ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಜಾಲ ತಾಣದ ಲೋಕಾರ್ಪಣೆ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು26 ಆಗಸ್ಟ್ 2018 ರಂದು ಬೆಂಗಳೂರಿನ ಸಚಿವಾಲಯ ಕ್ಲಬ್ನಲ್ಲಿ ಜರುಗಿತು. ಸಂಘಟನೆಯು ಜಾರಿಗೊಂಡುಎರಡನೇ ವರ್ಷಾರಂಭದಲ್ಲಿ ಜರುಗಿದ ಕಾರ್ಯಕ್ರಮವು ಮಹತ್ವ ಪಡೆದಿದ್ದು ಸದಸ್ಯರಲ್ಲಿ ನಿರಿಕ್ಷೆ ಹುಟ್ಟು ಹಾಕಿದ್ದು ಸುಳ್ಳಲ್ಲ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿ ಸಂಘದ ಸದಸ್ಯರು ಸಾಕ್ಷೀಕರಿಸಿದ್ದ ಜಾಲತಾಣ ಲೋಕಾರ್ಪಣೆ ಹಾಗು ಸಾಧಕರ ಸನ್ಮಾನ ಕಾರ್ಯಕ್ರಮದ ಮುಖ್ಯಾಂಶಗಳು ಕೆಳಗಿನಂತಿವೆ.
· ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ನಾಗಮಣಿಯವರು ರಚಿಸಿ ಸಂಗಡಿಗರೊಡನೆ ಸಾದರಪಡಿಸಿದ ಸಂಘದ ಆಶಯ ಗೀತೆಯೊಡನೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
· * ಬೆಳಗಾವಿ ವಿಭಾಗೀಯ ನಿರ್ದೇಶಕ ಶ್ರೀ ವೆಂಕಣ್ಣ ಕಂಬಾರರು ಗಣಪತಿಯ ಪ್ರಾರ್ಥನೆ ಮಾಡಿ ಸಮಾರಂಭಕ್ಕೆ ಶುಭ ಕೋರಿದರು.
· * ಉಪಾಧ್ಯಕ್ಷರಾದ ಶ್ರೀ ಕುಪೇಂದ್ರರು ವೇದಿಕೆ ಮೇಲೆ ಆಸೀನರಾಗಿದ್ದ ಅತಿಥಿಗಳಿಗೆ ಸ್ವಾಗತ ಕೋರಿದರು.
· * ಪ್ರಧಾನ ಕಾರ್ಯದರ್ಶಿ ಶ್ರೀ ಕೇಶವಮೂರ್ತಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಘಟನೆಯ ಉಗಮ, ವಿಖಾಸ ಹಾಗು ಉದ್ದೇಶಗಳ ಮೇಲೆ ಬೆಳಕು ಚೆಲ್ಲಿದರು.
· * ಜಾಲತಾಣ ನಿರ್ಮಾಪಕ ಸಂಸ್ಥೆಯ ಶ್ರೀಮತಿ ಸುಮಿತ್ರ ಭಟ್ಟ್ ಮಾತನಾಡಿ ಜಾಲತಾಣ ವಿನ್ಯಾಸದ ಅನುಭವ ಮತ್ತು ಜಾಲತಾಣದಲ್ಲಿ ಅಡಕವಾಗಿರುವ ವಿಶೇಷತೆಗಳನ್ನು ಬಿಚ್ಚಿಟ್ಟೊಡನೆ ಅಧೀಕೃತವಾಗಿ ಗಣ್ಯರು ಜಾಲತಾಣವನ್ನು ವಿಶಿಷ್ಟವಾಗಿ ಉದ್ಘಾಟನೆಗೊಳಿಸಿದರು.
· * ಜಾಲತಾಣದ ಉಧ್ಗಾಟನೆಯ ಬಳಿಕ ಮಾತನಾಡಿದ ಅಂಗವಿಕಲ ಅಧಿನಿಯಮದ ಆಯುಕ್ತ ಶ್ರೀ ಬಸವರಾಜರು ಅಂಧರನ್ನು ಕುರಿತ ಸಮಾಜದ ದೃಷ್ಟಿಕೋನ ಬದಲಾಗಲು ಸುದೀರ್ಗ ಕಾಲದ ಅಗತ್ಯವಿದೆ ಎಂಬುದನ್ನು ತಿಳಿಸಿ ಆ ನಿಟ್ಟಿನಲ್ಲಿ ನೌಕರರ ಸಂಘಟನೆ ಕಾರ್ಯ ಪ್ರವೃತ್ತವಾಗಬೇಕೆಂದು ಸೂಚಿಸಿದರು. ಜೊತೆಗೆ ಅಂಧರ ದೈನಂದಿನ ಸಮಸ್ಯೆಗಳನ್ನು ವಿವರಿಸಿ ಅವರಿಗೆ ಸೂಕ್ತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕೆಂದು ಒತ್ತಾಯಿಸಿದರು.
· * ಎನ್. ಪಿ. ಎಸ್ ನೌಕರರ ಸಂಘದ ಅಧ್ಯಕ್ಷ ಶ್ರೀ ಶಾಂತಾರಾಮ್ ಮಾತನಾಡಿ ಅಂಧ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳುವಲ್ಲಿ ತಮ್ಮ ಸಂಘಟನೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
· * ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಶ್ರೀಮತಿ ಭಾಗ್ಯಲಕ್ಷ್ಮಿ ಮಾತನಾಡಿ ಅಂಧ ನೌಕರರಿಗೆ ಅಗತ್ಯವಿರುವ ಬುನಾದಿ ತರಬೇತಿಗೆ ಅಗತ್ಯವಾದ ನೀತಿಯೊಂದು ಸಿದ್ಧವಾಗುತ್ತಿದ್ದು ಸಾಮಾನ್ಯ ನೌಕರರಂತೆ ಅಂಧ ನೌಕರರಿಗೆ ಅವರ ಅಗತ್ಯಾನುಸಾರ ತರಬೇತಿ ನೀಡಲಾಗುವುದೆಂಬ ವಿಷಯ ಹಂಚಿಕೊಂಡರು. ಅಲ್ಲದೇ ಅಂಧರ ವಿಶೇಷ ಅಗತ್ಯಗಳನ್ನು ಸಲಹೆ ರೂಪದಲ್ಲಿ ನೀಡಲು ಸಂಘ ಸಹಕರಿಸಲು ಸಿದ್ಧವಾಗಿರಬೇಕೆಂದು ತಿಳಿಸಿದರು.
· * ಈ ನಡುವೆ ಸರ್ವ ಶ್ರೀ ಅರುಣ್ಕುಮಾರ್, ಸುರೇಶ್ ಜೋರಾಪುರಿ, ಡಾ. ನಾಗಶೆಟ್ಟಿ, ಡಾ. ಬಸ್ಸಯ್ಯಾ ಮಠಪತಿ ಹಾಗು ಕೆ. ಎಂ. ನಿತ್ಯಾನಂದರನ್ನು ಗಣ್ಯರೆಲ್ಲರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
· * ರಾಜ್ಯ ಸರ್ಕಾರಿ ಸಾಮಾನ್ಯ ನೌಕರರ ಸಂಘದ ಉಪಾಧ್ಯಕ್ಷ ಶ್ರೀ ರಮೇಶ ಗಣೇಶ ಸಂಗ ಮಾತನಾಡಿ ತಮ್ಮ ಸಂಘದೊಡನೆ ಸಂಯೋಜನೆಯ ತೀರ್ಮಾನ ಅಂತಿಮಗೊಂಡಿದ್ದು ಕೆಲವೇ ದಿನಗಳಲ್ಲಿ ಸಂಯೋಜನಾ ಪತ್ರವನ್ನು ನಮ್ಮ ಸಂಘಟನೆಗೆ ನೀಡುವುದಾಗಿ ತಿಳಿಸಿದರು.
· * ವಿದ್ಯುನ್ಮಾನ ಆಡಳಿತ ಇಲಾಖೆಯ ಅಧಿಕಾರಿ ಶ್ರೀ ಪ್ರಭಾಕರರು ಮಾತನಾಡಿ ಜಾಲತಾಣದ ಬಳಕೆ ಹಾಗು ಉಪಯುಕ್ತತೆಯ ಮನವರಿಕೆಯಾಗಿದ್ದು ನುರಿತ ಅಂಧರನ್ನು ನಿಯೋಜಿಸಿಕೊಂಡು ಸರ್ಕಾರದ ಎಲ್ಲ ಜಾಲತಾಣಗಳನ್ನು ಅಂಧ ಸ್ನೇಹಿಗೊಳಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
· * ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧೀನ ಕಾರ್ಯದರ್ಶಿ ಶ್ರೀಮತಿ ಜಯಲಕ್ಷ್ಮಿ ಮಾತನಾಡಿ ಸಂಘಟನೆಯ ಅಹವಾಲುಗಳನ್ನು ಶೀಗ್ರವಾಗಿ ವಿಲೇವಾರಿಗೊಳಿಸುವ ಭರವಸೆ ನೀಡಿ ಮಧುರ ಹಾಡಿನೊಂದಿಗೆ ಸಭೀಕರ ಮನಸೆಳೆದರು.
· * ಕಾರ್ಯಕಾರಿಯ ಪದಾಧಿಕಾರಿಗಳುಸಂಘಟನೆಯ ಮನವಿ ಪತ್ರಗಳನ್ನು ಸಂಬಂಧಿಸಿದ ಗಣ್ಯರಿಗೆ ಸಲ್ಲಿಸಿದಾಗ ಅದ್ಯಕ್ಷ ರಮೇಶ ಸಂಕರಡ್ಡಿಯವರ ಅಧ್ಯಕ್ಷೀಯ ಭಾಷಣ ಜರುಗಿತು.
· * ನಾಗಮಣಿ ಹಾಗು ಮಂಜುನಾಥ ಬಿ. ಸಿ. ಯವರ ನಿರೂಪಣೆಯ ಕಾರ್ಯಕ್ರಮವು ಸಹ ಕಾರ್ಯದರ್ಶಿ ಎಚ್. ಎಸ್. ಅಡವೀಶಯ್ಯನವರು ವಂದಿಸುವುದರೊಂದಿಗೆ ಮುಕ್ತಾಯವಾಯಿತು.