ಚುನಾವಣಾ ಅಧಿಸೂಚನೆ ಮತ್ತು ಅರ್ಹ ಮತದಾರರ ಪಟ್ಟಿ

ಸಂಘದ ರಚನೆ ಮತ್ತು ಆಡಳಿತ ( ಬೈಲಾ ) ನಿಯಮಾನುಸಾರ
ಮುಖ್ಯ ಚುನಾವಣಾ ಅಧಿಕಾರಿಯಾಗಿ Dr. ಉಮಾದೇವಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ತರು, ಸರ್ಕಾರಿ ಪ್ರತಮ ದರ್ಜೆ ಕಾಲೇಜು ವಿಜಯನಗರ ಬೆಂಗಳೂರು
ಮತ್ತು
ಸಹ ಚುನಾವಣಾ ಅಧಿಕಾರಿಯಾಗಿ ನಾಗರಾಜು, ದ್ವಿತಿಯ ದರ್ಜೆ ಸಹಾಯಕರು ಉಪಖಜಾನೆ ಕುಣಿಗಲ್‌
ಈ ಸಂಘದ ೨೦೨೧-೨೪ನೇ ಸಾಲಿನ ಚುನಾವಣಾ ನಾಮಪತ್ರ ಸಲ್ಲಿಕೆ ಹಾಗು ನಾಮಪತ್ರಗಳ ಪರಿಶೀಲನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಮೂರು ಹುದ್ದೆಗಳಿಗೆ ಮಾತ್ರ ಚುನಾವಣೆ ನಡೆಸುವುದು ಅಗತ್ಯವಿರುವುದರಿಂದ, ಕೋವಿಡ್‌ನಿಂದ ಲಾಕ್ಡೌನ್‌ ಆದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಕಾಲದವರೆಗು ಮುಂದೂಡಲ್ಪಟ್ಟಿದ್ದ ಚುನಾವಣೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಚುನಾವಣೆ ನಡೆಯಲಿರುವ ಹುದ್ದೆಗಳು ಮತ್ತು ಅಭ್ಯರ್ಥಿಗಳ ಹೆಸರು:
೧. ಅಧ್ಯಕ್ಷ ಸ್ಥಾನ. ಕಣದಲ್ಲಿ ಶಿವಾನಂದ ಕಾಂಬ್ಳೆ, ಹಾಗೂ ನಾಗರಾಜ್‌ ಪಿ.ವಿ.
೨. ಪ್ರಧಾನಕಾರ್ಯದರ್ಶಿ: ಕಣದಲ್ಲಿ ರವಿ ಗಾದ್ರಿ ಹಾಗೂ ಉಮಾಶಂಕರ್‌ ಕೆ.ಎಮ್‌.
೩. ಸಹ ಕಾರ್ಯದರ್ಶಿ: ಸಂಜೀವಯ್ಯ ಹಿರೇಮಠ್‌, ಸತೀಶ್‌ ಜಾಲಿನಗರ್‌ ಹಾಗೂ ವಿರುಪಾಕ್ಷಯ್ಯ ಎಮ್‌.ಬಿ.
ಸೂಚನೆಗಳು:
ಚುನಾವಣಾ ಸ್ಥಳ ಮತ್ತು ದಿನಾಂಕ:
ದಿನಾಂಕ: 08-08-2021 ರ ಭಾನುವಾರದಂದು ಮುಂಜಾನೆ 8 ಗಂಟೆಯಿಂದ ಅಪರಾನ್ಹ 1 ಗಂಟೆಯವರೆಗೆ.
ಸ್ಥಳ: ಬೆಂಗಳೂರಿನ ಗಾಂಧಿ ಭವನ.
ಸೂಚನೆಗಳು:
1. ಸದರಿ ಸಂಘದ ಅರ್ಹ ಮತದಾರನೊಬ್ಬ ಈ ಮೇಲೆ ಉಲ್ಲೇಖಿಸಿದ ಕಾರ್ಯಕಾರಿ ಮಂಡಳಿಯ ಹುದ್ದೆಗಳಿಗೆ ಮತಗಳನ್ನು ಚಲಾಯಿಸಲು ಅರ್ಹನಾಗಿರುತ್ತಾನೆ. ಮುಂದುವರೆದು ಮತದಾರರು ಒಂದು ಸ್ಥಾನಕ್ಕೆ ಒಂದೇ ಮತವನ್ನು ಚಲಾಯಿಸಲು ಹಕ್ಕು ಪಡೆದಿದ್ದು ಒಂದು ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚಿನ ಮತಗಳನ್ನು ಚಲಾಯಿಸಿದರೆ ಆ ಮತವನ್ನು ಅಸಿಂಧುಗೊಳಿಸಲಾಗುತ್ತದೆ.
ಕಾರ್ಯಕಾರಿ ಸಮಿತಿಯ ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಯಾವುದೇ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸಿರುವುದಿಲ್ಲ. ಮೇಲೆ ಉಲ್ಲೇಖಿಸಿದ ಕಾರ್ಯಕಾರಿ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಸ್ಪರ್ಧಿಸಿದ್ದವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಹಾಗೂ ಕೆಲವು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ಥಾನಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿರುತ್ತಾರೆ.
2. ಸದರಿ ಸಂಘದ ಬಹು ಅಂಗವೈಕಲ್ಯ ಹೊಂದಿರುವ ಅರ್ಹ ಮತದಾರರು ಬಯಸಿದಲ್ಲಿ ಮತಪತ್ರವನ್ನು ಪಡೆದುಕೊಂಡು ಬಹು ಅಂಗವೈಕಲ್ಯದ ಪ್ರಮಾಣ ಪತ್ರ ಮತ್ತು ಮತ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ನಂಬಿಗಸ್ತ ವ್ಯಕ್ತಿಯ ಮೂಲಕ ಚುನಾವಣಾಧಿಕಾರಿಗೆ ಮತದಾನದ ದಿನದಂದು ಮತದಾನ ಅಂತ್ಯಗೊಳ್ಳುವುದರೊಳಗೆ ಸಲ್ಲಿಸಬಹುದಾಗಿದೆ.
3. ಮತಗಟ್ಟೆಯ ಪರಿಸರದಲ್ಲಿ ಸುವ್ಯವಸ್ಥಿತ ಚುನಾವಣೆಗೆ ತೊಡಕಾಗುವ ವರ್ತನೆ, ಅಶಾಂತಿ, ಗೊಂದಲ ಉಂಟು ಮಾಡುವ ಮತದಾರರ ಮೇಲೆ ಚುನಾವಣಾಧಿಕಾರಿ ಕೈಗೊಳ್ಳುವ ಶಿಸ್ತು ಕ್ರಮಕ್ಕೆ ಬದ್ಧರಾಗಿರಬೇಕಾಗುತ್ತದೆ.
4. ಮತದಾರರು ಮತಗಟ್ಟೆಗೆ ಮತದಾನಕ್ಕೆ ಆಗಮಿಸುವ ವೇಳೆ ಸಂಘದ ಗುರುತಿನ ಚೀಟಿ, ಓಟರ್ ಕಾರ್ಡ್ , ಆಧಾರ್ ಕಾರ್ಡ್ ಅಥವಾ Pan Card ಇವುಗಳಲ್ಲಿ ಯಾವುದಾದರೊಂದರ ಮೂಲ ಪ್ರತಿಯನ್ನು ಕಡ್ಡಾಯವಾಗಿ ಹಾಜರುಪಡಿಸುವುದು .
5. ಮತದಾರರು ಮತ್ತು ಅವರ ಸಹಾಯಕರು ಕಡ್ಡಾಯವಾಗಿ ಸರ್ಕಾರವು ಹೊರಡಿಸುವ ಮುನ್ನೆಚ್ಚರಿಕಾ ಸುರಕ್ಷಾ ಕ್ರಮಗಳನ್ನು ಪ್ರಯಾಣದ ಹೊತ್ತಲ್ಲಿ ಹಾಗೂ ಚುನಾವಣೆ ನಡೆಯುವ ಸ್ಥಳದಲ್ಲಿ ಪಾಲಿಸಬೇಕು.

ಅರ್ಹ ಮತದಾರರ ಪಟ್ಟಿ

# A B C D E F G H I J K L M N O P Q R S T U V W X Y Z
There are currently 534 names in this voterlist

Please select a letter from the index (above) to see entries