಮ ಶಿಕ್ಷಕಿ, ರಾಜ್ಯ ಪ್ರಶಸ್ತಿ ಪುರಸ್ಕೃತರು.”
- 7. ಸಿಸ್ಟರ್ CLARE “ಆಡಳಿತಾಧಿಕಾರಿ, ಜ್ಯೋತಿಸೇವಾ ಅಂಧ ಮಕ್ಕಳ ಪಾಠಶಾಲೆ.”
- 8. ಶ್ರೀಮತಿ ಅಕ್ಷತಾ (ಅಮೃತ ಬಿಂದು ಸಂಸ್ಥೆಯ ರೂವಾರಿಗಳು. ಅನುಲೇಖಕರನ್ನು ಒದಗಿಸುವಲ್ಲಿ ಶ್ರಮಿಸಿದ್ದಾರೆ.”
- 9. ಶ್ರೀಮತಿ ವಿದ್ಯಾ ರಾವ್ “ಅಂಗವಿಕಲ ನೌಕರರ ಮಾನವ ಸಂಪಲ್ಮೂಲ ವಿಭಾಗದ ಮುಖ್ಯಸ್ಥರು, WIPRO.”
- 10. ಶ್ರೀಮತಿ ಭಾಗ್ಯಲಕ್ಷ್ಮೀ ವಿ. ಆಡಳಿತ ತರಭೇತಿ ಸಂಸ್ಥೆ, ಮೈಸೂರು ಇಲ್ಲಿ ಜಂಟಿ ನಿರ್ದೇಶಕರಾಗಿದ್ದ ಹೊತ್ತಲ್ಲಿ ಇವರು ರಾಜ್ಯ ತರಬೇತಿ ನೀತಿಯಲ್ಲಿ ಅಂಧ ನೌಕರರ ತರಬೇತಿ ವಿಚಾರದಲ್ಲಿ ಗಮನಹರಿಸಿ ಯಶಸ್ವಿ ಕಾರ್ಯನಿರ್ವಹಣೆಗೆ ನೆರವಾಗಿರುತ್ತಾರೆ.)
- 11. ಡಾ. ಮಧು ಸಿಂಘಾಲ್, ಸಂಸ್ಥಾಪಕ ವ್ಯವಸ್ಥಾಪಕರು, ಮಿತ್ರಜ್ಯೋತಿ ಸಂಸ್ಥೆ, ಬೆಂಗಳೂರು.
- 12. ಕುಮಾರಿ ಮೇಘನ ಕೇ.ಟಿ, ಕರ್ನಾಟಕ ಆಡಳಿತ ಸೇವಾ ಅಧಿಕಾರಿ, ಖಜಾನೆ ಇಲಾಖೆ.
- 13. ಕುಮಾರಿ ಕಾವ್ಯ ಭಟ್, ಮೈಸೂರು ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಪದವಿಯ ರಾಜ್ಯಶಾಸ್ತ್ರ ವಿಷಯದ ಚಿನ್ನದ ಪದಕ ವಿಜೇತೆ.
- 14. ಶ್ರೀ ಪ್ರಶಾಂತ್ MN, ಇವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಶಂಸೆಗೆ ಅರ್ಹವಾಗಿದ್ದಾರೆ. ಈ ಸಂಘದ ಸಂಸ್ಥಾಪಕ ಸದಸ್ಯರಾಗಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.