ಸಂಘದಿಂದ ಸರ್ಕಾರಕ್ಕೆ ಆಯೋಗಗಳಿಗೆ ಕೆಲವು ಪತ್ರಗಳನ್ನು, ವರದಿಗಳನ್ನು ಮತ್ತು ಸಮೀಕ್ಷೆಗಳನ್ನು ಸಲ್ಲಿಸಲಾಗಿದೆ. ಪ್ರಮುಖವಾದವುಗಳನ್ನು ಮಾತ್ರ ಇಲ್ಲಿ ತಿಳಿಯಪಡಿಸಲಾಗಿದೆ.
ಪತ್ರಗಳು/ ವರದಿಗಳು
- ಅಂಗವಿಕಲರ ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸಲು ಸಂಘವು ಶ್ರಮಿಸುತ್ತಿದ್ದು, ಈ ಮನವಿಯನ್ನು ಅಂಗವಿಕಲರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕರಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಗೆ ಸಲ್ಲಿಸಲಾಗಿದೆ.
- ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಅಂಗವಿಕಲ ನೌಕರರನ್ನು ಮತ್ತು ನೌಕರರ ಅಂಗವಿಕಲ ಅವಲಂಭಿತರನ್ನು ಗಮನದಲ್ಲಿರಿಸಿಕೊಂಡು ವಿಶೇಷ ನಿಯಮಾವಳಿಗಳನ್ನು ಸೇರ್ಪಡೆಗೊಳಿಸಲು ಕೋರಿ ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ರವರಿಗೆ ಸಲ್ಲಿಸಿದ ಪತ್ರ. ದಿನಾಂಕ: 21-08-2021.
- ಕರ್ನಾಟಕ ಆಡಳಿತ ಸುಧಾರಣಾ ಆಯೋಗ2ಕ್ಕೆ ಈ ಸಂಘದಿಂದ ಅಂಧ ನೌಕರರ ಗುಣಾತ್ಮಕ ಕಾರ್ಯಗಳ ಸಂವರ್ಧನೆಗಾಗಿ ಒದಗಿಸಬೇಕಾದ ಸವಲತ್ತುಗಳ ಕುರಿತು ನೀಡಿದ ಸಲಹೆಗಳ ವರದಿ. ಸಲ್ಲಿಕೆಯ ದಿನಾಂಕ: 22/09/2021
- ರಾಜ್ಯ ತರಬೇತಿ ನೀತಿಯಲ್ಲಿ ಅಂಧ ನೌಕರರ ತರಬೇತಿಗೆ ಸಂಬಂಧಿಸಿದಂತೆ ಅಳವಡಿಸಿಕೊಳ್ಳಬಹುದಾದ ಮಾರ್ಗಸೂಚಿಗಳ ಕುರಿತು ಸಂಘದಿಂದ ಆಡಳಿತ ತರಬೇತಿ ಸಂಸ್ಥೆಗೆ ನೀಡಿದ ಮನವಿ ಪತ್ರ. ಇದು .docs ಕಡತವಾಗಿದ್ದು, ವಿಷಯವು ಇಂಗ್ಲಿಷ್ ಭಾಷೆಯಲ್ಲಿರುತ್ತದೆ.