In-script, phonetic ಮತ್ತು K.P.ರಾವ್ /K.G.P ಕೀಲಿಮಣೆ ವಿನ್ಯಾಸದ ಕುರಿತು:
ಬರಹ ಹಾಗೂ ಪದ ಹೆಸರಿನ ತಂತ್ರಾಂಶಗಳಲ್ಲಿರುವ ಕೀಲಿಮಣೆ ವಿನ್ಯಾಸದ ಕುರಿತಾಗಿ ಮಂದಿಗಳಲ್ಲಿರುವ ತಪ್ಪು ತಿಳುವಳಿಕೆಯನ್ನು ಇಲ್ಲವಾಗಿಸಲು ಒಂದು ಪ್ರಯತ್ನ…
ಕೆಲವರು ನುಡಿ ತಂತ್ರಾಂಶ ಮಾತ್ರವೇ ಬರೆಯಲು ತಕ್ಕನಾದದ್ದು ಅಂತ ವಾದ ಮಾಡುತ್ತಿದ್ದರೆ, ಕೆಲವರು ಬರಹ/ಪದ ತಂತ್ರಾಂಶ ಉತ್ತಮವೆನ್ನುತ್ತಿದ್ದಾರೆ. ಇನ್ನೂ ಕೆಲವರಿದ್ದಾರೆ ಅವರು WINDOWS OS ನಲ್ಲಿಯೇ ಇರುವ, CDAC ಅಣಿಗೊಳಿಸಿರುವ IN-SCRIPT ಕೀಲಿಮಣೆ ಉತ್ತಮವೆಂದು ಅನಿಸಿಕೆಗಳನ್ನು ತಿಳಿಸುತ್ತಿದ್ದಾರೆ.
- ನುಡಿಯಲ್ಲಿ ಒಂದೇ ರೀತಿಯ ಕೀಲಿಮಣೆ ವಿನ್ಯಾಸವಿದ್ದು, ಕನ್ನಡ ಹಾಗೂ ಇಂಗ್ಲಿಶ್ ಈ ಎರಡೇ ನುಡಿಗಳು ಇರುವುದು. ಇದರಲ್ಲಿರುವ ಕೀಲಿಮಣೆ ವಿನ್ಯಾಸದ ಹೆಸರು ‘K.P.ರಾವ್ ವಿನ್ಯಾಸ’ ಎಂದು.
- ಬರಹ ಹಾಗೂ ಪದ ತಂತ್ರಾಂಶಗಳಲ್ಲಿ in-script, phonetic ಹಾಗೂ k.p.ರಾವ್ ವಿನ್ಯಾಸ ವಿದ್ದು, ಈ ಮೂರು ರೀತಿಯ ಕೀಲಿಮಣೆ ವಿನ್ಯಾಸಗಳಲ್ಲಿಯೇ ನಮ್ಮ ದೇಶದ ಮುಂಚೂಣಿ ನುಡಿಗಳನ್ನು ಅಳವಡಿಸಲಾಗಿದೆ.
- ಈ ಮೂರೂ ವಿನ್ಯಾಸಗಳಲ್ಲಿ ಹೇಗೆ ಬರೆಯೋದು ಅನ್ನುವ ಗೊಂದಲ ಎಲ್ಲರಿಗೂ ಇದ್ದೇ ಇದೆ ಅಲ್ಲವೆ?
‘ಕರುನಾಡು’ ಈ ಪದವನ್ನು ಹೇಗೆ ಈ ಮೂರು ಕೀಲಿಮಣೆ ವಿನ್ಯಾಸಗಳಲ್ಲಿ ಬರೆಯಬಹುದೆಂದು ತಿಳಿಸಿದರೆ ನಿಮಗೆ ಇವುಗಳಲ್ಲಿರುವ ವ್ಯತ್ಯಾಸ ಅರಿವಾಗುತ್ತದೆ.
- inscript: ಕ k ರು jg ನಾ ve ಡು [g
- phonetic: ಕ ka ರು ru ನಾ nA ಡು Du
- k.p.ರಾವ್ ವಿನ್ಯಾಸ: ಕ k ರು ru ನಾ nA ಡು wu
- ಬರೆಯಲು ಹೊಸದಾಗಿ ಕಲಿಯುವವರಿಗೆ, ಸರಳವೂ, ಪ್ರತಿಯೊಂದೂ ನುಡಿಗಳಿಗೆ ತಕ್ಕನಾದದ್ದು k.p.ರಾವ್ ವಿನ್ಯಾಸ. Phonetic ಹಾಗೂ inscript ವಿನ್ಯಾಸಗಳಿಗಿಂತ ಬೇಗನೆ ಕಲಿತು ಬಳಸಬಹುದು. ಮೊದಮೊದಲು ಈ ವಿನ್ಯಾಸವನ್ನು ಕೇವಲ ಕನ್ನಡಕ್ಕೆ ಮಾತ್ರ ಅಳವಡಿಸಲಾಗಿತ್ತು. ಈಗ ನಮ್ಮ ದೇಶದ ಎಲ್ಲಾ ಮುಂಚೂಣಿ ನುಡಿಗಳಿಗೂ ಅಳವಡಿಸಲಾಗಿದೆ.
- ತ್ವರಿತ ಬರವಣಿಗೆಗಳಿಗೆ ತಕ್ಕನಾದದ್ದೂ ಎಂದು ನ್ಯಾಯಾಲಯಗಳಲ್ಲಿ, ಸೈಬರ್, ಸರ್ಕಾರದ ಮಟ್ಟದಲ್ಲಿ, t.v ವಾಹಿನಿಗಳಲ್ಲಿ, ರೇಡಿಯೋ ಹಾಗೂ ಪತ್ರಿಕೆಗಳಲ್ಲಿ ತಿಳಿದು ಬಳಸುತ್ತಿರುವುದು inscript ವಿನ್ಯಾಸ. Windows os ಜೊತೆಗೆ ಇರುವುದರಿಂದ ಯಾಕೆ ಬೇರೆ ತಂತ್ರಾಂಶಗಳನ್ನು ಬಳಸಬೇಕು? ಅಂತ ಅನಿಸಿದವರಿಗೆ ಇದು ನೆರವಾಗಬಲ್ಲದು.
- ಇಂಗ್ಲಿಶ್ ನುಡಿಯಂತೆ ಬರೆಯಲು ಇರುವ, ಬೇರೆ ದೇಶಗಳಿಗೆ ಹೋಗಿ ನೆಲೆಸಿದ ಜನರು ಸಹಜವಾಗಿಯೇ ಕನ್ನಡವನ್ನು ಬರೆಯಲು ಮರೆತಿರುತ್ತಾರೆ. ಇಂತವರು ಓದುವುದನ್ನು ಮಾತ್ರ ಮರೆತಿರುವುದಿಲ್ಲ. ಸಂಬಂಧಿಕರೊಡನೆ, ಗೆಳೆಯ/ಗೆಳತಿಯೊಡನೆ ಮಿನ್ನಂಚೆಯ ಸಂವಹನಕ್ಕಾಗಿ phonetic ವಿನ್ಯಾಸವನ್ನು ಬಳಸುತ್ತಾರೆ. ಇಂಗ್ಲಿಶ್ ಶಾಲೆಗಳಲ್ಲಿ ಕಲಿತ ಹುಡುಗ/ಹುಡುಗಿಯರೂ ಕೂಡ ಈ ರೀತಿಯ ವಿನ್ಯಾಸವನ್ನು ಹೆಚ್ಚು ಇಷ್ಟಪಡುತ್ತಾರೆ. .
- ಕನ್ನಡವನ್ನು ಯಾವ ಕೀಲಿ ಮಣೆ ವಿನ್ಯಾಸದ ಮೂಲಕ ಬರೆಯಬೇಕೆಂದು ನೀವು ತೀರ್ಮಾನಿಸಿಕೊಂಡು ಬರೆಯಿರಿ. ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಮಾತ್ರ ವಾದ ಮಾಡಬೇಡಿ.
- ಕಂಪ್ಯೂಟರ್ ಬಳಸಲು ನೋಟವಿಲ್ಲದ (blind) ವ್ಯಕ್ತಿಗಳು ಬರಹ ತಂತ್ರಾಂಶವನ್ನು nvda ಹೆಸರಿನ ಪರದೆಯೋದುಗ (screenreader) ಮೂಲಕ ಬಳಸಿ. ಪದ ತಂತ್ರಾಂಶವು ಇನ್ನೂ ಸ್ಕ್ರೀನ್ರೀಡರ್ ತಂತ್ರಾಂಶಗಳೊಡನೆ ಕೆಲಸಮಾಡುವ ಹಾಗೆ ಅಣಿಗೊಳಿಸಿಲ್ಲವಾದ್ದರಿಂದ ಅದನ್ನು ಈ ಸದ್ಯಕ್ಕೆ ಬಳಸಬೇಡಿ.
- ಇನ್ನು ನುಡಿ? ಅಂತ ನಿಮ್ಮ ಮನಸ್ಸಿಗೆ ಈಗ ಬಂದಿದೆ. ಅದರಲ್ಲಿ ‘nudi direct’ ಎನ್ನುವ ಉಪಕರಣವಿದೆ ಅದನ್ನು ಹೇಗೆ ಬಳಕೆ ಮಾಡುವುದು ಅನ್ನೋದನ್ನ ಗೊತ್ತಿರುವವರಿಂದ ತಿಳಿದುಕೊಳ್ಳಿ. Nudi editer unicode ಬೆಂಬಲಿತವಾಗದಿರುವುದರಿಂದ ಸ್ಕ್ರೀನ್ರೀಡರ್ ತಂತ್ರಾಂಶಗಳ ಮೂಲಕ ಬರೆಯಲು, ಓದಲು ಆಗುವುದಿಲ್ಲ.
- ಕನ್ನಡವನ್ನು/ಇತರೆ ನಮ್ಮ ದೇಶದ ಮುಂಚೂಣಿಯ ನುಡಿಗಳನ್ನು ಬರೆಯಲಿಕ್ಕೆಂದು ಬಳಸುವ ಕೀಲಿಮಣೆ ವಿನ್ಯಾಸಗಳ ಕುರಿತಾಗಿ ಇದ್ದ ತಪ್ಪು ತಿಳುವಳಿಕೆ — ಈಗ ನಿಮ್ಮಲ್ಲಿ ಇಲ್ಲವಾಗಿದೆ ಎಂದು ನಿಮಗೆ ಅನಿಸಿದ್ದರೆ, ದಯವಿಟ್ಟು ಈ ಅರಿವನ್ನು ಗೆಳೆಯ/ಗೆಳತಿಯೊಂದಿಗೆ ಹಂಚಿಕೊಂಡು ತಪ್ಪು ತಿಳುವಳಿಕೆಯಿಂದ ಅವರನ್ನು ಬಿಡುಗಡೆಗೊಳಿಸಿ.