ಪ್ರಿಯ ಸದಸ್ಯರೇ,
KSGEAB ಸಂಘದ ಕೌಶಲ್ಯ ಸಂವರ್ಧನಾ ಮತ್ತು ತಾಂತ್ರಿಕ ಸಮಿತಿಯು ಅಂಧ ನೌಕರರಲ್ಲಿರುವ ತಾಂತ್ರಿಕ ಜ್ಞಾನ ಮತ್ತು ಅಂತರ್ಗತಗೊಂಡಿರುವ ಕೌಶಲ್ಯವನ್ನು ಅರಿತುಕೊಳ್ಳುವುದಕ್ಕಾಗಿ ಮತ್ತು ಅಂಧ ನೌಕರರಿಗೆ ಅಗತ್ಯವಿರುವ ತಾಂತ್ರಿಕ ಜ್ಞಾನವನ್ನು ಮತ್ತು ಕಾರ್ಯಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯವನ್ನು ಅರಿತುಕೊಳ್ಳಲು ಈ ಸಮೀಕ್ಷೆಯನ್ನು ಕೈಗೊಂಡಿದೆ.
ಎಲ್ಲಾ ರಾಜ್ಯ ಸರ್ಕಾರಿ ಅಂಧ ನೌಕರರನ್ನು ತಾಂತ್ರಿಕವಾಗಿ ಸಭಲರನ್ನಾಗಿಸುವುದರೊಂದಿಗೆ ದೈನಂದಿನ ಜೀವನವನ್ನು ಸುಗಮಗೊಳಿಸಲು ಮತ್ತು ಸಮರ್ಥರಾಗಿ ಕಾರ್ಯ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಬೇಕಾದ ತರಭೇತಿ ಮತ್ತು ಕಾರ್ಯಗಾರಗಳನ್ನು ಆಯೋಜಿಸಲು ಈ ಸಮೀಕ್ಷೆಯಿಂದ ಪಡೆಯುವ ಫಲಿತಾಂಶವನ್ನು ಬಳಸಿಕೊಳ್ಳುವುದು ಈ ಸಮೀಕ್ಷೆಯ ಮೂಲ ಆಶಯವಾಗಿದೆ.
ತರಭೇತಿ-ಕಾರ್ಯಾಗಾರಗಳನ್ನು ಆಯೋಜಿಸಲು ಮತ್ತು ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಆದಷ್ಟು ನೈಜ ಮಾಹಿತಿಯನ್ನು ಒದಗಿಸಬೇಕಾಗಿ ಸಮಿತಿಯು ಎಲ್ಲರಲ್ಲಿ ವಿನಂತಿಸಿಕೊಳ್ಳುವುದು.